Tag: sister

  • ತಂಗಿಯನ್ನು ಗಂಡನ ಮನೆ ಸೇರಿಸೋ ಮುನ್ನವೇ ಮಸಣ ಸೇರಿತು ಕುಟುಂಬ!

    ತಂಗಿಯನ್ನು ಗಂಡನ ಮನೆ ಸೇರಿಸೋ ಮುನ್ನವೇ ಮಸಣ ಸೇರಿತು ಕುಟುಂಬ!

    ಗದಗ: ತಂಗಿಯನ್ನು ಗಂಡನ ಮನೆಗೆ ಬೀಡಲು ಹೋದ ಸಂದರ್ಭದಲ್ಲಿ, ಬೈಕ್‍ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

    ಮಹ್ಮದ್ ರಫಿ(24), ಬಿಬಿಹಾಝಿರಾ ಲಂಗೋಟಿ(22) ಹಾಗೂ ಒಂದುವರೆ ವರ್ಷದ ಮಹ್ಮದ್ ಸಾಜಿಬ್ ಮೃತ ಪಟ್ಟಿದ್ದಾರೆ. ಮುಂಡರಗಿ ತಾಲೂಕಿನ ಜಾಲವಾಡಗಿ ಕ್ರಾಸ್ ಬಳಿಯ ಕಣವಿ ದುರ್ಗಾದೇವಿ ದೇವಸ್ಥಾನ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಅಣ್ಣ, ತಂಗಿ ಹಾಗೂ ಒಂದುವರೆ ವರ್ಷದ ಮಗು ಸವಾನ್ನಪ್ಪಿದ್ದಾರೆ. ಮೃತ ಬೈಕ್ ಸವಾರ ಶಿರಹಟ್ಟಿ ತಾಲೂಕಿನ ಕಣಕವಾಡ ನಿವಾಸಿಯಾಗಿದ್ದನು. ಇದನ್ನೂ ಓದಿ:  ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ

    ತಂಗಿ ಮತ್ತು ಅವಳ ಮುಗುವನ್ನು ಕರೆದುಕೊಂಡು ಕಣಕವಾಡ ದಿಂದ ಮುಂಡರಗಿ ಪಟ್ಟಣದತ್ತ ತೆರಳುತ್ತಿದ್ದರು. ಮುಂಡರಗಿಯಿಂದ ಶಿರಹಟ್ಟಿ ಕಡೆಗೆ ವೇಗವಾಗಿ ಸಿಮೆಂಟ್ ತುಂಬಿದ ಲಾರಿ ಬರುತ್ತಿತ್ತು. ಕವಿರ್ಂಗ್‍ನಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಡಿಕ್ಕಿ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಮುಂಡರಗಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಹಾಝಿರಾ ಸ್ವಲ್ಪ ದಿನದ ಹಿಂದೆ ಹುಷಾರ್ ಇಲ್ಲ ಅಂತ ಗಂಡನ ಮನೆ ಮುಂಡರಗಿಯಿಂದ ತವರು ಮನೆ ಕಣಕವಾಡಗೆ ಬಂದಿದ್ದರು. ತವರು ಮನೆಯ ಪ್ರೀತಿಯ ಆರೈಕೆ ಪಡೆದುಕೊಂಡು ಗಂಡನ ಮನೆ ಮುಂಡರಗಿಗೆ ತೆರಳು ಸಜ್ಜಾದರು. ಕುಟುಂಬಸ್ಥರು ನಾಳೆ ಭಾನುವಾರ ಹೋಗುವಂತೆ, ಇನ್ನೊಂದು ದಿನ ಇರು ಅಂತ ಪರಿಪರಿಯಾಗಿ ಬೇಡಿಕೊಂಡಿದ್ದರು, ಗಂಡನ ಮನೆಗೆ ಹೋಗಲೇಬೇಕೆಂದು ಬಿಬಿಹಾಝಿರಾ ಹಠ ಮಾಡಿ ಹೊರಟಿದ್ದಳು. ಅಣ್ಣ ಮಹ್ಮದ್ ರಫಿ ತನ್ನ ಮುದ್ದಿನ ತಂಗಿಯನ್ನು ಗಂಡನ ಮನೆಗೆ ಬೀಡಲು ಬೈಕನ್ನೇರಿ ಹೊರಟಿದ್ದರು. ಆದರೆ ಗಂಡನ ಮನೆ ಸೇರುವ ಮುನ್ನ ಅಣ್ಣ, ತಂಗಿ ಹಾಗೂ ತಂಗಿ ಮಗು ಈ ಮೂವರು ಮಸಣ ಸೇರಿದ್ದು ದುರಂತವಾಗಿದೆ.

  • ಅಕ್ಕನ ಚಿಕಿತ್ಸೆಗಾಗಿ ಪಕ್ಷಿಗಳ ಆಹಾರವನ್ನು ಮಾರುತ್ತಿದ್ದಾನೆ ತಮ್ಮ

    ಅಕ್ಕನ ಚಿಕಿತ್ಸೆಗಾಗಿ ಪಕ್ಷಿಗಳ ಆಹಾರವನ್ನು ಮಾರುತ್ತಿದ್ದಾನೆ ತಮ್ಮ

    ಹೈದರಾಬಾದ್: ಹತ್ತು ವರ್ಷದ ಬಾಲಕನೋರ್ವ ಬ್ರೈನ್ ಕ್ಯಾನ್ಸರ್‍ನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಚಿಕಿತ್ಸೆ ಕೊಡಿಸಲು ಪಕ್ಷಿಗಳ ಆಹಾರವನ್ನು ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾನೆ.

    ಹೈದರಾಬಾದಿನ ಸೈಯದ್ ಅಜೀಜ್‍ನ ಸಹೋದರಿ ಕಳೆದ ಎರಡು ವರ್ಷಗಳಿಂದ ಬ್ರೈನ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಕುಟುಂಬ ನಿರ್ವಹಣೆಗೆ ಬಾಲಕ ಬೀಜಗಳನ್ನು ಮಾರಾಟ ಮಾಡುತ್ತಿದ್ದಾನೆ. ವ್ಯಾಪಾರದಲ್ಲಿ ಮಾಡಲು ನಿರ್ಧರಿಸಿದರೂ, ಸೈಯದ್ ಅಜೀಜ್ ಶಿಕ್ಷಣವನ್ನು ಬಿಡದೇ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾನೆ. ಈ ಕುರಿತಂತೆ ಸೈಯದ್ ಅಜೀಜ್, ನಾನು ಬೆಳಗ್ಗೆ 6 ರಿಂದ 8 ವರೆಗೆ ಪಕ್ಷಿ ಆಹಾರವನ್ನು ಮಾರಾಟ ಮಾಡುತ್ತೇನೆ ಮತ್ತು 8 ರಿಂದ ಸಂಜೆ 5 ಗಂಟೆಯವರೆಗೆ ಮದರಸದಲ್ಲಿರುವ ನನ್ನ ತರಗತಿಗೆ ಹಾಜರಾಗುತ್ತೇನೆ ಎಂದಿದ್ದಾನೆ.

    ಸೈಯದ್ ಅಜೀಜ್ ತಾಯಿ ಬಿಲ್ಕೆಸ್ ಬೇಗಂ, ನನ್ನ ಮಗಳಿಗೆ 2 ವರ್ಷಗಳ ಹಿಂದೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅಂದಿನಿಂದ ಇಡೀ ಕುಟುಂಬ ಅವಳ ಚಿಕಿತ್ಸೆಗಾಗಿ ಕಷ್ಟವನ್ನು ಎದುರಿಸುತ್ತಿದ್ದೇವೆ. ಮೊದಲು ವೈದ್ಯರು ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿದಾಗ ನಮಗೆ ಭಯವಾಯಿತು. ಸಕೀನಾರನ್ನು ಗುಣಮುಖಪಡಿಸಬೇಕೆಂದರೆ ರೇಡಿಯೋ ಥೆರಪಿಗೆ ಒಳಪಡಿಸಬೇಕು ಎಂದು ವೈದ್ಯರು ತಿಳಿಸಿದರು. ನಾವು ತೆಲಂಗಾಣ ಸರ್ಕಾರದಿಂದ ಹಣವನ್ನು ಸ್ವೀಕರಿಸಿ ಮತ್ತು ಆ ಸಂಪೂರ್ಣ ಹಣವನ್ನು ರೇಡಿಯೋ ಥೆರಪಿಗೆ ಬಳಸಿದ್ದೇವೆ. ಕುಟುಂಬದ ಸ್ಥಿತಿಯನ್ನು ನೋಡುತ್ತಾ ಬಂದ ಮಗ ಸೈಯದ್ ಅಜೀಜ್ ಸಹಾಯ ಮಾಡಲು ನಿರ್ಧರಿಸಿದ್ದಾನೆ. ಬಳಿಕ ಪಕ್ಷಿಗಳ ಆಹಾರವನ್ನು ಮಾರಾಟ ಮಾಡುತ್ತೇನೆ ಎಂದು ತಿಳಿಸಿ ರಸ್ತೆಗಳಲ್ಲಿ ಮೇಜಿನ ಮೇಲೆ ಪಕ್ಷಿಗಳ ಆಹಾರ ಪದಾರ್ಥವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿದರು.

    ಪಕ್ಷಿ ಆಹಾರವನ್ನು ಮಾರಾಟ ಮಾಡುವುದರಿಂದ ಬರುವ ಇಬ್ಬರ ಹಣದಿಂದ ಔಷಧಿ, ಎಂಆರ್‍ಐ, ಎಕ್ಸ್ ರೇ ಮತ್ತು ರಕ್ತ ಪರೀಕ್ಷೆ ಹೀಗೆ ಚಿಕಿತ್ಸೆಯ ಖರ್ಚುಗಳನ್ನು ನೋಡಿಕೊಳ್ಳಲಾಗುತ್ತದೆ. ಸೈಯದ್ ಅಜೀಜ್ ತಂದೆ ಮನೆಗಳಿಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದು, ಅವರು ಆದಾಯದಿಂದ ಕುಟುಂಬ ನಿರ್ವಹಣೆ ಆಗುತ್ತಿದೆ. ಇದನ್ನೂ ಓದಿ:ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ: ಸುರೇಶ್ ಕುಮಾರ್

