Tag: SK Garden Slum

  • ಬೆಂಗ್ಳೂರಿಗರ ನಿದ್ದೆಗೆಡಿಸಿದ ಎಸ್.ಕೆ.ಗಾರ್ಡನ್ ಸ್ಲಂ

    ಬೆಂಗ್ಳೂರಿಗರ ನಿದ್ದೆಗೆಡಿಸಿದ ಎಸ್.ಕೆ.ಗಾರ್ಡನ್ ಸ್ಲಂ

    ಬೆಂಗಳೂರು: ಡಿಜೆ ಹಳ್ಳಿಯ ಎಸ್.ಕೆ.ಗಾರ್ಡನ್ ಸ್ಲಂ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ನಿದ್ದೆಯನ್ನ ನಿದ್ದೆಗೆಡಿಸಿದೆ.

    ಹೌದು. ಡಿ.ಜೆ.ಹಳ್ಳಿ ಮೂಲದ 34 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪತ್ತೆ ಪ್ರಕರಣ ಈಗ ತಲೆ ಬಿಸಿಗೆ ಕಾರಣವಾಗಿದೆ. ಮಹಿಳೆಯನ್ನು ರೋಗಿ-2180 ಗುರುತಿಸಲಾಗಿದ್ದು, ಅವರ ಪ್ರಯಾಣದ ಹಿನ್ನೆಲೆ ಜನರನ್ನು ಬೆಚ್ಚಿಬೀಳಿಸುವಂತಿದೆ.

    ಮಹಿಳೆ ಮೇ 25ರಂದು ಉಸಿರಾಟದ ಸಮಸ್ಯೆ ಎಂದು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬೋರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ. ತಕ್ಷಣವೇ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮಹಿಳೆಯ ಪ್ರಯಾಣದ ಹಿನ್ನೆಲೆ ನೋಡಿದರೆ ಸೋಂಕು ಸಮುದಾಯ ಮಟ್ಟದಲ್ಲಿ ಹಬ್ಬಲಿದೆಯೇ ಎಂಬ ಆತಂಕ ಆರೋಗ್ಯಾಧಿಕಾರಿಗಳ ಕಾಡುತ್ತಿದೆ.

    ಮಹಿಳೆಯು ಮೇ 13ರಂದು ಚನ್ನಪಟ್ಟಣದಲ್ಲಿ ಇರುವ ಫರ್ನಿಚರ್ ಗೋಡನ್‍ಗೆ ಭೇಟಿ ನೀಡಿದ್ದರು. ಅಲ್ಲಿಯವರೆಗೂ ಸೋಂಕು ಹಬ್ಬಿಸಿರುವ ಆತಂಕವಿದೆ. ಇತ್ತ ತರಕಾರಿ ಮಾರಾಟ ಮಾಡುವಾಗ,ಷೋರೂಂಗಳಿಗೂ ಫರ್ನಿಚರ್ ಮಾರಾಟ ಮಾಡಿರುವ ಆತಂಕ ಎದುರಾಗಿದೆ. ಆದರೆ ಮಹಿಳೆ ಕೊರೊನಾ ಹೇಗೆ ಹಬ್ಬಿದೆ ಎಂಬ ಮಾಹಿತಿಯೇ ಸಿಗುತ್ತಿಲ್ಲ. ಹೀಗಾಗಿ ಇಡೀ ಏರಿಯಾವನ್ನೇ ರ್ಯಾಂಡಮ್ ಟೆಸ್ಟ್ ಮಾಡಲು ಚಿಂತನೆ ಸಹ ನಡೆದಿದೆ.