Tag: sleep

  • ನಿದ್ದೆ ಮಂಪರಿನಲ್ಲಿ ಟೀ ಅಂಗಡಿಗೆ ಟ್ರಕ್‌ ನುಗ್ಗಿಸಿದ ಚಾಲಕ- ಐವರ ದುರ್ಮರಣ

    ನಿದ್ದೆ ಮಂಪರಿನಲ್ಲಿ ಟೀ ಅಂಗಡಿಗೆ ಟ್ರಕ್‌ ನುಗ್ಗಿಸಿದ ಚಾಲಕ- ಐವರ ದುರ್ಮರಣ

    ಚೆನ್ನೈ: ಚಾಲಕನೊಬ್ಬ ನಿದ್ದೆ ಮಂಪರಿನಲ್ಲಿ ಟೀ ಅಂಗಡಿಯೊಳಗೆ ಟ್ರಕ್‌ ನುಗ್ಗಿಸಿದ ಪರಿಣಾಮ ಐವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಮುಂಜಾನೆ ನಡೆದ ಅವಘಡದಲ್ಲಿ 19 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಮೆಂಟ್‌ ತುಂಬಿದ ಟ್ರಕ್ ಅರಿಯಲೂರಿನಿಂದ ಶಿವಗಂಗೈಗೆ ತೆರಳುತ್ತಿತ್ತು. ಹೀಗೆ ಹೋಗುತ್ತಿದ್ದ ಸಂದರ್ಭದಲಿ ಚಾಲಕನಿಗೆ ನಿದ್ದೆ ಬಂದಿದ್ದು, ಪರಿಣಾಮ ಟ್ರಕ್‌ ಚಾಲಕನಿಂದ ನಿಯಂತ್ರಣ ಕಳೆದುಕೊಂಡು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಟೀ ಅಂಗಡಿಗೆ ನುಗ್ಗಿದೆ.

    ಇತ್ತ ಟೀ ಅಂಗಡಿಯಲ್ಲಿ ಶಬರಿಮಲೆ ಯಾತ್ರಾರ್ಥಿಗಳು ಟೀ ಕುಡಿಯುತ್ತಿದ್ದರು. ಈ ವೇಳೆ ಟ್ರಕ್‌ ಏಕಾಏಕಿ ನುಗ್ಗಿದೆ. ಅಪಘಾತದಿಂದ ಟೀ ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿ ದುರ್ಮರಣ

    ಪ್ರಾಥಮಿಕ ತನಿಖೆಯ ಪ್ರಕಾರ, ಸಿಮೆಂಟ್ ಟ್ರಕ್ ಚಾಲನೆ ಮಾಡುವಾಗ ನಿದ್ರಿಸಿದ ಕಾರಣ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ಮುಂದುವರಿದಿದೆ.

  • ಗಾಢ ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದು ದುರ್ಮರಣ

    ಗಾಢ ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದು ದುರ್ಮರಣ

    ತಿರುವನಂತಪುರಂ: ಗಾಢ ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದ ಪರಿಣಾಮ ಆತ ದುರ್ಮರಣಕ್ಕೀಡಾದ ಘಟನೆ ಕೇರಳದ (Kerala) ಕೋಯಿಕ್ಕೋಡ್‍ನಲ್ಲಿ ನಡೆದಿದೆ.

    ಮೃತನನ್ನು ಜೆಫಿನ್ ಸಂದೀಪ್ (2) ಎಂದು ಗುರುತಿಸಲಾಗಿದೆ. ಈತ ಸಂದೀಪ್ ಹಾಗೂ ಜಿನ್ಸಿ ದಂಪತಿಯ ಪುತ್ರ. ಈ ಘಟನೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