  • ಮದುವೆ ನಿರಾಕರಿಸಿದ್ದಕ್ಕೆ ಅಣ್ಣನಿಂದ ತಂಗಿಯ ಕೊಲೆ

    ಮದುವೆ ನಿರಾಕರಿಸಿದ್ದಕ್ಕೆ ಅಣ್ಣನಿಂದ ತಂಗಿಯ ಕೊಲೆ

    ರಾಯಚೂರು: ನಿಶ್ಚಿತಾರ್ಥವಾಗಿದ್ದ ಹುಡುಗ ಕಪ್ಪು ಎಂಬ ಕಾರಣ ಹೇಳಿ ಮದುವೆ ನಿರಾಕರಿಸಿದ್ದಕ್ಕೆ ತಂಗಿಯನ್ನೇ ಅಣ್ಣ ಕೊಚ್ಚಿಕೊಲೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

    ಚಂದ್ರಕಲಾ (22) ಕೊಲೆಯಾದ ಯುವತಿ. ಜುಲೈ 13 ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಮನೆಯವರು ಮದುವೆಗೆ ಲಗ್ನ ಪತ್ರಿಕೆ ಸಹ ಹಂಚಿಕೆ ಮಾಡಿದ್ದರು. ಬಳಿಕ ಚಂದ್ರಕಲಾ ಏಕಾಏಕಿ ಮದುವೆಯಾಗುವ ಹುಡುಗ ಕಪ್ಪು ಎಂದು ಕಾರಣ ಹೇಳಿ ಮದುವೆಯನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಅಣ್ಣ ಶ್ಯಾಮಸುಂದರ ತಂಗಿಯನ್ನು ಕೊಲೆ ಮಾಡಿದ್ದಾನೆ.  ಇದನ್ನೂ ಓದಿ: ರಾಯಚೂರಿನಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ – ಜೋಡಿ ಎತ್ತುಗಳಿಗೆ ಫುಲ್ ಡಿಮ್ಯಾಂಡ್

    ಚಂದ್ರಕಲಾ ಮದುವೆ ಬೇಡ ಎಂದು ಮನೆಯವರಿಗೆ ತಿಳಿಸುತ್ತಿದ್ದಂತೆ ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಶ್ಯಾಮಸುಂದರ ಕೊಲೆಗೈದಿದ್ದಾನೆ. ಆರೋಪಿ ಶ್ಯಾಮಸುಂದರನನ್ನು ಗಬ್ಬೂರು ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

    ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

    – ಮಗು ಖುಷಿ ಕಸಿದುಕೊಂಡ ಕೊರೊನಾ ಮಹಾಮಾರಿ
    – 2 ವರ್ಷದ ಹಿಂದೆ ತಾಯಿ ನಿಧನ

    ಶಿವಮೊಗ್ಗ: ಈ ಕೊರೊನಾ ಮಹಾಮಾರಿ ಎಲ್ಲರ ಜೀವ, ಜೀವನದ ಜೊತೆ ಚೆಲ್ಲಾಟವಾಡಿದೆ. ಹಲವರ ಖುಷಿ ಕಸಿದುಕೊಂಡಿದೆ. ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ಅನಾಥರಾಗಿವೆ. ಹಾಗೆಯೇ ಪುಟಾಣಿಯೊಬ್ಬಳು ಅಪ್ಪನಿಗೆ ನಿತ್ಯವೂ ಹಲವು ಬಾರಿ ಫೋನ್ ಮಾಡುವ ಪ್ರಯತ್ನ ಮಾಡುತ್ತಾಳೆ. ಇಂತಹ ಒಂದು ಮನ ಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಈ ಪುಟಾಣಿ ಸಮ್ಯಾ(3) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶರಣ್ ಎಂಬವರ ಪುತ್ರಿ. ಸಮ್ಯಾ ತಾಯಿ ಇಹಲೋಕ ತ್ಯಜಿಸಿದಾಗ ಈ ಪುಟಾಣಿಗೆ ಒಂದು ವರ್ಷವಾಗಿತ್ತು. ಒಂದು ವರ್ಷದವಳಾಗಿದ್ದಾಗಲೇ ಈ ಪುಟಾಣಿ ತಾಯಿಯನ್ನು ಕಳೆದುಕೊಂಡಿತ್ತು. ಈ ಪುಟಾಣಿಯ ತಂದೆ ಶರಣ್ ಅವರೇ ತಾಯಿ ತಂದೆ ಎರಡು ಆಗಿ ಮಗಳನ್ನು ಪೋಷಿಸುತ್ತಿದ್ದರು.

    ಶರಣ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿದ್ದರು. ಆದರೆ ಕಳೆದ ಬಾರಿ ಕೊರೊನಾ ವಕ್ಕರಿಸಿದ್ದರಿಂದ ಮೊದಲ ಬಾರಿ ಲಾಕ್ ಡೌನ್ ಜಾರಿಯಾಯ್ತು. ಲಾಕ್ ಡೌನ್ ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ನಂತರ ಶಿವಮೊಗ್ಗದಲ್ಲಿಯೇ ಕೆಲಸ ಹುಡುಕಿಕೊಂಡಿದ್ದರು. ಕೆಲಸದ ಜೊತೆ ಜೊತೆಗೆ ಸಂಸ್ಕøತಿ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು.

