Tag: sit

  • Dharmasthala Case | ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ, ಈ ತಿಂಗಳೊಳಗೆ ವರದಿ: ಪರಮೇಶ್ವರ್

    Dharmasthala Case | ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ, ಈ ತಿಂಗಳೊಳಗೆ ವರದಿ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳದ ಪ್ರಕರಣಗಳ (Dharmasthala Case) ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ (SIT) ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದರು.

    ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿಯವರು ಹೇಳಿದ್ದರು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಅಂತಿಮ ವರದಿಯನ್ನು ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪುನಾರಚನೆಗೆ ಅವಕಾಶ ನೀಡಿದ್ರೆ ಸಿಎಂ ಸ್ಥಾನ ಅಬಾಧಿತ, ಇಲ್ಲದೇ ಇದ್ರೆ ರಾಜಕೀಯ ಚಟುವಟಿಕೆ: ರಾಜಣ್ಣ

    ನವೆಂಬರ್ 1ರಂದು ಮುಖ್ಯಮಂತ್ರಿಗಳು ಸಂತೋಷ ಕೂಟ ಏರ್ಪಡಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಊಟ ಹಾಕಿಸಿದರೆ, ರಾಜಕೀಯ ದೊಡ್ಡ ಬೆಳವಣಿಗೆ ಎನ್ನಬೇಕಿಲ್ಲ. ಇದಕ್ಕೆ ರಾಜಕೀಯವಾಗಿ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಸಂಪುಟ ಪುನರ್ ರಚನೆ ಮಾಡುವ ಕುರಿತು ಹೈಕಮಾಂಡ್‌ನವರು ಈವರೆಗೆ ಯಾರೂ ಹೇಳಿಲ್ಲ. ಈ ಬಗ್ಗೆ ಮುನ್ಸೂಚನೆಯೂ ಇಲ್ಲ ಎಂದರು. ಇದನ್ನೂ ಓದಿ: ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

  • ಆಳಂದ ಆಯ್ತು, ಇದೀಗ ಕಲಬುರಗಿಯ ಎರಡು ಕ್ಷೇತ್ರಗಳಲ್ಲಿ ವೋಟ್ ಚೋರಿ ಅನುಮಾನ

    ಆಳಂದ ಆಯ್ತು, ಇದೀಗ ಕಲಬುರಗಿಯ ಎರಡು ಕ್ಷೇತ್ರಗಳಲ್ಲಿ ವೋಟ್ ಚೋರಿ ಅನುಮಾನ

    ಕಲಬುರಗಿ: ಆಳಂದ (Aland) ವೋಟ್ ಚೋರಿ (Vote Theft) ಪ್ರಕರಣ ಸಂಬಂಧ ಎಸ್‌ಐಟಿ (SIT) ತನಿಖೆ ಚುರುಕುಗೊಂಡ ಬೆನ್ನಲ್ಲೇ ಕಲಬುರಗಿಯ (Kalaburagi) ಎರಡು ಕ್ಷೇತ್ರಗಳಲ್ಲಿ ವೋಟ್ ಚೋರಿ ನಡೆದಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ.

    ಕಲಬುರಗಿ ಜಿಲ್ಲೆಯ ಆಳಂದದಲ್ಲಿ ವೋಟ್ ಚೋರಿ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆಳಂದ ತಾಲೂಕು ಬಿಟ್ಟು ಕಲಬುರಗಿ ಜಿಲ್ಲೆಯ ಇನ್ನೂ ಎರಡು ಕ್ಷೇತ್ರಗಳಲ್ಲಿ ಕೂಡ ವೋಟ್ ಚೋರಿ ನಡೆದಿದ್ಯಾ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ ಎಸ್‌ಐಟಿಗೆ ದಾಖಲೆ ಲಭ್ಯವಾಗಿದೆ. ಹೀಗಾಗಿ ಆ ಎರಡು ಕ್ಷೇತ್ರಗಳಲ್ಲಿ ತನಿಖೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ.ಇದನ್ನೂ ಓದಿ: ‘ವೋಟ್ ಚೋರಿ’ ಪ್ರಕರಣ | ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಮನೆ, ಬಾರ್ ಮೇಲೆ ಎಸ್‌ಐಟಿ ದಾಳಿ

    ಕಲಬುರಗಿಯ ಸಿಎ ಮೂಲಕ ಡೇಟಾ ಆಪರೇಟರ್ ಅಕ್ರಂ, ಅಸ್ಲಂ ಎಂಬುವವರಿಗೆ ಹಣ ಸಂದಾಯವಾಗಿತ್ತು. ಬಳಿಕ ಸಿಎ ಮನೆ ಮೇಲೆ ದಾಳಿ ಮಾಡಿ, 2 ಲ್ಯಾಪ್ ಟಾಪ್‌ಗಳನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದೀಗ ಲ್ಯಾಪ್‌ಟಾಪ್ ಸಾಕ್ಷ್ಯಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಮುಂದಿನ ಕಾರ್ಯಚರಣೆ ನಡೆಸಿದ್ದಾರೆ.

