Tag: sister

  • ತನಗೆ ಎರಡು ಹೆಣ್ಣು ಅಂತ, ತಂಗಿಯ ಗಂಡು ಮಗುವನ್ನೇ ಕೊಂದ ಅಕ್ಕ

    ತನಗೆ ಎರಡು ಹೆಣ್ಣು ಅಂತ, ತಂಗಿಯ ಗಂಡು ಮಗುವನ್ನೇ ಕೊಂದ ಅಕ್ಕ

    ಚಿಕ್ಕೋಡಿ: ತನಗೆ ಎರಡು ಹೆಣ್ಣು ಮಕ್ಕಳಿವೆ ಎಂಬ ಭಾವನೆಯಿಂದ ತನ್ನ ತಂಗಿಯ 2 ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದಲ್ಲಿ ನಡೆದಿದೆ.

    2 ವರ್ಷದ ಕಾರ್ತಿಕ್ ಅಲಾಸೆ ಕೊಲೆಯಾದ ಮಗು. ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಶ್ರೀ ಅಲಾಸೆಯು ತನ್ನ ತಂಗಿಯ ಮಗುವನ್ನು ನೀರು ತುಂಬಿದ್ದ ಬ್ಯಾರಲ್‍ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆದರೆ ನನ್ನ ತಂಗಿಗೆ ಗಂಡು ಮಗು ಹುಟ್ಟಿದೆ ಎನ್ನುವ ಸ್ವಾರ್ಥದಿಂದ ಏನೂ ಅರಿಯದ ಮಗುವನ್ನು ನಿರ್ದಾಕ್ಷೀಣ್ಯವಾಗಿ ಹತ್ಯೆ ಮಾಡಿದ್ದಾಳೆ.

    ಕೊಲೆಯ ಬಳಿಕ ಜಯಶ್ರೀಯು ಮನೆಯಲ್ಲಿದ್ದ ಹಣ ಹಾಗೂ ಒಡವೆ ಸಮೇತ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ ಸಹೋದರ!

    ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ ಸಹೋದರ!

    ಲಕ್ನೋ: ಯುವಕನೊರ್ವ ತನ್ನ ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಬಿಲಾರಿಯಲ್ಲಿ ನಡೆದಿದೆ.

    6 ವರ್ಷಗಳಿಂದ ಆಕೆ ತನ್ನ ಸಹೋದರಿ ಎಂಬುದು ತಿಳಿಯದೇ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತನ್ನ ಸಹೋದರಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯಿಂದ ಬೇಸರಗೊಂಡು ಮತ್ತೊಂದು ಯುವತಿಯ ಜೊತೆ ಮದುವೆಯಾಗಲು ಯುವಕ ನಿರ್ಧರಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಪೊಲೀಸ್ ಠಾಣೆಗೆ ಹೋಗಿ ಆ ಯುವಕನೊಂದಿಗೆ ಮದುವೆ ಮಾಡಿಸುವುದ್ದಾಗಿ ಹಠ ಹಿಡಿದ್ದಳು.

    ಯುವತಿ ಮಾತನ್ನು ಕೇಳಿ ಪೊಲೀಸರು ಯುವಕನ ಬಗ್ಗೆ ವಿಚಾರಿಸಿದ್ದಾಗ ಆ ಯುವತಿ ಯುವಕನಿಗೆ ಚಿಕ್ಕಮ್ಮನ ಮಗಳು ಆಗಬೇಕು ಎಂಬ ವಿಷಯ ಗೊತ್ತಾಗುತ್ತದೆ. ಇಬ್ಬರು 6 ವರ್ಷದಿಂದ ಪ್ರೀತಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದರು ಎಂಬ ವಿಷಯ ಕೂಡ ತಿಳಿದು ಪೊಲೀಸರು ದಂಗಾದರು. ಅಲ್ಲದೇ ಆ ಯುವಕ ಪ್ರೀತಿ ಹೆಸರಲ್ಲಿ ಯುವತಿ ಜೊತೆ ನಾಟಕವಾಡುತ್ತಿದ್ದನು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

