Tag: skin

  • 17,500 ರೂ. ಕೊಟ್ಟು ಫೇಶಿಯಲ್ ಮಸಾಜ್ ಮಾಡಿಸಿಕೊಂಡ ಯುವತಿ- ಮುಂದೇನಾಯ್ತು..?

    17,500 ರೂ. ಕೊಟ್ಟು ಫೇಶಿಯಲ್ ಮಸಾಜ್ ಮಾಡಿಸಿಕೊಂಡ ಯುವತಿ- ಮುಂದೇನಾಯ್ತು..?

    ಮುಂಬೈ: ಮಹಿಳೆಯರಿಗೆ ಬ್ಯೂಟಿ ಕಾನ್ಶಿಯಸ್ ಸ್ವಲ್ಪ ಜಾಸ್ತಿ. ಹೀಗಾಗಿ ತಾವು ಚಂದಗಾಣಬೇಕು ಎಂದು ಏನೆಲ್ಲ ಸರ್ಕಸ್ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬಳು ಯುವತಿ ತಾನು ಚಂದ ಕಾಣಿಸಬೇಕು ಎಂದು ಬರೋಬ್ಬರಿ 17,500 ರೂ ಕೊಟ್ಟು ಫೇಶಿಯಲ್ ಮಾಡಿಸಿಕೊಂಡಿದ್ದಾಳೆ. ಆದರೆ ಮುಂದೆ ಆಗಿದ್ದೇ ಬೇರೆ.

    ಹೌದು. ಮುಖದ ಅಂದನ್ನು ಹೆಚ್ಚಿಸುವ ಸಲುವಾಗಿ ಯುವತಿ ಫೇಶಿಯಲ್‌ ಮಸಾಜ್‌ ಟ್ರೀಟ್ಮೆಂಟ್ ಮಾಡಿಸಿದ್ದಾಳೆ. ಆ ಬಳಿಕ ಆಕೆಯ ಮುಖದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದ್ದು, ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಯುವತಿ ಮುಂಬೈನಲ್ಲಿರುವ ಬ್ಯೂಟಿ ಸಲೂನ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾಳೆ. ಇದನ್ನೂ ಓದಿ: ಸೆಕ್ಸ್ ನಡೆಸದಿರುವುದು ಹಿಂದೂ ವಿವಾಹ ಕಾಯ್ದೆ ಅಡಿ ಕ್ರೌರ್ಯ – IPC ಸೆಕ್ಷನ್ 498A ಅಡಿ ಅಲ್ಲ

    ಏನಿದು ಟ್ರೀಟ್ಮೆಂಟ್..?: ವೈದ್ಯಕೀಯ-ದರ್ಜೆಯ ರೀಸರ್ಫೇಸಿಂಗ್ ಚಿಕಿತ್ಸೆ ಹೈಡ್ರಾಫೇಶಿಯಲ್. ಇದು ರಂಧ್ರಗಳನ್ನು ಕ್ಲಿಯರ್ ಮಾಡುತ್ತದೆ. ಅಲ್ಲದೆ ಚರ್ಮವನ್ನು ಕೂಡ ಹೈಡ್ರೇಟ್ ಮಾಡುತ್ತದೆ. ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಅಥವಾ ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಮಾತ್ರ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.

    ಸದ್ಯ ಈ ಚಿಕಿತ್ಸೆ ಪಡೆದ ಯುವತಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯುವತಿ ಚರ್ಮ ತಜ್ಞರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಸಾಜ್‍ನಿಂದ ಚರ್ಮದಲ್ಲಿ ಸುಟ್ಟಗಾಯಗಳು ಆಗಿರುವುದು ಬಯಲಾಗಿದೆ. ಈ ಸಮಸ್ಯೆ ಶಾಶ್ವತವಾಗಿ ಉಳಿಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಬೇಸರಗೊಂಡು ಯುವತಿ ಸ್ಥಳೀಯ ಎಂಎನ್‍ಎಸ್ ಕಾರ್ಪೊರೇಟರ್ ಪ್ರಶಾಂತ್ ರಾಣೆ ಸಹಾಯದಿಂದ ಎಫ್‍ಐಆರ್ ದಾಖಲಿಸಿದ್ದಾರೆ.

    ಇತ್ತ ಈ ಸಂಬಂಧ ಯುವತಿ ತನಗಾಗಿರುವ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಟ್ವಿಟ್ಟರ್ ಬಳಕೆದಾರರು ಘಟನೆಯ ಬಗ್ಗೆ ಆಘಾತದಿಂದ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

  • ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು (Skin Care) ಆರೈಕೆಗೆ ಕೆಲವೊಂದು ಸಲಹೆಗಳನ್ನು ಅನುಸರಿಸಿ.

    ದಿನಕ್ಕೆ ಕನಿಷ್ಠ 2 ಬಾರಿ ಮುಖ ಸ್ವಚ್ಛಗೊಳಿಸಿ: ಬೇಸಿಗೆಕಾಲದಲ್ಲಿ ಬಿಸಿಲಿನಿಂದಾಗಿ ಹೆಚ್ಚಾಗಿ ಬೆವರುತ್ತೇವೆ. ಅಷ್ಟೇ ಅಲ್ಲದೇ ಚರ್ಮದಲ್ಲಿಯೂ ಹೆಚ್ಚು ಎಣ್ಣೆ ಅಂಶ ಕಾಣಿಸುತ್ತದೆ. ಇದರಿಂದಾಗಿ ದಿನಕ್ಕೆ 2 ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯುವ ಮೊದಲು ಒಂದು ನಿಮಿಷಗಳ ಕಾಲ ಮುಖದ ಮೇಲೆ ಮೃದುವಾದ ಮಸಾಜ್ ಮಾಡಿ.

    ಸನ್‍ಸ್ಕ್ರೀನ್ ಹೆಚ್ಚು ಬಳಸಿ: ಬಿಸಿಲಿನ ಕಿರಣದಿಂದಾಗಿ ಚರ್ಮವು ಸುಡುವುದಷ್ಟೇ ಅಂದ ಕೆಡುತ್ತದೆ. ಹೀಗಾಗಿ ನೀವು ಹೊರಗಡೆ ಹೋಗುವ ಮುನ್ನ ಸನ್‍ಸ್ಕ್ರೀನ್‍ಗಳನ್ನು ಬಳಸುವುದು ಅಗತ್ಯವಾಗಿದೆ. ಇದರಿಂದಾಗಿ ತಕ್ಕಮಟ್ಟಿಗೆ ನಿಮ್ಮ ಚರ್ಮದ ತ್ವಚೆಯು ಕೆಡದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

    ಅಲೋವೆರಾ (Elovera): ಲೋಳೆರಸ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೋವೆರಾ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ಸೌತೆಕಾಯಿ: ಸೌತೆಕಾಯಿ (Cucumber) ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ

    ಮಲಗುವ ಮುನ್ನ ಚರ್ಮಕ್ಕೆ ಆರೈಕೆ ಹೀಗಿರಲಿ: ಬೇಸಿಗೆಯಲ್ಲಿ (Summer) ರಾತ್ರಿ ಸಮಯದಲ್ಲಿ ಚರ್ಮದ ಆರೈಕೆಯನ್ನು ಕಡೆಗಣಿಸುವಂತಿಲ್ಲ. ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಾಗೂ ನೈಟ್ ಕ್ರೀಮ್‍ಗಳನ್ನು ಬಳಸಿ. ಇದರಿಂದಾಗಿ ಚರ್ಮದದಲ್ಲಿ ಉಂಟಾದ ಡ್ಯಾಮೇಜ್‍ಗಳನ್ನು ಸರಿಪಡಿಸಬಹುದಾಗಿದೆ. ಇದನ್ನೂ ಓದಿ: ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

  • ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ಸಿಹಿ ಇರಲಿ, ಖಾರ ಇರಲಿ ಅದಕ್ಕೆ ಸ್ವಲ್ಪ ತುಪ್ಪವನ್ನು (Ghee) ಹಾಕಿಕೊಂಡು ಆಸ್ವಾದಿಸಿದರೆ ರುಚಿಯೇ ಬೇರೆ ತರ ಇರುತ್ತೆ. ನಮ್ಮ ಹಿರಿಯರು ತಮ್ಮ ಆಹಾರ ಪದಾರ್ಥಗಳಲ್ಲಿ ತುಪ್ಪವನ್ನು ಸೇವಿಸುತ್ತಿದ್ದರು. ಈ ತುಪ್ಪವನ್ನು ಹಿತಮಿತವಾಗಿ ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯದ (Health) ಸುಧಾರಣೆಗೆ ಅನೇಕ ಪ್ರಯೋಜನವಿದೆ.

    ಕಾಂತಿಯುತ ಚರ್ಮ: ತುಪ್ಪವು ಚರ್ಮವನ್ನು (Skin) ಕಾಂತಿಯುತವಾಗಿ ಮತ್ತು ಸುಂದರವಾಗಿಡುತ್ತದೆ. ತುಪ್ಪವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ತುಪ್ಪವು ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ. ಜೊತೆಗೆ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತುಪ್ಪವು ಚರ್ಮ ಮತ್ತು ಕೂದಲಿಗೆ ಹೊಳಪನ್ನು ತರುತ್ತದೆ.

    ಮೆದುಳಿನ ಆರೋಗ್ಯ: ತುಪ್ಪದಲ್ಲಿ ಹೆಚ್ಚಿನ ಖನಿಜಗಳು ಹಾಗೂ ಸ್ಯಾಚುರೇಟೆಡ್ ಕೊಬ್ಬುಗಳು ಇರುತ್ತವೆ. ಇದರಿಂದಾಗಿ ತುಪ್ಪವನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಮುಟ್ಟಾಗುತ್ತವೆ. ಜೊತೆಗೆ ನರಗಳ ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದಾಗಿ ತುಪ್ಪವನ್ನು ಪ್ರತಿನಿತ್ಯ ಹಿತ ಮಿತವಾಗಿ ಬಳಸುವುದು ಅತ್ಯವಶ್ಯವಾಗಿದೆ.

    ಜೀರ್ಣಕ್ರಿಯೆ: ತುಪ್ಪವು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನೀವು ರೊಟ್ಟಿ, ಚಪಾತಿ ಅಥವಾ ಯಾವುದಾದರೂ ನಾರಿನ ಪದಾರ್ಥದ ಜೊತೆಗೆ ತಿನ್ನುವುದರಿಂದ ಅದನ್ನು ಸುಲಭವಾಗಿ ಜೀರ್ಣಕ್ರಿಯೆ ಮಾಡಲು ಸಹಕಾರಿಯಾಗಿದೆ. ಹಾಗೂ ಚಯಾಪಚಯವೂ ಸರಿಯಾದ ರೀತಿಯಲ್ಲಿ ಆಗುತ್ತದೆ. ಗ್ಯಾಸ್ ಆದವರು ತುಪ್ಪವನ್ನು ಸೇವಿಸಬೇಕು. ಇದು ಉತ್ತಮ ಜೀರ್ಣಕ್ರಿಯೆಗೆ ಸಂಬಂಧಿಸಿರುವುದರಿಂದ ಗ್ಯಾಸ್ ಬಹುಬೇಗ ಕಡಿಮೆ ಮಾಡಿ, ದೇಹದ ಆರೋಗ್ಯವನ್ನು ಕಾಪಾಡುತ್ತದೆ.

    ರೋಗಗಳ ವಿರುದ್ಧ ಹೋರಾಟ: ತುಪ್ಪದಲ್ಲಿ ಬಹಳಷ್ಟು ಬ್ಯುಟರಿಕ್ ಆಮ್ಲವಿರುತ್ತದೆ. ಇದು ರೋಗದ ವಿರುದ್ಧ ಹೋರಾಡುವ ಜೀವಸತ್ವಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ. ತುಪ್ಪವು ಪ್ರಮುಖ ಕೊಬ್ಬಿನಾಮ್ಲಗಳು ಮತ್ತು ಕೊಬ್ಬು ಕರಗುವ ಜೀವಸತ್ವಗಳ ಗಮನಾರ್ಹ ಮೂಲವಾಗಿದೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ

    ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ: ತುಪ್ಪದಲ್ಲಿರುವ ವಸ್ತುಗಳು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಜೀವಕೋಶಗಳು ಮತ್ತು ಅಂಗಾಂಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ತುಪ್ಪವನ್ನು ತಿನ್ನುವುದು ಜೀವಕೋಶಗಳ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ನಮ್ಮ ದೇಹದ ಗುಣಪಡಿಸುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು

    Live Tv
    [brid partner=56869869 player=32851 video=960834 autoplay=true]

  • ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು

    ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು

    ಸೌಂದರ್ಯ ಪ್ರಜ್ಞೆ ಯಾರಿಗೆ ಇಲ್ಲ ಹೇಳಿ? ತಾನು ಚೆನ್ನಾಗಿ ಕಾಣಬೇಕು ಅಂತಾ ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುವುದು, ಅದು ಇದು ಅಂತಾ ಏನೆಲ್ಲಾ ಮಾಡ್ತಾರೆ. ನೈಸರ್ಗಿಕ ವಿಧಾನಗಳ ಮೂಲಕ ಸೌಂದರ್ಯ ವೃದ್ಧಿಸಿಕೊಳ್ಳಲು ಬಯಸುವವರೇ ಹೆಚ್ಚು. ಅಂತಹವರಿಗೆ ಸೆಣಬಿನ ಬೀಜದ ಎಣ್ಣೆ ತುಂಬಾ ಪ್ರಯೋಜನಕಾರಿ. ತ್ವಚೆಗೆ ಸೆಣಬಿನ ಬೀಜದ ಎಣ್ಣೆಯಿಂದ (Hemp Seed Oil) ಉಪಯೋಗಗಳಿವೆ.

    ಚರ್ಮದ ಆರೈಕೆಗೆ ಸಹಕಾರಿ
    ಸೆಣಬಿನ ಬೀಜದ ಎಣ್ಣೆ ಹೇರಳವಾದ ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಆರೋಗ್ಯಕರ ಕೂದಲು ಮತ್ತು ಚರ್ಮಕ್ಕೆ (Skin) ಇದು ಅತ್ಯುತ್ತಮ ಆಯ್ಕೆ. ಸೆಣಬಿನ ಬೀಜಗಳು ಬಹುಅಪರ್ಯಾಪ್ತ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದನ್ನೂ ಓದಿ: ಮುಖದಲ್ಲಿನ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಿ ಅಂದ ಹೆಚ್ಚಿಸಿಕೊಳ್ಳಿ

    ಚರ್ಮ ಆರೋಗ್ಯದಲ್ಲಿ ಇದರ ಪ್ರಯೋಜನವೇನು?
    ಸೆಣಬಿನ ಬೀಜದ ಎಣ್ಣೆಯು ಚರ್ಮವನ್ನು ತೇವಗೊಳಿಸುತ್ತದೆ. ಇದು ಚರ್ಮದ ರಂಧ್ರಗಳನ್ನು ಮುಚ್ಚುವುದಿಲ್ಲ. ತೇವಾಂಶ ಕಾಪಾಡುವುದರಿಂದ ಚರ್ಮದ ಶುಷ್ಕತೆಯ ವಿರುದ್ಧ ಹೋರಾಡುತ್ತೆ. ಚರ್ಮದ ತೇವಾಂಶವನ್ನು ದೀರ್ಘಗೊಳಿಸಿ ಶಕ್ತಗೊಳಿಸುತ್ತದೆ.

