Tag: sixes

  • ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ- ರೋಹಿತ್

    ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ- ರೋಹಿತ್

    ಮುಂಬೈ: ಹಿಟ್‍ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ‘ಹೀಗೆ ಆಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ರೋಹಿತ್ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ಪರ ಸಿಕ್ಸರ್ ಗಳನ್ನು ಸಿಡಿದ್ದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಆಫ್‍ಸೈಡ್, ಲೆಗ್ ಸೈಡ್ ಹಾಗೂ ಸ್ಟ್ರೇಟ್ ಹಿಟ್ ಸಿಕ್ಸರ್ ಬಾರಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಅನ್ನು 3 ಲಕ್ಷಕ್ಕೂ ಅಧಿಕ ನೆಟ್ಟಿಗರು ವೀಕ್ಷಿಸಿದ್ದು, ಅನೇಕರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    https://www.instagram.com/tv/CBSbhreB6Vd/?utm_source=ig_embed

    ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಎಲ್ಲಾ ಕ್ರಿಕೆಟ್ ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿತ್ತು. ಇತ್ತ ಮುನ್ನೆಚ್ಚರಿಕೆ ಕ್ರಮವಾಗಿ ಆಟಗಾರರು ತಮ್ಮ ಮನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್ ಏಕಾಏಕಿ ಟೂರ್ನಿಯನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಲಾಗಿದೆ.

    ರೋಹಿತ್ ಅವರು ಪ್ರಕೃತಿಯ ಮೇಲಿನ ಪ್ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಸೋಮವಾರ ‘ವಿಶ್ವ ಸಾಗರ ದಿನದಂದು’ ಸಾಗರಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕೆಂದು ಅವರು ನೆಟ್ಟಿಗರನ್ನು ಒತ್ತಾಯಿಸಿದ್ದರು.

  • ಸತತ 5 ಸಿಕ್ಸರ್ ಚಚ್ಚಿದ ಧೋನಿ – ವೈರಲ್ ವಿಡಿಯೋ ನೋಡಿ

    ಸತತ 5 ಸಿಕ್ಸರ್ ಚಚ್ಚಿದ ಧೋನಿ – ವೈರಲ್ ವಿಡಿಯೋ ನೋಡಿ

    ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ 13ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್‍ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್ ಸಿಕ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ, ಕ್ಯಾಪ್ಟನ್ ಎಂ.ಎಸ್.ಧೋನಿ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ನೆಟ್ ಒಳಗೆ ಬ್ಯಾಟಿಂಗ್ ನಡೆಸಿದ್ದ ಎಂಎಸ್‍ಡಿ ಸತತ ಐದು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ವೇಳೆ ನೆಟ್ ಹಿಂದೆ ನಿಂತಿದ್ದ ಸುರೇಶ್ ರೈನಾ ಫುಲ್ ಖುಷ್ ಆಗಿ ಧೋನಿ ಅಬ್ಬರ ನೋಡುತ್ತಿದ್ದರು. ಇದನ್ನೂ ಓದಿ: 37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್

    2019ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಮಾರ್ಚ್ ನಲ್ಲಿ ಆರಂಭವಾಗುವ ಐಪಿಎಲ್‍ನಲ್ಲಿ ಧೋನಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬಂದಿದ್ದು, ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ನಡೆಸಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

    ಧೋನಿ ಇತ್ತೀಚೆಗಷ್ಟೇ ತಮ್ಮ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದರು. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದರು.

  • ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್

    ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್

    ಢಾಕಾ: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಣ ತ್ರಿಕೋನ ಟ್ವೆಂಟಿ-20 ಸರಣಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಈ ಸಾಧನೆಯನ್ನು ಮಾಡಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಅಫ್ಘಾನಿಸ್ತಾನ ತಂಡವು 28 ರನ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

    ಅಫ್ಘಾನಿಸ್ತಾನ ಇನ್ನಿಂಗ್ಸ್ ನ 17 ಹಾಗೂ 18ನೇ ಓವರ್‍ನಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಒಟ್ಟು ಏಳು ಸಿಕ್ಸರ್ ಸಿಡಿಸಿದ್ದಾರೆ. 16 ಓವರ್ ಗಳಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ತೆಂದೈ ಚತಾರಾ ಅವರ 18ನೇ ಓವರ್ ನ ಮೊದಲೆರಡು ಎಸೆತಗಳಲ್ಲಿ ನಬಿ, ಜಾದ್ರನ್ ಜೋಡಿ ಸಿಂಗಲ್ ಕಲೆ ಹಾಕಿತು. ಆ ಬಳಿಕ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ನಬಿ 17ನೇ ಓವರಿನ ಕೊನೆಯ ನಾಲ್ಕು ಎಸೆತಗಳನ್ನು ಸಿಕ್ಸರ್ ಬಾರಿಸಿದರು.

    ಮೊಹಮ್ಮದ್ ನಬಿಗೆ ಕೈಜೋಡಿಸಿದ ಜಾದ್ರನ್ 18ನೇ ಓವರ್‍ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ಪಂದ್ಯದಲ್ಲಿ ಆಲ್ ರೌಂಡರ್ ನಬಿ ಹಾಗೂ ಜಾದ್ರನ್ ಜೋಡಿಯ 69 ರನ್‍ಗಳ ಸಹಾಯದಿಂದ ಅಫ್ಘಾನಿಸ್ತಾನ ತಂಡವು ಐದು ವಿಕೆಟ್ ನಷ್ಟಕ್ಕೆ 197 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

    ಆಲ್ ರೌಂಡರ್ ಮೊಹಮ್ಮದ್ ನಬಿ 18 ಎಸೆತಗಳಲ್ಲಿ 4 ಸಿಕ್ಸರ್ ಸೇರಿ 38 ರನ್ ಗಳಿಸಿದರೆ, ನಜಿಬುಲ್ಲಾ ಜಾದ್ರನ್ 30 ಎಸೆತಗಳನ್ನು ಎದುರಿಸಿ 5 ಬೌಂಡರಿ, 6 ಸಿಕ್ಸರ್ ಸಹಿತ 69 ರನ್‍ಗಳನ್ನು ಕಲೆಹಾಕಿದರು.

    ಬೃಹತ್ ಮೊತ್ತವನ್ನು ಪೇರಿಸಲು ಮುಂದಾದ ಜಿಂಬಾಬ್ವೆ ಬ್ಯಾಟ್ಸ್‍ಮನ್‍ಗಳನ್ನು ಅಫ್ಘಾನಿಸ್ತಾನದ ಬೌಲರ್ ಗಳು ಕಟ್ಟಿಹಾಕಿದರು. ಜಿಂಬಾಬ್ವೆ ಟೀಂ ನಾಯಕ ಬಿಆರ್‍ಎಂ ಟೈಲರ್ 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಸೇರಿ 27 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬಂದ ಬ್ಯಾಟ್ಸ್‍ಮನ್ ಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ತಂಡಕ್ಕೆ ನೆರವಾದ ಆರ್.ಡಬ್ಲ್ಯೂ. ಚಕಬ್ವಾ 22 ಎಸೆತಗಳಲ್ಲಿ 42 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಮೂಲಕ ಜಿಂಬಾಬ್ವೆ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ದಾಖಲಿಸಿ ಸೋಲು ಒಪ್ಪಿಕೊಂಡಿತು.

    ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ನಜಿಬುಲ್ಲಾ ಜಾದ್ರನ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    https://youtu.be/Mk93mhF9xPo

  • ಸಿಕ್ಸರ್‌ಗಳ ಸುರಿಮಳೆ: ಇಂಗ್ಲೆಂಡ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿಶ್ವದಾಖಲೆ

    ಸಿಕ್ಸರ್‌ಗಳ ಸುರಿಮಳೆ: ಇಂಗ್ಲೆಂಡ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿಶ್ವದಾಖಲೆ

    ಬ್ರಿಡ್ಜ್ ಟೌನ್: ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ 23 ಸಿಕ್ಸರ್ ಸಿಡಿಸಿ ವೆಸ್ಟ್ ಇಂಡೀಸ್ ಆಟಗಾರರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದ ತಂಡ ಎಂಬ ಹೆಗ್ಗಳಿಕೆಯನ್ನು ವೆಸ್ಟ್ ಇಂಡೀಸ್ ಪಡೆದುಕೊಂಡಿದೆ.

