ಮಂಗಳೂರು: ಮಂಗಳೂರಿನ(Mangaluru) ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಇತ್ತೀಚೆಗೆ ನಡೆದ 1ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ(Highflyers Skating Club) ಸ್ಕೇಟರ್ಸ್ 19 ಚಿನ್ನ, 5 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಸ್ಕೇಟರ್‌ಗಳಾದ ಮುಹಮ್ಮದ್ ಅಯಾನ್ 3 ಚಿನ್ನ, ಹಿಮಾನಿ ಕೆ.ವಿ 3 ಚಿನ್ನ, ತನ್ಮಯ್ ಎಂ ಕೊಟ್ಟಾರಿ 3 ಚಿನ್ನ, ಡ್ಯಾಶಿಯೆಲ್ ಅಮಂಡಾ ಕಾನ್ಸೆಸ್ಸಾವೊ 3 ಚಿನ್ನ, ಶಾಲೋಮ್ ಕ್ರಿಶ್ಚಿಯನ್ 2 ಚಿನ್ನ ಮತ್ತು 1 ಬೆಳ್ಳಿ, ಪಿ.ಜೆನಿಶಾ 2 ಚಿನ್ನ ಮತ್ತು 1 ಬೆಳ್ಳಿ, ಡೇನಿಯಲ್ ಸಾಲ್ವಡಾರ್ ಕಾನ್ಸೆಸ್ಸಾವೊ 2 ಚಿನ್ನ ಮತ್ತು 1 ಬೆಳ್ಳಿ ಪದಕ ಗೆದ್ದಿದ್ದಾರೆ. ಇದನ್ನೂ ಓದಿ: India’s Strike | ಪಾಕ್ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?
ಕೇಟ್ ಅರ್ವಿ ವಾಜ್‌ಗೆ 1 ಚಿನ್ನ, ಶೀಹಾನ್.ಎ.ಆರ್ 1 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದರು. ಡೇವಿನ್ ಮಹೇಶ್‌ಗೆ 1 ಬೆಳ್ಳಿ ಪದಕ, ಲಕ್ಷ್ ಡಿ.ಎಸ್.ಗೌಡ 3 ಕಂಚಿನ ಪದಕ ಗೆದ್ದಿದ್ದಾರೆ. ಪ್ರತಿಭಾನ್ವಿತ ಸ್ಕೇಟರ್‌ಗಳಿಗೆ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಮೋಹನ್ ದಾಸ್ ಕೆ, ಜಯರಾಜ್, ರಮಾನಂದ ಕೆ.ವಿ ಮತ್ತು ಓಂಕಾರ್ ತರಬೇತಿ ನೀಡುತ್ತಿದ್ದಾರೆ.
ಮಂಗಳೂರು: ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ (ರಿ) ಮಂಗಳೂರು ಇದರ ವಾರ್ಷಿಕೋತ್ಸವ ದಿನಾಚರಣೆ ಇತ್ತೀಚಿಗೆ ನಗರದ ಬೆಂದೂರಿನ ಸೇಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ನಡೆಯಿತು.
ಸಮಾರಂಭವನ್ನು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಜಹರ ಖಾನಂ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಅಧ್ಯಕ್ಷ ಸಿ.ಎ.ಶಾಂತರಾಮ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದ.ಕ. ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಫೈಸ್ ಭಾಗಿಯಾಗಿದ್ದರು. ಇದನ್ನೂ ಓದಿ: ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್
ಆರ್‌ಎಸ್‌ಎಫ್‌ಐ ರಾಷ್ಟ್ರೀಯ ಮಟ್ಟದ ಸಾಧಕ ಸ್ಕೇಟಿಂಗ್ ಪಟುಗಳಾದ ಶಾಮಿಲ್, ಅರ್ಪಿತಾ, ಡಾಶಿಯಲ್, ಮೋಕ್ಷ ಮತ್ತು ಡೇನಿಯಲ್ ಹಾಗೂ ಆರ್‌ಎಸ್‌ಎಫ್‌ಐ ರಾಜ್ಯ ಸಾಧಕರಾದ ಹಿಮಾನಿ, ಕೇಟ್, ತನ್ಮಯ್ ಮತ್ತು ವಿವೇಕ್ ಅವರಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್ ಮಂಡನೆ
ಕ್ಲಬ್ ಅಧ್ಯಕ್ಷ ಅರ್ಷದ್ ಹುಸೇನ್ ಅತಿಥಿಗಳನ್ನು ಸ್ವಾಗತಿಸಿದರು. ನಸೀಹ ಶಾ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ ನ ಪೋಷಕರು ಹಾಗೂ ಮಕ್ಕಳು ಮನರಂಜನೆ ಕಾರ್ಯಕ್ರಮ ನೀಡಿದರು.
ಕಲಬುರಗಿ (ಅಫಜಲಪುರ): ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನ ಮನುಡ್ಟಿಡ್ಲೋರ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್ (International Skating Competition) ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಕಲಬುರಗಿ ಜಿಲ್ಲೆಯ ಬಾಲಕ ಚಂದ್ರಕಾಂತ ಬಡದಾಳ ಚಿನ್ನದ ಪದಕ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕಲಬುರಗಿ (Kalabiragi) ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಾಣಹಟ್ಟಿ ಗ್ರಾಮದ ಬಾಲಕ ಇದೀಗ ದೇಶಕ್ಕೆ ಕೀರ್ತಿ ತಂದಿದ್ದಾರೆ. ಬಾಲಕನ ತಂದೆ ರಾಜು ಬಡದಾಳ ಮಹಾರಾಷ್ಟ್ರದ ಪುಣೆ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸವಾಗಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಮಗನಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಹಂಬಲದಿಂದ ಪೋಷಕರು ಸ್ಥಳೀಯ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದರು. ಅಲ್ಲಿ ಚಂದ್ರಕಾಂತನ ಕ್ರೀಡಾಪ್ರತಿಭೆ ಗುರುತಿಸಿದ ಶಿಕ್ಷಕರು ಸ್ಕೇಟಿಂಗ್ ತರಬೇತುದಾರ ಅಬ್ದುಲ್ ಶೇಖ್ ಬಳಿ ತರಬೇತಿ ಕೊಡಿಸಿದ್ದಾರೆ.
ಕಳೆದ 2023ರ ಮೇ 23 ರಿಂದ 31ರ ವರೆಗೆ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಂದ್ರಕಾಂತ ಕೇವಲ 11.21 ಸೆಕೆಂಡುಗಳಲ್ಲೇ 100 ಮೀಟರ್ ಕ್ರಮಿಸಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದರು. ಇದರಿಂದ ಬ್ಯಾಂಕಾಕ್‌ನ ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇದನ್ನೂ ಓದಿ: World Cup 2023: 102 ರನ್ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ
ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯೂ ಇಲ್ಲದ ಪುಟ್ಟ ಗ್ರಾಮದಿಂದ ಬಂದ 5ನೇ ತರಗತಿ ಬಾಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಅಕ್ಟೋಬರ್ 1ರಂದು ಬ್ಯಾಂಕಾಕ್ ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತ, ಹಾಂಕಾಂಗ್, ಮಲೇಷ್ಯಾ, ಥೈಲ್ಯಾಂಡ್ ಸೇರಿದಂತೆ ಅನೇಕ ದೇಶಗಳಿಂದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಿದ ಚಂದ್ರಕಾಂತ ಬಡದಾಳ 1,000 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ, 500 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ, 300 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ, ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕೀರ್ತಿ ತಂದಿದ್ದಾರೆ. ಬಾಲಕನ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಂಗಳೂರು: ಸಿಬಿಎಸ್‌ಸಿ ಬೋರ್ಡ್ ಹಾಗೂ ಬೆಳಗಾವಿಯ ಬಿ.ಬಿ ಹಂಜಿ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (Skating Championship) ಮಂಗಳೂರಿನ (Mangaluru) ಆರ್ನಾ ರಾಜೇಶ್ 2 ಚಿನ್ನದ ಪದಕ ಪಡೆದಿದ್ದಾರೆ.
ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್‌ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ 2ನೇ ತರಗತಿಯ ವಿದ್ಯಾರ್ಥಿ ಆರ್ನಾ ರಾಜೇಶ್ 500 ಮೀ. ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ ತಲಾ 2 ಚಿನ್ನದ ಪದಕ ಪಡೆದು ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ಮಾಸ್ಕ್ ಹಾಕಿದ್ರೆ ಮಾತ್ರ ಮೆಟ್ರೋ ಪ್ರವೇಶಕ್ಕೆ ಅನುಮತಿ
2 ಚಿನ್ನದ ಪದಕ ಪಡೆದ ಆರ್ನಾ ರಾಜೇಶ್ ಜನವರಿಯಲ್ಲಿ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ. ರಾಜೇಶ್ ಹುಕ್ಕೇರಿ ಹಾಗೂ ಅನಿತಾ ರಾಜೇಶ್ ದಂಪತಿಯ ಪುತ್ರಿಯಾಗಿರುವ ಆರ್ನಾ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)ನ ಸದಸ್ಯೆಯಾಗಿದ್ದಾರೆ. ಇದನ್ನೂ ಓದಿ: ರಂಗಸ್ಥಳದಲ್ಲೇ ಹೃದಯಾಘಾತ – ಕಟೀಲು ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ನಿಧನ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಡಿ.15 ರಿಂದ 22 ರವರೆಗೆ ದೆಹಲಿಯಲ್ಲಿ ಆಯೋಜಿಸಿದ 59 ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಧನುಷ್ ಬಾಬು ನಾಲ್ಕು ಚಿನ್ನದ ಪದಕದ ಜೊತೆಗೆ ದೇಶದ ಅತ್ಯಂತ ವೇಗದ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
17 ವರ್ಷಕ್ಕಿಂತ ಮೇಲ್ಪಟ್ಟ ಇನ್ ಲೈನ್ ಸ್ಕೇಟಿಂಗ್ ನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ್ದ ಧನುಷ್ ಬಾಬು 200 ಮೀಟರ್ ಟೈಂಟ್ರಯಲ್ಸ್ ನಲ್ಲಿ 18.10 ಸೆಕೆಂಡ್ ನಲ್ಲಿ ಗುರಿಮುಟ್ಟಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ವೇಗದಲ್ಲಿ ಗುರಿಮುಟ್ಟಿದ್ದ ಏಕೈಕ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಧನುಷ್ ಬಾಬು ಪಾತ್ರರಾಗಿದ್ದಾರೆ. 200 ಮೀಟರ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ, ವನ್ ಲ್ಯಾಪ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ ಹಾಗೂ ರಿಲೇಯಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ತಾನು ಭಾಗವಹಿಸಿದ ಎಲ್ಲಾ ನಾಲ್ಕು ಪಂದ್ಯದಲ್ಲೂ ನಾಲ್ಕೂ ಚಿನ್ನದ ಪದಕ ಪಡೆದು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಇದನ್ನೂ ಓದಿ: ಕಾಗವಾಡ ಮತಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‍ಗೆ ಕೊರೊನಾ
2022ರ ಜುಲೈನಲ್ಲಿ ಯುಎಸ್ ಎ ನಲ್ಲಿ ನಡೆಯಲಿರುವ ವಲ್ರ್ಡ್ ಗೇಮ್ಸ್ ನಲ್ಲೂ ಭಾಗವಹಿಸಲು ಅರ್ಹತೆ ಪಡೆದಿದ್ದು, ವಲ್ರ್ಡ್ ಗೇಮ್ಸ್ ಗೆ 17 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಭಾರತದಿಂದ ಆಯ್ಕೆಯಾದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬೆಂಗಳೂರಿನ ನಿವಾಸಿಯಾದ ಬಾಲಾಜಿ ಬಾಬು ಹಾಗೂ ಸುಧಾ ಬಾಬು ದಂಪತಿಯ ಪುತ್ರನಾಗಿರುವ ಧನುಷ್ ಬಾಬು, ಸಿಟಿ ಸ್ಕೇಟರ್ಸ್ ಕ್ಲಬ್ ನಿಂದ ತನ್ನ ತಂದೆ ಬಾಲಾಜಿ ಬಾಬು ಅವರಿಂದಲೇ ತರಬೇತಿ ಪಡೆಯುತ್ತಿದ್ದಾರೆ.
ಬೆಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಡಿ.15 ರಿಂದ 22ರವರೆಗೆ ದೆಹಲಿಯಲ್ಲಿ ಆಯೋಜಿಸಿದ 59ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಏಕಾಂಶ್ ಕುಮಾರ್.ಎನ್ ಎರಡು ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
14 ರಿಂದ 17 ವರ್ಷದೊಳಗಿನ ರಾಷ್ಟ್ರಮಟ್ಟದ ಇನ್‍ಲೈನ್ ಸ್ಕೇಟಿಂಗ್‍ನ ಜ್ಯೂನಿಯರ್ಸ್ ಬಾಲಕರ ವಿಭಾಗದಲ್ಲಿ ಏಕಾಂಶ್ ಕುಮಾರ್ ಎನ್ 1,000 ಮೀಟರ್ ರಿಂಕ್ ರೇಸ್‍ನಲ್ಲಿ ಬೆಳ್ಳಿ ಪದಕ ಹಾಗೂ ರಿಂಕ್ ರಿಲೇ ರೇಸ್‍ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮೂರು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಏಕಾಂಶ್ ಕುಮಾರ್.ಎನ್ ರಾಷ್ಟ್ರ ಮಟ್ಟದಲ್ಲೂ ಪದಕ ಪಡೆದು ಸಾಧನೆ ಮಾಡಿದ್ದಾರೆ. ಏಕಾಂಶ್ ಬೆಂಗಳೂರಿನ ಅಪೋಲೋ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹೊಸಕೆರೆ ಹಳ್ಳಿ ನವೀನ್ ಕುಮಾರ್ ಹಾಗೂ ಸೌಮ್ಯ ಟಿ.ಆರ್ ದಂಪತಿಯ ಪುತ್ರ. ಬೆಂಗಳೂರಿನ ಫೋರ್ಸ್ ವನ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯರಾಗಿದ್ದು, ತರಬೇತುದಾರಾದ ಪ್ರತೀಕ್ ರಾಜ ಹಾಗೂ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್
ಮಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಡಿ.11 ರಿಂದ 13 ರವರೆಗೆ ದೆಹಲಿಯಲ್ಲಿ ಆಯೋಜಿಸಿದ 59ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಆರ್ನಾ ರಾಜೇಶ್ ಎರಡು ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
5 ರಿಂದ 7 ವರ್ಷದೊಳಗಿನ ರಾಷ್ಟ್ರಮಟ್ಟದ ಇನ್‍ಲೈನ್ ಸ್ಕೇಟಿಂಗ್‍ನ ಬಾಲಕಿಯರ ವಿಭಾಗದಲ್ಲಿ ಆರ್ನಾ ರಾಜೇಶ್ ಒಂದು ಬೆಳ್ಳಿಯ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ. ಮೂರು ಲ್ಯಾಪ್ ರಿಂಕ್ ರೇಸ್‍ನಲ್ಲಿ ಬೆಳ್ಳಿ ಪದಕ ಹಾಗೂ ಎರಡು ಲ್ಯಾಪ್ ರಿಂಕ್ ರೇಸ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಅನಘಾಗೆ 2 ಚಿನ್ನ 1 ಬೆಳ್ಳಿ ಪದಕ
ಆರ್ನಾ ರಾಜೇಶ್ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ 1ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿ. ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯೆಯಾಗಿದ್ದು, ತರಬೇತುದಾರರಾದ ಮೋಹನ್ ದಾಸ್.ಕೆ, ಜಯರಾಜ್ ಹಾಗೂ ರಮಾನಂದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಕೋಚ್ ಪ್ರತೀಕ್ ರಾಜ ಅವರಿಂದ ಬೆಂಗಳೂರಿನಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಮೆಜಾನ್‍ಗೆ 202 ಕೋಟಿ ರೂ. ದಂಡ ಹಾಕಿದ ಸ್ಪರ್ಧಾತ್ಮಕ ಆಯೋಗ
– 150 ಪೋಲ್‍ಗಳನ್ನ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್
ಬೆಂಗಳೂರು: ಇತ್ತೀಚೆಗೆ ಪುಟಾಣಿ ಮಕ್ಕಳು ದಾಖಲೆ ಬರೆಯುವಂತೆ ಗುರಿ ಹೊಂದಿರುತ್ತಾರೆ. ಇದೇ ರೀತಿ ಬೆಂಗಳೂರಿನ ಸುಬ್ರಮಣ್ಯನಗರ ಪುಟಾಣಿ ಪೋರ ದಾಖಲೆ ಮಾಡುವಂತಹ ದೊಡ್ಡ ಕನಸು ಹೊತ್ತಿದ್ದಾನೆ.
ಮಾರುತಿ ಹಾಗೂ ಸವಿತಾ ದಂಪತಿ ಪುತ್ರ ಆರ್ಯನ್ ಸ್ಕೇಟಿಂಗ್‍ನಲ್ಲಿ ಲಿಂಬೋ ದಾಖಲೆ ಮಾಡಲು ಸಿದ್ಧನಾಗುತ್ತಿದ್ದಾನೆ. ಕಬ್ಬನ್ ಪಾರ್ಕಿನಲ್ಲಿ ಭಾನುವಾರವಾದರೆ ಸಾಕು ಸ್ಕೇಟಿಂಗ್ ಮಾಡುತ್ತಾನೆ. ಈ ಪುಟಾಣಿ ಫೋರ 150 ಮೀ ಉದ್ದವನ್ನ 9 ಅಡಿ ಎತ್ತರ ಪೋಲ್‍ಗಳನ್ನ ಇರಿಸಿ ಬಾಡಿ ಬೆಂಡ್ ಮಾಡಿ ಸ್ಕೇಟಿಂಗ್ ಮಾಡುತ್ತಿದ್ದಾನೆ.
ಈವರೆಗೂ ಯಾರು ಈ ಸಾಧನೆ ಮಾಡಿಲ್ಲ. ಹೀಗಾಗಿ ಆರ್ಯನ್ ಈ ಸಾಧನೆ ಮಾಡುವ ಆಸೆ ಹೊಂದಿದ್ದಾನೆ ಎಂದು ತಂದೆ ಮಾರುತಿ ಹೇಳಿದ್ದಾರೆ. 6 ವರ್ಷದ ಆರ್ಯನ್ 150 ಪೋಲ್‍ಗಳನ್ನ ಕೇವಲ 1 ನಿಮಿಷ 4 ಸೆಕೆಂಡ್‍ಗಳಲ್ಲಿ ಕಂಪ್ಲಿಟ್ ಮಾಡುತ್ತಾನೆ. ಈ ಸಂಬಂಧ ಅಗತ್ಯ ದಾಖಲೆಗಳನ್ನ ಕಲೆಹಾಕಲಾಗಿದೆ. ಲಿಂಬೋ ದಾಖಲೆಗಾಗಿ ವಿಡಿಯೋಗಳನ್ನ ಕಳುಹಿಸಲಾಗಿದೆ. ಈ ದಾಖಲೆಗಾಗಿಯೇ ಆರ್ಯನ್ ಕಾತುರದಿಂದ ಕಾಯುತ್ತಿದ್ದಾನೆ ಎಂದು ತಾಯಿ ಸವಿತಾ ತಿಳಿಸಿದ್ದಾರೆ.
ಆರ್ಯನ್ ಈ ವಿದ್ಯೆಗೆ, ಈ ದಾಖಲೆ ಮಾಡಲು ಯಾರೂ ಗುರುವಿಲ್ಲ. ತಂದೆ-ತಾಯಿ ನಿತ್ಯ ಆರ್ಯನ್ ಸ್ಕೇಟಿಂಗ್ ಮೇಲೆ ಗಮನವಿರಿಸಿ ಈ ಸಾಧನೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.
ನವದೆಹಲಿ: ಅಂಧ ಯುವಕ ಕಣ್ಣಿದ್ದವರನ್ನೂ ಮೀರಿಸುವಂತೆ ಸ್ಕೇಟಿಂಗ್ ಮಾಡುವ ಮೂಲಕ ನೆಟ್ಟಿಗರು ನಿಬ್ಬೆರಗಾಗುವಂತೆ ಮಾಡಿದ್ದಾನೆ.
ಜಪಾನ್ ಮೂಲಕ ಕಿಡ್_ಎಂ.ಸಿ ಎಂಬ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಆದರೆ, ಈ ಯುವಕ ತನ್ನ ಅದ್ಭುತ ವಿಡಿಯೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಇತರರು ನಿಬ್ಬೆರಗಾಗುವಂತೆ ಮಾಡಿದ್ದಾನೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಬಹುತೇಕರು ಇದರಿಂತ ಪ್ರೇರಿತರಾಗುತ್ತಿದ್ದಾರೆ. ಯುವಕನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋದಲ್ಲಿ ಬಿಳಿ ಟಿ ಶರ್ಟ್ ಧರಿಸಿದ ಅಂಧ ಯುವಕ ಸ್ಕೇಟ್ ಬೋರ್ಡ್ ಪಾರ್ಕಿನಲ್ಲಿ ತನ್ನ ಅದ್ಭುತ ಸ್ಕೇಟಿಂಗ್ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಣ್ಣಿದ್ದವರು ಸಹ ಇಂತಹ ಸ್ಟಂಟ್ ಮಾಡಲು ಭಯಪಡುತ್ತಾರೆ. ಆದರೆ ಈ ಯುವಕ ಒಂದು ಕೈಯಲ್ಲಿ ಸ್ಟಿಕ್ ಹಿಡಿದು ಸರ್ರನೆ ಹೋಗುವ ಮೂಲಕ ನೋಡುಗರು ನಿಬ್ಬೆರಗಾಗುವಂತೆ ಮಾಡಿದ್ದಾನೆ. ಒಂದು ಬಾರಿಯೂ ಎಡವಿ ಬೀಳದೇ ಸರಾಗವಾಗಿ ಸ್ಕೇಟಿಂಗ್ ವ್ಹೀಲ್ ಮೂಲಕ ಜಾರುತ್ತಾನೆ.
ತಾನು ಸ್ಕೇಟಿಂಗ್ ಮಾಡಿರುವ ಹತ್ತಾರು ವಿಡಿಯೋವನ್ನು ಯುವಕ ಇನ್‍ಸ್ಟಾದಲ್ಲಿ ಹಾಕಿದ್ದು, ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಹಾಡಿ ಹೊಗಳಿದರೆ, ನೀವು ನಮಗೆಲ್ಲ ಸ್ಪೂರ್ತಿ ಎಂದು ಕೊಂಡಾಡಿದ್ದಾರೆ.
ಹುಬ್ಬಳ್ಳಿ: ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ 12 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್‍ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾಳೆ.
ಓಜಲ್ ಎಸ್ ನಲವಡಿ ಇಲ್ಲಿನ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಈ ಸಾಧನೆ ಮಾಡಿದ್ದಾಳೆ. ಈ ಸಾಧನೆಯನ್ನು ನೋಡಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ದಾಖಲಿಸಿಕೊಂಡರು. ಬೆಳ್ಳಂಬೆಳಗ್ಗೆ ನಡೆದ ಈ ದಾಖಲೆಗೆ ನೂರಾರು ಮಂದಿ ಸಾಕ್ಷಿಯಾದರು.
ವಿಆರ್‌ಎಲ್ ಕಂಪನಿಯ ಸಿಎಫ್‍ಒ ಆಗಿರುವ ಸುನೀಲ್ ಎಸ್. ನಲವಡಿ ಹಾಗೂ ದೀಪಾ ಎಸ್. ನಲವಡಿ ಅವರ ಪುತ್ರಿಯಾದ ಓಜಲ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಇದುವರೆಗೆ ಒಟ್ಟು 13 ದಾಖಲೆಗಳನ್ನು ನಿರ್ಮಿಸಿದ್ದಾಳೆ.
ಇದೀಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಓಜಲ್‍ಳಿಗೆ ಅಕ್ಷಯ ಸೂರ್ಯವಂಶಿ ಎಂಬವರು ತರಬೇತಿ ನೀಡಿದ್ದರು.