    ಮೊಡವೆ ನಿವಾರಿಸುತ್ತೆ
    ಸೆಣಬಿನ ಬೀಜದ ಎಣ್ಣೆಯು ಮೊಡವೆ (Acne), ಎಸ್ಜಿಮಾ ಮತ್ತು ಸೋರಿಯಾಸಿಸ್‌ನಂತಹ ಉರಿಯೂತದ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡುತ್ತದೆ. ಉರಿಯೂತವನ್ನು ಶಮನಗೊಳಿಸಿ ಚರ್ಮದ ಆರೋಗ್ಯಕ್ಕೆ ಜನಪ್ರಿಯ ನೈಸರ್ಗಿಕ ಪರ್ಯಾಯವಾಗಿದೆ. ಇದನ್ನೂ ಓದಿ: ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

    ಸುಕ್ಕುಗಟ್ಟಿದ ಚರ್ಮಕ್ಕೆ ರಾಮಬಾಣ
    ವಯಸ್ಸಾದ ಚಿಹ್ನೆಯ ಚರ್ಮ ಸುಕ್ಕುಗಟ್ಟುವಿಕೆ ವಿರುದ್ಧ ಹೋರಾಡಲು ಸೆಣಬಿನ ಎಣ್ಣೆಯು ತುಂಬಾ ಪ್ರಯೋಜನಕಾರಿ. ಇದು ಸುಕ್ಕುಗಳು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೌವನ ಮತ್ತು ಕಾಂತಿಯುತ ಚರ್ಮಕ್ಕೆ ಸಹಕಾರಿಯಾಗಿದೆ.

    ಚರ್ಮದ ಎಣ್ಣೆಯ ಅಂಶ ನಿಯಂತ್ರಿಸುತ್ತೆ
    ಸೆಣಬಿನ ಬೀಜದ ಎಣ್ಣೆಯು ಚರ್ಮದ ಎಣ್ಣೆ ಅಂಶ ನಿಯಂತ್ರಿಸಲು ಪರಿಣಾಮಕಾರಿಯಾಗಿದೆ. ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಗರ್ಭಿಣಿಯರಿಗೆ ಈ ಎಣ್ಣೆ ಉತ್ತಮ ಆಯ್ಕೆ.

    Live Tv
    [brid partner=56869869 player=32851 video=960834 autoplay=true]

  • ಸ್ಕಿನ್ ತರಿಸಿ ಸರ್ಜರಿ ಮಾಡಬೇಕಿದೆ: ಆ್ಯಸಿಡ್ ಸಂತ್ರಸ್ತೆ ಚಿಕಿತ್ಸೆ ಬಗ್ಗೆ ವೈದ್ಯರ ಮಾತು

    ಸ್ಕಿನ್ ತರಿಸಿ ಸರ್ಜರಿ ಮಾಡಬೇಕಿದೆ: ಆ್ಯಸಿಡ್ ಸಂತ್ರಸ್ತೆ ಚಿಕಿತ್ಸೆ ಬಗ್ಗೆ ವೈದ್ಯರ ಮಾತು

    ಬೆಂಗಳೂರು: ಸ್ಕಿನ್ ಬ್ಯಾಂಕ್‍ನಿಂದ ಸ್ಕಿನ್ ತರಿಸಿ ಸರ್ಜರಿ ನಡೆಸಬೇಕಿದೆ ಎಂದು ಆ್ಯಸಿಡ್ ಸಂತ್ರಸ್ತೆಯ ಚಿಕಿತ್ಸೆ ಕುರಿತು ಸೇಂಟ್ ಜಾನ್ಸ್ ವೈದ್ಯರ ತಂಡ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಸಿಡ್ ಸಂತ್ರಸ್ತೆ ಮೂರು ದಿನಗಳ ಹಿಂದೆ ದಾಖಲಾಗಿದ್ದಾರೆ. ಆ್ಯಸಿಡ್ ದಾಳಿಯಿಂದ ಶೇ. 36ರಷ್ಟು ದೇಹದ ಹಲವು ಭಾಗಗಳು ಸುಟ್ಟಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಆದರೆ ನಮ್ಮ ತಂಡವು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇವೆ ಎಂದರು.

    ಸಂತ್ರಸ್ತೆಯನ್ನು ಪ್ಲಾಸ್ಟಿಕ್ ಸರ್ಜರಿ ತಂಡವು ನೋಡಿಕೊಳ್ಳುತ್ತಿದೆ. ಅವರಿಗೆ ಹಂತ ಹಂತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಮುಖ, ಕೈ ಕಾಲುಗಳ ಮೇಲೆ ಗಾಯಗಳಾಗಿದೆ. ಇದರಿಂದಾಗಿ ಅನೇಕ ಸರ್ಜರಿಗಳಾಗಬೇಕಿದೆ. ಕ್ರಮೇಣವಾಗಿ ಸ್ವಂತ ಚರ್ಮದಿಂದ ಕವರ್ ಆಗಬೇಕಾಗುತ್ತದೆ. ಚಿಕಿತ್ಸೆ ಮುಗಿಯಲು ಸರಿಸುಮಾರು 2 ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆ್ಯಸಿಡ್‌ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP

    ಆ್ಯಸಿಡ್ ದಾಳಿ ಆಗಿರುವುದರಿಂದ ದೇಹದಲ್ಲಿ ಡೀಪ್ ಗಾಯಗಳಾಗಿದೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆಕೆಗೆ ಕಾನ್ಶಿಯಸ್ ಇದೆ. ಯುವತಿ ಮಾತನಾಡುತ್ತಿದ್ದಾಳೆ. ವೈದ್ಯರ ತಂಡ ನಿರಂತರವಾಗಿ ಯುವತಿಯ ಚಿಕಿತ್ಸೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ನಕಲಿ ಎಸಿಬಿ ಹಾವಳಿ – ದಾಳಿ ನಡೆಸದೇ ಬಿ-ರಿಪೋರ್ಟ್ ಹಾಕಲು ಲಕ್ಷಾಂತರ ರೂ. ಬೇಡಿಕೆ

  • ಹುಲಿ ಚರ್ಮ ಮಾರಾಟಕ್ಕೆ ಯತ್ನ – ನಾಲ್ವರ ಬಂಧನ

    ಹುಲಿ ಚರ್ಮ ಮಾರಾಟಕ್ಕೆ ಯತ್ನ – ನಾಲ್ವರ ಬಂಧನ

    ಮಡಿಕೇರಿ: ವಯಸ್ಸಾದ ಹುಲಿಯನ್ನು ಕೊಂದು, ಅದರ ಚರ್ಮ ಮಾರಾಟ ಮಾಡಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಹರೀಶ್, ರಮೇಶ್, ಮನು ಹಾಗೂ ರಾಜೇಶ್ ಎಂದು ಗುರುತಿಸಲಾಗಿದ್ದು, ವಯಸ್ಸಾದ ಹುಲಿ ಕೊಂದು, ಅದರ ಚರ್ಮ, ಉಗುರು ಹಾಗೂ ಪಾದಗಳನ್ನು ಕತ್ತರಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಈ ಭಾಗದಲ್ಲಿ ಹುಲಿಗಳನ್ನು ಕೊಂದು ಅದರ ಚರ್ಮ ಹಾಗೂ ಇತರ ಭಾಗಗಳನ್ನ ಕತ್ತರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ್ದರು. ಇದನ್ನೂ ಓದಿ: ಯುವಕರಿಗೆ ಉದ್ಯೋಗ, ಬಡವರಿಗೆ 1 ಕೆಜಿ ಉಚಿತ ತುಪ್ಪ: ಅಖಿಲೇಶ್ ಯಾದವ್ ಭರವಸೆ

    ಇದೀಗ ಬಂಧಿತರಿಂದ ಹುಲಿಯ ಚರ್ಮ, 7 ಉಗುರು, 2 ಕಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ಕುರಿತಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

  • ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

    ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

    ಇಂದಿನ ಮಾಲಿನ್ಯ, ಆಹಾರ ಸೇವೆನೆಯಲ್ಲಿ ವ್ಯತ್ಯಾಸಗಳು ಉಂಟಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ಮಂದಿಯ ಚರ್ಮವು ಸುಕ್ಕುಗಟ್ಟಿ ವಯಸ್ಸಾದ ರೀತಿಯಲ್ಲಿ ಕಾಣುತ್ತದೆ. ಅದನ್ನು ಹೋಗಲಾಡಿಸಲು ಪ್ರತಿನಿತ್ಯ ಒಂದಿಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ.

    * ಸೂರ್ಯನ ಶಾಖದ ತಡೆಗೆ ಟೋಮೆಟೋ ಸೇವಿಸಿ
    ಟೋಮೆಟೋಗಳನ್ನು ಸಲಾಡ್ ಮಾಡಿಕೊಂಡು ತಿನ್ನುವುದರಿಂದ ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಹೆಚ್ಚು ಸಹಕಾರಿಯಾಗಿದೆ. ಟೊಮೆಟೋದಲ್ಲಿ ಹೆಚ್ಚು ಪೋಷಕಾಂಶಗಳಿವೆ. ಇದರಿಂದ ನಿಮ್ಮ ಚರ್ಮ ಹಾನಿಗೊಳಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯಲ್ಲಿ ಬೇಯಿಸಿದ 2 ಟೋಮೆಟೋವನ್ನು ದಿನನಿತ್ಯ ಸೇವಿಸುವುದರಿಂದ ಸೂರ್ಯನ ಶಾಖದಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

    * ಮೀನು ಸೇವನೆಯಿಂದ ಚರ್ಮ, ಕೂದಲು, ಕಣ್ಣಿಗೆ ಹೆಚ್ಚು ಉಪಯುಕ್ತ
    ಮೀನುಗಳನ್ನು ಸೇವನೆಯಿಂದ ಕೂದಲು, ಚರ್ಮ ಮತ್ತು ಕಣ್ಣುಗಳ ಆರೋಗ್ಯ ಹೆಚ್ಚುತ್ತದೆ. ಇದು ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ಹೋಗಲಾಡಿಸಲು ಇದು ಸಹಾಯಕವಾಗಿದೆ. ಪೊಷಕಾಂಶಭರಿತ ಮೀನಿನ ಸೇವನೆಯಿಂದ ಚರ್ಮದ ಹೊಳಪನ್ನು ಸುಧಾರಿಸಲು ಸಹಾಯ ಮಾಡುವ ಕಾಲಜನ್ ಮತ್ತು ಎಲಾಸ್ಟಿನ್ ರಚನೆಗೆ ಸಹಾಯಕವಾಗಿದೆ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    * ಸುಕ್ಕುಗಟ್ಟಿದ ಚರ್ಮಕ್ಕೆ ಆಲಿವ್ ಎಣ್ಣೆ
    ಆಲಿವ್ ಎಣ್ಣೆಂಯಲ್ಲಿ ಕೊಬ್ಬಿನಾಮ್ಲಗಳ ಹೆಚ್ಚಿರುತ್ತವೆ. ಈ ಎಣ್ಣೆಯಲ್ಲಿ ಆಹಾರವನ್ನು ಬೇಯಿಸಿ ತಿನ್ನುವುದರಿಂದ ಸುಕ್ಕು ಕಟ್ಟಿದ ಚರ್ಮ ಸೇರಿದಂತೆ ವಯಸ್ಸಾದ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸೂರ್ಯ ಕಿರಣದಿಂದ ಉಂಟಾದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    * ಮೇಧುಮೇಹಿಗಳಿಗೆ ಒಣ ದ್ರಾಕ್ಷಿ ಉತ್ತಮ ಮನೆಮದ್ದು
    ಪ್ರತಿನಿತ್ಯ ಒಣದ್ರಾಕ್ಷಿ ಸೇವಿಸುವುದರಿಂದ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮ ಮಟ್ಟದಲ್ಲಿ ನಿರ್ವಹಣೆ ಮಾಡುತ್ತದೆ. ಜೊತೆಗೆ ಸದೃಢ ಮೂಳೆ ಆರೋಗ್ಯಕ್ಕೂ ಸಹಕಾರಿಯಾಗಿದೆ. ಪೊಟ್ಯಾಷಿಯಂ, ಬೋರಾನ್ ಮತ್ತು ವಿಟಮಿನ್ ಕೆಗಳು ಒಣ ದ್ರಾಕ್ಷಿಯಲ್ಲಿ ಸದೃಢವಾಗಿದೆ. ದಿನಕ್ಕೆ ಐದರಿಂದ ಆರು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು.

  • ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್‌

    ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್‌

    ಳಿಗಾಲ ಬಂತೆಂದರೆ ಸಾಕು ನಿಮ್ಮ ತ್ವಚೆಯ ಮೇಲೆ ಅನೇಕ ಹಾನಿ ಉಂಟಾಗಿ, ತ್ವಚೆ ಕೆಡುತ್ತದೆ. ಅಷ್ಟೇ ಅಲ್ಲದೇ ಚರ್ಮವೂ ಒಣ ಚರ್ಮವಾಗಿ ಬಿಡುತ್ತದೆ. ಇದನ್ನು ಹೋಗಲಾಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಅದರ ಬದಲು ಮನೆಯ ಅಡುಗೆ ಸಾಮನುಗಳನ್ನೇ ಬಳಸಿ ಸುಲಭವಾಗಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವ ಒಂದಿಷ್ಟು ಟಿಪ್ಸ್‌ಗಳು ಇಲ್ಲಿವೆ.

    ಕಾಫಿ ಪುಡಿ ಮಿಶ್ರಣ: ಒಂದು ಬೌಲ್‍ಗೆ ಸ್ವಲ್ಪ ಕಂದು ಸಕ್ಕರೆ ಮತ್ತು ಕಾಫಿ ಪೌಡರ್‍ನ್ನು ಹಾಕಿಕೊಳ್ಳಿ. ಅವೆರಡು ಸರಿ ಪ್ರಮಾಣದಲ್ಲಿ ಇರಲಿ. ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ನಿಮ್ಮ ತ್ವಚೆಗೆ ಕಾಫಿ ಪೌಡರ್ ಮಿಶ್ರಣವನ್ನು ಸ್ಕ್ರಬ್ ಮಾಡಿ. ಆಗ ನಿಮ್ಮ ಚರ್ಮದಲ್ಲಿ ಹೊಳಪನ್ನು ನೀವು ಗಮನಿಸಬಹುದು.

    ಸಕ್ಕರೆಯ ಮಿಶ್ರಣ: ಕಂದು ಸಕ್ಕರೆಯನ್ನು ಮಿಕ್ಸರ್‌ನಲ್ಲಿ ಚೆನ್ನಾಗಿ ರುಬ್ಬಿ, ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ, ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣ ನೀರಾಗುವಂತೆ ಮಾಡಬೇಡಿ, ಸ್ವಲ್ಪ ಗಟ್ಟಿ ಇರಲಿ. ನಂತರ ನಿಮ್ಮ ಮೊಣಕೈ, ತುಟಿ, ಒಡೆದ ಹಿಮ್ಮಡಿಗೆ ಹಚ್ಚಿ. ಇದರಿಂದ ಚಳಿಯ ವಾತಾವರಣವಿದ್ದರೂ ನಿಮ್ಮ ತ್ವಚೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ.

    ನಿಂಬೆ ಮಿಶ್ರಣ: ಒಂದು ಬಟ್ಟಲಿನಲ್ಲಿ ಸಕ್ಕರೆ, ಸ್ವಲ್ಪ ನಿಂಬೆ ರಸ, ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ರೋಸ್ ವಾಟರ್‍ನ್ನು ಸೇರಿಸಿ ಅದನ್ನು ಮಿಶ್ರಣ ಮಾಡಿ. ಅದನ್ನು ನಿಮ್ಮ ಒಣ ಚರ್ಮದ ಮೇಲೆ ಹಚ್ಚಿ. ಇದರಿಂದ ನಿಮ್ಮ ಒಣ ಚರ್ಮ ನಿವಾರಣೆಯಾಗುತ್ತದೆ.

    ಕಾಂತಿಯುತ ಚರ್ಮಕ್ಕೆ ಮೈದಾ: ನಿಮ್ಮ ತ್ವಚೆಯನ್ನು ಎಲ್ಲಾ ಕಾಲದಲ್ಲೂ ಕಾಂತಿಯುತವಾಗಿ ಇಟ್ಟುಕೊಳ್ಳಲು ಕಡಲೆ ಹಿಟ್ಟು ಅತ್ಯುತ್ತಮ ಮಾರ್ಗ. ಹಾಲಿನ ಕೆನೆ, ಅರಿಶಿನ ಹಾಗೂ ಜೇನುತುಪ್ಪಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿ ನಿಮ್ಮ ತ್ವಚೆಗೆ ಹಚ್ಚಿ. ಇದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ಗ್ರೀನ್ ಟೀ ಮತ್ತು ಲ್ಯಾವೆಂಡರ್: ಸಕ್ಕರೆ ಮಿಶ್ರಣದಲ್ಲಿ ಗ್ರೀನ್ ಟೀ ಮತ್ತು ಲ್ಯಾವೆಂಡರ್‌ನ್ನು ಸೇರಿಸಿ. ನಂತರ ಅದಕ್ಕೆ ಆಲಿವ್ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸುವ ಮೂಲಕ ಸ್ಕ್ರಬ್ ಮಾಡಿ. ಚರ್ಮದ ಒಡೆದ ಭಾಗಕ್ಕೆ ಹಚ್ಚಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

  • ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    ಕಿವಿಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಾಕಾರಿಯಾಗಿದೆ. ಇದರಲ್ಲಿ ವಿಟಾಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನ್ಯೂಜಿಲೆಂಡ್‌ನಲ್ಲಿ ಈ ಹಣ್ಣನ್ನು ಹೆಚ್ಚು ಬೆಳೆಯಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಭಾರತದ ಮಾರುಕಟ್ಟೆಗಳಲ್ಲೂ ಹಣ್ಣು ಸಿಗುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಅನೇಕ ಪ್ರಯೋಜನವಿದೆ.

    ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ: ಕಿವಿ ಫ್ರೂಟ್ ಸೇವನೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಕಾರಿಯಾಗಿದೆ. ಜೊತೆಗೆ ರಕ್ತದಲ್ಲಿನ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ದಿನಕ್ಕೆ 2 ರಿಂದ 3 ಕಿವಿಹಣ್ಣುಗಳ ಸೇವನೆಯಿಂದ ರಕ್ತ ತೆಳುವಾಗಿ, ಹೃದಯದ ಆರೋಗ್ಯ ಸುಧಾರಿಸುತ್ತದೆ.

    ರಕ್ತದೊತ್ತಡ ಕಡಿಮೆಗೊಳಿಸುತ್ತದೆ: ಕಿವಿ ಫ್ರೂಟ್‌ನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಹೇರಳವಾಗಿ ಲ್ಯೂಟೆನಾ ಎಂಬ ಆ್ಯಂಟಿ ಆಕ್ಸಿಡೆಂಟ್ ಹಾಗೂ ವಿಟಾಮಿನ್ ಸಿ ಸಿಗುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 8 ವಾರಗಳ ಕಾಲ ಪ್ರತಿನಿತ್ಯ 3 ಹಣ್ಣುಗಳನ್ನು ಸೇವಿಸಬೇಕು. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    ಅಸ್ತಮಾ ತಡೆಗೆ ಸಹಾಯಕ: ಕಿವಿ ಫ್ರೂಟ್‌ನಲ್ಲಿ ಸಿ ವಿಟಾಮಿನ್ ಹಾಗೂ ರೋಗ ನಿರೋಧಕಗಳು ಹೆಚ್ಚಿರುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಅಸ್ತಮಾವನ್ನು ಕಡಿಮೆಗೊಳಿಸುತ್ತದೆ. ಕಿವಿ ಫ್ರೂಟ್‌ನ್ನು ಪ್ರತಿನಿತ್ಯ ಸೇವಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ.

    ಆರೋಗ್ಯದಾಯಕ ಚರ್ಮ: ಮುಖದಲ್ಲಿ ಮೊಡವೆ ಆಗುವುದರಿಂದ ಮುಖದ ಕಾಂತಿಯು ಕಡಿಮೆಗೊಳ್ಳುವುದರ ಜೊತೆಗೆ ಕಿರಿಕಿರಿ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡಲು ಪ್ರತಿನಿತ್ಯ ಕಿವಿಹಣ್ಣನ್ನು ಸೇವಿಸಿ. ಈ ಹಣ್ಣನ್ನು ಸೇವಿಸುವುದರಿಂದ ಮುಖದಲ್ಲಿ ಉಂಟಾಗುವ ಮೊಡವೆಗಳು ಕಡಿಮೆಯಾಗುತ್ತವೆ. ಕಿವಿಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಇದು ಚರ್ಮವನ್ನು ಕಾಂತಿಯುತವಾಗಿಡುತ್ತದೆ. ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ. ರಾತ್ರಿ ಮಲಗುವಾಗ ಅಲೋವೆರಾದೊಂದಿಗೆ ಕಿವಿಹಣ್ಣಿನ ರಸವನ್ನು ಬೆರೆಸಿ ನಿಮ್ಮ ಚರ್ಮಕ್ಕೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    ತೂಕವನ್ನು ಇಳಿಸಲು ಸಹಾಯಕ: ಹಣ್ಣಿನ ನಿಯಮಿತ ಸೇವನೆಯಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ನೀರಿನಾಂಶ ಅಧಿಕವಾಗಿದ್ದು, ಕೊಬ್ಬಿನಾಂಶ ಕಡಿಮೆಯಿದೆ. ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ಕಬ್ಬಿಣಾಂಶವಿದೆ. ಇದನ್ನು ಉಪಾಹಾರದೊಂದಿಗೆ ಸೇವಿಸುವುದರಿಂದ ತೂಕ ಇಳಿಯುತ್ತದೆ.

  • ಮಳೆಗಾಲದಲ್ಲಿ ಅಂದವಾದ ತ್ವಚೆಯ ಮೇಲೆ ಇರಲಿ ನಿಮ್ಮ ಗಮನ

    ಮಳೆಗಾಲದಲ್ಲಿ ಅಂದವಾದ ತ್ವಚೆಯ ಮೇಲೆ ಇರಲಿ ನಿಮ್ಮ ಗಮನ

    ಳೆಗಾಲ ಅಂದ್ರೆ ಕೆಲವರಿಗೆ ತುಂಬಾ ಕಿರಿಕಿರಿ ಅನಿಸಿದ್ರೆ, ಇನ್ನೂ ಕೆಲವರಿಗೆ ತುಂಬಾ ಇಷ್ಟ. ಈ ಮಧ್ಯೆ ನಾವು ನಮ್ಮ ತ್ವಚೆಯ ಮೇಲೂ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಚರ್ಮದ ತುರಿಕೆ, ಅಲರ್ಜಿ, ಗುಳ್ಳೆ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ಸಮಸ್ಯೆಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದಾದ ಕೆಲವೊಂದು ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.

    * ನಿಮ್ಮ ಚರ್ಮ ಒಣಗಿದಂತೆ ಅಥವಾ ತುರಿಕೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಹಚ್ಚೊ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಈ ರೀತಿಯ ಸಮಸ್ಯೆಯಿಂದ ಪಾರಾಗಬಹುದು.

    * ಸ್ನಾನ ಮಾಡಿದ ಬಳಿಕ ಮಾಯಿಸ್ಚರೈಸರ್ ಬಳಕೆ ಮಾಡಿ.

    * ನೀರು, ಜ್ಯೂಸ್ ಹೆಚ್ಚಾಗಿ ಕುಡಿಯಿರಿ. ಹೆಚ್ಚಾಗಿ ಬಿಸಿ ನೀರು ಕುಡಿಯುವುದು ಸೂಕ್ತ. ಅಲ್ಲದೆ ಮುಖವನ್ನು 3-4 ಬಾರಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗಿ ಆಕರ್ಷಕ ತ್ವಚೆ ಕಾಂತಿ ಪಡೆಯಬಹುದು.

    * ಮುಖದಲ್ಲಿ ಮೊಡವೆ ಹಾಗೂ ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಮುಲಾಮು ಹಚ್ಚುವ ಬದಲು ಅರಿಶಿಣ ಹಚ್ಚುವುದು ಹೆಚ್ಚು ಸೂಕ್ತ.

    * ನಿಮ್ಮದು ಆಯಿಲ್ ಸ್ಕಿನ್ ಆಗಿದ್ದರೆ ಬೇವಿನ ಎಲೆ ಕುದಿಸಿ ಬಳಿಕ ಆ ನೀರನ್ನು ಸೋಸಿ ತಣಿದ ಬಳಿಕ ಅದರಲ್ಲಿ ಮುಖ ತೊಳೆದುಕೊಳ್ಳಿ.

    * ಮುಖದಲ್ಲಿ ತುರಿಕೆ ಕಾಣಿಸಿಕೊಂಡರೆ 1 ಸ್ಪೂನ್ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ 2 ನಿಮಿಷ ಸ್ಕ್ರಬ್ ಮಾಡಿದರೆ ನಿಮ್ಮ ತ್ವಚೆ ಅಂದದ ಜೊತೆ ಮೃದುವಾಗುತ್ತದೆ.

    * ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮೊಡವೆ ಮೇಲೆ ಮೆಲ್ಲನೆ ತಿಕ್ಕಿ, ನಂತರ ಆ ರಸ ಒಣಗಿದ ಮೇಲೆ ಮುಖ ತೊಳೆಯಿರಿ. ಹೀಗೆ ಮಾಡಿದರೆ ಆಕರ್ಷಕ ತ್ವಚೆ ಕಾಂತಿ ಪಡೆಯುವುದರಲ್ಲಿ ಎರಡು ಮಾತಿಲ್ಲ.