Tag: Skirt

  • ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ಇಂದೋರ್: ಯುವಕರಿಬ್ಬರು ಬೈಕಿನಲ್ಲಿ ಬಂದು ಮಾಡೆಲ್‍ನ ಸ್ಕರ್ಟ್ ಎಳೆದು ಇದರ ಕೆಳಗೆ ಏನಿದೆ ತೋರಿಸು ಎಂದು ಅಸಭ್ಯವಾಗಿ ವರ್ತಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    ತನ್ನ ಜೊತೆ ಆದ ಈ ಘಟನೆ ಬಗ್ಗೆ ರೂಪದರ್ಶಿ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಯುವಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದೀಯಾ. ಹಾಗಾಗಿ ಅವರು ನಿನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

    ರೂಪದರ್ಶಿ ತನ್ನ ಕಾಲಿಗೆ ಗಾಯವಾಗಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ನಂತರ, “ನಾನು ಸ್ಕೂಟಿಯಲ್ಲಿ ಹೊರಗಡೆ ಹೋಗುತ್ತಿದ್ದೆ. ಆಗ ಯುವಕರಿಬ್ಬರು ಬೈಕನ್ನು ನಡುರಸ್ತೆಯಲ್ಲಿ ನಿಲ್ಲಿಸಿ ನನ್ನ ಸ್ಕರ್ಟ್ ಎಳೆಯುತ್ತಿದ್ದರು. ಅಷ್ಟೇ ಅಲ್ಲದೇ ಸ್ಕರ್ಟ್ ಕೆಳಗೆ ಏನಿದೆ ತೋರಿಸು ಎಂದು ಹೇಳುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಳ್ಳುವಾಗ ಸ್ಕೂಟಿ ಹಿಡಿದುಕೊಂಡು ಕೆಳಗೆ ಬಿದ್ದೆ” ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

    ಈ ಘಟನೆ ಇಂದೋರ್ ನ ಜನಸಂದಣಿ ರಸ್ತೆಯಲ್ಲಿ ನಡೆದಿದ್ದು, ಈ ವೇಳೆ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಜನಸಂದಣಿಯಿರುವ ರಸ್ತೆಯಲ್ಲಿ ಕಾಮುಕರು ನನ್ನ ಸ್ಕರ್ಟ್ ಎಳೆದಾಡಿದ್ದಾರೆ. ಇನ್ನೂ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಇವರು ನನ್ನ ಜೊತೆ ಹೇಗೆ ವರ್ತಿಸಬಹುದು ಎಂದು ರೂಪದರ್ಶಿ ಮತ್ತೊಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ನನಗೆ ಸಾಕಷ್ಟು ಗಾಯವಾಗಿರುವುದರಿಂದ ನನ್ನ ಸ್ನೇಹಿತರು ಹತ್ತಿರದ ರೆಸ್ಟೋರೆಂಟ್‍ಗೆ ಕರೆದುಕೊಂಡು ಹೋದರು. ಆಗ ಅಲ್ಲಿ ನಾವೆಲ್ಲ ಕುಳಿತ್ತಿದ್ದಾಗ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದ್ದಕ್ಕೆ ನಿನ್ನ ಜೊತೆ ಈ ರೀತಿ ಆಯ್ತು ಎಂದು ಹೇಳಿದ್ದರು ಎಂದು ರೂಪದರ್ಶಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

  • ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    ನವದೆಹಲಿ: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಫ್ಯಾಶನ್ ಟ್ರೆಂಡ್ ಬದಲಾಗುತ್ತಿದೆ. ಇತ್ತೀಚಿನ ಫ್ಯಾಶನ್‍ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ದೇಸಿ ಲುಕ್‍ಗಳಲ್ಲಿ ವಿದೇಶಿ ಟಚ್ ನೀಡಲಾಗುತ್ತಿದೆ. ಲುಂಗಿ ಭಾರತದಲ್ಲಿ ಎಲ್ಲ ವರ್ಗದ ಜನರು ಧರಿಸ್ತಾರೆ. ಆದ್ರೆ ಇದೇ ಲುಂಗಿಯನ್ನು ‘ಝರಾ’ ಎಂಬ ಕಂಪನಿ ಸ್ಕರ್ಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

    ಲುಂಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಏಷ್ಯಾದ ನೈಋತ್ಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಒಂದು ಲುಂಗಿಗೆ ಮಾರುಕಟ್ಟೆಯಲ್ಲಿ 300 ರೂ. ಬೆಲೆಯಿದೆ. ವಿನೂತನವಾಗಿ ಸ್ಕರ್ಟ್ ಮಾದರಿಗೆ ಝರಾ ಕಂಪೆನಿ ಅಂದಾಜು 5,700 ರೂ. (89.90 ಡಾಲರ್) ನಿಗದಿ ಮಾಡಿದೆ.

    ಆನ್‍ಲೈನ್ ಮಾರುಕಟ್ಟೆಯಲ್ಲಿ ಝರಾ ಲುಂಗಿ ವಿನ್ಯಾಸ ಸ್ಕರ್ಟ್ ಗಳನ್ನು ಪರಿಚಯಿಸಿದ ಬಳಿಕ ಟ್ವಿಟ್ಟರ್ ನಲ್ಲಿ ಫನ್ನಿ ಕಮೆಂಟ್ ಗಳನ್ನು ಮಾಡಿದ್ದಾರೆ. ಟ್ವಿಟರ್‍ನಲ್ಲಿ ನಮ್ಮ ತಂದೆಯ ಮೂರು ಲುಂಗಿಗಳ ಬೆಲೆ 3 ಡಾಲರ್‍ಗಿಂತ ಕಡಿಮೆ ಎಂದು ಝರಾ ಸ್ಕರ್ಟ್ ಮತ್ತು ಲುಂಗಿಗಳ ಫೋಟೋಗಳನ್ನು ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

    ಈ ಝಾರಾ ಸ್ಕರ್ಟ್ ಕೇವಲ ಕಂದು (ಬ್ರೌನ್) ಬಣ್ಣದಲ್ಲಿ ದೊರೆಯುತ್ತದೆ. ಆದರೆ ಭಾರತದ ಲುಂಗಿಗಳು ಯಾವುದೇ ಡಿಸೈನ್ ಹಾಗೂ ಕಲರ್‍ಗಳಲ್ಲಿ ದೊರೆಯುತ್ತದೆ.