    ಯುವಕ ತನ್ನ ಚಿಕ್ಕಮ್ಮನ ಮಗಳನ್ನು 6 ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಪದೇ ಪದೇ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ಈ ವಿಷಯ ತಿಳಿದ ಯುವಕನ ಕುಟುಂಬದವರು ಆತನ ಮದುವೆಯನ್ನು ಬೇರೆ ಯುವತಿಯ ಜೊತೆ ಮಾಡಲು ನಿರ್ಧರಿಸಿದ್ದರು. ತನ್ನ ಪ್ರಿಯಕರ ಬೇರೆ ಯುವತಿಯ ಜೊತೆ ಮದುವೆಯಾಗುತ್ತಿರುವುದ್ದನ್ನು ತಿಳಿದು ಯುವತಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾಳೆ.

    ಯುವಕ 3 ದಿನ ಹಿಂದೆಯೇ ತನ್ನ ಮನೆಯನ್ನು ಬಿಟ್ಟು ಓಡಿ ಹೋಗಿದ್ದನು. ಆಗ ಯುವತಿ ಆತನ ಮನೆ ತಲುಪಿದ್ದಾಳೆ. ಅಲ್ಲದೇ ಯುವತಿ ತನ್ನ ಪ್ರಿಯಕರ ಕಾಣೆಯಾಗಿದ್ದಾನೆ ಎಂದು ದೂರನ್ನು ಕೂಡ ನೀಡಿದ್ದಾಳೆ. ಯುವತಿಯ ದೂರು ದಾಖಲಿಸಿಕೊಂಡ ಪೊಲೀಸರು ಆ ಯುವಕನನ್ನು ಹುಡುಕಿದ್ದಾರೆ. ಬಳಿಕ ಇಬ್ಬರ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸುವುದಾಗಿ ಹೇಳಿ ಆ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿಕೊಟ್ಟರು.

    ಯುವತಿ ಮರುದಿನ ತನ್ನ ಮದುವೆಗೆಂದು ಕೋರ್ಟ್ ತಲುಪಿದ್ದಾಗ ಯುವಕ ಹಾಗೂ ಆತನ ಕುಟುಂಬದವರು ಬರಲಿಲ್ಲ. ನಂತರ ಯುವತಿ ಕೋಪಗೊಂಡು ಯುವಕನ ಮನೆ ತಲುಪಿದ್ದಾಗ ಆತನ ಮನೆಯಲ್ಲಿ ಮದುವೆಯ ಎಲ್ಲ ತಯಾರಿ ನಡೆದಿದ್ದು, ಯುವಕ ಬೇರೆ ಯುವತಿಯ ಜೊತೆ ಮದುವೆಯಾಗಲು ಸಿದ್ಧನಿದ್ದನು. ತಕ್ಷಣ ಯುವತಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

    ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ಯುವಕನ ಕುಟುಂಬದವರು ಆತನ ಮದುವೆಯನ್ನು ನಿಲ್ಲಿಸಿ ಮನೆಯಿಂದ ಓಡಿ ಹೋಗಲು ಸಹಾಯ ಮಾಡಿದ್ದಾರೆ. ಆ ಯುವಕನನ್ನು ಹುಡುಕಿ ಕೊಡುವುದಾಗಿ ಯುವತಿ ಪೊಲೀಸರ ಹತ್ತಿರ ಹಠ ಮಾಡುತ್ತಿದ್ದಾಳೆ. ತನ್ನ ಮದುವೆ ಆ ಯುವಕನ ಜೊತೆ ಆಗಲಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಾಗಿ ಯುವತಿ ಪೊಲೀಸರ ಹತ್ತಿರ ಹೇಳಿದ್ದಾಳೆ.

  • ದಾರಿ ಮಧ್ಯೆ ಸಚಿವರ ಕಾರು ತಡೆದು ದೂರು ಕೊಟ್ಟ ಸನ್ಯಾಸಿನಿ- ವಿಡಿಯೋ ವೈರಲ್

    ದಾರಿ ಮಧ್ಯೆ ಸಚಿವರ ಕಾರು ತಡೆದು ದೂರು ಕೊಟ್ಟ ಸನ್ಯಾಸಿನಿ- ವಿಡಿಯೋ ವೈರಲ್

    ತಿರುವನಂತಪುರಂ: ಕ್ಯಾಥೋಲಿಕ್ ಸನ್ಯಾಸಿನಿಯೊಬ್ಬರು ಕೇರಳದ ಅರಣ್ಯ ಸಚಿವ ಕೆ. ರಾಜುರವರ ಕಾರನ್ನು ದಾರಿಯ ಮಧ್ಯದಲ್ಲೇ ಅಡ್ಡ ನಿಲ್ಲಿಸಿ ದೂರು ನೀಡಿದ್ದಾರೆ.

    ಪಾಲಕ್ಕಾಡು ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆಂದು ಅರಣ್ಯ ಸಚಿವರಾದ ಕೆ. ರಾಜು ರವರು ಕಾರಿನಲ್ಲಿ ಹೋಗುತ್ತಿದ್ದರು. ಅವರೊಂದಿಗೆ ಹಲವು ಕಾರು ಮತ್ತು ಪೊಲೀಸ್ ವಾಹನಗಳು ತೆರಳುತಿತ್ತು. ಈ ವಾಹನಗಳ ಪೈಕಿ ಸಚಿವರ ಕಾರು ಬರುತ್ತಿದ್ದಂತೆ ಅಡ್ಡಗಟ್ಟಿದ್ದ ಸನ್ಯಾಸಿನಿ ದೂರು ನೀಡಿದ್ದಾರೆ.

    ಉತ್ತರ ಪಲಾಕ್ಕಾಡ್‍ನಲ್ಲಿರುವ ಕಾನ್ವೆಂಟ್ ಕ್ಯಾಂಪಸ್ ಆನೆಗಳ ದಾಳಿಯಿಂದ ನಾಶವಾಗಿದೆ ನೀವು ಕಾರಿನಿಂದ ಇಳಿದು ಬಂದು ನೋಡಬೇಕು. ಇವುಗಳ ದಾಳಿಯಿಂದ ನಮಗೆ ಬದುಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಏನಾದರೂ ಕ್ರಮಕೈಗೊಳ್ಳಬೇಕು ಎಂದು ಸಿಸ್ಟರ್ ಅರಣ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.

    ಈ ವೇಳೆ ಕಾರ್ಯಕ್ರಮದ ಉಸ್ತುವಾರಿಯನ್ನು ಹೊತ್ತ ವ್ಯಕ್ತಿಗಳು ಮತ್ತು ಪೊಲೀಸರು ಆಕೆಯನ್ನು ತಡೆದು ಕಾರ್ಯಕ್ರಮಕ್ಕೆ ಸಚಿವರು ಹಾಜರಾಗಬೇಕಿದೆ. ಬಳಿಕ ಸಮಸ್ಯೆ ಪರಿಹಾರ ನಡೆಸಲು ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿ ಆಕೆಯನ್ನು ಕಳುಹಿಸಿದ್ದಾರೆ. ಸದ್ಯ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.facebook.com/Attappady.in/videos/1992187084149072/

  • ಅಪ್ರಾಪ್ತ ಅಣ್ಣನಿಂದ್ಲೇ ತಂಗಿಯ ಮೇಲೆ ಅತ್ಯಾಚಾರ!

    ಅಪ್ರಾಪ್ತ ಅಣ್ಣನಿಂದ್ಲೇ ತಂಗಿಯ ಮೇಲೆ ಅತ್ಯಾಚಾರ!

    ನವದೆಹಲಿ: 8 ವರ್ಷದ ಬಾಲಕಿ ಮೇಲೆ ಆಕೆಯ ಅಣ್ಣನೇ ಅತ್ಯಾಚಾರವೆಸಗಿದ ಘಟನೆ ದೆಹಲಿಯ ಆದರ್ಶ್ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆಕೆಯ ಅಣ್ಣ ಅಪ್ರಾಪ್ತನಾಗಿದ್ದಾನೆ.

    ಸೋಮವಾರ ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದುದರಿಂದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವ ಮಾಹಿತಿಯೊಂದು ಪೊಲೀಸರಿಗೆ ಬಂದಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕ ತನ್ನ ಸಹೋದರಿಯ ಮೇಲೆ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ಕೌನ್ಸಿಲರ್ ಬಳಿ ಹೇಳಿದ್ದಾಳೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬಾಲಕಿಯ ಪೋಷಕರು ಮನೆಗೆ ಹಿಂದುರುಗಿದಾಗ ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಸದ್ಯ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಿದ್ದಾರೆ.

    ಬಾಲಕಿ ದೇಹದ ಮೇಲೆ ಹಲವು ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಹೇಳಿದ್ದಾರೆ.

    ದೇಶದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಸಾಕಷ್ಟು ಅಪರಾಧಗಳು ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಸದ್ಯ ಬಾಲಕಿ ಚೇತರಿಕೆ ಕಾಣುವರೆಗೂ ನಮ್ಮ ಆಯೋಗ ಎಲ್ಲ ಸಹಾಯ ಮಾಡುತ್ತದೆ ಎಂದು ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.

    ದೆಹಲಿ ಪೊಲೀಸರ ಡೇಟಾ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿದಿನ 2ಕ್ಕೂ ಹೆಚ್ಚು ಚೈಲ್ಡ್ ರೇಪ್ ಪ್ರಕರಣಗಳು ದಾಖಲಾಗುತ್ತಿದೆ. ಏಪ್ರಿಲ್ 30ರ ವರೆಗೂ 282 ಮಕ್ಕಳ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ ವರ್ಷ ಸುಮಾರು 278 ಮಕ್ಕಳ ಅತ್ಯಾಚಾರ ಪ್ರಕರಣ ದಾಖಲಾಗಿದೆ.

  • ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

    ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!

    ಪುಣೆ: ವ್ಯಕ್ತಿಯೊಬ್ಬ 18 ವರ್ಷದ ಯುವಕನನ್ನು ಚಲಿಸುತ್ತಿರುವ ಬಸ್ಸಿನಲ್ಲೇ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ಘಟನೆ ಖೇದ್ ತೆಹ್ ಸಿಲ್ ಜಿಲ್ಲೆಯ ದವಾಡಿ ಗ್ರಾಮದ ಸಮೀಪ ನಡೆದಿದೆ. ಮೃತ ಯುವಕ ತನ್ನ ಸಹೋದರಿಗೆ ಕಿರುಕುಳ ನೀಡುತ್ತಾನೆ ಎಂದು ಆರೋಪಿ ವಿರುದ್ಧ ದೂರು ದಾಖಲಿಸಿದ್ದನು. ಇದರಿಂದ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆರೋಪಿ ಹೊಂಚು ಹಾಕುತ್ತಿದ್ದನು. ಹೀಗಾಗಿ ಆರೋಪಿಯಿದ್ದ ಬಸ್ಸಿಗೆ ಹತ್ತಿದ್ದ ಯುವಕನನ್ನು ಕಂಡ ಆರೋಪಿ ಸಿಟ್ಟಿನಿಂದ ಚಲಿಸುತ್ತಿದ್ದಾಗಲೇ ಹರಿತವಾದ ಆಯುಧಗಳಿಂದ ಯುವಕ ಮೇಲೆ ದಾಳಿ ಮಾಡಿದ್ದಾನೆ.

