Tag: sister

  • ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

    ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

    ಪಾಟ್ನಾ: ಮದುವೆ ಮಂಟಪದಲ್ಲಿ ವರನೊಬ್ಬ ಹಾರ ಬದಲಾಯಿಸಿಕೊಂಡು ಬಳಿಕ ತಾಳಿ ಮಾತ್ರ ಮದುಮಗಳ ಸಹೋದರಿಗೆ ಕಟ್ಟಿದ (Marriage Twist) ವಿಲಕ್ಷಣ ಘಟನೆಯೊಂದು ಬಿಹಾರ (Bihar) ದ ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಛಪ್ರಾ ನಿವಾಸಿ ರಾಜೇಶ್ ಕುಮಾರ್ ಗೆ ಗೆಳತಿ ಪುತುಲ್ ಎಂಬಾಕೆಯ ಸಹೋದರಿ ರಿಂಕು ಕುಮಾರಿ ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಮದುವೆಗೆ ಎಲ್ಲಾ ತಯಾರಿಗಳು, ಸಂಪ್ರದಾಯಗಳು ನಡೆಯುತ್ತಿದ್ದವು. ಅಲ್ಲದೆ ಇನ್ನೇನು ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಗೆಳತಿ ಪುತುಲ್ ನಿಂದ ಕರೆ ಬಂದಿದೆ. ಆದರೆ ಈ ಕರೆಯು ಬೆದರಿಕೆ ಕರೆಯಾಗಿತ್ತು.

    ಹೌದು. ನೀನು ಆಕೆಯನ್ನು ಮದುವೆಯಾದರೆ ನಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಇದನ್ನು ಕೆಳಿದ ವರ ಕೂಡಲೇ ಮದುವೆ ನಿಲ್ಲಿಸಿದ್ದು, ಸ್ಥಳದಿಂದ ತೆರಳಿದ್ದಾನೆ. ವರನ ಈ ನಡೆ ಕಂಡು ಮದುವೆಗೆ ಆಗಮಿಸಿದವರಿಗೆ ಶಾಕ್ ನೀಡಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜೇಶ್ ಸ್ಪಷ್ಟನೆ ನೀಡಿದ್ದಾನೆ. ಛಾಪ್ರಾದಲ್ಲಿ ನಾನು ಹಾಗೂ ಪುತುಲ್ ಆಗಾಗ ಭೇಟಿಯಾಗುತ್ತಿದ್ದೆವು. ನಾನು ಆಕೆಯನ್ನು ಪ್ರೀತಿ(Love) ಸುತ್ತಿದ್ದೆ ಎಂದು ತನ್ನ ಕುಟುಂಬಕ್ಕೆ ಬಹಿರಂಗಪಡಿಸಿದನು. ಇದನ್ನೂ ಓದಿ: ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ – ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್?

    ಇತ್ತ ರಿಂಕು ಜೊತೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಪುತುಲ್ ವಿಚಲಿತಗೊಂಡಿದ್ದಾಳೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ಕೂಡ ತಿಳಿಸಿದ್ದಾನೆ. ರಾಜೇಶ್ ಈ ರೀತಿ ಹೇಳುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಜೋರಾಗುತ್ತಿದ್ದಂತೆಯೇ ಮದುವೆಗೆ ಆಗಮಿಸಿದ ಕೆಲ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ಸ್ಥಳಕ್ಕೆ ಕರೆಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಮನವಿ ಮಾಡಿದ್ದಾರೆ.

    ಅಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡೂ ಕುಟುಂಬಗಳನ್ನು ಕುಳಿತುಕೊಳ್ಳಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜೇಶ್, ನನಗೆ ರಿಂಕು ಜೊತೆ ಮದುವೆ ಫಿಕ್ಸ್ ಆಗುವ ಮುಂಚೆಯೇ ಆಕೆಯ ಸಹೋದರಿಯಾಗಿರುವ ಪುತುಲ್ ಪರಿಚಯ ಎಂದು ಹೇಳಿದ್ದಾನೆ. ಮಾತುಕತೆಯ ಬಳಿಕ ರಾಜೇಶ್, ರಿಂಕು ಬದಲು ಪುತುಲ್ ಗೆ ತಾಳಿ ಕಟ್ಟಿದ್ದಾನೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.

