Tag: sister

  • ಮಗ್ಳ ಮದ್ವೆ ನಿಲ್ಲಿಸಲು ಅಣ್ಣನನ್ನೆ ಕೊಲೆ ಮಾಡಿಸಿದ ತಂಗಿ ಅರೆಸ್ಟ್

    ಮಗ್ಳ ಮದ್ವೆ ನಿಲ್ಲಿಸಲು ಅಣ್ಣನನ್ನೆ ಕೊಲೆ ಮಾಡಿಸಿದ ತಂಗಿ ಅರೆಸ್ಟ್

    ಬೆಂಗಳೂರು: ಮಗಳ ಮದುವೆ ನಿಲ್ಲಿಸಲು ಅಣ್ಣನನ್ನೆ ಕೊಲೆ ಮಾಡಿಸಿದ ತಂಗಿಯನ್ನು ಸೇರಿ ನಾಲ್ವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

    ರಾಜಶೇಖರ್ ಕೊಲೆಯಾದ ವ್ಯಕ್ತಿ. ರಾಜಶೇಖರ್ ಇದೇ 22ರಂದು ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಕೊಲೆಯಾಗಿದ್ದನು. ರಾಜಶೇಖರ್ ಸಹೋದರಿಯಾದ ಗೌರಮ್ಮ ಸುಪಾರಿ ಕೊಟ್ಟು ತನ್ನ ಅಣ್ಣನನ್ನೇ ಕೊಲೆ ಮಾಡಿಸಿದ್ದಾಳೆ.

    ರಾಜಶೇಖರ್ ತನ್ನ ತಂಗಿ ಗೌರಮ್ಮ ಮಗಳಿಗೆ ಮದುವೆ ಮಾಡಲು ಮುಂದಾಗಿದ್ದನು. ಆದರೆ ಇದು ಗೌರಮ್ಮಳಿಗೆ ಇಷ್ಟವಿರಲಿಲ್ಲ. ಈ ಮದುವೆಯನ್ನು ತಡೆಯುವ ಸಲುವಾಗಿ ಗೌರಮ್ಮ ತನ್ನ ಅಣ್ಣ ರಾಜಶೇಖರ್ ಕೊಲೆಗೆ ಮುಮ್ತಾಜ್, ಮುನ್ನ, ಆರ್ಜು, ಸಾಕೀಬ್ ಎಂಬವರಿಗೆ ಸುಪಾರಿ ಕೊಟ್ಟಿದ್ದಳು.

    ಗೌರಮ್ಮ ತನ್ನ ಅಣ್ಣ ಮಗಳಿಗೆ ನೋಡಿದ್ದ ವರನ ಮೇಲೆ ಸಂಶಯಗೊಂಡಿದ್ದಳು. ವರನ ಮೇಲಿನ ಅನುಮಾನದಿಂದ ಮದುವೆ ನಿಲ್ಲಿಸಲು ಪ್ಲಾನ್ ಮಾಡಿದ್ದಳು. ಹಾಗಾಗಿ 3 ಲಕ್ಷ ರೂ. ಸುಪಾರಿ ಕೊಟ್ಟು ರಾಜಶೇಖರ್‍ನನ್ನು ಕೊಲೆ ಮಾಡಿಸಿದ್ದಳು.

    ಗೌರಮ್ಮ ಮಗಳ ಮದುವೆಗೆ ಕೇವಲ ಎರಡು ದಿನವಷ್ಟೆ ಬಾಕಿಯಿತ್ತು. ಈ ವೇಳೆ ಗೌರಮ್ಮ ತನ್ನ ಅಣ್ಣನ ಕೊಲೆ ಮಾಡಿಸಿ ಮದುವೆ ನಿಲ್ಲಿಸಿದ್ದಾಳೆ. ಸದ್ಯ ಕೆಂಗೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

    ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

    ಚಂಡಿಗಢ್: ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ಕರ್ನಾಟಕದ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣಾದ ರೋಹ್ಟಕ್‍ನಲ್ಲಿ ನಡೆದಿದೆ.

    ಓಂಕಾರ್ (30) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಓಂಕಾರ್ ಮೂಲತಃ ಧಾರವಾಡದವರಾಗಿದ್ದು, ಹರಿಯಾಣಾದಲ್ಲಿ ಎಂಡಿ ಕೋರ್ಸ್ ಮಾಡುತ್ತಿದ್ದರು. ಸಹೋದರಿ ಮದುವೆಗೆ ರಜೆ ನೀಡಲಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೋಹ್ಟಕ್ ಪೊಲೀಸ್ ಠಾಣೆಯ ಎಸ್‍ಎಚ್‍ಓ ಕೈಲಾಶ್ ಚಂದರ್ ಹೇಳಿದ್ದಾರೆ.

