Tag: SK Basavarajan

  • ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್

    ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್

    ಚಿತ್ರದುರ್ಗ: ಜೈಲಿನಲ್ಲಿದ್ದುಕೊಂಡೇ (Jail) ಮಾಜಿ ಶಾಸಕ ಎಸ್. ಕೆ ಬಸವರಾಜನ್  (SK Basavarajan) ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ.

    ಮುರುಘಾ ಮಠದಲ್ಲಿ (Murugha Mutt)  ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ (Police) ವಶದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಬೆಂಬಲಿಗರ ಮೂಲಕ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿಯನ್ನು ಕೆಪಿಸಿಸಿ ಕಚೇರಿಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ರೂ. ಬಿಲ್ಡಿಂಗ್ ಫಂಡ್ ನೀಡಿ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ.

    ಎಸ್.ಕೆ. ಬಸವರಾಜನ್ 2008ರಲ್ಲಿ ಜೆಡಿಎಸ್‍ನಿಂದ ಚಿತ್ರದುರ್ಗ ಶಾಸಕರಾಗಿದ್ದರು. ಅದಾದ ಬಳಿಕ 2013ರಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸೋತಿದ್ದು, 2018ರಲ್ಲಿ ಎಸ್.ಕೆ ಬಸವರಾಜನ್ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಇದೀಗ 2023ಕ್ಕೆ ಕಾಂಗ್ರೆಸ್ (Congress) ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

    ಪೊಲೀಸ್ ವಶದಲ್ಲಿ ಬಸವರಾಜನ್: ದಸರಾ ಉತ್ಸವದ ಅಂಗವಾಗಿ ನಡೆದ ಪೀಠಾರೋಹಣದ ಹಿಂದಿನ ದಿನ ಅ.5ರ ಮಧ್ಯರಾತ್ರಿ ವೇಳೆ ರಾಜಾಂಗಣದಲ್ಲಿ ಗೋಡೆಗೆ ಹಾಕಿದ್ದ 47 ಫೋಟೋಗಳು (Photo) ಕಳ್ಳತನವಾಗಿದ್ದವು. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಹಾಗೂ ರಾಜ್ಯದ ಸಿಎಂಗಳ ಜೊತೆಗಿನ ಮುರುಘಾಶ್ರೀ ಫೋಟೋಗಳನ್ನು ಕಳ್ಳರು ಕದ್ದೊಯ್ದಿದ್ದರು. ಆ ಬಳಿಕ ವಿಚಾರಣೆ ಆರಂಭಿಸಿದ ಪೊಲೀಸರು ನ.7ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

    ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್‍ಜೆಎಮ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿಯನ್ನು ಫೋಟೋ ಕಳವು ಮಾಡಿದ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಬಸವರಾಜನ್ ಫೋಟೋವನ್ನು ಕಳವು ಮಾಡುವಂತೆ ಪ್ರಚೋದನೆ ನೀಡಿದ್ದರು ಎಂಬ ಸತ್ಯ ಒಪ್ಪಿಕೊಂಡಿದ್ದರು. ಹಾಗಾಗಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: 25ನೇ ಬೆಂಗಳೂರು ಟೆಕ್ ಸಮ್ಮಿಟ್- ಕನ್ನಡದಲ್ಲಿಯೇ ಮಾತು ಶುರು ಮಾಡಿದ ಪ್ರಧಾನಿ ಮೋದಿ

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಮಠದಲ್ಲಿ ಫೋಟೋ ಕಳವು ಪ್ರಕರಣ – ಮಾಜಿ ಶಾಸಕ ಬಸವರಾಜನ್ ವಶಕ್ಕೆ

    ಮುರುಘಾ ಮಠದಲ್ಲಿ ಫೋಟೋ ಕಳವು ಪ್ರಕರಣ – ಮಾಜಿ ಶಾಸಕ ಬಸವರಾಜನ್ ವಶಕ್ಕೆ

    ಚಿತ್ರದುರ್ಗ: ಮುರುಘಾ ಮಠದಲ್ಲಿ (Murugha Mutt) ಫೋಟೋಗಳು (Photo) ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ (SK Basavarajan) ಅವರನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.

    ದಸರಾ ಉತ್ಸವದ ಅಂಗವಾಗಿ ನಡೆದ ಪೀಠಾರೋಹಣದ ಹಿಂದಿನ ದಿನ ಅ.5ರ ಮಧ್ಯರಾತ್ರಿ ವೇಳೆ ರಾಜಾಂಗಣದಲ್ಲಿ ಗೋಡೆಗೆ ಹಾಕಿದ್ದ 47 ಫೋಟೋಗಳು ಕಳ್ಳತನವಾಗಿದ್ದವು. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಹಾಗೂ ರಾಜ್ಯದ ಸಿಎಂಗಳ ಜೊತೆಗಿನ ಮುರುಘಾಶ್ರೀ ಫೋಟೋಗಳನ್ನು ಕಳ್ಳರು ಕದ್ದೊಯ್ದಿದ್ದರು. ಆ ಬಳಿಕ ವಿಚಾರಣೆ ಆರಂಭಿಸಿದ ಪೊಲೀಸರು ನ.7ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್‍ಜೆಎಮ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿಯನ್ನು ಫೋಟೋ ಕಳವು ಮಾಡಿದ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಬಸವರಾಜನ್ ಫೋಟೋವನ್ನು ಕಳವು ಮಾಡುವಂತೆ ಪ್ರಚೋದನೆ ನೀಡಿದ್ದರು ಎಂಬ ಸತ್ಯ ಒಪ್ಪಿಕೊಂಡಿದ್ದರು. ಹಾಗಾಗಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದಲ್ಲಿ ಕಳ್ಳತನ- 47 ಫೋಟೋಗಳು ಕಳವು

    ಬಸವರಾಜನ್ ಜೊತೆ ಮತ್ತೋರ್ವ ಆರೋಪಿ ಶ್ರೀನಿವಾಸ್ ಕೂಡ ಪೊಲೀಸರ ವಶದಲ್ಲಿದ್ದು, ಬಸವರಾಜನ್ ಪತ್ನಿ ಸೌಭಾಗ್ಯ ವಶಕ್ಕೆ ಪಡೆಯಲು ಪೊಲೀಸರ ಶೋಧ ಆರಂಭಿಸಿದ್ದಾರೆ. ಚಿತ್ರದುರ್ಗ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಓಬವ್ವ ವೃತ್ತ ಸೇರಿ ಹಲವೆಡೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. 11ಗಂಟೆ ವೇಳೆಗೆ ಬಸವರಾಜನ್ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]