    2014 ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧವೇ ನ್ಯೂಜಿಲೆಂಡ್ ತಂಡ 22 ಸಿಕ್ಸರ್ ಸಿಡಿಸಿದ್ದು ಇದೂವರೆಗಿನ ದಾಖಲೆ ಆಗಿತ್ತು. ಈ ಪಂದ್ಯ ಸೇರಿದಂತೆ ನಾಲ್ಕನೇ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ 20ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆಯನ್ನು ವೆಸ್ಟ್ ಇಂಡೀಸ್ ತಂಡ ನಿರ್ಮಿಸಿದೆ.

    ವೆಸ್ಟ್ ಇಂಡೀಸ್ ಪರ ಸ್ಫೋಟಕ ಆಟಗಾರ ಕ್ರಿಸ್ ಗೇಲ್ 12 ಸಿಕ್ಸರ್ ಸಿಡಿಸಿದರೆ, ಬ್ರಾವೋ 4, ಆಶ್ಲೇ ನರ್ಸ್ 3 ಹಾಗೂ ಜಾನ್ ಕ್ಯಾಂಪ್ಬೆಲ್, ಹೋಪ್, ಹೇಟ್ಮರ್, ಬಿಶೋ ತಲಾ 1 ಸಿಕ್ಸರ್ ಸಿಡಿಸಿದ್ದರು. ಇದನ್ನು ಓದಿ: ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

    ಕ್ರಿಸ್ ಗೇಲ್ ಉತ್ತಮ ಆಟದಿಂದಾಗಿ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದರೂ ಇಂಗ್ಲೆಂಡ್ ಈ ಮೊತ್ತವನ್ನು ಚೇಸ್ ಮಾಡಿ 6 ವಿಕೆಟ್ ಗಳ ಜಯವನ್ನು ಗಳಿಸಿದೆ. ಆರಂಭಿಕ ಆಟಗಾರ ಜೇಸನ್ ರೇ 123 ರನ್(85 ಎಸೆತ, 15 ಬೌಂಡರಿ, 3 ಸಿಕ್ಸ್), ಜೋ ರೂಟ್ 102 ರನ್(97 ಎಸೆತ, 9 ಬೌಂಡರಿ) ಸಿಡಿಸಿದ ಪರಿಣಾಮ ಇಂಗ್ಲೆಂಡ್ 48.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿ ಗುರಿಮುಟ್ಟಿತು. ಸ್ಫೋಟಕ ಶತಕ ಸಿಡಿಸಿದ ಜೇಸನ್ ರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಗೇಲ್ ನಿವೃತ್ತಿ: 2019ರ ವಿಶ್ವಕಪ್ ಬಳಿಕ ಗೇಲ್ ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಹೇಳಲಿದ್ದಾರೆ. ಕಳೆದ ವಿಶ್ವಕಪ್ ಬಳಿಕ ಗೇಲ್ ಇದುವರೆಗೂ ಕೇವಲ 15 ಏಕದಿನ ಪಂದ್ಯಗಳನ್ನು ಆಡಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಗೆ ಮತ್ತೆ ಆಯ್ಕೆ ಆಗಿದ್ದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಗೇಲ್ ವಿಶ್ವಕಪ್ ಬಳಿಕ ನಿವೃತ್ತಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್‍ಗೂ ಮುನ್ನ ಯುವಿ ಭರ್ಜರಿ ಬ್ಯಾಟಿಂಗ್ – ವಿಡಿಯೋ

