Tag: Sky

  • ಜುಲೈನಲ್ಲಿ ಡಬಲ್ ಗ್ರಹಣ

    ಜುಲೈನಲ್ಲಿ ಡಬಲ್ ಗ್ರಹಣ

    ಬೆಂಗಳೂರು: ಬಾಹ್ಯಾಕಾಶದ ವಿದ್ಯಮಾನ ಜನರಲ್ಲಿ ಆತಂಕವನ್ನ ಹೆಚ್ಚು ಮಾಡಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಭೂಮಿ ಮೇಲೆ ನೆಡೆಯುತ್ತಿರೋ ಎಲ್ಲಾ ಅವಘಡಗಳಿಗೂ ನಭೋಮಂಡಲದಲ್ಲಿ ಜರುಗಲಿರೋ ಗ್ರಹಣ ಪ್ರಕ್ರಿಯೆಗೂ ಸಂಬಂಧ ಇದೆ ಅನ್ನೋದೇ ಭೀತಿಯನ್ನ ಹೆಚ್ಚು ಮಾಡಿದೆ. ಜುಲೈನಲ್ಲಿ ಒಂದು ಸೂರ್ಯ ಗ್ರಹಣ, ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳಿಗೆ ನಭೋಮಂಡಲ ಸಾಕ್ಷಿಯಾಗಲಿದೆ.

    ಸೂರ್ಯ ಗ್ರಹಣ:
    ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಲಿದೆ. ತಿಂಗಳ ಪ್ರಾರಂಭದಲ್ಲೇ ಸಂಭವಿಸುವ ಈ ಸೂರ್ಯ ಗ್ರಹಣವು ಒಟ್ಟು 4 ನಿಮಿಷ 33 ಸೆಕೆಂಡ್‍ಗಳ ಕಾಲ ಸಂಭವಿಸಲಿದೆ. ಕೊನೆಯದಾಗಿ 2017ರ ಆಗಸ್ಟ್ ನಲ್ಲಿ 2 ನಿಮಿಷ 40 ಸೆಕೆಂಡ್‍ಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಆಗಿತ್ತು. ಈ ವರ್ಷದ ಏಕೈಕ ಪೂರ್ಣ ಸೂರ್ಯ ಗ್ರಹಣ ಇದಾಗಿದೆ.

    ದಕ್ಷಿಣ ಪೆಸಿಫಿಕ್ ಸಾಗರ, ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣವು ಗೋಚರವಾಗಲಿದೆ. ದಕ್ಷಿಣ ಅಮೆರಿಕ ಸೇರಿದಂತೆ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರವಾಗುವ ಸಾಧ್ಯತೆಯಿದೆ. ಪೂರ್ಣ ಸೂರ್ಯಗ್ರಹಣ ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸಂಭವಿಸಲಿದೆ. ಗ್ರಹಣದ ಮೊದಲ ಒಹಿನೋ ದ್ವೀಪದಲ್ಲಿ ಸ್ಥಳೀಯ ಕಾಲಮಾನ 10.24ಕ್ಕೆ ಆರಂಭವಾಗುತ್ತದೆ. ನಂತರ ಆಗ್ನೇಯದ ಕಡೆಗೆ ಸಾಗಲಿದೆ.

    ದಕ್ಷಿಣ ಅಮೆರಿಕಾದ ಒಹಿನೋ ದ್ವೀಪದಲ್ಲಿ ಈ ಗ್ರಹಣ ಮೊದಲು ಗೋಚರವಾಗಲಿದೆ. ಖಗೋಳ ಶಾಸ್ತ್ರಜ್ಞರ ಪ್ರಕಾರ ಇಲ್ಲಿ ಸುಮಾರು 2 ನಿಮಿಷ 53 ಸೆಕೆಂಡ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಿದ್ದಾರೆ. ಆದಾದ ಬಳಿಕ ಗಲಪೊಗಾಸ್ ದ್ವೀಪದಲ್ಲಿ ಗ್ರಹಣ ಗೋಚರ ಕೊನೆಯಾಗಲಿದೆ. ಇಲ್ಲಿ ಸುಮಾರು 4 ನಿಮಿಷ 23 ಸೆಕೆಂಡ್ ಸಮಯದಷ್ಟು ಗ್ರಹಣ ಕಾಣಿಸಿಕೊಳ್ಳಲಿದೆ. ಈ ಮಧ್ಯೆ ಚಿಲಿ, ಅರ್ಜೆಂಟಿನಾದಂಥಾ ದೇಶಗಳಿಗೂ ಅಲ್ಪ ಸ್ವಲ್ಪ ದರ್ಶನ ಸೂರ್ಯಗ್ರಹಣ ನೀಡಲಿದೆ.

    ಚಂದ್ರ ಗ್ರಹಣ:
    ಜುಲೈ 17ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿಯೂ ಗೋಚರವಾಗಲಿದೆ. ಭಾರತದಲ್ಲಿಯೂ ಜುಲೈ 17 ಅಂದ್ರೆ 16ರ ಮಧ್ಯ ರಾತ್ರಿ ಸುಮಾರು 1.51 ನಿಮಿಷದ ಆಸುಪಾಸಿನಲ್ಲಿ ಗ್ರಹಣ ಗೋಚರಿಸಲಿದೆ.

    ಏಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣ ಗೋಚರವಾಗಲಿದೆ. ಉಳಿದಂತೆ ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ/ಈಶಾನ್ಯ ಅಮೆರಿಕಾ, ಪೆಸಿಫಿಕ್, ಅಂಟ್ಲಾಟಿಕ್, ಭಾರತದ ಸಾಗರಗಳಲ್ಲಿಯೂ ಚಂದ್ರ ಗ್ರಹಣ ಕಾಣಬಹುದಾಗಿದೆ. ಬೆಂಗಳೂರಲ್ಲಿ ಜುಲೈ 16ರ ಮಧ್ಯರಾತ್ರಿ (ಜುಲೈ 17) 1.51ಕ್ಕೆ ಆರಂಭಗೊಂಡು ಬೆಳಗಿನ ಜಾವ 5 ಗಂಟೆ 47 ನಿಮಿಷಕ್ಕೆ ಕೊನೆಯಾಗಲಿದೆ. ಒಂದು ವೇಳೆ ಆಕಾಶವು ಮೋಡಗಳಿಂದ ಕೂಡಿದ್ರೆ ಚಂದ್ರಗ್ರಹಣ ದರ್ಶನ ಸಿಗಲಾರದು.

  • ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ವಾಷಿಂಗ್‍ಟನ್: ಆಕಾಶದಲ್ಲಿ ಮೋಡಗಳ ಅಲೆ ಮೂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

    ಮೋಡಗಳ ಫೋಟೋವನ್ನು ಮಂಗಳವಾರ ಸಂಜೆ ವರ್ಜೀನಿಯಾದ ಲೇಕ್ ಸ್ಮಿತ್ ಪರ್ವತದಲ್ಲಿ ಕ್ಲಿಕ್ಕಿಸಲಾಗಿದೆ. ಈ ಅಲೆಗಳ ಮೋಡವನ್ನು ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ವೇವ್ ಎಂದು ಕರೆಯಲಾಗುತ್ತದೆ. ಇದರ ಫೋಟೋವನ್ನು ಆ್ಯಮಿ ಕ್ರಿಸ್ಟೈ ಹಂಟರ್ ಸೆರೆ ಹಿಡಿದಿದ್ದಾರೆ.

    ಆ್ಯಮಿ ಕ್ರಿಸ್ಟೈ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಇಂದು ಸಂಜೆ ಸ್ಮಿತ್ ಮೌಂಟೇನ್‍ನಲ್ಲಿ ಅತ್ಯಂತ ತಂಪಾದ ಮೋಡಗಳು ಪರ್ವತದ ಮೇಲ್ಭಾಗದಲ್ಲಿ ಉರುಳುತ್ತಿದೆ. ಇದಕ್ಕೆ ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ಮೋಡ ಎಂದು ಕರೆಯುತ್ತಾರೆ. ನಾನು ಈ ಫೋಟೋವನ್ನು ಹವಾಮಾನ ತಜ್ಞರಿಗೆ ಕಳುಹಿಸಿದ್ದೇನೆ. ಆಗ ಅವರು ಇದು ಅಪರೂಪದ ಮೋಡ ಹಾಗೂ ಇದರ ಬಗ್ಗೆ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಎಂದು ಹೇಳಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ 600ಕ್ಕೂ ಹೆಚ್ಚು ಶೇರ್ ಪಡೆದುಕೊಂಡಿದೆ. ಅಲ್ಲದೆ 144ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ‘ಇದು ತುಂಬಾ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ವಾವ್ ಇದು ಪೇಟಿಂಗ್ ರೀತಿ ಕಾಣಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]