Tag: six pack

  • ರಾಜಮೌಳಿ ಸಿನಿಮಾಗಾಗಿ ಮಹೇಶ್ ಬಾಬು ಸಿಕ್ಸ್ ಪ್ಯಾಕ್ ತಯಾರಿ

    ರಾಜಮೌಳಿ ಸಿನಿಮಾಗಾಗಿ ಮಹೇಶ್ ಬಾಬು ಸಿಕ್ಸ್ ಪ್ಯಾಕ್ ತಯಾರಿ

    ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ನ ಚಿತ್ರ ಇನ್ನೂ ಸೆಟ್ಟೇರಿಲ್ಲ. ಕಥೆ ಕೂಡ ಲಾಕ್ ಆಗಿಲ್ಲ. ಆದರೂ, ಈ ಚಿತ್ರದ ಬಗ್ಗೆ ನಿರಂತರವಾಗಿ ನಾನಾ ರೀತಿಯ ಸುದ್ದಿಗಳು ಬರುತ್ತಲೇ ಇವೆ. ಇದೀಗ ಮಹೇಶ್ ಬಾಬು ಈ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ (Six Pack) ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಅವರದ್ದು ಹೊಸ ಬಗೆಯ ಪಾತ್ರವಾಗಿದ್ದರಿಂದ ಬಹಿರಂಗವಾಗಿ ಕಾಣಿಸಿಕೊಳ್ಳದಂತೆ ನಟನಿಗೆ ರಾಜಮೌಳಿ ಷರತ್ತು ಕೂಡ ಹಾಕಿದ್ದಾರಂತೆ.

    ಈ ನಡುವೆ ಚಿತ್ರದ ಟೈಟಲ್ ಬಗ್ಗೆಯೂ ಸುದ್ದಿಯೊಂದು ಹರಿದಾಡುತ್ತಿದೆ. ರಾಜಮೌಳಿ (Rajamouli) ಮತ್ತು ಮಹೇಶ್ ಬಾಬು (Mahesh Babu) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಸಿಂಪಲ್ ಆಗಿರುವಂತಹ ಶೀರ್ಷಿಕೆ (Title) ಇಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜಮೌಳಿ ಎರಡು ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಒಂದನ್ನು ಪಕ್ಕಾ ಮಾಡಲಿದ್ದಾರೆ. ಮಹಾರಾಜ್ ಅಥವಾ ಚಕ್ರವರ್ತಿ ಎನ್ನುವ ಹೆಸರನ್ನು ರಾಜಮೌಳಿ ಆಯ್ಕೆ ಮಾಡಿದ್ದಾರೆ.

    ಒಂದು ಕಡೆ ಶೀರ್ಷಿಕೆ ಪಕ್ಕಾ ಮಾಡುವಲ್ಲಿ ರಾಜಮೌಳಿ ತೊಡಗಿದ್ದರೆ ಮತ್ತೊಂದು ಕಡೆ ಈ ಸಿನಿಮಾಗೆ ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ (Chelsea Elizabeth Islan) ಅವರನ್ನು ನಾಯಕಿಯಾಗಿ ಚಿತ್ರತಂಡ ಫೈನಲ್ ಮಾಡಿದೆ ಎನ್ನುವ ಸುದ್ದಿಯೂ ಇದೆ. ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದರ ಜೊತೆಗೆ ಚಿತ್ರಕ್ಕೆ ಬೇಕಾಗಿರೋ ಪಾತ್ರಧಾರಿಗಳ ಹುಡುಕಾಟ ಕೂಡ ನಡೆಯುತ್ತಿದೆ.

    ನಟಿ ಚೆಲ್ಸಿಯಾ ಅವರನ್ನು ಕೆಲದಿನಗಳ ಹಿಂದೆ ಸ್ಕ್ರೀನ್ ಟೆಸ್ಟ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ. ಇಂಡೋನೇಷಿಯಾದ ಮೂಲದ ಈ ನಟಿ ‘ಟೇಂಟಂಗಾ ಮೆಸಾ ಗಿಟು’ ಹೆಸರಿನ ಟಿವಿ ಸರಣಿ ಮೂಲಕ ಜನಪ್ರಿಯತೆ ಗಳಿಸಿದವರು. ನಟ ಮಹೇಶ್ ಬಾಬುಗೆ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ನಾಯಕಿ ಎಂಬ ಸುದ್ದಿ ಚಿತ್ರತಂಡದಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಸುದ್ದಿ ಕೇಳಿರೋ ಪ್ರಿನ್ಸ್ ಮಾತ್ರ ಸಖತ್ ಖುಷಿಪಟ್ಟಿದ್ದಾರೆ. ವಿಷ್ಯ ಏನೇ ಇರಲಿ ಸಿನಿಮಾ ಬೇಗ ತೆರೆಯ ಮೇಲೆ ನೋಡಬೇಕು ಅಂತ ಅಭಿಮಾನಿಗಳು ಕಾಯ್ತಿದ್ದಾರೆ.

  • ಹಾಡಿಗಾಗಿ ಸಿಕ್ಸ್ ಪ್ಯಾಕ್ ಮಾಡಿದ ದುನಿಯಾ ವಿಜಯ್

    ಹಾಡಿಗಾಗಿ ಸಿಕ್ಸ್ ಪ್ಯಾಕ್ ಮಾಡಿದ ದುನಿಯಾ ವಿಜಯ್

    ದುನಿಯಾ ವಿಜಯ್ ಸದ್ಯ ಭೀಮ (Bheem) ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಜಿಮ್ ನಲ್ಲಿ ಸಾಕಷ್ಟು ಬೆವರು ಸುರಿಸುತ್ತಿದ್ದಾರೆ. ಭೀಮ ಸಿನಿಮಾದ ಹಾಡೊಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಹಾಡಿಗೆ ಅವರು ಸಿಕ್ಸ್ ಪ್ಯಾಕ್ (Six Pack) ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಜಿಮ್ ನಲ್ಲಿ ಬೆವರು ಸುರಿಸುತ್ತಿರುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ನಿಖಿಲ್ ಚಿತ್ರದಲ್ಲಿ ವಿಜಯ್

    ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸುಭಾಸ್ಕರನ್ ಅವರು ನಿರ್ಮಿಸುತ್ತಿರುವ, ಲಕ್ಷ್ಮಣ್ ನಿರ್ದೇಶನದಲ್ಲಿ ಯುವರಾಜ ನಿಖಿಲ್ ಕುಮಾರ್ (Nikhil Kumar) ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.

    ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ (Duniya Vijay) ಅವರು ನಟಿಸುತ್ತಿದ್ದಾರೆ.  ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನ್ನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.

     

    ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಅನೇಕರು ಶೂಟಿಂಗ್ ಸೆಟ್ ಗೆ ಭೇಟಿ ಕೊಟ್ಟು ಕುತೂಹಲವನ್ನಂತೂ ಮೂಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಕ್ಸ್ ಪ್ಯಾಕ್ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅರ್ಜುನ್ ತೆಂಡೂಲ್ಕರ್

    ಸಿಕ್ಸ್ ಪ್ಯಾಕ್ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅರ್ಜುನ್ ತೆಂಡೂಲ್ಕರ್

    ಮುಂಬೈ: ಐಪಿಎಲ್ (IPL) ಬಳಿಕ ಕಾಣಿಸಿಕೊಳ್ಳುತ್ತಿರುವ ಯುವ ವೇಗಿ ಅರ್ಜುನ್ ತೆಂಡೂಲ್ಕರ್ (Arjun Tendulkar) ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

    ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯಕ್ಕಾಗಿ ಆಡಲಿರುವ ಅರ್ಜುನ್ ತೆಂಡೂಲ್ಕರ್ ಸಿಕ್ಸ್‌ಪ್ಯಾಕ್‌ (Six Pack) ಫೋಟೋವೊಂದನ್ನ ಹಂಚಿಕೊಂಡಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    ಕಳೆದ ಜೂನ್ ತಿಂಗಳಲ್ಲಿ ನಡೆದ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗೋವಾ ಪರ ಆಟವಾಡಿದ್ದ ಅರ್ಜುನ್ ತೆಂಡೂಲ್ಕರ್ 20 ದಿನಗಳ ಶಿಬಿರಕ್ಕೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಆಗಮಿಸಿದ್ದರು. 130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಎಡಗೈ ವೇಗಿ ಈಗಾಗಲೇ ರಣಜಿಯಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ತಂಡವನ್ನ ಮುನ್ನಡೆಸಲಿದ್ದಾರೆ.

    2021ರಲ್ಲಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದ ಅರ್ಜುನ್ ತೆಂಡೂಲ್ಕರ್ 2022ರ ಐಪಿಎಲ್ ಹರಾಜಿನಲ್ಲಿ ಅರ್ಜುನ್ ಮುಂಬೈ ಇಂಡಿಯನ್ಸ್ಗೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. 2021ರಲ್ಲಿ ಐಪಿಎಲ್‌ಗೂ ಮುನ್ನವೇ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದರು. 2021ರ ಆವೃತ್ತಿಯಲ್ಲಿ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. 2022ರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾದರೂ ಮೈದಾನದಲ್ಲಿ ಆಡುವ ಅವಕಾಶ ಸಿಗಲಿಲ್ಲ.

    2023ರ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತು. ನಾಲ್ಕು ಪಂದ್ಯಗಳಲ್ಲಿ ಮುಂಬೈ ಪರ ಆಡಿದ ಅರ್ಜುನ್ ಮೂರು ವಿಕೆಟ್‌ಗಳನ್ನ ಪಡೆದು 92 ರನ್ ಬಿಟ್ಟುಕೊಟ್ಟರು. ಅದರಲ್ಲೂ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 31 ರನ್ ಬಿಟ್ಟುಕೊಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಕ್ಸ್ ಪ್ಯಾಕ್ ನಲ್ಲಿ ತಾಪ್ಸಿ ಪನ್ನು: ನಟಿಯ ಕಸರತ್ತಿಗೆ ಅಭಿಮಾನಿಗಳ ಪ್ರಶಂಸೆ

    ಸಿಕ್ಸ್ ಪ್ಯಾಕ್ ನಲ್ಲಿ ತಾಪ್ಸಿ ಪನ್ನು: ನಟಿಯ ಕಸರತ್ತಿಗೆ ಅಭಿಮಾನಿಗಳ ಪ್ರಶಂಸೆ

    ಸಾಮಾನ್ಯವಾಗಿ ದೇಹ ಹುರಿಗೊಳಿಸುವಲ್ಲಿ ಹುಡುಗರೇ ಹೆಚ್ಚಿನ ಆಸಕ್ತಿವಹಿಸುತ್ತಾರೆ. ಅದರಲ್ಲೂ ಸಿಕ್ಸ್ ಪ್ಯಾಕ್ (Six Pack), ಏಟ್ ಪ್ಯಾಕ್ ರೀತಿಯ ಕಸರತ್ತುಗಳನ್ನು ಹುಡುಗಿಯರು ಮಾಡಲು ಹೋಗುವುದಿಲ್ಲ. ಹಾಗಂತ ಮಾಡುವುದೇ ಇಲ್ಲ ಅಂತಲ್ಲ. ಬೆರಳೆಣಿಕೆಯಷ್ಟು ನಟಿಯರು ಇಂತಹ ಸಿಕ್ಸ್ ಪ್ಯಾಕ್ ನಲ್ಲಿ ಅಚ್ಚರಿಗೊಳಿಸಿದ್ದೂ ಇದೆ. ಈಗ ಅಂಥದ್ದೇ ಹಾದಿ ಹಿಡಿದಿದ್ದಾರೆ ಬಾಲಿವುಡ್ (Bollywood) ನಟಿ ತಾಪ್ಸಿ ಪನ್ನು.

    ತಾಪ್ಸಿ (Taapsee Pannu)ಇಂಥದ್ದೊಂದು ಕಸರತ್ತು ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಜಿಮ್ ನಲ್ಲಿ ದೇಹ ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಮಾಡಿರುವ ಕುರಿತು ಅವರ ಜಿಮ್ ಟ್ರೈನರ್ ಹೇಳಿಕೊಂಡಿದ್ದಾರೆ. ತಾಪ್ಸಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಟೈಗರ್ ಶ್ರಾಫ್ (Tiger Shroff) ಗೆ ಕಾಂಪಿಟೇಷನ್ ಕೊಡುವುದಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಡೇಟಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಸೃಷ್ಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ

    ತಾಪ್ಸಿ ಇತ್ತೀಚಿನ ದಿನಗಳಲ್ಲಿ ವಿವಾದದ ಮೂಲಕ ಗಮನ ಸೆಳೆದಿದ್ದರು. ಮಾದಕ ಉಡುಗೆಯಲ್ಲಿ ಲಕ್ಷ್ಮಿ ಡಾಲರ್ ಹಾಕಿದ್ದಕ್ಕೆ ಟ್ರೋಲ್ ಆಗಿದ್ದರು. ಆದರೆ, ಈ ಬಾರಿ ಸಿಕ್ಸ್ ಪ್ಯಾಕ್ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಕೂಡ ತಾಪ್ಸಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ಕೂಡ ವ್ಯಕ್ತ ಪಡಿಸಿದ್ದಾರೆ.

  • ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

    ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

    ಲ್ಲ ಹುಡುಗರಿಗೂ ಸಿಕ್ಸ್ ಪ್ಯಾಕ್ ಮಾಡಬೇಕು, ಬಾಡಿ ಬಿಲ್ಡ್ ಮಾಡಬೇಕು ಎಂಬ ಕನಸು ಇರುತ್ತೆ. ಅದಕ್ಕಾಗಿ ತುಂಬಾ ತಿಂಗಳು ಕಷ್ಟ ಪಡಬೇಕು. ಆದರೆ ಇಲ್ಲೊಬ್ಬ ವ್ಯಕ್ತ ಕೇವಲ ಎರಡೇ ದಿನಗಳಲ್ಲಿ ಸಿಕ್ಸ್ ಪಡೆದು ನೆಟ್ಟಿಗರಿಗೆ ಅಚ್ಚರಿ ಉಂಟು ಮಾಡಿದ್ದಾನೆ. ಏನಿದು ಎರಡೇ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಪಡೆಯುವುದಕ್ಕೆ ಸಾಧ್ಯನಾ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ವೀಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

    ಇಲ್ಲೊಬ್ಬ ವ್ಯಕ್ತಿಗೆ ಯಾವುದೇ ರೀತಿಯ ವರ್ಕೌಟ್ ಮಾಡದೆ ಸರಳವಾಗಿ ಸಿಕ್ಸ್ ಪಡೆಯಬೇಕು ಎಂಬ ಕನಸಿತ್ತು. ಮೊದಲ ದಿನ ವರ್ಕೌಟ್ ಮಾಡಿದ್ರೂ ಅಪ್ಸ್ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ. ಈ ಹಿನ್ನೆಲೆ ಯೋಚಿಸಿದ ಆತ, ಟ್ಯಾಟೂ ಹಾಕುವವರ ಬಳಿ ಹೋಗಿದ್ದಾನೆ. ಅವರಿಗೆ ಸಿಕ್ಸ್ ಪ್ಯಾಕ್ ಟ್ಯಾಟೂ ಹಾಕುವಂತೆ ಕೇಳಿಕೊಂಡಿದ್ದಾನೆ. ಈ ಹಿನ್ನೆಲೆ ಅವರು ಸಹ ಸಿಕ್ಸ್ ಪ್ಯಾಕ್ ರೀತಿಯಲ್ಲಿಯೇ ಟ್ಯಾಟೂ ಹಾಕಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದ ಮಹಿಳೆ ಪ್ರಾಣ ಉಳಿಸಿದ ಕಣಜಗಳು 

     

    View this post on Instagram

     

    A post shared by Dean Gunther (@dean.gunther)

    ಈ ವೀಡಿಯೋವನ್ನು ಗುಂಥರ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನನ್ನ ಬಳಿ ಬಂದ ಒಬ್ಬ ವ್ಯಕ್ತಿಗೆ ಸಿಕ್ಸ್ ಪ್ಯಾಕ್ ಬೇಕಿತ್ತು. ಅದಕ್ಕೆ ಈ ಟ್ಯಾಟೂ. ನಿಮ್ಮ ಬಳಿ ಮಂತ್ರದಂಡ ಇದ್ದಾಗ ಯಾರಿಗೆ ಜಿಮ್ ಬೇಕು. 2 ದಿನಗಳಲ್ಲಿ 6 ಪ್ಯಾಕ್! ಆನಂದಿಸಿ! ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Dean Gunther (@dean.gunther)

    ಈ ಟ್ಯಾಟೂ ಹಾಕಲು ಇವರು ಸುಮಾರು 2 ದಿನ ತೆಗೆದುಕೊಂಡಿದ್ದಾರೆ. ಆದರೂ ಗುಂಥರ್, ಏನೇ ಆದರೂ ಜಿಮ್ ಬಿಡಬೇಡಿ ಎಂದು ಹೇಳಿದ್ದಾರೆ. ಈ ವೀಡಿಯೋ ಮತ್ತು ಫೋಟೋ ನೋಡಿದ ನೆಟ್ಟಿಗರು, ವ್ಹಾವ್ ಸೂಪರ್ ವರ್ಕ್, ಇದು ಅದ್ಭುತವಾಗಿ ಕಾಣುತ್ತಿದೆ. ಇದು ನಿಮ್ಮ ಕ್ಲೈಂಟ್‍ಗೆ ವಿಶ್ವಾಸವನ್ನು ನೀಡಿದೆ. ಈ ಅದ್ಭುತ ಕೆಲಸವನ್ನು ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ! 

    ಟ್ಯಾಟೂವನ್ನು ಉತ್ತಮವಾಗಿ ಹಾಕಿದ್ದೀರಾ. ನಿಮ್ಮ ಈ ಕಲ್ಪನೆ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

     

  • ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡಿದ ರಣ್‍ವೀರ್ – ಸಿಕ್ಸ್ ಪ್ಯಾಕ್ ನೋಡಿ ಹುಡ್ಗೀರು ಕ್ಲೀನ್ ಬೋಲ್ಡ್

    ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡಿದ ರಣ್‍ವೀರ್ – ಸಿಕ್ಸ್ ಪ್ಯಾಕ್ ನೋಡಿ ಹುಡ್ಗೀರು ಕ್ಲೀನ್ ಬೋಲ್ಡ್

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಬಾಸ್ಕೆಟ್ ಬಾಲ್ ಆಡುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಹೆಣೈಕ್ಳು ರಣ್‍ವೀರ್ ಹಾಟ್ ಲುಕ್‍ಗೆ ಫುಲ್ ಫಿದಾ ಆಗಿದ್ದಾರೆ.

    Ranveer Singh

    ತಮ್ಮ ಮೊದಲ ಸಿನಿಮಾ ಬ್ಯಾಂಡ್ ಬಾಜ ಭಾರತ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ರಣ್‍ವೀರ್ ಸಿಂಗ್, ನಂತರ ಅಭಿನಯಿಸಿದ ರಾಮ್-ಲೀಲಾ ಸಿನಿಮಾ ಮೂಲಕ ಹುಡುಗಿಯರ ಹಾಟ್ ಫೇವರೇಟ್ ಹೀರೋ ಆದರು ಎಂದರೆ ತಪ್ಪಾಗಲಾರದು. ಅಲ್ಲದೇ ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುವುದರ ಜೊತೆಗೆ ರಣ್ವೀರ್​ಗೆ  ಬಿ-ಟೌನ್‍ನಲ್ಲಿ ಟಾಪ್ ನಟ ಪಟ್ಟ ಗಿಟ್ಟಿಸಿಕೊಟ್ಟಿತು. ಇದನ್ನೂ ಓದಿ: ರಣ್‍ವೀರ್ ಸ್ಟ್ರಾಂಗ್ ಲುಕ್‍ಗೆ ದೀಪಿಕಾ ಕಮೆಂಟ್

    ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಕದ್ದಿರುವ ರಣ್‍ವೀರ್ ನಿಜ ಜೀವನದಲ್ಲಿ ಸದಾ ತಮ್ಮ ಚೇಷ್ಟೆ ಹಾಗೂ ತರ್ಲೆ ಮೂಲಕ ಎಲ್ಲರನ್ನು ಸಖತ್ ಎಂಟರ್​ಟೈನ್ ಮಾಡುತ್ತಾರೆ. ಸದ್ಯ ಬ್ಯಾಕ್ ಟೂ ಬ್ಯಾಕ್ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ರಣ್‍ವೀರ್ ಬಾಲಿವುಡ್‍ನಲ್ಲಿ ಬೇಡಿಕೆಯ ನಟರಾಗಿದ್ದಾರೆ. ಇದನ್ನೂ ಓದಿ: ರಣವೀರ್ ಸಿಂಗ್ ಸ್ಟೈಲ್- ಸಿಕ್ಕಾಪಟ್ಟೆ ವೈರಲ್

    Ranveer Singh

    ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ರಣ್‍ವೀರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಣ್‍ವೀರ್ ಶರ್ಟ್ ಧರಿಸದೇ ಕೇವಲ ಬ್ಲೂ ಕಲರ್ ಶಾರ್ಟ್ಸ್ ಹಾಗೂ ವೈಟ್ ಕಲರ್ ಶೂ ಧರಿಸಿ, ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡುವ ಮೂಲಕ ಬೆವರಿಳಿಸಿದ್ದಾರೆ. ಇದನ್ನೂ ಓದಿ: ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

     

    View this post on Instagram

     

    A post shared by Ranveer Singh (@ranveersingh)

    ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಣ್‍ವೀರ್ ಸಿಕ್ಸ್‌ಪ್ಯಾಕ್‌ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲಿಯೂ ಹುಡುಗಿಯರು ರಣ್‍ವೀರ್ ಹಾಟ್ ಲುಕ್‍ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಲ್ಲದೇ ಈ ಫೋಟೋಗೆ ಹಲವು ರೀತಿಯ ಕಾಮೆಂಟ್‍ಗಳು ಹರಿದುಬರುತ್ತಿದೆ.

    ರಣವೀರ್ ಸಿಂಗ್ ನಟನೆಯ 83 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರಕ್ಕೆ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥಾ ಹಂದರ ಇರಲಿದ್ದು, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಪಿಲ್‍ದೇವ್ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

     

  • 6ರ ಪೋರನಿಗೆ ಸಿಕ್ಸ್ ಪ್ಯಾಕ್- ಆರ್ತ್ ಹುಸೈನಿ ವರ್ಕೌಟ್‍ಗೆ ನೆಟ್ಟಿಗರು ಫಿದಾ

    6ರ ಪೋರನಿಗೆ ಸಿಕ್ಸ್ ಪ್ಯಾಕ್- ಆರ್ತ್ ಹುಸೈನಿ ವರ್ಕೌಟ್‍ಗೆ ನೆಟ್ಟಿಗರು ಫಿದಾ

    ಟೆಹರಾನ್: ಕೊರೊನಾ ಲಾಕ್‍ಡೌನ್‍ನಿಂದಾಗಿ ಹೆಚ್ಚಿನ ಜನರು ಸಾಮಾಜಿಕ ಜಾಲತಾನದಲ್ಲಿ ಆಕ್ಟೀವ್ ಆಗಿದ್ದಾರೆ. ಆರು ವರ್ಷದ ಪೋರ ಆರ್ತ್ ಹುಸೈನಿ ಸಿಕ್ಸ್ ಪ್ಯಾಕ್ ಹಾಗೂ ವರ್ಕೌಟ್‍ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

    ಇರಾನ್‍ನ ಬಾಬೋಲ್ ನಗರದಲ್ಲಿ ವಾಸಿಸುತ್ತಿರುವ ಆರ್ತ್ ಹುಸೈನಿ ಸಿಕ್ಸ್ ಪ್ಯಾಕ್, ವರ್ಕೌಟ್ ಹಾಗೂ ಸ್ಟಂಟ್‍ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಆರ್ತ್ ಹುಸೈನಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಆರ್ತ್ ಪ್ರತಿಯೊಂದು ಪೋಸ್ಟ್ ಗೂ 10 ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆಯುತ್ತಾರೆ.

    https://www.instagram.com/p/B7bDm6kjgCY/?utm_source=ig_embed&utm_campaign=embed_video_watch_again

    ಆರ್ತ್ ತಂದೆ ಮೊಹಮ್ಮದ್ ಅವರು ಮಗನಿಗೆ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿಯನ್ನು ಪ್ರಾರಂಭಿಸಿದರು. ಆರ್ತ್ ತನ್ನ 9 ತಿಂಗಳ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್ ಮಾಡಲು ಆರಂಭಿಸಿದ್ದ. ಎರಡನೇ ವರ್ಷಕ್ಕೂ ಮುನ್ನವೇ ಬಾಲಕ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದ. ಸದ್ಯ ಸಿಕ್ಸ್ ಪ್ಯಾಕ್ ನಿಂದ ನೆಟ್ಟಿಗರ ಮನ ಗೆದ್ದಿದ್ದಾನೆ.

    ಆರ್ತ್ ಇಂಗ್ಲೆಂಡ್‍ನ ಲಿವರ್‍ಪೂಲ್ ಅಕಾಡೆಮಿಯಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ. ಮಗನಲ್ಲಿನ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿದ ಮೊಹಮ್ಮದ್ ಅವರು ಆರ್ತ್ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಬಾಲಕ ಜಿಮ್ನಾಸ್ಟಿಕ್ಸ್, ವರ್ಕೌಟ್ ನೋಡಿದ ಲಕ್ಷಾಂತರ ನೆಟ್ಟಿಗರು ಆತನನ್ನು ಫಾಲೋ ಮಾಡಲು ಆರಂಭಿಸಿದರು.

    https://www.instagram.com/p/B_AS4tADu1V/

    ಮೊಹಮ್ಮದ್ ಅವರು ಮಗನಿಂದ ಹಣ ಸಂಪಾದಿಸಲು ಹೀಗೆ ಮಾಡುತತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮೊಹಮ್ಮದ್, ಮಗ ಯಾವಾಗಲೂ ಅಥ್ಲೆಟಿಕ್ಸ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುತ್ತಾನೆ. ಅವನ ಇಷ್ಟದ ವಿಷಯಗಳಲ್ಲಿ ನಾನು ತಂದೆಯಾಗಿ ಮಾತ್ರ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಲಿಯೋನೆಲ್ ಮೆಸ್ಸಿಯ ಅಭಿಮಾನಿ:
    ಆರ್ತ್ ವಾಲ್ ಕ್ಲೈಂಬಿಂಗ್ ಕಲೆಯಲ್ಲೂ ಪರಿಣತಿ ಹೊಂದಿದ್ದಾರೆ. ಈಗ ಅವರ ಕನಸು ಬೆಳೆದು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪರ ಆಡವುದಾಗಿದೆ. ಆರ್ತ್ ಅವರ ನೆಚ್ಚಿನ ಆಟಗಾರರಲ್ಲಿ ಲಿಯೋನೆಲ್ ಮೆಸ್ಸಿ ಕೂಡ ಒಬ್ಬರಾಗಿದ್ದು, ಅವರಂತೆ ಆಡಲು ಬಯಸಿದ್ದಾರೆ.

    https://www.instagram.com/p/B-4gjghDl8L/

  • ಉಡುಂಬಾನ ವೆಜಿಟೆಬಲ್ ಸಿಕ್ಸ್‌ಪ್ಯಾಕ್‌ ಸಾಹಸ!

    ಉಡುಂಬಾನ ವೆಜಿಟೆಬಲ್ ಸಿಕ್ಸ್‌ಪ್ಯಾಕ್‌ ಸಾಹಸ!

    ಬೆಂಗಳೂರು:ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಉಡುಂಬಾ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ಬಿಡುಗಡೆಗೆ ರೆಡಿಯಾಗಿದೆ. ಈ ಹಿಂದೆ ಗೂಳಿಹಟ್ಟಿ ಚಿತ್ರದಲ್ಲಿ ಅಬ್ಬರದ ನಟನೆ ನೀಡಿ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದ ಪವನ್ ಶೌರ್ಯ ಈಗ ಉಡುಂಬಾನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಇದೇ ತಿಂಗಳ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿನ ಪವನ್ ನಟನೆ ಟ್ರೇಲರ್ ಮೂಲಕವೇ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಉಡುಂಬನಾಗಲು ಪವನ್ ಮಾಡಿರೋ ಕಸರತ್ತುಗಳೇ ಅಂಥಾದ್ದಿವೆ.

    ಪವನ್ ಶೌರ್ಯ ಮೊದಲ ಚಿತ್ರ ಗೂಳಿಹಟ್ಟಿಗಾಗಿಯೂ ಇಂಥಾದ್ದೇ ತಯಾರಿಯೊಂದಿಗೆ ಅಖಾಡಕ್ಕಿಳಿದಿದ್ದರು. ಅದರಲ್ಲಿಯೂ ಉಡುಂಬಾ ಚಿತ್ರದ ಕಥೆಯಲ್ಲಿ ನಾಯಕನ ಪಾತ್ರ ದೈಹಿಕವಾಗಿಯೂ ಹಲವಾರು ರೂಪಾಂತರಗಳನ್ನು ಬೇಡುವಂಥಾದ್ದು. ಆದರೆ ಅದಕ್ಕೆ ಇಡೀ ಚಿತ್ರತಂಡವೇ ಬೆರಗಾಗುವಂತೆ ಪವನ್ ಶೌರ್ಯ ಜೀವ ತುಂಬಿದ್ದಾರೆ. ಅದರಲ್ಲಿಯೂ ವ್ರತ ಹಿಡಿದಿದ್ದ ಸಂದರ್ಭದಲ್ಲಿ ಬರೀ ವೆಜ್ ಆಹಾರ ಪದ್ಧತಿಯಲ್ಲಿಯೇ ಅವರು ಸಿಕ್ಸ್ ಪ್ಯಾಕ್ ತಮ್ಮದಾಗಿಸಿಕೊಂಡಿದ್ದೊಂದು ಸಾಹಸ!

    ಚಿತ್ರೀಕರಣ ಆರಂಭವಾದಾಗ ನಿರ್ದೇಶಕರು ಕಥೆಗೆ ಪೂರಪಕವಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕೆಂಬ ಬೇಡಿಕೆ ಇಟ್ಟಿದ್ದರಂತೆ. ಆದರೆ ಆ ಸಂದರ್ಭದಲ್ಲಿ ಮನೆಮಂದಿ ಅದ್ಯಾವುದೋ ವ್ರತ ಹಿಡಿದಿದ್ದರಿಂದ ಪವನ್ ಪಾಲಿಗೂ ನಾನ್‍ವೆಜ್ ಮರೀಚಿಕೆಯಾಗಿತ್ತು. ಆದರೂ ಅದನ್ನೇ ಸವಾಲಾಗಿ ಸ್ವೀಕರಿಸಿದ ಪವನ್ ದಿನಾ ಎರಡು ಹೊತ್ತು ತಲಾ ಮೂರು ಗಂಟೆಗಳ ಕಾಲ ಬೆವರಿಳಿಸಿ ಕೇವಲ ಎರಡೇ ತಿಂಗಳಲ್ಲಿ ಸಿಕ್ಸ್ ಪ್ಯಾಕನ್ನು ತಮ್ಮದಾಗಿಸಿಕೊಂಡಿದ್ದರಂತೆ.

     

    ಅಷ್ಟಕ್ಕೂ ಬಾಡಿ ಫಿಟ್ನೆಸ್ ಪವನ್ ಅವರಿಗೇನೂ ಹೊಸತಲ್ಲ. ಅವರು ಬೆಂಗಳೂರಿನ ಕೆಂಗೇರಿಯಲ್ಲಿ ಸ್ವಂತದ ಜಿಮ್ ಸೆಂಟರ್ ಅನ್ನೂ ಹೊಂದಿದ್ದಾರೆ. ಆ ಭಾಗದಲ್ಲಿ ಅವರು ಜಿಮ್ ಪವನ್ ಎಂದೇ ಫೇಮಸ್. ಆ ಜಿಮ್ ಸಾಹಚರ್ಯವನ್ನವರು ಸಿನಿಮಾಗಳಿಗೂ ಪೂರಕವಾಗಿ ಬಳಸಿಕೊಳ್ಳಲಿದ್ದಾರೆ. ಹೀಗೆ ಹಲವಾರು ದೈಹಿಕ ಕಸರತ್ತುಗಳನ್ನು ನಡೆಸಿರೋ ಈ ವೆಜೆಟೆಬಲ್ ಸಿಕ್ಸ್ ಪ್ಯಾಕ್ ಉಡುಂಬಾನನ್ನು ಕಣ್ತುಂಬಿಕೊಳ್ಳೋ ಕ್ಷಣಗಳು ಹತ್ತಿರಾಗಿವೆ.

  • ಐಪಿಎಲ್ ಕಣಕ್ಕೀಳಿಯಲಿದ್ದಾರೆ ಸಿಕ್ಸ್ ಪ್ಯಾಕ್ ರಾಬಿನ್ ಉತ್ತಪ್ಪ!

    ಐಪಿಎಲ್ ಕಣಕ್ಕೀಳಿಯಲಿದ್ದಾರೆ ಸಿಕ್ಸ್ ಪ್ಯಾಕ್ ರಾಬಿನ್ ಉತ್ತಪ್ಪ!

    ಬೆಂಗಳೂರು: ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಯೂ ಆಟಗಾರರ ಫಿಟ್ನೆಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ  ಟೀಂ ಇಂಡಿಯಾ ಆಟಗಾರರು ತಮ್ಮ ದೇಹದ ಫಿಟ್ನೆಸ್ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸದ್ಯ ಈ ಪಟ್ಟಿಗೆ ಕನ್ನಡಿಗ ರಾಬಿನ್ ಉತ್ತಪ್ಪ ಸೇರ್ಪಡೆಯಾಗಿದ್ದಾರೆ.

    ಹೌದು, ಸದ್ಯ ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರಿತ್ ಬುಮ್ರಾ  ಉತ್ತಮ ಫಿಟ್ನೆಸ್ ಹೊಂದಿದ್ದಾರೆ. ಪ್ರಸ್ತುತ ರಾಬಿನ್ ಉತ್ತಪ್ಪ ಸಹ ತಮ್ಮ ಹಳೆಯ ಫೋಟೋದೊಂದಿಗೆ ಸಿಕ್ಸ್ ಪ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಮುಂಬರುವ 11 ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಬಿನ್ ಸಿಕ್ಸ್ ಪ್ಯಾಕ್ ನೊಂದಿಗೆ ಕಣಕ್ಕಿಲಿಯಲಿದ್ದಾರೆ.

    https://www.instagram.com/p/BgX3ZqzD29d/?hl=en&taken-by=robinaiyudauthappa

    ಟೀಂ ಇಂಡಿಯಾದ ಹಲವು ಆಟಗಾರರು ತಮ್ಮ ದೇಹದ ಫಿಟ್ನೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರಸ್ತುತ ರಾಬಿನ್ ಸಹ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ. 2017 ಸೆಪ್ಟೆಂಬರ್ ನಿಂದ 2018 ಮಾರ್ಚ್ ನಡುವಿನ 6 ತಿಂಗಳ ಅವಧಿಯಲ್ಲಿ ರಾಬಿನ್ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

    111 ನೇ ಐಪಿಎಲ್ ಆವೃತ್ತಿಯಲ್ಲಿ ರಾಬಿನ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕೆ ಇಳಿಯಲಿದ್ದು, ಜನವರಿಯಲ್ಲಿ ನಡೆದ ಆಟಗಾರರ ಹರಾಜಿನಲ್ಲಿ 6.40 ಕೋಟಿ ರೂ. ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಆದರೆ ನೈಟ್ ರೈಡರ್ಸ್ ತಂಡ ತನ್ನ ರೈಟ್ ಟು ಮ್ಯಾಚ್ ಅಧಿಕಾರ ಬಳಸಿ ರಾಬಿನ್ ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿತ್ತು.ಇದನ್ನೂ ಓದಿ: ಹಾಟ್ ಫೋಟೋ ಅಪ್ಲೋಡ್ ಮಾಡಿದ ವೇಗಿ ಜಸ್ಪ್ರಿತ್ ಬುಮ್ರಾ- ವರ್ಕೌಟ್ ಗುಟ್ಟು ರಟ್ಟು

    https://www.instagram.com/p/BZn_C6ijFd9/?hl=en&taken-by=robinaiyudauthappa

    https://www.instagram.com/p/BZQWabxDCiN/?hl=en&taken-by=robinaiyudauthappa

    https://www.instagram.com/p/BZK4mnnFiB9/?hl=en&taken-by=robinaiyudauthappa

  • ಹಿಂದೆಂದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪವರ್ ಸ್ಟಾರ್

    ಹಿಂದೆಂದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪವರ್ ಸ್ಟಾರ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇದೇ ಮೊದಲ ಬಾರಿಗೆ ಡಿಫರೆಂಟ್ ಕ್ಯಾರೆಕ್ಟರ್ ಮಾಡುತ್ತಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪುನೀತ್ ಫ್ಯಾನ್ಸ್ ಅಂತೂ ಈ ಸುದ್ದಿಯನ್ನು ಕೇಳಿದರೆ ಖಂಡಿತ ಇಷ್ಟಪಡುತ್ತಾರೆ.

    ಪುನೀತ್ ಈಗ ಅಂಜನಿ ಪುತ್ರ ಸಿನಿಮಾ ಮುಗಿಸಿ ಹೊಸ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ಅದಕ್ಕಾಗಿ ಹೊಸ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆಯೇ ಇದೇ ಸಿನಿಮಾಕ್ಕಾಗಿ ಪುನೀತ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿರುವುದು, ಕೆನ್ನೆ ತುಂಬಾ ದಾಡಿ ಬಿಡುತ್ತಿರುವುದೂ ಎಲ್ಲರಿಗೂ ಗೊತ್ತು. ಆದರೆ ಇದೀಗ ಬಂದಿರುವ ತಾಜಾ ಖಬರ್ ಮಾತ್ರ ಪುನೀತ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಪುನೀತ್ ವಿಭಿನ್ನ ಗೆಟಪ್‍ಗಾಗಿ ಬೆವರು ಹರಿಸುತ್ತಿದ್ದಾರೆ. ಅದೇ ಅವರನ್ನು ಇಪ್ಪತ್ತು ವರ್ಷದ ಹರೆಯದ ಹುಡುಗನ ಲುಕ್ಕಿಗೆ ಕಾರಣವಾಗುತ್ತಿದೆ.

    ಇದನ್ನು ನೋಡುತ್ತಾ ನೋಡುತ್ತಾ ನಿಮಗೆ ಅಚ್ಚರಿಯಾಗಬಹುದು. ಒಂದು ಕಡೆ ಸಿಕ್ಸ್ ಪ್ಯಾಕ್ ಮಾಡುತ್ತಾ, ದೇಹದ ತೂಕ ಏರಿಸಿಕೊಳ್ಳುತ್ತಿರುವ ಮತ್ತು ದಾಡಿ ಬಿಡುತ್ತಿರುವ ಪುನೀತ್ ಇದ್ದಾರೆ. ಇನ್ನೊಂದು ಕಡೆ ಇಪ್ಪತ್ತು ವರ್ಷದ ಹರೆಯದ ಹುಡುಗನಾಗುತ್ತಿದ್ದಾರೆ. ಏನಿದು ಸಸ್ಪೆನ್ಸ್ ಆಫ್ ಶಶಾಂಕ್ ಸಿನಿಮಾ? ಹೀಗೊಂದು ಅನುಮಾನ ನಿಮ್ಮನ್ನು ಕಾಡುವುದು ಸಹಜ. ಅಲ್ಲೇ ಇರುವುದು ಕಹಾನಿ ಮೇ ಟ್ವಿಸ್ಟ್. ಅಂದರೆ ಬಹುಶಃ ಪುನೀತ್ ಎರಡು ಡಿಫರೆಂಟ್ ಶೇಡ್‍ನಲ್ಲಿ ಮಿಂಚಲಿದ್ದಾರೆ.

    ಇಪ್ಪತ್ತರ ಹರೆಯದ ಹುಡುಗನಾಗುವುದು ಅಷ್ಟು ಸುಲಭವಲ್ಲ. ಕೇವಲ ದಾಡಿ ಮೀಸೆಯನ್ನು ತೆಗೆದು, ಜೀನ್ಸ್, ಟೀ-ಶರ್ಟ್ ಹಾಕಿದರೆ ಮಾತ್ರ ಆ ಲುಕ್ ಬರುವುದಿಲ್ಲ. ಹೀಗಾಗಿಯೇ ಪುನೀತ್ ಡಯಟ್ ಮಾಡುತ್ತಿದ್ದಾರೆ. ಒಂದು ಕಡೆ ಸಿಕ್ಸ್ ಪ್ಯಾಕ್ ರಾಜಕುಮಾರ, ಇನ್ನೊಂದು ಕಡೆ ಹರೆಯದ ರಾಜರತ್ನ. ಎರಡು ಶೇಡ್‍ನಲ್ಲಿ ಪುನೀತ್ ಹೇಗೆ ಕಾಣಿಸುತ್ತಾರೆ? ಅದ್ಯಾವ ರೀತಿ ಶಶಾಂಕ್ ಈ ಎರಡು ಪಾತ್ರಗಳನ್ನು ಸೃಷ್ಟಿಸಿದ್ದಾರೆ? ಅದಕ್ಕೆಲ್ಲ ಉತ್ತರ ಈಗಂತೂ ಸಿಗುವುದಿಲ್ಲ. ಜನವರಿಯಲ್ಲಿ ಆರಂಭವಾಗಲಿರುವ ಈ ಸಿನಿಮಾ ಮುಂದಿನ ವರ್ಷ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

    https://www.youtube.com/watch?v=JjUkzuFGupw