  • ಧರ್ಮಸ್ಥಳ ಬುರುಡೆ ಕೇಸ್‌ | ಮಟ್ಟಣ್ಣನವರ್‌, ತಿಮರೋಡಿ, ಸುಜಾತಾ ಭಟ್‌ ಸೇರಿ ಐವರಿಗೆ ಮತ್ತೆ ನೋಟಿಸ್‌

    ಧರ್ಮಸ್ಥಳ ಬುರುಡೆ ಕೇಸ್‌ | ಮಟ್ಟಣ್ಣನವರ್‌, ತಿಮರೋಡಿ, ಸುಜಾತಾ ಭಟ್‌ ಸೇರಿ ಐವರಿಗೆ ಮತ್ತೆ ನೋಟಿಸ್‌

    – ವಿಚಾರಣೆಗೆ ಹಾಜರಾಗದಿದ್ರೆ ಮುಲಾಜಿಲ್ಲದೇ ಅರೆಸ್ಟ್‌ ಎಚ್ಚರಿಕೆ
    – ತಿಮರೋಡಿ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ

    ಮಂಗಳೂರು: ಇಡೀ ದೇಶಾದ್ಯಂತ ಸದ್ದು ಮಾಡಿದ್ದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ (Dharmasthala Case) ಇನ್ನೇನು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬರುವಂತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ವಿಚಾರಣೆಗೆ ಬೆಳ್ತಂಗಡಿಯ ಎಸ್‌ಐಟಿ (SIT) ಕಚೇರಿಗೆ ಹಾಜರಾಗಲು ಐವರಿಗೆ ವಿಶೇಷ ತನಿಖಾ ತಂಡ ನೋಟಿಸ್‌ ನೀಡಿದೆ.

    ಪ್ರಕರಣದ ಸೂತ್ರಧಾರಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ (Girish Mattannavar), ಜಯಂತ್. ಟಿ, ವಿಠಲ ಗೌಡ, ಸುಜಾತ ಭಟ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತನಿಖಾಧಿಕಾರಿ ಎಸ್.ಪಿ ಜಿತೇಂದ್ರ ದಯಾಮಾ ನೋಟಿಸ್‌ ಜಾರಿಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗದಿದ್ದರೆ, ಬಂಧನ ಮಾಡುವ ಎಚ್ಚರಿಕೆಯೊಂದಿಗೆ ನೋಟಿಸ್‌ ನೀಡಿದ್ದಾರೆ. ಬಿಎನ್‌ಎಸ್‌ಎಸ್ 35(3) ಅಡಿಯಲ್ಲಿ ಪ್ರದತ್ತವಾದ ವಿಶೇಷ ಅಧಿಕಾರ ಬಳಸಿಕೊಂಡು ಪ್ರಕರಣದ ಸೂತ್ರಧಾರಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ. ಇದನ್ನೂ ಓದಿ: ನಕಲಿ ʻಲೋಕಾಯುಕ್ತ ಜಸ್ಟೀಸ್ʼ ಹಾವಳಿಗೆ ಬೆಚ್ಚಿಬಿದ್ದ ಅಧಿಕಾರಿಗಳು – ದೂರು ದಾಖಲು

    ಮತ್ತೆ ನೋಟಿಸ್‌ಗೆ ಕಾರಣ ಏನು?
    ನೊಟೀಸ್‌ನಲ್ಲಿ ಹಲವು ಅಂಶ ಉಲ್ಲೇಖಿಸಿರೋ ತನಿಖಾಧಿಕಾರಿ ದಯಾಮ, ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಹಲವು ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ನಿಮ್ಮನ್ನ ವಿಚಾರಿಸುವುದು ಅಗತ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮುಂದಿನ ತಿಂಗಳಿಂದಲೇ ಭಾರತ್ ಟ್ಯಾಕ್ಸಿ ಶುರು – ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿಗೆ ಬ್ರೇಕ್!

    ತಿಮರೋಡಿ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ
    ಇನ್ನೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಪರ ಪ್ರತಿಭಟನೆಗೆ ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿದೆ. ತಿಮರೋಡಿ ಪ್ರಕರಣ ನ್ಯಾಯಾಲಯದಲ್ಲಿ ಇರೋ ಹಿನ್ನೆಲೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಇನ್ನೂ ಅನುಮತಿ ಇಲ್ಲದಿದ್ರೂ ಪ್ರತಿಭಟನೆಗೆ ಮುಂದಾಗಿದ್ದ ಕೆಲ ತಿಮರೋಡಿ ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರಸ್ತೆಗಳಲ್ಲಿ ಬಟರ್ ಫ್ಲೈ ಲೈಟ್ ಹಾಕಿದ್ದೇವೆಂದು 73 ಲಕ್ಷ ಹಣ ಪಡೆದು ಗುಳುಂ; ಗೋಲ್ಮಾಲ್ ಬಹಿರಂಗ

  • ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

    ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

    – 2019ರಲ್ಲೇ ಸಿನೆಮಾ ಮಾದರಿಯಲ್ಲಿ ಚಿನ್ನ ಕಳ್ಳತನದ ಪ್ಲಾನ್ ಮಾಡಿದ್ದ ಕಿರಾತಕ

    ಬಳ್ಳಾರಿ: ಕೇರಳದ (Kerala) ಶಬರಿಮಲೆಯಲ್ಲಿ ಚಿನ್ನ ಕಳ್ಳತನ ಪ್ರಕರಣಕ್ಕೆ (Sabarimala Gold Theft Case) ಸಂಬಂಧಿಸಿದಂತೆ ದಿನಕ್ಕೊಂದು ಸತ್ಯ ಹೊರಬರುತ್ತಿದೆ. ನಾಲ್ಕೂವರೆ ಕೆಜಿ ಚಿನ್ನ ಕಳ್ಳತನದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಸಿನಿಮಾ ಮಾದರಿಯಲ್ಲಿ ಪಕ್ಕಾ ಪ್ಲಾನ್ ಮಾಡಿದ್ದ ಅನ್ನೋದು ಎಸ್‌ಐಟಿ (SIT) ತನಿಖೆ ವೇಳೆ ಬಯಲಾಗಿದೆ.

    ಉನ್ನಿಕೃಷ್ಣನ್ ಖತರ್ನಾಕ್ ಪ್ಲಾನ್‌ಗೆ ಸ್ವತಃ ಕೇರಳ ಎಸ್‌ಐಟಿ ತಂಡವೇ ಶಾಕ್ ಆಗಿದೆ. 2019ರಲ್ಲೇ ಖತರ್ನಾಕ್ ಪ್ಲಾನ್ ಮಾಡಿದ್ದ ಉನ್ನಿಕೃಷ್ಣನ್, ಬಳ್ಳಾರಿ, ಬೆಂಗಳೂರು ಹಾಗೂ ತಮಿಳುನಾಡು ಸೇರಿ ಒಟ್ಟು 3 ಕಡೆ ಶಬರಿಮಲೆ ದೇವಸ್ಥಾನಕ್ಕೆ ಚಿನ್ನ ಲೇಪಿತ ಬಾಗಿಲು ಮಾಡಿಸಿದ್ದ. 2 ಕಡೆ ಮಾತ್ರ ನಿಜವಾದ ಚಿನ್ನದ ಬಾಗಿಲು ಮಾಡಿಸಿದ್ರೆ, ಇನ್ನೊಂದು ಕಡೆ ತಾಮ್ರ ಹೆಚ್ಚಿರುವ ಬಾಗಿಲು ರೆಡಿ ಮಾಡಿಸಿದ್ದ. ಕೊನೆಗೆ ಅಪ್ಪಟ ಚಿನ್ನದ ಬಾಗಿಲುಗಳನ್ನ ತಾನೇ ಇಟ್ಟುಕೊಂಡಿದ್ದ. ಬಳಿಕ ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟು ತನಗೇನೂ ಗೊತ್ತಿಲ್ಲ ಎಂಬಂತೆ ಅಮಾಯಕನ ರೀತಿ ಇದ್ದ. ಈ ಸತ್ಯ ಇದೀಗ ಎಸ್‌ಐಟಿ ತನಿಖೆಯಲ್ಲಿ ಬಟಾಬಯಲಾಗಿದೆ. ಇದನ್ನೂ ಓದಿ: ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

    ಬಳ್ಳಾರಿಯ ಚಿನ್ನದ ಉದ್ಯಮಿ, ರೊದ್ದಂ ಗೋಲ್ಡ್ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರು 2019ರಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಚಿನ್ನದ ಬಾಗಿಲು ರೆಡಿ ಮಾಡಿಕೊಟ್ಟಿದ್ದರು. ಅದು ಬಳ್ಳಾರಿಯಲ್ಲಿಯೇ ಚಿನ್ನದ ಬಾಗಿಲು ರೆಡಿಯಾಗಿತ್ತು. ಉನ್ನಿಕೃಷ್ಣನ್ ಕೇಳಿದ್ದ ಹಿನ್ನೆಲೆಯಲ್ಲಿ ಈ ಚಿನ್ನದ ಉದ್ಯಮಿ ಗೋವರ್ಧನ್ ಚಿನ್ನದ ಬಾಗಿಲು ದಾನ ಮಾಡಿದ್ದರು. ಆದರೆ ಅಸಲಿ ಚಿನ್ನದ ಬಾಗಿಲು ಬದಲಾಗಿದ್ದೇಗೆ ಅನ್ನೋದೆ ಸಸ್ಪೆನ್ಸ್ ಆಗಿ ಉಳಿದಿತ್ತು. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ್, ನಾನು 2019ರಲ್ಲಿ ಚಿನ್ನದ ಬಾಗಿಲು ರೆಡಿ ಮಾಡಿ ಕೊಟ್ಟಿದ್ದು ನಿಜ. ಆದ್ರೆ ಅದು ಆಮೇಲೆ ಹೇಗೆ ಬದಲಾಯ್ತು ಅನ್ನೋದು ಗೊತ್ತಿಲ್ಲ. ನಾನು ಅಯ್ಯಪ್ಪಸ್ವಾಮಿ ಭಕ್ತ ಆಗಿದ್ರಿಂದ 2019ರಿಂದಲೇ ನನಗೆ ಉನ್ನಿಕೃಷ್ಣನ್ ಪರಿಚಯ ಆಗಿತ್ತು. ದೇವರ ಚಿನ್ನ ಕದ್ದವರು ಯಾರೇ ಆಗಿದ್ರೂ ಶಿಕ್ಷೆ ಆಗುತ್ತೆ. ನನ್ನ ಮೇಲೂ 475 ಗ್ರಾಂ ಚಿನ್ನ ಖರೀದಿಯ ಆರೋಪವಿದ್ದು, ಎಲ್ಲವನ್ನೂ ಎಸ್‌ಐಟಿಗೆ ಹಿಂದಿರುಗಿಸಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ಆದರೆ ಉನ್ನಿಕೃಷ್ಣನ್ ಇತ್ತೀಚೆಗೆ ಕೊಟ್ಟಿದ್ದು ದೇವರ ಚಿನ್ನ ಅನ್ನೋದು ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದ ಅಸಲಿ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

    ಇನ್ನೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಚಿನ್ನ ಕದ್ದ ಆರೋಪಿ ಉನ್ನಿಕೃಷ್ಣನ್ ಈಗಾಗಲೇ ಕಂಬಿ ಹಿಂದೆ ತಳ್ಳಲ್ಪಟ್ಟಿದ್ದಾನೆ. ಆದ್ರೆ ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ನಂಬಿ ಚಿನ್ನ ಖರೀದಿ ಮಾಡಿದವರ ಪಾಡು ಕಾಗೆಯಂತಾಗಿದೆ. ಇನ್ನೆರಡು ದಿನಗಳಲ್ಲಿ ಕೇರಳ ಎಸ್‌ಐಟಿ ತಂಡ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಲಿದ್ದು, ಇನ್ನಷ್ಟು ಕರಾಳ ಸತ್ಯ ಬಯಲಾಗಲಿದೆ. 

  • ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

    ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

    – 2019ರಲ್ಲಿ ಬಾಗಿಲು ನಿರ್ಮಾಣ ಮಾಡಿಕೊಟ್ಟಿದ್ದು ನಿಜ

    ಬಳ್ಳಾರಿ: ಆರೋಪಿ ಉನ್ನಿಕೃಷ್ಣನ್ ನನಗೆ ಚಿನ್ನ ಕೊಟ್ಟಿದ್ದು ನಿಜ ಎಂದು ಬಳ್ಳಾರಿಯ (Ballari) ರೊದ್ದಂ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್ ಸತ್ಯ ಒಪ್ಪಿಕೊಂಡಿದ್ದಾರೆ.

    ಶಬರಿಮಲೆಯ ಚಿನ್ನ (Sabarimala Gold Theft Case) ಬಳ್ಳಾರಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಗೋವರ್ಧನ್, ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶಿಥಿಲವಾಗಿದೆ, ದೇವಸ್ಥಾನದ ಒಳಗೆ ಸರ್ಪಗಳು ಹೋಗುತ್ತಿವೆ ಅಂತಾ ಉನ್ನಿಕೃಷ್ಣನ್ ಹೇಳಿದ್ದರು. ಬಾಗಿಲನ್ನ ದೇಣಿಗೆ ರೀತಿ ನೀಡಿ ಎಂದು ಉನ್ನಿಕೃಷ್ಣನ್ ನನ್ನ ಬಳಿ ಕೇಳಿದ್ದರು. ಅಯ್ಯಪ್ಪ ಸ್ವಾಮಿ ಭಕ್ತ ಆಗಿದ್ದರಿಂದ ನಾನು ಒಪ್ಪಿಕೊಂಡೆ. ಕೇರಳದಲ್ಲಿ ಕಟ್ಟಿಗೆ ಖರೀದಿ ಮಾಡಿ, ಬೆಂಗಳೂರಿನ ಶ್ರೀರಾಂಪುರ ಐಯಪ್ಪ ಸ್ವಾಮಿ ದೇಗುಲದಲ್ಲಿ ಬಾಗಿಲು ನಿರ್ಮಾಣ ಮಾಡಿದ್ದೆವು. ಅಲ್ಲಿಂದ ಬಳ್ಳಾರಿಗೆ ಕಟ್ಟಿಗೆ ಬಾಗಿಲು ತಂದು ಅದಕ್ಕೆ ಚಿನ್ನದ ಲೇಪನ ಮಾಡಿ ಕೊಟ್ಟಿದ್ದೇವೆ. 2019ರಲ್ಲಿ ಬಾಗಿಲನ್ನ ನಿರ್ಮಾಣ ಮಾಡಿಕೊಟ್ಟಿದ್ದು ನಿಜ. ದ್ವಾರಪಾಲಕದ ಬಗ್ಗೆ 4 ಕೆಜಿ ಚಿನ್ನ ಕಡಿಮೆ ತೂಕ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

    ಎಸ್‌ಐಟಿ (SIT) ಅಧಿಕಾರಿಗಳು ತನಿಖೆ ಮಾಡಿದ್ದು ಸತ್ಯ, ಅವರ ತನಿಖೆಗೆ ಸಹಕಾರ ನೀಡುತ್ತೇವೆ. ನಾನು ಅಯ್ಯಪ್ಪ ಸ್ವಾಮಿ ಭಕ್ತ, ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗುತ್ತದೆ. ಎಸ್‌ಐಟಿ ಅಧಿಕಾರಿಗಳು ನಿನ್ನೆ ಬಳ್ಳಾರಿಗೆ ಬಂದಿದ್ದರು. ನಮ್ಮ ಜ್ಯುವೆಲ್ಲರಿ ಶಾಪ್‌ನಲ್ಲಿ ತನಿಖೆ ಮಾಡಿ ವಿಚಾರಣೆ ಮಾಡಿದರು. 476 ಗ್ರಾಂ ಚಿನ್ನದ ಆರೋಪ ನನ್ನ ಮೇಲೆ ಇದೆ. ಅದು ತನಿಖೆ ನಡಿಯುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೇಳಲು ಆಗಲ್ಲ. ಉನ್ನಿಕೃಷ್ಣನ್ ಅವರಿಂದಲೇ ಬಾಗಿಲು ನಿರ್ಮಾಣಕ್ಕೆ ಆರ್ಡರ್ ಬಂದಿತ್ತು. ಉಳಿದ ವಿಚಾರ ತನಿಖೆ ನಡೆಯುತ್ತಿದೆ, ತನಿಖೆಗೆ ನಾನು ಸಹಕರಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

    ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಈಗ ಕರ್ನಾಟಕದ ಬೆಂಗಳೂರು, ಬಳ್ಳಾರಿಯ ಲಿಂಕ್ ಸಿಕ್ಕಿದೆ. ಪ್ರಮುಖ ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಯನ್ನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದನ್ನೂ ಓದಿ: Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    ಬೆಂಗಳೂರಿನ ಶ್ರೀರಾಂಪುರದಲ್ಲಿ ಚಿನ್ನಲೇಪಿತ ಕವಚಗಳನ್ನು ಇರಿಸಿ ಈತ ದೇಣಿಗೆ ಸಂಗ್ರಹಿಸಿದ್ದ ಎಂಬ ಆರೋಪವೂ ಇದೆ. ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತರಲಾಗಿದೆ. ಅಲ್ಲದೇ ಕದ್ದ ಚಿನ್ನವನ್ನ ಬಳ್ಳಾರಿಯಲ್ಲಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆ ಬಳ್ಳಾರಿಯಲ್ಲು ತಪಾಸಣೆ ನಡೆಸಿದ್ದು, ಒಂದಿಷ್ಟು ಚಿನ್ನವನ್ನ ರಿಕವರಿ ಮಾಡಲಾಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಬೆಂಗಳೂರಿನಲ್ಲಿದ್ದ ಕಾರಣ ಇಬ್ಬರು ಅಧಿಕಾರಿಗಳು ಕೋರ್ಟ್ ಅನುಮತಿಯೊಂದಿಗೆ ಬಂದು ದಾಖಲೆ ಕಲೆ ಹಾಕಿದ್ದಾರೆ. ಇದನ್ನೂ ಓದಿ: ಪಾಕ್‌ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು – CIA ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಆರೋಪ

    ಶಬರಿಮಲೆಯ ಚಿನ್ನ ಬಳ್ಳಾರಿಯಲ್ಲಿ ಪತ್ತೆ
    ಎಸ್‌ಪಿ ಶಶಿಧರನ್ ನೇತೃತ್ವದ ಕೇರಳದ ಎಸ್‌ಐಟಿ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿನ್ನೆ ರೊದ್ದಂ ಜ್ಯುವೆಲ್ಸ್ ಮಳಿಗೆ ಮೇಲೆ ದಾಳಿ ನಡೆಸಿದೆ. ಈ ವೇಳೆ ನಾಣ್ಯಗಳ ರೂಪದಲ್ಲಿ 476 ಗ್ರಾಂ ಚಿನ್ನ ಪತ್ತೆಯಾಗಿದೆ. ಈ ಚಿನ್ನವನ್ನ ಪೊಟ್ಟಿಯಿಂದ ರೊದ್ದಂ ಗೋಲ್ಡ್ ಮಾಲೀಕ ಗೋವರ್ಧನ್ ಖರೀದಿ ಮಾಡಿದ್ದ. ಚಿನ್ನ ವಶಕ್ಕೆ ಪಡೆದ ಎಸ್‌ಐಟಿ ತಂಡ ಗೋವರ್ಧನ್ ವಿಚಾರಣೆ ನಡೆಸಿದೆ. ಸದ್ಯ ರೊದ್ದಂ ಗೋಲ್ಡ್ ಶಾಪ್ ಬೀಗ ಹಾಕಲಾಗಿದೆ. ಅಲ್ಲದೇ ಬೆಂಗಳೂರಿನ ಉನ್ನಿಕೃಷ್ಣನ್ ಮನೆಯಲ್ಲಿ ಚಿನ್ನದ ಗಟ್ಟಿ ಹಾಗೂ 2 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

  • ಧರ್ಮಸ್ಥಳ ಬುರುಡೆ ಕೇಸ್; ಈ ತಿಂಗಳ ಅಂತ್ಯಕ್ಕೆ ಎಸ್‌ಐಟಿ ವರದಿ ಸಲ್ಲಿಕೆ

    ಧರ್ಮಸ್ಥಳ ಬುರುಡೆ ಕೇಸ್; ಈ ತಿಂಗಳ ಅಂತ್ಯಕ್ಕೆ ಎಸ್‌ಐಟಿ ವರದಿ ಸಲ್ಲಿಕೆ

    ಬೆಂಗಳೂರು: ಈ ತಿಂಗಳ ಅಂತ್ಯಕ್ಕೆ ಧರ್ಮಸ್ಥಳ ಕೇಸ್ (Dharmasthala Case) ತನಿಖೆಗೆ ಸಂಬಂಧಿಸಿದಂತೆ ಎಸ್‌ಐಟಿ‌ (SIT) ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ.

    ಈ ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲು ಸರ್ಕಾರದಿಂದ ಸೂಚಿಸಿರುವುದಾಗಿ ‘ಪಬ್ಲಿಕ್ ಟಿವಿ’ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. ಮುಂದಿನ ವಾರದಲ್ಲಿ ಧರ್ಮಸ್ಥಳ ಕೇಸ್ ಎಸ್‌ಐಟಿ ರಿಪೋರ್ಟ್ ನ್ಯಾಯಾಲಯಕ್ಕೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆದಿದ್ದು, ಮುಂದಿನ ವಾರ ಧರ್ಮಸ್ಥಳ ರಹಸ್ಯ ಬಯಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಜಾತಿ, ಧರ್ಮದ ಹೆಸರಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು; ಮಂಗಳೂರಲ್ಲಿ ಸಿದ್ರಾಮಯ್ಯ ಭಾಷಣ

    ಜು.20 ರಂದು ಎಸ್‌ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು.‌ ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಗಳ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಅದಾದ ಬಳಿಕ‌ ತನಿಖೆಯ ಭಾಗವಾಗಿ ಸಾಕಷ್ಟು ಬೆಳವಣಿಗೆಗಳು ಕೂಡ ನಡೆದಿದ್ದವು. ತದನಂತರ ದೂರು ಕೊಟ್ಟವರೇ ಉಲ್ಟಾ ಹೊಡೆದು ಪ್ರಕರಣದ ತಿರುವನ್ನೇ ಬದಲಾಯಿಸಿದ್ದರು.‌

    ಆದರೆ ಈಗ 100 ದಿನಗಳ ಬಳಿಕ ಎಸ್‌ಐಟಿ ವರದಿ ಕುತೂಹಲ ಹೆಚ್ಚಿದ್ದು, ಎಲ್ಲರ ಅಸಲಿಯತ್ತು ಬಯಲಾಗುತ್ತಾ ಕಾದುನೋಡಬೇಕಿದೆ.

