Tag: Sketch

  • ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ರಾಜಮೌಳಿ (Rajamouli) ಅವರೇ ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ಅನೇಕರು ನಿಮ್ಮ ಮೇಲೆ ಅಸೂಯೆ ಪಡುತ್ತಿದ್ದಾರೆ. ನಿಮ್ಮನ್ನು ಕೊಲ್ಲಲೆಂದೇ ನಿರ್ದೇಶಕರು ಒಂದು ಗುಂಪನ್ನಾಗಿ ಮಾಡಿಕೊಂಡಿದ್ದಾರೆ. ಆ ಗುಂಪಿನಲ್ಲಿ ನಾನೂ ಇದ್ದೇನೆ. ಇದೀಗ ನಾನು ನಾಲ್ಕು ಪೆಗ್‍ ತಗೆದುಕೊಂಡಿದ್ದೇನೆ ಹಾಗಾಗಿ ಸತ್ಯ ನುಡಿಯುತ್ತಿದ್ದೇನೆ ಎಂದು ಹೇಳುವ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ಒಂದು ಕ್ಷಣ ರಾಜಮೌಳಿ ಅಭಿಮಾನಿಗಳನ್ನು ದಂಗಾಗಿಸಿದ್ದರು.

    ಈ ವಿಷಯವನ್ನು ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮೊದ ಮೊದಲು ಎಲ್ಲರೂ ಇದನ್ನು ಗಂಭೀರವಾಗಿಯೇ ತಗೆದುಕೊಂಡಿದ್ದರು. ಆನಂತರ ಸರಣಿಯವಾಗಿ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಷಯಗಳನ್ನು ಬರೆದುಕೊಂಡಿದ್ದಾರೆ. ಹಾಗಾಗಿ ಇದು ತಮಾಷೆ ಮತ್ತು ರಾಜಮೌಳಿಯನ್ನು ಕಾಲು ಎಳೆಯುವ ತಂತ್ರ ಎಂದು ನಿಟ್ಟುಸಿರಿಟ್ಟಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಸರಣಿಯ ಟ್ವೀಟ್ ನಲ್ಲಿ ರಾಜಮೌಳಿಯನ್ನು ಹೊಗಳಿರುವ ವರ್ಮಾ, ಅವರನ್ನು ದಾದಾ ಸಾಹೇಬ್ ಫಾಲ್ಕೆಗೆ ಹೋಲಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕರನ್ನೂ ದಾಟಿಕೊಂಡು ಮುಂದೆ ಹೋಗಿದ್ದೀರಿ ಎಂದಿದ್ದಾರೆ. ಈ ಸ್ಥಾನದಲ್ಲಿ ನೀವು ಇರುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ನಿಮ್ಮ ಕಿರುಬೆರಳನ್ನು ಒಂದು ಸಲ ಚೀಪಬೇಕು ಎಂದು ಯತ್ವಾತದ್ವಾ ಹೊಗಳಿದ್ದಾರೆ ರಾಮ್ ಗೋಪಾಲ್ ವರ್ಮಾ.

    ಇತ್ತೀಚೆಗಷ್ಟೇ ರಾಜಮೌಳಿ ಹಾಲಿವುಡ್ ನಿರ್ದೇಶಕರನ್ನು ಭೇಟಿ ಮಾಡಿದ್ದರು. ಅವರು ಆರ್.ಆರ್.ಆರ್ (RRR) ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಲ್ಲದೇ, ಈ ಸಿನಿಮಾದ ಹಾಡಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಬಂದಿತ್ತು. ಇದೀಗ ಆಸ್ಕರ್ ಪ್ರಶಸ್ತಿಯ ರೇಸ್‍ ನಲ್ಲೂ ಕೂಡ ಆರ್.ಆರ್.ಆರ್ ಸಿನಿಮಾವಿದೆ. ಈ ಹಿನ್ನೆಲೆಯಲ್ಲಿ ವರ್ಮಾ ಮೆಚ್ಚುಗೆಯ ಮಾತುಗಳ ಮೂಲಕ ಅಭಿನಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ

    ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ

    ಶಿಮ್ಲಾ: ಗರೀಬ್ ಕಲ್ಯಾಣ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಮಂಗಳವಾರ ಹಿಮಾಚಲ ಪ್ರದೇಶಕ್ಕೆ ಬಂದಿಳಿದಿದ್ದು, ಅವರನ್ನು ಸ್ವಾಗತಿಸಲು ನಗರದ ಮಾಲ್ ರಸ್ತೆಯ ಬೀದಿಗಳಲ್ಲಿ ಅಪಾರ ಬೆಂಬಲಿಗರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಜನಸಮೂಹದ ನಡುವೆ ಒಬ್ಬ ಮಹಿಳೆ ಹೀರಾಬೆನ್ ಮೋದಿಯವರ ಪೆನ್ಸಿಲ್ ಸ್ಕೆಚ್ ಅನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ನಂತರದಲ್ಲಿ ಮಹಿಳೆಯು ಪ್ರಧಾನಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಅವರು ತಮ್ಮ ಬೆಂಬಲಿಗರಿಂದ ಈ ಅದ್ಭುತ ಉಡುಗೊರೆಯನ್ನು ಸ್ವೀಕರಿಸಲು ಸಂಪೂರ್ಣವಾಗಿ ಉತ್ಸುಕರಾಗಿದ್ದರು. ಅಷ್ಟೇ ಅಲ್ಲದೇ ಮಹಿಳೆಯು ಪ್ರಧಾನಿಯವರ ಚಿತ್ರವನ್ನು ಸಹ ಚಿತ್ರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅವರು ಮಹಿಳೆಯೊಂದಿಗೆ ಸಂಭಾಷಣೆ ನಡೆಸುತ್ತಿರುವ ಸಂದರ್ಭವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್ 

    ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಧಾನಿ ಅವರು ತಮ್ಮ ಬೆಂಬಲಿಗರಿಂದ ತಮ್ಮ ತಾಯಿಯ ಸ್ಕೆಚ್‍ನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿದ್ದಾರೆ. ಈ ಅಮೂಲ್ಯವಾದ ಪೋಟೋವನ್ನು ಉಡುಗೊರೆಯಾಗಿ ನೀಡಿದ ಮಹಿಳೆಯೊಂದಿಗೆ ಸಂಭಾಷಣೆಯನ್ನು ನಡೆಸಿದ ಅವರು, ಇದನ್ನು ನೀವೇ ತಯಾರಿಸಿದ್ದೀರಾ? ಇದನ್ನು ಮಾಡಲು ನೀವು ಎಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:  ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

    ಗರೀಬ್ ಕಲ್ಯಾಣ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ಶಿಮ್ಲಾ ತಲುಪಿದ್ದಾರೆ. ಅವರು 16 ಕೇಂದ್ರ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿ ಸರ್ಕಾರದ ಎಂಟು ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

  • ‘ಅವ್ರನ್ನ ಸಾಯಿಸಿ, ಸಾಯಿಸಿ’ – ಪೊಲೀಸರ ಹತ್ಯೆಗೂ ನಡೆದಿತ್ತು ಸ್ಕೆಚ್

    ‘ಅವ್ರನ್ನ ಸಾಯಿಸಿ, ಸಾಯಿಸಿ’ – ಪೊಲೀಸರ ಹತ್ಯೆಗೂ ನಡೆದಿತ್ತು ಸ್ಕೆಚ್

    – ಕಲ್ಲು, ದೊಣ್ಣೆ, ಚಾಕು ಹಿಡಿದಿದ್ದ ಗುಂಪು
    – ಕೃತ್ಯ ಎಸಗಿದ ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನ

    ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಳಿಯಲ್ಲಿ ಪೊಲೀಸರ ಹತ್ಯೆಗೂ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

    ಈ ಗಲಭೆಯನ್ನು ಮಾಡಲು ಪೂರ್ವ ನಿಯೋಜಿತವಾಗಿ ಸಂಚು ರೂಪಿಸಲಾಗಿತ್ತು. ಈ ವಿಚಾರವಾಗಿ ಪಾದರಾಯನಪುರದ 11ನೇ ಕ್ರಾಸ್‍ನಲ್ಲಿ ದಾಳಿ ಪ್ಲಾನ್ ಮಾಡಲಾಗಿತ್ತು. ಮೊದಲೇ ನಡೆದ ಪ್ಲಾನ್‍ನಂತೆ ಏರಿಯಾದಲ್ಲಿ ವಿದ್ಯುತ್ ಹೋದ ತಕ್ಷಣ ಕಿಡಿಗೇಡಿಗಳ ಗುಂಪು ಬಂದು ಏಕಾಏಕಿ ಪೊಲೀಸರ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿತ್ತು.

    ಈ ದಾಳಿಯಲ್ಲಿ ಪೊಲೀಸರ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಸಿದ್ಧಗೊಳಿಸಿರುವ ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ದಾಳಿ ಮಾಡಿದ ದುಷ್ಕರ್ಮಿಗಳು ದಾಳಿಯ ವೇಳೆ ಸಾಯಿಸಿ ಸಾಯಿಸಿ ಪೊಲೀಸರನ್ನು ಸಾಯಿಸಿ ಎಂದು ಘೋಷಣೆ ಕೂಡ ಕೂಗುತ್ತಿದ್ದರು. ಕೃತ್ಯ ಎಸಗಿದ ಬಳಿಕ ಸಿಸಿಟಿವಿಯನ್ನು ಧ್ವಂಸ ಮಾಡಲಾಗಿದೆ ಎಂದು ಪೊಲೀಸರು ಎಫ್‍ಐಆರ್ ನಲ್ಲಿ ನಮೂದಿಸಿದ್ದು, ಎಫ್‍ಐಆರ್ ಕಾಪಿ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನು ಓದಿ:ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

    ಭಾನುವಾರ ರಾತ್ರಿ ಪಾದರಾಯನಪುರದ 58 ಮಂದಿ ಕೊರೊನಾ ಶಂಕಿತರನ್ನು ಬೇರೆಡೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಈ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಕೊರೊನಾ ಸೋಂಕು ಶಂಕಿತರು ಭಾಗಿಯಾಗಿದ್ರು ಎನ್ನಲಾಗಿದ್ದು, ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬಳಿ ರಾತ್ರಿಯೇ 54 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಜೊತೆಗೆ ಈಗ 22 ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

  • ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು – ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರರಿಂದ ಸ್ಫೋಟಕ ಮಾಹಿತಿ

    ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು – ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರರಿಂದ ಸ್ಫೋಟಕ ಮಾಹಿತಿ

    ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು ರೂಪಿಸಿಲಾಗಿತ್ತು ಅನ್ನೋ ಭಯಾನಕ ಮಾಹಿತಿ ಎನ್‍ಐಎ ತನಿಖೆಯಿಂದ ಬಯಲಾಗಿದೆ.

    ಉಗ್ರರ ಸಂಚಿನ ಕುರಿತಂತೆ ಎನ್‍ಐಎ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ದಲೈಲಾಮ ಅವರನ್ನು ಮುಗಿಸಲು ರಾಜ್ಯದ ರಾಮನಗರದಲ್ಲೇ ಸಂಚು ರೂಪಿಸಿರುವುದಾಗಿ ಎನ್‍ಐಎ ನಡೆಸಿದ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಪರಿಣಾಮ ಬೌದ್ಧ ಧರ್ಮಗುರು ದಲೈಲಾಮ ಪ್ರಾಣ ಉಳಿದಿದೆ.

    ಚಾರ್ಜ್ ಶೀಟ್ ನಲ್ಲಿ ಏನಿದೆ?
    2018ರ ಜನವರಿ 18ರಂದು ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲೈಲಾಮ ಮತ್ತು ಬಿಹಾರ ರಾಜ್ಯಪಾಲರನ್ನು ಜೊತೆಯಲ್ಲೇ ಬಾಂಬ್ ಬಿಟ್ಟು ಉಡಾಯಿಸಲು ಸ್ಕೆಚ್ ರೂಪಿಸಿದ್ದರು. ಇದರ ಮಾಹಿತಿ ಅರಿತ ಎನ್‍ಐಎ ರಂಗಕ್ಕಿಳಿದು ಮೂವರನ್ನು ಅರೆಸ್ಟ್ ಮಾಡಿತ್ತು. ಇದು ವಿಫಲವಾದ ಬೆನ್ನಲ್ಲೇ ಲಾಮ ಹತ್ಯೆಗೆ ಮತ್ತೊಂದು ಸ್ಕೆಚ್ ಅನ್ನು ಕರ್ನಾಟಕದಲ್ಲಿ ರೂಪಿಸಲಾಗ್ತಿತ್ತು. ಅದರಲ್ಲೂ ರಾಮನಗರದ ಮನೆಯೊಂದರಲ್ಲಿ ಲಾಮ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಬೋಧ್‍ಗಯಾದಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ಉಗ್ರರ ವಿಚಾರಣೆ ವೇಳೆ ರಾಮನಗರದಲ್ಲಿ ರೂಪಿಸಲಾಗ್ತಿದ್ದ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದರು.

    ಆಗಸ್ಟ್ 7ರಂದು ರಾಜ್ಯಕ್ಕೆ ಧಾವಿಸಿದ ಎನ್‍ಐಎ ತಂಡ, ರಾಮನಗರಕ್ಕೆ ತೆರಳಿ ಜೆಎಂಬಿ ಉಗ್ರ ಮುನೀರ್‍ನನ್ನು ಯಶಸ್ವಿಯಾಗಿ ಬೇಟೆಯಾಡಿತ್ತು. ಮುನೀರ್ ನನ್ನು ವಶಕ್ಕೆ ಪಡೆದಿದ್ದರಿಂದ ಸಂಭವಿಸಬಹುದಾಗಿದ್ದ ಘನಘೋರ ದುರಂತವನ್ನ ಎನ್‍ಐಎ ತಪ್ಪಿಸಿತ್ತು. ಬಾಂಬ್ ಸ್ಫೋಟಿಸಿ ದಲೈಲಾಮ ಹತ್ಯೆಗೆ ಮುನೀರ್ ಸಂಚು ನಡೆಸಿದ್ದ ವಿಚಾರ ಎನ್‍ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    1959ರಲ್ಲಿ ಚೀನಾದಿಂದ ಎದುರಾಗಿದ್ದ ಪ್ರಾಣಕಂಟಕದಿಂದ ಪಾರಾಗಲು ಟಿಬೆಟ್‍ನಿಂದ ದಲೈಲಾಮ ರಾತ್ರೋರಾತ್ರಿ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಕಿಂಗ್ ಸ್ಟಾರ್ ಯಶ್ ಕೊಲ್ಲಲು ಸ್ಕೆಚ್!

    ರಾಕಿಂಗ್ ಸ್ಟಾರ್ ಯಶ್ ಕೊಲ್ಲಲು ಸ್ಕೆಚ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕುಖ್ಯಾತ ರೌಡಿ ಸೈಕಲ್ ರವಿಯೇ ನಟ ಯಶ್ ಹತ್ಯೆಗೆ ಸಂಚು ಮಾಡಿದ್ದ. ಪೊಲೀಸರ ವಿಚಾರಣೆ ವೇಳೆ 2 ವರ್ಷಗಳ ಹಿಂದೆಯೇ ನಟ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತ ಸುದ್ದಿಯನ್ನು ಬಾಯಿಬಿಟ್ಟಿದ್ದಾನೆ.

    2016 ರಲ್ಲಿ ಬರ್ತ್ ಡೇ ಕಾರ್ಯಕ್ರಮಕ್ಕೆಂದು ಯಶ್ ಕನಕಪುರ ಫಾರ್ಮ್ ಹೌಸ್‍ ಗೆ ಹೋಗಿದ್ದರು. ಅಲ್ಲಿ ಸೈಕಲ್ ರವಿ ಹಾಗೂ ಕೋದಂಡ ಸ್ಕೆಚ್ ಯಶ್ ಕೊಲೆ ಮಾಡಲು  ಮಾಡಿದ್ದರು. ಕೋದಂಡನ ಮೂಲಕ ಯಶ್ ಅವರನ್ನು ಕೊಲ್ಲಲು ಸ್ಕೆಚ್ ಹಾಕಲಾಗಿತ್ತು. ಸ್ಕೆಚ್ ರೀತಿಯಲ್ಲಿ ಕುಡಿದ ಮತ್ತಿನಲ್ಲಿಯೇ ಯಶ್ ಕಾರಿನ ಮೇಲೆ ಪುಡಿ ರೌಡಿಗಳು ಕಲ್ಲು ತೂರಾಟ ಮಾಡಿದ್ದರು. ಆದರೆ ಅಂದು ಯಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

    ಅಂದು ಯಶ್ ಹತ್ಯೆಗೆ ಮೊತ್ತೊಬ್ಬ ನಟನ ಕೈವಾಡ ಇದೆ ಎಂದು ಆರೋಪ ಕೇಳಿಬಂದಿದೆ. ಆದರೆ ನಟನ ಸಂಚಿನ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ತನಿಖೆಯ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸುತ್ತಿಲ್ಲ.

    ಕೋದಂಡ ಯಾರು? ಸದ್ಯಕ್ಕೆ ಕೋದಂಡ ಎಲ್ಲಿದ್ದಾನೆ ಎಂಬ ಸುಳಿಯೂ ಸಿಗುತ್ತಿಲ್ಲ. ಅವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೋದಂಡ ಹಲವು ಪ್ರಕರಣಗಲ್ಲಿ ಬೇಕಾಗಿರುವ ಆರೋಪಿಯಾಗಿದ್ದು, ಇದುವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ. ಕೋದಂಡ ಮತ್ತು ಸೈಕಲ್ ರವಿ ಇಬ್ಬರು ರೌಡಿಗಳಾಗಿದ್ದು, ವಿರೋಧಿಗಳಾಗಿದ್ದರು. ಆದರೆ ಒಬ್ಬರನ್ನು ಮುಗಿಸುವ ಸಲುವಾಗಿ ಇಬ್ಬರು ರಾಜಿ ಮಾಡಿಕೊಂಡಿದ್ದರು.

    ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಜಯಣ್ಣ ಅವರ ಜೊತೆ ಹೋಗಿ ಯಶ್ ಕಮಿಷನರ್ ಕಚೇರಿಗೆ ಹೋಗಿ ಯಶ್ ಮೌಖಿಕ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ದೂರಿನ ಆಧಾರದ ಮೇಲೆ ಮೈಸೂರು ಕರ್ನಾಟಕ ಭಾಗದಲ್ಲಿ ಬೆಂಗಳೂರಿನ ಕೆಲವು ರೌಡಿಗಳನ್ನು ವಶಕ್ಕೆ ಪಡೆದ ವಿಚಾರಣೆ ಮಾಡಿದ್ದು, ಜೈಲಿಗೂ ಕಳುಹಿಸಿದ್ದರು.

    ಹತ್ಯೆಯ ಸಂಚಿನ ಪ್ರಕರಣ ಬೆಳಕಿಗೆ ಬಂದ ನಂತರ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಈ ಬಗ್ಗೆ ಲೈವ್ ಆಗಿ ಮಾತನಾಡುತ್ತೇನೆ ಎಂದು ಯಶ್ ಹೇಳಿದ್ದಾರೆ. ಜೂನ್ 27 ರಂದು ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ರೌಡಿ ಸೈಕಲ್ ರವಿಯನ್ನು ಬಂಧಿಸಿದ್ದರು.