Tag: sivakarthikeyan

  • ವಂಡಾಲೂರು ಝೂನಿಂದ ನಾಪತ್ತೆಯಾಗಿದ್ದ ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಪತ್ತೆ

    ವಂಡಾಲೂರು ಝೂನಿಂದ ನಾಪತ್ತೆಯಾಗಿದ್ದ ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಪತ್ತೆ

    – ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್‌ನಿಂದ ಕಳಿಸಲಾಗಿದ್ದ ಶೆರಿಯಾರ್‌ ಸಿಂಹ

    ಚೆನ್ನೈ/ಬೆಂಗಳೂರು: ತಮಿಳುನಾಡಿನ ವಂಡಾಲೂರು ಮೃಗಾಲಯಕ್ಕೆ (Vandalur Zoo) ಬೆಂಗಳೂರಿನಿಂದ ಕಳಿಸಲಾಗಿದ್ದ ಸಿಂಹವೊಂದು ರಾತ್ರೋರಾತ್ರಿ ನಾಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. 2‌ ದಿನಗಳ ಬಳಿಕ ಸಿಂಹ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಶೆರಿಯಾರ್ ಹೆಸರಿನ 5 ವರ್ಷದ ಗಂಡು ಸಿಂಹವನ್ನು (Lion Sheryaar) ಗುರುವಾರ (ಅ.02) ಮೊದಲ ಬಾರಿಗೆ ಸಫಾರಿ ವಲಯಕ್ಕೆ ಬಿಡಲಾಗಿತ್ತು. ಆದರೆ, ನಿಗದಿತ ಸಮಯ ಕಳೆದರೂ ಸಿಂಹ ಮಾತ್ರ ಬೋನಿಗೆ ವಾಪಸ್ಸಾಗಲಿಲ್ಲ. ಶನಿವಾರ ಸಂಜೆಯವರೆಗೂ ಸಿಂಹ ಬೋನಿಗೆ ಹಿಂತಿರುಗಲಿಲ್ಲ ಎಂದು ವರದಿಯಾಗಿತ್ತು. ಇದರಿಂದ ಆಘಾತಗೊಂಡ ಮೃಗಾಲಯದ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕಾಗಿ ರಾಯಚೂರಿನಿಂದ ಕೊಪ್ಪಳಕ್ಕೆ 200 ಬಸ್ – ಇತ್ತ ಬಸ್ಸಿಲ್ಲದೇ ಪ್ರಯಾಣಿಕರ ಪರದಾಟ

    ನಾಪತ್ತೆಯಾಗಿದ್ದ ಶೆರಿಯಾರ್‌ ಸಿಂಹವನ್ನು ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ದತ್ತು ಪಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೃಗಾಲಯದ ಸಿಬ್ಬಂದಿ ಮತ್ತು ವಿಶೇಷ ತಂಡ ರಾತ್ರಿಯಿಡೀ ಪ್ರದೇಶದಲ್ಲಿ ಹುಡುಕಾಟ ನಡೆಸಿತ್ತು. ಅಕ್ಟೋಬರ್ 4 ರಂದು ಶೆರಿಯಾ‌ರ್ ಸಿಂಹ ಸಫಾರಿ ವಲಯದೊಳಗೆ ಕಾಣಿಸಿಕೊಂಡ ಬಳಿಕ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಒಂದೂವರೆ ವರ್ಷದಿಂದ ರೈತರಿಗೆ ಕಾಟ ಕೊಡ್ತಿದ್ದ ಪುಂಡಾನೆ ಸೆರೆ

    ಶೆರಿಯಾರ್‌ ಸಿಂಹವನ್ನು 2023ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 2023ರಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಿಂದ ವಂಡಲೂರಿಗೆ ತರಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ – ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ

  • ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್

    ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್

    ಮರನ್ ಸೂಪರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮದರಾಸಿ (Madharaasi). ಎ.ಆರ್ ಮುರುಗದಾಸ್ (A R Murugadas) ನಿರ್ದೇಶನದ ಈ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ.

    ಆಕ್ಷನ್ ಪ್ಯಾಕ್ಡ್ ಟ್ರೈಲರ್‌ನಲ್ಲಿ ಶಿವಕಾರ್ತಿಕೇಯನ್ (Sivakarthikeyan) ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ಉದ್ದಕ್ಕೂ ಬಂದೂಕು ಮತ್ತು ಸ್ಫೋಟದ ಸದ್ದೇ ಜೋರಾಗಿದೆ. ಕನ್ನಡತಿ ರುಕ್ಮಿಣಿ ವಸಂತ್ (Rukmini Vasanth), ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು

    ಪ್ರೀತಿ ಜೊತೆ ದ್ವೇಷ, ಪ್ರತೀಕಾರದ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೈಲರ್‌ ಕಟ್ ಮಾಡಲಾಗಿದೆ. ಕನ್ನಡದಲ್ಲಿಯೂ ಟ್ರೈಲರ್‌ ಬಿಡುಗಡೆಯಾಗಿದೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ತಾರಾಬಳಗದಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.

  • ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ

    ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ

    ವಿಜಯ್ ದಳಪತಿ (Vijay Thalapathy) ಅಭಿನಯದ `ಜನ ನಾಯಗನ್’ (Jana Nayagan) ಸಿನಿಮಾ 2026ರ ಜನವರಿ 9ಕ್ಕೆ ತೆರೆಕಾಣಲಿದೆ. ಈಗಾಗಲೇ ಚಿತ್ರತಂಡ ಈ ಬಗ್ಗೆ ಅನೌನ್ಸ್ ಕೂಡಾ ಮಾಡಿದೆ. ವಿಜಯ್ ದಳಪತಿ ಅಭಿನಯದ ಕೊನೆಯ ಸಿನಿಮಾ ಎನ್ನುವ ಕಾರಣದಿಂದ ಈ ಸಿನಿಮಾ ಮೇಲೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆಗಳು ದಳಪತಿ ಅಭಿಮಾನಿಗಳಲ್ಲಿದೆ. ಇದರ ನಡುವೆ ಶಿವಕಾರ್ತಿಕೇಯನ್ (Sivakarthikeyan) ನಟನೆಯ `ಪರಾಶಕ್ತಿ’ (Parasakthi) ಸಿನಿಮಾ ಕೂಡಾ ತೆರೆಗೆ ಬರಲು ಪೊಂಗಲ್ (ಸಂಕ್ರಾಂತಿ)ಗೆ ಡೇಟ್ ಗುರುತು ಮಾಡಿಕೊಂಡಿದೆಯಂತೆ.

    ಎರಡೂ ಸಿನಿಮಾಗಳು ತೆರೆಗೆ ಬರುವ ಬಗ್ಗೆ ಪರಾಶಕ್ತಿ ಸಿನಿಮಾದ ನಿರ್ದೇಶಕಿ ಸುಧಾ ಕೊಂಗರಾ ಮೌನ ಮುರಿದಿದ್ದಾರೆ. `ಪರಾಶಕ್ತಿ’ ಸಿನಿಮಾ ಶೂಟಿಂಗ್ ಮಾಡುತ್ತಿದೆ. ಆದರೆ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವ ಬಗ್ಗೆ ನಿರ್ಮಾಪಕರು ತೀರ್ಮಾನ ಮಾಡುತ್ತಾರೆ. ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಆದ್ರೆ ಈ ಹಿಂದೆ ಪರಾಶಕ್ತಿ ಹಾಗೂ ಜನ ನಾಯಗನ್ ಸಿನಿಮಾಗಳು ಒಂದೇ ವೇಳೆಗೆ ರಿಲೀಸ್ ಆಗುತ್ತವೆ. ಎರಡೂ ಸಿನಿಮಾಗಳ ನಡುವೆ ಡೇಟ್ ಕ್ಲ್ಯಾಶ್ ಆಗುತ್ತೆ ಎಂದು ಸುದ್ದಿ ಹರಿದಾಡಿದ್ದಿದೆ ಎಂದಿದ್ದಾರೆ. ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

    ಸದ್ಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ಪರಾಶಕ್ತಿ ಚಿತ್ರತಂಡ ಹಾಗೂ ಜನ ನಾಯಗನ್ ಚಿತ್ರತಂಡ. ವಿಜಯ್ ದಳಪತಿ ಅಭಿಮಾನಿಗಳಂತು ಈ ಬಾರಿಯ ಪೊಂಗಲ್‌ನ್ನ ಅದ್ದೂರಿಯಾಗಿ `ಜನ ನಾಯಗನ್’ ಚಿತ್ರದ ಜೊತೆ ಸೆಲಬ್ರೆಟ್ ಮಾಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಇತ್ತ ಶಿವಕಾರ್ತಿಕೇಯನ್ ಚಿತ್ರದ ನಿರ್ಮಾಪಕರು ಕೂಡಾ ಪೊಂಗಲ್ ಹಬ್ಬದ ಸಂಭ್ರಮಕ್ಕೆ ಚಿತ್ರ ರಿಲೀಸ್ ಮಾಡುವುದಕ್ಕೆ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಫೈನಲ್‌ನಲ್ಲಿ ಈ ಎರಡೂ ಸಿನಿಮಾಗಳು ರಿಲೀಸ್ ಆಗುತ್ತಾ? ಅಥವಾ ವಿಜಯ್ ದಳಪತಿ ಸಿನಿಮಾ ಮಾತ್ರ ಪೊಂಗಲ್‌ಗೆ ರಿಲೀಸ್ ಆಗುತ್ತಾ ಎಂದು ಕಾದು ನೋಡಬೇಕಿದೆ.

  • ಶಿವಕಾರ್ತಿಕೇಯನ್ ಜೊತೆ ಅದೃಷ್ಟ ಪರೀಕ್ಷೆಗಿಳಿದ ಕನ್ನಡತಿ ರುಕ್ಮಿಣಿ ವಸಂತ್‌

    ಶಿವಕಾರ್ತಿಕೇಯನ್ ಜೊತೆ ಅದೃಷ್ಟ ಪರೀಕ್ಷೆಗಿಳಿದ ಕನ್ನಡತಿ ರುಕ್ಮಿಣಿ ವಸಂತ್‌

    ‘ಅಮರನ್’ (Amaran) ಸಿನಿಮಾ ಬಳಿಕ ಶಿವಕಾರ್ತಿಕೇಯನ್ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಪ್ರಾಜೆಕ್ಟ್ ಮದರಾಸಿ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಗ್ಲಿಂಪ್ಸ್‌ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಎ.ಆರ್. ಮುರುಗದಾಸ್ ಆ್ಯಕ್ಷನ್ ಕಟ್‌ ಹೇಳಿದ್ದು, ‘ಸಪ್ತ ಸಾಗರದಾಚೆ ಎಲ್ಲೋ’ ನಾಯಕಿ ರುಕ್ಮಿಣಿ ವಸಂತ್ ಅವರು (Rukmini Vasanth) ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಸಾಥ್‌ ಕೊಟ್ಟಿದ್ದಾರೆ. ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರತಂಡ ‘ಮದರಾಸಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಇದನ್ನೂ ಓದಿ:1.3 ಕೋಟಿ ಮೌಲ್ಯದ ಲಕ್ಷುರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ

    ಈ ವರ್ಷ ಸೆಪ್ಟೆಂಬರ್ 5ರಂದು ‘ಮದರಾಸಿ’ ಸಿನಿಮಾ ರಿಲೀಸ್‌ ಆಗಲಿದೆ. ಸ್ಪೆಷಲ್ ಪೋಸ್ಟರ್‌ ಮೂಲಕ‌ ಚಿತ್ರತಂಡ ಬಿಡುಗಡೆ ದಿನಾಂಕ ರಿವೀಲ್‌ ಮಾಡಿದೆ. ಪೋಸ್ಟರ್‌ನಲ್ಲಿ ಶಿವಕಾರ್ತಿಕೇಯನ್‌ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ವಿದ್ಯುತ್ ಜಮ್ವಾಲ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಹಲವರು ತಾರಾಬಳಗದಲ್ಲಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಎನ್. ಶ್ರೀಲಕ್ಷ್ಮಿ ಪ್ರಸಾದ್ ಶ್ರೀ ಲಕ್ಷ್ಮಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ‘ಮದರಾಸಿ’ ಸಿನಿಮಾ ಮೂಡಿ ಬರುತ್ತಿದೆ.

  • ಆಮೀರ್ ಖಾನ್ ಜೊತೆ ಬಾಲಿವುಡ್ ಸಿನಿಮಾ?: ಶಿವಕಾರ್ತಿಕೇಯನ್ ರಿಯಾಕ್ಷನ್

    ಆಮೀರ್ ಖಾನ್ ಜೊತೆ ಬಾಲಿವುಡ್ ಸಿನಿಮಾ?: ಶಿವಕಾರ್ತಿಕೇಯನ್ ರಿಯಾಕ್ಷನ್

    ಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ಅವರು ಕಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಸಾಕಷ್ಟು ಬಾರಿ ಅವರ ಬಾಲಿವುಡ್‌ಗೆ (Bollywood) ಎಂಟ್ರಿಯ ಬಗ್ಗೆ ಚರ್ಚೆಗೆ ಗ್ರಾಸವಾಗುತ್ತಲೇ ಇತ್ತು. ಈಗ ಆಮೀರ್ ಖಾನ್ ಜೊತೆಗಿನ ಸಿನಿಮಾ ಸುದ್ದಿ ಬಗ್ಗೆ ಸ್ವತಃ ಶಿವಕಾರ್ತಿಕೇಯನ್ ಮಾತನಾಡಿದ್ದಾರೆ. ಇದನ್ನೂ ಓದಿ:ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

    ಆಮೀರ್ ಖಾನ್ (Aamir Khan) ಜೊತೆ ಶಿವಕಾರ್ತಿಕೇಯನ್ ಸಿನಿಮಾ ಮಾಡುತ್ತಾರೆ ಎಂಬ ವಿಚಾರಕ್ಕೆ ನಟ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನದಲ್ಲಿ ಅವರು ಮಾತನಾಡಿ, ನಾನು ಆಮೀರ್ ಖಾನ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಆಗ ಅವರು ನೀವು ಹಿಂದಿ ಚಿತ್ರಕ್ಕೆ ಎಂಟ್ರಿ ಕೊಡುತ್ತೀರಾ ಅಂದರೆ ಅದು ನನ್ನ ನಿರ್ಮಾಣ ಸಂಸ್ಥೆಯಿಂದಲೇ ಎಂದು ಹೇಳಿದ್ದರು. ನಿಮ್ಮ ಬಳಿ ಯಾವುದಾದರೂ ಉತ್ತಮ ಕಥೆ ಇದ್ದರೆ ತಿಳಿಸಿ ಎಂದು ಆಮೀರ್ ಹೇಳಿದ್ದರು. ಒಂದಿಷ್ಟು ಸಿನಿಮಾ ಕಥೆಗಳನ್ನು ಕೇಳಿದ್ದೇನೆ. ಆದರೆ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಶಿವಕಾರ್ತಿಕೇಯನ್ ಮಾತನಾಡಿದ್ದಾರೆ.

    ಇನ್ನೂ ಸುಧಾ ಕೊಂಗರ (Sudha Kongara) ಜೊತೆಗಿನ ಹೊಸ ಸಿನಿಮಾಗೆ ಶಿವಕಾರ್ತಿಕೇಯನ್ ಓಕೆ ಎಂದಿದ್ದಾರೆ. ‘ಅಮರನ್’ ಸಿನಿಮಾದ ಸಕ್ಸಸ್ ನಂತರ ಸುಧಾ ಕೊಂಗರ ಜೊತೆ ನಟ ಕೈಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ನಟನಿಗೆ ಶ್ರೀಲೀಲಾ ಜೋಡಿ ಎಂದು ಹೇಳಲಾಗುತ್ತಿದೆ.

  • ‘ಅಮರನ್’ ಚಿತ್ರದಲ್ಲಿ ಮುಸ್ಲಿಮರ ಅವಹೇಳನ – ತಮಿಳುನಾಡಿನ ಚಿತ್ರಮಂದಿರಕ್ಕೆ ಪೆಟ್ರೋಲ್ ಬಾಂಬ್ ದಾಳಿ

    ‘ಅಮರನ್’ ಚಿತ್ರದಲ್ಲಿ ಮುಸ್ಲಿಮರ ಅವಹೇಳನ – ತಮಿಳುನಾಡಿನ ಚಿತ್ರಮಂದಿರಕ್ಕೆ ಪೆಟ್ರೋಲ್ ಬಾಂಬ್ ದಾಳಿ

    ತಿರುನಲ್ವೇಲಿ: ತಮಿಳುನಾಡಿನ (Tamil Nadu) ತಿರುನಲ್ವೇಲಿಯಲ್ಲಿರುವ ಥಿಯೇಟರ್‌ವೊಂದಕ್ಕೆ ಇಂದು ಮುಂಜಾನೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮೂರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ.