  • ‘ವೋಟ್ ಚೋರಿ’ ಪ್ರಕರಣ | ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಮನೆ, ಬಾರ್ ಮೇಲೆ ಎಸ್‌ಐಟಿ ದಾಳಿ

    ‘ವೋಟ್ ಚೋರಿ’ ಪ್ರಕರಣ | ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಮನೆ, ಬಾರ್ ಮೇಲೆ ಎಸ್‌ಐಟಿ ದಾಳಿ

    ಕಲಬುರಗಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಡಿಸಿರುವ ಮತಗಳ್ಳತನ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳಂದ ಕ್ಷೇತ್ರದ ವೋಟ್‍ ಚೋರಿ ಪ್ರಕರಣ (Vote Chori Case) ಸಂಬಂಧ ಎಸ್‍ಐಟಿ (SIT) ತನಿಖೆ ಚುರುಕುಗೊಂಡಿದೆ. ಈ ಕೇಸ್ ಇದೀಗ ಆಳಂದ ಮಾಜಿ ಶಾಸಕರ ಮನೆವರೆಗೂ ಬಂದು ನಿಂತಿದೆ.

    ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ (Subhash Guttedar) ಅವರಿಗೆ ಸೇರಿದ ಮನೆ, ಬಾರ್ & ರೆಸ್ಟೋರೆಂಟ್ ಮೇಲೆ ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುರುವಾರ ಎಸ್‍ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಅಕ್ರಂ ಎಂಬಾತನ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿದ್ದವು. 15 ಮೊಬೈಲ್, 7 ಲ್ಯಾಪ್ ಟಾಪ್ ಸೀಜ್ ಮಾಡಿದ್ದರು. ಇದನ್ನೂ ಓದಿ: ‘ವೋಟ್ ಚೋರಿ’ ಪ್ರಕರಣ | ಎಸ್ಐಟಿ ತೀವ್ರ ಶೋಧ – ಕಲಬುರಗಿಯಲ್ಲಿ ಸಾವಿರಾರು ವೋಟರ್ ಐಡಿಗಳು ಪತ್ತೆ

    ಇದರ ಬೆನ್ನಲ್ಲೇ ಇಂದು (ಅ.17) ಮಾಜಿ ಶಾಸಕರ ಮನೆ ಮೇಲೂ ದಾಳಿ ನಡೆದಿದೆ. ಇತ್ತ ಆಳಂದದಲ್ಲಿನ ಸುಭಾಷ್ ಗುತ್ತೇದಾರ್ ಮನೆ ಇರೋ ಬಡಾವಣೆಯಲ್ಲಿ ರಾಶಿ ರಾಶಿ ದಾಖಲೆಗಳಿಗೆ ಬೆಂಕಿ ಇಡಲಾಗಿದೆ. ಸುಭಾಷ್ ಗುತ್ತೆದಾರ್ ಮನೆಯ ಸಮೀಪದಲ್ಲೆ ದಾಖಲೆಗಳನ್ನು ಸುಟ್ಟು ಹಾಕಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಸುಟ್ಟಿರುವ ದಾಖಲೆಗಳು ಯಾವುವು? ಸುಟ್ಟು ಹಾಕಿದ್ಯಾರು? ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್‌ನವ್ರು ಏನ್ ಬಹಳ ಬೃಹಸ್ಪತಿಗಳಾ?: ಜಾತಿಗಣತಿಯಲ್ಲಿ ಭಾಗವಹಿಸದ್ದಕ್ಕೆ ಸಿಎಂ ಟಾಂಗ್

  • ನೂರಾರು ಶವಗಳ ಹೂತಿಟ್ಟ ಕೇಸ್ – ಕೋರ್ಟ್‌ನಲ್ಲಿ ಹೊಸ ಕಥೆ ಬಿಚ್ಚಿಟ್ಟ `ಬುರುಡೆ’ ಚಿನ್ನಯ್ಯ

    ನೂರಾರು ಶವಗಳ ಹೂತಿಟ್ಟ ಕೇಸ್ – ಕೋರ್ಟ್‌ನಲ್ಲಿ ಹೊಸ ಕಥೆ ಬಿಚ್ಚಿಟ್ಟ `ಬುರುಡೆ’ ಚಿನ್ನಯ್ಯ

    ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆ ಮುಂದುವರೆದಿದೆ. ಆರೋಪಿ ಚಿನ್ನಯ್ಯ ನ್ಯಾಯಾಲಯದಲ್ಲಿ ಹೊಸ ಕಥೆ ಬಿಚ್ಚಿಟ್ಟಿದ್ದು, ಎಸ್‌ಐಟಿ (SIT) ಅಧಿಕಾರಿಗಳನ್ನೇ ತಬ್ಬಿಬ್ಬಾಗಿಸಿದೆ.