    ಐಪಿಎಲ್‍ಗೂ ಮುನ್ನ ಯುವಿ ಭರ್ಜರಿ ಬ್ಯಾಟಿಂಗ್ – ವಿಡಿಯೋ

    ಮಾಲೆ: ಐಪಿಎಲ್ ಆರಂಭಕ್ಕೆ ಮುನ್ನ ವಿಶೇಷ ಶೈಲಿಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ನಡೆಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಮಾಲ್ಡೀವ್ಸ್ ವಿರುದ್ಧದ ಸ್ನೇಹ ಪೂರ್ವಕ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಆಡಿದ್ದಾರೆ. ಈ ಟೂರ್ನಿಯನ್ನು ಜಂಟಿಯಾಗಿ ಮಲ್ಡೀವ್ಸ್ ಕ್ರೀಡಾ ಸಚಿವಾಲಯ ಆಯೋಜಿಸಿದೆ. ಸದ್ಯ ಯುವರಾಜ್ ಸಿಂಗ್ ರಿವರ್ಸ್ ಸ್ವೀಪ್ ಮಾಡಿಕ ಸಿಕ್ಸರ್ ಸಿಡಿಸಿರುವ ವಿಡಿಯೋ ನೋಡಿದ ಅಭಿಮಾನಿಗಗಳು ಸಾಮಾಜಿಕ ಜಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    https://www.instagram.com/p/Bt7mn49n9oa/?utm_source=ig_embed

    2011ರ ವಿಶ್ವಕಪ್ ಭಾಗವಾಗಿದ್ದ ಯುವಿ ಈ ಬಾರಿ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೆ ಫಾರ್ಮ್ ಸಮಸ್ಯೆಯಿಂದ ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯುವಿ ವಿಫಲರಾಗಿದ್ದಾರೆ. 2017 ರ ಜೂನ್ 30 ರಂದು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯ ಹಾಗೂ 2017ರ ಫೆಬ್ರವರಿ 1 ರಂದು ನಡೆದ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು.

    ರಾಷ್ಟ್ರಿಯ ತಂಡದಲ್ಲಿ ಸ್ಥಾನ ಪಡೆಯದಿದ್ದರೂ ಕೂಡ ಯುವಿ ದೇಶಿಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದರು. 8 ಇನ್ನಿಂಗ್ಸ್ ಗಳಿಂದ 65 ರನ್ ಗಳನಷ್ಟೇ ಯುವಿ ಗಳಿಸಿದ್ದರು.

    ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 37 ವರ್ಷದ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಮೊದಲ ಸುತ್ತಿನಲ್ಲಿ ಯುವಿಯನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ತಂಡ 1 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಬಿ ಡಿವಿಲಿಯರ್ಸ್ ಸಿಕ್ಸರ್ ಗೆ ಕೊಹ್ಲಿ ಪ್ರತಿಕ್ರಿಯೆ-ವಿಡಿಯೋ ವೈರಲ್

    ಎಬಿ ಡಿವಿಲಿಯರ್ಸ್ ಸಿಕ್ಸರ್ ಗೆ ಕೊಹ್ಲಿ ಪ್ರತಿಕ್ರಿಯೆ-ವಿಡಿಯೋ ವೈರಲ್

    ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸಿಡಿಸಿದ ಸಿಕ್ಸರ್ ನೋಡಿ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಉತ್ತಮ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ಇಬ್ಬರ 8ನೇ ಶತಕದ ಜೊತೆಯಾಟದಲ್ಲಿ ತಂಡ 118 ರನ್ ಗಳಿಸಿತ್ತು. ಈ ವೇಳೆ ಕೊಹ್ಲಿ ಔಟಾಗಿ ಪೆವಿಲಿಯನ್ ಸೇರಿದ್ದರು. ಆದರೂ ಡಿವಿಲಿಯರ್ಸ್ ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿ ತಂಡದ ಜಯಗಳಿಸಲು ಕಾರಣವಾದರು.

    ಪಂದ್ಯದ 19 ಓವರ್ ವೇಳೆ ಡೆಲ್ಲಿ ಬೌಲರ್ ಬೋಲ್ಟ್ ಎಸೆತವನ್ನು ಎಬಿಡಿ ಸಿಕ್ಸರ್ ಬಾರಿಸಿದರು. ಇದನ್ನು ಕಂಡ ಕೊಹ್ಲಿ ಕುಳಿತಲ್ಲೇ ಅಚ್ಚರಿ ವ್ಯಕ್ತಪಡಿಸಿದ್ದರು. ಬಳಿಕ ಆರ್ ಸಿಬಿ ಡೆಲ್ಲಿ ವಿರುದ್ಧ 5 ವಿಕೆಟ್ ಗೆಲುವು ಪಡೆಯಿತು. ಡೆಲ್ಲಿ ವಿರುದ್ಧದ ಗೆಲುವಿನಿಂದ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಅಲ್ಲದೇ ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿರಿದೆ.

    ಟೂರ್ನಿಯಲ್ಲಿ ಆರ್ ಸಿಬಿ ಇನ್ನು 3 ಪಂದ್ಯಗಳನ್ನು ಆಡಬೇಕಿದ್ದು, ಈ ಪಂದ್ಯಗಳಲ್ಲಿ ಗೆಲುವು ಪಡೆದರೆ 14 ಅಂಕಗಳನ್ನು ಪಡೆಯಲಿದೆ. ಸದ್ಯ ಇದುವರೆಗೂ ಹೈದರಾಬಾದ್ ತಂಡ ಮಾತ್ರ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದೆ. ಆಡಿರುವ 11 ಪಂದ್ಯಗಳಲ್ಲಿ ಹೈದರಾಬಾದ್ 18 ಅಂಕ ಪಡೆದು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಉಳಿದಂತೆ ಚೆನ್ನೈ 14 ಹಾಗೂ ಪಂಜಾಬ್, ಕೋಲ್ಕತ್ತಾ ತಂಡಗಳು ತಲಾ 12 ಅಂಕಗಳನ್ನು ಪಡೆದಿದೆ. ಆದ್ರೆ ಕೋಲ್ಕತ್ತಾ 12 ಪಂದ್ಯಗಳನ್ನು ಆಡಿದೆ.

    https://twitter.com/SPOVDO/status/995523259394281472?

  • ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಢಾಕಾ : ವೆಸ್ಟ್ ಇಂಡೀಸ್‍ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ತಮ್ಮ ಆಟದ ಮೂಲಕ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಹಲವು ಹೊಸ ವಿಶ್ವದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಫೈನಲ್ ಪಂದ್ಯದಲ್ಲಿ 18 ಸಿಕ್ಸರ್‍ಗಳನ್ನು ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಈ ಹಿಂದೆ 2013ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪರ ಕಣಕ್ಕಿಳಿದು ಪುಣೆ ವಾರಿಯರ್ಸ್ ವಿರುದ್ಧ 17 ಸಿಕ್ಸರ್ ಸಿಡಿಸಿ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ನಿರ್ಮಿಸಿದ್ದರು.

    ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ನಲ್ಲಿ ರಂಗ್ಪುರ್ ರೈಡರ್ಸ್ ಪರ ಕಣಕ್ಕಿಳಿದ ಗೇಲ್, ಕೇವಲ 69 ಎಸೆತಗಳಲ್ಲಿ 5 ಬೌಂಡರಿ ಮತ್ತು 18 ಸಿಕ್ಸರ್‍ಗಳ ನೆರವಿನಿಂದ 146 ರನ್ ಬಾರಿಸಿದ್ದಾರೆ. ಈ ಮೂಲಕ ಟಿ20 ಯಲ್ಲಿ 20 ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಗೇಲ್ ದಾಖಲೆಗಳು :
    – ಟಿ20 ಪಂದ್ಯದ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು 18 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ
    – ಟಿ20 ಮಾದರಿ ಫೈನಲ್ ಪಂದ್ಯದಲ್ಲಿ ಹೆಚ್ಚು ರನ್ (146 ರನ್, 69 ಎಸೆತ)ಹೊಡೆದ ಬ್ಯಾಟ್ಸ ಮನ್
    – ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರ
    – ಟಿ20 ಕ್ರಿಕೆಟ್‍ನಲ್ಲಿ 20 ಶತಕಗಳನ್ನು ಹೊಡೆದ ಮೊದಲ ಆಟಗಾರ
    – ಐಪಿಲ್, ಸಿಪಿಲ್, ಬಿಪಿಲ್ ಮತ್ತು ಟಿ20 ಮಾದರಿಯ ಲೀಗ್‍ಗಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರ.

    https://www.youtube.com/watch?v=D4bwutxZSk8

  • ಆಸೀಸ್ ವಿರುದ್ಧ 53 ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ದಾಖಲೆ!

    ಆಸೀಸ್ ವಿರುದ್ಧ 53 ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ದಾಖಲೆ!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗ ಎಂಬ ಖ್ಯಾತಿಗೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 28ರಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.

    ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ್ದ ರೋಹಿತ್ ಶರ್ಮಾ 5 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 65 ರನ್ ಗಳಿಸಿದ್ದರು. 5 ಸಿಕ್ಸರ್ ಗಳ ನೆರವಿನಿಂದ ರೋಹಿತ್ ಶರ್ಮಾ ಸಿಕ್ಸರ್ ಗಳ ಅರ್ಧ ಶತಕದ ಗಡಿ ದಾಟಿದರು. ಈ ಮೂಲಕ ಆಸೀಸ್ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಗೆ ಪಾತ್ರರಾದರು. ರೋಹಿತ್ ಶರ್ಮಾ ಒಟ್ಟು 27 ಪಂದ್ಯಗಳಲ್ಲಿ 53 ಸಿಕ್ಸರ್ ಬಾರಿಸಿದ್ದಾರೆ.

     ಟಾಪ್ 10 ಸಿಕ್ಸರ್ಸ್: ಆಸ್ಟ್ರೇಲಿಯಾ ವಿರುದ್ಧ ಹೆಚ್ಚು ಸಿಕ್ಸರ್ ಬಾರಿಸಿ ರೋಹಿತ್ ಶರ್ಮಾ ಸೇರಿ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ 43 ಪಂದ್ಯಗಳಿಂದ 39 ಸಿಕ್ಸ್, ಭಾರತದ ಸಚಿನ್ ತೆಂಡುಲ್ಕರ್ 71 ಪಂದ್ಯಗಳಲ್ಲಿ 35, ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲ್ಲಂ 47 ಪಂದ್ಯದಲ್ಲಿ 33, ಪಾಕಿಸ್ತಾನದ ಶಹೀದ್ ಆಫ್ರಿದಿ 45 ಪಂದ್ಯಗಳಿಂದ 28 ಸಿಕ್ಸರ್, ಇಂಡಿಯಾದ ಮಹೇಂದ್ರ ಸಿಂಗ್ ಧೋನಿ 47 ಪಂದ್ಯಗಳಿಂದ 27, ವಿಂಡೀಸ್ ನ ಕೀರನ್ ಪೊಲಾರ್ಡ್ 21 ಪಂದ್ಯಗಳಿಂದ 27, ವಿಂಡೀಸ್ ನ ವಿಲಿಯನ್ ರಿಚಡ್ರ್ಸ್ 54 ಪಂದ್ಯಗಳಿಂದ 26, ಪಾಕಿಸ್ತಾನದ ವಸೀಂ ಅಕ್ರಂ 49 ಪಂದ್ಯಗಳಲ್ಲಿ 26, ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 23 ಪಂದ್ಯಗಳಲ್ಲಿ 24 ಸಿಕ್ಸರ್ ಬಾರಿಸಿ ದಾಖಲೆ ಮಾಡಿದ್ದಾರೆ.