    ತಂಡದ ಮುಖ್ಯಸ್ಥೆಯ ಕಿರುಕುಳ ತಾಳಲಾರದೇ ಓಂಕಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಂಕಾರ್ ತನ್ನ ಸಾವಿನ ಬಗ್ಗೆ ಯಾವುದೇ ಡೆತ್‍ನೋಟ್ ಬರೆದಿಲ್ಲ. ಆದರೆ ತಂಡದ ಮುಖ್ಯಸ್ಥ ಓಂಕಾರ್ ಗೆ ಕಿರುಕುಳ ನೀಡುತ್ತಿದ್ದರು ಎಂದು ಆತನ ಸಹದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಓಂಕಾರ್ ಸಹೋದರಿಯ ಮದುವೆ ಇತ್ತು. ಆದರೆ ಸಹೋದರಿಯ ಮದುವೆಗೆ ಹೋಗಲು ತಂಡದ ಮುಖ್ಯಸ್ಥೆ ಓಂಕಾರ್ ನಿಗೆ ಅನುಮತಿ ನೀಡಲಿಲ್ಲ. ಹಾಗಾಗಿ ಆತ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಸ್‍ಎಚ್‍ಓ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಕೇಸ್‍ಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ಈ ಬಗ್ಗೆ ಇನ್ನೂ ವಿಚಾತಣೆ ನಡೆಯುತ್ತಿದೆ ಎಂದು ಕೈಲಾಶ್ ತಿಳಿಸಿದ್ದಾರೆ. ಓಂಕಾರ್ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಿ ಎಂದು ಸಹದ್ಯೋಗಿಗಳು ಆಗ್ರಹಿಸಿದ್ದಾರೆ.

  • ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಶಾರೂಕ್ ಖಾನ್ ಇನ್‍ಸ್ಟಾಗ್ರಾಂ ಫ್ಯಾನ್ ಪೇಜ್‍ಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾರೂಕ್ ಬ್ಲಾಕ್ ಸೂಟ್ ಧರಿಸಿ ಮದುವೆಯಲ್ಲಿ ಭಾಗವಹಿಸಿದ್ದಾರೆ. ಶಾರೂಖ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾರೂಕ್ ಅಭಿಮಾನಿಗಳು ಈ ವಿಡಿಯೋ ನೋಡಿ ಸಂತಸಪಡುತ್ತಿದ್ದಾರೆ. ಈ ವಿಡಿಯೋ ನೋಡಿ ಕೆಲವರು ನಿಮಗೆ ತುಂಬಾ ದೊಡ್ಡ ಹೃದಯ. ನೀವು ನನಗೆ ಸ್ಫೂರ್ತಿ ಎಂದು ಕಮೆಂಟ್ ಮಾಡುವ ಮೂಲಕ ಶಾರೂಕ್ ಸರಳತೆಯನ್ನು ಹೊಗಳಿದ್ದಾರೆ.

    ಶಾರೂಕ್ ಅಭಿಮಾನಿಗಳು ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ಕಮೆಂಟ್‍ಗಳು ಬರುತ್ತಿತ್ತು. ಈ ವಿಡಿಯೋಗೆ ಇದುವರೆಗೂ 31 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

    ಶಾರೂಕ್ ಖಾನ್ ಕೊನೆಯದಾಗಿ ‘ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ಜಡೇಜಾ ತಂದೆ, ಸಹೋದರಿ ಕಾಂಗ್ರೆಸ್ ಸೇರ್ಪಡೆ – ಪತ್ನಿ ಬಿಜೆಪಿಯಲ್ಲಿ

    ಜಡೇಜಾ ತಂದೆ, ಸಹೋದರಿ ಕಾಂಗ್ರೆಸ್ ಸೇರ್ಪಡೆ – ಪತ್ನಿ ಬಿಜೆಪಿಯಲ್ಲಿ

    ಗಾಂಧಿನಗರ: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

    ಜಡೆಜಾ ಅವರ ತಂದೆ ಅನಿರುದ್ಧ ಸಿನ್ಹಾ, ಹಾಗೂ ಸಹೋದರಿ ನೈನಬಾ ಗುಜರಾತ್‍ನ ಜಾಮ್‍ನಗರ ಜಿಲ್ಲೆಯ ಕಲವಾಡ್ ನಗರದಲ್ಲಿ ನಡೆದ ಒಂದು ರ‍್ಯಾಲಿ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

    ಕೆಲವು ದಿನಗಳ ಹಿಂದೆ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ರಿವಾಬಾ ಜಡೇಜಾ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಿವಾಬಾ ಜಡೇಜಾ, ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸ್ಫೂರ್ತಿ. ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನನ್ನ ಸೇವೆ ಸಲ್ಲಿಸಲು ಬಿಜೆಪಿ ಸೇರಿದ್ದರಿಂದ ನನಗೆ ಅವಕಾಶ ದೊರಕಿದೆ ಅಂತ ನಾನು ನಂಬಿದ್ದೇನೆ ಎಂದಿದ್ದರು.

    ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಡೇಜಾ ಹಾಗೂ ಅವರ ಪತ್ನಿ ರಿವಾಬಾ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿದ್ದರು. ಈ ವೇಳೆ ನರೇಂದ್ರ ಮೋದಿ ಜಡೇಜಾ ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

  • ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

    ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

    ಲಂಡನ್: ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ 22ರ ಮಹಿಳೆಯೊಬ್ಬರು ತಮ್ಮ ಕಿರಿಯ ಸಹೋದರ-ಸಹೋದರಿಯನ್ನು ದತ್ತು ಪಡೆಯುವ ಮೂಲಕ ರಾತ್ರೋರಾತ್ರಿ ಏಳು ಮಕ್ಕಳ ತಾಯಿಯಾಗಿದ್ದಾರೆ.

    ಶ್ಯಾನ್ನೋನ್ ಎಲ್ಲಿಸ್ 2 ಮಕ್ಕಳ ತಾಯಿ. ಇವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಎಲ್ಲಿಸ್ ಅವರ 39 ವರ್ಷದ ತಾಯಿ ಶೆಲ್ಲಿ ಮೃತಪಟ್ಟಿದ್ದಾರೆ. ನಂತರ ಎಲ್ಲಿಸ್ ತಮ್ಮ ಐದು ಕಿರಿಯ ಸಹೋದರ ಮತ್ತು ಸಹೋದರಿಯರನ್ನು ದತ್ತು ತೆಗೆದುಕೊಂಡಿದ್ದಾರೆ. ಹೀಗಾಗಿ ಎಲ್ಲಿಸ್ ತಮ್ಮಿಬ್ಬರು ಮಕ್ಕಳು ಸೇರಿದಂತೆ ಈಗ ಏಳು ಮಕ್ಕಳ ತಾಯಿಯಾಗಿದ್ದಾರೆ.

    ವಿಶ್ವ ತಾಯಿಯಂದಿರ ದಿನ ಎಲ್ಲಿಸ್ ಅವರಿಗೆ ಅವರ ಮಕ್ಕಳು ಕೈಯಿಂದ ತಯಾರಿಸಿದ್ದ ಕಾರ್ಡುಗಳು, ಚಾಕ್ಲೇಟ್‍ಗಳು ಮತ್ತು ಹೂವುಗಳನ್ನು ನೀಡಿದರು. ಅಷ್ಟೇ ಅಲ್ಲದೇ ಪಾರ್ಕಿನ ಮರವೊಂದರ ಬಳಿ ಹೋಗಿ ತಮ್ಮ ತಾಯಿ ಶೆಲ್ಲಿ ಅವರಿಗೆ ಕುಟುಂಬದವರು ಒಟ್ಟಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಎಲ್ಲಿಸ್ ತಾಯಿ ಶೆಲ್ಲಿ ಬದುಕ್ಕಿದ್ದಾಗ ತಮ್ಮ ಎಲ್ಲ ಮಕ್ಕಳನ್ನು ಕರೆದುಕೊಂಡು ಪಾರ್ಕಿನಲ್ಲಿದ್ದ ಮರದ ಬಳಿ ಹೋಗುತ್ತಿದ್ದರು. ಅಲ್ಲಿ ಅವರು ಕುಟುಂಬದವರ ಜೊತೆ ಸಂತೋಷದಿಂದ ಇರುತ್ತಿದ್ದರು. ಹೀಗಾಗಿ ಅವರ ತಾಯಿಗೆ ಪ್ರಿಯವಾದ ಅದೇ ಮರದ ಬಳಿಯೇ ಅಸ್ಥಿ ವಿಸರ್ಜನೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ಮರದ ಬಳಿ ಮಕ್ಕಳು ಹೋಗಿ ಅಂತಿಮ ನಮನ ಸಲ್ಲಿಸಿದ್ದಾರೆ.

