Tag: skincare

  • ಕತ್ರಿನಾ ಕೈಫ್‌ ಅಷ್ಟು ಸುಂದರವಾಗಿ ಕಾಣೋದೇಕೆ? – ಬ್ಯೂಟಿ ಸೀಕ್ರೆಟ್‌ ಕೇಳಿದ್ರೆ ನೀವೂ ಅದನ್ನೇ ಮಾಡ್ತೀರಾ..

    ಕತ್ರಿನಾ ಕೈಫ್‌ ಅಷ್ಟು ಸುಂದರವಾಗಿ ಕಾಣೋದೇಕೆ? – ಬ್ಯೂಟಿ ಸೀಕ್ರೆಟ್‌ ಕೇಳಿದ್ರೆ ನೀವೂ ಅದನ್ನೇ ಮಾಡ್ತೀರಾ..

    ಸಿನಿ ತಾರೆಯರು (Film Actress) ಅಂದ್ರೆ ಸಾಕು, ಎಂತವರಿಗೂ ಒಮ್ಮೆ ಕಣ್ಣರಳಿಸಿ ನೋಡಬೇಕೆನಿಸುತ್ತೆ. ಹೊಳಪಿನ ಚರ್ಮ, ಮೋಹಕ ನಗು, ಬಳ್ಳಿಯಂತೆ ಬಳುಕುವ ದೇಹ, ರೇಷ್ಮೆಯಂತಹ ಕೂದಲು ಎಂತವರಿಗೂ ಕಣ್ಣುಕುಕ್ಕುವಂತೆ ಮಾಡುತ್ತೆ. ಹಾಗೆ ನೋಡಿದಾಗ ಸಿನಿ ತಾರೆಯರು ನಿಜಕ್ಕೂ ಏಕೆ ಅಷ್ಟೊಂದು ಸುಂದರವಾಗಿ ಕಾಣ್ತಾರೆ? ಅವರ ಬ್ಯೂಟಿ ಸೀಕ್ರೆಟ್‌ ಏನಿರಬಹುದು ಅನ್ನೋದರ ಬಗ್ಗೆ ತಿಳಿದುಕೊಳ್ಳಲೇಬೇಕು ಅನ್ನಿಸುತ್ತೆ.

    ಹೌದು. ನಟ, ನಟಿಯರು ಹುಟ್ಟಿನಿಂದಲೇ ಸೌಂದರ್ಯ ಹೊಂದಿರುವುದಿಲ್ಲ. ಅವರಲ್ಲಿರುವ ಗುರಿ ಮತ್ತು ಉದ್ದೇಶಗಳು ಸೌಂದರ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸುತ್ತವೆ. ಹಾಗಾಗಿಯೇ ಸಿನಿ ತಾರೆಯರು ಉತ್ತಮ ಆಹಾರ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಕಾಳಜಿ ವಹಿಸುತ್ತಾರೆ. ಉದಾಹರಣೆಗೆ ಬೆಳಗ್ಗೆ ಗ್ರೀನ್ ಟೀ ಸೇವನೆ, ನಂತರ ವ್ಯಾಯಾಮ ಅಂತೆಲ್ಲಾ ಸಮಯ ಮೀಸಲಿಡುತ್ತಾರೆ. ಹಾಗೆಯೆ ಬಾಲಿವುಡ್‌ ಬ್ಯೂಟಿ ಕತ್ರಿನಾ ಕೈಫ್‌ (Katrina Kaif) ತಮ್ಮ ಬ್ಯೂಟಿ ಸೀಕ್ರೆಟ್‌ ಬಗ್ಗೆ ಹೇಳಿಕೊಂಡಿದ್ದಾರೆ.

    ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೋ ತುಣುಕು ಹಂಚಿಕೊಂಡಿದ್ದು, ಬ್ಯೂಟಿ ಸೀಕ್ರೆಟ್‌ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಕಂಡಂತೆ ಉರ್ಫಿ ಜಾವೇದ್

     

    View this post on Instagram

     

    A post shared by Katrina Kaif (@katrinakaif)

    ನನಗೆ ಉತ್ತಮ ತ್ವಚೆ (Skincare) ಕಾಪಾಡಿಕೊಳ್ಳುವುದು ತುಂಬಾ ಇಷ್ಟ. ಅದಕ್ಕಾಗಿ ಪ್ರತ್ಯೇಕ ಸಮಯ ಮೀಸಲಿಡುತ್ತೇನೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಎರಡು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ಬ್ಯೂಟಿ ಕಾಳಜಿಯ ದಿನಚರಿ ಆರಂಭಿಸುತ್ತೇನೆ. ನಂತರ ಸೆಲರಿ ಜ್ಯೂಸ್‌ ಕುಡಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Katrina Kaif (@katrinakaif)

    ಬಳಿಕ ಮುಖಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಫೇಸ್‌ ಮಸಾಜ್‌ ಮಾಡಿಕೊಳ್ಳುತ್ತೇನೆ, ಜೊತೆಗೆ ಮುಖವನ್ನ ಐಸಿಂಗ್‌ ಮಾಡಿಕೊಳ್ಳುತ್ತೇನೆ, ಈ ವಿಧಾನವನ್ನು ಹೆಚ್ಚು ಇಷ್ಟಪಡುತ್ತೇನೆ. ನಂತರ ಸಾಧ್ಯವಾದಷ್ಟು ಮಟ್ಟಿಗೆ ಮೇಕಪ್‌ ಅನ್ನು ನೈಸರ್ಗಿಕವಾಗಿಯೇ‌ ಕಾಣುವಂತೆ ಮಾಡಿಕೊಳ್ಳಲು ಬಯಸುತ್ತೇನೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗಿ ಮತ್ತಷ್ಟು ಫ್ರೆಶ್‌ ಲುಕ್‌ ನೀಡುತ್ತದೆ ಅಂತಾ ಬರೆದುಕೊಂಡಿದ್ದಾರೆ.

    ಉಪಾಹಾರ ವಿಧಾನ ಹೇಗೆ?
    ʻಆರೋಗ್ಯಕರ ಆಹಾರವೂ ಜೀವನಶೈಲಿಯ ಭಾಗವಾಗಿರಬೇಕುʼ ಎಂದು ನನ್ನ ತಾಯಿ ನನಗೆ ಹೇಳುತ್ತಿದ್ದರು. ಅದಕ್ಕಾಗಿ ನಾನು ಬೆಳಗ್ಗಿನ ತಿಂಡಿಯನ್ನು ಸರಳವಾಗಿ ತಿನ್ನಲು ಬಯಸುತ್ತೇನೆ. ಉಪಾಹಾರ ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಜೊತೆಗೆ ಮಧ್ಯಾಹ್ನ ಊಟಕ್ಕೆ ಬದಲಾಗಿ, ಇಡ್ಲಿ ಅನ್ನು ಮಧ್ಯಾಹ್ನದ ತಿಂಡಿಯಾಗಿ ತಿನ್ನುತ್ತೇನೆ. ಅಕ್ಕಿ ಮತ್ತು ಉರಾದ್‌ ದಾಲ್ ಹಿಟ್ಟಿನಿಂದ ತಯಾರಿಸಿದ ಇಡ್ಲಿಗೆ ಮೊಸರನ್ನೂ ಸೇರಿಸುತ್ತೇನೆ. ಇದರಿಂದ ಇಡ್ಲಿ ಮತ್ತಷ್ಟು ಸಾಫ್ಟ್‌ ಆಗುತ್ತದೆ. ಇಡ್ಲಿ ಜೊತೆಗೆ ಮೊರಿಂಗಾ ಪಾಲಕ್ ಚಟ್ನಿ, ಟೊಮೆಟೊ ಮತ್ತು ಬೀಟ್ರೂಟ್ ಚಟ್ನಿ ಹಾಗೂ ಸಾದಾ ತೆಂಗಿನಕಾಯಿ ಚಟ್ನಿ ಬಳಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

  • ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ ಕೆಲವು ರಾಸಾಯನಿಕಗಳಿಂದ ಸಿದ್ಧಪಡಿಸಿದ ಕ್ರೀಮ್‍ಗಳನ್ನು ಹಲವರು ಬಳಸುತ್ತಾರೆ. ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಪರಿಸರ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಚರ್ಮದ ಆರೈಕೆಗೆ ಇಲ್ಲಿದೆ ಪರಿಹಾರ.

    * ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ಸ್ವಚ್ಛಗೊಳಿಸಬೇಕು. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಒಂದು ನಿಮಿಷ ಮುಖವನ್ನು ಮೃದುವಾಗಿ ಮಸಾಜ್ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

    * ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಎಲೆ, ತರಕಾರಿಗಳು, ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವುದು ಉತ್ತಮವಾಗಿದೆ. ಇದನ್ನೂ ಓದಿ: ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

    * ನಿಮ್ಮ ಚರ್ಮ ಒಣಗುತ್ತಿದ್ದರೆ. ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ ಎಂದರ್ಥ. ಹೀಗಾಗಿ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಟೊಮೆಟೊ ರಸ ಮತ್ತು ಅಲೋವೆರಾ ಪೇಸ್ಟ್ ಅನ್ನು ನಿಮ್ಮ, ಕೈ ಕಾಲುಗಳಿಗೆ ಹಚ್ಚಿ ಅರ್ಧ ಗಂಟೆ ಹಾಗೆಯೇ ಇಟ್ಟು ಸ್ನಾನ ಮಾಡಿ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ತಣ್ಣನೆಯ ಎಲೆಕೋಸು ಎಲೆಗಳನ್ನು ಕಪ್ಪಾಗಿರುವ ಚರ್ಮದ ಮೇಲೆ ಕವರ್ ಮಾಡಿ ಬಳಿಕ ಕಾಲು ಗಂಟೆ ಬಿಟ್ಟು ನಂತರ ತೊಳೆಯಿರಿ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಮೊಸರು ಚರ್ಮವನ್ನು ತಂಪಾಗಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲ ಟ್ಯಾನ್ ಕೂಡ ಹೋಗಲಾಡಿಸುತ್ತದೆ. ಆದ್ದರಿಂದ ಇದನ್ನು 15 ರಿಂದ 20 ನಿಮಿಷಗಳ ಕಾಲ ಕಪ್ಪಾಗಿರುವ ಭಾಗಗಳ ಮೇಲೆ ಇಟ್ಟು,  ನಂತರ ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಮುಖದ ಟ್ಯಾನ್ ಮಾಯವಾಗುತ್ತೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

  • ಚಳಿಗಾಲದ ಕಾಮನ್ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ 5 ಟಿಪ್ಸ್

    ಚಳಿಗಾಲದ ಕಾಮನ್ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ 5 ಟಿಪ್ಸ್

    ಳಿಗಾಲ ಬಂತೆದ್ರೆ ಡ್ರೈ ಸ್ಕಿನ್ ಸಮಸ್ಯೆ ಇದ್ದಿದ್ದೇ. ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗೋದಲ್ಲದೆ ಕಪ್ಪಾಗಿ ಕಾಣುತ್ತದೆ. ಕೂದಲು ಒಣಗಿದಂತಾಗಿ ಹುಲ್ಲಿನಂತೆ ಕಾಣುತ್ತೆ. ಇನ್ನು ಪಾದದ ಬಿರಕುನ ಸಮಸ್ಯೆ ಹೇಳೊದೇ ಬೇಡ. ಈಗಾಗಲೇ ಚಳಿಗಾಲ ಶುರುವಾಗಿರೋದ್ರಿಂದ ಇನ್ನೂ ಮೂರ್ನಾಲ್ಕು ತಿಂಗಳು ಈ ಎಲ್ಲಾ ಸಮಸ್ಯೆಗಳು ಕಾಮನ್. ಇದರಿಂದ ಸ್ವಲ್ಪ ರಿಲೀಫ್ ಪಡೆಯೋಕೆ ಈ ಟಿಪ್ಟ್ ಟ್ರೈ ಮಾಡಿ.

    1. ತುಟಿಗೆ ಇರಲಿ ಆರೈಕೆ
    ಚಳಿಗಾಲದಲ್ಲಿ ಮೊದಲು ಎದುರಾಗೋ ಸಮಸ್ಯೆಯೇ ತುಟಿ ಒಡೆಯುವುದು, ಅಥವಾ ಕಪ್ಪಾಗುವುದು. ಪ್ರತಿನಿತ್ಯ ಲಿಪ್ ಬಾಮ್ ಹಚ್ಚಿದ್ರೂ ಚಳಿಗಾಲದಲ್ಲಿ ಹೆಚ್ಚಿನ ಕೇರ್ ಮಾಡಿಕೊಳ್ಳಬೇಕಾಗುತ್ತೆ. ಹೀಗಾಗಿ ಯಾವಾಗ್ಲೂ ಲಿಪ್ ಬಾಮ್ ಜೊತೆಯಲ್ಲಿರಲಿ. ರಾತ್ರಿ ಮಲಗುವಾಗ ಮರೆಯದೇ ಲಿಪ್ ಬಾಮ್ ಅಥವಾ ವ್ಯಾಸಲೀನ್ ಹಚ್ಚಿ ಮಲಗಿ. ತುಟಿ ತುಂಬಾ ಒಡೆದಿದ್ದು, ಕಪ್ಪಾಗಿದ್ದರೆ ಗ್ಲಿಸರಿನ್ ಅಥವಾ ಬದಾಮಿ ಎಣ್ಣೆ/ ಆಲೀವ್ ಎಣ್ಣೆ ಹಚ್ಚಿ ಮಲಗಿ. ಮೂರು ದಿನಗಳಿಗೊಮ್ಮೆ ಸ್ಕ್ರಬ್ ಮಾಡಿ. ವ್ಯಾಸಲೀನ್‍ಗೆ ಸ್ವಲ್ಪ ಸಕ್ಕರೆ ಬೆರೆಸಿ ತುಟಿಯ ಮೇಲೆ ನಿಧಾನವಾಗಿ ಉಜ್ಜಿ ಸ್ಕ್ರಬ್ ಮಾಡಬಹುದು.

    2. ಸ್ನಾನಕ್ಕೆ ಸೋಪ್ ಬಳಸಬೇಡಿ
    ಚಳಿಗಾಲದಲ್ಲಿ ಸೋಪ್ ಬಳಸಿ ಸ್ನಾನ ಮಾಡಿದ್ರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ. ಜೊತೆಗೆ ಸ್ನಾನ ಮಾಡಿ ಹೊರಬಂದ ನಂತರ ಮೈ ಮೇಲೆ ಬಿಳಿ ಪದರದಂತೆ ಕಾಣುತ್ತದೆ ಅಥವಾ ಚರ್ಮದಲ್ಲಿ ಹುರುಕಿ ಬಿಟ್ಟಂತೆ ಕಾಣುತ್ತದೆ. ಆದ್ದರಿಂದ ಸೋಪ್ ಬಳಸೋದನ್ನ ಸಾಧ್ಯವಾದಷ್ಟು ಕಡಿಮೆ ಮಾಡಿ. ಬದಲಿಗೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡಿ. ಇನ್ನು ಮುಖಕ್ಕಂತೂ ಸೋಪ್ ಹಚ್ಚಲೇಬೇಡಿ. ಕಡಲೆಹಿಟ್ಟು ಬಳಸಿದ್ರೆ ಉತ್ತಮ. ಸ್ನಾನವಾದ ಕೂಡಲೇ ಬಾಡಿ ಲೋಷನ್ ಬಳಸಿ. ಯಾಕಂದ್ರೆ ಬಿಸಿನೀರಿನಿಂದ ರಂಧ್ರಗಳು ತೆರೆದುಕೊಂಡಿದ್ದು, ಆಗ ಲೋಷನ್ ಹಚ್ಚಿದರೆ ಚರ್ಮದ ಮೇಲೆ ಮಾತ್ರ ಇರದೆ, ಒಳಗೆ ಹೋಗಿ ಮಾಯ್‍ಶ್ಚರೈಸ್ ಮಾಡುತ್ತದೆ.

    3. ಪಾದದ ಬಿರುಕು ಕಡಿಮೆಯಾಗಿಸಲು ಹೀಗೆ ಮಾಡಿ
    ಚಳಿಗಾಲದಲ್ಲಿ ಪಾದದಲ್ಲಿ ಬಿರುಕು ಉಂಟಾಗೋದು ಸಾಮಾನ್ಯ. ಇದಕ್ಕೆ ಮೊದಲೇ ಎಚ್ಚರಿಕೆ ವಹಿಸಿದ್ರೆ ಉತ್ತಮ. ಆದ್ದರಿಂದ ಹೊರಗಡೆ ಹೋಗುವಾಗ ಕಾಲಿಗೆ ಶೂ, ಸಾಕ್ಸ್ ಧರಿಸಿ. ಹಾಗೂ ಬಿರುಕು ಉಂಟಾಗಿದ್ದರೆ ಚಿಂತೆ ಬೇಡ. ರಾತ್ರಿ ಮಲಗುವ ಮುನ್ನ ಕಾಲನ್ನ ಬೆಚ್ಚಗಿನ ನೀರಿನಲ್ಲಿ ತೊಳೆದು, ಬಟ್ಟೆಯಿಂದ ಒರೆಸಿ, ವ್ಯಾಸಲೀನ್ ಅಥವಾ ಬಾಡಿ ಲೋಷನ್/ಫುಟ್ ಕ್ರೀಮ್ ಹೆಚ್ಚಿಕೊಳ್ಳಿ. ಪಾದದಲ್ಲಿ ಜಾಸ್ತಿ ಬಿರುಕಿದ್ದರೆ ಅದಕ್ಕೆಂದೇ ಇರುವ ಕ್ರ್ಯಾಕ್ ಹೀಲ್ ಆಯಿಂಟ್‍ಮೆಂಟ್ ಹಚ್ಚಿ. ವ್ಯಾಸಲೀನ್ ಕೂಡ ಬಳಸಬಹುದು. ಒಂದೆರಡು ನಿಮಿಷಗಳ ನಂತರ ಸಾಕ್ಸ್ ಧರಿಸಿ ನಂತರ ಮಲಗಿ. ಬೆಳಗ್ಗೆ ಎದ್ದ ನಂತರ ನಿಮ್ಮ ಕಾಲು ಸಾಫ್ಟ್ ಆಗಿರೋದನ್ನ ನೀವೇ ಗಮನಿಸಬಹುದು.

    3. ಕೋಮಲ ಕೈಗಳಿಗೆ ಇಲ್ಲಿದೆ ಸೀಕ್ರೆಟ್
    ಒಂದು ವೇಳೆ ನಿಮ್ಮ ಕೈಗಳು ತುಂಬಾ ಒಣಗಿದಂತಾಗಿದ್ದು, ಸುಕ್ಕುಗಟ್ಟಿದಂತೆ ಕಾಣುತ್ತಿದ್ದರೆ ಹೀಗೆ ಮಾಡಿ. ರಾತ್ರಿ ಮಲಗುವ ಮುನ್ನ ಕೈಗಳಿಗೆ ವ್ಯಾಸಲೀನ್ ಹಚ್ಚಿ ಒಂದು ನಿಮಿಷದ ನಂತರ ಗ್ಲವ್ಸ್ ಧರಿಸಿ ಮಲಗಿ. ಇದರ ಜೊತೆಗೆ ದಿನದ ಮಧ್ಯೆ ಕೈಗಳು ಡ್ರೈ ಆದಂತೆ ಅನ್ನಿಸಿದ್ರೆ ಹ್ಯಾಂಡ್ ಕ್ರೀಂ ಅಥವಾ ಬಾಡಿ ಲೋಷನ್ ಹಚ್ಚಿಕೊಳ್ಳಿ.

    4. ಕೂದಲು ಕಳೆಗುಂದದಿರಲಿ
    ಚಳಿಗಾಲದಲ್ಲಿ ಕೂದಲ ಸಮಸ್ಯೆಯೂ ಒಂದು. ಕೈ ಕಾಲುಗಳಂತೆ ಕೂದಲು ಸಹ ಡ್ರೈ ಆಗುತ್ತದೆ. ಹೀಗಾಗಿ ವಾರಕ್ಕೊಂದು ಬಾರಿ ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ ಸ್ನಾನ ಮಾಡಿ. ಮೈ ತುಂಬಾ ಎಣ್ಣೆ ಹಚ್ಚಿ ಮಸಾಜ್ ಮಾಡಿ ಅಭ್ಯಂಗ ಮಾಡಬಹುದು. ಇದರಿಂದ ಸ್ಟ್ರೆಸ್ ಕೂಡ ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆ/ ಆಲಿವ್ ಎಣ್ಣೆ ಅಥವಾ ಹೆರಳೆಣ್ಣೆ ನಿಮಗೆ ಯಾವುದು ಇಷ್ಟವೋ ಆ ಎಣ್ಣೆ ಬಳಸಬಹುದು. ಆದ್ರೆ ಎಣ್ಣೆಯನ್ನ ಬಿಸಿ ಮಾಡೋದು ಮರೆಯಬೇಡಿ. ಹಾಗಂತ ಹೊಗೆಯಾಡುವಂತೆ ಕಾಯಿಸಬೇಡಿ. ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿದ್ರೆ ಆಯ್ತು.

    5. ಬೆಚ್ಚಗಿರಿ
    ಚಳಿಗಾಲಕ್ಕೆ ತಕ್ಕಂತೆ ನಿಮ್ಮ ಉಡುಗೆ ಇರಲಿ. ಕೊರೆಯೋ ಚಳಿಯಲ್ಲಿ ಸ್ಲೀವ್ ಲೆಸ್ ಟಾಪ್ ಹಾಕೊಂಡು ಹೋದ್ರೆ ಫ್ರೀಜ್ ಆಗ್ತೀರಾ ಅಷ್ಟೇ. ಜ್ಯಾಕೆಟ್/ ಸ್ವೆಟರ್, ಸ್ಕಾರ್ಫ್ ಯಾವಾಗ್ಲೂ ಜೊತೆಯಲ್ಲಿರಲಿ. ಬಟ್ಟೆ ತುಂಬಾ ತೆಳುವಿದ್ದರೆ ಅದಕ್ಕೆ ಹೊಂದಿಕೆಯಾಗುವಂತ ಟ್ಯಾಂಕ್ ಟಾಪ್ ಅಥವಾ ಸ್ಪೆಗೆಟ್ಟಿ ಧರಿಸಿ ಅದರ ಮೇಲೆ ಟಾಪ್ ಧರಿಸಿ. ಚಳಿಗೆ ತಲೆನೋವು ಬರುವ ಸಮಸ್ಯೆ ನಿಮಗಿದ್ದರೆ ಸಣ್ಣದಾದ ಹತ್ತಿ ಉಂಡೆಯನ್ನ ಕಿವಿಗೆ ಇಟ್ಟುಕೊಳ್ಳಿ. ಬಿಸಿ ನೀರು, ಸೂಪ್ ಕುಡಿಯಿರಿ. ಆರೋಗ್ಯದ ಬಗ್ಗೆ ಗಮನ ಇರಲಿ.

    ನಿಮ್ಮ ಬ್ಯಾಗ್‍ನಲ್ಲಿ ಈ ವಸ್ತುಗಳು ಸದಾ ಇರಲಿ: ಲಿಪ್ ಬಾಮ್, ಹ್ಯಾಂಡ್ ಕ್ರೀಂ/ ಚಿಕ್ಕದಾದ ಬಾಡಿ ಲೋಷನ್ ಬಾಟಲ್, ಸ್ಕಾರ್ಫ್, ಸ್ವೆಟರ್/ಜಾಕೆಟ್, ಅಗತ್ಯವಿದ್ದರೆ ಗ್ಲವ್ಸ್