    ನಟ ಶಿವಕಾರ್ತಿಕೇಯನ್ (Sivakarthikryan) ಅಭಿನಯದ ಅಮರನ್ ಚಿತ್ರದಲ್ಲಿ (Amaran Film) ಮುಸ್ಲಿಮರನ್ನು ನಕಾರಾತ್ಮಕವಾಗಿ ಚಿತ್ರಿಸಿರುವುದನ್ನು ವಿರೋಧಿಸಿ ಹಲವಾರು ಗುಂಪುಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ದಾಳಿ ನಡೆದಿದೆ. ಇದನ್ನೂ ಓದಿ: ಇದು ವೈಯಕ್ತಿಕ ದ್ವೇಷ: ಧನುಷ್ ವಿರುದ್ಧ ನಯನತಾರಾ ಗರಂ

    ಚಿತ್ರವು ಅಲಂಗಾರ್ ಚಿತ್ರಮಂದಿರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಹೆಚ್ಚಿನ ತನಿಖೆಯ ನಂತರವೇ ದಾಳಿಯ ಹಿಂದಿನ ನಿಖರವಾದ ಉದ್ದೇಶವನ್ನು ನಿರ್ಧರಿಸಲಾಗುತ್ತದೆ. ಘಟನೆಯು ಶುಕ್ರವಾರ ಸ್ಥಳೀಯರ ನಡುವಿನ ವಿವಾದಕ್ಕೆ ಸಂಬಂಧಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

    ಸ್ಥಳದಿಂದ ಪರಾರಿಯಾಗುವ ಮೊದಲು ಇಬ್ಬರು ವ್ಯಕ್ತಿಗಳು ಥಿಯೇಟರ್‌ಗೆ ಪೆಟ್ರೋಲ್ ಬಾಂಬ್ ಎಸೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ದಾಳಿಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ತನಿಖೆ ಮುಂದುವರಿದಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧನುಷ್, ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ರಿಲೀಸ್

  • ‘ಅಮರನ್‌’ ಚಿತ್ರದ ಅಬ್ಬರ- ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾಗೆ ಪ್ರೇಕ್ಷಕ ಜೈಕಾರ

    ‘ಅಮರನ್‌’ ಚಿತ್ರದ ಅಬ್ಬರ- ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾಗೆ ಪ್ರೇಕ್ಷಕ ಜೈಕಾರ

    ಮಿಳು ನಟ ಶಿವ ಕಾರ್ತಿಕೇಯನ್ (Sivakarthikeyan) ಹಾಗೂ ನಟಿ ಸಾಯಿ ಪಲ್ಲವಿ (Sai Pallavi) ನಟನೆಯ ‘ಅಮರನ್’ (Amaran) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ನಲ್ಲೂ ಗಳಿಕೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಸ್ಪೂರ್ತಿದಾಯಕ ಕಥೆ ಹೇಳುವ ಬಹುನಿರೀಕ್ಷಿತ ಬಯೋಪಿಕ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಅಕ್ಟೋಬರ್ 31ರಂದು ತೆರೆಕಂಡ ‘ಅಮರನ್ ಸಿನಿಮಾ’ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

    ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ.

    ಈ ಚಿತ್ರವು ದಿವಂಗತ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದೆ. ಶಿವಕಾರ್ತಿಕೇಯನ್ ಅವರು ಮೇಜರ್ ಮುಕುಂದ್ ಪಾತ್ರದಲ್ಲಿ ಕಾಣಿಸಿಕೊಂಡ್ರೆ. ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಈ ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದಾರೆ. ದೀಪಾವಳಿ ಹಬ್ಬದ ದಿನದಂದು ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ‘ಅಮರನ್’ ಎಲ್ಲೆಡೆ ಅಬ್ಬರಿಸುತ್ತಿದ್ದು, ಇದೀಗ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಕ್ಕೆ ಚಿತ್ರತಂಡದ ಖುಷಿಗೆ ಕಾರಣವಾಗಿದೆ.

  • ‘ಅಮರನ್‌’ ಟ್ರೈಲರ್ ರಿಲೀಸ್- ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವಕಾರ್ತಿಕೇಯನ್

    ‘ಅಮರನ್‌’ ಟ್ರೈಲರ್ ರಿಲೀಸ್- ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವಕಾರ್ತಿಕೇಯನ್

    ಕಾಲಿವುಡ್ ನಟ ಶಿವಕಾರ್ತಿಕೇಯನ್ (Sivakarthikeyan) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಅಮರನ್’ (Amaran) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಅಮರನ್, ಭಯೋತ್ಪಾದಕ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ ಜೀವನ ಚರಿತ್ರೆಯಾಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎಮೋಷನ್ ಜೊತೆಗೆ ಆ್ಯಕ್ಷನ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದೆ. ಇದನ್ನೂ ಓದಿ:ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ

     

    View this post on Instagram

     

    A post shared by Kamal Haasan (@ikamalhaasan)

    ಸೇನಾ ರಜೆಯಲ್ಲಿ ಮನೆಗೆ ಬಂದಿರುವ ಯೋಧ ತನ್ನ ಮಗಳೊಂದಿಗೆ ಇರುವ ಕ್ಷಣ, ಮಗಳಿಗೆ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಮತ್ತೆ ದೇಶ ಸೇವೆಗೆ ಹೋಗುವ ದೃಶ್ಯ, ನಮ್ಮನ್ನು ಬಿಟ್ಟು ನೀನು ದೂರ ಆಗಿದ್ರೂ ಪರವಾಗಿಲ್ಲ, ಸೇಫ್ ಆಗಿರು ಎನ್ನುವ ಪತ್ನಿ ಡೈಲಾಗ್ ನೋಡುಗರಿಗೆ ಕಾಡುತ್ತದೆ. ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಯಿ ಪಲ್ಲವಿ (Sai Pallavi) ಅವರ ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಪ್ರೀತಿಸಿ ಮದುವೆಯಾಗೋಕೆ ನನಗೆ ಸಮಯವಿಲ್ಲ: ಸುನೈನಾ

    ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ಭುವನ್ ಅರೋರಾ, ರಾಹುಲ್ ಬೋಸ್ ಮುಂತಾದವರು ನಟಿಸಿದ್ದಾರೆ. ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ ಪುಸ್ತಕದಲ್ಲಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಮೇಜರ್ ವರದರಾಜನ್ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕಥೆ ಬರೆದು, ನಿರ್ದೇಶಿಸಿದ್ದಾರೆ.

    ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಅವರ ಛಾಯಾಗ್ರಹಣ ಮತ್ತು ಆರ್. ಕಲೈವನನ್ ಅವರ ಸಂಕಲನವಿರುವ ಸಿನಿಮಾವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ಇಂಟರ್ನ್ಯಾಷನಲ್ ಜಂಟಿಯಾಗಿ ನಿರ್ಮಾಣ ಮಾಡಿದೆ.

  • ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ನ್ನಡತಿ ಶ್ರೀಲೀಲಾಗೆ (Sreeleela) ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಸ್ಟಾರ್ ನಟನಿಗೆ ನಾಯಕಿಯಾದ ಬೆನ್ನಲ್ಲೇ ಕಾಲಿವುಡ್‌ಗೂ (Kollywood) ಪಾದಾರ್ಪಣೆ ಮಾಡೋಕೆ ನಟಿ ಸಜ್ಜಾಗಿದ್ದಾರೆ. ಶಿವಕಾರ್ತಿಕೇಯನ್‌ಗೆ (Sivakarthikeyan) ನಾಯಕಿಯಾಗಿ ‘ಕಿಸ್’ ನಟಿ ತಮಿಳಿಗೆ ಎಂಟ್ರಿ ಕೊಡ್ತಿದ್ದಾರೆ.

    ತೆಲುಗಿನಲ್ಲಿ ಇತ್ತೀಚೆಗೆ ಶ್ರೀಲೀಲಾ ನಟಿಸಿದ ಸಿನಿಮಾಗಳು ಫ್ಲಾಪ್ ಆದರೂ ಅವರಿಗೆ ಡಿಮ್ಯಾಂಡ್ ಏನು ಕಮ್ಮಿಯಾಗಿಲ್ಲ. ನಟಿಯ ಪ್ರತಿಭೆ ಮತ್ತು ಬ್ಯೂಟಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನೂ ದಿನಗಳಿಂದ ನಟಿಯ ತಮಿಳು ಡೆಬ್ಯೂ ಕುರಿತು ಭಾರೀ ಚರ್ಚೆ ಶುರುವಾಗಿತ್ತು. ಈಗ ಸ್ಟಾರ್ ನಿರ್ದೇಶಕಿ ಸುಧಾ ಕೊಂಗರ ಸಿನಿಮಾಗೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಶಿವಕಾರ್ತಿಕೇಯನ್ ನಟನೆಯ ‘ಪುರಾಣನೂರು’ ಚಿತ್ರಕ್ಕೆ ‘ಸೂರರೈ ಪೊಟ್ರು’ ಡೈರೆಕ್ಟರ್ ಸುಧಾ ಕೊಂಗರ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ ಡ್ಯಾನ್ಸ್ ಸ್ಕಿಲ್ ಮತ್ತು ನಟನೆ ಮೆಚ್ಚಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:3 ವರ್ಷಗಳಿಂದ ಸೆಕ್ಸ್ ಮಾಡಿಲ್ಲ- ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್

    ಈಗಾಗಲೇ ಶಿವಕಾರ್ತಿಕೇಯನ್ ಜೊತೆ ಶ್ರೀಲೀಲಾ ಫೋಟೋಶೂಟ್ ಕೂಡ ಆಗಿದೆ ಎಂಬುದು ಸದ್ಯ ಹರಿದಾಡುತ್ತಿರುವ ವಿಚಾರ. ಈ ಸಂಗತಿ ನಿಜನಾ? ಈ ಪ್ರಾಜೆಕ್ಟ್ ಕುರಿತು ಸದ್ಯದಲ್ಲೇ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಬಾಲಿವುಡ್‌ನಲ್ಲಿ ಕಿಯಾರಾ ಪತಿ ಸಿದ್ಧಾರ್ಥ್ ಮಲ್ಹೋತ್ರಾಗೆ ಹೀರೋಯಿನ್ ಆಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಇದರೊಂದಿಗೆ ನಿತಿನ್ ಜೊತೆ ‘ರಾಬಿನ್‌ಹುಡ್’ ಸಿನಿಮಾ, ಪವನ್ ಕಲ್ಯಾಣ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.

  • ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ‘ಪ್ರೇಮಂ’ ನಟಿ ಸಾಯಿ ಪಲ್ಲವಿ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಿವಕಾರ್ತಿಕೇಯನ್ (Sivakarthikeyan) ಜೊತೆ ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ (Amaran Film) ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ರಿಲೀಸ್‌ಗೆ ಸಿದ್ಧತೆ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ

    ‘ಅಮರನ್’ ಮೇಜರ್ ಮುಕುಂದ ವರದರಾಜನ್ ಜೀವನ ಚರಿತ್ರೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಯೋಧನಾಗಿ ಲೀಡ್ ರೋಲ್‌ನಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದು, ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi)  ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಟ ಕಮಲ್ ಹಾಸನ್ (Kamal Haasan), ಆರ್. ಮಹೇಂದ್ರನ್, ವಿವೇಕ್ ಸೇರಿ ನಿರ್ಮಾಣ ಮಾಡಿದ್ದಾರೆ.

    ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಘೋಷಿಸಲಿದ್ದಾರೆ. ಇನ್ನೂ ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್‌ ಜೋಡಿಯನ್ನು ನೋಡಲು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ.

    ಅಂದಹಾಗೆ, ರಾಮಾಯಣ, ತಾಂಡೇಲ್, ಆಮೀರ್ ಖಾನ್ ಪುತ್ರನ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಾಯಿ ಪಲ್ಲವಿ ಕೈಯಲ್ಲಿವೆ. ಬಾಲಿವುಡ್‌ನಲ್ಲಿ ಕೂಡ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.