Tag: SL Bhyrappa

  • ಮನ್ ಕೀ ಬಾತ್‌ನಲ್ಲಿ ಅಕ್ಷರ ಮಾಂತ್ರಿಕ ಎಸ್‌.ಎಲ್‌ ಭೈರಪ್ಪರನ್ನ ನೆನೆದ ಮೋದಿ

    ಮನ್ ಕೀ ಬಾತ್‌ನಲ್ಲಿ ಅಕ್ಷರ ಮಾಂತ್ರಿಕ ಎಸ್‌.ಎಲ್‌ ಭೈರಪ್ಪರನ್ನ ನೆನೆದ ಮೋದಿ

    ನವದೆಹಲಿ: ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪನವರು (SL Bhyrappa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್‌ ಕಿ ಬಾತ್‌ (Man Ki Baat) ಕಾರ್ಯಕ್ರಮದಲ್ಲಿ ಸ್ಮರಿಸಿದ್ದಾರೆ. ತಮ್ಮ 126ನೇ ಮನದ ಮಾತು ಕಾರ್ಯಕ್ರಮದಲ್ಲಿ ನೆನೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

    ನಾನು ಮತ್ತು ನನ್ನ ದೇಶ ಮಹಾನ್ ವಿಚಾರವಾದಿ, ಮಹಾನ್ ಚಿಂತಕರೊಬ್ಬರನ್ನ ಕಳೆದುಕೊಂಡಿದೆ. ನಾನು ಅವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವು ವಿಚಾರಗಳ ಮಂಥನ ನಡೆಸಿದ್ದೇವೆ. ಅವರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅನೇಕ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ. ನಮ್ಮ ಮೂಲ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಬೇಕು, ಗೌರವ ತೋರಿಸಬೇಕು ಎಂಬುದನ್ನ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದು ಭಾವುಕರಾದರು.

    S L Bhyrappa 1

    ಭೈರಪ್ಪ ಅವರ ಜೊತೆಗಿನ ಒಡನಾಟ ಪ್ರೇರಣಾದಾಯಕ, ಅವರ ಪುಸ್ತಕಗಳು ಯುವಕರಿಗೆ ಪ್ರೇರಣೆ, ಅವ್ರ ಕೃತಿಗಳನ್ನ ಯುವಕರು ಹೆಚ್ಚು ಹೆಚ್ಚು ಓದಬೇಕು ಎಂದು ಕರೆ ನೀಡಿದರು.

    ʻಪರ್ವʼತ ಅಸ್ತಂಗತ
    ಈ ದೇಶಕಂಡ ಖ್ಯಾತ ಕಾದಂಬರಿಕಾರ, ಸರಸ್ವತಿ ಸನ್ಮಾನ್ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯ ಲೋಕದ ಪರ್ವ ಡಾ.ಎಸ್.ಎಲ್ ಭೈರಪ್ಪನವರ ಯುಗಾಂತ್ಯವಾಗಿದೆ. ತಮ್ಮ ಕಾದಂಬರಿಗಳಿಂದಲೇ ಮನೆಮನಗಳಲ್ಲಿ ಅಚ್ಚಳಿಯದೇ ಉಳಿದಿದ್ದ ಚೈತನ್ಯದ ಚಿಲುಮೆ ಡಾ.ಎಸ್.ಎಲ್ ಭೈರಪ್ಪನವರು ಬಾರದ ಲೋಕಕ್ಕೆ ತೆರಳಿದ್ದಾರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ನಿನ್ನೆ ವಿಧಿವಶರಾಗಿದ್ದಾರೆ. 94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿ ಇಟ್ಟಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

  • ಮೈಸೂರು | ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ

    ಮೈಸೂರು | ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ

    – ಕಾದಂಬರಿ ಜಗತ್ತಿನ ಅನಭಿಷಿಕ್ತ ದೊರೆ ಇನ್ನು ನೆನಪು

    ಮೈಸೂರು: ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್ ಭೈರಪ್ಪ ವಿಧಿವಶ ಹಿನ್ನೆಲೆ, ಮೈಸೂರಿನಲ್ಲಿಂದು ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಸರಸ್ವತಿ ಪುತ್ರನ ಅಂತ್ಯಕ್ರಿಯೆ ನೆರವೇರಲಿದೆ.

    ಪ್ಯಾನ್ ಇಂಡಿಯಾ ನಾವಲಿಸ್ಟ್ ಭೈರಪ್ಪ ಈ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಬರವಣಿಗೆಯ ಮೂಲಕವೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದ 94 ವರ್ಷದ ಸಾಹಿತಿ ಮೊನ್ನೆ ವಯೋಸಹಜ ಖಾಯಿಲೆಯಿಂದ ನಿಧನ ಹೊಂದಿದರು. ಇವರ ಸಾವಿಗೆ ಇಡೀ ಕರುನಾಡೇ ಮರುಕ ಪಟ್ಟಿತು, ಇಂದು ಇವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ, ಈಗಾಗಲೇ ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಂಡಿದೆ. ಇಂದು 11:30 ಗಂಟೆಗೆ ಬ್ರಾಹ್ಮಣ ಸಂಪ್ರದಾಯದಂತೆ ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

    ಪದ್ಮಭೂಷಣ ಎಸ್‌ಎಲ್ ಭೈರಪ್ಪನವರ ಸಾವಿಗೆ ಇಡೀ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದ್ದು ಇವರ ಅಂತಿಮ ದರ್ಶನಕ್ಕೆ ಇವರ ಓದುಗ ಬಳಗ ಮತ್ತು ಅಭಿಮಾನಿಗಳು ಸಾಗರದಂತೆ ಹರಿದು ಬಂದಿತು. ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಅಂತಿಮ ದರ್ಶನ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ತಂದು ಮೈಸೂರಿನ ಕಲಾಮಂದಿರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತದೇಹವನ್ನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಶವಗಾರದಲ್ಲಿ ಇರಿಸಲಾಯಿತು. ಇಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮನೆಯ ಬಳಿಯೂ ಕೆಲಹೊತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ 10.30ರ ವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿದ್ದು, ಬಳಿಕ ಕುಟುಂಬಸ್ಥರಿಂದ ಅಂತಿಮ ಪೂಜೆ ವಿಧಿವಿಧಾನ ನಡೆಯಲಿದೆ. ನಂತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ, ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ

    ಹಿರಿಯ ಸಾಹಿತಿಗಳಿಗೆ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವ ಗಳೊಂದಿಗೆ ಅಂತಿಮ ನಮನ ಸಲ್ಲಿಸಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ನೀಡಿದ್ದು, ಸಿದ್ಧತೆಗಳು ಕೂಡ ಆಗಿದೆ. ಇನ್ನೂ ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಸ್ನೇಹಿತರು, ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.

    ಒಟ್ಟಾರೆ ಎಸ್‌.ಎಲ್ ಭೈರಪ್ಪ ನವರ 25 ಕಾದಂಬರಿ, 6 ಪ್ರಬಂಧಗಳು, 1 ಆತ್ಮಚರಿತ್ರೆ, 4 ಚಲನಚಿತ್ರವಾದ ಕಾದಂಬರಿಗಳನ್ನು ಈ ಕನ್ನಡ ಸಾಹಿತ್ಯಕ್ಕೆ ನೀಡಿ ಜನಮಾನಸದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ. ದಶಕಗಳ ಕಾಲ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದ ಎಸ್‌ಎಲ್ ಭೈರಪ್ಪರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

  • ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ

    ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ

    – ಭೈರಪ್ಪ ಅವ್ರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು; ಸಿದ್ದರಾಮಯ್ಯ ಅಭಿಪ್ರಾಯ

    ಬೆಂಗಳೂರು: ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪ (SL Bhyrappa) ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

    ರವೀಂದ್ರ ಕಲಾಮಂದಿರದಲ್ಲಿಂದು ಎಸ್.ಎಸ್ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಜೆಪಿಯವರು (BJP) ಹೇಳಿದ್ರು ಎಂದು ಭೈರಪ್ಪ ಅವರ ಸ್ಮಾರಕ ಮಾಡಲ್ಲ. ಮೈಸೂರನಲ್ಲೇ (Mysuru) ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದದ್ದರಿಂದ ಅಲ್ಲೇ ಸ್ಮಾರಕ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬದುಕಿನ `ಯಾನ’ ಮುಗಿಸಿದ ಭೈರಪ್ಪ – ನಾಳೆ ಮೈಸೂರಲ್ಲಿ ಅಂತ್ಯಕ್ರಿಯೆ

    ಭೈರಪ್ಪಗೆ ನುಡಿ ನಮನ
    ಭೈರಪ್ಪ ಅವ್ರು ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. ಭೋದನೆ ಮಾಡುತ್ತಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಎರಡೂ ಕೆಲಸ ಮಾಡುವುದು ಕಷ್ಟ. ಭೋದನೆ ಮಾಡುತ್ತಿದ್ರೂ, ಅವರಿಗೆ ಸಾಹಿತ್ಯದ ಮೇಲೆ ಹೆಚ್ಚು ಆಸಕ್ತಿಯಿತ್ತು. ಅವರ ನಿಧನದಿಂದ ಇಂದು ಸಾರಸ್ವತ ಲೋಕ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 181 ರೂ. ಸಂಬಳ, SL ಭೈರಪ್ಪಗೂ ಹುಬ್ಬಳ್ಳಿಗೂ ಅವಿನಾಭಾವ ನಂಟು

    ಭೈರಪ್ಪನವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಮೈಸೂರಿನಲ್ಲೇ ಹೆಚ್ಚು ಕಾಲ ಇದ್ದರು. ಹೈಸ್ಕೂಲ್‌ನಿಂದ ಎಂಎ ವರೆಗಿನ ವಿದ್ಯಾಭ್ಯಾಸವನ್ನ ಮೈಸೂರಿನಲ್ಲೇ ಮಾಡಿದ್ದರು. ಮೈಸೂರು ಅವರ ಕರ್ಮಸ್ಥಳವಾಗಿದೆ. ಅವರ ಕಾದಂಬರಿಗಳು 40 ಭಾಷೆಗಳಿಗೆ ಭಾಷಾಂತರವಾಗಿದೆ. ಬಹುಷಃ ಇಷ್ಟು ಬರಹಳಿಗೆ ಭಾಷಾಂತರವಾಗಿದ್ದು ಅವರೊಬ್ಬರದ್ದೇ ಅನಿಸುತ್ತೆ. ತಮ್ಮ ಬರಹಗಳಿಂದ ಕನ್ನಡ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದರು ಎಂದು ತಿಳಿಸಿದ್ದಾರೆ.

    ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗೆ ಲಭಿಸಿದ್ದವು. ಅವರ ಈ ಎಲ್ಲಾ ಪ್ರಶಸ್ತಿಗೆ ಅವ್ರು ಅರ್ಹರಾಗಿದ್ದರು. ನನ್ನ ಪ್ರಕಾರ ಅವರಿಗೆ ಜ್ಞಾನಪೀಠ ಪ್ರಶಸ್ತಿಗೆ ಸಿಗಬೇಕಿತ್ತು. ಆದ್ರೆ ಯಾವ ಪ್ರಶಸ್ತಿಗೂ ಅವ್ರು ಆಸೆಪಟ್ಟವರಲ್ಲ. ಕಾದಂಬರಿ ಬರೆಯೋದು ನನ್ನ ಆತ್ಮ ತೃಪ್ತಿಗೆ ಎಂದು ಹೇಳುತ್ತಿದ್ದರು. ಜಗತ್ಪçಸಿದ್ಧ ಕಾದಂಬರಿಗಳನ್ನೇ ಬರೆದಿದ್ದಾರೆ, ನನಗೆ ಅವರ ಎಲ್ಲಾ ಕಾದಂಬರಿಗಳನ್ನು ಓದೋಕೆ ಆಗಿಲ್ಲ. ಕೆಲವು ಕಾದಂಬರಿಗಳನ್ನಷ್ಟೇ ಓದಿದ್ದೇನೆ ಎಂದು ತಿಳಿಸಿದ್ದಾರೆ.

    ಭೈರಪ್ಪನವರಿಗೆ ಚಿರಶಾಂತಿ ಕೋರುತ್ತ, ಕುಟುಂಬಸ್ಥರಿಗೆ ಹಾಗೂ ಅವರ ಅಭಿಮಾನಿಗಳಿಗೆ ಭೈರಪ್ಪ ಅವರ ಅಗಲಿಕೆಯ ದುಃಖ ಬರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

  • ಬದುಕಿನ `ಯಾನ’ ಮುಗಿಸಿದ ಭೈರಪ್ಪ – ನಾಳೆ ಮೈಸೂರಲ್ಲಿ ಅಂತ್ಯಕ್ರಿಯೆ

    ಬದುಕಿನ `ಯಾನ’ ಮುಗಿಸಿದ ಭೈರಪ್ಪ – ನಾಳೆ ಮೈಸೂರಲ್ಲಿ ಅಂತ್ಯಕ್ರಿಯೆ

    ಕನ್ನಡದ ಹೆಮ್ಮೆಯ ಕಾದಂಬರಿ ಕಾರ, ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್ ಭೈರಪ್ಪನವರು (SL Bhyrappa) ಇಹಲೋಕ ತ್ಯಜಿಸಿದ್ದಾರೆ. ಭೈರಪ್ಪನವರ ಕೃತಿಗಳಿಂದ ಕನ್ನಡದ ಹೆಮ್ಮೆಯನ್ನು ವಿಶ್ವಮಟ್ಟಕ್ಕೇರಿಸಿದ ಸಾಹಿತಿ, ಭಾರತದಲ್ಲಿಯೇ ಅತೀ ಹೆಚ್ಚು ಮಾರಾಟವಾಗುವ ಕಾದಂಬರಿ ಕರ್ತೃ ಇನ್ನಿಲ್ಲ ಎಂಬ ಸುದ್ದಿ ಕನ್ನಡಿಗರ ಮನಸ್ಸಿಗೆ ನಿನ್ನೆ ಬಂದು ಅಪ್ಪಳಿಸಿದೆ. ಅವರ ಸಾವಿನಿಂದ ಕನ್ನಡ ಸಾಹಿತ್ಯ (Kannada Literature) ನೀರವ ಮೌನ ಆವರಿಸಿದೆ.

    ನಾಳೆ ಮೈಸೂರಲ್ಲಿ ಅಂತ್ಯಕ್ರಿಯೆ
    ಇಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪನವರ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1 ಗಂಟೆ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಪಾರ್ಥೀವ ಶರೀರ ಮೈಸೂರು ತಲುಪಲಿದೆ. ಬಳಿಕ ಮೈಸೂರು ಕಲಾಮಂದಿರದ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಕೋಲ್ಡ್‌ ಸ್ಟೋರೆಜ್‌ನಲ್ಲಿ ಇಡಲಾಗುತ್ತೆ. ಸೆ.26ರಂದು ಶುಕ್ರವಾರ ಬೆಳಗ್ಗೆ ಕುವೆಂಪುನಗರದಲ್ಲಿರುವ ಭೈರಪ್ಪ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗುತ್ತದೆ. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ಸದ್ಯ ಭೈರಪ್ಪ ಅವರ ಪುತ್ರ ರವಿಶಂಕರ್ ಲಂಡನ್ ನಿಂದ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಖ್ಯಾತ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ನಿಧನಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿ ಗಣ್ಯರಿಂದ ಸಂತಾಪ

    `ಸರಸ್ವತಿ’ ಪುತ್ರ ಎಸ್.ಎಲ್ ಭೈರಪ್ಪ ಅಸ್ತಂಗತ
    ಈ ದೇಶಕಂಡ ಖ್ಯಾತ ಕಾದಂಬರಿಕಾರ, ಸರಸ್ವತಿ ಸನ್ಮಾನ್ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯ ಲೋಕದ ಪರ್ವ ಡಾ.ಎಸ್.ಎಲ್ ಭೈರಪ್ಪನವರ ಯುಗಾಂತ್ಯವಾಗಿದೆ. ತಮ್ಮ ಕಾದಂಬರಿಗಳಿಂದಲೇ ಮನೆಮನಗಳಲ್ಲಿ ಅಚ್ಚಳಿಯದೇ ಉಳಿದಿದ್ದ ಚೈತನ್ಯದ ಚಿಲುಮೆ ಡಾ. ಎಸ್ ಎಲ್ ಭೈರಪ್ಪನವರು ಬಾರದ ಲೋಕಕ್ಕೆ ತೆರಳಿದ್ದಾರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ನಿನ್ನೆ ವಿಧಿವಶರಾಗಿದ್ದಾರೆ, 94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿ ಇಟ್ಟಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

    ವಂಶವೃಕ್ಷದಿಂದ ನಾಯಿನೆರಳು ವರೆಗೂ ಸಿನಿಮಾ
    ಇನ್ನು.., ಸಾರಸತ್ವ ಲೋಕದ ದಿಗ್ಗಜನ ಅಗಲಿಕೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಕಾದಂಬರಿಕಾರ ಇನ್ನಿಲ್ಲ ಎಂಬ ಸುದ್ದಿ ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ಬರಸಿಡಿಲು ಬಂಡಿದಂತಾಗಿದೆ, ಪ್ರಸಿದ್ಧ ಕಾದಂಬರಿಕಾರ, ತತ್ವಜ್ಞಾನಿಯಾಗಿದ್ದ ಎಸ್‌ಎಲ್ ಭೈರಪ್ಪ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಅವರ ರಚಿಸಿದ ಬಹುತೇಕ ಕಾದಂಬರಿಗಳು ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿ ಅಚ್ಚಳಿಯದೇ ಉಳಿದುಕೊಂಡಿದೆ, 1971 ರಲ್ಲಿ ತೆರೆ ಕಂಡ ವಂಶವೃಕ್ಷ ಸಿನಿಮಾ ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತವಾಗಿದ್ದಿದ್ದು. ಈ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಅಭಿನಯಿಸಿ ಮಿಂಚಿದ್ದರು. ನಂತ್ರ ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿನೆರಳು, ಕೃತಿಗಳು ಸಿನಿಮಾವಾದರೆ, ಗೃಹಭಂಗ ಮತ್ತು ದಾಟು ಕಾದಂಬರಿ ಆಧಾರಿತವಾದ ಟಿವಿ ಸೀರಿಯಲ್ ಆಗಿ ನಿರ್ಮಾಣ ಗೊಂಡಿದ್ದವು, ಹೀಗಾಗಿ ಎಸ್‌ಎಲ್ ಭೈರಪ್ಪನವರ ಕೃತಿಗಳು ತೆರೆಯ ಮೇಲೂ ರಾರಾಜಿಸಿದ್ದವು. ಇದನ್ನೂ ಓದಿ: 64 ವರ್ಷಗಳಿಂದ ನಾನು ಭೈರಪ್ಪರನ್ನು ಬಲ್ಲೆ: ಸುಧಾ ಮೂರ್ತಿ

  • S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

    S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

    ಬೆಂಗಳೂರು: ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾಹಿತಿ ಎಸ್‌ಎಲ್‌ ಭೈರಪ್ಪನವರ (S L Bhyrappa) ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದ್ದಾರೆ.

    ಗುರುವಾರ ಬೆಳಗ್ಗೆ 8 ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.  ಮಧ್ಯಾಹ್ನ 1 ಘಂಟೆಯ ನಂತರ ಪಾರ್ಥಿವ ಶರೀರವನ್ನು ಮೈಸೂರಿಗೆ (Mysuru) ತೆಗೆದುಕೊಂಡು ಹೋಗಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಕಲಾಮಂದಿರಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

     

    ಶುಕ್ರವಾರ ಬೆಳಗ್ಗೆ ಸಕಾಲ ಸರ್ಕಾರಿ ಗೌರವದೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯನವವರು ಮೈಸೂರು ಜಿಲ್ಲಾಡಳಿತಕ್ಕೆ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

    ಮೈಸೂರು ಮತ್ತು ಇತರ ಕಡೆಯಲ್ಲಿರುವ ಕುಟುಂಬ ಸದಸ್ಯರು ಈಗ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಬರುತ್ತಿದ್ದಾರೆ. ವಿದೇಶದಲ್ಲಿರುವ ಕುಟುಂಬ ಸದಸ್ಯರು ಬಂದರ ನಂತರ ಮೈಸೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

  • ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ

    ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ

    ನವದೆಹಲಿ: ಸಾಹಿತಿ, ಅಕ್ಷರ ಮಾಂತ್ರಿಕ ಎಸ್.ಎಲ್.ಭೈರಪ್ಪ (S. L. Bhyrappa) ಅವರ ನಿಧನಕ್ಕೆ ಪ್ರಧಾನಿ ಮೋದಿ (PM Modi) ಅವರು ಸಂತಾಪ ಸೂಚಿಸಿದ್ದಾರೆ.

    ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿರುವ ಅವರು, ತಮ್ಮ ಅಕ್ಷರಗಳಿಂದ ನಮ್ಮ ಆತ್ಮವನ್ನು ಕಲಕಿ, ಇಡೀ ಭಾರತವನ್ನು ಅಧ್ಯಯನ ಮಾಡಿದ್ದ ಒಬ್ಬ ಮಹಾನ್ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಅವರ ಬರಹಗಳು ಇಂದಿನ ಪೀಳಿಗೆಯ ಮೇಲೆ ಪ್ರಭಾವ ಬೀರಿದ್ದವು.ಇದನ್ನೂ ಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್‌ಎಲ್‌ ಭೈರಪ್ಪ ಇನ್ನಿಲ್ಲ

    ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರು ಹೊಂದಿದ್ದ ಉತ್ಸಾಹವು ಮುಂದಿನ ಯುವಮನಸ್ಸುಗಳನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ದೇವರು ಅವರ ಕುಟುಂಬಸ್ಥರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅವರ ಜೊತೆಗಿದ್ದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌ಎಲ್‌ ಭೈರಪ್ಪ (SL Bhyrappa) ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ  ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ  ಹೃದಯಸ್ತಂಭನದಿಂದ ಇಂದು (ಸೆ.24) ಮಧ್ಯಾಹ್ನ 2:38ಕ್ಕೆ  ನಿಧನರಾದರು.

    ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲಿಷ್‌  ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರು ಪಡೆದಿದೆ.  ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು  ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.ಇದನ್ನೂ ಓದಿ: ಖ್ಯಾತ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ನಿಧನಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿ ಗಣ್ಯರಿಂದ ಸಂತಾಪ

  • ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

    ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

    ʻʻಭೈರಪ್ಪನವರ (SL Bhyrappa) ಬದುಕು ಕೊನೆಯಿಲ್ಲದ ʻಯಾನʼ, ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಅವರದ್ದು, ತಮ್ಮ ಕಾದಂಬರಿಯ ಮೂಲಕವೇ ವಿಜ್ಞಾನಿಗಳು ಯೋಚಿಸಲೂ ಸಾಧ್ಯವಾಗದ ಪಾತ್ರಗಳನ್ನು ಸೃಷ್ಟಿಸಿದವರು. ಈ ನವರಾತ್ರಿಯ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡಿದ್ದು ಬಹಳ ದುಃಖ ತಂದಿದೆ…ʼʼ ಚಿರನಿದ್ರೆಗೆ ಜಾರಿದ್ದ ಭೈರಪ್ಪನವರಿಗೆ ಹಿರಿಯ ನಟ ಅನಂತ್ ನಾಗ್ (Ananta nag) ಅರ್ಪಿಸಿದ ಭಾವಪೂರ್ಣ ನುಡಿಗಳಿವು.

    ಹೌದು.. ಕನ್ನಡದ ಹಿರಿಯ ಸಾಹಿತಿ ಹಾಗೂ ಕನ್ನಡದ ಸಾಕ್ಷಿಪ್ರಜ್ಞೆ ಎಸ್.ಎಲ್ ಭೈರಪ್ಪ (91) ಅವರಿಂದು ಇಹಲೋಕ ತ್ಯಜಿಸಿದ್ದಾರೆ. ತಮ್ಮ ಕಾದಂಬರಿಗಳಿಂದಲೇ ಹಲವಾರು ಪೀಳಿಗೆಗೆ ಚಿಂತನೆ ಹಚ್ಚಿದ ʻಅಕ್ಷರ ಮಾಂತ್ರಿಕʼ ಬದುಕಿನ ಯಾನ ಮುಗಿಸಿ ಹೊರಟಿದ್ದಾರೆ. ಈ ಕುರಿತು ನಟ ಅನಂತ್‌ ನಾಗ್‌ ಅವರು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದನ್ನೂಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್‌ಎಲ್‌ ಭೈರಪ್ಪ ಇನ್ನಿಲ್ಲ

    ಈ ನವರಾತ್ರಿಯ ಸಂದರ್ಭದಲ್ಲಿ ಅವರು ಹೋಗಬಾರದಿತ್ತು. ಪರ್ವತಪ್ರಾಯ, ಹಿಮಾಲಯದಷ್ಟು ಎತ್ತರದ ವ್ಯಕ್ತಿಯನ್ನ ಕಳೆದುಕೊಂಡದ್ದು ದುಃಖ ತಂದಿದೆ. ನಾವೆಲ್ಲರೂ ಭೈರಪ್ಪನವರ ಕಾದಂಬರಿ ಓದಿ ಮೆಚ್ಚಿದವರು. ಅವರ ʻನಾಯಿ ನೆರಳುʼ ಕಾದಂಬರಿ ಸಿನಿಮಾ ಆಗಿ ಪರಿವರ್ತನೆ ಆಯಿತು. ನನಗೆ ಮುಖ್ಯಪಾತ್ರದಲ್ಲಿ ಅವಕಾಶ ಮಾಡಿಕೊಟ್ಟರು ಅಲ್ಲಿಂದಲೇ ನನ್ನ ನಟನೆ ಆರಂಭವಾಯಿತು ಎಂದು ತಿಳಿಸಿದರು. ಇದನ್ನೂಓದಿ: ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತು, ತಮ್ಮನ ಶವ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದ ಭೈರಪ್ಪ

    ಭೈರಪ್ಪನವರ ಯಾವುದೇ ಕಾದಂಬರಿಯನ್ನು ಬಿಟ್ಟಿಲ್ಲ, ಏಕೆಂದ್ರೆ ಅವರ ಬರಹ ನನಗೆ ಪ್ರಿಯವಾದದ್ದು, ಯಾವಾಗಲೂ ರೆಫರೆನ್ಸ್‌ಗೆ ಅಂತ ಜೊತೆಯಲ್ಲೇ ಇಟ್ಟುಕೊಳ್ತಿದೆ. ಅದ್ರಲ್ಲೂ ʻಯಾನʼ ನನ್ನ ನೆಚ್ಚಿನ ಕಾದಂಬರಿ. ಇಡೀ ವಿಶ್ವದಲ್ಲೇ ಆ ರೀತಿಯ ಸ್ಪೇಸ್‌ (ಬಾಹ್ಯಾಕಾಶ) ಸೃಷ್ಟಿಸಿ ಯಾರೂ ಬರೆದಿಲ್ಲ. ವಿಜ್ಞಾನಿಗಳಿಗೂ ಯೋಚನೆ ಮಾಡಲು ಸಾಧ್ಯವಾಗದಂತಹ ಸ್ಪೇಸ್‌ ಅದು. ನಮ್ಮ ಹಿಂದೂ ತತ್ವಶಾಸ್ತ್ರವನ್ನ ಯಾರು ಅಭ್ಯಾಸ ಮಾಡಿದ್ದಾರೋ ಅವರು ಮಾತ್ರ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ. ಇದನ್ನೂಓದಿ: ಖ್ಯಾತ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ನಿಧನಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿ ಗಣ್ಯರಿಂದ ಸಂತಾಪ

    ಒಂದು ಕಾದಂಬರಿಯಲ್ಲಿ ಮಹಿಳೆ, ಪುರುಷನ ಪಾತ್ರ ಸೃಷ್ಟಿಸಿದ ರೀತಿ.. ಅದನ್ನ ಓದಿದ್ರೆ ರಾತ್ರಿ ನಿದ್ರೆ ಬರಲ್ಲ. ಆಕಾಶ ಹೇಗೆ ಕೊನೆಯಿಲ್ಲದೇ ಇನ್ನು ಮುಂದೆ.. ಇನ್ನು ಮುಂದೆ ಅಂತ ಸಾಗುತ್ತದೋ, ಹಾಗೇ ಕೊನೆಯಿಲ್ಲದ ಯಾನಕ್ಕೆ ಸ್ಪೇಸ್‌ ಶಿಪ್ಪನ್ನ ಕಳಿಸಿದ್ರು. ಕಲ್ಪನೆ ಮಾಡಿದ್ರೂ ಸಹ ಪೃಥ್ವಿ, ಜಗತ್ತು, ಕುರುಕ್ಷೇತ್ರ, ಮಹಾಭಾರತ ಎಲ್ಲವೂ ಇರುತ್ತಿತ್ತು. ಆಕಾಶಕ್ಕಿಂತಲೂ ಎತ್ತರ, ಹಿಮಾಲಕ್ಕಿಂತಲೂ ದೊಡ್ಡ ಮನುಷ್ಯ ಅವರು. ಅವರನ್ನ ಕಳೆದುಕೊಂಡು ನಾವಿಂದು ಬಡವಾಗಿದ್ದೇವೆ ಎಂದು ಭಾವುಕರಾದರು.

    ಭೈರಪ್ಪನವರ ಕುರಿತು ಚುಟುಕು ಮಾಹಿತಿ
    ಭೈರಪ್ಪನವರ ಪೂರ್ತಿ ಹೆಸರು ಸಂತೇವರ ಲಿಂಗಣ್ಣಯ್ಯ ಭೈರಪ್ಪ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದರು. ಹಲವಾರು ವೈಚಾರಿಕ ಸಾಹಿತ್ಯವನ್ನು ರಚಿಸಿದವರು. ಅವರ ಹಲವಾರು ಪುಸ್ತಕಗಳು ಭಾರತೀಯ ಭಾಷೆಗಳು ಮಾತ್ರವಲ್ಲದೆ ವಿದೇಶಗಳ ಭಾಷೆಗಳಿಗೂ ತರ್ಜುಮೆಯಾಗಿದೆ. ಅವರ ಹಲವಾರು ಕಾದಂಬರಿಗಳು ಹಲವಾರು ಬಾರಿ ಮರುಮುದ್ರಣಗಳನ್ನು ಕಂಡಿದ್ದು ಅವರ ಕಾದಂಬರಿಗಳ ಜನಪ್ರಿಯತೆಗೆ ಸಾಕ್ಷಿ. ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಇವರಿಗೆ 2022ರಲ್ಲಿ ಕೇಂದ್ರ ಸರ್ಕಾರ, ಪದ್ಮಭೂಷಣ ಗೌರವ ನೀಡಿತ್ತು.

  • ಸುಧಾಮೂರ್ತಿ, ಎಸ್.ಎಲ್ ಭೈರಪ್ಪಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ

    ಸುಧಾಮೂರ್ತಿ, ಎಸ್.ಎಲ್ ಭೈರಪ್ಪಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ

    ನವದೆಹಲಿ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murty) ಹಾಗೂ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (SL Bhyrappa) ಅವರಿಗೆ ಪದ್ಮ ಭೂಷಣ (Padma Bhushan) ಪ್ರಶಸ್ತಿ ಲಭಿಸಿದೆ.

    ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ (President Of India) ದ್ರೌಪದಿ ಮುರ್ಮು (Droupadi Murmu) ಅವರು ವಿವಿಧ ಕ್ಷೇತ್ರದ ಸಾಧಕರಿಗೆ 2023ನೇ ಸಾಲಿನ ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

    ಸಮಾಜ ಸೇವೆ, ಮಹಿಳಾ ಸಬಲೀಕರಣ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ವನ್ಯಜೀವಿ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ

    ಇದೇ ವೇಳೆ ಕೆಜಿಎಫ್-2 ನಟಿ ರವೀನಾ ಟಂಡನ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

  • ಮೋದಿ ಪ್ರಧಾನಿಯಾಗಿದ್ರಿಂದ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ: ಎಸ್.ಎಲ್ ಭೈರಪ್ಪ

    ಮೋದಿ ಪ್ರಧಾನಿಯಾಗಿದ್ರಿಂದ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ: ಎಸ್.ಎಲ್ ಭೈರಪ್ಪ

    ಮೈಸೂರು: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿ ಆದ ಕಾರಣವೇ ನನಗೆ ಪದ್ಮಭೂಷಣ (Padma Bhushan) ಪ್ರಶಸ್ತಿ ಬಂತು. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (S. L. Bhyrappa) ಹೇಳಿದರು.

    ಮೈಸೂರಿನ ಕುವೆಂಪು ನಗರದಲ್ಲಿರುವ ಎಸ್.ಎಲ್. ಭೈರಪ್ಪ ಅವರ ನಿವಾಸದಲ್ಲಿ ಶಾಸಕ ರಾಮದಾಸ್ ಅವರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: ರಾಷ್ಟ್ರಪತಿ ಏನು ಬೇಡ ನಾನು ನಮ್ಮ ಊರಾಗ ಆರಾಮ ರಾಣಿ ಹಂಗೆ ಇದ್ದೀನಿ: ಸುಧಾಮೂರ್ತಿ

    ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ಈ ಸಂಸ್ಕೃತಿ ಏಕ ರೂಪದಲ್ಲಿ ಬೆಳೆದಿದೆ. ಗಣರಾಜ್ಯ ಮೊದಲಿಂದಲ್ಲೂ ಇತ್ತು. ಸಂವಿಧಾನದ ಬಹುಭಾಗ ನಮ್ಮ ಮೊದಲಿದಂಲೂ ಇತ್ತು. ಎಷ್ಟೋ ದೇಶದಲ್ಲಿ ಸ್ವಾತಂತ್ರ್ಯ ಪಡೆದಿದ್ದಾರೆ. ಆದರೆ ಅಲ್ಲಿ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ. ಈ ದೇಶವನ್ನು ಕಾಪಾಡುತ್ತದೆ ಎಂದರು.

    ಗಣರಾಜ್ಯದ ಉತ್ಸವ ಬಹಳ ಮಹತ್ತರವಾದದ್ದು. ಇಲ್ಲೇ ಕೂತಿದ್ದೇನೆ. ಇಲ್ಲೇ ಬರೆದಿದ್ದಾನೆ. ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನ ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದು ತಿಳಿಸಿದರು. ಇದನ್ನೂ ಓದಿ: ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    2023ನೇ ಸಾಲಿನ ಪದ್ಮಶ್ರೀ (Padmashree), ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಈ ಬಾರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ: ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    ಬೆಂಗಳೂರು: ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಎಸ್‍ಎಲ್ ಭೈರಪ್ಪ (SL Bhyrappa), ಸುಧಾಮೂರ್ತಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

    2023ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಈ ಬಾರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ: ರಾಷ್ಟ್ರಪತಿ ಏನು ಬೇಡ ನಾನು ನಮ್ಮ ಊರಾಗ ಆರಾಮ ರಾಣಿ ಹಂಗೆ ಇದ್ದೀನಿ: ಸುಧಾಮೂರ್ತಿ

    ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಐ ಶಾ ರಶೀದ್ ಅಹಮದ್ ಕ್ವಾದ್ರಿ (ಕಲೆ), ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ – ಯಾರಿಗೆ ಯಾವ ಪದಕ ಸಿಕ್ಕಿದೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k