    ಶವ ಹೂತ ರಹಸ್ಯವನ್ನು ಚಿನ್ನಯ್ಯ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡುವ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನಯ್ಯ ಹೇಳಿಕೆ ನೀಡುವ ವೇಳೆ ಒಂದೇ ಜಾಗದಲ್ಲಿ ಹತ್ತು ಹೆಣಗಳನ್ನು ಹೂತಿದ್ದಾಗಿ ಹೊಸ ಕಥೆಯನ್ನು ಹೇಳಿದ್ದಾನೆ. ಎಸ್‌ಐಟಿ ವಿಚಾರಣೆ ವೇಳೆ ಈ ಮಾಹಿತಿಯನ್ನು ನೀಡದೆ ಇರುವುದು ಅಧಿಕಾರಿಗಳಿಗೆ ಆಶ್ಚರ್ಯ ತಂದಿದೆ. ಚಿನ್ನಯ್ಯನ ಈ ಹೊಸ ಹೇಳಿಕೆ ಕೇಳಿ ಎಸ್‌ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.ಇದನ್ನೂ ಓದಿ: ಕಾಲ್‌ಸೆಂಟರ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ – ಹೊರರಾಜ್ಯದವರನ್ನೇ ಟಾರ್ಗೆಟ್ ಮಾಡ್ತಿದ್ದ 16 ಜನರ ಗ್ಯಾಂಗ್ ಬಂಧನ

    ಮೊದಲ ದಿನದಿಂದಲೇ ಇಡೀ ಪ್ರಕರಣದ ಹಾದಿ ತಪ್ಪಿಸುವ ರೀತಿಯಲ್ಲೇ ಹೇಳಿಕೆ ಕೊಟ್ಟುಕೊಂಡು ಬಂದಿದ್ದ ಚಿನ್ನಯ್ಯ ಇದೀಗ ಮತ್ತೆ ವರಸೆ ಬದಲಿಸಿದ್ದಾನೆ. ಬೆಳ್ತಂಗಡಿ ಕೋರ್ಟ್‌ನಲ್ಲಿ ಬಿಎನ್‌ಎಸ್ಸೆಸ್ 183 ಅಡಿ ಹೇಳಿಕೆ ದಾಖಲಿಸಿದ್ದ ವೇಳೆ ಶವ ರಹಸ್ಯದ ಹೊಸ ಕಥೆ ಹೇಳಿದ್ದಾನೆ. ಅಂದರೆ ಒಂದೇ ಜಾಗದಲ್ಲಿ ಹತ್ತು ಹೆಣ ಹೂತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ನಿರ್ದಿಷ್ಟವಾಗಿ ಹತ್ತು ಶವಗಳನ್ನು ಯಾವಾಗ ಮತ್ತು ಎಲ್ಲಿ ಹೂತಿದ್ದು ಎಂಬುದರ ಬಗ್ಗೆ ಚಿನ್ನಯ್ಯ ಸ್ಪಷ್ಟ ಮಾಹಿತಿ ನೀಡಿಲ್ಲ. ಹಾಗಾಗಿ ಈ ಬಗ್ಗೆ ಆಳವಾದ ವಿಚಾರಣೆ ನಡೆಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.

    ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿರುವುದರಿಂದ ಅಲ್ಲಿಯೇ ವಿಚಾರಣೆ ನಡೆಸಲು ಎಸ್‌ಐಟಿ ತಯಾರಿ ನಡೆಸಿದೆ. ಈ ಹೇಳಿಕೆಯ ಸತ್ಯಾಸತ್ಯತೆ ಮತ್ತು ಈ ಹಿಂದೆ ನೀಡಿದ ಹೇಳಿಕೆಗೂ ಇದಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಎಸ್‌ಐಟಿ ತನಿಖೆ ಮುಂದುವರಿಸಿದೆ.

    ಇನ್ನೊಂದು ಕಡೆ ಬುರುಡೆ ಪ್ರಕರಣದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಗಿರೀಶ್ ಮಟ್ಟಣ್ಣವರ್ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿದೆ.ಇದನ್ನೂ ಓದಿ: ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

  • ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

    ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

    – ಡಿಕೆಶಿ ಮನೆ ಎದುರಿನ ಶಾಲೆಗೂ ಬಂದಿತ್ತು ಬಾಂಬ್ ಬೆದರಿಕೆ

    ಬೆಂಗಳೂರು: ಆಗಾಗ್ಗೆ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಸಿಎಂ, ಡಿಸಿಎಂ ಮನೆಗಳನ್ನು (CM, DCM Home) ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸ್‌ ಇಲಾಖೆ ಬಾಂಬ್‌ ಬೆದರಿಕೆ ಪ್ರಕರಣಗಳನ್ನ ಭೇದಿಸಲು ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ.

    ಕೆಲ ಶಾಲೆಗಳು, ಸರ್ಕಾರಿ ಕಚೇರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಬಾಂಬ್‌ ಬೆದರಿಕೆ (Bomb Threat) ಬರುತ್ತಲೇ ಇದೆ. ಬೆಂಗಳೂರು ಒಂದರಲ್ಲೇ 34 ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 27, ಚೆನ್ನೈ 22 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬಾಂಬ್‌ ಬೆದರಿಕೆಗಳನ್ನು ತಪ್ಪಿಸಲು ಹಾಗೂ ಹುಸಿ ಬೆದರಿಕೆಯೊಡ್ಡುವವರ ಹೆಡೆಮುರಿ ಕಟ್ಟಲು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ತನಿಖಾ ತಂಡ ರಚನೆ ಮಾಡಿದ್ದಾರೆ.

    ಸಿಎಂ, ಡಿಸಿಎಂ ಮನೆ ಸ್ಫೋಟಿಸುವುದಾಗಿ ಬೆದರಿಕೆ
    ಕಳೆದ ಶನಿವಾರ ಸಿಎಂ ಮತ್ತು ಡಿಸಿಎಂ ಮನೆಗಳಲ್ಲಿ 4 ಕೆಜಿಯಷ್ಟು ಆರ್‌ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದೆ. ಅವುಗಳನ್ನು ದೂರದಿಂದಲೇ ಸ್ಫೋಟಿಸಲಾಗುತ್ತದೆ ಎಂದು ಇ-ಮೇಲ್‌ ಮೂಲಕ ಹುಸಿ ಬೆದರಿಕೆ ಬಂದಿತ್ತು. ಶನಿವಾರ ಬೆಳಗಿನ ಜಾವ 4:20ರ ಸುಮಾರಿಗೆ, ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ (cm.kar@nic.in) ಮತ್ತು ಡಿಸಿಎಂ ಅವರ ವೈಯಕ್ತಿಕ ಇಮೇಲ್ ಐಡಿ dkshivakumar1@gmail.com ಗೆ ಇಮೇಲ್ ಬೆದರಿಕೆ ಸಂದೇಶ ಬಂದಿತ್ತು.

    ಇದರ ನಂತರ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳನ್ನು ಸಂಪೂರ್ಣ ಶೋಧ ನಡೆಸಲಾಗಿತ್ತು. ಬಳಿಕ ಹುಸಿ ಬಾಂಬ್‌ ಬೆದರಿಕೆ ಅನ್ನೋದು ಗೊತ್ತಾಯ್ತು. ಬಳಿಕ ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬೆನ್ನಲ್ಲೇ ಎಸ್‌ಐಟಿ ರಚಿಸಲಾಗಿದೆ.

    ಬಂಗಾಳದಲ್ಲಿ ಓರ್ವನ ಬಂಧನ
    ಕಳೆದ ವರ್ಷ ಅಕ್ಟೋಬರ್‌ 4ರಂದು ಬಸವನಗುಡಿಯ ಬಿಐಟಿ ಕಾಲೇಜಿಗೆ ಇ-ಮೇಲ್‌ ಮೂಲಕ ಆರೋಪಿಯು ಬಾಂಬ್‌ ಬೆದರಿಕೆ ಹಾಕಿದ್ದ. ಕಾಲೇಜು ಆವರಣದಲ್ಲೇ ಹೈಡ್ರೋಜನ್‌ ಸುಧಾರಿತ ಐಇಡಿ (IED) ಇಟ್ಟಿದ್ದು, ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಆರೋಪಿಯನ್ನ ಬಂಧಿಸಿದ್ದರು.

    ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಆರೋಪಿ ಇದೇ ರೀತಿ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅನ್ನೋದು ಗೊತ್ತಾಗಿತ್ತು.

    ಇದಕ್ಕೂ ಮುನ್ನ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ ಬಂದಿತ್ತು.

  • ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ; ತನಿಖೆ ಕೈಗೊಳ್ಳಲು SITಗೆ ಕೇರಳ ಹೈಕೋರ್ಟ್ ಸೂಚನೆ

    ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ; ತನಿಖೆ ಕೈಗೊಳ್ಳಲು SITಗೆ ಕೇರಳ ಹೈಕೋರ್ಟ್ ಸೂಚನೆ

    – 6 ವಾರಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನಿರ್ದೇಶನ

    ತಿರುವನಂತಪುರಂ: ಶಬರಿಮಲೆ (Sabarimala Ayyappan Temple) ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ಆರಂಭಿಸಲು ಕೇರಳ ಹೈಕೋರ್ಟ್ ಸೂಚನೆ ನೀಡಿದೆ.

    ನ್ಯಾ.ರಾಜಾ ವಿಜಯರಾಘವನ್, ನ್ಯಾ.ಕೆವಿ ಜಯಕುಮಾರ್ ಇದ್ದ ಪೀಠ, ದ್ವಾರಗಳಿಗೆ ಚಿನ್ನ ಲೇಪನ ವೇಳೆ ಚಿನ್ನ (Gold) ಕಳುವಾಗಿದೆ ಅನ್ನೋದನ್ನು ಗಮನಿಸಿ ಈ ನಿರ್ದೇಶನ ನೀಡಿದ್ದಾರೆ. ಅಲ್ಲದೇ, 6 ವಾರಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯದ ನಿರ್ದೇಶನ ನೀಡಿದೆ.

    Sabarimala Temple

    ತನಿಖೆಯನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಬೇಕು. ತನಿಖೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಸೋರಿಕೆ ಮಾಡಬಾರದು. ವಿಶೇಷ ತನಿಖಾ ತಂಡವು ನೇರವಾಗಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಶಬರಿಮಲೆ ವಿಷಯದ ಕುರಿತು ಚಿನ್ನದ ಲೇಪನಕ್ಕೆ ಮುಂದಾಗಿದ್ದ ಉನ್ನಿಕೃಷ್ಣನ್ ಪೊಟ್ಟಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸೋದನ್ನು ಹೈಕೋರ್ಟ್ (Kerala High Court) ನಿಷೇಧಿಸಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಸಹ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ.

    Sabarimala Temple

    ಏನಿದು ಪ್ರಕರಣ?
    ಇತ್ತೀಚೆಗಷ್ಟೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ (Sabarimala Ayyappan Temple) ಚಿನ್ನದ ಮೂರ್ತಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಹಳೆಯ ತಾಮ್ರ ಮತ್ತು ಚಿನ್ನದ (Gold) ಲೇಪನ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಆಯುಕ್ತರು ಆರೋಪಿಸಿದ್ದರು.

    2019ರಲ್ಲಿ ದೇವರ ಮೂರ್ತಿಗಳಿಗೆ ಪುನರ್‌ಲೇಪನ ಮಾಡಲಾಗಿತ್ತು. ಈ ವೇಳೆ ತಾಮ್ರದ ಮೂರ್ತಿಗೆ ಹೊದಿಸಿದ್ದ ಚಿನ್ನದ ಕವಚದಲ್ಲಿ 4.5 ಕೆಜಿ ಚಿನ್ನ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ.