Tag: Sixers

  • ‘ಸಿಕ್ಸರ್ ಹೊಡೆದ ಚೆಂಡನ್ನು ಬ್ಯಾಟ್ಸ್‌ಮನ್ ತೆಗೆದುಕೊಂಡು ಬರಲಿ’

    ‘ಸಿಕ್ಸರ್ ಹೊಡೆದ ಚೆಂಡನ್ನು ಬ್ಯಾಟ್ಸ್‌ಮನ್ ತೆಗೆದುಕೊಂಡು ಬರಲಿ’

    ಮುಂಬೈ: ಕೊರೊನಾ ಎಫೆಕ್ಟ್ ನಿಂದ ಹಲವು ಕ್ರೀಡಾ ಚಟುವಟಿಕೆಗಳನ್ನು ಮುಂದೂಡಲಾಗಿದೆ. ಆಟಗಾರರು ಕೂಡ ಮನೆಯಲ್ಲೇ ಇರುವುದರಿಂದ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭವಾದರೆ ಫಾರ್ಮ್‍ಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಟೀಂ ಇಂಡಿಯಾ ಆಟಗಾರ ಚಹಲ್ ಹೇಳಿದ್ದಾರೆ.

    ಆಟಗಾರರು ಬಹುಬೇಗ ಫಾರ್ಮ್‍ಗೆ ಮರಳಬೇಕಾದರೆ ಯಾವುದೇ ಟೂರ್ನಿಗೂ ಮುನ್ನ ಐಪಿಎಲ್ ನಿರ್ವಹಿಸಿದರೆ ಅದು ಸಹಕಾರಿಯಾಗುತ್ತದೆ ಎಂದು ಚಹಲ್ ಅಭಿಪ್ರಾಯಪಟ್ಟಿದ್ದಾರೆ.

    ಇದೇ ವೇಳೆ ಚೆಂಡನ್ನು ಶೈನ್ ಮಾಡಲು ಆಟಗಾರರು ಬಳಸುವ ವಿಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಚಹಲ್, ಚೆಂಡು ಹಳೆಯದಾದಂತೆ ಶೈನ್ ಉಳಿಸಿಕೊಳ್ಳಲಿದ್ದಾರೆ ಬೌಲರ್ ಗಳಿಂದ ಸ್ವಿಂಗ್ ಮಾಡಲು ಸಾಧ್ಯವಿಲ್ಲ. ಆಗ ವಿಕೆಟ್ ಪಡೆಯುವುದು ಕೂಡ ಕಷ್ಟಸಾಧ್ಯವಾಗುತ್ತದೆ. ಉಳಿದಂತೆ ಬ್ಯಾಟ್ಸ್ ಮನ್ ಸಿಕ್ಸರ್ ಸಿಡಿಸಿದರೆ ಆತನೇ ಆ ಚೆಂಡನ್ನು ಮತ್ತೆ ತಂಡುಕೊಡುವಂತೆ ಬೇಕು ಎಂಬ ನಿಯಮ ಜಾರಿ ಮಾಡುವ ಅಗತ್ಯವಿದೆ ಎಂದು ಚಹಲ್ ತಮಾಷೆಯಾಗಿ ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಅಕ್ಟೋಬರ್ ನಲ್ಲಿ ಆರಂಭವಾಗಬೇಕಿರುವ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಅನುಮಾನ ಉಂಟಾಗುತ್ತಿದೆ. ಈಗಾಗಲೇ ಐಸಿಸಿ ಸಭೆ ನಡೆಸಿ ವಿಶ್ವಕಪ್ ಆಯೋಜನೆ ಕುರಿತು ಚರ್ಚೆ ನಡೆಸಿದರು ಆ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಅಲ್ಲದೇ ಕೊರೊನಾ ತೀವ್ರತೆ ಇದೇ ರೀತಿ ಮುಂದುವರಿದರೆ ಟಿ20 ವಿಶ್ವಕಪ್ 2021ರ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಚಿಂತನೆಗೆ ಪ್ರಮುಖ ಕಾರಣ ಅಕ್ಟೋಬರ್ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಖಾಲಿ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಟೂರ್ನಿ ಆಯೋಜಿಸಲು ಐಸಿಸಿ ಸಿದ್ಧವಿಲ್ಲ ಎನ್ನಲಾಗಿದೆ.

  • ಮತ್ತೊಂದು ದಾಖಲೆ ಸನಿಹದಲ್ಲಿ ‘ಹಿಟ್ ಮ್ಯಾನ್’

    ಮತ್ತೊಂದು ದಾಖಲೆ ಸನಿಹದಲ್ಲಿ ‘ಹಿಟ್ ಮ್ಯಾನ್’

    – ಗೇಲ್, ಅಫ್ರಿದಿ ಎಲೈಟ್ ಪಟ್ಟಿಗೆ ರೋಹಿತ್

    ಮುಂಬೈ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡ ಗೆಲುವಿಗೆ ಕಾರಣರಾದರು. ಅಲ್ಲದೇ ಪಂದ್ಯದಲ್ಲಿ 43 ಎಸೆತಗಳಲ್ಲಿ 6 ಸಿಕ್ಸರ್ ಗಳ ನೆರವಿನಿಂದ 85 ರನ್ ಸಿಡಿಸಿದ್ದರು. ಸದ್ಯ ರೋಹಿತ್ ಶರ್ಮಾ ಭಾರತ ಪರ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

    ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ 2ನೇ ಟಿ20 ಪಂದ್ಯದಲ್ಲಿ 6 ಸಿಕ್ಸರ್ ಸಿಡಿಸುವುದರೊಂದಿಗೆ ಒಟ್ಟಾರೆ 398 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, 2 ಸಿಕ್ಸರ್ ಸಿಡಿಸಿದರೆ ವೃತ್ತಿ ಜೀವನದಲ್ಲಿ 400 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಅಲ್ಲದೇ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ರೋಹಿತ್ ಪಡೆಯಲಿದ್ದಾರೆ. ಬಾಂಗ್ಲಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡುವ ಅವಕಾಶವನ್ನು ರೋಹಿತ್ ಪಡೆದಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ವಿಂಡೀಸ್ ದಿಗ್ಗಜ ಆಟಗಾರ ಗೇಲ್ 534 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದು, ಪಾಕ್‍ನ ಶಹೀದ್ ಅಫ್ರಿದಿ 476 ಸಿಕ್ಸರ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಅಂದಹಾಗೇ 32 ವರ್ಷದ ರೋಹಿತ್ ಇದುವರೆಗೂ ಏಕದಿನ ಕ್ರಿಕೆಟ್‍ನಲ್ಲಿ 232, ಟೆಸ್ಟ್ ಪಂದ್ಯಗಳಲ್ಲಿ 51 ಹಾಗೂ ಟಿ20 ಮಾದರಿಯಲ್ಲಿ 115 ಸಿಕ್ಸರ್ ಸಿಡಿಸಿದ್ದಾರೆ.

    2ನೇ ಟಿ20 ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರ ಚಹಲ್‍ರ ಸಂದರ್ಶನದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಸಿಕ್ಸರ್ ಸಿಡಿಸಿದ ಕುರಿತ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಸಿಕ್ಸರ್ ಸಿಡಿಸಲು ದೊಡ್ಡ ದೇಹ, ಮಾಂಸಖಂಡಗಳು ಅಗತ್ಯವಿಲ್ಲ. ಬೇಕಾದರೆ ನೀನು (ಚಹಲ್) ನೀನು ಸಿಕ್ಸರ್ ಸಿಡಿಸಬಹುದು. ಸಿಕ್ಸರ್ ಸಿಡಿಸಲು ಪವರ್ ಒಂದೇ ಮುಖ್ಯವಲ್ಲ, ಟೈಮಿಂಗ್ ಮುಖ್ಯವಾಗುತ್ತದೆ ಎಂದು ರೋಹಿತ್ ಹೇಳಿದ್ದರು. ಅಲ್ಲದೇ ಪಂದ್ಯದಲ್ಲಿ ಸತತ 3 ಸಿಕ್ಸರ್ ಸಿಡಿಸಿದ ಬಳಿಕ 4ನೇ ಸಿಕ್ಸರ್ ಸಿಡಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಚೆಂಡನ್ನು ಬ್ಯಾಟ್‍ನ ಮಧ್ಯದಲ್ಲಿ ಹೊಡೆಯಬೇಕು ಎಂಬ ಸಂಗತಿ ಬ್ಯಾಟ್ಸ್ ಮನ್ ತಲೆಯಲ್ಲಿರಬೇಕು. ಆಗ ಸಿಕ್ಸರ್ ಹೊಡೆಯಲು ಸಾಧ್ಯ ಎಂದು ವಿವರಿಸಿದ್ದರು.

  • ತಾನು ಹೊಡೆದ ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರೋಹಿತ್

    ತಾನು ಹೊಡೆದ ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಆಟೋಗ್ರಾಫ್ ನೀಡಿದ ರೋಹಿತ್

    ಬೆಂಗಳೂರು: ವಿಶ್ವಕಪ್‍ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ 4 ಶತಕ ಸಿಡಿಸಿ ಮಿಂಚುತ್ತಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್, ಈ ವೇಳೆ ಅವರು ಹೊಡೆದ ಸಿಕ್ಸರ್ ಅಭಿಮಾನಿಯನ್ನು ಗಾಯಗೊಳಿಸಿತ್ತು. ಪಂದ್ಯದ ನಂತರ ಅ ಅಭಿಮಾನಿಗೆ ಆಟೋಗ್ರಾಫ್ ನೀಡಿ ರೋಹಿತ್ ಮಾನವೀಯತೆ ಮೆರೆದಿದ್ದಾರೆ.

