Tag: sister

  • ಪ್ರೀತಿ ನಿರಾಕರಿಸಿದಕ್ಕೆ ತಂಗಿ ಆತ್ಮಹತ್ಯೆ – ಪ್ರೇಮಿಯನ್ನು ಕೊಚ್ಚಿಕೊಂದ ಅಣ್ಣ

    ಪ್ರೀತಿ ನಿರಾಕರಿಸಿದಕ್ಕೆ ತಂಗಿ ಆತ್ಮಹತ್ಯೆ – ಪ್ರೇಮಿಯನ್ನು ಕೊಚ್ಚಿಕೊಂದ ಅಣ್ಣ

    ಬೆಂಗಳೂರು: ತಂಗಿಯನ್ನು ಪ್ರೀತಿಸಿದ ಯುವಕನನ್ನು ಅಣ್ಣನೋರ್ವ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿ ಸಮೀಪ ನಡೆದಿದೆ.

    ಕೊಲೆಯಾದ ಯುವಕನನ್ನು ರಾಜೇಶ್ (35) ಎಂದು ಗುರುತಿಸಲಾಗಿದೆ. ರಾಜೇಶ್ ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ನಂತರ ಆ ಯುವತಿಯನ್ನು ಪ್ರೀತಿಯನ್ನು ನಿರಾಕರಣೆ ಮಾಡಿದ್ದ. ಇದರಿಂದ ಮನನೊಂದ ಯುವತಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

    ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ರೊಚ್ಚಿಗೆದ್ದ ಅಣ್ಣ, ನನ್ನ ತಂಗಿಯ ಬಾಳು ಈತನಿಂದಲೇ ಹಾಳಾಯ್ತು ಎಂದು ರಾಜೇಶ್ ನನ್ನು ಕೊಚ್ಚಿಕೊಲೆ ಮಾಡಿದ್ದಾನೆ. ಇಂದು ಮಧ್ಯಾಹ್ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ್‍ನನ್ನು ಅಣ್ಣ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯ ಬಳಿಕ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

    ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಪ್ರಿಯಕರನ ಜೊತೆ ಸಹೋದರಿ ಪರಾರಿ – ಕುಸಿದು ಬಿದ್ದು ತಂಗಿ ಸಾವು

    ಪ್ರಿಯಕರನ ಜೊತೆ ಸಹೋದರಿ ಪರಾರಿ – ಕುಸಿದು ಬಿದ್ದು ತಂಗಿ ಸಾವು

    ಉಡುಪಿ: ಅಕ್ಕ ಪ್ರಿಯತಮನ ಜೊತೆ ಕಾಣೆಯಾಗಿದ್ದಾಳೆ ಎಂದು ತಿಳಿದು ತಂಗಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಜಲ್ತಾರ್ ಎಂಬಲ್ಲಿ ನಡೆದಿದೆ.

    ಶ್ವೇತಾ ಮೃತ ಸಹೋದರಿ. ಮಾಳದ ನಿವಾಸಿ ಎರಡು ದಿನಗಳ ಹಿಂದೆ ಸ್ಥಳೀಯ ಫುಡ್ ಪ್ರೋಡಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭುವನ್ ಜೊತೆ ಪರಾರಿಯಾಗಿದ್ದಳು. ಇಂದು ಯುವತಿ ತನ್ನ ಸಹೋದರಿ ಶ್ವೇತಾಳಿಗೆ ಫೋನ್ ಮಾಡಿದ್ದಾಳೆ.

    ಈ ವೇಳೆ ತನಗೆ ನಿಶ್ಚಯವಾದ ಹುಡುಗನ ಜೊತೆ ವಿವಾಹವಾಗಲು ಇಷ್ಟ ಇಲ್ಲ. ತಾನು ಪ್ರೀತಿಸಿದ ಯುವಕನ ಜೊತೆ ಬಂದಿರುವುದಾಗಿ ಹೇಳಿದ್ದಾಳೆ. ಅಕ್ಕನ ಫೋನ್ ಕರೆಯಿಂದ ಶಾಕ್ ಆದ ತಂಗಿ ಶ್ವೇತಾ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

    ಭುವನ್ ಮೂಲತಃ ಅಸ್ಸಾಂ ರಾಜ್ಯದ ನಿವಾಸಿಯಾಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಬಜಗೋಳಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಕಾರಣ ಯುವತಿ ಮತ್ತು ಭುವನ್ ನಡುವೆ ಪ್ರೇಮಾಂಕುರವಾಗಿತ್ತು. ಈ ನಡುವೆ ಯುವತಿ ಮನೆಯವರು ಮದುವೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಸುರಕ್ಷಿತಾ ಪ್ರಿಯತಮ ಜೊತೆ ಓಡಿ ಹೋಗಿದ್ದಾಳೆ.

    ಶ್ವೇತಾಳಿಗೆ ಮೂರ್ಛೆರೋಗ ಆಗಾಗ ಬಾಧಿಸುತ್ತಿತ್ತು. ಹೀಗಾಗಿ ಸಹೋದರಿ ಪರಾರಿಯಾಗಿರುವ ಕಾರಣ ಮಾನಸಿಕ ಒತ್ತಡದಿಂದ ಶ್ವೇತಾ ಕುಸಿದುಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಿಯಕರನೊಂದಿಗಿದ್ದ 16ರ ಅಪ್ರಾಪ್ತೆ – ನಿದ್ದೆಯಿಂದ ಎದ್ದು ನೋಡಿದ್ದಕ್ಕೆ 11ರ ಸೋದರಿಯ ಕೊಲೆ

    ಪ್ರಿಯಕರನೊಂದಿಗಿದ್ದ 16ರ ಅಪ್ರಾಪ್ತೆ – ನಿದ್ದೆಯಿಂದ ಎದ್ದು ನೋಡಿದ್ದಕ್ಕೆ 11ರ ಸೋದರಿಯ ಕೊಲೆ

    – ಮೊಬೈಲ್ ವಿಚಾರಕ್ಕೆ ಕೊಂದೆ ಎಂದು ತಪ್ಪೊಪ್ಪಿಗೆ
    – ವಿಚಾರಣೆ ವೇಳೆ ಬಾಯಿ ಬಿಟ್ಟ ಗೆಳೆಯ

    ರಾಯ್ಪುರ್: ತನ್ನ ಗೆಳೆಯನೊಂದಿಗೆ ಇದ್ದುದ್ದನ್ನು ನೋಡಿದ 11 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‍ಗಢದ ಕೊರ್ಬಾದಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 16 ವರ್ಷದ ಅಪ್ರಾಪ್ತೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಮೊದಲಿಗೆ ದಿಂಬಿನಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ. ಮೊದಲಿಗೆ ಮೊಬೈಲ್ ವಿಚಾರಕ್ಕೆ ಕೊಲೆ ಮಾಡಿದೆ ಎಂದು ಅಪ್ರಾಪ್ತೆ ಹೇಳಿದ್ದಳು. ಆದರೆ ತನಿಖೆ ವೇಳೆ ಸತ್ಯ ಬಯಲಾಗಿದೆ.

    ಏನಿದು ಪ್ರಕರಣ?
    ಹುಡುಗಿಯ ಪೋಷಕರು ಹಬ್ಬಕ್ಕಾಗಿ ಪಕ್ಕದ ಹಳ್ಳಿಗೆ ಹೋಗಿದ್ದರು. ಮನೆಯಲ್ಲಿ 11 ವರ್ಷದ ಮತ್ತು 16 ವರ್ಷದ ಸಹೋದರಿಯ ಇದ್ದರು. ರಾತ್ರಿ ಬಾಲಕಿ ನಿದ್ದೆಯಿಂದ ಎಚ್ಚರಗೊಂಡಿದ್ದಾಳೆ. ಆಗ ತನ್ನ ಸಹೋದರಿ ಆಕೆಯ ಪ್ರಿಯಕರನೊಂದಿಗೆ ಇದ್ದುದ್ದನ್ನು ನೋಡಿದ್ದಾಳೆ. ಇದರಿಂದ ಭಯಗೊಂಡ ಸಹೋದರಿಗೆ ಎಲ್ಲರಿಗೂ ಈ ವಿಚಾರ ಹೇಳುತ್ತಾಳೆ ಎಂದು ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಪೋಷಕರು ಶನಿವಾರ ಬೆಳಗ್ಗೆ ಮನೆಗೆ ಹಿಂದಿರುಗಿದಾಗ ಮಗಳು ಮೃತಪಟ್ಟಿರುವುದು ತಿಳಿದಿದೆ. ನಂತರ ಈ ಬಗ್ಗೆ ಮಾಹಿತಿ ಸ್ಥಳಕ್ಕೆ ಬಂದು ಪೊಲೀಸರು ಸಹೋದರಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ನನ್ನ ಮೊಬೈಲ್ ಫೋನ್‍ನಲ್ಲಿ ಆಟವಾಡುತ್ತಿದ್ದಳು. ನಾನು ವಾಪಸ್ ಕೇಳಿದರೂ ಕೊಡಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ಅಪ್ರಾಪ್ತೆ ಹೇಳಿದ್ದಾಳೆ.

    ಮತ್ತೆ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ಬಾಲಕಿಯ ಮನೆಯ ಹೊರಗೆ ಬೈಕಿನ ಟಯರ್ ಗುರುತುಗಳನ್ನು ಪೊಲೀಸರು ಗಮನಿಸಿದ್ದಾರೆ. ಆಗ ಪೊಲೀಸರು ಮೃತಳ ಸಹೋದರಿಯ ಫೋನ್ ಪರಿಶೀಲಿಸಿದ್ದಾರೆ. ಆಕೆ ಕರೆ ವಿವರಗಳನ್ನು ಡಿಲೀಟ್ ಮಾಡಿದ್ದಳು.

    ಸೈಬರ್ ಪೊಲೀಸರು ಒಂದು ನಂಬರಿಗೆ ಫೋನ್ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ ಘಟನೆಯ ಸಮಯದಲ್ಲಿ ಫೋನ್ ಬಾಲಕಿಯ ಮನೆಯ ವ್ಯಾಪ್ತಿಯಲ್ಲಿ ಇರುವುದನ್ನು ಗೊತ್ತಾಗಿದೆ. ವಿನಯ್ ಜಗತ್ ಹೆಸರಿನಲ್ಲಿ ಫೋನ್ ನಂಬರ್ ನೋಂದಾಯಿಸಲಾಗಿತ್ತು. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಆಗ ತಾವೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೋಕ್ಸೋ, ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಕಾಯ್ಡೆಯಲ್ಲಿ ಬಂಧಿಸಲಾಗಿದೆ.

  • ದೇವರಿಗೆ ಧನ್ಯವಾದಗಳು, ಸತ್ಯದ ಕಡೆ ಮೊದಲ ಹೆಜ್ಜೆ – ಸುಶಾಂತ್ ಸಿಂಗ್ ಸೋದರಿ

    ದೇವರಿಗೆ ಧನ್ಯವಾದಗಳು, ಸತ್ಯದ ಕಡೆ ಮೊದಲ ಹೆಜ್ಜೆ – ಸುಶಾಂತ್ ಸಿಂಗ್ ಸೋದರಿ

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದಕ್ಕೆ, ಗೆಲವು ಮತ್ತು ಪಕ್ಷಪಾತವಿಲ್ಲದ ತನಿಖೆಗೆ ಇದು ಮೊದಲ ಹೆಜ್ಜೆಯಾಗಿದೆ ಎಂದು ಸುಶಾಂತ್ ಸಿಂಗ್ ಸಹೋದರಿಯರು ದೇವರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಸುಶಾಂತ್ ಕೇಸ್‌, ರಿಯಾಗೆ ಹಿನ್ನಡೆ – ಸಿಬಿಐ ತನಿಖೆಗೆ ಅಸ್ತು

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮುಂಬೈ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮಾಜಿ ಗೆಳತಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೃಷಿಕೇಶ್ ನೇತೃತ್ವದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ. ಇದಕ್ಕೆ ಸುಶಾಂತ್ ಸಿಂಗ್ ಸಹೋದರಿಯರು ಸಂತೋಷ ವ್ಯಕ್ತಪಡಿಸಿದ್ದಾರೆ.

    “ಕೊನೆಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಬಿಐ ಕೈ ಸೇರಿದೆ” ಎಂದು ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಹೇಳಿದ್ದಾರೆ. ಮೊತ್ತೊಂದು ಟ್ವೀಟ್ ಮಾಡಿದ್ದು, “ದೇವರಿಗೆ ಧನ್ಯವಾದಗಳು, ನಮ್ಮ ಪ್ರಾರ್ಥನೆಗೆ ನೀವು ಉತ್ತರಿಸಿದ್ದೀರಿ. ಆದರೆ ಇದು ಕೇವಲ ಪ್ರಾರಂಭ. ಸತ್ಯದ ಕಡೆ ಮೊದಲ ಹೆಜ್ಜೆಯಾಗಿದೆ. ನಮಗೆ ಸಿಬಿಐ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.

    ಅಷ್ಟೇ ಅಲ್ಲದೇ “ತುಂಬಾ ಸಂತೋಷವಾಗಿದೆ. ಗೆಲವು ಮತ್ತು ಪಕ್ಷಪಾತವಿಲ್ಲದ ತನಿಖೆಗೆ ಇದು ಮೊದಲ ಹೆಜ್ಜೆಯಾಗಿದೆ” ಎಂದು ತಮ್ಮ ಕುಟುಂಬಕ್ಕೆ ಶ್ವೇತಾ ಸಿಂಗ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಮತ್ತೊಬ್ಬ ಸಹೋದರಿ ಮೀತು ಸಿಂಗ್ ಕೂಡ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದಕ್ಕೆ ಮತ್ತು ಇದಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದರು.

    https://twitter.com/iaMeetuSingh/status/1295957819255005184

    ಈ ಹಿಂದೆಯೇ ಶ್ವೇತಾ ಸಿಂಗ್ ಸಹೋದರ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸೋಶಿಯಲ್ ಮೀಡಿಯಾದ ಮೂಲಕ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದರು. ಪಕ್ಷಪಾತವಿಲ್ಲದ ತನಿಖೆ ಮಾಡುವಂತೆ ಒತ್ತಾಯಿಸುವುದು ನಮ್ಮ ಹಕ್ಕು ಮತ್ತು ಸತ್ಯ ಹೊರಬರುವುದನ್ನು ಹೊರತುಪಡಿಸಿ ಬೇರೆ ಏನನ್ನೂ ನಾವು ನಿರೀಕ್ಷಿಸುವುದಿಲ್ಲ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು.

  • ಬೇರೆ ಜಾತಿಯವನ ಪ್ರೀತಿ ಬಲೆಯಲ್ಲಿ ಸಿಲುಕಿದ ಸಹೋದರಿಯ ಕೊಲೆಗೆ ಯತ್ನ

    ಬೇರೆ ಜಾತಿಯವನ ಪ್ರೀತಿ ಬಲೆಯಲ್ಲಿ ಸಿಲುಕಿದ ಸಹೋದರಿಯ ಕೊಲೆಗೆ ಯತ್ನ

    – ಸಹೋದರ, ಸೋದರ ಮಾವನಿಂದ ಕೃತ್ಯ
    – ಮುಖವನ್ನೇ ವಿರೂಪಗೊಳಿಸೋ ಪ್ಲಾನ್ ಮಾಡಿದ್ರು

    ಮೀರತ್: ಬೇರೆ ಜಾತಿಯವನ ಜೊತೆ ಇರುವ ಸಹೋದರಿಯ ಪ್ರೇಮ ಸಂಬಂಧ ತಿಳಿದುಕೊಂಡ ಸಹೋದರ ಆಕೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