    ಕೊರೊನಾ ಎರಡನೇ ಅಲೆ ಆರಂಭವಾದ ಸಂದರ್ಭದಲ್ಲಿ ಶರಣ್ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಸುಮಾರು 10 ಸಾವಿರ ಮಂದಿಗೆ ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ದಿನಸಿ ಕಿಟ್ ವಿತರಿಸಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ, ಶರಣ್ ಗೆ ಸೋಂಕು ತಗುಲಿ ಕಳೆದ ಒಂದು ತಿಂಗಳ ಹಿಂದೆ ಮಹಾಮಾರಿಗೆ ಬಲಿಯಾದರು. ಇದೀಗ ಶರಣ್ ಪುತ್ರಿ ಸಮ್ಯಾ ಅಪ್ಪನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.

    ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡಿರುವ ಪುಟಾಣಿ ಸಮ್ಯಾಳಿಗೆ ಶರಣ್ ಸಹೋದರಿ ಅಖಿಲಾ ಆಸರೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ತಾಯಿ ಕಳೆದುಕೊಂಡ ದಿನದಿಂದ ಸಮ್ಯಾ ಅಖಿಲಾ ಅವರ ಜೊತೆ ಬೆಳೆಯುತ್ತಿದ್ದಳು. ಜೊತೆಗೆ ಅವರನ್ನೇ ತಾಯಿ ಅಂದುಕೊಂಡಿದ್ದಳು. ಇದೀಗ ಈ ಪುಟಾಣಿಗೆ ಅವರೇ ಎಲ್ಲವೂ ಆಗಿದ್ದಾರೆ. ಅಮ್ಮ ಹೋದ ಬಳಿಕ ಅಪ್ಪನೇ ಅವಳ ಸರ್ವಸ್ವವಾಗಿದ್ದರು. ಆದರೆ ಈ ಕಂದಮ್ಮನಿಗೆ ಅಪ್ಪ ಇಲ್ಲ ಎಂಬ ಸತ್ಯವೇ ತಿಳಿದಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಅಪ್ಪನ ನಂಬರಿಗೆ ಕರೆ ಮಾಡುತ್ತಾಳೆ. ಅಪ್ಪ ಯಾಕೋ ಬ್ಯೂಸಿ ಇರಬೇಕು ಎಂದು ಅವಳೇ ಅಂದುಕೊಂಡು ಸುಮ್ಮನಾಗುತ್ತಾಳಂತೆ.

    ಅಖಿಲಾ ಅವರಿಗೂ ಒಬ್ಬಳು ಮಗಳಿದ್ದಾಳೆ. ಇದೀಗ ಸಮ್ಯಾ ಸೇರಿ ನಮಗೆ ಇಬ್ಬರು ಮಕ್ಕಳು. ಸಮ್ಯಾ ಕೂಡಾ ನಮ್ಮ ಮಗಳೇ. ಸಮ್ಯಾಳಿಗೆ ಅಪ್ಪ ಅಮ್ಮ ಇಲ್ಲ ಎನ್ನುವ ಕೊರಗು ಬಾರದ ರೀತಿ ನೋಡಿಕೊಳ್ಳುತ್ತೇವೆ. ಇಬ್ಬರು ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತೇವೆ. ಸದಾ ಅವಳಿಗೆ ನೆರಳಾಗಿ ಇರುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಮೊದಲೇ ತಾಯಿ ಕಳೆದುಕೊಂಡಿದ್ದ ಪುಟಾಣಿ ಇದೀಗ ಮಹಾಮಾರಿಗೆ ತಂದೆಯನ್ನು ಕಳೆದುಕೊಂಡಿದೆ. ಏಯ್ ವಿಧಿಯೇ ನೀನೆಷ್ಟು ಕ್ರೂರಿ ನಿನಗೆ ಧಿಕ್ಕಾರವಿರಲಿ. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕಳೆದುಕೊಂಡು ಬುದ್ದಿ ಭ್ರಮಣೆಯಾಗಿದೆ: ಶ್ರೀರಾಮುಲು

  • ಗ್ರಾಮ ಪಂಚಾಯತಿ ಕಾರ್ಯದರ್ಶಿ ಆತ್ಮಹತ್ಯೆ – ಅಕ್ಕ, ತಂದೆ ಹಾದಿಯನ್ನೇ ಹಿಡಿದ ಯುವತಿ

    ಗ್ರಾಮ ಪಂಚಾಯತಿ ಕಾರ್ಯದರ್ಶಿ ಆತ್ಮಹತ್ಯೆ – ಅಕ್ಕ, ತಂದೆ ಹಾದಿಯನ್ನೇ ಹಿಡಿದ ಯುವತಿ

    ಕೋಲಾರ: ತಂದೆ ಇಲ್ಲದ ಕುಟುಂಬದ ಜವಾಬ್ದಾರಿ ಹೊತ್ತಿದ್ದ, ಗ್ರಾಮ ಪಂಚಾಯತಿಯೊಂದರ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಘಟನೆ ಕೋಲಾರದಲ್ಲಿ ನಡೆದಿದ್ದು, ಕಾವ್ಯಾಂಜಲಿ ಮೃತ ಯುವತಿ. ಕಾವ್ಯಾಂಜಲಿ ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಈಕೆ ನಿನ್ನೆ ರಾತ್ರಿ ಇದ್ದಕ್ಕಿದಂತೆ ತನ್ನದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಿನ್ನೆ ಎಂದಿನಂತೆ ಕೆಲಸ ಮುಗಿಸಿಕೊಂಡು ರಾತ್ರಿ ತಡವಾಗಿ ಮನೆಗೆ ಬಂದ ಕಾವ್ಯಾ, ತನ್ನ ತಾಯಿಗೆ ತಿನ್ನೋದಕ್ಕೆ ಏನಾದರೂ ತೆಗೆದುಕೊಂಡು ಬರುವಂತೆ ಕೇಳಿದ್ದಾಳೆ. ತಾಯಿ ಇಷ್ಟೊತ್ತಿಗೆ ಏನು ಸಿಗುವುದಿಲ್ಲ ಎಂದು ಹೇಳಿದರೂ ಕೇಳದೇ, ಏನಾದರೂ ಬೇಕೆ,ಬೇಕು ಎಂದು ಹಠ ಮಾಡಿದ್ದಾರೆ.

    ಆಗ ತಾಯಿ ಪುಷ್ಟಲತಾ ಬಜ್ಜಿ ಬೊಂಡ ಸಿಗಬಹುದು ತೆಗೆದುಕೊಂಡು ಬರುತ್ತೀನಿ ಎಂದು ಮನೆಯಿಂದ ಹೊರಹೋಗಿದ್ದಾರೆ. ವಾಪಸ್ಸು ಬರುವಷ್ಟರಲ್ಲಿ ಮನೆಯ ರೂಮಿನಲ್ಲಿ ಕಾವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಗೆ ಬಂದ ತಾಯಿ ಮನೆಯ ಬಾಗಿಲು ತೆರೆಯದ್ದನ್ನು ಕಂಡು ಬೇರೊಂದು ಕೀ ಬಳಸಿ ಮನೆಯ ಬಾಗಿಲು ತೆಗೆದು ನೋಡಿದಾಗ ಕಾವ್ಯ ಸಾವನ್ನಪಿರುವುದನ್ನು ನೋಡಿದ್ದಾರೆ. ಇನ್ನು ಜೀವ ಇದೆ ಎಂದು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಯಲಿಲ್ಲ. ಕಾವ್ಯಾಳಿಗೆ ತಂದೆ, ತಾಯಿ, ಅಕ್ಕ, ತಂಗಿ, ಸ್ನೇಹಿತೆ ಎಲ್ಲವೂ ತಾಯಿನೇ ಆಗಿದ್ದರೂ ಅವರ ಬಳಿಯೂ ಕಾವ್ಯ ಏನು ಹೇಳಿಕೊಂಡಿಲ್ಲ. ಹಾಗಾಗಿ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಸದ್ಯ ತಿಳಿದು ಬಂದಿಲ್ಲ.

    ಈ ಕುಟುಂಬದಲ್ಲಿ ಇದೇ ಮೊದಲ ಆತ್ಮಹತ್ಯೆಯಲ್ಲ, ಈ ಹಿಂದೆ ಕೆಲವು ಹಣಕಾಸಿನ ತೊಂದರೆಯಿಂದ ಕಾವ್ಯಾಳ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ಎರಡು ವರ್ಷಗಳ ಹಿಂದೆ ಕಾವ್ಯಾಳ ತಂದೆ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮನೆಗೆ ಆಧಾರ ಸ್ಥಂಬವಾಗಿದ್ದ ಕಾವ್ಯಾ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಪಿಡಿಓ ಆಗಿದ್ದ, ಇವರ ತಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ನಂತರ ಅನುಕಂಪದ ಆಧಾರದಲ್ಲಿ ತಂದೆ ಕೆಲಸವನ್ನು ಕಾವ್ಯಗೆ ನೀಡಲಾಗಿತ್ತು. ಸದ್ಯ ಈ ಕುಟುಂಬದಲ್ಲಿ ಬೇರೆ ಯಾರು ಇರಲಿಲ್ಲ. ತಾಯಿ ಮಗಳು ಇಬ್ಬರೇ ನನಗೆ ನೀನು ನಿನಗೆ ನಾನು ಎನ್ನುವಂತೆ ಜೀವನ ನಡೆಸುತ್ತಿದ್ದರು.

    ಈ ಕುಟುಂಬ ಕೂಡಾ ಕಾವ್ಯಾಳ ಮೇಲೆ ಅವಲಂಬಿತವಾಗಿತ್ತು, ಆದರೆ ಇದ್ದಕ್ಕಿದಂತೆ ಕಾವ್ಯಾ ಹೀಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಕೆಲಸ ಮಾಡುತ್ತಿದ್ದ ಬೆಗ್ಲಿ ಹೊಸಹಳ್ಳಿ ಪಂಚಾಯಿತಿಯಲ್ಲಿ ಎಲ್ಲರೊಟ್ಟಿಗೆ ಒಳ್ಳೆಯ ಪ್ರೀತಿ, ವಿಶ್ವಾಸ ಗಳಿಸಿದ್ದ ಕಾವ್ಯಾಳಿಗೆ ಕೆಲಸದಲ್ಲೂ ಯಾವುದೇ ಒತ್ತಡ ಇರಲಿಲ್ಲ. ಹಾಗಾಗಿ ಕಾವ್ಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರಿಗೂ ಕಾವ್ಯಾಳ ಆತ್ಮಹತ್ಯೆ ಆಘಾತ ಉಂಟುಮಾಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಕಾವ್ಯಾ ಆತ್ಮಹತ್ಯೆಗೂ ಮುನ್ನ ತನ್ನ ಫೋನ್ ಒಡೆದು ಹಾಕಿದ್ದಾಳೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಸರಣಿ ಆತ್ಮಹತ್ಯೆಯಿಂದ ನೊಂದು ಇತ್ತೀಚೆಗೆ ನೆಮ್ಮದಿಯಾಗಿದ್ದ ಸಂಸಾರದಲ್ಲಿ ಉಳಿದ ತಾಯಿಗೆ ಈಗ ಮತ್ತೊಂದು ಆತ್ಮಹತ್ಯೆ ಆಘಾತವನ್ನುಂಟು ಮಾಡಿರುವುದಂತೂ ಸುಳ್ಳಲ್ಲ. ಇದನ್ನೂ ಓದಿ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

  • ಸೆಲ್ಫಿ ಕ್ರೇಜ್ – ಸಮುದ್ರದ ಪಾಲಾದ ಯುವಕ

    ಸೆಲ್ಫಿ ಕ್ರೇಜ್ – ಸಮುದ್ರದ ಪಾಲಾದ ಯುವಕ

    ಕಾರವಾರ: ಲಾಕ್ ಡೌನ್ ಇರುವುದರಿಂದ ಸಮಯ ಕಳೆಯಲು ಅಕ್ಕನ ಮನೆಗೆ ಬಂದ ಯುವಕ ಸಮುದ್ರದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

    ಕೊಪ್ಪಳ ಮೂಲದ ಅಭಿಷೇಕ್ ಹನುಮಂತ ಭೋಯಿ (25) ಮೃತ ಯುವಕ. ಕೊರೊನಾ ಲಾಕ್‍ಡೌನ್ ಇರುವುದರಿಂದ ತನ್ನೂರಿಂದ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕನ ಮನೆಗೆ ಬಂದಿದ್ದ ಅಭಿಷೇಕ್, ಕುಮಟಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿರುವ ಸಮುದ್ರದ ಭಾಗಕ್ಕೆ ತೆರಳಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಸಮುದ್ರಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ, ಭೂ ಕುಸಿತದ ಭೀತಿ- ಸೋಮಣ್ಣ ಆತಂಕ

    ಸೆಲ್ಫಿ ಕ್ರೇಜ್ ನಲ್ಲಿ ಕಾಲುಜಾರಿ ಸಮುದ್ರದಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ. ಇದೀಗ ಕುಮಟಾದ ಅಳವೆ ದಂಡೆಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸುರೇಶ್ ಚಂದ್ರ ಕೊರೊನಾಗೆ ಬಲಿ

     

  • ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆ ಹೋಗಿದ್ದ ಅಣ್ಣನ ಬರ್ಬರ ಕೊಲೆ

    ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆ ಹೋಗಿದ್ದ ಅಣ್ಣನ ಬರ್ಬರ ಕೊಲೆ

    ಕಲಬುರಗಿ: ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆಂದು ಹೋಗಿದ್ದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಕೋಟನೂರ ತರಕಾರಿ ಮಾರ್ಕೆಟ್‍ನಲ್ಲಿ ನಡೆದಿದೆ.

    ನಿಖಿಲ್(24) ಕೊಲೆಯಾದ ದುರ್ದೈವಿ. ತಂಗಿಯ ಎಂಗೇಜ್‍ಮೆಂಟ್ ಕಾರ್ಯಕ್ರಮ ನಾಳೆ ನಡೆಯಲಿದ್ದ ಕಾರಣ ತಾಯಿ ಮತ್ತು ಅಣ್ಣನೊಂದಿಗೆ ಕೋಟನೂರ ಬಳಿಯ ಮಾರ್ಕೆಟ್‍ಗೆ ತರಕಾರಿ ಖರೀದಿಗೆ ನಿಖಿಲ್ ತೆರಳಿದ್ದರು. ಈ ವೇಳೆ ಈ ಹಿಂದೆ ತಂಗಿಯನ್ನು ಪ್ರೀತಿಸುತ್ತಿದ್ದ ಯುವಕ ವಿಶಾಲ್ ಹಾಗೂ ಆತನ ಸ್ನೇಹಿತರ ತಂಡ ನಿಖಿಲ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ:ಪ್ರೇಮ ವೈಫಲ್ಯ ಅತಿಥಿ ಉಪನ್ಯಾಸಕ ಆತ್ಮಹತ್ಯೆ

    ನಿಖಿಲ್‍ನ ತಂಗಿಯ ಎಂಗೇಜ್‍ಮೆಂಟ್ ಬೇರೊಬ್ಬ ಯುವಕನ ಜೊತೆ ನಾಳೆ ನಿಶ್ಚಯವಾಗಿತ್ತು. ಈ ದ್ವೇಷದಿಂದ ಕಾರಿನಲ್ಲಿ ಬಂದ ವಿಶಾಲ್ ಮತ್ತು ತಂಡ ಮಾರ್ಕೆಟ್‍ನಲ್ಲಿ ನಿಖಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಪರಿಣಾಮ ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ತಾಯಿ ಮತ್ತು ಅಣ್ಣನಿಗೆ ಗಂಭೀರ ಗಾಯವಾಗಿದೆ. ಗಾಯಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ

    ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ

    ಲಕ್ನೋ: ವರ ತಾಳಿ ಕಟ್ಟುವಾಗಲೇ ವಧು ಸಾವನ್ನಪ್ಪಿದ್ದಾಳೆ. ಅದೇ ಮುಹೂರ್ತದಲ್ಲಿ ವರ ವಧುವಿನ ತಂಗಿಗೆ ತಾಳಿ ಕಟ್ಟಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಸನಾದ್ಪುರದಲ್ಲಿ ನಡೆದಿದೆ. ಇದನ್ನೂ ಓದಿ: ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಸನಾದ್ಪುರದ ನಿವಾಸಿ ಮನೋಜ್ ಕುಮಾರ್ ಎನ್ನುವ ವರನಿಗೆ ಸುರಭಿ ಎನ್ನುವ ಹುಡುಗಿಯ ಜೊತೆ ವಿವಾಹ ನಿಶ್ಚಯವಾಗಿತ್ತು, ಹೂ ಮಾಲೆ ಹಾಕಿದ ನಂತರ ಇದ್ದಕ್ಕಿದ್ದಂತೆ ಸುರಭಿ ಕುಸಿದು ಬಿದ್ದಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ಮಾಡಲಾಯಿತು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಸುರಭಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗ

    ವಿವಾಹದ ಒತ್ತಡದ ಕಾರಣ ಸುರಭಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದರು. ವಧು ಮೃತಪಟ್ಟ ಕಾರಣ ವಿವಾಹವನ್ನು ನಿಲ್ಲಿಸಬೇಕೇ, ಬೇಡವೇ ಎನ್ನುವ ಚರ್ಚೆ ಆರಂಭವಾಯಿತು. ಕೊನೆಗೆ ವಧುವಿನ ತಂಗಿಯನ್ನು ವರನಿಗೆ ಮದುವೆ ಮಾಡಿಕೊಡುವ ಮೂಲಕ ಈ ವಿವಾಹವನ್ನು ನಿಲ್ಲಿಸದೆ ಮುಂದುವರಿಸುವ ನಿರ್ಣಯಕ್ಕೆ ಎರಡೂ ಕಡೆಯ ಹಿರಿಯರು ನಿರ್ಧಾರ ಮಾಡಿದರು. ಇದನ್ನೂ ಓದಿ: ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಇದೆ-ಸಚಿವರನ್ನು ಟ್ಯಾಗ್ ಮಾಡಿ ದೂರು ನೀಡಿದ ವ್ಯಕ್ತಿ

     

    ನಿಶಾಳನ್ನು ವಿವಾಹವಾಗಲು ವರ ಮನೋಜ್ ಕುಮಾರ್ ಒಪ್ಪಿಗೆ ಸೂಚಿಸಿದರು. ನಿಶಾ ಕೂಡ ಈ ವಿವಾಹಕ್ಕೆ ಸಮ್ಮತಿ ಸೂಚಿಸಿದರು. ಮೃತದೇಹವನ್ನು ಕೋಣೆಯಲ್ಲಿ ಇರಿಸಲಾಗಿತ್ತು. ನಂತರ ಮನೋಜ್ ಕುಮಾರ್ ಅವರ ವಿವಾಹವನ್ನು ಸುರಭಿ ಅವರ ಸಹೋದರಿ ನಿಶಾ ಅವರೊಂದಿಗೆ ನಡೆಸಲಾಯಿತು. ಮದುವೆಯ ನಂತರ, ದಿಬ್ಬಣ ಹೊರಟು ಹೋದ ಮೇಲೆ ಸುರಭಿ ಅವರ ಅಂತ್ಯ ಸಂಸ್ಕಾರವನ್ನು ಕೈಗೊಳ್ಳಲಾಯಿತು ಎಂದು ಸುರಭಿ ಅವರ ಸಹೋದರ ಸೌರಭ್ ಹೇಳಿದ್ದಾರೆ. ಒಂದು ಮಗಳು ಕೋಣೆಯಲ್ಲಿ ಸತ್ತು ಮಲಗಿದ್ದರೆ ಇನ್ನೊಂದು ಮಗಳ ವಿವಾಹವನ್ನು ಇನ್ನೊಂದು ಕೋಣೆಯಲ್ಲಿ ನಡೆಸಲಾಗುತ್ತಿತ್ತು ಎಂದು ಹೇಳುತ್ತಾ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ದೂರವಿರಲು ಹಾವು ತಿಂದ

  • ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಅಂತ ಬರೆದಿಟ್ಟು ಅಣ್ಣ-ತಂಗಿ ಆತ್ಮಹತ್ಯೆ!

    ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಅಂತ ಬರೆದಿಟ್ಟು ಅಣ್ಣ-ತಂಗಿ ಆತ್ಮಹತ್ಯೆ!

    ಪಾಟ್ನಾ: ಪ್ರೀತಿಯಲ್ಲಿ ಬಿದ್ದ ಅಣ್ಣ, ತಂಗಿ ಆತ್ಮಹತ್ಯೆಯ ದಾರಿ ಹಿಡಿದ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು 16 ವರ್ಷದ ಹುಡುಗಿ ಹಾಗೂ 18 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಈ ಇಬ್ಬರು ಸಂಬಂಧದಲ್ಲಿ ಅಣ್ಣ- ತಂಗಿ ಆಗಬೇಕು. ಆದರೆ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದ್ದು, ಈ ವಿಚಾರ ಮನೆಯವರಿಗೆ ತಿಳಿದಿದೆ. ಆಗ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಅಣ್ಣ- ತಂಗಿ ನಡುವೆ ಇರುವ ಸಂಬಂಧ ಅರಿತ ಕುಟುಂಬಸ್ಥರು ಯುವಕನನ್ನು ಕೋಲ್ಕತ್ತಾಗೆ ಕಳುಹಿಸಿದ್ದಾರೆ. ಇತ್ತ ಮದುವೆ ನಿಮಿತ್ತ ಹುಡುಗಿಯ ಕುಟುಂಬಸ್ಥರು ಆಕೆ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದರು. ಈ ವಿಚಾರ ತಿಳಿದ ಯುವಕ ನೇರವಾಗಿ ಆಕೆಯ ಮನೆಗೆ ಬಂದಿದ್ದಾನೆ.

    ಹೀಗೆ ಬಂದವನೇ ಹುಡುಗಿಯನ್ನು ಕರೆದುಕೊಂಡು ಹೋಗಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿದ್ದು, ಈ ಜನ್ಮದಲ್ಲಿ ಅಣ್ಣ-ತಂಗಿಯಾಗಿದ್ದೇವೆ. ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗಿ ಹುಟ್ಟುತ್ತೇವೆ ಎಂದು ಬರೆದಿದ್ದಾನೆ.

    ಸದ್ಯ ಘಟನೆ ಸಂಬಂಧ ಹುಡುಗ ಮತ್ತು ಹುಡುಗಿಯ ಕುಟುಂಬಸ್ಥರು ಪರಸ್ಪರ ದೂರು ದಾಖಲು ಮಾಡಿಲ್ಲ. ಬದಲಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇಲ್ಲದ ಕಾರಣ ಮಕ್ಕಳು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

  • ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅಕ್ಕ ಕೊರೊನಾಗೆ ಬಲಿ

    ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅಕ್ಕ ಕೊರೊನಾಗೆ ಬಲಿ

    ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹಿರಿಯ ಸಹೋದರಿ ವತ್ಸಲಾ ಇಂದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    ಮೃತ ವತ್ಸಲಾ (40) ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗ್ಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

    ಏಪ್ರಿಲ್ 24ರಂದು ವೇಧಾ ಕೃಷ್ಣಮೂರ್ತಿ ತಾಯಿ ಚೆಲುವಾಂಭ(67) ಕೊರೊನಾ ಸೋಂಕಿಗೆ ಬಲಿಯಾಗಿದ್ದರು. 15 ದಿನಗಳ ಅಂತರದಲ್ಲಿ ವೇದಾ ಕೃಷ್ಣಮೂರ್ತಿ ಕೊರೊನಾದಿಂದ ಅಮ್ಮ ಹಾಗೂ ಅಕ್ಕನನ್ನ ಕಳೆದುಕೊಂಡಿದ್ದಾರೆ. ಮೃತ ವತ್ಸಲಾ ಅವರ ಪತಿ ಕೆಲ ವರ್ಷಗಳ ಹಿಂದೆಯೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವತ್ಸಲಾ ಅವರಿಗೆ ಓರ್ವ ಪುತ್ರನಿದ್ದಾನೆ. ಇಂದು ತಾಲೂಕು ಆಡಳಿತದ ವತಿಯಿಂದ ಕೊರೊನಾ ನಿಯಾಮವಳಿಯಂತೆ ವತ್ಸಲಾ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ.

    ಕಡೂರು ತಾಲೂಕಿನ ಬೀರೂರು ರಸ್ತೆಯಲ್ಲಿ ವೇಧಾ ಅವರ ಜಮೀನಿನಲ್ಲೇ ಅವರ ತಾಯಿಯ ಅಂತ್ಯಸಂಸ್ಕಾರ ನಡೆಸಿದ ಜಾಗದ ಪಕ್ಕದಲ್ಲೇ ತಾಲೂಕು ಆಡಳಿತದ ವತಿಯಿಂದ ವತ್ಸಲಾ ಅವರ ಅಂತ್ಯ ಸಂಸ್ಕಾರ ನಡೆಸಲಾಗಿದೆ.