    ಆರೋಪಿಯು ಮೃತ ಯುವಕನ ಸಹೋದರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂಬ ಆರೋಪವಿದೆ. ಈ ಕುರಿತು ಯುವತಿಯ ಕುಟುಂಬ ಇತ್ತೀಚೆಗೆ ಸಂಬಂಧಿಕನೊಬ್ಬನ ಮೇಲೆ ಶಂಕಿಸಿ ಆತನ ವಿರುದ್ಧ ಕೇಸ್ ದಾಖಲಿಸಿತ್ತು. ದೂರಿನಲ್ಲಿ ಯುವತಿಯ ಫೋಟೋದೊಂದಿಗೆ ಅಶ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆಂದು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಕ್ರೈಂ ಬ್ರಾಂಚ್ ಗೆ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇದೀಗ ಆರೋಪಿ ಸೇಡು ತೀರಿಸಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮೃತ ಯುವಕ ದಾವಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿದ್ದಾನೆ. ಈ ಬಸ್ಸಿನಲ್ಲಿ ಶಂಕಿತನು ಕೂಡ ಇದ್ದನು. ಆದ್ರೆ ಯುವಕ ಮಾತ್ರ ಇದನ್ನು ಗಮನಿಸಿರಲಿಲ್ಲ. ಬಸ್ ಚಲಿಸಲು ಆರಂಭಿಸಿತ್ತು. ಕೂಡಲೇ ಹಿಂದಿದ್ದ ಶಂಕಿತ ಸಂಬಂಧಿಕ ನೇರವಾಗಿ ಯುವಕನ ಬಳಿ ಬಂದು ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ.

    ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಕಿರುಚಿದ್ದಾರೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ನಿಲುಗಡೆಯಾಗುತ್ತಿದ್ದಂತೆಯೇ ಆರೋಪಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

  • 14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ, ಈಗ ಗರ್ಭಿಣಿ!

    14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ, ಈಗ ಗರ್ಭಿಣಿ!

    ಮುಂಬೈ: ಅಶ್ಲೀಲ ವಿಡಿಯೋ ವಿಕ್ಷೀಸುವ ಚಟ ಹೊಂದಿದ್ದ 14 ವರ್ಷದ ಬಾಲಕ ತನ್ನ ಅಪ್ತಾಪ್ತ ವಯಸ್ಸಿನ ಅಕ್ಕನ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮುಂಬೈ ನ ಕಮೊಥೆ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಬಾಲಕ ನಿತ್ಯ ತನ್ನ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದ. ಹೀಗಾಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು 16 ವರ್ಷದ ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ: ಹೊಟ್ಟೆ ನೋವಿನ ಕಾರಣಕ್ಕಾಗಿ ಜೂನ್ 6 ರಂದು ಸಂತ್ರಸ್ತೆಯನ್ನು ಪೋಷಕರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು 2 ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳಾ ಪೊಲೀಸ್ ಅಧಿಕಾರಿಗಳು ಬಾಲಕಿಯನ್ನು ಪ್ರಶ್ನಿಸಿದ ವೇಳೆ ಕಳೆದ ಎರಡು ತಿಂಗಳುಗಳಿಂದ ಸಹೋದರ ತನ್ನ ಮೇಲೆ ಎಸಗುತ್ತಿದ್ದ ಕೃತ್ಯದ ಬಗ್ಗೆ ಮಾಹಿತಿ ತಿಳಿಸಿದ್ದಾಳೆ.

    ಸದ್ಯ ಸಂತ್ರಸ್ತೆಯ ಹೇಳಿಕೆ ಮೇರೆಗೆ ಪೊಲೀಸರು ಬಾಲಕನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.

  • ಪ್ಯಾಂಟ್ ಧರಿಸದ್ದಕ್ಕೆ ಬಾಲಿವುಡ್ ನಟಿಯ ತಂಗಿಯನ್ನು ಹೊರಹಾಕಿದ ರೆಸ್ಟೋರೆಂಟ್ ಸಿಬ್ಬಂದಿ- ವಿಡಿಯೋ ವೈರಲ್

    ಪ್ಯಾಂಟ್ ಧರಿಸದ್ದಕ್ಕೆ ಬಾಲಿವುಡ್ ನಟಿಯ ತಂಗಿಯನ್ನು ಹೊರಹಾಕಿದ ರೆಸ್ಟೋರೆಂಟ್ ಸಿಬ್ಬಂದಿ- ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್ ತಂಗಿ ಸುರೀಲಿ ಗೌತಮ್ ಪ್ಯಾಂಟ್ ಧರಿಸಲಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಆಕೆಯನ್ನು ಹೊರಗೆ ಹಾಕಿದ ಘಟನೆ ಸರ್ಬಿಯಾದಲ್ಲಿ ನಡೆದಿದೆ.

    ಸುರೀಲಿ ತನ್ನ ಸಹೋದರಿ ಯಾಮಿ ಜೊತೆ ಸರ್ಬಿಯಾಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಗೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಸುರೀಲಿ ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ.

    ನಟಿ ಯಾಮಿ ಗೌತಮ್ ತನ್ನ ಸಹೋದರಿಯನ್ನು ಯಾಕೆ ರೆಸ್ಟೋರೆಂಟ್‍ನಿಂದ ಹೊರ ಹಾಕಿದ್ದಾರೆ ಎಂದು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.

    ಯಾಮಿ ತನ್ನ ಸಹೋದರಿಯನ್ನು, ಮೊದಲೇ ಮಾತನಾಡಿಕೊಂಡಂತೆ ನೀನು ರೆಸ್ಟೋರೆಂಟ್‍ನಲ್ಲಿ ಏಕೆ ಇಲ್ಲ. ನೀನು ಈ ಬಾರಿನಲ್ಲಿ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ. ಆಗ ಸುರೀಲಿ ನಾನು ಪ್ಯಾಂಟ್ ಧರಿಸಿಲ್ಲ ಎಂದು ಉತ್ತರಿಸಿದ್ದಾರೆ. ನೀನು ಪ್ಯಾಂಟ್ ಧರಿಸಿದ ಕಾರಣ ರೆಸ್ಟೋರೆಂಟ್ ಸಿಬ್ಬಂದಿ ನಿನ್ನನ್ನು ಹೊರಹಾಕಿದ್ದಾರಾ” ಎಂದು ಯಾಮಿ ಹಾಸ್ಯ ಮಾಡಿದ್ದಾರೆ.

    ಸದ್ಯ ಯಾಮಿ ಗೌತಮ್ ಸಹೋದರಿ ಸುರೀಲಿ ಗೌತಮ್ ‘ಬ್ಯಾಟಲ್ ಆಫ್ ಸಾರಾಗರಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ರಾಜ್‍ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ.

    ನನ್ನ ತಂಗಿಯ ಮೊದಲ ಸಿನಿಮಾಕ್ಕಾಗಿ ನಾನು ತುಂಬಾ ಉತ್ಸಾಹದಲ್ಲಿದ್ದೇನೆ. ಆಕೆಯ ಮೊದಲ ಸಿನಿಮಾವನ್ನು ನಿರ್ದೇಶಕ ರಾಜ್‍ಕುಮಾರ್ ಸಂತೋಷಿ ನಿರ್ದೇಶಿಸುತ್ತಿದ್ದಾರೆ ಎಂದು ಯಾಮಿ ಗೌತಮ್ ಹೇಳಿಕೊಂಡಿದ್ದರು.

  • ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ತಂಗಿಯ ಮೇಲೆ ಅಣ್ಣನಿಂದಲೇ ಹಲ್ಲೆ!

    ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ತಂಗಿಯ ಮೇಲೆ ಅಣ್ಣನಿಂದಲೇ ಹಲ್ಲೆ!

    ಹಾಸನ: ಆಸ್ತಿಗಾಗಿ ಸ್ವಂತ ಅಣ್ಣನೇ ತಂಗಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನಡೆದಿದೆ.

    ಲತಾ(38) ಗಂಭೀರವಾಗಿ ಗಾಯಗೊಂಡಿರುವ ತಂಗಿ. ಲತಾ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇದೀಗ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಅಣ್ಣ ಚಂದ್ರಶೇಖರ್ ಪರಾರಿಯಾಗಿದ್ದಾನೆ.

    ಲತಾ ಅದೇ ಗ್ರಾಮ ಪ್ರೇಮಾನಂದ ಜೊತೆ ಲವ್ ಮ್ಯಾರೇಜ್ ಆಗಿದ್ದರು. ತವರು ಮನೆಯೊಂದಿಗೆ ಸಂಪರ್ಕ ಇರಲಿಲ್ಲ. ಆದರೆ ಆಸ್ತಿಯಲ್ಲಿ ಪಾಲು ಬಯಸಿ ಇತ್ತೀಚೆಗೆ ಕೋರ್ಟ್ ಮೆಟ್ಟಿಲೇರಿದ್ದರು. ಚಂದ್ರಶೇಖರ್ ಗೆ ಕೋರ್ಟ್ ನಿಂದ ನೋಟೀಸ್ ಜಾರಿಯಾಗಿತ್ತು.

    ಇದರಿಂದ ಆಕ್ರೋಶಗೊಂಡ ಚಂದ್ರಶೇಖರ್ ಮೊದಲು ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ಮುಖ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಇದೀಗ ಪರಾರಿಯಾಗಿದ್ದಾನೆ. ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • 24 ವರ್ಷಗಳ ನಂತ್ರ ಅಕ್ಕನೊಂದಿಗೆ ನಟಿಸಿದ ಮಾಧುರಿ!

    24 ವರ್ಷಗಳ ನಂತ್ರ ಅಕ್ಕನೊಂದಿಗೆ ನಟಿಸಿದ ಮಾಧುರಿ!

    ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಬಹಳ ಸಮಯದ ನಂತರ ‘ಬಕೆಟ್ ಲಿಸ್ಟ್’ ಎಂಬ ಮರಾಠಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 24 ವರ್ಷಗಳ ನಂತರ ಮಾಧುರಿ ಈ ಚಿತ್ರದಲ್ಲಿ ತನ್ನ ಅಕ್ಕನ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವುದು ವಿಶೇಷ.

    1994 ರಲ್ಲಿ ಬಿಡುಗಡೆಯಾದ ಹಮ್ ಆಪ್ಕೆ ಹೇ ಕೋನ್ ಚಿತ್ರದಲ್ಲಿ ಮಾಧುರಿಗೆ ಸಹೋದರಿಯಾಗಿ ರೇಣುಕಾ ಶಹಾಣೆ ನಟಿಸಿದ್ದರು. ಈಗ 24 ವರ್ಷಗಳ ಬಳಿಕ ಈ ಸಹೋದರಿಯರು ಮತ್ತೊಮ್ಮೆ ಜೊತೆಯಾಗಿ ನಟಿಸಿದ್ದಾರೆ. ಮರಾಠಿಯ ಬಕೆಟ್ ಲಿಸ್ಟ್ ಚಿತ್ರದಲ್ಲಿ ಅಕ್ಕನ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ಮಾಧುರಿಗೆ ಬಹಳ ಖುಷಿ ನೀಡಿದೆ.

    ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ರೇಣುಕಾ ಅವರನ್ನು ಅಪ್ರೋಚ್ ಮಾಡಿದ್ದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಆಗ ನಾನು ರೇಣುಕಾ ಈ ಪಾತ್ರಕ್ಕೆ ಪರ್ಫೆಕ್ಟ್ ಎಂದು ಚಿತ್ರತಂಡಕ್ಕೆ ಹೇಳಿದೆ. ನಂತರ ನಾನೇ ಸ್ವತಃ ರೇಣುಕಾಗೆ ಕರೆ ಮಾಡಿ ಚಿತ್ರದ ಪಾತ್ರದ ಬಗ್ಗೆ ಹೇಳಿದೆ. ಆಗ ರೇಣುಕಾ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡರು ಎಂದು ಮಾಧುರಿ ತಿಳಿಸಿದ್ದಾರೆ.

    ಹಮ್ ಆಪ್ಕೆ ಹೇ ಕೋನ್ ಚಿತ್ರದ ಚಿತ್ರೀಕರಣದಿಂದ ನಾವಿಬ್ಬರು ಆತ್ಮೀಯವಾಗಿದ್ದೇವೆ. ಚಿತ್ರದಲ್ಲಿ ನಾವಿಬ್ಬರು ಸಹೋದರಿಯರ ಪಾತ್ರವನ್ನು ನಿರ್ವಹಿಸಿದ್ದೇವು. ಆದರೆ ನಿಜ ಜೀವನದಲ್ಲೂ ನಾವು ಒಬ್ಬರಿಗೊಬ್ಬರು ಸಹೋದರಿಯರಂತೆ ಇದ್ದೇವೆ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.

    ಬಕೆಟ್ ಲಿಸ್ಟ್ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರವನ್ನು ತೇಜಸ್ಸ್ ಪ್ರಭಾ ವಿಜಯ್ ದೇವಸ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರ ಮೇ 25ರಂದು ಬಿಡುಗಡೆ ಆಗಲಿದೆ.

  • ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    ರಾಯ್‍ಪುರ: ವರನ ಸೋದರಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬುಧವಾರ ಛತ್ತೀಸಘಡ ರಾಜ್ಯದ ಪೋಧಿ ಗ್ರಾಮದಲ್ಲಿ ನಡೆದಿದೆ.

    ಘಟನೆ ಸಂಬಂಧ ವರನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಲ್ಲಿ ವರನ ಸ್ನೇಹಿತ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಸೇರಿಸಿ ಕುಡಿಸಿದ್ದಾನೆ. ಎಚ್ಚರ ತಪ್ಪಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

    ಕೊಲೆಯ ಬಳಿಕ ಬಂದು ಎಲ್ಲರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾನೆ. ಕೆಲವು ಸಮಯದ ಬಳಿಕ ಬಾಲಕಿ ಕಾಣೆಯಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. ಈ ವೇಳೆ ಅಲ್ಲಿಯೇ ಇದ್ದ ಆರೋಪಿ ತನಗೆ ಏನು ಗೊತ್ತಿಲ್ಲ ಎಂಬಂತೆ ನಟಿಸಿತ್ತಾ ನಿಂತಿದ್ದ ಅಂತಾ ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಮದುವೆಗೆ ಬಂದ ಎಲ್ಲರೂ ಹೊರಡುವ ತಯಾರಿಯಲ್ಲಿದ್ರು. ಈ ವೇಳೆ ವರನ ಗೆಳೆಯ ಬಾಲಕಿಗೆ ತಂಪು ಪಾನೀಯ ನೀಡಿ ಕರೆದುಕೊಂಡು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಮಂಟಪದಿಂದ 1.5 ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ ಬಳಿಕ ಸಿಮೆಂಟ್ ಇಟ್ಟಿಗೆಗಳಿಂದ ಬಾಲಕಿಯ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ನಗ್ನ ಸ್ಥಿತಿಯಲ್ಲಿದ್ದ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಮದುವೆ ಮನೆ ಸೇರಿಕೊಂಡಿದ್ದಾನೆ.

    ಬಾಲಕಿ ಕಾಣೆಯಾದ ಬಳಿಕ ಪೋಷಕರು ಹುಡುಕಾಟ ಆರಂಭಿಸಿದಾಗ ಕೊನೆಯದಾಗಿ ವರನ ಗೆಳೆಯನೊಂದಿಗೆ ಹೊರ ಹೋಗಿದ್ದು ತಿಳಿದು ಬಂದಿದೆ. ವರನ ಗೆಳೆಯನನ್ನು ಕರೆದು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.