    ಬಾಲಕ ಮಲಗಿ ಗಾಢ ನಿದ್ದೆಯಲಿದ್ದ ಸಂದರ್ಭದಲ್ಲಿ ರ್ಯಾಕ್‍ನಲ್ಲಿಟ್ಟ ಬೆಡ್ ಆತನ ಮೈಮೇಲೆ ಬಿದ್ದಿದೆ. ಇತ್ತ ಬೆಡ್ ಬಾಲಕನ ಮೇಲೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಘಟನೆ ನಡೆದ ಸಂದರ್ಭದಲ್ಲಿ ಜೆಫಿನ್ ಹಾಗೂ ಆತನ ತಾಯಿ ಇಬ್ಬರೇ ಮನೆಯೊಳಗಡೆ ಇದ್ದರು. ಜೆಫಿನ್ ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕೆಲಸವೊಂದರ ನಿಮಿತ್ತ ಅವರು ಹೊರಗಡೆ ಹೋಗಿದ್ದರು ಎಂಬುದಾಗಿ ವರದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ದಿಸ್ಪುರ್: ವಧು-ವರರು ಕೊನೇ ಕ್ಷಣದಲ್ಲಿ ಮದುವೆಯನ್ನು (Marriage) ರದ್ದು ಮಾಡುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಸಂಬಂಧಗಳು ಮುರಿದೂ ಬೀಳುತ್ತವೆ. ಇಲ್ಲೊಬ್ಬ ವರ (Groom) ಕಂಠಪೂರ್ತಿ ಕುಡಿದು (Drunk) ಬಂದು ಮಂಟಪದಲ್ಲೇ ಮಲಗಿಬಿಟ್ಟ ಅಂತ ವಧು (Bride) ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ನಡೆದಿದೆ.

    ಅಸ್ಸಾಂನ (Assam) ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ಮದ್ಯ ಸೇವಿಸಿ, ತನ್ನ ಮದುವೆಯ ವೇಳೆಯೇ ಮಂಟಪದಲ್ಲಿ ಮಲಗಿಬಿಟ್ಟಿದ್ದಾನೆ. ಪಂಡಿತರು ಹೇಳಿಕೊಡುತ್ತಿರುವ ಮಂತ್ರವನ್ನು ತನ್ನ ಬಾಯಿಂದ ಹೇಳಲೂ ಸಾಧ್ಯವಾಗದೇ ಆತ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದರಿಂದ ವಧು ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.

     

    ವರನನ್ನು ನಲ್ಬರಿ ನಗರದ ನಿವಾಸಿ ಪ್ರಸೇನಜಿತ್ ಹಲೋಯ್ ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಗಳು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ನಮ್ಮ ಕಡೆಯಿಂದ ಎಲ್ಲಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ನಾವು ಮದುವೆ ಕಾರ್ಯಕ್ರಮಗಳನ್ನು ಚೆನ್ನಾಗಿಯೇ ನೆರವೇರಿಸಲು ಪ್ರಯತ್ನಿಸಿದ್ದೇವೆ. ಆದರೆ ವರ ಕಂಠಪೂರ್ತಿ ಕುಡಿದು ಮಂಟಪದಲ್ಲಿಯೇ ಮಲಗಿಬಿಟ್ಟಿದ್ದರಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಬೇಕಾಯಿತು ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾದ ಮಹಿಳೆ – 24 ಗಂಟೆಯಲ್ಲಿ ವಿಚ್ಛೇದನ ಘೋಷಣೆ

     

    ವರ ಕುಡಿದ ನಶೆಯಲ್ಲಿ ತೂರಾಡುವುದನ್ನು ಕಂಡು ವಧು ಮಂಟಪದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಾಳೆ. ಬಳಿಕ ವರ ಮಂತ್ರಗಳನ್ನು ಉಚ್ಛರಿಸಲಾಗದೇ ಮಲಗಿದ್ದಾನೆ. ವರನ ಕಡೆಯವರು ಹೆಚ್ಚಿನ ಮಂದಿ ಕುಡಿದುಕೊಂಡೇ ಮದುವೆಗೆ ಬಂದಿದ್ದರು. ಬಳಿಕ ಮದುವೆಯನ್ನು ಕ್ಯಾನ್ಸಲ್ ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ.

     

    ಲಕ್ಷಾಂತರ ರೂ. ಖರ್ಚು ಮಾಡಿ ವಧುವಿನ ಕಡೆಯವರು ಮದುವೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದರೆ, ವರನ ಕಡೆಯವರು ಈ ರೀತಿ ಮದ್ಯ ಸೇವಿಸಿ ಅವಮಾನ ಮಾಡಿದ್ದಾರೆ. ನಲ್ಬರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮದುವೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

  • ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಲಂಡನ್: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ನಿತ್ಯ ನಿಯಮಿತ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅಗತ್ಯ. ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುವುದು ಕಾಮನ್.‌ ಹೀಗಿದ್ದೂ ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಕಾರಣಕ್ಕೆ ಎಷ್ಟೋ ಮಂದಿ ಸರಿಯಾಗಿ ನಿದ್ರೆ ಮಾಡುವುದು. ಆದ್ರೆ ಕೆಲವರು ಸೋಂಬೇರಿಗಳಂತೆ ಹೆಚ್ಚಿನ ಸಮಯ ನಿದ್ರೆ ಮಾಡುತ್ತಾರೆ. ಆದರೆ ಯುಕೆನಲ್ಲಿ ಮಹಿಳೆಯೊಬ್ಬರು ನಿದ್ರೆ ಮಾಡುವ ಸಮಯ ಕೇಳಿದ್ರೆ ನೀವು ಶಾಕ್‌ ಆಗ್ತೀರಾ!

    ಇಂಗ್ಲೆಂಡ್‌ನಲ್ಲಿ (England) 38 ವಯಸ್ಸಿನ ಮಹಿಳೆಯೊಬ್ಬರು ದಿನ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಇಷ್ಟು ಸಮಯ ನಿದ್ರೆ ಮಾಡುವ ಅಸಮಾನ್ಯ ಸಾಮರ್ಥ್ಯ ಹೊಂದಿರುವ ಈ ಮಹಿಳೆ ʼಸ್ಲೀಪಿಂಗ್‌ ಬ್ಯೂಟಿʼ (Sleeping Beauty) ಎಂದೇ ಹೆಸರಾಗಿದ್ದಾರೆ. ಮಹಿಳೆಗಿರುವ ವಿಶೇಷ ಕಾಯಿಲೆಯೇ ಈಕೆ ನಿತ್ಯ ಹೀಗೆ 22 ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಪ್ರಮುಖ ಕಾರಣವಂತೆ. ಇದನ್ನೂ ಓದಿ: ಸುಂದರಿಯ ದೇಹವನ್ನು ತುಂಡಾಗಿ ಕತ್ತರಿಸಿ, ತಲೆಯನ್ನು ಸೂಪ್ ಮಾಡಲು ಇಟ್ಟಿದ್ರು..!

    ಅಂದಹಾಗೆ, ಈಕೆ ಹೆಸರು ಜೊವಾನ್ನಾ ಕಾಕ್ಸ್. ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌ನಲ್ಲಿ ವಾಸವಾಗಿದ್ದಾರೆ. ಹಾಗಾದ್ರೆ ಈಕೆಗಿರುವ ವಿಶೇಷ ಕಾಯಿಲೆಯಾದರೂ ಏನು ಅಂತಾ ಕೇಳ್ತೀರಾ? ಈ ಕಾಯಿಲೆ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ ಅಂತಾ. 2021 ರಲ್ಲಿ ಅವರಿಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಇದರಿಂದ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರೆ.

    “ಒಮ್ಮೆ ಮಲಗಿದ ಮೇಲೆ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನ ನಿದ್ರೆ ಮಾಡಿದ್ದೇನೆ. ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ” ಎಂದು ಕಾಕ್ಸ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ʼಲೇಡಿ ಅಲ್‌ ಖೈದಾʼ ಕರೆತರಲು ಪಾಕ್‌ ಸರ್ಕಾರಕ್ಕೆ ಒತ್ತಾಯ – 13 ವರ್ಷಗಳಿಂದ ಅಮೆರಿಕ ಜೈಲಲಿದ್ದಾಳೆ ಪಾಕ್‌ ಸುಂದರಿ

    ಈಕೆ ಪ್ರೊಟೀನ್ ಶೇಕ್‌ಗಳು ಮತ್ತು ಪೋಷಕಾಂಶಯುಕ್ತ ಊಟದಿಂದ ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸಬಹುದು.

  • ಕೋಪದ ಭರದಲ್ಲಿ ಮಲಗಿದ್ದ ಸ್ನೇಹಿತನನ್ನು ಕೊಲೆಗೈದ

    ಕೋಪದ ಭರದಲ್ಲಿ ಮಲಗಿದ್ದ ಸ್ನೇಹಿತನನ್ನು ಕೊಲೆಗೈದ

    ಮುಂಬೈ: ಕೋಪದ ಭರದಲ್ಲಿ ವ್ಯಕ್ತಿಯೊಬ್ಬ ನಿದ್ದೆಯಲ್ಲಿದ್ದ (Sleep) ಸ್ನೇಹಿತನನ್ನು (Friend) ಹತ್ಯೆಗೈದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

    ದಕ್ಷಿಣ ಮುಂಬೈನ ಕುಂಬಾರವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಸಂದೀಪ್ ಸೋನಾವಾನೆ ಎಂದು ಗುರುತಿಸಲಾಗಿದ್ದು, ಗಣೇಶ್ ಶಿವಂಕರ್ ಬಂಧಿತ ಆರೋಪಿ ಆಗಿದ್ದಾನೆ. ಗಣೇಶ್ ಶಿವಂಕರ್ ಮದ್ಯದ ಅಮಲಿನಲ್ಲಿದ್ದ. ಈ ವೇಳೆ ಸಂದೀಪ್ ಜೊತೆ ಗಣೇಶ್ ಜಗಳ ಮಾಡಿಕೊಂಡಿದ್ದ.

    ಅದಾದ ಬಳಿಕ ಗಣೇಶ್ ಶಿವಂಕರ್ ಸ್ನೇಹಿತ ಮಲಗಿದ್ದಾಗ ಆತನ ಮೇಲೆ ಸೇಡು ತೀರಿಸಬೇಕು ಎಂದು ಯೋಜನೆ ರೂಪಿಸಿದ್ದ. ತನ್ನ ಯೋಜನೆಯಂತೆ ಭಾರವಾದ ಗ್ರಾನೈಟ್‌ ಅನ್ನು ಸಂದೀಪ್ ತಲೆಯ ಮೇಲೆ ಹಾಕಿದ್ದಾನೆ. ಅದಾದ ಬಳಿಕ ಅಲ್ಲಿದ್ದ ಸ್ಥಳೀಯರು ಸಂದೀಪ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ವೇಳೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌ರಿಂದ 5ನೇ ಬಾರಿಯ ಬಜೆಟ್ – ಭಾರೀ ನಿರೀಕ್ಷೆಯಲ್ಲಿ ನಾಗರಿಕರು

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಗೆಳೆಯರು ಗಾಡಿ ಎಳೆಯುವ ಕೆಲಸ ಮಾಡುತ್ತಿದ್ದರು ಎನ್ನುವುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಾಗರಹಾವು ಹಿಡಿದು ಜೆಡಿಎಸ್ ಅಭ್ಯರ್ಥಿ ಗೆಲುವಿನ ಬಗ್ಗೆ ಭವಿಷ್ಯ ನುಡಿದ ವ್ಯಕ್ತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋದಲ್ಲಿ ನಿದ್ರೆ ಮಂಪರಲ್ಲಿ ಬೀಳ್ತಿದ್ದ ಯುವಕನಿಗೆ ಪಕ್ಕದಲ್ಲಿದ್ದ ಯುವತಿ ಮಾಡಿದ್ದೇನು ಗೊತ್ತಾ?

    ಮೆಟ್ರೋದಲ್ಲಿ ನಿದ್ರೆ ಮಂಪರಲ್ಲಿ ಬೀಳ್ತಿದ್ದ ಯುವಕನಿಗೆ ಪಕ್ಕದಲ್ಲಿದ್ದ ಯುವತಿ ಮಾಡಿದ್ದೇನು ಗೊತ್ತಾ?

    ತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫನ್ನಿ ವೀಡಿಯೋಗಳನ್ನು ನೋಡುತ್ತಿರುತ್ತೇವೆ. ಸೋಶಿಯಲ್ ಮೀಡಿಯಾ (Social Media) ಬಳಕೆದಾರರು ಕೂಡ ಇಂತಹ ವೀಡಿಯೋಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಬಸ್, ಮೆಟ್ರೋ (Metro) ಗಳಲ್ಲಿ ಸಾಕಷ್ಟು ಫನ್ನಿ ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ನಡೆದಿರುವುದು ವೀಡಿಯೋ ಸಮೇತ ವೈರಲ್ ಆಗುತ್ತಿದೆ.

    ಮೆಟ್ರೋದಲ್ಲಿ ಯುವಕನೊಬ್ಬ ಗಾಢ ನಿದ್ದೆಗೆ ಜಾರಿದ್ದು, ನಿದ್ದೆ ಮಂಪರಿನಲ್ಲಿ ಬಳುತ್ತಿದ್ದವನನ್ನು ಯುವತಿ ರಕ್ಷಿಸಿದ್ದಾಳೆ. ಇದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

     

    ವೀಡಿಯೋದಲ್ಲೇನಿದೆ..?: ಮೆಟ್ರೋ (Metro) ದಲ್ಲಿನ ಎಲ್ಲಾ ಸೀಟುಗಳು ಭರ್ತಿಯಾಗಿವೆ. ಅದರಂತೆ ಬಾಗಿಲಿನ ಪಕ್ಕದ ಸೀಟಿನ ತುದಿಯಲ್ಲಿ ಯುವತಿಯೊಬ್ಬಳು ಕುಳಿತಿದ್ದಾಳೆ. ಆಕೆಯ ಪಕ್ಕದಲ್ಲಿಯೇ ನೀಲಿ ಟೀ ಶರ್ಟ್ ತೊಟ್ಟ ಯುವಕನೊಬ್ಬ ಪಕ್ಕದಲ್ಲಿ ಕುಳಿತಿದ್ದಾನೆ. ಅವನು ಕುಳಿತಲ್ಲೇ ಮಲಗಿದ್ದಾನೆ. ಗಾಢ ನಿದ್ದೆಯಲ್ಲಿದ್ದ ಯುವಕ ನಿಧಾನವಾಗಿ ಸೀಟಿನಿಂದ ಮುಂದಕ್ಕೆ ವಾಲಲು ಪ್ರಾರಂಭಿಸುತ್ತಾನೆ.

     

    View this post on Instagram

     

    A post shared by Md Moeen Shaikh (@mdmoeenshaikh)

     

    ಯುವಕ ಇನ್ನೇನು ಕೆಳಗೆ ಬೀಳುತ್ತಾನೆ ಎಂಬುದನ್ನು ಗಮನಿಸಿದ ಯುವತಿ, ಆತನ ಟೀ ಶರ್ಟ್ ಎಳೆದಿದ್ದಾಳೆ. ಈ ಮೂಲಕ ಯುವಕ ಕೆಳಗೆ ಬೀಳುವುದನ್ನು ತಡೆದಿದ್ದಾಳೆ. ಈ ವೀಡಿಯೋ ವೈರಲ್ ಆಗಿದ್ದು, ಅಪರಿಚಿತ ಯುವಕನಿಗೆ ಯುವತಿ ಸಹಾಯ ಮಾಡುವುದನ್ನು ನೋಡಿ ಎಲ್ಲರೂ ಆಕೆಯನ್ನು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ (Bengaluru Police) ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.

    ನೆರೆಮನೆಯವರನ್ನು ದೂರಿ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್‌ ಖಾತೆ ಪೋಸ್ಟ್‌ ಹಾಕಿದ್ದಾನೆ. ಪೋಸ್ಟ್‌ನಲ್ಲಿ ಮನೆಯ ವೀಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ ಮಗು ನಿದ್ರೆಯಿಂದ ಎದ್ದುಬಿಡ್ತಾನೆ.

    ಕೋಳಿ ಕೂಗೋದರಿಂದ ನಮಗೂ ನಿದ್ದೆ ಬರ್ತಿಲ್ಲ, ಅಕ್ಕಪಕ್ಕದವರಿಗೂ ನಿದ್ರೆ ಸಮಸ್ಯೆ ಎದುರಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರು ನೀಡಿ ಟ್ವೀಟ್‌ ಮಾಡಿರುವ ಆ ವ್ಯಕ್ತಿ, ಟ್ವಿಟ್ಟರ್‌ನಲ್ಲಿ ಪೊಲೀಸ್‌ ಕಮಿಷನರ್‌, ಡಿಸಿಪಿಗೆ ಟ್ಯಾಗ್‌ ಮಾಡಿ ದೂರಿದ್ದಾನೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    Live Tv
    [brid partner=56869869 player=32851 video=960834 autoplay=true]

  • ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

    ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

    ನಿದ್ರೆ (Sleep) ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು.

    50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ (Heart Disease), ಮಧುಮೇಹ (Diabetes) ಮತ್ತು ಕ್ಯಾನ್ಸರ್‌ನಂತಹ (Cancer) ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಈಚೆಗೆ ಪೀರ್-ರಿವ್ಯೂಡ್ ಜರ್ನಲ್ PLOS ಮೆಡಿಸಿನ್‌ನಲ್ಲಿ ತಮ್ಮ ಸಂಶೋಧನೆಗಳನ್ನು ಸಂಶೋಧಕರ ತಂಡವು ಪ್ರಕಟಿಸಿದೆ. 50, 60 ಮತ್ತು 70 ವರ್ಷ ವಯಸ್ಸಿನ 7,864 ಬ್ರಿಟಿಷ್ ನಾಗರಿಕ ಸೇವಕರ ಡೇಟಾವನ್ನು ಸಂಶೋಧಕರ ತಂಡವು ವಿಶ್ಲೇಷಿಸಿದೆ.

    ಸಂಶೋಧನೆಗಳ ಪ್ರಕಾರ, 50ನೇ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿ ನಿದ್ರೆ ಮಾಡುವವರಲ್ಲಿ ದೀರ್ಘಕಾಲದ ಕಾಯಿಲೆಗಳು ಶೇ.20 ವೃದ್ಧಿಯಾಗುತ್ತದೆ.

    50, 60 ಮತ್ತು 70ನೇ ವಯಸ್ಸಿನಲ್ಲಿ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ನಿದ್ರಿಸುವುದು ಮಲ್ಟಿಮಾರ್ಬಿಡಿಟಿಯ ಸಮಸ್ಯೆಯನ್ನು ಶೇ.30 ರಿಂದ 40 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    ಜನರು ವಯಸ್ಸಾದಂತೆ ಅವರ ನಿದ್ರೆಯ ಅಭ್ಯಾಸಗಳು ಮತ್ತು ನಿದ್ರೆಯ ರಚನೆಯು ಬದಲಾಗುತ್ತದೆ. ಆದಾಗ್ಯೂ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಒಳಿತು. ಅದಕ್ಕಿಂತ ಕಡಿಮೆ ಅವಧಿಯ ನಿದ್ರೆಯಿಂದ ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಡಾ. ಸೆವೆರಿನ್ ಸಬಿಯಾ ತಿಳಿಸಿದ್ದಾರೆ.

    ನೀವು ಮಲಗುವ ಕೋಣೆ ಶಾಂತ, ಕತ್ತಲೆ, ಆರಾಮದಾಯಕ ತಾಪಮಾನದಲ್ಲಿರಬೇಕು. ರಾತ್ರಿ ಹೊತ್ತು ಅತಿಯಾಗಿ ಊಟ ಸೇವಿಸುವುದು ಸರಿಯಲ್ಲ. ಹಗಲಿನಲ್ಲಿ ವ್ಯಾಯಾಮ, ದೈಹಿಕ ಶ್ರಮ ಹಾಕಿದರೆ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು ಎನ್ನುತ್ತಾರೆ ಡಾ. ಸಬಿಯಾ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    Live Tv
    [brid partner=56869869 player=32851 video=960834 autoplay=true]

  • ಎಣ್ಣೆ ನಶೆಯಲ್ಲಿ ಕಾರ್‌ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ

    ಎಣ್ಣೆ ನಶೆಯಲ್ಲಿ ಕಾರ್‌ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ

    ಮಡಿಕೇರಿ: ಎಣ್ಣೆ ನಶೆಯಲ್ಲಿ ಕಾರ್‌ (Car) ಚಾಲಕನೋರ್ವ (Driver) ನಡುರಸ್ತೆಯಲ್ಲೇ ಕಾರ್‌ ನಿಲ್ಲಿಸಿ ನಿದ್ರೆಗೆ (Sleep)  ಜಾರಿದ ಘಟನೆ ಮಡಿಕೇರಿ ನಗರದಲ್ಲಿ ತಡರಾತ್ರಿ ನಡೆದಿದೆ.

    ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣ (Bus Stop) ಬಳಿ ಕಳೆದ ರಾತ್ರಿ ಕಾರ್ ಚಾಲಕ ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಬಾರ್‌ಗೆ (Bar) ಹೋಗಿ ಕಂಠಪೂರ್ತಿ ಎಣ್ಣೆ ಹೊಡೆದು ನಂತರ ಕಾರಿಗೆ ಹತ್ತಿದ್ದಾನೆ. ಬಳಿಕ ಕಾರ್‌ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಬಂದು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಏಕಾಏಕಿ ನಡುರಸ್ತೆಯಲ್ಲಿ ಕಾರ್ ನಿಂತಿರುವುದನ್ನು ಕಂಡ ಸಾರ್ವಜನಿಕರು ಅತಂಕಕ್ಕೆ ಒಳಗಾಗಿ ಕಾರಿನ ಬಳಿ ಹೋಗಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಕಾರಿನಲ್ಲಿ ಮಲಗಿರುವುದು ಕಂಡುಬಂತು. ಇದನ್ನೂ ಓದಿ: ಇನ್ಮುಂದೆ PUC ಪ್ರಮಾಣ ಪತ್ರ ಇದ್ರೆ ಮಾತ್ರ ಪೆಟ್ರೋಲ್, ಡೀಸೆಲ್

    ಕಾರ್ ನಡು ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮ ಸುಮಾರು ಅರ್ಧಗಂಟೆಗೂ ಅಧಿಕ ಸಮಯ ಕೆಎಸ್‍ಆರ್‌ಟಿಸಿ (KSRTC) ಬಸ್ ಸೇರಿದಂತೆ ಅನೇಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಸಂಚಾರಿ ಪೊಲೀಸರು ಕಾರ್ ಚಾಲಕನನ್ನು ನಿದ್ದೆಯಿಂದ ಎಬ್ಬಿಸಲು ಪ್ರಯತ್ನ ಮಾಡಿದ್ರು ಚಾಲಕ ಮಾತ್ರ ಎದ್ದೇಳಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಕಾರನ್ನು ಎಳೆದಾಡಲು ಮುಗಿಬಿದ್ದರು. ನಂತರ ಕಾರ್ ಚಾಲಕ ಎಚ್ಚರಗೊಂಡು ಕಾರನ್ನು ರಸ್ತೆ ಬದಿಗೆ ಹಾಕಿದ್ದಾನೆ. ಇದನ್ನೂ ಓದಿ: ಹಳ್ಳದಲ್ಲಿ ಸಿಲುಕಿದ್ದ ಟ್ರಕ್ ಎಳೆದ ಟ್ರ್ಯಾಕ್ಟರ್‌

    ನಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ರು ಕಾರ್‌ ಚಾಲಕನ ಅವಾಂತರದಿಂದ ಸಾರ್ವಜನಿಕರು ಹಿಡಿಶಾಪ ಹಾಕಿ ರಾತ್ರಿ ಮನೆಗೆ ತೆರಳಿದರು. ಇತ್ತ ಕಾರ್ ಚಾಲಕನ ವಿರುದ್ಧ ಸಂಚಾರಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ (Drink And Drive)  ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿದ್ದೆ ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ? – ನಿದ್ದೆ ಕೆಟ್ಟರೆ ಆರೋಗ್ಯ ಕೆಡುತ್ತೆ

    ನಿದ್ದೆ ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ? – ನಿದ್ದೆ ಕೆಟ್ಟರೆ ಆರೋಗ್ಯ ಕೆಡುತ್ತೆ

    ನುಷ್ಯನಿಗೆ ನಿದ್ರೆ ಬಹುಮುಖ್ಯವಾಗಿದ್ದು, ಪ್ರತಿನಿತ್ಯ 7 ರಿಂದ 9 ತಾಸು ಉತ್ತಮ ನಿದ್ದೆ ಬೇಕಾಗುತ್ತದೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಜೊತಗೆ ನಮ್ಮ ಭಾವನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾನಸಿಕವಾಗಿ ದಣಿಯುತ್ತೀರಿ ಜೊತೆಗೆ ಮುಂಗೋಪ, ಇಡೀ ದಿನ ಕಿರಿಕಿರಿಯಂತಹ ಸಮಸ್ಯೆಗಳು ಎದುರಾಗುತ್ತದೆ. ಜೊತೆಗೆ ಆಲಸ್ಯರಾಗುತ್ತೀರಿ. ಇದು ಮಾನಸಿಕ ತೊಂದರೆಯಾಗಿದ್ದರೆ, ದೈಹಿಕವಾಗಿ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತೀರಿ.

    ಕೇಂದ್ರ ನರಮಂಡಲದ ಮೇಲೆ ಪರಿಣಾಮ: ಕೇಂದ್ರ ನರಮಂಡಲವು ದೇಹದ ಪ್ರಾಥಮಿಕ ಮಾಹಿತಿಯ ಹೆದ್ದಾರಿಯಾಗಿದೆ. ಇದು ಸರಿಯಾಗಿ ಕೆಲಸ ಮಾಡಲು ನಿದ್ದೆ ಅವಶ್ಯವಿರುತ್ತದೆ. ಆದರೆ ತೀವ್ರವಾದ ನಿದ್ರಾಹೀನತೆಯಿಂದಾಗಿ ನರಮಂಡಲದಲ್ಲಿ ಪ್ರಮುಖ ತೊಂದರೆ ಆಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    ರೋಗ ನಿರೋಧಕ ಶಕ್ತಿ ಕಡಿಮೆ: ನಿದ್ರಾಹೀನತೆಯಿಂದ ನಿಮ್ಮ ದೇಹವು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವುದನ್ನು ನಿಲ್ಲಿಸುತ್ತದೆ. ನೀವು ಪ್ರತಿನಿತ್ಯ ಸಾಕಷ್ಟು ನಿದ್ದೆಯನ್ನು ಪಡೆಯದಿದ್ದರೆ, ನಿಮ್ಮ ದೇಹವು ಸೋಂಕು ಹಾಗೂ ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ರೋಗದಿಂದ ಚೇತರಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ. ಇಷ್ಟೇ ಅಲ್ಲದೇ ದೀರ್ಘಾವಧಿ ನಿದ್ರಾಹೀನತೆಯಿಂದಾಗಿ ಮಧುಮೇಹ ಹಾಗೂ ಹೃದ್ರೋಗದಂತಹ ಕಾಯಿಲೆಗಳು ಬರುವ ಸಂಭವವಿರುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ಉಸಿರಾಟದ ಮೇಲೆ ಪರಿಣಾಮ: ರಾತ್ರಿ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಶೀತ ಹಾಗೂ ಜ್ವರದ ಸಮಸ್ಯೆಯಿಂದ ಬಳಲುವ ಪರಿಸ್ಥಿತಿ ಬರಬಹುದು. ಇದರಿಂದಾಗಿ ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳು ಎದುರಾಗಬಹುದು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ಜಿರ್ಣಾಂಗ ವ್ಯವಸ್ಥೆ: ನಿದ್ದೆ ಕಡಿಮೆ ಮಾಡುವುದರಿಂದ ಕೆಲವೊಮ್ಮೆ ನೀವು ವ್ಯಾಯಾಮ ಮಾಡುವಾಗ ಆಯಾಸವಾಗುತ್ತದೆ. ಇದರಿಂದಾಗಿ ತೂಕವು ಹೆಚ್ಚಾಗುತ್ತದೆ ಜೊತೆಗೆ ಜಿರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀಳುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    ಹೃದ್ರೋಗ ಕಾಯಿಲೆ: ಸಾಕಷ್ಟು ನಿದ್ದೆ ಮಾಡದಿದ್ದರೆ ಜನರು ಹೃದಯ ರಕ್ತನಾಳದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ಅಧ್ಯಯನದ ಪ್ರಕಾರ ನಿದ್ರಾಹೀನತೆಯಿಂದಾಗಿ ಹೃದಯಾಘಾತ ಮತ್ತು ಸ್ಟ್ರೋಕ್‍ನಂತಹ ಕಾಯಿಲೆಗಳು ಎದುರಾಗುವ ಸಂಭವವಿರುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು