Tag: sitapur

  • ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

    ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

    ಲಕ್ನೋ: ಕ್ರೂರಿ ಚಿಕ್ಕಪ್ಪನೊಬ್ಬ ಮೂವರು ಹೆಣ್ಣು ಮಕ್ಕಳನ್ನು ಚಲಿಸುತ್ತಿರುವ ರೈಲಿನಿಂದ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

    ಇಕ್ಬಾಲ್ ಎಂಬಾತನೇ ಮೂವರು ಮಕ್ಕಳನ್ನು ಚಲಿಸುವ ರೈಲಿನಿಂದ ದೂಡಿದ ಕ್ರೂರಿ ಚಿಕ್ಕಪ್ಪ. ಮೂವರು ಮಕ್ಕಳಲ್ಲಿ ಒಬ್ಬ ಬಾಲಕಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಲ್‍ಬುಲ್ (12) ಮತ್ತು ಸಲೀಮಾ ಖಾತೂನ್ (4) ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನಡೆದಿದ್ದೇನು?: ಈ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮೂವರು ಹೆಣ್ಣು ಮಕ್ಕಳ ಜೊತೆಯಲ್ಲಿ ತಂದೆ ಇದ್ದು ಮತ್ತು ಚಿಕ್ಕಪ್ಪ ಇಕ್ಬಾಲ್ ಅಮೃತಸರ್-ಸಹರ್‍ಸಾ ಜನ್‍ಸೇವಾ ಎಕ್ಸ್ ಪ್ರೆಸ್ ನಲ್ಲಿ ಬಿಹಾರ್‍ಗೆ ಪ್ರಯಾಣ ಬೆಳಸುತ್ತಿದ್ದರು. ಈ ವೇಳೆ ಸೀತಾಪುರ ಜಿಲ್ಲೆಯಲ್ಲಿ ಮಕ್ಕಳನ್ನು ಚಿಕ್ಕಪ್ಪ ಇಕ್ಬಾಲ್ ಹೊರಗೆ ಎಸೆದಿದ್ದಾನೆ.

    ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ರೈಲಿನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇಬ್ಬರ ನಡುವೆ ಜಗಳ ಸಹ ನಡೆಯಿತು. ಈ ವೇಳೆ ಚಿಕ್ಕಪ್ಪ ನನ್ನ ಸೋದರಿಯನ್ನು ರೈಲಿನಿಂದ ಎಸೆದ ಎಂದು ಗಾಯಗೊಂಡಿರುವ ಅಲ್‍ಬುಲ್ ತಿಳಿಸಿದ್ದಾಳೆ ಎಂದು ಸೀತಾಪುರನ ಆರ್‍ಪಿಎಫ್ ಪೊಲೀಸ್ ಅಧಿಕಾರಿ ಧನಂಜಯ್ ಸಿಂಗ್ ಹೇಳಿದ್ದಾರೆ.

    ಮುನ್ನಿಯ ಶವ ಬಿಸ್ವಾನ್ ಪಟ್ಟಣದ 11 ಕಿ.ಮೀ ದೂರದ ರಾಮಯ್ಯಪುರ ಹಾಲ್ಟ್ ರೈಲ್ವೆ ನಿಲ್ದಾಣದ ಬಳಿ ದೊರತಿದೆ. ಅಲ್‍ಬುಲ್ ಮತ್ತು ಸಲೀಮಾ ಇಬ್ಬರೂ ತೀವ್ರವಾಗಿ ಗಾಯಗೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದ್ದಾರೆ.

    ಮಕ್ಕಳ ತಂದೆ ಇದ್ದು ಮತ್ತು ಇಕ್ಬಾಲ್ ಇಬ್ಬರೂ ಬಿಹಾರದ ಮೋತಿಹಾರಿ ಜಿಲ್ಲೆಯ ನಿವಾಸಿಗಳಾಗಿದ್ದು, ಪಂಜಾಬ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಘಟನೆ ಬಳಿಕ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಯುವತಿ ಮೇಲೆ ನಿರಂತರ ಅತ್ಯಾಚಾರ- ಸ್ವಯಂ ಘೋಷಿತ ಬಾಬಾ ಸಿಯಾ ರಾಮ್ ದಾಸ್ ಬಂಧನ

    ಯುವತಿ ಮೇಲೆ ನಿರಂತರ ಅತ್ಯಾಚಾರ- ಸ್ವಯಂ ಘೋಷಿತ ಬಾಬಾ ಸಿಯಾ ರಾಮ್ ದಾಸ್ ಬಂಧನ

    – ರಾಜಕಾರಣಿಗಳಿಗೆ ಶಾಲಾ ಬಾಲಕಿಯರನ್ನ ಸಪ್ಲೈ ಮಾಡ್ತಿದ್ರು ಎಂದ ಸಂತ್ರಸ್ತೆ

    ಲಕ್ನೋ: ಯುವತಿಯ ಮೇಲೆ 8 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಸ್ವಯಂ ಘೋಷಿತ ದೇವ ಮಾನವ ಬಾಬಾ ಸಿಯಾ ರಾಮ್ ದಾಸ್‍ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬಾಬಾ ಸಿಯಾ ರಾಮ್ ದಾಸ್‍ರನ್ನ ಬಂಧಿಸಿದ್ದಾರೆ. ಸುಮಾರು 8 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

    ಯುವತಿಯನ್ನು ಆಕೆಯ ಸಂಬಂಧಿಕರು 50 ಸಾವಿರ ರೂ.ಗೆ ಬಾಬಾನ ಮಹಿಳಾ ಭಕ್ತೆಯೊಬ್ಬಳಿಗೆ ಮಾರಾಟ ಮಾಡಿದ್ದರು. ಮೊದಲಿಗೆ ಯುವತಿಯನ್ನ ಲಕ್ನೋಗೆ ಕರೆದುಕೊಂಡು ಹೋಗಿ ನಂತರ ಮಿಶ್ರಿಕ್‍ನಲ್ಲಿನ ಬಾಬಾ ಆಶ್ರಮಕ್ಕೆ ಕರೆದುಕೊಂಡು ಹೋಗಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಬಾಬಾ ಅತ್ಯಾಚಾರದ ಎಂಎಂಎಸ್ ಕೂಡ ಚಿತ್ರೀಕರಣ ಮಾಡಿದ್ದು, ಯಾರಿಗಾದರೂ ಈ ವಿಷಯ ತಿಳಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದರು. ಅಲ್ಲದೇ ಮಿಶ್ರಿಖ್‍ನಿಂದ ಆಗ್ರದಲ್ಲಿನ ಆಶ್ರಮಕ್ಕೆ ಕರೆದೊಯ್ದು ಸುಮಾರು 8 ತಿಂಗಳ ಕಾಲ ಅಲ್ಲೇ ನನ್ನನ್ನು ಇರಿಸಲಾಗಿತ್ತು. ಅಲ್ಲಿ ಇತರೆ ಭಕ್ತರು ನನ್ನ ಮೇಲೆ ಪ್ರತಿ ರಾತ್ರಿ ಅತ್ಯಾಚಾರ ನಡೆಸುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

    ನಂತರ ಯುವತಿ ಮಿಶ್ರಿಕ್‍ಗೆ ಹಿಂದಿರುಗಿದಾಗ ಬಾಬಾ ಮತ್ತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಯುವತಿ ಹೇಗೋ ಮಾಡಿ ಬಾಬಾನ ಫೋನ್ ಪಡೆದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಬಾಬಾ ಸಿಯಾ ರಾಮ್ ದಾಸ್ ತನ್ನ ಮಾಲೀಕತ್ವದ ಬಾಲಕಿಯರ ಶಾಲೆಯ ಮೂಲಕ ಸೆಕ್ಸ್ ದಂಧೆ ಕೂಡ ನಡೆಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಶಾಲೆಯ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಲ್ಲದೆ ಬಾಲಕಿಯರನ್ನು ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಪ್ಲೈ ಮಾಡಲಾಗುತ್ತಿತ್ತು ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

    ಈ ಸಂಬಂಧ ಸಿತಾಪುರ್ ಪೊಲೀಸರು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿಕೊಂಡಿದ್ದು, ಇತರೆ ಆರೋಪಗಳ ಮೇಲೂ ತನಿಖೆ ಮುಂದುವರೆಸಿದ್ದಾರೆ.

    ಆದರೆ ಸ್ವಯಂಘೋಷಿತ ಬಾಬಾ ಈ ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದು, ಯುವತಿಯನ್ನ ಈ ಹಿಂದೆ ಭೇಟಿಯೇ ಮಾಡಿಲ್ಲ ಎಂದು ಹೇಳಿದ್ದಾರೆ.

  • ಮನೆ ಮುಂದೆಯೇ ಉದ್ಯಮಿ, ಹೆಂಡತಿ, ಮಗನ ಕೊಲೆ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮನೆ ಮುಂದೆಯೇ ಉದ್ಯಮಿ, ಹೆಂಡತಿ, ಮಗನ ಕೊಲೆ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

     

    ಲಕ್ನೋ: ಉದ್ಯಮಿ, ಅವರ ಹೆಂಡತಿ ಮತ್ತು ಮಗನನ್ನು ಮನೆಯ ಮುಂದೆಯೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಸೀತಾಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    60 ವರ್ಷದ ಸುನಿಲ್ ಜೈಸ್ವಾಲ್, ಅವರ ಹೆಂಡತಿ ಮತ್ತು ಮಗನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸುನಿಲ್ ಮಂಗಳವಾರ ರಾತ್ರಿ 9.30ರ ಸುಮಾರಿನಲ್ಲಿ ಮನೆಗೆ ಹಿಂದಿರುಗುವ ವೇಳೆ ಎರಡು ಬೈಕ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದ ದಷ್ಕರ್ಮಿಗಳು ಸುನಿಲ್ ಅವರ ಬಳಿ ಇದ್ದ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುನಿಲ್ ಅವರಿಗೆ ಶೂಟ್ ಮಾಡಿದ್ದಾರೆ.

    ಗುಂಡಿನ ಶಬ್ದ ಕೇಳಿ ಸುನಿಲ್ ಅವರ ಪತ್ನಿ ಮತ್ತು ಮಗ ಗಾಬರಿಯಿಂದ ಹೊರಗೆ ಓಡಿಬಂದಿದ್ದು, ದುಷ್ಕರ್ಮಿಗಳು ತಪ್ಪಿಸಿಕೊಳ್ಳದಂತೆ ತಡೆಯಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ಹೆಂಡತಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಮನೆಯೊಳಗೆ ಓಡಿಹೋಗಲು ಯತ್ನಿಸಿದ ಮಗನ ಮೇಲೂ ಶೂಟ್ ಮಾಡೋದನ್ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಬಹುದು.

    ಘಟನೆಯಲ್ಲಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಇದು ದರೋಡೆಯ ಪ್ರಕರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.