Tag: SIT Investigation

  • ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ

    ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ

    – 1995 ರಿಂದ 2014ರ ವರೆಗಿನ ಪ್ರಕರಣಗಳ ತನಿಖೆಗೆ ಮುಂದಾದ ಎಸ್‌ಐಟಿ
    – 19 ವರ್ಷಗಳ ಹಿಂದಿನ ವೈದ್ಯರ ಲಿಸ್ಟ್ ತಯಾರು

    ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ಒಂದು ಕಡೆ ಹೂತಿಟ್ಟ ಶವಗಳ ಶೋಧ ನಡೆಯುತ್ತಿದೆ. ಇನ್ನೊಂದು ಕಡೆ, ಎಸ್‌ಐಟಿ ವಿಚಾರಣೆ ಮಾಡುತ್ತಿದೆ. ಇದರ ಮಧ್ಯೆ, ತನಿಖೆಗೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದ್ದು, 38 ವರ್ಷಗಳ ಹಿಂದೆ ಅಸಹಜ ಸಾವನ್ನಪ್ಪಿದ್ದ ಪದ್ಮಲತಾ ಕುಟುಂಬ ಎಸ್‌ಐಟಿಐನ್ನ (SIT) ಭೇಟಿಯಾಗಿದ್ದು, ಮರು ತನಿಖೆಗೆ ಮನವಿ ಮಾಡಿದೆ.

    ಧರ್ಮಸ್ಥಳದ ಬೋಳಿಯಾರ್ ನಿವಾಸಿ ಪದ್ಮಲತಾ (Padmalatha), ಕಾಲೇಜಿಗೆ ಹೋಗುವಾಗ ನಿಗೂಢವಾಗಿ ಸಾವನ್ನಪ್ಪಿದ್ದು, 57 ದಿನಗಳ ಬಳಿಕ ಶವ ಪತ್ತೆಯಾಗಿತ್ತು. ಈ ಹಿಂದೆ ಸಿಐಡಿ ಕೂಡ ಇದರ ತನಿಖೆ ನಡೆಸಿತ್ತು. ಈಗ ಎಸ್‌ಐಟಿ ತನಿಖೆ ನಡೆಸಬೇಕೆಂದು ಪದ್ಮಲತಾ ಸಹೋದರಿ ಇಂದ್ರಾವತಿ ದೂರು ಸಲ್ಲಿಸಿದ್ದಾರೆ. ಆದ್ರೆ ಸಿಪಿಎಂ (I) ಮುಖಂಡ ಬಿ.ಎಂ ಭಟ್, ಇದೊಂದು ಮರ್ಯಾದೆ ಹತ್ಯೆ ಅಲ್ಲ, ಅಸಹಜ ಸಾವು ಅಂತ ಹೇಳಿದ್ದಾರೆ.  ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?

    ಸತ್ಯಾಸತ್ಯತೆ ಹೊರಬರಲಿ ಅಂದಿದ್ದಾರೆ.
    ಈ ಬಗ್ಗೆ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿರುವ ಸಿಪಿಎಂ ಬೆಳ್ತಂಗಡಿ ಕಾರ್ಯದರ್ಶಿ ಬಿ.ಎಮ್ ಭಟ್, ಪದ್ಮಲತಾ ಅವರದ್ದು ಮರ್ಯಾದಾ ಹತ್ಯೆ ಅಲ್ಲ. ಅಸಹಜ ಸಾವು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಬಾಹುಬಲಿ ಬೆಟ್ಟದಲ್ಲಿ ಶೋಧ – 20 ಅಡಿ ಅಗಲ, 10 ಅಡಿ ಆಳಕ್ಕೆ ಭೂಮಿ ಬಗೆದರೂ ಸಿಗದ ಕಳೇಬರ

    ಇದು ಕಮ್ಯೂನಿಷ್ಟರ ಟಾರ್ಗೆಟ್ ಎಂದು ಆರೋಪಿಸಲಾಗುತ್ತಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಗೌರವ ಉಳಿಯಬೇಕು. ವೇದವಲ್ಲಿ, ಪದ್ಮಲತಾ -ಆನೆಮಾವುತ ಪ್ರಕರಣದ ಹೋರಾಟ ನಡೆಸುತ್ತಿದ್ದೇವೆ. ಶಾಸಕ ಹರೀಶ್ ಪೂಂಜಾ ಅವರ ನಡೆ ನನಗೆ ಅರ್ಥ ಆಗುತ್ತಿಲ್ಲ. ಪದ್ಮಲತಾ ಅವರದ್ದು ಮರ್ಯಾದ ಹತ್ಯೆ ಅಲ್ಲಂ, ವಸಂತ ಕುಲಾಲ್ ಎಂಬವರನ್ನು ಅರೆಸ್ಟ್ ಮಾಡಿದ್ದರು, ಆ ಬಳಿಕ ಪದ್ಮಲತಾ ತಂದೆ ದೇವಾನಂದ್ ಅವರ ಮೇಲೆ ಆರೋಪ ಮಾಡಲಾಯಿತು. ಎಲ್ಲವೂ ಕೂಡ ಕೃತಕ ಕಥೆ ಸೃಷ್ಟಿ ಮಾಡಲಾಗಿದೆ. ವೇದವಲ್ಲಿ ಪ್ರಕರಣದಲ್ಲಿ ಗಂಡ, ಸೌಜನ್ಯ ಪ್ರಕರಣದಲ್ಲಿ ಸಂತೋಷ್ ಅವರನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ಈಗ ಎಸ್‌ಐಟಿಯಲ್ಲಿ ಪ್ರಾಮಾಣಿಕ ಹಿರಿಯ ದಕ್ಷ ಅಧಿಕಾರಿಗಳಿದ್ದಾರೆ. ನಮಗೆ ಯಾವುದೇ ಅಜೆಂಡಾ ಇಲ್ಲ ನ್ಯಾಯ ಸಿಗಬೇಕು ಅಷ್ಟೇ ಅಂತ ಒತ್ತಾಯಿಸಿದ್ದಾರೆ.

    Dharmasthala 2 2

    19 ವರ್ಷಗಳ ಹಿಂದಿನ ವೈದ್ಯರ ಲಿಸ್ಟ್ ತಯಾರು
    ಇನ್ನೂ, 1995 ರಿಂದ 2014ರ ವರೆಗಿನ ಕೇಸ್‌ಗಳ ತನಿಖೆಯನ್ನೂ ಎಸ್‌ಐಟಿ ಆರಂಭಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅತ್ಯಾಚಾರ, ಕೊಲೆ, ಅನಾಥ ಶವ ಪತ್ತೆ ಪ್ರಕರಣಗಳ ತನಿಖೆ ಆರಂಭಿಸಲಾಗಿದ್ದು, ಎಲ್ಲಾ ಕೇಸ್‌ಗಳ ಮರಣೋತ್ತರ ಪರೀಕ್ಷೆ ವರದಿಗಳ ಆಳವಾದ ತನಿಖೆಗೆ ಎಸ್‌ಐಟಿ ಮುಂದಾಗಿದೆ. 19 ವರ್ಷಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ಲಿಸ್ಟ್ ಸಿದ್ಧವಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರ ದಾಖಲೆಯನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಫೊರೆನ್ಸಿಕ್ ವೈದ್ಯರ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದೆ. ಪೋಸ್ಟ್ ಮಾರ್ಟಂ ವರದಿಗಳಲ್ಲಿ ಅನುಮಾನ ಅಥವಾ ಗೊಂದಲ ಇದ್ದರೆ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಸೀದಿ, ಚರ್ಚ್‌ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ

  • ಪ್ರತಾಪ್‌ ಸಿಂಹ ಮೊಬೈಲ್‌ SITಗೆ ಕೊಟ್ರೆ ಪ್ರಜ್ವಲ್‌ ರೇವಣ್ಣನಂತೆ ಜೈಲು ಶಿಕ್ಷೆ ಆಗುತ್ತೆ – ಎಂ.ಲಕ್ಷ್ಮಣ್ ಬಾಂಬ್‌

    ಪ್ರತಾಪ್‌ ಸಿಂಹ ಮೊಬೈಲ್‌ SITಗೆ ಕೊಟ್ರೆ ಪ್ರಜ್ವಲ್‌ ರೇವಣ್ಣನಂತೆ ಜೈಲು ಶಿಕ್ಷೆ ಆಗುತ್ತೆ – ಎಂ.ಲಕ್ಷ್ಮಣ್ ಬಾಂಬ್‌

    – ಪ್ರತಾಪ್‌ ಸಿಂಹ ಮೊಬೈಲ್‌ ನೋಡಿ ಅಮಿತ್‌ ಶಾ ದಿಗ್ಭ್ರಮೆಗೊಂಡಿದ್ದರು

    ಮಡಿಕೇರಿ: ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್ ಫೋನ್‌ನಲ್ಲಿ (Mobile Phone) ಸಂಗ್ರಹವಾಗಿರುವ ಫೋಟೋಗಳು ಮತ್ತು ವೀಡಿಯೊಗಳ ಬಗ್ಗೆ ತನಿಖೆ ನಡೆಸಿದರೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಂತೆ ಅವರಿಗೂ ಜೈಲು ಶಿಕ್ಷೆಯಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ (M Lakshman) ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, 2023 ರಲ್ಲಿ ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆ ಬಳಿಕ ಪ್ರತಾಪ್ ಸಿಂಹ ಅವರ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ವೇಳೆ ಪ್ರತಾಪ್ ಸಿಂಹ (Pratap Simha) ಮೊಬೈಲ್‌ನಲ್ಲಿ ನಗ್ನ ಚಿತ್ರಗಳು, ನಗ್ನ ವೀಡಿಯೋಗಳು ಕಂಡು ಬಂದಿದ್ದವು. ಇದನ್ನು ನೋಡಿದ ಅಮಿತ್ ಶಾ ಅವರೇ ದಿಗ್ಭ್ರಮೆಗೊಂಡಿದ್ದರು. ಈ ಬಗ್ಗೆ ನನ್ನ ಬಳಿ ಆಧಾರಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಬ್ಬಕ್ಕೆ ಡಿಸ್ಕೌಂಟ್‌ – ರೈಲ್ವೇ ಟಿಕೆಟ್‌ ದರ 20% ಕಡಿತ, ಷರತ್ತುಗಳು ಏನು?

    ಪ್ರಜ್ವಲ್ ರೇವಣ್ಣ ರೀತಿಯಲ್ಲಿಯೇ ಪ್ರತಾಪ್ ಸಿಂಹ ಅವರ ಮೊಬೈಲ್‌ನಲ್ಲಿ ವೀಡಿಯೋಗಳಿವೆ. ಅಂತಹ ವಿಡಿಯೋ ಇರುವುದಕ್ಕೆ ಗೃಹ ಸಚಿವರು ಪ್ರತಾಪ್ ಸಿಂಹ ಮೊಬೈಲ್ ಸೀಜ್‌ ಮಾಡಿಸಿದ್ದರು. ಪ್ರತಾಪ್ ಸಿಂಹ ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್‌ನಲ್ಲೇ ಇವೆ, ಮೊಬೈಲ್‌ನಲ್ಲಿರುವ ವಿಡಿಯೋಗಳನ್ನು ನೋಡಿದ ನಂತರವೇ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡಬಾರದು ಎಂಬ ನಿರ್ಧಾರ ಕೈಗೊಂಡರು. ಇಂತಹ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಪ್ರದೀಪ್ ಈಶ್ವರ್ ಸೇರಿದಂತೆ ಹಲವಾರು ನಾಯಕರಿಗೆ ಬೈಯೋದೆ ಇವನ ಕೆಲಸವಾಗಿದೆ‌. ದೆಹಲಿಯಲ್ಲಿ ಇವರಿಗೆ ಬ್ಲೂ ಬಾಯ್‌ ಎನ್ನುತ್ತಾರೆಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಬೆಳಗಾವಿ ವಂದೇಭಾರತ್‌ ರೈಲಿಗೆ ಮೋದಿ ಹಸಿರು ನಿಶಾನೆ

    ಪ್ರತಾಪ್‌ ಸಿಂಹಗೆ ಕಾಂಗ್ರೆಸ್ ಪಕ್ಷ ಹಾಗೂ ತನ್ನ ಕುಟುಂಬದ ಬಗ್ಗೆ ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. 2024ರ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿದ್ದರೆ ನಾನು 3 ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದೆ. ಇನ್ಮುಂದೆ ಪ್ರತಾಪ್‌ ಸಿಂಹ ಎಲ್ಲಿ ನಿಂತರೂ ನಾನು ಅದೇ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ವಿಮಾನಗಳಿಗೆ ನಿರ್ಬಂಧ – ಪಾಕಿಗೆ 1,240 ಕೋಟಿ ನಷ್ಟ

  • ಧರ್ಮಸ್ಥಳ ಪ್ರಕರಣ | ಬಾಹುಬಲಿ ಬೆಟ್ಟದಲ್ಲಿ ಶೋಧ – 20 ಅಡಿ ಅಗಲ, 10 ಅಡಿ ಆಳಕ್ಕೆ ಭೂಮಿ ಬಗೆದರೂ ಸಿಗದ ಕಳೇಬರ

    ಧರ್ಮಸ್ಥಳ ಪ್ರಕರಣ | ಬಾಹುಬಲಿ ಬೆಟ್ಟದಲ್ಲಿ ಶೋಧ – 20 ಅಡಿ ಅಗಲ, 10 ಅಡಿ ಆಳಕ್ಕೆ ಭೂಮಿ ಬಗೆದರೂ ಸಿಗದ ಕಳೇಬರ

    – ಶವ ಹೂತಿದ್ದನ್ನು ನೋಡಿರೋದಾಗಿ ಎಸ್‌ಐಟಿಗೆ ಮತ್ತಿಬ್ಬರು ದೂರು

    ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದಲ್ಲಿ (Dharmasthala Mass Burials Case) ಎಸ್‌ಐಟಿಯಿಂದ ಶೋಧ ಕಾರ್ಯ ಮುಂದುವರಿಸಿದೆ. ಅನಾಮಿಕ ದೂರುದಾರ ನೀಡಿದ್ದ ಮಾಹಿತಿ ಆಧರಿಸಿ ಹೊಸ ಸ್ಥಳದಲ್ಲಿ ಈಗ ಉತ್ಖನನ ನಡೆಸಲಾಗುತ್ತಿದೆ. ಬಾಹುಬಲಿ ಬೆಟ್ಟದ (Bahubali Hill) ಒಣಮರದ ಕೆಳಗೆ ಶವ ಹೂತಿರೋದಾಗಿ ಅನಾಮಿಕ ಹೇಳಿದ್ದರಿಂದ, ಸುಮಾರು 10 ಅಡಿ ಆಳದವರೆಗೆ ಭೂಮಿ ಅಗೆದು ಎಸ್‌ಐಟಿ ಶೋಧ ನಡೆಸಿದೆ.

