Tag: sita ramam

  • ರಶ್ಮಿಕಾ ಮಂದಣ್ಣ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡಿ, ನಿವೃತ್ತಿ ಘೋಷಿಸಿದ ದುಲ್ಕರ್ ಸಲ್ಮಾನ್

    ರಶ್ಮಿಕಾ ಮಂದಣ್ಣ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡಿ, ನಿವೃತ್ತಿ ಘೋಷಿಸಿದ ದುಲ್ಕರ್ ಸಲ್ಮಾನ್

    ಲಯಾಳಂ ಸಿನಿಮಾ ರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸದ್ಯ ಅವರು ರಶ್ಮಿಕಾ ಮಂದಣ್ಣ ಜೊತೆ ಸೀತಾ ರಾಮಂ ಸಿನಿಮಾ ಮಾಡಿದ್ದು, ಈ ಚಿತ್ರದ ಬಿಡುಗಡೆಗಾಗಿ ಪ್ರಚಾರ ಮಾಡುತ್ತಿದ್ದಾರೆ. ಇದೇ ಆಗಸ್ಟ್ 5 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾ ರಿಲೀಸಿಗೂ ಮುನ್ನ ಶಾಕಿಂಗ್ ಹೇಳಿಕೆಯ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

    ಆಗಸ್ಟ್ 5 ರಂದು ರಿಲೀಸ್ ಆಗುತ್ತಿರುವ ‘ಸೀತಾ ರಾಮಂ’ ಸಿನಿಮಾವು ರೊಮ್ಯಾಂಟಿಕ್ ಕಥೆಯನ್ನು ಹೊಂದಿದ್ದು, ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಟ್ರೈಲರ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ ಈಗಾಗಲೇ ಅನೇಕ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಿದ್ದು, ಆ ಸಿನಿಮಾಗಳಿಗಿಂತಲೂ ಇದು ಚೆನ್ನಾಗಿ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ಮುಂದೆ ಈ ರೀತಿಯ ಚಿತ್ರಗಳನ್ನು ಮಾಡಲಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ ದುಲ್ಕರ್. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ನಾನು ರೊಮ್ಯಾಂಟಿಕ್ ಹೀರೋ ಆಗಿ ಜನರ ಮನಸ್ಸು ಗೆದ್ದಿದ್ದೇನೆ. ನಾನು ಈವರೆಗೂ ನಟಿಸಿರುವ ಸಿನಿಮಾಗಳಲ್ಲಿ ಹೆಚ್ಚಿನ ಚಿತ್ರಗಳು ಇಂಥದ್ದೇ ಕಥೆಯನ್ನು ಆಧರಿಸಿವೆ. ಆದರೆ, ಇನ್ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಲಾರೆ. ಮಾಸ್ ಚಿತ್ರಗಳತ್ತ ಮುಖ ಮಾಡುವೆ ಎಂದಿದ್ದಾರೆ. ಇಂಥದ್ದೊಂದು ನಿರ್ಧಾರಕ್ಕೆ ಕಾರಣವನ್ನು ಅವರು ತಿಳಿಸಿಲ್ಲ. ಆದರೆ, ಅಭಿಮಾನಿಗಳಂತೂ ಭಾರೀ ನಿರಾಸೆಯನ್ನು ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ʻಸೀತಾ ರಾಮಂʼ ಚಿತ್ರದ ಲುಕ್‌ ಮೂಲಕ ಈದ್‌ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭಕೋರಿದ ರಶ್ಮಿಕಾ

    ʻಸೀತಾ ರಾಮಂʼ ಚಿತ್ರದ ಲುಕ್‌ ಮೂಲಕ ಈದ್‌ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭಕೋರಿದ ರಶ್ಮಿಕಾ

    ಶ್ಮಿಕಾ ಮಂದಣ್ಣ ಈಗ ಪಂಚಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದಿಂದ ವೃತ್ತಿ ಜೀವನ ಪ್ರಾರಂಭಿಸಿದ ರಶ್ಮಿಕಾ ಸದ್ಯ ಪಂಚಭಾಷಾ ನಟಿಯಾಗಿ ಗುರುತಿಸಿಕೊಳ್ತಿದ್ದಾರೆ. ಇದೀಗ ಈದ್ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ರಶ್ಮಿಕಾ ಗಿಫ್ಟ್ ನೀಡಿದ್ದಾರೆ. ಈದ್ ಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಮುಂದಿನ ಚಿತ್ರ `ಸೀತಾ ರಾಮಂ’ ಲುಕ್ ರಿವೀಲ್ ಮಾಡಿದ್ದಾರೆ.

    ನ್ನಡ, ಸೌತ್ ಸಿನಿಮಾ, ಬಾಲಿವುಡ್‌ನಲ್ಲಿ ನಟಿಸಿದ ಮೇಲೆ ಮಲಯಾಳಂನತ್ತ ರಶ್ಮಿಕಾ ಮುಖ ಮಾಡಿದ್ದಾರೆ. ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈದ್ ಹಬ್ಬದ ಪ್ರಯುಕ್ತ ಫ್ಯಾನ್ಸ್‌ಗೆ ಗಿಫ್ಟ್ ನೀಡಿದ್ದಾರೆ. ರೆಡ್ ಕಲರ್ ಹಿಜಬ್ ಧರಿಸಿ ಸಲಾಮ್ ಮಾಡಿರುವ ಪೋಸ್ಟರ್ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ರಶ್ಮಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    `ಸೀತಾ ರಾಮಂ’ ರಾಘವ ಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ದುಲ್ಕರ್ ಸಲ್ಮಾನ್‌ಗೆ ರಶ್ಮಿಕಾ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ಆಗಸ್ಟ್ 5ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]