Tag: Skating

  • ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್: ಅಶ್ವಿನ್ ಡಿಸಿಲ್ವಾಗೆ ಕಂಚು

    ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್: ಅಶ್ವಿನ್ ಡಿಸಿಲ್ವಾಗೆ ಕಂಚು

    ಮಂಗಳೂರು: ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಪುರುಷರ ಜೂನಿಯರ್ ವಿಭಾಗದ 1,000 ಮೀಟರ್ ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ನಗರದ ಅಶ್ವಿನ್ ಕ್ಯಾಲೆನ್ ಡಿಸಿಲ್ವಾ ಕಂಚಿನ ಪದಕ ಪಡೆದಿದ್ದಾರೆ.

    ಅಶ್ವಿನ್ ಕ್ಯಾಲೆನ್ ಡಿಸಿಲ್ವಾ ಮಂಗಳೂರಿನ ಆಲ್ವಿನ್ ಮತ್ತು ಆಶಾ ಡಿಸಿಲ್ವಾ ದಂಪತಿಯ ಪುತ್ರನಾಗಿದ್ದಾರೆ. ಇದೇ ಡಿಸೆಂಬರ್ 1 ಮತ್ತು 2 ರಂದು ಜಕಾರ್ತದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಅಶ್ವಿನ್ ಕಂಚಿನ ಪದಕ ಗೆಲ್ಲುವ ಮೂಲಕ ಜನವರಿಯಲ್ಲಿ ಕೆನಡಾದಲ್ಲಿ ನಡೆಯಲಿರುವ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ಗೂ ಸಹ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಇದಲ್ಲದೇ ಫೆಬ್ರವರಿಯಲ್ಲಿ ಜರ್ಮನಿಯ ಡ್ರೆಸ್ಡೆನ್ ನಲ್ಲಿ ನಡೆಯಲಿರುವ ವರ್ಲ್ಡ್ ಕಪ್ ಚಾಂಪಿಯನ್ ಶಿಪ್ ನಲ್ಲಿಯೂ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದ ಮಂಗ್ಳೂರು ವಿದ್ಯಾರ್ಥಿನಿ

    ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದ ಮಂಗ್ಳೂರು ವಿದ್ಯಾರ್ಥಿನಿ

    ಮಂಗಳೂರು: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮಂಗಳೂರಿನ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಎರಡು ಬೆಳ್ಳಿ ಪದಕ ಪಡೆದಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    15ನೇ ರಾಷ್ಟ್ರೀಯ ಐಸ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನ್ನು ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ನವೆಂಬರ್ 17 ಹಾಗೂ 18 ರಂದು ದೆಹಲಿಯಲ್ಲಿ ಆಯೋಜಿಸಿತ್ತು. ಈ ಚಾಂಪಿಯನ್ ಶಿಪ್‍ನ 13 ವರ್ಷದೊಳಗಿನ ವಿಭಾಗದಲ್ಲಿ ಮಂಗಳೂರಿನ ಅಮಂಡಾ ಕೊನ್ಸೆಸ್ಸೊ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

    ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ನಗರದ ಮಾಲೆಮಾರ್ ನಿವಾಸಿಯಾದ ಫ್ರಾನ್ಸಿಸ್ ಹಾಗೂ ಡೋರಿಸ್ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ನೀರುಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಅಲ್ಲದೇ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು

    ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು

    ಮಂಗಳೂರು: ಸ್ಪೀಡ್ ರೋಲರ್ ಸ್ಕೇಟಿಂಗ್ ಜಿಲ್ಲಾ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್ ಶಿಪ್ 2018-19ರಲ್ಲಿ ಮಂಗಳೂರಿನ ಹೈ ಫೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು ಬಂದಿವೆ.

    ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಶನಿವಾರ ಹಾಗೂ ಭಾನುವಾರ ಸ್ಕೇಟಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ 8 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 77 ಪದಕಗಳನ್ನು ಮತ್ತು 8 ವರ್ಷಕ್ಕಿಂತ ಕೆಳಗಿನ ವಿಭಾಗದಲ್ಲಿ 23 ಪದಕಗಳನ್ನು ಹೈ ಫ್ಲೈಯರ್ಸ್ ಕ್ಲಬ್ ಗಳಿಸಿತು. ಈ ಮೂಲಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಸೇರಿದಂತೆ ಒಟ್ಟು 100 ಪದಕಗಳನ್ನು ಕ್ಲಬ್ ತನ್ನದಾಗಿಸಿಕೊಂಡಿದೆ.

    8 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ 37 ಸ್ಕೇಟರ್ ಗಳು ಭಾಗವಹಿಸಿದ್ದು, ಅವರಲ್ಲಿ 22 ಜನರು ನವೆಂಬರ್ ತಿಂಗಳು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಗೆ ತೇರ್ಗಡೆ ಹೊಂದಿದ್ದಾರೆ. ಪದಕ ವಿಜೇತ ಸ್ಕೇಟರ್ ಗಳಿಗೆ ಕೋಚ್ ಮೋಹನ್ ದಾಸ್ ಹಾಗೂ ಜಯರಾಜ್ ಅವರು ತರಬೇತಿ ನೀಡುತ್ತಿದ್ದಾರೆ.

    ಯಾರಿಗೆ ಎಷ್ಟು ಪದಕ?:
    ವಿಜೇತರ ಪೈಕಿ ಡೇನಿಯಲ್ ಕೊನ್ಸೆಸ್ಸೋ, ಖುಷಿರಾಣಿ, ಸುಹಾನ್ ರಾಜ್ ಅವರು ತಲಾ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವೇಕ್ ಯೋಗರಾಜ್, ದೀಯಾ ದಾಸ್, ಮೋಕ್ಷಾ ಸುವರ್ಣ, ತನ್ಮಯ್ ಕೊಟ್ಟಾರಿ, ಮೊಹಮ್ಮದ್ ಶಮಿಲ್ ಅರ್ಶಾದ್, ಕೃತಿ ಕಯ್ಯ, ಸ್ವಸ್ತಿ ಶ್ರೀ ಶೆಟ್ಟಿ, ವಿಹಾನ್ ಸುವರ್ಣ, ನಿಹಾರಿಕಾ ಟಿ. ತಲಾ 3 ಚಿನ್ನಕ್ಕೆ ಕೊರಳೊಡಿದ್ದಾರೆ.

    ಡೇಶಿಯಲ್ ಕಾನ್ಸೆಸ್ಸೋ ಮೂರು ಚಿನ್ನ 1 ಬೆಳ್ಳಿ, ರಚಿತ್ ಡಿಸೋಜ 2 ಚಿನ್ನ 2 ಬೆಳ್ಳಿ, ಅರ್ಪಿತಾ ಶೇಟ್ 1 ಚಿನ್ನ ಮೂರು ಬೆಳ್ಳಿ, ರುಷಭ್ ಮಂಜೇಶ್ವರ್ 1 ಚಿನ್ನ 2 ಬೆಳ್ಳಿ, ಫರಾಝ್ ಫರೀದ್ 3 ಬೆಳ್ಳಿ, ಅನಘಾ ರಾಜೇಶ್ 3 ಬೆಳ್ಳಿ, ಶಹಾನ್ ಮಹಮ್ಮದ್ 2 ಬೆಳ್ಳಿ 1 ಕಂಚು, ಮಯಾನ್ ಸಿಕ್ವೇರಾ 2 ಬೆಳ್ಳಿ 1 ಕಂಚು, ಶಮಿತ್ ಶೆಟ್ಟಿ 2 ಬೆಳ್ಳಿ, ಅದ್ವಿಕಾ ಶೆಟ್ಟಿ 1 ಬೆಳ್ಳಿ 2 ಕಂಚು, ಶಹೀಮ್ ಮೊಹಮ್ಮದ್ 2 ಕಂಚು, ನಿರ್ಮಾಯ್ ವೈ.ಎನ್. 1 ಕಂಚು, ಅದ್ವಿಕ್ ಶೆಟ್ಟಿ 1 ಕಂಚು, ಫರಾಝ್ 1 ಚಿನ್ನ, ರಿಷನ್ ನಝರೇತ್ 1 ಕಂಚಿನ ಪದಕ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 5ರ ಪೋರನಿಂದ ಏಷಿಯನ್ ಬುಕ್ ಆಫ್ ರೆಕಾರ್ಡ್

    5ರ ಪೋರನಿಂದ ಏಷಿಯನ್ ಬುಕ್ ಆಫ್ ರೆಕಾರ್ಡ್

    ಕಾರವಾರ: ಐದು ವರ್ಷದ ಪೋರನೊಬ್ಬ ಮರದ ಕಾಲುಗಳನ್ನು ಕಟ್ಟಿಕೊಂಡು ನಡೆಯುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾ ಉದ್ಯೋಗಿ ಸುಮಂತ್ ಹೆಬಲೇಕರ್ ಪುತ್ರ ಶ್ಯಾಮ್ ದಾಖಲೆ ಬರೆದ ಪೋರ. ಕಳೆದ ನಾಲ್ಕು ವರ್ಷಗಳಿಂದ ಕೈಗಾ ರೂರಲ್ ಸ್ಕೇಟಿಂಗ್ ಕ್ಲಬ್‍ ನ ತರಬೇತುದಾರ ದೀಪಕ್ ರವರ ಕೈಯಲ್ಲಿ ಪಳಗಿದ್ದಾನೆ. 43 ಇಂಚಿನ ಎತ್ತರ ಹಾಗೂ 72 ಇಂಚಿನ ಎತ್ತರದ ಮರದಕಾಲನ್ನು ಕಟ್ಟಿಕೊಂಡು ಮುಮ್ಮುಖವಾಗಿ 2.8 ಕಿಲೋಮೀಟರ್ 15 ನಿಮಿಷದಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಾನೆ. ಅಲ್ಲದೇ ಬ್ಯಾಕ್‍ ವರ್ಡ್ ಸ್ಕೇಟಿಂಗ್ ನಲ್ಲಿ ಐದು ನಿಮಿಷದಲ್ಲಿ 650 ಮೀಟರ್ ಕ್ರಮಿಸುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ದೇಶಕ್ಕೆ ಹೆಸರು ತಂದಿದ್ದಾನೆ.

    ತನ್ನ ಸಹೋದರಿ ಸ್ಕೇಟಿಂಗ್ ಮಾಡುವುದನ್ನು ನೋಡಿ ತಾನೂ ಕಲಿಯಬೇಕೆಂಬ ಛಲಕ್ಕೆ ಬಿದ್ದ ಶ್ಯಾಮ್, ತಾನು ಒಂದು ವರ್ಷದವನಿರುವಾಗಲೇ ಸ್ಕೇಟಿಂಗ್ ಮಾಡತೊಡಗಿದ. ಸತತ ನಾಲ್ಕು ವರ್ಷದಿಂದ ಕಾಲಿಗೆ ಮರಗಾಲು ಕಟ್ಟಿಕೊಂಡು ನಿರಂತರ ಅಭ್ಯಾಸ ಮಾಡಿ ಇಂದು ವಿಶ್ವದಾಖಲೆ ಮಾಡಿ ತೋರಿಸಿದ್ದಾನೆ.