    20 ಅಡಿ ಅಗಲ, 20 ಅಡಿ ಉದ್ದ ಅಗೆದರೂ ಏನೂ ಪತ್ತೆಯಾಗಿಲ್ಲ. ಇನ್ನು, 16ನೇ ಪಾಯಿಂಟ್‌ಗೆ 15 ಅಡಿ ದೂರದಲ್ಲಿರೋ ಮತ್ತೊಂದು ಸ್ಥಳದಲ್ಲೂ ಶೋಧ ನಡೆದ್ರೂ ಏನೂ ಸಿಕ್ಕಿಲ್ಲ. ಈ ಮಧ್ಯೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಅನಾಮಿಕ ಹೆಣ ಹೂತಿದ್ದನ್ನು ನೋಡಿದ್ದಾಗಿ ಮತ್ತೆ ಇಬ್ಬರು ಎಸ್‌ಐಟಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    ದೂರು ಸ್ವೀಕರಿಸಿ ಸ್ಥಳೀಯ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡಲು ಎಸ್‌ಐಟಿ ಸೂಚನೆ ನೀಡಿದೆ. ಹೀಗಾಗಿ ಆ ಇಬ್ಬರೂ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೆ 16 ಸ್ಥಳಗಳಲ್ಲಿ ಉತ್ಖನನ ನಡೆಸಲಾಗಿದ್ದು, 6ನೇ ಪಾಯಿಂಟ್‌ನಲ್ಲಷ್ಟೇ ಅಸ್ಥಿ ಕುರುಹು ಸಿಕ್ಕಿದೆ. ತಾಂತ್ರಿಕ ಸಮಸ್ಯೆಯಿಂದ 13ನೇ ಪಾಯಿಂಟ್ ಶೋಧ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

    ಎಸ್‌ಐಟಿ ಮುಂದಿನ ಆಯ್ಕೆಗಳೇನು?
    * ಅನಾಮಿಕ ಹೇಳಿದಂತೆ ಇನ್ನಷ್ಟು ದಿನ ಶವ ಹುಡುಕೋದು
    * ಈವರೆಗಿನ ತನಿಖೆಯ ಬಗ್ಗೆ ವರದಿಯನ್ನು ಡಿಜಿಪಿಗೆ ಮಾಹಿತಿ ನೀಡೋದು
    * ಇನ್ನು ಮುಂದೆ ಶವ ಹುಡುಕಾಟ ಕಷ್ಟ ಅಂತ ಡಿಜಿಪಿಗೆ ಮಾಹಿತಿ ತಿಳಿಸೋದು
    * ಅಸ್ಥಿ ಪಂಜರ ಹುಡುಕಾಟ ಸಂಪೂರ್ಣ ಸ್ಥಗಿತಗೊಳಿಸೋದು
    * ದಾಖಲೆಗಳ ಆಧಾರದ ಮೇಲೆ ಸಾಕ್ಷಿಗಳ ಹೇಳಿಕೆ ದಾಖಲಿಸೋದು
    * ಅನಾಮಿಕನ ಹೇಳಿಕೆ ದಾಖಲು ಮಾಡಿ ವರದಿ ತಯಾರಿ ಮಾಡೋದು

  • Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

    Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಿಗೂಢ ಶವಗಳ ರಹಸ್ಯ ಭೇದಿಸಲು ವಿಶೇಷ ತನಿಖಾ ತಂಡ (Dharmasthala SIT) ಹೊರಟಿದೆ. ದಿನಕಳೆದಂತೆ ಶವ ಶೋಧ ಕಾರ್ಯಾಚರಣೆಗೆ ತಿರುವ ಪಡೆದುಕೊಳ್ತಿದೆ. ಮುಸುಕುಧಾರಿಯ ಜೊತೆ ಕಳೆದ 10 ದಿನಗಳಿಂದ ತಲೆಬುರುಡೆ ರಹಸ್ಯದ ಜಾಡು ಹಿಡಿದು ಹೊರಟ ಎಸ್‌ಐಟಿ, 13 ಪಾಯಿಂಟ್ ಪೈಕಿ 12 ಪಾಯಿಂಟ್ ಮುಗಿಸಿದೆ. ನಿನ್ನೆ 13ನೇ ಪಾಯಿಂಟ್ ಶೋಧಿಸಬೇಕಿತ್ತು. ಆದ್ರೆ ದೂರುದಾರನ ವಿಚಾರಣೆ ನಡೆಸಿ ಮತ್ತಷ್ಟು ಮಾಹಿತಿ ಕಲೆ ಹಾಕಿತ್ತು.

    ಇವತ್ತು ಕೂಡ 13ನೇ ಪಾಯಿಂಟ್ ಶೋಧಿಸಬೇಕಿತ್ತು. ಆದ್ರೆ ಎಸ್‌ಐಟಿ ಕಾರ್ಯಾಚರಣೆ ನಿಗೂಢವಾಗಿ ಸಾಗ್ತಿದೆ. 13ನೇ ಪಾಯಿಂಟ್ ಬದಲು ಹೊಸ ಸ್ಥಳ ಗುರುತು ಮಾಡಿದೆ. ಎಸ್‌ಐಟಿ ಟೀಂ ನೇರವಾಗಿ 15ನೇ ಪಾಯಿಂಟ್ ಗುರುತು ಮಾಡಿದೆ. 13ನೇ ಪಾಯಿಂಟ್‌ನಲ್ಲಿ ಶೋಧ ನಡೆಸದೇ ನೇರವಾಗಿ 15ನೇ ಪಾಯಿಂಟ್‌ಗೆ ಎಸ್‌ಐಟಿ ತಂಡ ತೆರಳಿದೆ. ತಾಂತ್ರಿಕವಾಗಿ ಬಹಳ ಸಮಸ್ಯೆ ಇರುವುದರಿಂದ ಹೊಸ ಪಾಯಿಂಟ್‌ಅನ್ನು ಗುರುತಿಸಿ ಮಹಜರು ಮಾಡುವ ಪ್ರಕ್ರಿಯೆಗೆ ತನಿಖಾಧಿಕಾರಿ ಜಿತೇಂದ್ರ ದಯಾಮ ಮುಂದಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

    ಬೋಳಿಯಾರ್ ಬಳಿ 15ನೇ ಸ್ಪಾಟ್ ಗುರುತು
    ಮುಸುಕುಧಾರಿ ಕೊಟ್ಟ ಮಾಹಿತಿ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದೆ. ಬೊಳಿಯಾರ್‌ ಸಮೀಪದ ಗೋಂಕ್ರತಾರ್ ಎಂಬಲ್ಲಿ ದೂರುದಾರ 15ನೇ ಸ್ಪಾಟ್ ಗುರುತು ಮಾಡಿದ್ದು, 15 ಪಾಯಿಂಟ್ ಗುರುತಿಸುವ ಮಹಜರು ನಡೆದಿದೆ. ಇದನ್ನೂ ಓದಿ: ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್‌ ದೃಶ್ಯ ಹಂಚಿಕೊಂಡ ಇಸ್ರೋ

    ಅನಾಮಿಕ ವ್ಯಕ್ತಿ ಧರ್ಮಸ್ಥಳದ ಅರಣ್ಯ ಭಾಗದಲ್ಲಿ ಹೂತಿದ್ದ ತಲೆ ಬರುಡೆಯನ್ನೇ ಪೊಲೀಸ್ ಠಾಣೆಗೆ ತಂದು ದೂರು ಕೊಟ್ಟಿದ್ದ ಎನ್ನಲಾಗ್ತಿರುವ ವಿಚಾರ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕಳೆದ ಜುಲೈ ತಿಂಗಳಲ್ಲಿ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ್ದ ಬುರುಡೆ ಜಾಗದಲ್ಲಿ ಶೋಧಕ್ಕೆ ಎಸ್‌ಐಟಿ ಮುಂದಾಗಿದೆ. ಕಲ್ಲೇರಿ ದಾಟಿ ಬೊಳಿಯಾರ್‌ ಸಮೀಪದ ಗೋಂಕ್ರತಾರ್ ಎಂಬಲ್ಲಿ ಮಳೆ ನಡುವೆಯೂ ಪರಿಶೀಲನೆ ನಡೆಯುತ್ತಿದೆ. ದಟ್ಟ ಕಾಡಿನ ಒಳಗೆ 40 ಅಧಿಕಾರಿಗಳ ತಂಡ ಎಲ್ಲ ಪರಿಕರಗಳ ಜೊತೆ ಹೋಗಿ ಶೋಧ ನಡೆಸ್ತಿದೆ. ಇದನ್ನೂ ಓದಿ: ಸಂವಿಧಾನ, ಮತದಾನದ ಹಕ್ಕು ರಕ್ಷಣೆಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಕೆಶಿ

  • ಪೆನ್‌ಡ್ರೈವ್‌ ಕೇಸ್‌ನಲ್ಲಿ ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್ ಮಾಡ್ತಿದೆ – ಸರ್ಕಾರದ ವಿರುದ್ಧ ನಿಖಿಲ್ ಕಿಡಿ

    ಪೆನ್‌ಡ್ರೈವ್‌ ಕೇಸ್‌ನಲ್ಲಿ ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್ ಮಾಡ್ತಿದೆ – ಸರ್ಕಾರದ ವಿರುದ್ಧ ನಿಖಿಲ್ ಕಿಡಿ

    ಬೆಂಗಳೂರು: ಪೆನ್‌ಡ್ರೈವ್‌ ಪ್ರಕರಣದಲ್ಲಿ ದೇವೇಗೌಡರ ಕುಟುಂಬವನ್ನ (Devegowdaʼs Family) ಟಾರ್ಗೆಟ್ ಮಾಡಿದ್ದಾರೆ. ಇದನ್ನ ನಾವು ಹೇಳೋದಲ್ಲ. ಯಾವುದೇ ಹಳ್ಳಿಗೆ ಹೋದರೂ ಜನ ಇದರ ಬಗ್ಗೆ ಮಾತಾಡ್ತಿದ್ದಾರೆ ಅಂತಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

    ಪೆನ್ ಡ್ರೈವ್ ಕೇಸ್ ನಲ್ಲಿ (Pendrive Case) ದೇವೇಗೌಡ ಕುಟುಂಬ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ದನಿಗೂಡಿಸಿದ ಅವರು, ಜೆಪಿ ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಮಮತಾಗೆ ನಿಮ್ಮ ಬೆಲೆ ಎಷ್ಟು ಎಂದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ 24 ಗಂಟೆ ಪ್ರಚಾರದಿಂದ ನಿಷೇಧ

    ದೇವೇಗೌಡರ ಫ್ಯಾಮಿಲಿ ಟಾರ್ಗೆಟ್ ಮಾಡಿದ್ದಾರೆ ಅನ್ನೋದು ನಾವು ಹೇಳೋದಲ್ಲ. ಯಾವುದೇ ಹಳ್ಳಿಗೆ ಹೋದರೂ ಜನ ಇದರ ಬಗ್ಗೆ ಮಾತಾಡ್ತಿದ್ದಾರೆ. ಸರ್ಕಾರದವರು ಟಾರ್ಗೆಟ್ ರಾಜಕಾರಣ ಮಾಡ್ತಿದ್ದಾರೆ. ದೇವೇಗೌಡರ ಕುಟುಂಬ ಇರಬಹುದು ಅಥವಾ ರೇವಣ್ಣ ಅವರನ್ನ ಸಾಫ್ಟ್ ಟಾರ್ಗೆಟ್ ಮಾಡಿಕೊಂಡು ಜೈಲಿಗೆ ಕಳಿಸಬೇಕು ಅನ್ನೋ ದುರುದ್ದೇಶದಿಂದ ರೇವಣ್ಣ ಅವರನ್ನ ಕಳಿಸಿರೋದು. ಇದೆಲ್ಲವನ್ನು ಜನ ಗಮನಿಸುತ್ತಿದ್ದಾರೆ. ಬಹಳ ದಿನ ಇವೆಲ್ಲ ನಡೆಯೋದಿಲ್ಲ ಎಂದು ಕಿಡಿ ಕಾರಿದರು.

    ಇದೇ ವೇಳೆ ಕುಮಾರಸ್ವಾಮಿ (HD Kumaraswamy) ಕುಟುಂಬದವರ ಫೋನ್‌ ಕದ್ದಾಲಿಕೆ ನಾವು ಮಾಡ್ತಿಲ್ಲ, ಕುಮಾರಸ್ವಾಮಿ ವಿಷಯ ದಿಕ್ಕುತಪ್ಪಿಸಲು ಆರೋಪ ಮಾಡ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: General Elections 2024: ಕಣದಲ್ಲಿರೋ 1,600 ಕ್ಕೂ ಹೆಚ್ಚು ಅಭ್ಯರ್ಥಿಗಳಿಗಿದೆ ಕ್ರಿಮಿನಲ್ ಹಿನ್ನೆಲೆ- ವರದಿ

    ಕುಮಾರಸ್ವಾಮಿ ಅವರು ಈಗಾಗಲೇ ಫೋನ್‌ ಟ್ಯಾಪ್‌ (Phone Tap) ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರಿಗೆ ಯಾವುದೋ ಒಂದು ಮೂಲದ ಮಾಹಿತಿ ಸಿಕ್ಕಿರಬಹುದು‌. ಹೀಗಾಗಿ ಅವರು ಫೋನ್ ಟ್ಯಾಪ್ ಬಗ್ಗೆ ಮಾತಾಡಿದ್ದಾರೆ. ಈ ಪ್ರಕರಣದಲ್ಲಿ ಮೊದಲ ದಿನದಿಂದಲೂ SIT ರಚನೆ ಆದಾಗಿನಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಇದು ಇಡೀ ರಾಜ್ಯದಲ್ಲಿ ಪ್ರಶ್ನೆ ಎದ್ದಿದೆ. ಕುಮಾರಸ್ವಾಮಿ ಅವರಿಗೆ ಮಾಹಿತಿ ಬಂದಿರಬಹುದು. ಅವರು ಸುಮ್ಮನೆ ಮಾತಾಡೋದಿಲ್ಲ. ಮಾಹಿತಿ ಇದ್ದೇ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳೊದು ಬಿಟ್ಟು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

  • ಹಾಸನ ಸಂಸದರು ವಿದೇಶದಿಂದ ವಾಪಸ್ ಬಂದು SIT ತನಿಖೆ ಎದುರಿಸಬೇಕು – ನಿಖಿಲ್ ಕುಮಾರಸ್ವಾಮಿ

    ಹಾಸನ ಸಂಸದರು ವಿದೇಶದಿಂದ ವಾಪಸ್ ಬಂದು SIT ತನಿಖೆ ಎದುರಿಸಬೇಕು – ನಿಖಿಲ್ ಕುಮಾರಸ್ವಾಮಿ

    – ಪ್ರಜ್ವಲ್‌ ಹೆಸರು ಹೇಳಲು ಹಿಂಜರಿದ ನಿಖಿಲ್‌

    ಬೆಂಗಳೂರು: ಹಾಸನ ಸಂಸದರು (Hassan MP) ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಬಳಿಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮನವಿ ಮಾಡಿದ್ದಾರೆ.

    ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡಲು ಸಿಎಂ ಪತ್ರ ಬರೆದಿರುವ ವಿಚಾರ ಮತ್ತು ಪ್ರಜ್ವಲ್ ವಾಪಸ್ ಬರಲು ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದರೂ ವಾಪಸ್ ಬಾರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಹಾಸನ ಸಂಸದರಿಗೆ ನೇರವಾಗಿ ಬಂದು SIT ತನಿಖೆ ಎದುರಿಸುವಂತೆ ಮನವಿ ಮಾಡಿದ್ರು. ಧೈರ್ಯವಾಗಿ ತನಿಖೆ ಎದುರಿಸಿ ಅಂತ ಇಡೀ ಸಮಾಜಕ್ಕೆ ಸಂದೇಶ ಕೊಟ್ಟಿರು. ನಾವೂ ಕೂಡಾ ಸಂಸದರು ಬರಬಹುದು ಅಂತ ಕಾಯ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿಗಳಿಗೆ ಸಿಹಿಸುದ್ದಿ ಕೊಟ್ಟ ಡಿಬಾಸ್- ‘ಡೆವಿಲ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

    ನನ್ನ ಅಭಿಪ್ರಾಯವೂ ಅದೇ ಆಗಿದೆ. ಒಬ್ಬ ಪ್ರಜೆಯಾಗಿ ನಾನು ಕೇಳಿಕೊಳ್ಳೋದು, ಆರೋಪ ಬಂದಿರೋ ಸಮಯದಲ್ಲಿ ಬಂದು ತನಿಖೆ ಎದುರಿಸಬೇಕು. ಹಾಸನ ಸಂಸದರು ವಿದೇಶದಿಂದ ತನಿಖೆ ಎದುರಿಸೋದು ಸೂಕ್ತ. ಅತೀ ಶೀಘ್ರದಲ್ಲಿ ಅವರು ಬರಲಿ ಅಂತ ನಾವು ಕೂಡ ಕೇಳಿಕೊಳ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ದ ಆರೋಪ ಮಾಡುವ ವಿಪಕ್ಷಗಳ ವಿರುದ್ದ ಅಗ್ರೆಸಿವ್ ಅಟ್ಯಾಕ್ ಮಾಡಲು ಸಿಎಂ ಸೂಚನೆ

  • ಸಿಡಿ ಕೇಸ್ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ

    ಸಿಡಿ ಕೇಸ್ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಯುವತಿ

    ಬೆಂಗಳೂರು: ಇನ್ನೇನೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಗಲಿದೆ. ಎಸ್‍ಐಟಿ ಅತ್ಯಾಚಾರ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಗೆ ಮುಂದಾಗಿದೆ ಎಂಬ ಸುದ್ದಿ ಬರುತ್ತಿದ್ದಂತೆ ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಎಸ್‍ಐಟಿ ಈಗ ನಡೆಸುತ್ತಿರುವ ತನಿಖೆಯ ಮೇಲೆ ನಂಬಿಕೆ ಇಲ್ಲ. ಈಗ ಇರುವ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸುತ್ತಿದ್ದಾರೆ ಎಂಬ ಅನುಮಾನ ಇದೆ. ಅಲ್ಲದೇ ಆರೋಪಿ ಪ್ರಭಾವಿ ಆಗಿರೋದರಿಂದ ಸರಿಯಾಗಿ ವಿಚಾರಣೆಯೂ ನಡೆಯುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ ಮತ್ತು ಎಸ್‍ಐಟಿ ಮುಖ್ಯಸ್ಥರಿಗೆ ಉತ್ತರಿಸಲು ನೋಟಿಸ್ ನೀಡಿದೆ.

    ಪೋಷಕರ ಭೇಟಿಗೆ ಒಪ್ಪದ ಯುವತಿ:
    ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದರು.

    ಒಪ್ಪಿತ ಲೈಂಗಿಕ ಕ್ರಿಯೆನಾ?: ಪ್ರಕರಣದ ಆರಂಭದಲ್ಲಿ ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಹಾನ್‌ ನಾಯಕ ಸೇರಿದಂತೆ 9 ಮಂದಿ ವಿರುದ್ಧ ಶೀಘ್ರವೇ ಕೇಸ್‌ – ಬಾಲಚಂದ್ರ ಜಾರಕಿಹೊಳಿ

    ನರೇಶ್ ಗೌಡ, ಶ್ರವಣ್‍ಗೆ ಜಾಮೀನು: ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ಇಬ್ಬರು ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ಗೆ ಸಿಟಿ ಸಿವಿಲ್ ಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು. ಆರೋಪಿಗಳು ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ ಎಂದು ವಾದ ಮಾಡಿದ್ದ ಎಸ್‍ಐಟಿಗೆ ಈ ಆದೇಶದಿಂದ ಹಿನ್ನಡೆಯಾಗಿದೆ. ಅಲ್ಲದೇ ಆದೇಶ ನೀಡಿದ ನ್ಯಾಯಾಲಯ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಏನಿದು ಪ್ರಕರಣ?
    ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.  ಇದನ್ನೂ ಓದಿ: ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

    ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಪಿಪಿಇ ಕಿಟ್ ಧರಿಸಿ ಉಪಚುನಾವಣೆಗೆ ಮತದಾನ ಮಾಡಿದ್ದರು. ಇದನ್ನೂ ಓದಿ:  ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

  • ಅಮೂಲ್ಯ, ಆರ್ದ್ರಾ ವಾಟ್ಸಪ್ ಗ್ರೂಪ್‍ನಲ್ಲಿ ಗೌಪ್ಯ ಚರ್ಚೆ – ಎಸ್‍ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಅಮೂಲ್ಯ, ಆರ್ದ್ರಾ ವಾಟ್ಸಪ್ ಗ್ರೂಪ್‍ನಲ್ಲಿ ಗೌಪ್ಯ ಚರ್ಚೆ – ಎಸ್‍ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

    ಪಾಕ್ ಪ್ರೇಮಿ ಅಮೂಲ್ಯ ಸೇರಿದಂತೆ ಕೆಲ ವಿದ್ಯಾರ್ಥಿಗಳು ಬೆಂಗಳೂರು ಸ್ಟೂಡೆಂಟ್ ಫೆಡರೇಶನ್(ಬಿಎಸ್‍ಎಫ್) ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. ಸಿಎಎ, ಎನ್‌ಆರ್‌ಸಿ ಸೇರಿದಂತೆ ಕೆಲ ಹಿಂದೂ ವಿರೋಧಿ ವಿಚಾರಗಳಿಗೆ ಹೇಗೆ ಪ್ರತಿಭಟನೆಯ ರೂಪುರೇಷಗಳು ಇರಬೇಕು ಅನ್ನೋದನ್ನ ಈ ಗ್ರೂಪ್‍ನಲ್ಲಿ ಚರ್ಚೆ ಮಾಡುತ್ತಿದ್ದರು. ನೂರಾರು ಎಡಪಂಥೀಯ ವ್ಯಕ್ತಿಗಳು, ವಿದ್ಯಾರ್ಥಿಗಳು ಈ ಗ್ರೂಪ್‍ನಲ್ಲಿದ್ದರು.

    ಈ ಗ್ರೂಪ್ ಹೊರತುಪಡಿಸಿ ಅಮೂಲ್ಯ, ಆರ್ದ್ರಾ ಸೇರಿದಂತೆ ಕೆಲವೇ ಸಮಾನ ಮನಸ್ಕರು ಸೇರಿಕೊಂಡು ಯಂಗ್ ಇಂಡಿಯಾ ಅನ್ನೋ ಮತ್ತೊಂದು ವಾಟ್ಸಪ್ ಗ್ರೂಪ್ ಮಾಡ್ಕೊಂಡಿದ್ದರು. ಯಂಗ್ ಇಂಡಿಯಾ ಗ್ರೂಪ್‍ನಲ್ಲಿ ಆಯ್ದ ಕೆಲವರಿಗಷ್ಟೇ ಅವಕಾಶವಿದ್ದು, ಪ್ರತಿಭಟನೆಗಳು, ಸಭೆ ಸಮಾರಂಭಗಳ ಬಗ್ಗೆ ಗೌಪ್ಯ ಮಾಹಿತಿಗಳನ್ನು ಇದರಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

    ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ತಂಡ ಆರೋಪಿಗಳ ಬಳಿ ಸೋಷಿಯಲ್ ಮೀಡಿಯಾದ ಪೋಸ್ಟ್ ಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಯಂಗ್ ಇಂಡಿಯಾ ವಾಟ್ಸಪ್ ಗ್ರೂಪ್‍ನಲ್ಲಿ ಯಾರೆಲ್ಲಾ ಸದಸ್ಯರು ಇದ್ದಾರೋ, ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ತಿರ್ಮಾನ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ವಿಚಾರಣೆ ವೇಳೆ ಕಾರ್ಪೋರೇಟರ್ ಇಮ್ರಾನ್ ಪಾಷ ಆಯೋಜನೆ ಮಾಡಿದ್ದ ಎರಡು ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸರೋದಾಗಿ ಅಮೂಲ್ಯ ಹೇಳಿಕೊಂಡಿದ್ದಾಳೆ. ಸದ್ಯ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಹಂತ ಹಂತವಾಗಿ ವಿವಿಧ ಪೊಲೀಸರ ತಂಡಗಳು ಅಮೂಲ್ಯ, ಆರ್ದ್ರಾಳನ್ನು ವಿಚಾರಣೆ ನಡೆಸಲಿದ್ದಾರೆ.