Tag: slap

  • ನಟಿ, ನೂತನ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ

    ನಟಿ, ನೂತನ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ

    ಬಾಲಿವುಡ್ ನಟಿ ಮತ್ತು ಮಂಡಿಯ ನೂತನ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಸಿಐಎಸ್ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

    ಚಂಡೀಗಢ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಕಂಗನಾ ನೀಡಿದ ಹೇಳಿಕೆಯಿಂದ ಕುಲ್ವಿಂದರ್ ಕೌರ್ ಅವರಿಗೆ ನೋವಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಇಂದು ಆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೌರ್ ಅವರು ಬಿಜೆಪಿ ಸಂಸದರಿಗೆ ಕಪಾಳಮೋಕ್ಷ ಮಾಡಿದ್ದಾರೆ. ‌

    ಈ ಸಂಬಂಧ ಕಂಗನಾ ಅವರು ಗಂಭೀರ ಆರೋಪ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • ಮಹಿಳೆಗೆ ಕಪಾಳಮೋಕ್ಷ ಪ್ರಕರಣ- ಸೋಮಣ್ಣ ಕ್ಷಮೆಯಾಚನೆ

    ಮಹಿಳೆಗೆ ಕಪಾಳಮೋಕ್ಷ ಪ್ರಕರಣ- ಸೋಮಣ್ಣ ಕ್ಷಮೆಯಾಚನೆ

    ಚಾಮರಾಜನಗರ: ಮಹಿಳೆಗೆ ಕಪಾಳಮೋಕ್ಷ (Slap) ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ (V Somanna) ಕ್ಷಮೆ ಯಾಚಿಸಿದ್ದಾರೆ.

    45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ. ನಿನ್ನೆಯ ಘಟನೆ ಘಟನೆಯೇ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣಕ್ಕೆ ಟ್ವಿಸ್ಟ್- ಸಚಿವರು ನಂಗೆ ಹೊಡೆದಿಲ್ಲವೆಂದು ಮಹಿಳೆ ಸ್ಪಷ್ಟನೆ

    ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರುತ್ತಿದ್ದಳು. ತಾಯಿ ಎಷ್ಟು ಸರಿ ಬರುತ್ತೀಯಾ ಅಂತ ವಿಚಾರಿಸಿದೆ. ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ ಅಷ್ಟೇ ವಿನಃ ಇನ್ನೇನು ಉದ್ದೇಶ ಇರಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ

    ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವರು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಚಂಡೀಗಢ: ಪ್ರೀತಿಸಿದ ಯುವತಿ ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲೂಧಿಯಾನದಲ್ಲಿ (Ludhiana) ನಡೆದಿದೆ.

    ಗುರುದೀಪ್ ಸಿಂಗ್ (30) ಮೃತ ಪ್ರಿಯಕರನಾಗಿದ್ದು, ಆರೋಪಿಯನ್ನು ರಣವಾನ್ ಗ್ರಾಮದ ರಾಜ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ (Dubbai) ಕೆಲಸಮಾಡುತ್ತಿದ್ದ ನನ್ನ ಮಗ ಸುಮಾರು ಎರಡೂವರೆ ವರ್ಷಗಳ ಹಿಂದೆ ಮನೆಗೆ ಮರಳಿದ್ದನು. ಗುರ್ದೀಪ್ ಸಿಂಗ್ ವಿದೇಶದಲ್ಲಿದ್ದಾಗ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಜ್ವಿಂದರ್ ಕೌರ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದನು (Relationship). ಅಲ್ಲದೇ ಆಕೆಗೆ ಹಣವನ್ನು ಕಳುಹಿಸುತ್ತಿದ್ದನು.  ಇದನ್ನೂ ಓದಿ: 68ನೇ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್‌ಗಳು ಇವರೇ

    ಯುವತಿ ತನ್ನ ಮಗನ ಕತ್ತು ಹಿಡಿದು ಮುಖಕ್ಕೆ ಕಪಾಳಮೋಕ್ಷ ಮಾಡುತ್ತಾ, ನನಗೆ ಯಾವುದೇ ಸಾಲವನ್ನು ನೀಡಿಲ್ಲ ಎಂದು ನಿಂದಿಸಿದ್ದಾಳೆ. ಘಟನೆ ಬಳಿಕ ನನ್ನ ಮಗ ಅಳುತ್ತಿದ್ದನು ಮತ್ತು ನನಗೆ ತುಂಬಾ ಅವಮಾನವಾಗಿದೆ, ನಾನು ಸಾಯುತ್ತೇನೆ ಎಂದು ಹೇಳಿದ್ದನು. ಅದೇ ರೀತಿ ಸಂಜೆ ವೇಳೆಗೆ ನನ್ನ ಮಗ ವಿಷ ಸೇವಿಸಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಲುಧಿಯಾನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುರುದೀಪ್ ಸಿಂಗ್ ಅವರ ತಂದೆ ನಛತಾರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.

    ಇದೀಗ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಈ ಸಂಬಂಧ ತನಿಖೆ ನಡೆಸಲು ಆರಂಭಿಸಿದ್ದಾರೆ. ಇದನ್ನೂ ಓದಿ: ಹಿಂದೂ ಕುಟುಂಬಕ್ಕೋಸ್ಕರ ಏರಿಯಾದಲ್ಲಿ ಮುಸ್ಲಿಮರಿಂದ ದುರ್ಗಾ ಪೂಜೆ ಆಯೋಜನೆ

    Live Tv
    [brid partner=56869869 player=32851 video=960834 autoplay=true]

  • ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಮುಂಬೈ: ಐಪಿಎಲ್ 2008ರ ಆವೃತ್ತಿಯ ಪಂದ್ಯವೊಂದರಲ್ಲಿ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ಬೌಲರ್ ಶ್ರೀಶಾಂತ್‍ಗೆ 14 ವರ್ಷಗಳ ನಂತರ ಕ್ಷಮೆಯಾಚಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಲೈವ್ ವೀಡಿಯೋ ಚಾಟ್‍ನಲ್ಲಿ ಶ್ರೀಶಾಂತ್ ಜೊತೆ ಮಾತನಾಡಿ, 2008ರಲ್ಲಿ ನಡೆದ ಘಟನೆಯ ಬಗ್ಗೆ ಅವರು ಅನುಭವಿಸಿದ ಮುಜುಗರವನ್ನು ಬಹಿರಂಗಪಡಿಸಿದರು. ಅಂದು ನಡೆದದ್ದು ತಪ್ಪು. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಲೆಂದು ಮೈದಾನದಲ್ಲಿ ಶ್ರೀಶಾಂತ್ ಜೊತೆಗೆ ನಾನು ನಡೆದುಕೊಂಡ ರೀತಿ ಇದೆಯಲ್ಲ ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗಲೆಲ್ಲ ಅದು ಆಗಬಾರದಿತ್ತು ಅಂತಾ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರು, ಪಂಜಾಬ್ ತಂಡದ ಬೌಲರ್ ಶ್ರೀಶಾಂತ್ ಅವರ ಆಕ್ರಮಣಕಾರಿ ನಡುವಳಿಕೆಯಿಂದ ಆಕ್ರೋಶಗೊಂಡಿದ್ದರು. ಪಂದ್ಯದ ಫಲಿತಾಂಶದ ನಂತರ, ತಮ್ಮ ಬಳಿಗೆ ಬಂದ ಶ್ರೀಶಾಂತ್ ಅವರ ಕೆನ್ನೆಗೆ ಹರ್ಭಜನ್ ಹೊಡೆದಿದ್ದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 66 ರನ್‍ಗಳ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಘಟನೆ ನಂತರ ಕಣ್ಣೀರು ಹಾಕಿದ್ದ ಶ್ರೀಶಾಂತ್ ಅವರನ್ನು ನೋಡಿ ಹಲವರು ಮರುಗಿದ್ದರು. ಹರ್ಭಜನ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಆಗ ಪ್ರಶ್ನೆಗಳು ಎದ್ದಿದ್ದವು. ಆ ಬಳಿಕ ಇವರಿಬ್ಬರ ನಡುವೆ ಮತ್ತೆ ಸ್ನೇಹ ಬೆಳೆದಿತ್ತು. ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದರು.

  • BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    ಲಕ್ನೋ: ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಉತ್ತರ ಪ್ರದೇಶದ ಸದರ್ ಕ್ಷೇತ್ರದ ಬಿಜೆಪಿ ಶಾಸಕ ಪಂಕಜ್ ಗುಪ್ತಗೆ ರೈತನೋರ್ವ ಸಾರ್ವಜನಿಕ ಸಭೆಯಲ್ಲೇ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ವೇದಿಕೆ ಮೇಲೆ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ವೃದ್ಧ ರೈತನೋರ್ವ ಪಂಕಜ್ ಗುಪ್ತ ಅವರ ಕೆನ್ನೆಗೆ ಹೊಡೆದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಇದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

    ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದ್ದು, ಶಾಸಕರನ್ನು ವೇದಿಕೆಯ ಮೇಲೆ ಹೊಡೆದ ನಂತರ ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿರುವುದನ್ನು ವೀಡಿಯೋ ತುಣುಕಿನಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಆಸ್ಕರ್‌ ವಿಜೇತ ಮೊದಲ ಕಪ್ಪುವರ್ಣೀಯ ಸಿಡ್ನಿ ಪೊಯ್ಟಿಯರ್‌ ನಿಧನ

    ಶಾಸಕ ಪಂಕಜ್ ಗುಪ್ತ ಈ ಕುರಿತಾಗಿ ಮಾತನಾಡಿ, ಆ ವ್ಯಕ್ತಿ ನನ್ನ ಚಾಚಾ ಮಾಡಿದಂತೆ ಪ್ರೀತಿಯಿಂದ ಕೆನ್ನೆ ತಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ – ಕೇಂದ್ರ ಸಚಿವ ನಾರಾಯಣ ರಾಣೆ ಅರೆಸ್ಟ್

    ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ – ಕೇಂದ್ರ ಸಚಿವ ನಾರಾಯಣ ರಾಣೆ ಅರೆಸ್ಟ್

    ಮುಂಬೈ: ಕೇಂದ್ರ ಕೈಗಾರಿಕೆ, ಬಂದರು ಖಾತೆಯ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನಾರಾಯಣ ರಾಣೆ ಅವರನ್ನು ರತ್ನಗಿರಿ ಪೊಲೀಸರು  ಮಂಗಳವಾರ ಬಂಧಿಸಿದ್ದಾರೆ.

    ನಾನು ಸಿಎಂ ವಿರುದ್ಧ ಹೇಳಿಕೆ ನೀಡುವ ಮೂಲಕ ಯಾವುದೇ ಅಪರಾಧ ಮಾಡಿಲ್ಲ ಎಂದು ರಾಣೆ ಅವರು ಸಿಎಂ ವಿರುದ್ಧ ನೀಡಿದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ 

    ಸೋಮವಾರ ರಾಯಗಡದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ರಾಣೆ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಯಾವ ವರ್ಷ ಎಂಬುದನ್ನು ತಿಳಿಯದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ:  ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

    https://twitter.com/ANI/status/1430127979997188107

    ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡಿದ್ದರು. ಈ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಪಡೆದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿ ರಾಣೆ ಹೇಳಿಕೆ ನೀಡಿದ್ದರು.

    ಈ ಹೇಳಿಕೆಯ ಬೆನ್ನಲ್ಲೇ ರಾಯಗಢ, ಪುಣೆ, ನಾಸಿಕ್‍ನಲ್ಲಿ ನಾರಾಯಣ ರಾಣೆ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

  • ಸೆಕ್ಯೂರಿಟಿಯಲ್ಲೇ ಬೆಳೆದ ರಾಗಾ ಭದ್ರತೆ ಬಗ್ಗೆ ಮೋದಿ ಗಮನಹರಿಸ್ತಿಲ್ಲ- ಹ್ಯಾರೀಸ್ ಆರೋಪ

    ಸೆಕ್ಯೂರಿಟಿಯಲ್ಲೇ ಬೆಳೆದ ರಾಗಾ ಭದ್ರತೆ ಬಗ್ಗೆ ಮೋದಿ ಗಮನಹರಿಸ್ತಿಲ್ಲ- ಹ್ಯಾರೀಸ್ ಆರೋಪ

    ಮಡಿಕೇರಿ: ಉತ್ತರಪ್ರದೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಹಣೆಯ ಭಾಗಕ್ಕೆ ಹಸಿರು ಬಣ್ಣದ ಲೇಸರ್ ಲೈಟ್ ಬಿದ್ದಿದ್ದಕ್ಕೆ ಕೇಂದ್ರ ಎಸ್‍ಜಿಪಿಯಲ್ಲಿ ಹಸ್ತಕ್ಷೇಪ ಮಾಡ್ತಿರೋದು ಕಾರಣ ಎಂದು ಶಾಂತಿನಗರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹ್ಯಾರೀಸ್ ಗಂಭೀರ ಆರೋಪ ಮಾಡಿದ್ದಾರೆ.

    ಮಡಿಕೇರಿಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಅವರು, ಚಿಕ್ಕಂದಿನಿಂದ ಸೆಕ್ಯೂರಿಟಿಯಲ್ಲೇ ಬೆಳೆದ ರಾಹುಲ್ ಗಾಂಧಿಯವರ ಸೆಕ್ಯೂರಿಟಿಯ ಬಗ್ಗೆ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ. ಆಗಾಗ ಅವರ ಸೆಕ್ಯೂರಿಟಿ ಕಡಿಮೆ ಮಾಡುತ್ತಿದೆ. ಇದೆಲ್ಲದ್ದರಿಂದಲೇ ಇಂತಹ ಘಟನೆ ನಡೆದಿದೆ ಎಂದರು.

    ಐಟಿ, ಈಡಿ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ಮೋದಿ ಸರ್ಕಾರ ಈ ವಿಚಾರದಲ್ಲೂ ಹಾಗೆ ಮಾಡಿದೆ. ಮೋದಿ ಸರ್ಕಾರಕ್ಕೆ ಸೋಲುವ ಭಯ ಕಾಡುತ್ತಿದ್ದು ಅವರು ಈಗ ಏನು ಮಾಡೋದಕ್ಕೂ ರೆಡಿಯಾಗಿದ್ದಾರೆ ಎಂದು ಹ್ಯಾರೀಸ್ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7 ಬಾರಿ ತಲೆ ಮೇಲೆ ಲೇಸರ್ ಲೈಟ್ – ಅಮೇಥಿ ರ‍್ಯಾಲಿ ವೇಳೆ ರಾಹುಲ್ ಹತ್ಯೆಗೆ ಸಂಚು?

    ಪ್ರಕಾಶ್ ರೈ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾರೀಸ್, ಪ್ರಕಾಶ್ ರೈ ನಮ್ಮ ಆತ್ಮೀಯ ಸ್ನೇಹಿತರು, ಅವರಿಗೆ ಸ್ಪರ್ಧೆ ಮಾಡದಂತೆ ಮನವಿ ಮಾಡಿದ್ದೆವು. ಆದರೆ ಅವರು ತಮ್ಮ ನಿಲುವನ್ನು ಬದಲಿಸಲು ತಯಾರಿಲ್ಲ ಎಂದು ಹೇಳಿದರು.

    ಶಾಂತಿನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಖುಷ್ಬೂ ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರ ಬಗ್ಗೆ ಮಾತನಾಡಿದ ಹ್ಯಾರೀಸ್, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ವೈಯಕ್ತಿಕವಾಗಿ ಏನಾದ್ರೂ ಹರ್ಟ್ ಆದಾಗ ಕೆಲವರು ಹೀಗೆ ರಿಯಾಕ್ಟ್ ಮಾಡ್ತಾರೆ ಎಂದರು.

  • ತೈಲ ಬೆಲೆ ಏರಿಸಬೇಕು ಎಂದ ಆಪ್ ಕಾರ್ಯಕರ್ತನಿಗೆ ಮುಖಂಡನಿಂದ ಕಪಾಳಮೋಕ್ಷ – ವಿಡಿಯೋ ನೋಡಿ

    ತೈಲ ಬೆಲೆ ಏರಿಸಬೇಕು ಎಂದ ಆಪ್ ಕಾರ್ಯಕರ್ತನಿಗೆ ಮುಖಂಡನಿಂದ ಕಪಾಳಮೋಕ್ಷ – ವಿಡಿಯೋ ನೋಡಿ

    ಬೆಳಗಾವಿ: ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ವೇಳೆ ತಪ್ಪಾಗಿ ತೈಲ ಬೆಲೆ ಏರಿಸಬೇಕು ಎಂದು ಘೋಷಣೆ ಕೂಗಿದ ಎಎಪಿ ಕಾರ್ಯಕರ್ತನಿಗೆ ಮುಖಂಡರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಮ್ ಆದ್ಮಿ ಪಕ್ಷದಿಂದ ತೈಲ ಬೆಲೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೊಬ್ಬ ತೈಲ ಬೆಲೆ ಏರಿಸಲೇಬೇಕು ಎಂದು ಘೋಷಣೆಯನ್ನು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡು ಅಲ್ಲೆ ಇದ್ದ ಮುಖಂಡ ಸದಾನಂದ್ ಬಾಮನೆ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ.

    ದೇಶದೆಲ್ಲೆಡೆ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಬೆಳಗಾವಿಯಲ್ಲೂ ಬಂದ್ ಗೆ ಕರೆ ನೀಡಿದ್ದರು. ಈ ವೇಳೆ ಕಾರ್ಯಕರ್ತ ತೈಲ ಬೆಲೆ ಇಳಿಸಬೇಕು ಎಂದು ಹೇಳುವ ಬದಲು ತೈಲ ಬೆಲೆ ಏರಿಸಬೇಕು ಎಂದು ಕೂಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಲ್ವರು ರೇಪ್ ಆರೋಪಿಗಳಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿದ್ರು ಜನ

    ನಾಲ್ವರು ರೇಪ್ ಆರೋಪಿಗಳಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿದ್ರು ಜನ

    ಭೋಪಾಲ್: ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ ಭೋಪಾಲ್ ನ ಬೀದಿಗಳಲ್ಲಿ ಆರೋಪಿಗಳ ಮೆರವಣಿಗೆ ಮಾಡಿದ್ದು, ರಸ್ತೆ ಬದಿ ನಿಂತಿದ್ದ ಜನ ನಾಲ್ವರಿಗೂ ಕಪಾಳಕ್ಕೆ ಬಾರಿಸಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳನ್ನ ತಡೆಗಟ್ಟಲು ಸಿಎಂ ಶಿವರಾಜ್ ಸಿಂಗ್ ಚೌಹಾನ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಈ ಅಭ್ಯಾಸ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.

    ಶನಿವಾರದಂದು ಮಹಿಳೆ ಮೇಲೆ ಮಾಜಿ ಪ್ರಿಯಕರ ಹಾಗೂ ಆತನ ಸ್ನೇಹಿತನೊಬ್ಬ ಸೇರಿ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ. ಈ ಇಬ್ಬರಿಗೂ ಮತ್ತಿಬ್ಬರು ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಭೋಪಾಲ್ ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಲೋಧಾ ಹೇಳಿದ್ದಾರೆ.

    ಮಹಿಳೆಯ ಬಾಯ್‍ಫ್ರೆಂಡ್ ಏನೋ ಮುಖ್ಯವಾದ ವಿಷಯ ತಿಳಿಸಬೇಕೆಂದು ಹೇಳಿ ಆಕೆಗೆ ಶನಿವಾರದಂದು ರೆಸ್ಟೊರೆಂಟ್‍ನಲ್ಲಿ ಭೇಟಿಯಾಗುವಂತೆ ಕರೆದಿದ್ದ. ಮಹಿಳೆ ಅಲ್ಲಿಗೆ ಹೋದಾಗ ಆಕೆಯ ಮೊಬೈಲ್ ಕಸಿದುಕೊಂಡಿದ್ದು, ಫೋನ್ ಬೇಕಾದರೆ ತನ್ನ ಜೊತೆ ಸ್ನೇಹಿತನ ರೂಮಿಗೆ ಬರಬೇಕೆಂದು ಹೇಳಿದ್ದ. ಮಹಿಳೆ ಬಲವಂತವಾಗಿ ಬೈಕ್‍ನಲ್ಲಿ ಆತನೊಂದಿಗೆ ಹೋಗಿದ್ದರು ಎಂದು ಲೋಧಾ ಹೇಳಿದ್ದಾರೆ.

    ರೂಮ್ ತಲುಪಿದ ನಂತರ ಮಹಿಳೆಯ ಮಾಜಿ ಪ್ರಿಯಕರನ ಇತರೆ ಮೂವರು ಸ್ನೇಹಿತರು ಅಲ್ಲಿದ್ದರು. ಇಬ್ಬರು ಮಹಿಳೆ ಮೇಲೆ ರೇಪ್ ಮಾಡಿದ್ದು, ಮತ್ತಿಬ್ಬರು ಕಾವಲು ನಿಂತಿದ್ದರು ಎಂದು ಅವರು ತಿಳಿಸಿದ್ದಾರೆ.

    ಮಹಿಳೆ ಅವರಿಂದ ತಪ್ಪಿಸಿಕೊಂಡು ಭಾನುವಾರ ಬೆಳಗ್ಗೆ ಪೊಲೀಸರ ಬಳಿ ದೂರು ದಾಖಲಿಸಿದ್ದರು ಎಂದು ಹೇಳಿದ್ದಾರೆ.

  • ಕಪಾಳಕ್ಕೆ ಹೊಡೆದಿದ್ದಕ್ಕೆ ಸೇಡು- ಸ್ನೇಹಿತನ ತಲೆಯನ್ನ ಗೋಡೆಗೆ ಗುದ್ದಿ ಕೊಂದೇಬಿಟ್ರು!

    ಕಪಾಳಕ್ಕೆ ಹೊಡೆದಿದ್ದಕ್ಕೆ ಸೇಡು- ಸ್ನೇಹಿತನ ತಲೆಯನ್ನ ಗೋಡೆಗೆ ಗುದ್ದಿ ಕೊಂದೇಬಿಟ್ರು!

    ಮುಂಬೈ: ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪದ ಮೇಲೆ ಮಂಗಳವಾರದಂದು ಪೊಲೀಸರು ಪನ್ವೇಲ್‍ನ ಇಬ್ಬರು ನಿವಾಸಿಗಳನ್ನ ಬಂಧಿಸಿದ್ದಾರೆ. ಇವರಿಬ್ಬರೂ ಕಲ್ಯಾಣ್‍ನ ಹಾಜಿ ಮಲಂಗ್‍ನಲ್ಲಿ ಸ್ನೇಹಿತನ ತಲೆಯನ್ನ ಕಲ್ಲಿಗೆ ಗುದ್ದಿ ಕೊಲೆ ಮಾಡಿದ್ದಾರೆ.

    ವಿಲಾಸ್ ಧೊಂಗಾಡೆ(24) ಹಾಗೂ ಆಕಾಶ್ ಶೆಲ್ಕೆ ಬಂಧಿತ ಆರೋಪಿಗಳು. ಫೆಬ್ರವರಿ 23ರಂದು ವಿಲಾಸ್ ಹಾಗೂ ಆಕಾಶ್, ಪ್ರವೀಣ್ ಫರತ್ ಹಾಗೂ ಇನ್ನಿತರ ಕೆಲವು ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದರು. ಆದ್ರೆ ಪ್ರವೀಣ್ ಮಾತ್ರ ಅಂದು ಮನೆಗೆ ಹಿಂದಿರುಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಗೊಂಡಿದ್ದರು.

    ಒಂದು ದಿನದ ನಂತರ ಹಾಜಿ ಮಲಂಗ್ ದರ್ಗಾ ಬಳಿ ಪ್ರವೀಣ್ ಶವ ಪತ್ತೆಯಾಗಿತ್ತು. ಪ್ರವೀಣ್ ನ ಪೋಷಕರು ಅವರಿಗೆ ಅನುಮಾನವಿರುವ ಕೆಲವು ಸ್ನೇಹಿತರ ಬಗ್ಗೆ ನಮಗೆ ತಿಳಿಸಿದ್ರು. ಅವರಿಗಾಗಿ ನಾವು ಹುಡುಕಾಟ ನಡೆಸಿದ್ದೆವು. ಕೊನೆಗೂ ಮಂಗಳವಾರದಂದು ಅವರನ್ನ ಬಂಧಿಸಿದ್ದೇವೆ ಎಂದು ಪನ್ವೇಲ್ ತಾಲೂಕು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾಲೋಜಿ ಶಿಂಧೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಬಂಧಿತರಿಬ್ಬರೂ ಮದ್ಯಪಾನ ಮಾಡಲು ಪ್ರವೀಣ್‍ನನ್ನ ಆಹ್ವಾನಿಸಿದ್ದರು. ಪ್ರವೀಣ್‍ಗೆ ಕುಡಿದು ನಶೆಯೇರಿದ ಬಳಿಕ ಆರೋಪಿಗಳು ಆತನ ತಲೆಯನ್ನ ಕಲ್ಲಿಗೆ ಗುದ್ದಿ ಕೊಲೆ ಮಾಡಿದ್ದರು. ನಂತರ ಶವವನ್ನ ಹಳ್ಳವೊಂದರಲ್ಲಿ ಬಚ್ಚಿಟ್ಟಿದ್ದರು. ಪ್ರವೀಣ್ ಈ ಹಿಂದೆ ವಿಲಾಸ್ ಗೆ ಕಪಾಳಕ್ಕೆ ಹೊಡೆದಿದ್ದರಿಂದ ಇದಕ್ಕೆ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿದ್ದಾರೆ.

    ಪ್ರವೀಣ್ ಮತ್ತು ಆರೋಪಿಗಳು ಸ್ನೇಹಿತರಾಗಿದ್ದರು. ಕೊಲೆಗೆ ಕೆಲವು ದಿನಗಳ ಮುಂಚೆ ಅವರ ಮಧ್ಯೆ ಸಣ್ಣ ಜಗಳವಾಗಿತ್ತು. ಆಗ ಪ್ರವೀಣ್ ವಿಲಾಸ್‍ನ ಕಪಾಳಕ್ಕೆ ಹೊಡೆದಿದ್ದ. ಇದರಿಂದ ಕೋಪಗೊಂಡಿದ್ದ ವಿಲಾಸ್, ಪ್ರವೀಣ್‍ನನ್ನು ಕೊಂದು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಈ ಕೃತ್ಯದಲ್ಲಿ ಮತ್ತಷ್ಟು ಜನ ಭಾಗಿಯಾಗಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ಮಾಲೋಜಿ ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಹಾಗೂ 34 ರಡಿ ಪ್ರಕರಣ ದಾಖಲಾಗಿದೆ.