    ಎಲ್ಲಿಸ್ ತಾಯಿ ಶೆಲ್ಲಿ ಮೃತಪಟ್ಟ ನಂತರ ಅವರ ಸಹೋದರ-ಸಹೋದರಿಯರನ್ನು ದೂರ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಆಗ ಎಲ್ಲಿಸ್ ತಮ್ಮ ಪತಿ ಕೀರನ್ ಫರ್ಗ್ಯೂಸನ್ ಬಳಿ ಅವರನ್ನು ದತ್ತು ಪಡೆದುಕೊಳ್ಳವ ಬಗ್ಗೆ ಹೇಳಿದ್ದಾರೆ. ಆಗ ಪತಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಅವರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

    “ನಮ್ಮ ತಾಯಿ ಬಯಸಿದ್ದಂತೆ ನಮ್ಮ ಕುಟುಂಬ ತುಂಬಾ ದೊಡ್ಡದಾಗಿತ್ತು. ಜೊತೆಗೆ ಯಾವಾಗಲೂ ನಾವು ಸಂತಸದಿಂದ ಇದ್ದೆವು. ನಮಗೆ ತಂದೆ ಇಲ್ಲದಿದ್ದರು ನಮ್ಮ ತಾಯಿ ನಾವು ಕೇಳಿದ ಎಲ್ಲವನ್ನು ಕೊಡಿಸುತ್ತಿದ್ದರು. ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಎಲ್ಲಿಸ್ ಹೇಳಿದ್ದಾರೆ.

    ಜನವರಿ 2018ರಲ್ಲಿ ನಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಹಾಟ್ರ್ಲೆಪೂಲ್ ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ವೈದ್ಯರು ನಮ್ಮ ತಾಯಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರು ಬದುಕುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದರು. ಆಗ ನಮ್ಮ ತಾಯಿ ನನ್ನ ಕಡೆ ದುಃಖದಿಂದ ನೋಡಿದರು. ಈ ವೇಳೆ ನಾನು ಅಮ್ಮನಿಗೆ ನನ್ನ ಸಹೋದರ ಮತ್ತು ಸಹೋದರಿಯರನ್ನು ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿದ್ದೇನೆ. ಹೀಗಾಗಿ ನಾನು ಎಲ್ಲರಿಗೂ ಅಮ್ಮನಾಗಬೇಕೆಂದು ಬಯಸಿದ್ದೇನೆ ಎಂದು ಎಲ್ಲಿಸ್ ತಿಳಿಸಿದ್ದಾರೆ.

    2018 ಜನವರಿ 25 ರಂದು ಶೆಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಎಲ್ಲಿಸ್ ತಾನು ಕೊಟ್ಟ ಮಾತಿನಂತೆ ತನ್ನ ಕಿರಿಯ ಸಹೋದರ ಸಹೋದರಿಯರಿಗೆ ಕಾನೂನಿನ ಪ್ರಕಾರ ತಾಯಿಯಾಗಿದ್ದಾರೆ.

  • ಸಹೋದರಿಯನ್ನು ಚುಡಾಯಿಸ್ತಿದ್ದ ಯುವಕನ ಕೊಲೆ

    ಸಹೋದರಿಯನ್ನು ಚುಡಾಯಿಸ್ತಿದ್ದ ಯುವಕನ ಕೊಲೆ

    ಧಾರವಾಡ: ಸಹೋದರಿಗೆ ಚುಡಾಯಿಸುತ್ತಿದ್ದ ಯುವಕನನ್ನು ಯುವತಿಯ ಸಹೋದರ ಹಾಗೂ ಆತನ ಗೆಳೆಯ ಸೇರಿ ಕೊಲೆ ಮಾಡಿ ಜೈಲು ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಕೊಲೆ ಪ್ರಕರಣದ ಹಿಂದೆ ಒಂದು ಪ್ರೇಮ ಕಹಾನಿ ಇದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

    ಧಾರವಾಡ ಜಿಲ್ಲೆಯ ಅರವಟಗಿ ಗ್ರಾಮದ ಸಂಜಯ್ ಗಿರಿಯಾಲ್ ಎಂಬ ಯುವಕ ಕಳೆದ ಮಾರ್ಚ್ 21 ರಂದು ಕುಂಬಾರಕೊಪ್ಪ ಗ್ರಾಮದ ಅರಣ್ಯದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸಂಜಯ್ ಕೊಲೆಯಾದ ಬಗ್ಗೆ ಸಹೋದರ ಮಂಜುನಾಥ್ ಅಳ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

    ಈ ದೂರಿನ ಜಾಡನ್ನು ಹಿಡಿದು ಬೆನ್ನತ್ತಿದ ಪೊಲೀಸರು, ಸಂಜಯ್ ಪ್ರೀತಿ ಮಾಡುತ್ತಿದ್ದ ಅರವಟಗಿ ಗ್ರಾಮದ ಯುವತಿಯ ಸಹೋದರ ವಿಜಯ್‍ಕುಮಾರ್ ಹಾಗೂ ಆತನ ಸ್ನೇಹಿತ ಶ್ರೀಧರ್ ನನ್ನು ಬಂಧಿಸಿದ್ದರು. ಇವರಿಬ್ಬರ ಬಂಧನದ ನಂತರ ಇಬ್ಬರ ಬಾಯಿ ಬಿಡಿಸಿದ ಪೊಲೀಸರಿಗೆ, ಈ ಕೊಲೆ ಅವರೇ ಮಾಡಿದ್ದಾರೆ ಎಂದು ಬೆಳಕಿಗೆ ಬಂದಿದೆ.