  • ಪ್ರೀತಿಸಿ ಎರಡನೇ ಮದುವೆಯಾದ ಜೋಡಿ – ಬಾವನ ಕಾಲಿಗೆ ಬಿದ್ದು ಕೊಲೆ ಮಾಡಿದ ಬಾಮೈದರು

    ಪ್ರೀತಿಸಿ ಎರಡನೇ ಮದುವೆಯಾದ ಜೋಡಿ – ಬಾವನ ಕಾಲಿಗೆ ಬಿದ್ದು ಕೊಲೆ ಮಾಡಿದ ಬಾಮೈದರು

    ಕಲಬುರಗಿ: ದಸರಾ (Dasara) ಹಬ್ಬದ ಪ್ರಯುಕ್ತ ಬನ್ನಿ ಬಂಗಾರ ಕೊಡಲು ಸಹೋದರಿಯ ಮನೆಗೆ ತೆರಳಿದ ಸಹೋದರರಿಬ್ಬರು ಬಾವನ (Sister Husband) ಕಾಲಿಗೆ ಬಿದ್ದು ಆ ಬಳಿಕ ಆತನನ್ನು ಕೊಚ್ಚಿ ಕೊಲೆ (Murder)  ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಕಲಬುರಗಿಯ (Kalaburagi) ಸಂತೋಷ್ ಕಾಲೋನಿಯ ನಿವಾಸಿ ಲಕ್ಷ್ಮೀಪುತ್ರ ಕೊಲೆಯಾದ ದುರ್ದೈವಿ. ಲಕ್ಷ್ಮೀಪುತ್ರ ಮತ್ತು ಪ್ರೀತಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು. ಆ ಬಳಿಕ ನೆಮ್ಮದಿಯಾಗಿಯೇ ಇದ್ದರು. ಲಕ್ಷ್ಮೀಪುತ್ರ ಇಬ್ಬರು ಪತ್ನಿಯರನ್ನು ಹೊಂದಿದ್ದ. ಮೊದಲನೆಯೇ ಪತ್ನಿ ಶಶಿಕಲಾಳನ್ನು ಬಿಟ್ಟು ಎರಡನೇ ಪತ್ನಿ ಪ್ರೀತಿ ಜೊತೆ ವಾಸವಿದ್ದ. ಲಕ್ಷ್ಮೀಪುತ್ರ ಜೀವನೋಪಾಯಕ್ಕಾಗಿ ಸಂತೋಷ್ ಕಾಲೋನಿಯಲ್ಲಿ ಟೆಂಟ್‍ಹೌಸ್ ನಡೆಸಿಕೊಂಡು ಹೋಗುತ್ತಿದ್ದ. ಇದೇ ವೇಳೆ ಎರಡನೇ ಪತ್ನಿ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್‍ನಿಗೆ ಎಂಟು ಲಕ್ಷ ರೂಪಾಯಿ ಹಣವನ್ನು ಸಾಲ ನೀಡಿದ್ದ. ಇದನ್ನೂ ಓದಿ: PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ

    ಕೆಲದಿನಗಳ ನಂತರ ಸಾಲ ವಾಪಸ್ ಕೇಳಿದ್ದ ಈ ವೇಳೆ ಬಾಮೈದರು ಕೊಡುತ್ತೇವೆ ಎಂದಿದ್ದರು. ಅಂತೆಯೇ ಅಕ್ಟೋಬರ್ 2 ರಂದು ಹಣ ಕೊಡುತ್ತೇವೆ ಎಂದು ಶಿವಕಾಂತ್ ಮತ್ತು ಪ್ರಶಾಂತ್ ಒಪ್ಪಿಕೊಂಡಿದ್ದಾರೆ. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ, ನಿನ್ನೆ ದಸರಾ ಹಬ್ಬದ ನಿಮಿತ್ತ ಬಾವನಿಗೆ ಬನ್ನಿ ಕೊಡಲು ಅಂತಾ ಇಬ್ಬರು ಮನೆಗೆ ಬಂದಿದ್ದಾರೆ. ಬನ್ನಿ ಕೊಟ್ಟು ಕಾಲಿಗೆ ಬೀಳುವ ನೆಪದಲ್ಲಿ ತಮ್ಮೊಂದಿಗಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಸ್ವಂತ ಟೆಂಟ್‍ಹೌಸ್ ನಡೆಸಿಕೊಂಡು ಲಕ್ಷ್ಮೀಪುತ್ರ ಜೀವನ ಸಾಗಿಸುತ್ತಿದ್ದ. ಮೊದಲ ಪತ್ನಿ ಶಶಿಕಲಾಳಿಗೆ ಮೂವರು ಮಕ್ಕಳಿದ್ದು, ಕೆಲವರ್ಷಗಳ ಹಿಂದೆ ಶಶಿಕಲಾಳನ್ನು ಬಿಟ್ಟು ಪ್ರೀತಿ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಇದರ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ದಸರಾ ಹಬ್ಬದ ನಿಮಿತ್ತ ಮೊದಲ ಪತ್ನಿ ಶಶಿಕಲಾಳ ಮಕ್ಕಳಿಗೆ ಬಟ್ಟೆ ಕೊಡಿಸಲು ಮನೆಗೆ ಬಂದಿದ್ದ. ಟೆಂಟ್‍ಹೌಸ್ ನಡೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದ ಲಕ್ಷ್ಮೀಪುತ್ರ ಪ್ರೀತಿಯ ಸಹೋದರರಿಗೆ ಹಣಕಾಸಿನ ಅವಶ್ಯಕತೆ ಇದ್ದ ಕಾರಣ ಎಂಟು ಲಕ್ಷ ರೂಪಾಯಿ ಹಣ ನೀಡಿದ್ದನು. ಆದರೆ ಹಣ ವಾಪಾಸ್ ಕೇಳಿದಾಗ ಬಾಮೈದರು ಕಾಲಹರಣ ಮಾಡಿ ದಿನ ನೂಕುತ್ತಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್

    ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದ ಶಿವಕಾಂತ್ ಮತ್ತು ಪ್ರಶಾಂತ್ ಸೇರಿಕೊಂಡು ಬಾವನಿಗೆ ಚಟ್ಟ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ದಸರಾ ಹಬ್ಬದ ನೆಪದಲ್ಲಿ ಬನ್ನಿ ಕೊಡಲು ಮನೆಗೆ ಹೋಗಿ ಅಂದುಕೊಂಡಂತೆ ಬಾವನನ್ನು ಸಹೋದರಿಯ ಎದುರೇ ಕೊಚ್ಚಿ ಕೊಂದಿದ್ದಾರೆ. ಇದೀಗ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಕೂಟಿ, ಕಾರಿನ ಮಧ್ಯೆ ಭೀಕರ ಅಪಘಾತ – ಅಣ್ಣ, ತಂಗಿ ದಾರುಣ ಸಾವು

    ಸ್ಕೂಟಿ, ಕಾರಿನ ಮಧ್ಯೆ ಭೀಕರ ಅಪಘಾತ – ಅಣ್ಣ, ತಂಗಿ ದಾರುಣ ಸಾವು

    ಮಂಗಳೂರು: ಸ್ಕೂಟಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ (Accident) ಸಂಭವಿಸಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ಅಣ್ಣ ಹಾಗೂ ತಂಗಿ (Brother and Sister) ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ (ಜಿಲ್ಲೆ ಸುಳ್ಯ (Sulia) ತಾಲೂಕಿನ ಎಲಿಮಲೆ ಬಳಿ ನಡೆದಿದೆ.

    ಇಂದು ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಕಡಪಾಲ ಬಾಜಿನಡ್ಕ ಗ್ರಾಮದ ದೇವಿದಾಸ್ ಅವರ ಮಕ್ಕಳಾದ ನಿಶಾಂತ್ ಹಾಗೂ ಮೋಕ್ಷಾ ತೀವ್ರವಾಗಿ ಗಾಯಗೊಂಡಿದ್ದರು. ಅವರಿಬ್ಬರನ್ನು ಸ್ಥಳೀಯರು ತಕ್ಷಣವೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ನಿಶಾಂತ್ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕೆಯೂ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: NIA

    ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು ಎಂಬುದು ತಿಳಿದುಬಂದಿದೆ. ಘಟನೆ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ (Sulya Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಣ ಕೊಡದಿದ್ರೆ ಅಶ್ಲೀಲ ಫೋಟೋ ರಿಲೀಸ್ ಮಾಡೋ ಬೆದರಿಕೆ- ಮನನೊಂದ ಟೆಕ್ಕಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ತಂಗಿಯನ್ನು ಪ್ರೀತಿಸ್ತಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಕೊಲೆ ಮಾಡಿದ ಅಣ್ಣ

    ತಂಗಿಯನ್ನು ಪ್ರೀತಿಸ್ತಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಕೊಲೆ ಮಾಡಿದ ಅಣ್ಣ

    ಚಿಕ್ಕಬಳ್ಳಾಪುರ: ತಂಗಿಯನ್ನು (Sister) ಪ್ರೀತಿಸುತ್ತಿದ್ದ ಯುವಕನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಮಾರಕಾಸ್ತ್ರಗಳಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಹಾರೋಬಂಡೆ ಗ್ರಾಮದಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರ ಮೂಲದ ನಂದನ್ ಕೊಲೆಯಾದ ಯುವಕ. ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 44 ಹಾರೋಬಂಡೆ ಬಳಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ನಂದನ್ ಚಿಕ್ಕಬಳ್ಳಾಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತ ದರ್ಶನ್ ತಂಗಿಯನ್ನು ಪ್ರೀತಿಸುತ್ತಿದ್ದ. ಆದರೆ ದರ್ಶನ್ ತಂಗಿಯ ತಂಟೆಗೆ ಬರದಂತೆ ಹಲವು ಸಲ ನಂದನ್‌ಗೆ ವಾರ್ನಿಂಗ್ ಮಾಡಿದ್ದ. ಇದರ ಮಧ್ಯೆ ಇನ್ಸ್‌ಸ್ಟಾಗ್ರಾಂನಲ್ಲಿ ದರ್ಶನ್‌ನ ತಂಗಿಯ ಜೊತೆಯಲ್ಲಿರುವ ಫೋಟೋ ಹಂಚಿಕೊಂಡಿದ್ದಾನೆ. ನಂದನ್ ಈ ವರ್ತನೆಗೆ ದರ್ಶನ್ ಕೆರಳಿ ಕೆಂಡವಾಗಿದ್ದ. ಇದನ್ನೂ ಓದಿ: ಕೇಜ್ರಿವಾಲ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು

    ಪದೇ ಪದೇ ಹೇಳಿದರೂ ಬುದ್ಧಿ ಕಲಿಯದ ನಂದನ್ ಕೊಲೆಗೆ ದರ್ಶನ್ ಹಾಗೂ ಸ್ನೇಹಿತ ಆಶ್ರಯ್ ಸೇರಿ ಸ್ಕೆಚ್ ಹಾಕಿದ್ದಾರೆ. ಮದ್ಯ ಸೇವನೆ ನೆಪದಲ್ಲಿ ನಂದನ್ ಅನ್ನು ನಂಬಿಸಿದ ದರ್ಶನ್ ಹಾರೋಬಂಡೆಗೆ ಕರೆದುಕೊಂಡಿದ್ದಾನೆ. ನಂತರ ನಂದನ್‌ಗೆ ಕಂಠಪೂರ್ತಿ ಕುಡಿಸಿ ಬಳಿಕ ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ದರ್ಶನ ಹಾಗೂ ಆಶ್ರಯ್‌ನನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಸಾವು

    Live Tv
    [brid partner=56869869 player=32851 video=960834 autoplay=true]

  • ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ

    ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ

    ಬೀದರ್: ಅಪ್ರಾಪ್ತ ಸಹೋದರಿ(Sister) ಮೇಲೆ ಸಹೋದರನೇ(Brother) ಅತ್ಯಾಚಾರ ಮಾಡಿದ ಘಟನೆ ಬೀದರ್(Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಾಂಡಯೊಂದರಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿಯ ತಂದೆಗೆ ಇಬ್ಬರು ಪತ್ನಿಯರಿದ್ದು, ಹಿರಿಯ ಪತ್ನಿಯ ಮಗನಿಂದ ಕಿರಿಯ ಪತ್ನಿಯ(Wife) ಮಗಳ ಮೇಲೆ ಅತ್ಯಾಚಾರ ಮಾಡಲಾಗಿದೆ.

    ಮೊದಲನೇಯ ಪತ್ನಿ ಮಗ ಆಗಾಗ ಕೆಲಸಕ್ಕೆಂದು ತನ್ನ ಮನೆಗೆ ಸಹೋದರಿಯನ್ನು ಕರೆದುಕೊಂಡು ಹೋಗುತ್ತಿದ್ದನು. ಈ ವೇಳೆ ಸಹೋದರಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗುತ್ತಿದ್ದಂತೆ ಅತ್ಯಾಚಾರ ಮಾಡಿದ ಸಹೋದರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    POLICE JEEP

    ಪತಿ ಸತ್ತ ಬಳಿಕ ಬಸವಕಲ್ಯಾಣದ ಅದೇ ತಾಂಡದ ಪ್ರತ್ಯೇಕ ಮನೆಯಲ್ಲಿ ಎರಡನೇ ಪತ್ನಿ ತನ್ನ ಮಕ್ಕಳೊಂದಿಗೆ ವಾಸವಿದ್ದರು. ಘಟನೆ ಕುರಿತು ಯಾರಿಗೂ ಹೇಳದಂತೆ ನನ್ನ ಮಗಳಿಗೆ ಬೆದರಿಸಿದ್ದಾನೆ. ಇದಕ್ಕೆ ಇನ್ನಿಬ್ಬರ ಸಹಕಾರವು ಇದೆ ಎಂದು ತಾಯಿ ದೂರು ನೀಡಿದ್ದು, ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಪಕರಣ ದಾಖಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಭದ್ರತೆಯಲ್ಲಿ ಲೋಪ- ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ ಬಂಧನ

    Live Tv
    [brid partner=56869869 player=32851 video=960834 autoplay=true]

  • ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ಹೊರಟ್ಟಿದ್ದವನ ಜೀವ ತೆಗೆದ ಗಾಳಿಪಟ ದಾರ

    ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ಹೊರಟ್ಟಿದ್ದವನ ಜೀವ ತೆಗೆದ ಗಾಳಿಪಟ ದಾರ

    ನವದೆಹಲಿ: ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ತೆರಳುತ್ತಿದ್ದ ಬೈಕ್ ಸವಾರನ ಗಂಟಲನ್ನು ಗಾಜಿನ ಲೇಪಿತ ಗಾಳಿಪಟದ ದಾರ ಸೀಳಿದ್ದು, ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಇದೇ ರೀತಿ ಈ ಹಿಂದೆ ಹಲವಾರು ಅಪಘಾತಗಳಿಗೆ ಕಾರಣವಾಗಿದ್ದ ಚೈನೀಸ್ ಮಾಂಜಾ ಎಂದು ಕರೆಯಲಾಗುವ ಗಾಜಿನ ಲೇಪಿತ ಗಾಳಿಪಟದ ದಾರವನ್ನು ದೆಹಲಿಯಲ್ಲಿ 2016 ರಿಂದ ನಿಷೇಧಿಸಲಾಗಿತ್ತು. ಆದರೆ ಇದೀಗ ಎಲ್ಲೆಡೆ ವ್ಯಾಪಕವಾಗಿ ಈ ದಾರವನ್ನು ಬಳಸಲಾಗುತ್ತಿದ್ದು, ಈ ತಿಂಗಳಿನಲ್ಲಿ ದೆಹಲಿಯಲ್ಲಿ ಈ ರೀತಿಯ ಘಟನೆ ಎರಡನೇ ಬಾರಿಗೆ ಸಂಭವಿಸಿದೆ. ಇದನ್ನೂ ಓದಿ: ಅರೆಸ್ಟ್ ಮಾಡೋ ಭಯ – ಅಗ್ನಿಪಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಆತ್ಮಹತ್ಯೆ

    ಮೃತ ವ್ಯಕ್ತಿಯನ್ನು ವಿಪಿನ್ ಕುಮಾರ್ ಲೋನಿ ಎಂದು ಗುರುತಿಸಲಾಗಿದ್ದು, ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ತಮ್ಮ ಸಹೋದರಿ ಮನೆಗೆ ನಾಗ್ಲೋಯ್‍ನ ರಾಜಧಾನಿ ಪಾರ್ಕ್‍ನಿಂದ ತೆರಳುತ್ತಿದ್ದರು. ಪಾರ್ಕ್ ಮೇಲ್ಸೇತುವೆ ಬಳಿ ಪತ್ನಿಯನ್ನು ಹಿಂದೆ ಕೂರಿಸಿಕೊಂಡು ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಹರಿತವಾದ ದಾರ ಕುತ್ತಿಗೆಗೆ ತಗುಲಿ ಕ್ಷಣಾರ್ಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ನಡುವಿನ ಅಂದವನ್ನು ಹೆಚ್ಚಿಸುವ ವೆರೈಟಿ ಸೊಂಟದ ಚೈನ್‍ಗಳು

    ನಂತರ ಸ್ಥಳೀಯರ ಸಹಾಯದಿಂದ ವಿಪಿನ್ ಕುಮಾರ್ ಲೋನಿ ಪತ್ನಿ ಅವರನ್ನು ಸಿವಿಲ್ ಲೈನ್ಸ್‌ನಲ್ಲಿರುವ ಟ್ರಾಮಾ ಸೆಂಟರ್‌ಗೆ ಕರೆದೊಯ್ದರು. ಆದರೆ ವ್ಯಕ್ತಿ ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನಿ ಸಹೋದರಿಯಿಂದ ಮೋದಿಗೆ ಬಂತು ರಕ್ಷಾ ಬಂಧನ – 2024ರ ಚುನಾವಣೆಗೆ ಹಾರೈಕೆ

    ಪಾಕಿಸ್ತಾನಿ ಸಹೋದರಿಯಿಂದ ಮೋದಿಗೆ ಬಂತು ರಕ್ಷಾ ಬಂಧನ – 2024ರ ಚುನಾವಣೆಗೆ ಹಾರೈಕೆ

    ಇಸ್ಲಾಮಾಬಾದ್: ರಕ್ಷಾ ಬಂಧನದ ಶುಭ ಸಂದರ್ಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಅವರು ರಾಖಿ ಕಳುಹಿಸಿದ್ದಾರೆ. ಅಲ್ಲದೇ 2024 ರ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಮರ್ ಮೊಹ್ಸಿನ್ ಶೇಖ್, ಈ ಬಾರಿ ನನ್ನ ಸಹೋದರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಇದಕ್ಕಾಗಿ ನಾನು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಮೋದಿ ಈ ಬಾರಿ ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾನು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇನೆ. ಕಸೂತಿ ವಿನ್ಯಾಸದೊಂದಿಗೆ ರೇಷ್ಮೆಯ ರಿಬ್ಬನ್ ಬಳಸಿ ನಾನೇ ಈ ರಾಖಿಯನ್ನು ತಯಾರಿಸಿದ್ದೇನೆ. ಇದರೊಂದಿಗೆ ಪತ್ರವನ್ನೂ ಬರೆದಿದ್ದು, ಅವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದೇನೆ. 2024ರ ಚುನಾವಣೆಗೆ ಶುಭ ಹಾರೈಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: CWG 2022: ನಿಖತ್ ಜರೀನ್‌ಗೆ ಒಲಿದ ಚಿನ್ನ – ಬಾಕ್ಸಿಂಗ್‌ನಲ್ಲಿ ಭಾರತಕ್ಕಿಂದು ಹ್ಯಾಟ್ರಿಕ್ ಗೋಲ್ಡ್

    ನರೇಂದ್ರ ಮೋದಿ ಅವರು 2024ರ ಚುನಾವಣೆಯಲ್ಲೂ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ಮತ್ತೆ ಪ್ರಧಾನಿಯಾಗಲು ಅರ್ಹರು. ಆ ಸಾಮರ್ಥ್ಯವನ್ನೂ ಅವರು ಹೊಂದಿದ್ದು, ಪ್ರತಿ ಬಾರಿಯೂ ಅವರು ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಕಮರ್ ಮೋಹ್ಸಿನ್ ಶೇಖ್ ಅವರು ಕಳೆದ ವರ್ಷವೂ ರಕ್ಷಾ ಬಂಧನದ ನಿಮಿತ್ತ ಪ್ರಧಾನಿ ಮೋದಿ ಅವರಿಗೆ ರಾಖಿ ಹಾಗೂ ಪತ್ರವನ್ನು ಕಳುಹಿಸಿದ್ದರು. ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕೆ.ಎಲ್.ರಾಹುಲ್

    Live Tv
    [brid partner=56869869 player=32851 video=960834 autoplay=true]

  • ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    ನವದೆಹಲಿ: ರಕ್ಷಾ ಬಂಧನದ ದಿನ ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ನ್ನು ಉಡುಗೊರೆ ನೀಡಲು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಳ್ಳನೊಬ್ಬ ತನ್ನನ್ನು ದರೋಡೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದಾನೆ ಎಂದು ಸುರೇಂದ್ರ ಎಂಬವರು ದೂರು ಕೊಟ್ಟಿದ್ದರು. ತಪ್ಪಿಸಿಕೊಂಡ. ಆದರೆ ಈ ವೇಳೆ ಆತನ ಬಿದ್ದ ನನಗೆ ಸಿಕ್ತು ಎಂದು ಸುರೇಂದ್ರ ಅವರು ಸುಲ್ತಾನ್‌ಪುರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಮೀರ್‌ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಪೆನ್ಸಿಲ್ ಬೆಲೆ ಏರಿಕೆಯಿಂದ ನನಗೆ ಕಷ್ಟ ಆಗುತ್ತಿದೆ – ಮೋದಿಗೆ 6ರ ಬಾಲಕಿ ಪತ್ರ

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮೊಬೈಲ್ ಬಳಸಿದ್ದಾರೆ. ಆತನನ್ನು ರೋಹಿಣಿ ನಿವಾಸಿ 21 ವರ್ಷದ ತರುಣ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಆತನಿಂದ ಕದ್ದ ಬೈಕ್ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ವಿಜಯ್ ವಿಹಾರ್‌ನಿಂದ ದ್ವಿಚಕ್ರ ವಾಹನವನ್ನು ಕದ್ದಿದ್ದೇನೆ. ರಾಖಿ ಕಟ್ಟಿದ ಸಹೋದರಿಗೆ ಉಡುಗೊರೆ ನೀಡಲು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಕಳ್ಳತನ ಮಾಡುತ್ತಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು

    ಆರೋಪಿ ವಿಚಾರಣೆಯು ಆರು ಕಳ್ಳತನ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದೆ. ಆತ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆ ಬಿಟ್ಟು, ವ್ಯಸನಿಯಾಗಿದ್ದ. ಈತನ ವಿರುದ್ಧ 10 ಪೊಲೀಸ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಹೋದರಿ ಮೇಲೆ ಕಣ್ಣು ಹಾಕಿದಕ್ಕೆ ಕೊಚ್ಚಿ ಹಾಕಿ ವ್ಯಕ್ತಿ ಕೊಲೆ

    ಸಹೋದರಿ ಮೇಲೆ ಕಣ್ಣು ಹಾಕಿದಕ್ಕೆ ಕೊಚ್ಚಿ ಹಾಕಿ ವ್ಯಕ್ತಿ ಕೊಲೆ

    ಬೆಳಗಾವಿ: ಸಹೋದರಿ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಯನ್ನು ಸ್ನೇಹಿತರ ಜೊತೆಗೂಡಿ ಯುವಕನೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ನಗರದ ಮಜಗಾವಿಯಲ್ಲಿ ನಡೆದಿದೆ.

    ಜೂನ್ 30ರಂದು ಮಜಗಾವಿಯ ಆದಿನಾಥ ಭವನ ಬಳಿ ಈ ಘಟನೆ ನಡೆದಿದ್ದು, ಯಲ್ಲೇಶ್ ಕೋಲಕಾರ್(37) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಇದೀಗ ಪೊಲೀಸರು ಆರೋಪಿಗಳಾದ ಸಂದೀಪ್ ಕೋಲಕಾರ್ (32), ಸಂತೋಷ ರಾಜಂಗಳಿ (19), ರವಿ ಗುಳ್ಳೇದಕೊಪ್ಪ(25), ಪ್ರದೀಪ್ ಕೋಲ್ಹಾರ್(24), ಶಿವಕುಮಾರ್ ಮಾನೆ(25)ಯನ್ನು ಬಂಧಿಸಿದ್ದಾರೆ.  ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ ರ‍್ಯಾಂಬೋ ನಟಿಯ ನಯಾ ಫೋಟೋಸ್

    ಸಹೋದರಿ ಮೇಲೆ ಕಣ್ಣು ಹಾಕಿದ್ದ ಎಂಬ ಕಾರಣಕ್ಕೆ ಸ್ನೇಹಿತರ ಜೊತೆಗೂಡಿ ಹಂತಕ ಸಂದೀಪ ಕೋಲಕಾರ್, ಯಲ್ಲೇಶ್ ಅನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು ಆಟೋದಲ್ಲಿ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕೊಡ್ಲಿ, ತಲ್ವಾರ್, ಚಾಕು, ಕೋಯತಾ ಹಾಗೂ ಆಟೋ ಜಪ್ತಿಗೊಳಿಸಿದ್ದಾರೆ ಮತ್ತು ಈ ಘಟನೆ ಸಂಬಂಧ ಬೆಳಗಾವಿಯ ಉದ್ಯಮಭಾಗ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಕ್ಕಿದ್ದೆ, ನನಗೆ ಸಿಕ್ಕ ಜಯ : ರಮ್ಯಾ

    Live Tv

  • ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

    ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

    ಮುಂಬೈ: ಬೀದಿ ನಾಯಿಗಳ ದಾಳಿಯಿಂದಾಗಿ ಓರ್ವ ಪುಟ್ಟ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಟೋಲ್ ಪಟ್ಟಣದ ಧಂತೋಳಿ ಪ್ರದೇಶದಲ್ಲಿ ನಡೆದಿದೆ.

    ವಿರಾಜ್ ರಾಜು ಜಯವರ್ (05) ನಾಯಿ ದಾಳಿಗೊಳಗಾಗಿ ಮೃತಪಟ್ಟಿರುವ ಬಾಲಕ. ತನ್ನ ಸಹೋದರಿಯೊಂದಿಗೆ ವಾಕಿಂಗ್‍ಗೆ ತೆರಳಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ವೇಳೆ ಸಹೋದರಿ ನಾಯಿಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ನಾಯಿಗಳು ವಿರಾಜ್ ರಾಜು ಜಯವರ್ ಮೇಲೆ ದಾಳಿ ಮಾಡಿವೆ ಎಂದು ತಿಳಿಸಿದ್ದಾರೆ.

    ಘಟನೆ ಬಳಿಕ ಪೋಷಕರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಿಂದ ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ವಿರಾಜ್ ರಾಜ್ ಜಯವರ್ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಕಟೋಲ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.