Tag: sleeping

  • ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು

    ಪರೀಕ್ಷೆಯ ವೇಳೆ ಉಗ್ರರು ನುಂಗುವ ಮಾತ್ರೆಯ ಮೊರೆ ಹೋಗುತ್ತಿದ್ದಾರೆ ಮಕ್ಕಳು

    – 1 ಮಾತ್ರೆ ನುಂಗಿದರೆ 40 ತಾಸು ನಿದ್ರೆ ಬರಲ್ಲ
    – ಮಾತ್ರೆಯಿಂದ ಗಂಭೀರ ಆರೋಗ್ಯ ಸಮಸ್ಯೆ

    ಲಕ್ನೋ: ಇನ್ನೇನು ಕೆಲವೇ ದಿನಗಳಲ್ಲಿ 10ನೇ ತರಗತಿ ಪರೀಕ್ಷೆ (SSLC Exam) ನಡೆಯುತ್ತದೆ. ಈ ಸಮಯದಲ್ಲಿ ನಿದ್ದೆ ಬರಬಾರದೆಂದು ಶಾಲಾ ಮಕ್ಕಳು ಭಯೋತ್ಪಾದಕರು ತೆಗೆದುಕೊಳ್ಳುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ವಿಚಾರವೊಂದು ಬಯಲಾಗಿದೆ.

    ಈ ಸಂಬಂಧ ವೈದ್ಯ ಲೋಕ ಕೂಡ ಆತಂಕ ವ್ಯಕ್ತಪಡಿಸಿದ್ದು, ಇಂತಹ ಮಾತ್ರೆಗಳನ್ನು (Tablets) ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.

    ಬೆಳಕಿಗೆ ಬಂದಿದ್ದು ಹೇಗೆ?: ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

    ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

    ಇತ್ತ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾದ ಬಳಿಕ ಪೋಷಕರು ಆಕೆ ಓದುತ್ತಿದ್ದ ಕೋಣೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಮಾತ್ರೆಗಳು ತುಂಬಿದ ಬಾಟ್ಲಿಯೊಂದು ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಪೋಷಕರು ಮಾತ್ರೆಗಳನ್ನು ವೈದ್ಯರ ಬಳಿ ತೋರಿಸಿದ್ದಾರೆ. ಆಗ ವೈದ್ಯರು, ಇದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂದು ತಿಳಿಸಿದ್ದಾರೆ.

    ಈ ಕುರಿತು ಪೋಷಕರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಆಕೆಯೂ ಒಪ್ಪಿಕೊಂಡಿದ್ದಾಳೆ. ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಎಚ್ಚರದಿಂದ ಇರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದಿದ್ದಾಳೆ. ಇದು ವೈದ್ಯರು ಹಾಗೂ ಪೋಷಕರನ್ನು ದಿಗ್ಭ್ರಮೆಗೊಳಿಸಿದೆ.

    ಏನಿದು ಮಾತ್ರೆ?: ಒಂದು ಮಾತ್ರೆ ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಮಾತ್ರೆಗಳನ್ನು ಉಗ್ರರು ತೆಗೆದುಕೊಳ್ಳುತ್ತಾರೆ. ಭಯೋತ್ಪಾದಕ ದಾಳಿ ವೇಳೆ ನಿದ್ರೆ ತಪ್ಪಿಸಲು ಉಗ್ರರು ಇಂತಹ ಮಾತ್ರೆಗಳನ್ನು ನುಂಗಿ ಕಾರ್ಯಾಚರಣೆ ಮಾಡುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸಿಗಲ್ಲ. ಆದರೆ ಕಳ್ಳ ಮಾರ್ಗದಲ್ಲಿ ಬೇರೆ ಬೇರೆ ಮಾತ್ರೆಗಳ ಹೆಸರಿನಲ್ಲಿ ಭಾರತಕ್ಕೆ ಸಾಗಿಸಲಾಗುತ್ತದೆ.

