Tag: skirts

  • ಬಳ್ಳಿಯಂತಹ ನಡುವಿಗೆ ಫ್ರೆಶ್ ಲುಕ್ ನೀಡುವ ಸ್ಮಾರ್ಟ್ ಬೆಲ್ಟ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

    ಬಳ್ಳಿಯಂತಹ ನಡುವಿಗೆ ಫ್ರೆಶ್ ಲುಕ್ ನೀಡುವ ಸ್ಮಾರ್ಟ್ ಬೆಲ್ಟ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

    ನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ನಾವು ನೋಡಲು ಚೆನ್ನಾಗಿ ಕಾಣ್ಬೇಕು ಅನ್ನೋ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತಮ್ಮ ಅಂದ ಚಂದ ಹೆಚ್ಚು ಮಾಡುವ ಸ್ಟೈಲಿಶ್‌ ಬಟ್ಟೆಗಳೆಂದರೆ ಬಹಳ ಇಷ್ಟ. ಮಾರುಕಟ್ಟೆಯಲ್ಲೂ ಹಲವಾರು ಚೂಡಿದಾರ್, ಸಲ್ವಾರ್ ಸೂಟ್, ಜೀನ್ಸ್, ಕ್ಯಾಶುವಲ್ ವೇರ್ ಇತ್ಯಾದಿಗಳು ಮಹಿಳೆಯರಿಗೆ ಪ್ರಿಯವಾಗಿಯೇ ಸಿಗಲಿವೆ.

    BELTS (3)

    ಇತ್ತೀಚೆಗೆ ಹೊಸ ಟ್ರೆಂಡ್ ಶುರುವಾಗಿದೆ. ಪ್ಯಾಂಟ್ ಧರಿಸುವವರು ಹಾಗೂ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಶಾರ್ಟ್ ಬೆಲ್ಟ್‌ಗಳನ್ನು ಬಳಸುತ್ತಾರೆ. ಶರ್ಟ್ ಪ್ಯಾಂಟ್ ಅಲ್ಲದೆ ಮಹಿಳೆಯರ ಡ್ರೆಸ್ ಗೂ ಈಗ ಬೆಲ್ಟ್ ಧರಿಸುತ್ತಾರೆ. ತಮ್ಮ ಡ್ರೆಸ್ ಮೇಲೆ ಬಣ್ಣ ಬಣ್ಣದ, ವಿಭಿನ್ನ ಶೈಲಿಯ ಬೆಲ್ಟ್‌ಗಳನ್ನು ಧರಿಸುತ್ತಾರೆ.

    ಹೌದು ಸಿಂಪಲ್ ಆದ ಸೀರೆಗೂ ಗ್ರ‍್ಯಾಂಡ್ ಆಗಿರೋ ಬೆಲ್ಟ್ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತದೆ. ಹಾಗೆಯೇ ಟೀ ಶರ್ಟ್ ಹಾಗೂ ಶಾರ್ಟ್ ಸ್ಕರ್ಟ್‌ಗಳಿಗೆ ಹೊಂದಿಕೆಯಾಗುವ ಬೆಲ್ಟ್‌ಗಳನ್ನು ಧರಿಸುವುದು ನಿಮಗೆ ಹೊಸ ಲುಕ್ ನೀಡುತ್ತದೆ. ಅವುಗಳ ಬಗೆಯನ್ನಿಲ್ಲಿ ನೋಡೋಣ…

    BELTS (3)

    ನೀಳ ದೇಹಕ್ಕುಂಟು ಬೆಲ್ಟ್: ನಿಮ್ಮ ದೇಹವು ನೇರವಾಗಿದ್ದರೆ, ಮಧ್ಯಮ ಅಗಲದ ಡಾರ್ಕ್ ಬೆಲ್ಟ್ ಅನ್ನು ಆಯ್ಕೆ ಮಾಡಿ ಅಥವಾ ರಫಲ್ಸ್ (ಹುಡುಗರೂ ಧರಿಸಬಹುದಾದ ಲೆದರ್ ಬೆಲ್ಟ್) ಹೊಂದಿರುವ ಫ್ಯಾಬ್ರಿಕ್ ಬೆಲ್ಟ್ ಧರಿಸಿ ಕೊಳ್ಳಬಹುದು.

    BELTS (3)

    ಬಳ್ಳಿ ನಡುವಿಗೂ ಬೆಲ್ಟ್: ಕೆಲ ಹುಡುಗಿಯರು ಹಾಗೂ ಮಹಿಳೆಯರು ತೀರಾ ಸಣ್ಣಗಿರುವವರು ಕಡಿಮೆ ಅಗಲದ ಬೆಲ್ಟ್‌ಗಳನ್ನು ಧರಿಸುತ್ತಾರೆ. ಬಳ್ಳಿಯಂತೆ ಬಳುಕುವ ನಡುವಿಗೆ ಆಕರ್ಷಕವೆಂದರೆ ಲೋಹ ಅಥವಾ ಚರ್ಮದಿಂದ ಮಾಡಿದ ಬೆಲ್ಟ್. ಇಂತಹವರು ಹೆಚ್ಚು ಅಗಲವಾದ ಬೆಲ್ಟ್‌ಗಳನ್ನು ಧರಿಸುವುದರಿಂದ ದೇಹಕ್ಕೆ ಬ್ಯಾಂಡೇಜ್ ಸುತ್ತಿದಂತೆ ಕಾಣುತ್ತದೆ.

    ಶಾರ್ಟ್‌ಸ್ಕರ್ಟ್‌ಗೆ ಒಪ್ಪುವ ಬೆಲ್ಟ್: ನಿಮ್ಮ ಉಡುಪನ್ನು ಎದ್ದು ಕಾಣುವಂತೆ ಮಾಡಲು ಅಗಲವಾದ ಕಪ್ಪು ಬೆಲ್ಟ್ ಪರ್ಫೆಕ್ಟ್ ಆಗಿರುತ್ತದೆ. ಉದಾಹರಣೆಗೆ ನೀವು ಬಿಳಿ ಶರ್ಟ್ ಹಾಗೂ ಹೂವಿನ ಬಾರ್ಡರ್‌ವುಳ್ಳ ಸ್ಕರ್ಟ್ ಧರಿಸಿದರೆ, ಅದಕ್ಕೆ ಕಪ್ಪು ಬೆಲ್ಟ್ ಸೂಟ್ ಆಗುತ್ತದೆ.

    BELTS (3)

    ಫಾರ್ಮಲ್ ಸೂಟ್ಸ್: ಕೆಲಸದ ಸ್ಥಳಗಳಲ್ಲಿ ಸೂಟ್ಸ್ ಧರಿಸುವ ಮಹಿಳೆಯರು ತಿಳಿ ಕಂದು ಅಥವಾ ಕಪ್ಪು ಚರ್ಮದ ಬೆಲ್ಟ್ ಅನ್ನು ಧರಿಸುವುದು ಉತ್ತಮ. ಮೆರೂನ್, ಗಾಢ ಹಸಿರು ಅಥವಾ ರಕ್ತ ಚಂದನ ಬಣ್ಣದ ಬೆಲ್ಟ್‌ಗಳನ್ನು ಪ್ರಯತ್ನಿಸಬಹುದು.

    ಜೀನ್ಸ್ ಲುಕ್: ಸೂಪರ್ ಕ್ಯಾಶ್ಯುಯಲ್ ನೋಟಕ್ಕಾಗಿ ಜೀನ್ಸ್ ಧರಿಸುವ ಯುವತಿಯರು ಹಾಗೂ ಮಹಿಳೆಯರು ಕೊಂಚ ಅಗಲವಾದ ಬೆಲ್ಟ್ ಧರಿಸುವುದು ಒಳ್ಳೆಯದು. ಇವು ನಿಮ್ಮನ್ನು ಮತ್ತಷ್ಟು ಸ್ಟೈಲಿಶ್‌ ಆಗಿ ಕಾಣುವಂತೆ ಮಾಡುತ್ತದೆ.

  • ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

    ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

    ಮಾಸ್ಕೋ: ಸಾಮಾನ್ಯವಾಗಿ ಹಲವು ಕಂಪನಿಗಳನ್ನು ಮಹಿಳಾ ಸಿಬ್ಬಂದಿ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪುಗಳನ್ನು ಧರಿಸಬೇಕು ಎಂಬ ನಿಯಮವಿರುತ್ತೆ. ಆದರೆ ರಷ್ಯಾದ ಕಂಪನಿಯೊಂದು ಸ್ಕರ್ಟ್ ಅಥವಾ ಶಾರ್ಟ್ ಡ್ರೆಸ್ ಧರಿಸಿ ಕೆಲಸಕ್ಕೆ ಬಂದರೆ ಹೆಚ್ಚುವರಿ ಬೋನಸ್ ನೋಡುತ್ತೇವೆ ಎಂದು ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.

    ಹೌದು. ವಿವಿಧ ಕಂಪನಿಗಳು ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ದೌರ್ಜನ್ಯ ತಡೆಯಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ರಷ್ಯಾದ ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಹೆಸರಿನ ಕಂಪನಿ ವಿಚಿತ್ರ ಆಫರ್ ಮಹಿಳಾ ಸಿಬ್ಬಂದಿ ಮುಂದಿಟ್ಟಿದೆ.

    `ಫೆಮಿನಿಟಿ ಮ್ಯಾರಥಾನ್’ ಎಂಬ ಅಭಿಯಾನವನ್ನ ಕಂಪನಿ ಆರಂಭಿಸಿದೆ. ಈ ಅಭಿಮಾನದ ವಿಶೇಷತೆ ಏನಪ್ಪಾ ಅಂದರೆ, ಸ್ಕರ್ಟ್ ಅಥವಾ ಮೊಣಕಾಲಿನಿಂದ 5 ಸೆ.ಮೀ ಉದ್ದವಿಲ್ಲದ ಡ್ರೆಸ್ ಧರಿಸಿ ಮಹಿಳಾ ಸಿಬ್ಬಂದಿ ಆಫಿಸ್‍ಗೆ ಬರಬೇಕಾಗುತ್ತದೆ. ಹೌದು ಈ ರೀತಿ ಬಟ್ಟೆ ಧರಿಸಿ ಮಹಿಳಾ ಸಿಬ್ಬಂದಿ ಕೆಲಸಕ್ಕೆ ಬಂದರೆ ನಿತ್ಯ ಅಂದಾಜು 106 ರೂಪಾಯಿ (100 ರೂಬೆಲ್ಸ್) ಎಕ್ಸ್​ಟ್ರಾ ಬೋನಸ್ ನೀಡುವುದಾಗಿ ಕಂಪನಿ ಆಫರ್ ನೀಡಿದೆ.

    ಪುರುಷರಂತೆ ಮಹಿಳೆಯರು ಕೆಲಸದಲ್ಲಿ ಸರಿ ಸಮಾನವಾಗಿ ಕೆಲಸ ಮಾಡುತ್ತಾರೆ. ಆದರಿಂದ ಅವರಿಗೆ ಕಂಪನಿಯಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಲು ಈ ಅಭಿಯಾನ ಶುರುಮಾಡಿದ್ದೇವೆ. ಈಗಾಗಲೇ ಈ ಅಭಿಯಾನಕ್ಕೆ 60ಕ್ಕೂ ಹೆಚ್ಚು ಮಂದಿ ಮಹಿಳಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.

    ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಎಂಬ ಕಂಪನಿ, ಕರ್ತವ್ಯದ ಸ್ಥಳವನ್ನು ಆಕರ್ಷಣಿಯಗೊಳಿಸಲು ಈ ಕ್ರಮ ಎಂದು ಹೇಳಿಕೊಂಡಿದೆ. ಆದರೆ ಕಂಪನಿಯ ಆಫರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ಟೀಕೆಗಳನ್ನು ಬದಿಗೊತ್ತಿ ಕಂಪನಿ ಇದೇ ತಿಂಗಳಲ್ಲಿ ಫೆಮಿನಿಟಿ ಎಂಬ ಕಾರ್ಯಕ್ರಮ ಆಯೋಜಿಸಲಿದೆ. ಇದರಲ್ಲಿ ಪುರುಷ ಸಿಬ್ಬಂದಿಗೂ ಕೂಡ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.