    ಸ್ಥಳೀಯರ ಮಧ್ಯಪ್ರವೇಶದಿಂದ ಯುವತಿಯ ಜೀವ ಉಳಿದಿದೆ. ಸದ್ಯ ಯುವತಿ ಮೀರತ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೀರತ್ ನ ಕಿಥೋರೆ ಪ್ರದೇಶದಲ್ಲಿ ಇಬ್ಬರು ಯುವಕರು ಹಾಗೂ ಯುವತಿ ಇರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಜೊತೆಗಿದ್ದ ಇಬ್ಬರು ಯುವಕರು ಯುವತಿ ಮೇಲೆ ಚಾಕುವಿನಿಂದ ಇರಿಯುತ್ತಿರುವುದನ್ನು ಕೆಲ ಗ್ರಾಮಸ್ಥರು ನೋಡಿದ್ದಾರೆ. ಇದನ್ನು ಗಮನಿಸಿದ ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿದಾಗ, ಯುವತಿ ನೋವಿನಿಂದ ಕಿರುಚಾಡುತ್ತಿದ್ದಳು. ಇತ್ತ ಗ್ರಾಮಸ್ಥರು ಹತ್ತಿರ ಬರುತ್ತಿದ್ದಂತೆಯೇ ಯುವಕರು ಸ್ಥಳದಿಂದ ಬೈಕ್ ಏರಿ ಕಾಲ್ಕಿತ್ತಿದ್ದಾರೆ.

    ಯುವತಿ ಮೈ ಮೇಲೆ ಚಾಕುವಿನಿಂದ ಇರಿಯಲಾಗಿದ್ದು, ಅಲ್ಲದೆ ಮುಖದ ಮೇಲೆಯೂ ಗಂಭೀರ ಗಾಯಗಳಾಗಿತ್ತು. ತಾನು ಹಪುರ್ ನಿವಾಸಿಯಾಗಿದ್ದು, ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದೇನೆ. ಆದರೆ ಆತ ಬೇರೆ ಜಾತಿಯವನಾಗಿರುವುದರಿಂದ ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾಳೆ.

    ಯುವತಿಯ ಸಹೋದರ ಹಾಗೂ ಸೋದರ ಮಾವ ಸೋಮವಾರ, ಪ್ರೇಮಿಯೊಂದಿಗೆ ಭೇಟಿ ಮಾಡಿಸುವ ನೆಪದಲ್ಲಿ ಆಕೆಯನ್ನು ಕಿಥೋರ್ ಪ್ರದೇಶದ ಕಾಲುವೆಗೆ ಕರೆದೊಯ್ದಿದ್ದಾರೆ. ಹೀಗೆ ಕರೆದೊಯ್ದ ಬಳಿಕ ಆಕೆಯ ಮುಖವನ್ನು ವಿರೂಪ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಗ್ರಾಮಸ್ಥರು ಸರಿಯಾದ ಸಮಯಕ್ಕೆ ಬಂದ ಕಾರಣ ವಿಫಲರಾದರು.

    ತನ್ನ ಪ್ರಿಯತಮನಿಂದ ಬೇರ್ಪಡಿಸುವ ಸಲುವಾಗಿ ಮೀರತ್ ನಲ್ಲಿ ವಾಸವಾಗಿರುವ ಚಿಕ್ಕಮ್ಮನ ಮನೆಯಲ್ಲಿ ಇರುವಂತೆ ಕುಟುಂಬದವರು ಒತ್ತಾಯಿಸುತ್ತಿದ್ದಾರೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

    ಮಾರಣಾಂತಿಕ ಹಲ್ಲೆಯ ಬಳಿಕದ ಯುವತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಗ್ರಾಮಸ್ಥರು ಈ ವಿಡಿಯೋ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

  • ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿ – ಅಣ್ಣನ ಅಗಲಿಕೆಯಿಂದ ಅಪ್ರಾಪ್ತೆ ಸೂಸೈಡ್

    ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿ – ಅಣ್ಣನ ಅಗಲಿಕೆಯಿಂದ ಅಪ್ರಾಪ್ತೆ ಸೂಸೈಡ್

    – ಪತ್ನಿಯ ಅಗಲಿಕೆಯಿಂದ ಸಹೋದರ ಆತ್ಮಹತ್ಯೆ
    – ಮೂವರು ಸಹೋದರರನ್ನ ಅಗಲಿದ ತಂಗಿ

    ಗಾಂಧಿನಗರ: ಸಹೋದರ ಆತ್ಮಹತ್ಯೆ ಮಾಡಿಕೊಂಡ ಎರಡು ವಾರಗಳ ನಂತರ 17 ವರ್ಷದ ಅಪ್ರಾಪ್ತ ಸಹೋದರಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ರಾಮೋಲ್‍ನಲ್ಲಿ ನಡೆದಿದೆ.

    ಮೃತ ಹುಡುಗಿ ಉತ್ತರ ಪ್ರದೇಶ ಮೂಲದವಳಾಗಿದ್ದು, 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಪೋಷಕರು ಮತ್ತು ಮೂವರು ಸಹೋದರರೊಂದಿಗೆ ರಾಮೋಲ್‍ನ ರವಿನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಅದೇ ಪ್ರದೇಶದಲ್ಲಿ ಆಕೆಯ ಸೋದರಸಂಬಂಧಿ ಸಹೋದರ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಆದರೆ ಎರಡು ವಾರಗಳ ಹಿಂದೆ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು.

    ಮೃತ ಹುಡುಗಿಯ ತಂದೆ ಮತ್ತು ಇಬ್ಬರು ಹಿರಿಯ ಸಹೋದರರು ಸೋಮವಾರ ತಿಂಡಿ ಮಾಡಿ ಮನೆಯಿಂದ ಹೊರ ಹೋಗಿದ್ದರು. ಮಧ್ಯಾಹ್ನ ಅವಳ ಕಿರಿಯ ಸಹೋದರ ತಾಯಿಯ ಬಳಿ ಬಂದು ಸಹೋದರಿ ಬಾಯಿಂದ ಏನೋ ಹರಿಯುತ್ತಿದೆ ಎಂದು ಹೇಳಿದ್ದಾನೆ. ಊಟ ಮಾಡುತ್ತಿದ್ದ ತಾಯಿ ಕೂಡಲೇ ಹೋಗಿ ಮಗಳನ್ನು ನೋಡಿದ್ದಾರೆ. ಆಗ ಮಗಳು ತನ್ನ ದುಪಟ್ಟಾದಿಂದ ನೇಣು ಹಾಕಿಕೊಂಡಿದ್ದನ್ನು ನೋಡಿ ತಾಯಿ ಆಘಾತಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಸ್ಥಳದಲ್ಲಿದ್ದ ಡೆತ್‍ನೋಟ್ ವಶಪಡಿಸಿಕೊಂಡಿದ್ದಾರೆ. ಮೃತ ಅಪ್ರಾಪ್ತೆ ತನ್ನ ಸೋದರಸಂಬಂಧಿ ಸಹೋದರನಿಗೆ ತುಂಬಾ ಹತ್ತಿರವಾಗಿದ್ದಳು. ಹೀಗಾಗಿ ಆತನ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಸಹೋದರ ಸಾವನ್ನಪ್ಪಿದ ನಂತರ ಈಗ ನನಗೆ ಬದುಕುವ ಆಸೆ ಇಲ್ಲ. ಸಹೋದರನ ಅಂತ್ಯಕ್ರಿಯೆ ಮಾಡಿದ ಅದೇ ಸ್ಥಳದಲ್ಲಿ ಶವಸಂಸ್ಕಾರ ಮಾಡಿ” ಎಂದು ಅಪ್ರಾಪ್ತೆ ಡೆತ್‍ನೋಟಿನಲ್ಲಿ ಬರೆದಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಹುಡುಗಿಯ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೆಡ್ ಕಾನ್ಸ್ಟೇಬಲ್ ವಿಜಯ್‍ಸಿಂಗ್ ಹೇಳಿದರು.

  • ಐಸ್‍ಕ್ರೀಮ್‍ನಲ್ಲಿ ವಿಷ ಹಾಕಿ ಸೋದರಿಯನ್ನೇ ಕೊಂದ ಅಣ್ಣ – ತಂದೆ ಸ್ಥಿತಿ ಗಂಭೀರ

    ಐಸ್‍ಕ್ರೀಮ್‍ನಲ್ಲಿ ವಿಷ ಹಾಕಿ ಸೋದರಿಯನ್ನೇ ಕೊಂದ ಅಣ್ಣ – ತಂದೆ ಸ್ಥಿತಿ ಗಂಭೀರ

    – ಮೊದಲು ಚಿಕನ್ ಕರ್ರಿಗೆ ವಿಷ ಹಾಕಿ ಕೊಲೆ ಯತ್ನ

    ತಿರುವನಂತಪುರಂ: ಐಸ್‍ಕ್ರೀಮ್‍ನಲ್ಲಿ ವಿಷ ಹಾಕಿ 16 ವರ್ಷದ ತಂಗಿಯನ್ನೇ ಸಹೋದರ ಕೊಲೆ ಮಾಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.

    ಅನ್ ಮೇರಿ (16) ಮೃತ ಸಹೋದರಿ. ಇದೀಗ ಪೊಲೀಸರು ಆರೋಪಿ ಅಲ್ಬಿನ್ ಬೆನ್ನಿಯನ್ನು ಕೊಲೆ ಆರೋಪದಡಿ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಅಲ್ಬಿನ್ ಮೊದಲು ಚಿಕನ್ ಕರ್ರಿಗೆ ವಿಷ ಬೆರೆಸಿ ಕುಟುಂಬದವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದನು. ನಂತರ ಐಸ್‍ಕ್ರೀಮ್‍ನಲ್ಲಿ ವಿಷವನ್ನು ಬೆರೆಸುವ ಮೂಲಕ ಸಹೋದರಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಆಗಸ್ಟ್ 3 ರಂದು ಆರೋಪಿ ಅಲ್ಬಿನ್ ತಯಾರಿಸಿದ್ದ ಐಸ್ ಕ್ರೀಮ್ ತಿಂದು ತಂದೆ ಮತ್ತು ಸಹೋದರಿಗೆ ಫುಡ್ ಪಾಯಿಸನ್ ಆಗಿದೆ. ತಕ್ಷಣ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 6 ರಂದು ಮೇರಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವು ಅಸ್ವಾಭಾವಿಕ ಎಂದು ಬಂದಿದೆ. ಆದರೆ ಮೇರಿ ದೇಹದಲ್ಲಿ ವಿಷ ಇರುವುದು ಕಂಡು ಬಂದಿದೆ. ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಲ್ ಇನ್‍ಸ್ಪೆಕ್ಟರ್ ಪ್ರೇಮ್ ಸದನ್ ತಿಳಿಸಿದ್ದಾರೆ.

    ಐಸ್‍ಕ್ರೀಮ್ ತಿಂದ ನಂತರ ಮೇರಿ ಮತ್ತು ಅವಳ ತಂದೆಯ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರಿದೆ. ಆದರೆ ಐಸ್‍ಕ್ರೀಮ್ ತಿಂದ ನಂತರವೂ ತಾಯಿ ಮತ್ತು ಅಲ್ಬಿನ್ ಇಬ್ಬರೂ ಬದುಕಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ಆಗ ಅವರ ಮೇಲೆಗೆ ಹೋಗಿ ಪರಿಶೀಲನೆ ನಡೆಸಿದ್ದು, ಈ ವೇಳೆ ತಾಯಿ ಐಸ್‍ಕ್ರೀಮ್ ತಿಂದಿಲ್ಲ ಎಂಬುದು ತಿಳಿದು ಬಂದಿದೆ. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಚಿಕನ್ ಕರ್ರಿಯಲ್ಲಿ ವಿಷ:
    ಐಸ್ ಕ್ರೀಮ್ ತಯಾರಿಸುವ ಒಂದು ವಾರದ ಮೊದಲು ಚಿಕನ್ ಕರ್ರಿಯಲ್ಲಿ ವಿಷವನ್ನು ಬೆರೆಸಿದ್ದನು. ಆದರೆ ವಿಷ ಯಾರ ಮೇಲೂ ಪರಿಣಾಮ ಬೀರಲಿಲ್ಲ. ಹೀಗಾಗಿ ಜುಲೈ 29 ರಂದು ಮತ್ತೆ ವಿಷವನ್ನು ಖರೀದಿಸಿದ್ದಾನೆ. ಅಲ್ಲದೇ ವಿಷದ ಬಗ್ಗೆ ತನ್ನ ಫೋನ್‍ನಲ್ಲಿ ಹುಡುಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಂತೆಯೇ ಜುಲೈ 30 ರಂದು ಅಲ್ಬಿನ್ ಐಸ್ ಕ್ರೀಮ್ ತಯಾರಿಸಿ ಅದನ್ನು ಫ್ರಿಜ್‍ನಲ್ಲಿ ಇಟ್ಟುಕೊಂಡಿದ್ದನು. ಆಗಸ್ಟ್ 3 ರಂದು ವಿಷಪೂರಿತ ಐಸ್‍ಕ್ರೀಮ್ ಕೊಟ್ಟಿದ್ದಾನೆ. ಅದನ್ನ ತಿಂದ ಬೆನ್ನಿ ಮತ್ತು ಆನ್‍ಗೆ ಫುಡ್ ಪಾಸಿಯನ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಗುರುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಅಲ್ಬಿನ್ ಏಕಾಂಗಿಯಾಗಿ ವಾಸಿಸಲು ಬಯಸಿದ್ದರಿಂದ ಇಡೀ ಕುಟುಂಬವನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ತಿಳಿದು ಬಂದಿದೆ. ಅಲ್ಲದೇ ಆತ ಮಾದಕ ವಸ್ತುವಿನ ವ್ಯಸನಿಯಾಗಿದ್ದನು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

  • ಸುಶಾಂತ್ ಸಿಂಗ್ ಸೋದರಿಯಿಂದ ಪ್ರಧಾನಿ ಮೋದಿಗೆ ಬಹಿರಂಗ ಪತ್ರ – ಸಹೋದರನಿಗಾಗಿ ಮನವಿ

    ಸುಶಾಂತ್ ಸಿಂಗ್ ಸೋದರಿಯಿಂದ ಪ್ರಧಾನಿ ಮೋದಿಗೆ ಬಹಿರಂಗ ಪತ್ರ – ಸಹೋದರನಿಗಾಗಿ ಮನವಿ

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಆದರೆ ಈ ಪ್ರಕರಣ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಸುಶಾಂತ್ ಸಿಂಗ್ ಸಹೋದರಿ ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಒಂದು ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ: ‘ಸತ್ಯವು ಮೇಲುಗೈ ಸಾಧಿಸುತ್ತೆ’ – ಕೈ ಮುಗಿದು ವಿಡಿಯೋ ರಿಲೀಸ್ ಮಾಡಿದ ರಿಯಾ

    ನಟ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತಮ್ಮ ಸಹೋದರನ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನೇರವಾಗಿ ಮನವಿ ಮಾಡಿಕೊಂಡಿದ್ದಾರೆ. ಶ್ವೇತಾ ಅವರು ಸೋಶಿಯಲ್ ಮೀಡಿಯಾದ ಮೂಲಕ ಪ್ರಧಾನಿ ಮೋದಿ ಅವರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ: ಜೂ.8ರ ವರೆಗೂ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ: ರಿಯಾ ಸ್ಪಷ್ಟನೆ

    “ಡಿಯರ್ ಸರ್… ನೀವು ಸತ್ಯದ ಪರವಾಗಿ ನಿಲ್ಲುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ನಾವು ತುಂಬ ಸರಳ ಕುಟುಂಬದವರು. ನನ್ನ ತಮ್ಮ ಬಾಲಿವುಡ್‍ಗೆ ಬಂದಾಗ ಅವನಿಗೆ ಯಾವುದೇ ಗಾಡ್‍ಫಾದರ್ ಇರಲಿಲ್ಲ. ಈಗಲೂ ಇಲ್ಲ. ಹೀಗಾಗಿ ನೀವು ಕೂಡಲೇ ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೀನಿ. ಎಲ್ಲ ಸರಿಯಾದ ಮಾರ್ಗದಲ್ಲಿ ತನಿಖೆ ನಡೆಯುತ್ತಿದಿಯೇ ಎಂದು ಪರಿಶೀಲನೆ ಮಾಡಿ. ಯಾವುದೇ ಸಾಕ್ಷಿ ನಾಶ ಆಗಲು ಅವಕಾಶ ಕೊಡಬೇಡಿ. ಸತ್ಯಕ್ಕೆ ಜಯವಾಗಲಿ” ಎಂದು ಶ್ವೇತಾ ಪತ್ರದಲ್ಲಿ ಬರೆದಿದ್ದಾರೆ.

    ಅಷ್ಟೇ ಅಲ್ಲದೇ ಈ ಪತ್ರವನ್ನು ಟ್ವಿಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, “ನಾನು ಸುಶಾಂತ್ ಸಿಂಗ್ ರಜಪೂತ್ ಸಹೋದರಿ. ಈ ಪ್ರಕರಣದ ಬಗ್ಗೆ ತುರ್ತಾಗಿ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಾವು ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇಟ್ಟುಕೊಂಡಿದ್ದೇನೆ” ಎಂದು ಶ್ವೇತಾ ಅವರು ಬರೆದುಕೊಂಡಿದ್ದಾರೆ. ಜೊತೆಗೆ #JusticeForSushant #SatyamevaJayate ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

    https://www.instagram.com/p/CDT8UNlFfl0/?igshid=2974n2ga3hdu

    ಶ್ವೇತಾ ತಮ್ಮ ಸಹೋದರನಿಗೆ ಸಂಬಂಧಿಸಿದ ಹಲವಾರು ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶನಿವಾರ ಅಂದರೆ ಜೂನ್ 29ರಂದು ಸುಶಾಂತ್ ಸಿಂಗ್ ಪ್ರತಿದಿನ ಮಾಡುತ್ತಿದ್ದ ಕೆಲಸಗಳ ವಿಷಯಗಳ ಪಟ್ಟಿಯನ್ನು ಅವರ ಹಂಚಿಕೊಂಡಿದ್ದರು. ಒಂದು ಬಿಳಿ ಬಣ್ಣದ ಬೋರ್ಡಿನಲ್ಲಿ ಸುಶಾಂತ್ ಸಿಂಗ್ ಮಾಡುತ್ತಿದ್ದ ಕೆಲಸಗಳ ಪಟ್ಟಿಯನ್ನು ಬರೆದಿದ್ದು, ಆ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಬೆಳಗ್ಗೆ ಎದ್ದೇಳುವುದು, ಪುಸ್ತಕಗಳನ್ನು ಓದುವುದು, ಸಿನಿಮಾ ನೋಡುವುದು, ಗಿಟಾರ್ ಕಲಿಮತ್ತೆ ವರ್ಕೌಟ್ ಮಾಡುವುದು ಇತ್ಯಾದಿ ಕೆಲಸಗಳನ್ನು ಕಾಣಬಹುದಾಗಿದೆ.

    https://www.instagram.com/p/CDVGI7hFxSJ/?igshid=1s4ddf2e2rsop

  • ಸೋದರನ ಸಮಾಧಿ ಮಾಡಿದ ನಂತ್ರ ಪ್ರಿಯಕರನ ಸತ್ಯ ಬಿಚ್ಚಿಟ್ಟ ಅಪ್ರಾಪ್ತೆ

    ಸೋದರನ ಸಮಾಧಿ ಮಾಡಿದ ನಂತ್ರ ಪ್ರಿಯಕರನ ಸತ್ಯ ಬಿಚ್ಚಿಟ್ಟ ಅಪ್ರಾಪ್ತೆ

    – ಒಟ್ಟಿಗೆ ಇದ್ದುದ್ದನ್ನ ನೋಡಿದ್ದಕ್ಕೆ 6 ವರ್ಷದ ಬಾಲಕನ ಕೊಲೆ

    ಲಕ್ನೋ: ಆರು ವರ್ಷದ ಬಾಲಕನನ್ನು ತನ್ನ ಸಹೋದರಿಯ ಪ್ರಿಯತಮನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಮೊದಲಿಗೆ ಛಾವಣಿಯಿಂದ ಬಿದ್ದ ಮೃತಪಟ್ಟಿದ್ದಾನೆ ಎಂದು ಸಹೋದರಿ ಎಲ್ಲರಿಗೂ ಹೇಳಿ ನಂಬಿಸಿದ್ದಳು. ಆದರೆ ಆಕೆಗೆ ಅಪರಾಧದ ಭಾವನೆ ಕಾಡಿದ್ದರಿಂದ ಗುರುವಾರ ನಡೆದ ಘಟನೆಯ ಬಗ್ಗೆ ಪೋಷಕರಿಗೆ ಸತ್ಯ ಹೇಳಿದ್ದಾಳೆ. ಇದೀಗ ಪೊಲೀಸರು ಅಪ್ರಾಪ್ತೆಯನ್ನು ವಶಪಡಿಸಿಕೊಂಡಿದ್ದು, ಆರೋಪಿ ಗೆಳೆಯ ಪರಾರಿಯಾಗಿದ್ದಾನೆ.

    ಏನಿದು ಪ್ರಕರಣ?
    ಅಪ್ರಾಪ್ತ ಹುಡುಗಿಯ 21 ವರ್ಷದ ಪ್ರಿಯಕರ ಮಂಗಳವಾರ ಮಧ್ಯಾಹ್ನ ಆಕೆಯ ಮನೆಗೆ ಬಂದಿದ್ದಾನೆ. ಹುಡುಗಿಯ ಪೋಷಕರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರು ಕೆಲಸಕ್ಕೆ ಹೋಗಿದ್ದನು. ಈ ವೇಳೆ ಆರು ವರ್ಷದ ಬಾಲಕ ಮನೆಗೆ ಬಂದಿದ್ದಾನೆ. ಆಗ ಇಬ್ಬರು ಒಟ್ಟಿಗೆ ಇದ್ದುದ್ದನ್ನು ನೋಡಿದ್ದಾನೆ. ಇದರಿಂದ ತಮ್ಮಿಬ್ಬರ ಸಂಬಂಧವನ್ನು ಎಲ್ಲರ ಮುಂದೆ ಬಹಿರಂಗಪಡಿಸುತ್ತಾನೆ ಎಂಬ ಭಯದಿಂದ ಆರೋಪಿ ಪ್ರಿಯಕರ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಪೋಷಕರು ಮನೆಗೆ ವಾಪಸ್ ಬಂದಾಗ ಛಾವಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು  ತಿಳಿಸಿದ್ದಾಳೆ. ತಕ್ಷಣ ಅವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಪೋಷಕರು ಬಾಲಕನ ಸಮಾಧಿ ಮಾಡಿದ್ದಾರೆ. ಇದರಿಂದ ಬಾಲಕನ ಸಹೋದರಿ ಖಿನ್ನತೆಗೆ ಒಳಗಾಗಿದ್ದಳು. ಕೊನೆಗೆ ಅಪರಾಧದ ಭಾವನೆಯಿಂದ ಗುರುವಾರ ಸಂಜೆ ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ ಎಂದು ಬರೇಲಿ ಎಸ್‍ಎಸ್‍ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ.

    ಘಟನೆಯ ಬಗ್ಗೆ ತಿಳಿದ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೆಳೆಯ ಪರಾರಿಯಾಗಿದ್ದು, ಅಪ್ರಾಪ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ನಂತರ ಅಪ್ರಾಪ್ತೆಯನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಸಲು ಮೃತ ಬಾಲಕನ ಶವವನ್ನು ಹೊರತೆಗೆಯಲು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

    ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ.

    ಹೌದು..ಯಶ್ ಸಹೋದರಿ ನಂದಿನಿ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ಅಲ್ಲದೇ ಯಶ್ ಮತ್ತೊಮ್ಮೆ ಮಾವ ಆಗಿದ್ದಾರೆ.

    ಯಶ್ ಸಹೋದರಿ ನಂದಿನಿ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಎರಡನೇ ಮಗುವಿಗೆ ತಾಯಿಯಾಗಿದ್ದೀನಿ. ಎರಡನೇ ಮಗು ಕೂಡ ಗಂಡು ಮಗು” ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಮುದ್ದಾದ ಮಗುವಿನ ಪಾದಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ.

    ಯಶ್ ಸಹೋದರಿ ನಂದಿನಿ ಉದ್ಯಮಿಯೊಬ್ಬರ ಜೊತೆ ಮದುವೆಯಾಗಿದ್ದು, ಇವರ ವಿವಾಹವಾಗಿ 8 ವರ್ಷ ಕಳೆದಿದೆ. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದೆ. ಇತ್ತೀಚಿಗಷ್ಟೆ ಅಂದರೆ ಏಪ್ರಿಲ್ ತಿಂಗಳಲ್ಲಿ ನಂದಿನಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಯಶ್ ಮನೆಗೆ ಮತ್ತೊಂದು ಮಗು ಆಗಮಿಸಿದ್ದಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    https://www.instagram.com/p/CC3BDQdHvns/?utm_source=ig_embed

    ನಟ ಯಶ್‍ಗೆ ಸಹೋದರಿ ಎಂದರೆ ತುಂಬಾ ಪ್ರೀತಿ. ನಂದಿನಿ ಅವರು ಕೂಡ ಪ್ರತಿವರ್ಷ ರಕ್ಷಾಬಂಧನ ದಿನ ಪ್ರೀತಿಯ ಅಣ್ಣನಿಗೆ ರಾಕಿ ಕಟ್ಟುತ್ತಾರೆ. ಆ ಫೋಟೋಗಳನ್ನು ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

    ಈಗಾಗಲೇ ಯಶ್ ಮತ್ತು ರಾಧಿಕಾ ದಂಪತಿಗೆ 2018 ಡಿಸೆಂಬರ್‌ನಲ್ಲಿ ಐರಾ ಯಶ್ ಜನಿಸಿದ್ದಳು. ಒಂದು ವರ್ಷದೊಳಗೆ ಅಂದರೆ 2019 ಅಕ್ಟೋಬರ್‌ನಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯಕ್ಕೆ ಎರಡು ಮಕ್ಕಳ ಲಾಲನೆ-ಪಾಲನೆಯಲ್ಲಿ ರಾಕಿಂಗ್ ದಂಪತಿ ಬ್ಯುಸಿಯಾಗಿದ್ದಾರೆ.