Tag: Slapped

  • ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

    ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

    ಚೆನ್ನೈ: ಆರತಕ್ಷತೆಯ ವೇದಿಕೆಯಲ್ಲಿ ಡಾನ್ಸ್ ಮಾಡಿದ ವಧುವಿ ಕೆನ್ನೆಗೆ ವರ ಕಪಾಳಮೋಕ್ಷ ಮಾಡಿದ್ದಾನೆ. ಈ ಕುರಿತಾಗಿ ಸಿಟ್ಟಿಗೆದ್ದ ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆಯೊಂದು ನಡೆದಿದೆ.

    ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಪ್ರದೇಶದಲ್ಲಿ ಇಂಜಿನಿಯರ್ ವರನೊಂದಿಗೆ ಸ್ನಾತಕೋತ್ತರ ಪದವೀಧರೆಯ ಮದುವೆ ಆಗುತ್ತಿದ್ದರು. ಜನವರಿ 20ರಂದು ನಿಶ್ವಯವಾಗಿತ್ತು. ವಿವಾಹದ ಹಿಂದಿನ ದಿನ ಅಂದರೆ ಆರತಕ್ಷತೆಯಲ್ಲಿ ಎರಡೂ ಕುಟುಂಬದವರು ಸಂಭ್ರಮದಲ್ಲಿ ಮುಳುಗಿರುತ್ತಾರೆ. ಆದರೆ ವಧು, ವರ ಮಧ್ಯೆ ನಡೆದ ಜಗಳ ಮದುವೆಯನ್ನು ಮುರಿದು ಕೊಳ್ಳುವಂತಾಗಿದೆ. ಇದನ್ನೂ ಓದಿ:   ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

    ವಧು ಸ್ನೇಹಿತರು, ಸಂಬಂಧಿಕರೊಂದಿಗೆ ವೇದಿಕೆಯ ಕೆಳಗೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಮದುಮಗನು ಆಕೆಗೆ ನೃತ್ಯ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಆಕೆಯನ್ನು ವೇದಿಕೆಯ ಮೇಲೆ ಕರೆದು ಕಪಾಳಮೋಕ್ಷ ಮಾಡಿದ್ದಾನೆ. ಈ ವಿಚಾರವಾಗಿ ಬೇಸರ ಗೊಂಡ ವಧು ಮದುವೆ ಬೇಡಾ ಎಂದು ಕಲ್ಯಾಣ ಮಂಟಪದಿಂದ ಹೊರಗೆ ಹೋಗಿದ್ದಾಳೆ. ಅವಳ ನಿರ್ಧಾರಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಅದೇ ಮುಹೂರ್ತದಲ್ಲಿ ಆಕೆಯ ಸಂಬಂಧಿ ಯುವಕನೊಬ್ಬನ ಜೊತೆ ಪೋಷಕರು ದೇವಸ್ಥಾನದಲ್ಲಿ ಮಗಳ ವಿವಾಹ ಮಾಡಿದ್ದಾರೆ. ಇದನ್ನೂ ಓದಿ: ಮಾವನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಪರ್ಣಾ ಯಾದವ್

  • ಶೂಟಿಂಗ್ ವೇಳೆ ಶಕೀಲಾ ಕೆನ್ನೆಗೆ ಹೊಡೆದಿದ್ದ ಸಿಲ್ಕ್ ಸ್ಮಿತಾ

    ಶೂಟಿಂಗ್ ವೇಳೆ ಶಕೀಲಾ ಕೆನ್ನೆಗೆ ಹೊಡೆದಿದ್ದ ಸಿಲ್ಕ್ ಸ್ಮಿತಾ

    ಬೆಂಗಳೂರು: ಶೂಟಿಂಗ್ ವೇಳೆ ಸಿಲ್ಕ್ ಸ್ಮಿತಾ ಅವರು ನನ್ನ ಕೆನ್ನೆಗೆ ಹೊಡೆದಿದ್ದರು ಎಂದು ಮಾದಕ ನಟಿ ಶಕೀಲಾ ಹೇಳಿದ್ದಾರೆ.

    90 ದಶಕದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಾದಕ ನಟಿಯರಾದ ಸಿಲ್ಕ್ ಸ್ಮಿತಾ ಮತ್ತು ಶಕೀಲಾ ತನ್ನದೇ ಅದ ಅಭಿಮಾನಿ ಬಳಗವನ್ನು ಇಬ್ಬರು ಹೊಂದಿದ್ದರು. ಆದರೆ ಈ ಇಬ್ಬರು ನಟಿಯರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ ಎಂದು ಸ್ವತಃ ಶಕೀಲಾ ಅವರೇ ಹೇಳಿಕೊಂಡಿದ್ದರು.

    ಜೊತೆಗೆ ಸಿಲ್ಕ್ ಸ್ಮಿತಾ ಬಗ್ಗೆ ಮಾತನಾಡುವಾಗ ಅವರಿಬ್ಬರ ಮಧ್ಯೆ ನಡೆದ ಒಂದು ಪ್ರಸಂಗವನ್ನು ಕೂಡ ಶಕೀಲಾ ನೆನಪಿಸಿಕೊಂಡಿದ್ದಾರೆ. ಆಗ ನಾನು ಇನ್ನೂ ಸಿನಿಮಾ ರಂಗಕ್ಕೆ ಹೊಸಬಳು. ಆದರೆ ಸಿಲ್ಕ್ ಸ್ಮಿತಾ ಆಗಾಲೇ ಸಿನಿಮಾರಂಗದಲ್ಲಿ ಬಹಳ ಹೆಸರು ಮಾಡಿದ್ದರು. ಹೀಗಿರುವಾಗ ನಾವಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದೆವು. ಆಗ ಒಂದು ದೃಶ್ಯದ ಚಿತ್ರೀಕರಣದ ಬಗ್ಗೆ ರಿಹರ್ಸಲ್ ಮಾಡೋಣ ಬನ್ನಿ ಎಂದು ನಾನು ಅವರನ್ನು ಕರೆದಿದ್ದೆ. ಆದರೆ ಅವರು ಬರಲಿಲ್ಲ ಎಂದು ಶಕೀಲಾ ಹೇಳಿದ್ದಾರೆ.

    ಆ ದೃಶ್ಯದಲ್ಲಿ ನನಗೆ ಸಿಲ್ಕ್ ಸ್ಮಿತಾ ಹೊಡೆಯಬೇಕಿತ್ತು. ನಾನು ರಿಹರ್ಸಲ್ ಮಾಡೋಣವೆಂದರೂ ಬೇಡವೆಂದು ಸಿಲ್ಕ್ ಸ್ಮಿತಾ ಶೂಟಿಂಗ್ ಟೈಮ್‍ನಲ್ಲಿ ನಿಜವಾಗಿಯೇ ನನ್ನ ಕೆನ್ನೆಗೆ ಜೋರಾಗಿ ಭಾರಿಸಿದ್ದರು. ಅಂದು ಅವರು ಹೊಡೆದ ರಭಸಕ್ಕೆ ನನ್ನ ಕೆನ್ನೆ ಊದಿತ್ತು. ನಾನು ಶೂಟಿಂಗ್ ಸೆಟ್‍ನಿಂದ ಅಳುತ್ತಲೇ ಮನೆಗೆ ಹೋಗಿದ್ದೆ. ನಂತರ ಎರಡು ದಿನ ಶೂಟಿಂಗ್‍ಗೆ ಬಂದಿರಲಿಲ್ಲ. ಬಳಿಕ ನಿರ್ಮಾಪಕರು ಬಂದು ಸಮಾಧಾನ ಮಾಡಿ ಕರೆದುಕೊಂಡು ಬಂದರು ಎಂದು ಶಕೀಲಾ ತಿಳಿಸಿದ್ದಾರೆ.

    ಇದಾದ ನಂತರ ನಾನು ಅವರನ್ನು ಮಾತನಾಡಿಸಲು ಹೋಗಲಿಲ್ಲ. ಅವರು ಇದ್ದ ಕಡೆ ನಾನು ಹೋಗುತ್ತಿರಲಿಲ್ಲ. ಸಿಲ್ಕ್ ಸ್ಮಿತಾ ಅವರು ನಾನು ಅವರ ಜಾಗವನ್ನು ಕಿತ್ತುಕೊಳ್ಳುತ್ತೇನೆ ಎಂಬ ಭಯದಿಂದಲೇ ಹೊಡೆದರು ಎಂದು ಶಕೀಲಾ ತಿಳಿಸಿದ್ದಾರೆ. ಇದಾದ ನಂತರ ಸಿಲ್ಕ್ ಸ್ಮಿತಾ ಅವರೇ ಶಕೀಲಾ ಅವರ ಬಳಿ ಬಂದು ಅಂದು ಹೊಡೆದಿದ್ದಕ್ಕೆ ಕ್ಷಮೆ ಕೇಳಿದ್ದರಂತೆ. ಚಾಕೋಲೆಟ್ ಬಾಕ್ಸ್ ನೀಡಿ ಸ್ವಾರಿ ಎಂದು ಸ್ಮಿತಾ ಹೇಳಿದ್ದರಂತೆ.

    1979ರಲ್ಲಿ ಸಿನಿಮಾಗೆ ಎಂಟ್ರಿಕೊಟ್ಟ ಸಿಲ್ಕ್ ಸ್ಮಿತಾ ನಂತರ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗ ಸೇರಿದಂತೆ ಸೌತ್‍ಸಿನಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಬಿ ಗ್ರೇಡ್ ಸಿನಿಮಾ ಐಟಂ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದ ಸ್ಮಿತಾ, ಅಂದಿನ ಕಾಲದಲ್ಲೇ ಬಹಳ ಬೇಡಿಕೆಯ ನಟಿ ಆಗಿದ್ದರು. ಜೊತೆಗೆ ಬಾಲಿವುಡ್‍ನಲ್ಲೂ ನಟಿಸಿದ್ದ ಸ್ಮಿತಾ 1996ರಲ್ಲಿ ತನ್ನ ಚೆನ್ನೈ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.

    ಆಂಧ್ರಪ್ರದೇಶ ನೆಲ್ಲೂರಿನಲ್ಲಿ ಜನಿಸಿದ ಶಕೀಲಾ ತನ್ನ 18ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದರು. ಒಂದು ಕಾಲದಲ್ಲಿ ಬಿ ಗ್ರೇಡ್ ಸಿನಿಮಾಗಳಿಗೆ ಸಿಮೀತವಾಗಿದ್ದ ಶಕೀಲಾ, ನಂತರ ನಾನು ವಯಸ್ಕರ ಚಿತ್ರ ಮಾಡುವುದಿಲ್ಲ ಎಂದು ಅದರಿಂದ ಹೊರಗೆ ಬಂದರು. ನಂತರ ಕನ್ನಡ, ಮಲೆಯಾಳಂ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.