Tag: skoda car

  • ಸ್ಕೋಡಾ ಎಸ್‌ಯುವಿಗೆ ಸಂಸ್ಕೃತದ ‘ಕೈಲಾಕ್’ ಹೆಸರಿಟ್ಟು ಕಾರು ಗೆದ್ದ ಕಾಸರಗೋಡಿನ ಕುರಾನ್ ಶಿಕ್ಷಕ

    ಸ್ಕೋಡಾ ಎಸ್‌ಯುವಿಗೆ ಸಂಸ್ಕೃತದ ‘ಕೈಲಾಕ್’ ಹೆಸರಿಟ್ಟು ಕಾರು ಗೆದ್ದ ಕಾಸರಗೋಡಿನ ಕುರಾನ್ ಶಿಕ್ಷಕ

    _ ಸ್ಕೋಡಾ ಎಸ್‌ಯುವಿನ ಮೊದಲ ಮಾಲೀಕನಾದ ಜಿಯಾದ್

    ಕಾಸರಗೋಡು: 2025 ರಲ್ಲಿ ಲಾಂಚ್ ಆಗುವ ಸ್ಕೋಡಾ ಯುಎಸ್‌ವಿ(Skoda SUV) ಕಾರಿಗೆ ಕೇರಳ ಮೂಲದ 24 ವರ್ಷದ ಮೊಹಮ್ಮದ್ ಜಿಯಾದ್ ಸೂಚಿಸಿದ ಕೈಲಾಕ್ ಎಂಬ ಹೆಸರನ್ನು ಆಯ್ಕೆ ಮಾಡಲಾಗಿದೆ. ಕೈಲಾಕ್ (Kylaq) ಎಂದರೆ ಸಂಸ್ಕೃತದಲ್ಲಿ ಸ್ಫಟಿಕ ಎಂಬ ಅರ್ಥ ಬರುತ್ತದೆ.

    ಸ್ಕೋಡಾ ಕಂಪನಿಯು ತಮ್ಮ ಹೊಸ ಕಾರ್‌ಗೆ ಹೊಸ ಹೆಸರನ್ನು ಸೂಚಿಸುವ ಸಲುವಾಗಿ ಒಂದು ಸ್ಪರ್ಧೆಯನ್ನು ಘೋಷಣೆ ಮಾಡಿತ್ತು. ಒಬ್ಬರಿಗೆ 5 ಹೆಸರನ್ನು ಸೂಚಿಸುವ ಅವಕಾಶ ನೀಡಿತ್ತು. ಇಂಗ್ಲಿಷ್ ನ ‘ಕೆ’ ಅಕ್ಷರದಿಂದ ಪ್ರಾರಂಭಗೊಂಡು ಕ್ಯು ಅಕ್ಷರದಲ್ಲಿ ಕೊನೆಗೊಳ್ಳುವ ಹೆಸರು ಸೂಚಿಸಬೇಕು ಎಂದು ನಿಯಮದಲ್ಲಿತ್ತು. ಅದರಂತೆ ಸಮಾರು 2 ಲಕ್ಷ ಜನ ಕಾರು ಪ್ರೇಮಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕೇರಳ (Kerala) ಮೂಲದ ಜಿಯಾದ್ ಕಳುಹಿಸಿದ ಹೆಸರನ್ನು ಕಂಪನಿಯು ಆಯ್ಕೆ ಮಾಡಿದೆ. ಇದನ್ನೂ ಓದಿ: ಬಲಪಂಥೀಯರೇ ಗಾಂಧಿಯನ್ನ ಕೊಂದು ಹಾಕಿರೋದು: ಸಿಎಂ ಸಿದ್ದರಾಮಯ್

    ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಕೋಡಾ ಕಂಪನಿಯ ಈ ಸ್ಪರ್ಧೆಯ ಜಿಯಾದ್ ಕಾಸರಗೋಡು (Kasaragodu) ವಿಜೇತರಾಗಿದ್ದು ಹೊಸ ಸ್ಕೋಡಾ ಕೈಲಾಕ್ ಕಾರು ಗೆದ್ದಿದ್ದಾರೆ ಎಂದು ಅನೌನ್ಸ್ ಮಾಡಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರು ಈ ಕಾರಿನ ಮೊದಲ ಮಾಲೀಕರು ಎಂದು ಕಂಪನಿಯು ಮೊದಲೇ ಹೇಳಿತ್ತು. ಆದ್ದರಿಂದ ಜಿಯಾದ್ ಈ ಕಾರಿನ ಮೊದಲ ಮಾಲೀಕರಾಗಿದ್ದಾರೆ. ಇದನ್ನೂ ಓದಿ: ಯಶವಂತಪುರ ಫ್ಲೈ ಓವರ್ ಕೆಳಗೆ ಸಿಲುಕಿದ ಬೃಹತ್ ಟ್ರಕ್

    ಜಿಯಾದ್ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದು ಕಳೆದ ಎರಡೂವರೆ ವರ್ಷದಿಂದ ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಕುರಾನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವ

    “ನನಗೆ ಕಾರಿನ ಮೇಲೆ ಅಷ್ಟೊಂದು ಕ್ರೇಜ್ ಇಲ್ಲ. ನನ್ನ ಮನೆಯವರನ್ನು ಕರೆದುಕೊಂಡು ಹೋಗುವುದಕ್ಕಾಗಿ ನನಗೆ ಸ್ವಂತ ಕಾರು ಬೇಕು” ಎಂದು ಜಿಯಾದ್ ಹೇಳಿದರು. ಇದನ್ನೂ ಓದಿ: ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿ ಉಡಾವಣೆ

    ಸ್ಕೋಡಾ ಇಂಡಿಯಾ ಕಂಪನಿಯು ಕ್ವಿಕ್, ಕೈಲಾಕ್, ಕೋಸ್ಮಿಕ್, ಕೈರೋಕ್, ಕಾರಿಕ್, ಕಾರ್ಮಿಕ್, ಕ್ಲಿಕ್, ಮತ್ತು ಕಯಾಕ್ 8 ಹೆಸರುಗಳನ್ನು ಕೊನೆಯ ವಾರದಲ್ಲಿ ವೋಟ್ ಗಾಗಿ ಹೊರ ಹಾಕಿತ್ತು. ಇದರಲ್ಲಿ ಕ್ವಿಕ್, ಕೈಲಾಕ್, ಕೋಸ್ಮಿಕ್, ಕ್ಲಿಕ್, ಮತ್ತು ಕಯಾಕ್ ಎಂಬ 5 ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಸ್ಕೋಡಾ ಜಿಯಾದ್ ಸೂಚಿಸಿರುವ ‘ಕೈಲಾಕ್’ ಎಂಬ ಹೆಸರನ್ನು ಆಯ್ಕೆ ಮಾಡಿದೆ. ಇದನ್ನೂ ಓದಿ: ಸ್ಥಳ ಮಹಜರು ವೇಳೆ ಪರಾರಿಗೆ ಯತ್ನ – ಅಸ್ಸಾಂ ಹತ್ಯಾಚಾರ ಆರೋಪಿ ಕೊಳಕ್ಕೆ ಬಿದ್ದು ಸಾವು

  • ಹೊಸ ಸ್ಕೋಡಾ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡಿ ಅಪಘಾತ- ಉದ್ಯಮಿ ಮಗ ಸಾವು

    ಹೊಸ ಸ್ಕೋಡಾ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡಿ ಅಪಘಾತ- ಉದ್ಯಮಿ ಮಗ ಸಾವು

    ತಿರುವನಂತಪುರಂ: ಹೊಸ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಪರಿಣಾಮ ಅಪಘಾತ ಸಂಭವಿಸಿ ಉದ್ಯಮಿಯ ಮಗನೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಇಲ್ಲಿನ ತಿರುವನಂತಪುರಂನಲ್ಲಿ ಕಳೆದ ರಾತ್ರಿ 10.45ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ಸುಬ್ರಮಣ್ಯ ಎಂಬವರ ಮಗ ಆದರ್ಶ್ ಹೊಚ್ಚ ಹೊಸ ಸ್ಕೋಡಾ ಕಾರನ್ನ ವೇಗವಾಗಿ ಚಾಲನೆ ಮಾಡಿದ್ದು, ಆಟೋಗೆ ಗುದ್ದಿದೆ. ನಂತರ ನಿಯಂತ್ರಣ ತಪ್ಪಿ ಕಾರ್ ಅಪಘಾತಕ್ಕೀಡಾಗಿದೆ.

    ಕಾರಿನಲ್ಲಿದ್ದ ಮಹಿಳೆಯರಿಗೆ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಅಪಘಾತದಿಂದಾಗಿ ಸ್ಕೋಡಾ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ವಾಹನವನ್ನ ಕಟ್ ಮಾಡಿ ಒಳಗಿದ್ದ ಪ್ರಯಾಣಿಕರನ್ನ ರಕ್ಷಣೆ ಮಡಿದ್ದಾರೆ.

    ಕಾರಿಗೆ ತಾತ್ಕಾಲಿಕ ರೆಜಿಸ್ಟ್ರೇಷನ್ ಇತ್ತು. ಅಪಘಾತದಲ್ಲಿ 20 ವರ್ಷದ ಆದರ್ಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.