    ಇದೀಗ ಈ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವುದು ಆತಂಕಕಾರಿಯಾಗಿದೆ. ಪರೀಕ್ಷೆಗಳ ಸಮಯಗಳಲ್ಲಿ ಇಂತಹ ಮಾತ್ರೆಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ ಎಂದು ಔಷಧ ವ್ಯಾಪಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

  • ಹಾಸ್ಟೆಲ್‌ನಲ್ಲಿ ನಿದ್ರೆ ಬರುತ್ತಿಲ್ಲ ಅಂತ 19ರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಹಾಸ್ಟೆಲ್‌ನಲ್ಲಿ ನಿದ್ರೆ ಬರುತ್ತಿಲ್ಲ ಅಂತ 19ರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಭುವನೇಶ್ವರ: ಹಾಸ್ಟೆಲ್ ಕೊಠಡಿಯಲ್ಲಿ ತನಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದು 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭುವನೇಶ್ವರದ ಹಾಸ್ಟೆಲ್‌ನಲ್ಲಿ ನಡೆದಿದೆ.

    ಬೋಲಂಗಿರ್ ಜಿಲ್ಲೆಯ ವಿದ್ಯಾರ್ಥಿನಿ ನಿನ್ನೆ ತಡರಾತ್ರಿ ಜಮುಕೋಲಿಯಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ತನ್ನ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಪ್ಲೇಟ್‍ನಲ್ಲಿದ್ದ ಮೊಮೊಸ್ ಬೀಳಿಸಿದ್ದಕ್ಕೆ ನಡೀತು ವ್ಯಕ್ತಿ ಬರ್ಬರ ಹತ್ಯೆ

    ಆತ್ಮಹತ್ಯೆ ಬಳಿಕ ವಿದ್ಯಾರ್ಥಿ ಕೋಣೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಕೆಲ ದಿನಗಳಿಂದ ಸರಿಯಾಗಿ ನಿದ್ರೆ ಬಾರದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದಾಳೆ. ಅಲ್ಲದೇ ತನ್ನ ಸಾವಿಗೆ ಯಾರೂ ಕಾರಣರಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕಾಗಿ ಕುಟುಂಬದವರಲ್ಲಿ ಕ್ಷಮೆಯಾಚಿಸುತ್ತೇನೆ ಎಂಬುದಾಗಿ ಬರೆದಿದ್ದಾಳೆ.

    ಫೋರೆನ್ಸಿಕ್ ಹಾಗೂ ಕೈಬರಹ ತಜ್ಞರು ಈ ಪತ್ರ ಯುವತಿಯೇ ಬರದಿದ್ದಾ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣವನ್ನು ಸಹಜ ಸಾವಿನ ಪ್ರಕರಣವೆಂದು ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ಏನಿದು ಸಾವಿನ ರಹಸ್ಯ?
    ಕೆಲ ದಿನಗಳಿಂದ ಆಕೆ ಮಾನಸಿಕ ಒತ್ತಡದಲ್ಲಿದ್ದಳು. ಇತರರು ಮಲಗಿದ್ದಾಗ ರಾತ್ರಿಯಿಡೀ ಹಾಸ್ಟೆಲ್ ಆವರಣದಲ್ಲೇ ಸುತ್ತಾಡಿದಳು, ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಏಕೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಕೆಯನ್ನು ಮನೆಗೆ ಕರೆದುಕೊಂದು ಹೋಗುವಂತೆ ಹಾಸ್ಟೆಲ್ ಅಧಿಕಾರಿಗಳು ಕುಟುಂಬದವರಿಗೆ ತಿಳಿಸಿದ್ದರು. ಅಷ್ಟರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಏರ್‌ಫೀಲ್ಡ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ರಾಧಾಕಾಂತ ಸಾಹು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಂಸದೂಟದ ಕನಸು ಕಾಣ್ತಾ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ!

    ಮಾಂಸದೂಟದ ಕನಸು ಕಾಣ್ತಾ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ!

    ಮಧ್ಯಪ್ರದೇಶ: ಮಾಂಸದೂಟ ತಿನ್ನುವ ಆಸೆಯಾಗಿ ಮೇಕೆ ಕತ್ತರಿಸುವ ಕನಸು ಕಂಡ ವ್ಯಕ್ತಿ, ನಿಜವಾಗಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

    ಘಾನಾದ ಅಸ್ಸಿನ್ ಫೋಸು ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೋಫಿ ಅಟ್ಟಾ ಎಂಬ ವ್ಯಕ್ತಿ ನಿದ್ರೆಯಿಂದ ಎಚ್ಚರವಾದಾಗ ತನ್ನ ಮರ್ಮಾಂಗ ಕತ್ತರಿಸಿಕೊಂಡಿರುವುದನ್ನು ನೋಡಿದ್ದಾನೆ. ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಮಧ್ಯಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಾಳು ಕೋಫಿ ಅಟ್ಟಾ ಸಂಬಂಧಿಕರು ಹಣ ಸಂಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: 400 ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಚಿರತೆ ಸೆರೆಗೆ ಹೈ ಡೆಫೆನೆಶನ್ ಡ್ರೋನ್ ಬಳಕೆ

    ನಾನು ನಿದ್ರಿಸಿದ್ದಾಗ ಕುರ್ಚಿಯಲ್ಲಿ ಕುಳಿತಿದ್ದೆ. ನಾನು ಮೇಕೆಯನ್ನು ಕತ್ತರಿಸುತ್ತಿದ್ದೇನೆ ಎಂದು ಕನಸು ಕಂಡೆ, ಆದರೆ ನನ್ನ ಜನನಾಂಗಕ್ಕೆ ಹೇಗೆ ಚಾಕು ಹಾಕಿಕೊಂಡೆ ಎಂಬುದರ ಬಗ್ಗೆ ಯಾವ ನೆನಪೂ ಇಲ್ಲ ಎಂದು ಹೇಳಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ನಶೆಯಲ್ಲಿ ಪ್ರಿಯಕರನ ದೇಹ ತುಂಡರಿಸಿದಳು- ಛಿದ್ರವಾದ ದೇಹದ ಜೊತೆಗೆ ನಿದ್ರೆಗೆ ಜಾರಿದಳು

    ನಶೆಯಲ್ಲಿ ಪ್ರಿಯಕರನ ದೇಹ ತುಂಡರಿಸಿದಳು- ಛಿದ್ರವಾದ ದೇಹದ ಜೊತೆಗೆ ನಿದ್ರೆಗೆ ಜಾರಿದಳು

    ಇಸ್ಲಾಮಾಬಾದ್: ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಹಿಳೆ ಗೆಳೆಯನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಅಲ್ಲೇ ಮಲಗಿ ಗಾಢ ನಿದ್ರೆಗೆ ಜಾರಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್ ಒಂದರಲ್ಲಿ 70 ವರ್ಷದ ಪುರುಷನ ಛಿದ್ರಗೊಂಡ ದೇಹದ ಭಾಗಗಳು ದೊರಕಿದ್ದು, ಅದೇ ಸ್ಥಳದಲ್ಲಿ 45 ವರ್ಷದ ಮಹಿಳೆಗಾಢ ನಿದ್ದೆಯಲ್ಲಿದ್ದಳು. ಈಕೆಯನ್ನು ಕೊಲೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:  ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ

    ಈ ಘಟನೆಯ ಕುರಿತಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ ಜುಬೇರ್ ನಜೀರ್ ಶೇಖ್, ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್ ಬಳಿ ಮನುಷ್ಯನ ಕೈಯ ಭಾಗಗಳು ಬಿದ್ದಿರುವುದು ಕಂಡುಬಂದಿದೆ ಎಂದು ನಮಗೆ ಕರೆಬಂದಿತು. ನಮ್ಮ ತಂಡವು ಸ್ಥಳಕ್ಕೆ ತೆರಳಿ ಫ್ಲ್ಯಾಟ್‍ನ ಕದ ತೆರೆಯಿತು. ಅಲ್ಲಿ ಮನೆಯ ತುಂಬಾ ದೇಹವೊಂದರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಮಹಿಳೆ ಗಾಢ ನಿದ್ದೆಗೆ ಜಾರಿದ್ದಳು. ಮಹಿಳೆಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದ್ದರೂ ಕೊಲೆಯ ದಿನಾಂಕ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ

    ರಕ್ತ ಮೆತ್ತಿದ್ದ ಬಟ್ಟೆಗಳು ಮತ್ತು ದೇಹವನ್ನು ತುಂಡರಿಸಲು ಬಳಸಿದ ಉಪಕರಣಗಳು ಸೇರಿದಂತೆ ಸ್ಥಳದಲ್ಲಿ ಹಲವು ಪ್ರೂಫ್ ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮಹಿಳೆಯು ನಶೆಯಲ್ಲಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ರಗ್ಸ್ ಸೇವಿಸಿದ್ದಳೆಂದು ಶಂಕಿಸಲಾಗಿದೆ. ಅವರಿಬ್ಬರು ಮದುವೆ ಆಗಿಲ್ಲವೆಂದು ಆರೋಪಿ ತಿಳಿಸಿದ್ದಾಳೆ. ಅವರಿಬ್ಬರು  ಸಂಬಂಧದಲ್ಲಿದ್ದರು. ದುಡ್ಡಿನ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು ಎಂಬುದಾಗಿ ನೆರೆಯವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:   ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ 25,000 ಬಹುಮಾನ: ಎಎಪಿ

  • ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

    ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

    ರಾಯಚೂರು: ಎರಡು ಬೊಲೆರೋ ಪಿಕ್ ಅಪ್ ವಾಹನಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಳಿ ನಡೆದಿದೆ.

    ಲಿಂಗಸುಗೂರಿನ ಎರೆಜಂತಿ ಗ್ರಾಮದ ಮಲ್ಲಪ್ಪ(47) ಮತ್ತು ಲಿಂಗಪ್ಪ(47) ಮೃತ ದುರ್ದೈವಿಗಳು. ಯಾದಗಿರಿಯ ಶಹಪುರದಿಂದ ಹೊರಟಿದ್ದ ವಾಹನ ಸಿಂಧನೂರಿನ ಎಲೆಕೂಡ್ಲಿಗಿ ಗ್ರಾಮದ ಬಳಿ ಕೆಟ್ಟು ನಿಂತಿತ್ತು. ವಾಹನ ರಿಪೇರಿಯಾಗದ ಹಿನ್ನೆಲೆಯಲ್ಲಿ ಈ ಇಬ್ಬರು ವಾಹನದಲ್ಲೇ ಮಲಗಿದ್ದರು. ಲಿಂಗಸೂಗುರು ಕಡೆಯಿಂದ ಬಂದ ಇನ್ನೊಂದು ಬೊಲೆರೋ ವಾಹನ ನಿಂತ ವಾಹನಕ್ಕೆ ಡಿಕ್ಕಿ ಹೊಡೆದಿದೆ.

    ಕೆಟ್ಟು ನಿಂತಿದ್ದ ವಾಹನದಲ್ಲಿ ಮಲಗಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಮತ್ತೊಂದು ವಾಹನದಲ್ಲಿದ್ದ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಸಂಬಂಧ ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಂತಿ ಸಭೆಯಲ್ಲಿ ನಿದ್ದೆ: ಗಡದ್ದಾಗಿ ತೂಕಡಿಸಿದ ಶಾಸಕರು, ಅಧಿಕಾರಿಗಳು!, ತಿಂಡಿ ಬಂದಾಗ ಎದ್ರು!

    ಶಾಂತಿ ಸಭೆಯಲ್ಲಿ ನಿದ್ದೆ: ಗಡದ್ದಾಗಿ ತೂಕಡಿಸಿದ ಶಾಸಕರು, ಅಧಿಕಾರಿಗಳು!, ತಿಂಡಿ ಬಂದಾಗ ಎದ್ರು!

    ಮಂಗಳೂರು: ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಲ್ಲಿ ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳ ಕೆಸರೆರಚಾಟ ಮುಂದುವರಿಯುತ್ತಿದ್ದರೆ, ಗುರುವಾರ ಸರ್ಕಾರದಿಂದ ಆಯೋಜನೆಗೊಂಡಿದ್ದ ಶಾಂತಿ ಸಭೆ ಒಂದರ್ಥದಲ್ಲಿ ನಿದ್ದೆಯ ಸಭೆಯಾಗಿತ್ತು.

    ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಾಟೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಶಾಂತಿಸಭೆಯಲ್ಲಿ ಶಾಸಕರು, ಅಧಿಕಾರಿಗಳು ಗಡದ್ದಾಗಿ ನಿದ್ದೆ ಮಾಡಿದ್ದಾರೆ.

    ಮಂಗಳೂರು ಉತ್ತರ ವಿಧಾನಸಭೆಯ ಶಾಸಕ ಮೊಯಿದ್ದೀನ್ ಬಾವ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಫುಲ್ ನಿದ್ದೆಗೆ ಜಾರಿದ್ದರು. ಮೊಯಿದ್ದೀನ್ ಬಾವ ಅವರು ಬಿದ್ದು ಬಿದ್ದು ತೂಕಡಿಸುತ್ತಿದ್ದರೆ, ಸಚಿವ ಯು.ಟಿ. ಖಾದರ್ ಅವರಿಗೆ ಆಗಾಗ ಆಕಳಿಕೆ ಬರುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಅವರು ನಿದ್ದೆಗೆ ಜಾರಿದ್ದರು.

    ಉಪಹಾರ ಬಂದ ಕೂಡಲೇ ನಿದ್ದೆ ಓಡಿ ಹೋಗಿತ್ತು. ನಿದ್ದೆಯಿಂದ ಕಣ್ಣೊರೆಸಿಕೊಂಡು ಶಾಸಕರು ತಿಂಡಿ ತಿನ್ನುತ್ತಿದ್ದರು.

    ಈ ಶಾಂತಿ ಸಭೆಗೆ ಬಿಜೆಪಿಯವರು ಬಹಿಷ್ಕಾರ ಹಾಕಿದ್ದರೆ, ಶಾಂತಿಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಜೆಡಿಎಸ್ ನಾಯಕರು ಹೊರ ನಡೆದರು. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನವಾಗಿದ್ದು, ಗೆರಿಲ್ಲಾ ರೀತಿಯ ದಾಳಿ ನಡೆಯುತ್ತಿದೆ ಅಂತ ಸಭೆಯಲ್ಲಿ ಆತಂಕ ವ್ಯಕ್ತವಾಯಿತು.

    ಶಾಂತಿ ಸಭೆಗೆ ಬರಬೇಕಾದವರೇ ಬಂದಿಲ್ಲ. ಅವರು ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ. ಶಾಂತಿ ನೆಲೆಸುವ ಉದ್ದೇಶ ಇದ್ದವರು ಬಂದಿದ್ದೇವೆ ಎಂದು ಬಿಜೆಪಿ ವಿರುದ್ಧ ಸಚಿವ ರಮಾನಾಥ್ ರೈ ಮತ್ತು ಖಾದರ್ ಕಿಡಿಕಾರಿದರು. ಇನ್ನು, ಬಿಜೆಪಿಗೆ ಶಾಂತಿ ನೆಲೆಸುವುದು ಅಗತ್ಯ ಇಲ್ಲ. ಘಟನೆಯನ್ನು ಬಿಜೆಪಿ ಚುನಾವಣೆಗಾಗಿ ಉಪಯೋಗಿಸುತ್ತಿದೆ ಅಂತ ಕಮ್ಯುನಿಸ್ಟ್ ನಾಯಕರು ವಾಗ್ದಾಳಿ ನಡೆಸಿದರು.

  • ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ: ಸಿಎಂ ಸಿದ್ದರಾಮಯ್ಯಗೆ ಚೀಟಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

    ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ: ಸಿಎಂ ಸಿದ್ದರಾಮಯ್ಯಗೆ ಚೀಟಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮನ್ವಯ ಸಭೆಯ ಬಳಿಕ ನಿದ್ದೆ ತೂಕಡಿಸುತ್ತಿದ್ದ ಸಿಎಂ ಸಿದ್ದರಾಮಯ್ಯನವರನ್ನು ದಿನೇಶ್ ಗುಂಡೂರಾವ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಸಿದ ಘಟನೆ ನಡೆದಿದೆ.

    ಒಂದೂವರೆ ಗಂಟೆಗಳ ಕಾಲ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಸಂಜೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮೂವರು ಉಸ್ತುವಾರಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

    ಸುದ್ದಿಗೋಷ್ಠಿ ನಡೆಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದರು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್, ‘ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ’ ಎಂದು ಬರೆದು ಚೀಟಿ ಕಳುಹಿಸಿದರು. ಕೂಡಲೇ ದಿನೇಶ್ ಗುಂಡೂರಾವ್ ಕನ್ನಡಕ ಕೊಟ್ಟು ಸಿದ್ದರಾಮಯ್ಯನವರನ್ನು ಎಚ್ಚರಿಸಿದರು.

    ಸುದ್ದಿಗೋಷ್ಠಿ ಮುಗಿದ ಬಳಿಕ ಸಿಎಂ ಈ ಆ ಚೀಟಿಯನ್ನು ಹಾಗೆಯೇ ಬಿಟ್ಟು ಹೋಗಿದ್ದರು. ಮಾಧ್ಯಮದ ವ್ಯಕ್ತಿಗಳು ವೇದಿಕೆಯ ಮೇಲೆ ಹೋಗಿ ಆ ಚೀಟಿಯಲ್ಲಿ ಏನಿದೆ ಎಂದು ಕುತೂಹಲದಿಂದ ನೋಡಿದಾಗ, ‘ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ’ ಎಂಬುದಾಗಿ ಅದರಲ್ಲಿ ಬರೆಯಲಾಗಿತ್ತು.