    ಕೊಲೆಗೆ ಕಾರಣ ಏನು?
    ಕೊಲೆಯಾದ ಸಂಜಯ್, ಯುವತಿಯನ್ನು ಪ್ರತಿದಿನ ಕಾಡುತ್ತಿದ್ದನು. ಯುವತಿ ಧಾರವಾಡ ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಸಂಜಯ್ ಕೆ.ಇ ಬೋರ್ಡ್ ಕಾಲೇಜಿನಲ್ಲಿ ಓದುತ್ತಿದ್ದ. ಸಂಜಯ್ ಪ್ರತಿ ದಿನ ಹೋದಲ್ಲಿ, ಬಂದಲ್ಲಿ ಯುವತಿಗೆ ಕಿಚಾಯಿಸುತಿದ್ದನು. ಇದನ್ನು ಅರಿತ ಗ್ರಾಮದ ಜನರು ಸಂಜಯ್‍ನಿಗೆ ಬುದ್ಧಿ ಹೇಳಿದರೂ ಆತ ಸರಿ ಹೋಗಿರಲಿಲ್ಲ. ಹೀಗಾಗಿ ನೋಡಿ ನೋಡಿ ಸುಸ್ತಾದ ಯುವತಿಯ ಸಹೋದರ ಹಾಗೂ ಆತನ ಗೆಳೆಯ ಸಂಜಯ್‍ನನ್ನು ಅರಣ್ಯಕ್ಕೆ ಕರೆದೊಯ್ದು ಟವೆಲ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು.

    ಮಾರ್ಚ್ 19ರಂದು ಸಂಜಯ್ ಕೊಲೆ ಮಾಡಿದ್ದ ಯುವತಿಯ ಸಹೋದರ ಹಾಗೂ ಆತನ ಗೆಳೆಯ, ಯಾರಿಗೂ ಗೊತ್ತಿಲ್ಲದಂತೆಯೇ ಗ್ರಾಮದಲ್ಲಿ ಬಂದು ಸುಮ್ಮನಿದ್ದರು. ಆದರೆ ಮಾರ್ಚ್ 21 ರಂದು ಸಂಜಯ್‍ನ ಶವ ಅರಣ್ಯದಲ್ಲಿ ಬಿದ್ದಿದೆ ಎಂದು ಅಲ್ಲಿ ಕಟ್ಟಿಗೆ ತರಲು ಹೋದ ಮಹಿಳೆಯರಿಂದ ಗೊತ್ತಾಗಿತ್ತು.

    ಈ ಪ್ರಕರಣದಲ್ಲಿ ಹಲವು ರೀತಿಯ ತನಿಖೆ ನಡೆಯಬೇಕಿದೆ. ಸಂಜಯ್ ಹಾಗೂ ಯುವತಿ ಪ್ರೇಮಿಗಳಾಗಿದ್ರು ಎಂದು ತಿಳಿದುಬಂದಿದ್ದು, ಇಬ್ಬರ ಪ್ರೇಮ ಸಲ್ಲಾಪದ ವಿಡಿಯೋ ಮಾಡಿದ್ದ ಸಂಜಯ್, ಯುವತಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದನು ಎನ್ನಲಾಗಿದ್ದು, ಈ ವಿಷಯ ತಿಳಿದ ಯುವತಿ ಸಹೋದರ ಸಂಜಯ್ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಪೊಲೀಸರು ಈ ಬಗ್ಗೆ ಕೂಡ ತನಿಖೆ ನಡೆಸಿದ್ದು, ಯುವತಿ ಸಹೋದರ ವಿಜಯ್‍ಕುಮಾರ್ ಹಾಗೂ ಆತನ ಸ್ನೇಹಿತ ಶ್ರೀಧರ್‍ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಒಳಗಿನ ವಿಷಯಗಳು ಹೊರ ಬರಬೇಕಿವೆ. ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ.

  • ಗರ್ಭಿಣಿ ಸಹೋದರಿಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಾವನನ್ನೇ ಕೊಂದ

    ಗರ್ಭಿಣಿ ಸಹೋದರಿಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಾವನನ್ನೇ ಕೊಂದ

    ಮುಂಬೈ: ಗರ್ಭಿಣಿ ಸಹೋದರಿ ಮೇಲೆ ಹಲ್ಲೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಬಾವನನ್ನೇ ಕೊಲೆ ಮಾಡಿ ಬಂಧನಕ್ಕೊಳಗಾದ ಘಟನೆ ಗುರುವಾರ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.

    ರಾಮು ಬಲಿರಾಮ್ ಶಿನ್ವಾರ್(45) ಬಂಧಿತ ಆರೋಪಿ. ವಾಸೈನಲ್ಲಿ ರಾಮುವಿನ ಸಹೋದರಿ ಹಾಗೂ ಆಕೆಯ ಪತಿ ಗುರುನಾಥ್ ಚಾತಿಯಾ ಬೋಯಿರ್ ವಾಸಿಸುತ್ತಿದ್ದರು. ಗುರುನಾಥ್ ತನ್ನ ಗರ್ಭಿಣಿ ಸಹೋದರಿ ಮೇಲೆ ಹಲ್ಲೆ ಮಾಡುತ್ತಿದ್ದ ನೋಡಿದ ರಾಮು ಆತನನ್ನು ತಡೆಯಲು ಹೋಗಿದ್ದಾನೆ.

    ರಾಮು ತನ್ನ ಬಾವನನ್ನು ತಡೆಯಲು ಹೋದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ರಾಮು ಕೋಪಗೊಂಡು ಸಿಮೆಂಟ್ ಬ್ಲಾಕ್‍ನಿಂದ ತನ್ನ ಬಾವನ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗುರುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಸದ್ಯ ಪೊಲೀಸರು ರಾಮುನನ್ನು ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

    ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

    ಲಕ್ನೋ: ಅಡುಗೆ ಮಾಡುವುದನ್ನು ತಡ ಮಾಡಿದ್ದಕ್ಕೆ ಅತ್ತೆಯೊಬ್ಬಳು ಸೊಸೆಯ ಬೆರಳುಗಳನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಹರಗೋವಿಂದ್ ನಗರದಲ್ಲಿ ಶನಿವಾರ ನಡೆದಿದ್ದು, ಆರೋಪಿ 65 ವರ್ಷದ ಸುಶೀಲಾ ದೇವಿ ಅತ್ತೆ, ಪ್ರೀತಿ ಬೆರಳುಗಳನ್ನು ಕತ್ತರಿಸಿದ್ದಾಳೆ. ಈ ಘಟನೆಯ ನಂತರ ಆರೋಪಿ ಸುಶೀಲಾ ದೇವಿ ನಾಪತ್ತೆಯಾಗಿದ್ದಾಳೆ.

    ಸೊಸೆ ಪ್ರೀತಿ ತನ್ನ ಮಗುವಿಗೆ ಹಾಲು ಕುಡಿಸುತ್ತಿದ್ದರು. ಇದೇ ವೇಳೆ ಅತ್ತೆ ಬಂದು ಅಡುಗೆ ಮಾಡುವಂತೆ ಸೊಸೆಗೆ ಹೇಳಿದ್ದಾಳೆ. ಆಗ ಸೊಸೆ ಮಗುವಿಗೆ ಹಾಲು ಕುಡಿಸಿದ ನಂತರ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಅತ್ತೆ ಮಾನವೀಯತೆ ಇಲ್ಲದೇ ಚಾಕು ತೆಗೆದುಕೊಂಡು ಸೊಸೆಯ ಬಲಗೈ ಬೆರಳುಗಳನ್ನು ಕತ್ತರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಉಪೇಂದ್ರ ಸಿಂಗ್ ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಆದರೆ ಆರೋಪಿ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಸದ್ಯಕ್ಕೆ ಪೊಲೀಸರು ಆರೋಪಿ ಅತ್ತೆ ವಿರುದ್ಧ ಐಪಿಸಿ 323 ಮತ್ತು 504 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ನೋವಿನಂದ ನರಳುತ್ತಿದ್ದ ಸೊಸೆ ಪ್ರೀತಿಯನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹನುಮಂತ ಅವರು ಎಲ್ಲರ ಮನೆ ಮಾತಾಗಿದ್ದಾರೆ. ಈ ವಾರದ ಸರಿಗಮಪ ಕಾರ್ಯಕ್ರಮದಲ್ಲಿ ಫ್ಯಾಮಿಲಿ ರೌಂಡ್ ನಡೆಯಿತು. ಅದರಲ್ಲಿ ಹನುಮಂತ ಅವರಿಗೆ ಸಾಥ್ ನೀಡಲು ಅವರ ಸಹೋದರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಅತಿಥಿಯಿಂದ ಹನುಮಂತ ಅವರ ತಂಗಿಗೆ ಅಚ್ಚರಿಯ ಉಡುಗೊರೆ ದೊರೆತಿದೆ.

    ಸರಿಗಮಪ ಫ್ಯಾಮಿಲಿ ರೌಂಡ್‍ನಲ್ಲಿ ಹನುಮಂತ ಅವರು ತಮ್ಮ ಸಹೋದರಿ ಕಮಲ ಜೊತೆ ಜನಪದ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಹಳ್ಳಿಯ ಸೊಗಡನ್ನು ಹಾಗೂ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಗುವ ಕಷ್ಟಗಳ ಬಗ್ಗೆ ಬಣ್ಣಿಸಲಾಗಿತ್ತು. ಹನುಮಂತ ಹಾಗೂ ಕಮಲ ಈ ಹಾಡನ್ನು ಹಾಡಿದ ಬಳಿಕ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರು ಇಬ್ಬರನ್ನು ಮಾತನಾಡಿಸಿದ್ದಾರೆ. ಈ ವೇಳೆ ಕಮಲ ಅವರಿಗೆ ನಿಮ್ಮ ಅಣ್ಣ ಊರಿಗೆ ಬಂದಾಗ ನಿಮಗೆ ಏನು ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರಿಗಮಪ ಕಾರ್ಯಕ್ರಮದಲ್ಲಿ ದಾಖಲೆ ಬರೆದ ಹನುಮಂತ!

    ನನ್ನ ಅಣ್ಣ ಊರಿಗೆ ಬಂದಾಗ ನನಗೆ 100 ರೂ. ನೀಡಿದ್ದನು ಎಂದು ಕಮಲ ನಿರೂಪಕಿ ಅನುಶ್ರೀ ಅವರಿಗೆ ಉತ್ತರಿಸಿದ್ದರು. ಆಗ ಅನುಶ್ರೀ, ನೀವು ಆ 100 ರೂ.ಯನ್ನು ಏನು ಮಾಡಿದ್ದೀರಿ ಎಂದು ಕೇಳಿದ್ದಾಗ ನಾನು ಪುಸ್ತಕಗಳನ್ನು ಖರೀದಿಸಿದೆ ಎಂದು ಕಮಲ ಹೇಳಿದ್ದಾರೆ. ಕಮಲ ಅವರ ಮಾತನ್ನು ಕೇಳಿ ಅನುಶ್ರೀ ಹಾಗೂ ಅಲ್ಲಿದ್ದ ತೀರ್ಪುಗಾರರು ಖುಷಿಪಟ್ಟರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಹನುಮಂತ ಹಾಗೂ ಕಮಲ ಅವರ ಹಾಡು ಕೇಳಿ 50,000 ರೂ. ಉಡುಗೊರೆ ನೀಡುವುದಾಗಿ ಘೋಷಿಸಿದರು.  ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೆ ಹನುಮಂತನ ಗಾನಾಭಿಷೇಕ..!

    ಕಮಲ ಅವರು ಬಿಕಾಂ ಓದುತ್ತಿದ್ದಾರೆ. ಅವರ ಹಾಡನ್ನು ಮೆಚ್ಚಿಕೊಂಡ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಕಮಲ ಅವರ ವಿದ್ಯಾಭ್ಯಾಸಕ್ಕೆ 50,000 ರೂ. ನೀಡುವುದಾಗಿ ಹೇಳಿದರು. ಅಲ್ಲದೇ ಕಮಲ ಬಿಕಾಂ ಮುಗಿಸಿದ್ದಾಗ ಅವರು ತಮ್ಮ ಕಂಪನಿಯಲ್ಲೇ ಕೆಲಸ ಕೊಡಿಸುವುದಾಗಿ ಘೋಷಿಸಿಯೇ ಬಿಟ್ಟರು. ಈ ಮಾತನ್ನು ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಎಲ್ಲ ಸದಸ್ಯರು ಎದ್ದು ನಿಂತು ಅವರಿಗೆ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.

    ಇದಾದ ಬಳಿಕ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು, “ಹನುಮಂತ ಈ ಕಾರ್ಯಕ್ರಮದ ಫಿನಾಲೆಗೆ ಪ್ರವೇಶಿದರೆ, ನಿಮ್ಮ ಇಡೀ ಕುಟುಂಬ ಫಿನಾಲೆ ಕಾರ್ಯಕ್ರಮಕ್ಕೆ ಬರಬೇಕು” ಎಂದು ಹೇಳಿದ್ದರು. ಆಗ ಕಮಲ ನಾವು ಬರುತ್ತೇವೆ ಎಂದು ಹೇಳಿದ್ದಾರೆ. ಹನುಮಂತ ಹಾಗೂ ಕಮಲ ಹಾಡಿನ ಜನಪದ ಹಾಡಿಗೆ ಜ್ಯೂರಿ ಸದಸ್ಯರು ಫಿದಾ ಆಗಿದ್ದರು. ಇವರಿಬ್ಬರ ಹಾಡಿಗೆ ಮಹಾಗುರುಗಳು ಹಂಸಲೇಖಾ ಅವರು ಗೋಲ್ಡನ್ ಬಝರ್ ಕೂಡ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ಕನನ್ನು ಬೈದಿದಕ್ಕೆ ಬಾವನ ಕೈ ಬೆರಳು ಕಟ್ ಮಾಡಿದ ಬಾಮೈದ

    ಅಕ್ಕನನ್ನು ಬೈದಿದಕ್ಕೆ ಬಾವನ ಕೈ ಬೆರಳು ಕಟ್ ಮಾಡಿದ ಬಾಮೈದ

    ಬೆಂಗಳೂರು: ಅಕ್ಕನನ್ನು ಬೈದಿದಕ್ಕೆ ಬಾಮೈದನೊಬ್ಬ ತನ್ನ ಬಾವನ ಕೈ ಬೆರಳು ಕಟ್ ಮಾಡಿದ ಘಟನೆ ಕಳೆದ 28ರ ಸಂಜೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಮ್ಜದ್ ಬಾವನ ಕೈ ಬೆರಳು ಕಟ್ ಮಾಡಿದ ವ್ಯಕ್ತಿ. ತನ್ನ ಸಹೋದರಿಯನ್ನು ನಿಂದಿಸಿದಕ್ಕೆ ಅಮ್ಜದ್ ತನ್ನ ಬಾವ ಶಫೀ ಎಂಬವರ ಬಲಗೈ ಬೆರಳುಗಳನ್ನ ಕಟ್ ಮಾಡಿದ್ದಾನೆ. ಶಫೀ ವೃತ್ತಿಯಲ್ಲಿ ಕಾರ್ಪೇಂಟರ್ ಆಗಿದ್ದು, ಕಳೆದೊಂದು ವಾರದಿಂದ ಹೊಟ್ಟೆ ನೋವಿನಿಂದ ಕೆಲಸಕ್ಕೆ ತೆರಳದೇ ಮನೆಯಲ್ಲಿದ್ದನು.

    ಶಫೀ ಅನಾರೋಗ್ಯಕ್ಕೆ ತುತ್ತಾಗಿ ವಾರ ಕಳೆದರು ಆತನ ಪತ್ನಿ ನೀಲೂಫರ್ ತನ್ನ ಪತಿಯ ಆರೋಗ್ಯವನ್ನು ವಿಚಾರಿಸಲಿಲ್ಲ. ಈ ವೇಳೆ ನನಗೆ ಆರೋಗ್ಯ ಸರಿಯಿಲ್ಲ. ನೀನು ಒಮ್ಮೆಯಾದರು ಕೇಳಿದ್ದೀಯಾ ಎಂದು ಶಫೀ ತನ್ನ ಪತ್ನಿಯನ್ನು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ಶಫೀ ಹಾಗೂ ನೀಲೂಫರ್ ಮಧ್ಯೆ ಜಗಳವಾಗಿತ್ತು.

    ಜಗಳವಾದ ಬಳಿಕ ಸಂಜೆ ನೀಲೂಫರ್ ಸಹೋದರ ಅಶೂ ತನ್ನ ಮಾವಂದಿರ ಜೊತೆ ಬಂದು ಹಲ್ಲೆ ಮಾಡಿಸಿದ್ದಾರೆ. ಆರೋಪಿಗಳು ಚಾಕುವಿನಿಂದ ಶಫೀಯ ಎದೆ ಭಾಗಕ್ಕೆ ಚುಚ್ಚಿ, ಬಲಗೈನ ಕೈ ಬೆರಳುಗಳನ್ನ ಕಟ್ ಮಾಡಿದ್ದಾರೆ. ಅಶೂ, ಅಮ್ಜದ್ ಹಾಗೂ ಮಜರ್ ಜೊತೆ ಬಂದು ಹಲ್ಲೆ ನಡೆಸಿದ್ದಾನೆ. ಆರೋಪಿಗಳಾದ ಅಮ್ಜದ್, ಮಜರ್, ಗಾಯಾಳು ಶಫೀ ಪತ್ನಿ ನೀಲೂಫರ್ ನ ಮಾವಂದಿರು ಆಗಿದ್ದಾರೆ.

    ಗಾಯಾಳು ಶಫೀಯನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv