Tag: Sivarajkumar

  • ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (ShivaRajkumar) ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಮೆರಿಕದಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ಹೊತ್ತಿನಲ್ಲೇ ಅವರ ಮನೆ ನಾಯಿ ನೀಮೋ ನಿಧನ ಹೊಂದಿದೆ.

    ಶಿವಣ್ಣ ಅವರ ದೊಡ್ಡ ಮಗಳು ನಿರುಪಮಾ ಪತಿ ಮದುವೆಗೆ ಮೊದಲು ಆ ನಾಯಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ನಿರುಪಮಾ ಅವರು ಡಾಕ್ಟರ್ ಆಗಿರುವ ಕಾರಣಕ್ಕೆ ಅದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲು ಆಗೋದಿಲ್ಲ ಎಂಬ ಕಾರಣಕ್ಕೆ ಅದು ಶಿವಣ್ಣ ಅವರ ಮನೆಯಲ್ಲೇ ಇತ್ತು. ಆದ್ರೆ ಇಂದು ನಾಯಿ ʻನೀಮೋʼ ಚಿರನಿದ್ರೆಗೆ ಜಾರಿದೆ. ಈ ಬಗ್ಗೆ ಅಮೆರಿಕದಲ್ಲಿರುವ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್‌ ಮಾಡಿದ್ದಾರೆ.

    ನಟ ಶಿವಣ್ಣ ಅವರು ಕಳೆದ ವಾರ ಅಮೆರಿಕಾಗೆ ಚಿಕಿತ್ಸೆಗೆ ಹೊರಡುವ ವೇಳೆ ನಾಯಿ ನೀಮೋ ಅವರ ಜೊತೆಯಲ್ಲೇ ಇದ್ದು ಬೀಳ್ಕೊಟ್ಟಿದೆ. ಆದರೆ, ಅಲ್ಲಿ ಶಿವಣ್ಣ ಅವರು ಸರ್ಜರಿ ಮುಗಿಸಿಕೊಂಡು ವಿಶ್ರಾಂತಿಯಲ್ಲಿ ಇರುವಾಗ ನೀಮೋ ಮೃತಪಟ್ಟಿದೆ. ಆ ನಾಯಿ ಬಗ್ಗೆ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಎಲ್ಲರಿಗೂ ಬಹಳಷ್ಟು ಅಟ್ಯಾಚ್‌ಮೆಂಟ್ ಇತ್ತು ಎಂಬುದು ಗೀತಾ ಅವರ ಪತ್ರದಿಂದ ತಿಳಿದುಬರುತ್ತಿದೆ. ಆ ಪತ್ರದಲ್ಲಿ ಆ ನಾಯಿ ನೀಮೋ ಮನೆಯಲ್ಲಿ ಹೇಗಿರುತ್ತಿತ್ತು, ಗೀತಾ ಅವರನ್ನು ಅದೆಷ್ಟು ಇಷ್ಟಪಡುತ್ತಿತ್ತು ಎಂಬ ಗೀತಾ ಅವರು ಬರೆದುಕೊಂಡಿದ್ದಾರೆ.

    ಗೀತಾ ಶಿವರಾಜ್‌ಕುಮಾರ್‌ ಅವರು ಬರೆದಿರುವ ಭಾವುಕ ಪತ್ರ ಈ ಕೆಳಕಂಡಂತಿದೆ….

  • ‘ಕಬ್ಜ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ : ಬ್ರೇಕಿಂಗ್ ನ್ಯೂಸ್ ಕೊಟ್ಟ ಚಂದ್ರು

    ‘ಕಬ್ಜ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ : ಬ್ರೇಕಿಂಗ್ ನ್ಯೂಸ್ ಕೊಟ್ಟ ಚಂದ್ರು

    ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾದಲ್ಲಿ ಶಿವರಾಜಕುಮಾರ್ (Shivarajkumar)ನಟಿಸಿದ್ದಾರೆ ಎನ್ನುವ ವಿಚಾರ ಆಗಾಗ್ಗೆ ಸುದ್ದಿ ಆಗುತ್ತಲೇ ಇತ್ತು. ಚಂದ್ರು ಸಿನಿಮಾ ಎಂದರೆ ಅಲ್ಲಿ ಶಿವಣ್ಣ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇಬ್ಬರೂ ಹತ್ತಿರದವರು. ಹಾಗಾಗಿ ಈ ಸಿನಿಮಾದಲ್ಲೂ ಶಿವರಾಜಕುಮಾರ್ ಇರುವುದು ಪಕ್ಕಾ ಎಂದು ಹೇಳಲಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಶಿವಣ್ಣ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಪೋಸ್ಟರ್ ಅನ್ನುವ ಚಂದ್ರು ಹಂಚಿಕೊಂಡಿದ್ದಾರೆ.

    ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ‘ಕಬ್ಜ’ ಸಿನಿಮಾ ಟೀಮ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಮಾರ್ಚ್ 4ರಂದು ಚಿತ್ರದ ಟ್ರೈಲರ್ (Trailer) ರಿಲೀಸ್ ಮಾಡುತ್ತಿದ್ದು, ಟ್ರೈಲರ್ ನೋಡುವುದಕ್ಕಾಗಿಯೇ ಹಲವು ತಿಂಗಳುಗಳಿಂದ ಅಭಿಮಾನಿಗಳು ಕಾದಿದ್ದಾರೆ. ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಹಾಡು ಈಗಾಗಲೇ ಕೋಟ್ಯಾಂತರ ಕೇಳುಗರನ್ನು ತಲುಪಿದೆ. ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕರು. ಶನಿವಾರ (ಮಾ.4) ಸಂಜೆ 5 ಗಂಟೆ 2 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಏಕಕಾಲಕ್ಕೆ ಎಲ್ಲ ಭಾಷೆಯ ಟ್ರೈಲರ್ ಗಳು ರಿಲೀಸ್ ಆಗಲಿವೆ.

    ನಿರ್ದೇಶಕ ಆರ್.ಚಂದ್ರು, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಶ್ರೀಯಾ ಶರಣ್ (Shreya Sharan) ನಾಯಕಿಯಾಗಿದ್ದಾರೆ. ಭಾರೀ ಬಜೆಟ್, ಅದ್ಧೂರಿ ತಾರಾಗಣ ಹೊಂದಿರುವ ಚಿತ್ರ ಇದಾಗಿದೆ. ಅಲ್ಲದೇ, ಅಚ್ಚರಿ ಮೂಡಿಸುವಂತ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಯಾರೆಲ್ಲ ನಟಿಸಿದ್ದಾರೆ ಎನ್ನುವ ವಿಷಯವನ್ನು ಸದ್ಯಕ್ಕೆ ಹೇಳುವುದಿಲ್ಲ ಎನ್ನುತ್ತಾರೆ ಚಂದ್ರು.

    ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ನಿರ್ದೇಶಕರದ್ದು. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದಾರೆ. ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಆಗುತ್ತಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲೂ ಏಕಕಾಲಕ್ಕೆ ಕಬ್ಜ ಬಿಡುಗಡೆ ಆಗಲಿದೆ.