    ಬಾಂಗ್ಲಾ ನಡುವಿನ ಪಂದ್ಯದಲ್ಲಿ ಭಾರತ 28 ರನ್‍ಗಳ ಅಂತರದಲ್ಲಿ ಗೆದ್ದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಕೇವಲ 92 ಎಸೆತಗಳಲ್ಲಿ 102 ರನ್ (7 ಬೌಂಡರಿ, 5 ಸಿಕ್ಸರ್) ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಮೂಲಕ ಟೂರ್ನಿಯಲ್ಲಿ 3 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

    ಈ ವೇಳೆ ರೋಹಿತ್ ಬಾರಿಸಿದ ಸಿಕ್ಸ್ ಒಂದು ಪಂದ್ಯ ನೋಡಲು ಬಂದಿದ್ದ ಅಭಿಮಾನಿ ಮೀನಾ ಎಂಬುವವರಿಗೆ ಬಡಿದಿತ್ತು. ಇದನ್ನು ಗಮನಿಸಿದ ಭಾರತ ಉಪನಾಯಕ ರೋಹಿತ್ ಶರ್ಮಾ ಅವರು ಪಂದ್ಯದ ಬಳಿಕ ಮೀನಾ ಅವರನ್ನು ಭೇಟಿಯಾಗಿ ತಾನು ಆಟೋಗ್ರಾಫ್ ಹಾಕಿದ ಹಳದಿ ಬಣ್ಣದ ಟೋಪಿಯೊಂದನ್ನು ನೀಡಿದ್ದಾರೆ.

    ಇದಕ್ಕೂ ಮುನ್ನ ಅವರು ಬಾಂಗ್ಲಾ ವಿರುದ್ಧದ ಪಂದ್ಯವನ್ನು ನೋಡಲು ಬಂದಿದ್ದ ಭಾರತೀಯ ಕ್ರಿಕೆಟ್‍ನ ಹಿರಿಯ ಅಭಿಮಾನಿ 87 ವರ್ಷದ ಚಾರುಲತಾ ಅವರನ್ನು ಭೇಟಿ ಮಾಡಿ ಅವರನ್ನು ತಬ್ಬಿಕೊಂಡು ಅವರ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದರು.

    ರೋಹಿತ್ ದಾಖಲೆ
    ಬಾಂಗ್ಲಾ ನಡುವಿನ ಪಂದ್ಯದಲ್ಲಿ 92 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಬೌಂಡರಿ, 5 ಸಿಕ್ಸರ್ ಗಳ ನೆರವಿನಿಂದ 104 ರನ್ ಗಳಿಸಿದರು. ಏಕದಿನ ಕ್ರಿಕೆಟ್ ನಲ್ಲಿ 26 ಶತಕಗಳನ್ನು ಪೂರ್ಣಗೊಳಿಸಿದ ರೋಹಿತ್, ಟೂರ್ನಿಯಲ್ಲಿ 500 ಪ್ಲಸ್ ರನ್ ಗಳಿಸಿದ ಭಾರತ ಆಟಗಾರ ಎನಿಸಿಕೊಂಡರು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ 4 ಶತಕ ಸಿಡಿಸಿದ 2ನೇ ಆಟಗಾರ ಹಾಗೂ ಭಾರತ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಈ ಬಾರಿಯ ಟೂರ್ನಿಯಲ್ಲಿ 544 ರನ್ ಗಳಿಸಿರುವ ರೋಹಿತ್ ಟಾಪ್ ರನ್ ಸ್ಕೋರರ್ ಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದಿದ್ದು, ಬಾಂಗ್ಲಾದ ಶಕೀಬ್ ಅಲ್ ಹಸನ್ 542 ರನ್ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. 516 ರನ್ ಗಳಿಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 3ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 2003ರಲ್ಲಿ ನಡೆದ ಟೂರ್ನಿಯಲ್ಲಿ 673 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಸಚಿನ್ ಅವರನ್ನು ಹಿಂದಿಕ್ಕಲು ರೋಹಿತ್‍ಗೆ ಕೇವಲ 129 ರನ್ ಅಗತ್ಯವಿದೆ. ವಿಶ್ವಕಪ್ ಟೂರ್ನಿಯಲ್ಲಿ ವೇಗವಾಗಿ ಅಂದರೆ 15 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಿಡಿಸಿದ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ.