Tag: sister

  • 2 ತಿಂಗ್ಳಿನಿಂದ ತಾಯಿ, ಸಹೋದರಿ ಶವದ ಜೊತೆ ಯುವತಿ ವಾಸ

    2 ತಿಂಗ್ಳಿನಿಂದ ತಾಯಿ, ಸಹೋದರಿ ಶವದ ಜೊತೆ ಯುವತಿ ವಾಸ

    ಲಕ್ನೋ: ಯುವತಿಯೊಬ್ಬಳು 2 ತಿಂಗಳಿನಿಂದ ತನ್ನ ತಾಯಿ ಹಾಗೂ ಸಹೋದರಿಯ ಮೃತದೇಹಗಳ ಜೊತೆ ವಾಸಿಸುತ್ತಿದ್ದ ಪ್ರಕರಣವೊಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿಗೆ ಬಂದಿದೆ.

    ದೀಪಾ ಮೃತದೇಹಗಳ ಜೊತೆ ವಾಸಿಸುತ್ತಿದ್ದ ಯುವತಿ. ದೀಪಾ ಆದರ್ಶ್ ನಗರದ ಕಾಲೋನಿಯೊಂದರಲ್ಲಿ ತನ್ನ ತಾಯಿ ಹಾಗೂ ಸಹೋದರಿಯ ಮೃತದೇಹದ ಜೊತೆ ವಾಸಿಸುತ್ತಿದ್ದಳು. ದೀಪಾ ಮನೆಯಿಂದ ದುರ್ವಾಸನೆ ಬರುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ದೀಪಾಳ ತಾಯಿ ಪುಷ್ಪ ಶ್ರೀವಾತ್ಸವ್ ಹಾಗೂ ಆಕೆಯ ಸಹೋದರಿ ವಿಭಾ ಮೃತದೇಹ ಪತ್ತೆಯಾಗಿದೆ.

    ಏನಿದು ಘಟನೆ?
    ದೀಪಾ ತಂದೆ ವಿಜೇಂದ್ರ ಶ್ರೀವಾತ್ಸವ್ ಅವರು 1990ರಲ್ಲಿ ಮೃತಪಟ್ಟಿದ್ದರು. ಆಗಿನಿಂದಲೂ ತಾಯಿ ಹಾಗೂ ಮೂವರು ಸಹೋದರಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮೂವರು ಸಹೋದರಿಯರಲ್ಲಿ ರೂಪಾಲಿ ಎಂಬವರು ಮೃತಪಟ್ಟಿದ್ದರು. ಇದಾದ ಬಳಿಕ ಪುಷ್ಪ ಹಾಗೂ ಆಕೆಯ ಇಬ್ಬರು ಪುತ್ರಿಯರಾದ ದೀಪಾ ಹಾಗೂ ವಿಭಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಪುಷ್ಪ ಹಾಗೂ ಆಕೆಯ ಮಕ್ಕಳು ಅಕ್ಕಪಕ್ಕದ ಮನೆಯವರ ಜೊತೆ ಮಾತನಾಡುವುದನ್ನು ನಿಲ್ಲಿಸಿ ಬಿಟ್ಟಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಮೂಳೆಗಳು ಕಾಣಿಸುವ ಮಟ್ಟಿಗೆ ಮೃತದೇಹಗಳು ಕೊಳೆತು ಹೋಗಿತ್ತು. ಅಂದರೆ ಅವರಿಬ್ಬರು ಸುಮಾರು 2 ತಿಂಗಳ ಹಿಂದೆ ಮೃತಪಟ್ಟಿದ್ದರು. ತಾಯಿ-ಮಗಳ ಸಾವಿನ ಕಾರಣ ತಿಳಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಅಲ್ಲದೆ ದೀಪಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಯ ಸ್ಥಿತಿಯನ್ನು ನೋಡಿ ಹುಚ್ಚಾಸ್ಪತ್ರೆ ಅಥವಾ ಆಶ್ರಯ ಕೇಂದ್ರದಲ್ಲಿ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

  • ಬಾಗ್ದಾದಿ ಹತ್ಯೆ ಬೆನ್ನಲ್ಲೇ ಸಹೋದರಿ ಟರ್ಕಿ ಸೇನೆಯ ವಶಕ್ಕೆ

    ಬಾಗ್ದಾದಿ ಹತ್ಯೆ ಬೆನ್ನಲ್ಲೇ ಸಹೋದರಿ ಟರ್ಕಿ ಸೇನೆಯ ವಶಕ್ಕೆ

    ವಾಷಿಂಗ್ಟನ್: ಇತ್ತೀಚೆಗಷ್ಟೇ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ(ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಸೇನೆ ಹತ್ಯೆ ಮಾಡಿದ್ದು ಇದೀಗ ಈತನ ಸಹೋದರಿಯನ್ನು ಸೋಮವಾರ ಟರ್ಕಿ ಸೇನೆ ವಶಕ್ಕೆ ಪಡೆದಿದೆ.

    ಸೇನೆಯ ವಶವಾದಾಕೆಯನ್ನು ರಶ್ಮಿಯಾ ಅವಾದ್(65) ಎಂದು ಗುರುತಿಸಲಾಗಿದೆ. ಈಕೆಯನ್ನು ಉತ್ತರ ಸಿರಿಯಾದ ಅಜಾಝ್ ಪಟ್ಟಣದ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಈಕೆಯ ಪತಿ ಹಾಗೂ ಸೊಸೆಯನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಮಾಡುತ್ತಿದೆ ಎಂಬ ಹೆಗ್ಗಳಿಕೆಗೆ ಟಿರ್ಕಿ ದೇಶ ಪಾತ್ರವಾಗಿದೆ ಎಂದು ಟರ್ಕಿಯ ಸಂವಹನಕಾರ ಫಹ್ರೆಟಿನ್ ಅಲ್ತುನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಇಸಿಸ್ ಉಗ್ರ ಸಂಘಟನೆಗೆ ಸೇರಿದ ಮಹತ್ವದ ದಾಖಲೆಗಳ ಮಾಹಿತಿ ಆಕೆಯ ಬಳಿ ಸಿಗಬಹುದು. ಅಲ್ಲದೆ ಆಕೆ ಕೂಡ ಉಗ್ರ ಸಂಘಟನೆಯೊAದಿಗೆ ಸಕ್ರಿಯಳಾಗಿದ್ದಳು ಎಂದು ಸೇನೆಯ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

    48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೇಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದನು. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‌ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದನು. ಇದರ ಜೊತೆಗೆ ಹಲವರ ಶಿರಚ್ಛೇದನ ಕೂಡ ಮಾಡಿದ್ದನು. ಇದನ್ನೂ ಓದಿ:ಬಾಗ್ದಾದಿ ಹತ್ಯೆಯಲ್ಲಿ ಪಾತ್ರ ವಹಿಸಿದ್ದ ಶ್ವಾನದ ವಿಶೇಷತೆ ಏನು? ಕಾರ್ಯಾಚರಣೆಗೆ ಈ ನಾಯಿಯನ್ನೇ ಬಳಸುತ್ತಾರೆ ಯಾಕೆ?

    ಆದರೆ ಇತ್ತೀಚೆಗೆ ಅಮೆರಿಕ ಸೇನಾ ದಾಳಿಗೆ ಹೆದರಿ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಳೆದ ಭಾನುವಾರ ಸುದ್ದಿಯಾಗಿತ್ತು. ಆದರೆ ಅಮೆರಿಕ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿದ ಕಾರಣ ಸುದ್ದಿ ಖಚಿತವಾಗಿರಲಿಲ್ಲ. ಆದರೆ ಈ ವಿಚಾರದ ಬಗ್ಗೆ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್, ಪ್ರಪಂಚವನ್ನು ಬೆಚ್ಚಿ ಬೀಳಿಸಿದ್ದ ಉಗ್ರ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ. ಬಾಗ್ದಾದಿ ಮತ್ತೆ ಯಾವುದೇ ಮಹಿಳೆ, ಮಕ್ಕಳನ್ನು ಕೊಲ್ಲಲು ಆಗುವುದಿಲ್ಲ. ಅವನು ನಾಯಿಯಂತೆ ಸತ್ತನು. ಹೇಡಿಯಂತೆ ಸಾವನ್ನಪ್ಪಿದ್ದಾನೆ. ಈಗ ಪ್ರಪಂಚ ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಿದ್ದರು.

    ಬಾಗ್ದಾದಿಯನ್ನು ಕೊಲ್ಲಲು ವರ್ಷಗಳಿಂದ ಕಾದು ಕುಳಿತಿದ್ದ ಅಮೆರಿಕ ವಿಶೇಷ ಸೇನಾ ಪಡೆ, ಆತ ವಾಯುವ್ಯ ಸಿರಿಯಾ ಪ್ರದೇಶದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿತ್ತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಹೆಲಿಕಾಪ್ಟರ್ ದಾಳಿಯಲ್ಲಿ ಬಾಗ್ದಾದಿಯ ಉಗ್ರರು ಸಾವನ್ನಪ್ಪಿದ್ದಾರೆ. ದಾಳಿಗೆ ಹೆದರಿದ ಬಾಗ್ದಾದಿ ಸುರಂಗದ ಮೂಲಕ ಓಡಿದ್ದ. ಈ ವೇಳೆ ನಮ್ಮ ಶ್ವಾನ ದಳ ಅವನನ್ನು ಬೆನ್ನಟ್ಟಿದವು. ಸುರಂಗ ಕೊನೆಯಾಗುತ್ತಿದ್ದಂತೆಯೇ ಬಂಧನದ ಭೀತಿಯಲ್ಲಿ ಬಾಗ್ದಾದಿ ತನ್ನ ಮೂರು ಜನ ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಹೇಡಿಯಂತೆ ಸಾವನ್ನಪ್ಪಿದ್ದಾನೆ ಎಂದು ಟ್ರಂಪ್ ಶ್ವೇತ ಭವನದಲ್ಲಿ ಹೇಳಿದ್ದರು.

  • ವಿವಾಹಿತ ಪ್ರೇಮಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ್ಳು

    ವಿವಾಹಿತ ಪ್ರೇಮಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ್ಳು

    ಮುಂಬೈ: ಯುವತಿಯೊಬ್ಬಳು ತನ್ನ ವಿವಾಹಿತ ಪ್ರಿಯಕರನಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    25 ವರ್ಷದ ಯುವತಿ ಆರೋಪಿ ದಿನೇಶ್ ಮೌರ್ಯನ ಜೊತೆ ನಾಲ್ಕು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಳು. ದಿನೇಶ್‍ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ದಿನೇಶ್ ಹಾಗೂ ಯುವತಿ ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು.

    ದಿನೇಶ್, ಯುವತಿ ಬಳಿ ಆಕೆಯ ತಂಗಿಯ ನಗ್ನ ಫೋಟೋವನ್ನು ಕೇಳಿದ್ದಾನೆ. ಆಗ ಯುವತಿ ತನ್ನ ತಂಗಿ ಶವರ್ ನಲ್ಲಿ ಸ್ನಾನ ಮಾಡುವಾಗ ಕದ್ದು ಮುಚ್ಚಿ ವಿಡಿಯೋ ಕಾಲ್ ಮಾಡಿ ತನ್ನ ಪ್ರಿಯಕರನಿಗೆ ತೋರಿಸಿದ್ದಾಳೆ. ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ದಿನೇಶ್ ತನ್ನ ಮೊಬೈಲಿನಲ್ಲಿ ಸ್ಕ್ರೀನ್ ಶಾಟ್ ತೆಗೆದು ಸೇವ್ ಮಾಡಿಕೊಂಡಿದ್ದನು.

    ಬುಧವಾರ ಮೊಬೈಲಿನಲ್ಲಿ ಸೇವ್ ಆಗಿದ್ದ ಫೋಟೋಗಳನ್ನು ದಿನೇಶ್ ಪತ್ನಿ ನೋಡಿದ್ದಾಳೆ. ಫೋಟೋ ನೋಡಿದ ಬಳಿಕ ಪತ್ನಿ, ಯುವತಿಯ ಪೋಷಕರಿಗೆ ತಿಳಿಸಿದ್ದಾಳೆ. ಫೋಟೋ ನೋಡಿದ ನಂತರ ವಿಡಿಯೋ ಕಾಲ್ ವೇಳೆ ಸ್ಕ್ರೀನ್‍ಶಾಟ್ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿಯಿತು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ದಿನೇಶ್ ಯುವತಿ ಬಳಿ ಆಕೆಯ ತಂಗಿಯ ನಗ್ನ ಫೋಟೋಗಳನ್ನು ಕಳುಹಿಸಿದರೆ, ಮದುವೆಯಾಗುವುದಾಗಿ ಮಾತು ನೀಡಿದ್ದನು. ದಿನೇಶ್ ಮಾತನ್ನು ನಂಬಿದ ಯುವತಿ ತನ್ನ ತಂಗಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದಾಳೆ ಎಂದು ಹೇಳಿದ್ದಾರೆ.

    ಸದ್ಯ ಸಂತ್ರಸ್ತ ಯುವತಿ ತನ್ನ ಸಹೋದರಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

  • ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆ – ಅಣ್ಣನೇ ಕೊಂದು ಎಸೆದಿದ್ದ!

    ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆ – ಅಣ್ಣನೇ ಕೊಂದು ಎಸೆದಿದ್ದ!

    ಮಂಗಳೂರು: ಸುಮಾರು 18 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಸ್ವಂತ ಅಣ್ಣನೇ ತಂಗಿಯನ್ನು ಕೊಲೆ ಮಾಡಿರುವ ಪ್ರಕರಣವೊಂದು ಮಂಗಳೂರಿನ ಕೊಣಾಜೆ ಬಳಿಯ ಮುಡಿಪುವಿನಲ್ಲಿ ಬೆಳಕಿಗೆ ಬಂದಿದೆ.

    ಸ್ಟೀಫಲ್ ಕುಟಿನ್ಹೋ(16) ಮೃತ ವಿದ್ಯಾರ್ಥಿನಿ. ಈಕೆಯ ಸಹೋದರ ಸ್ಯಾಮ್ಸನ್ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಶನಿವಾರ ಮನೆ ಬಳಿಯ ಗುಡ್ಡದಲ್ಲಿ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆಯಾಗಿದೆ.

    ಏನಿದು ಪ್ರಕರಣ?
    ಸ್ಟೀಫಲ್ ಕುಟಿನ್ಹೋ ಮಂಗಳೂರಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಳು. ಆದರೆ ಅಕ್ಟೋಬರ್ 8ರಂದು ಮನೆಯಲ್ಲಿದ್ದ ಸ್ಟೀಫಲ್ ದಿಢೀರ್ ನಾಪತ್ತೆಯಾಗಿದ್ದಳು. ಪೋಷಕರು ಸುತ್ತಮುತ್ತ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು. ತಂದೆ ಫ್ರಾನ್ಸಿಸ್ ಕುಟಿನ್ಹೋ ನೀಡಿದ್ದ ದೂರಿನಂತೆ ಪೊಲೀಸರು ತನಿಖೆ ಕೂಡ ನಡೆಸಿದ್ದರು. ಆದರೆ ವಿದ್ಯಾರ್ಥಿನಿ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ.

    ಹೀಗಾಗಿ ಪೊಲೀಸರು ಮತ್ತೊಮ್ಮೆ ಮನೆಯವರನ್ನು ವಿಚಾರಣೆ ಮಾಡಿದ್ದಾರೆ. ತೀವ್ರ ವಿಚಾರಣೆಯ ಬಳಿಕ ಸೋದರ ಸ್ಯಾಮ್ಸನ್ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ. ಅಕ್ಟೋಬರ್ 8ರಂದು ಮನೆಯಲ್ಲಿ ಸ್ಟೀಫಲ್ ಕುಟಿನ್ಹೋ ಮತ್ತು ಸೋದರ ಸ್ಯಾಮ್ಸನ್ ಇಬ್ಬರೇ ಇದ್ದರು. ಆಗ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆ ಕೋಪದಿಂದ ಆರೋಪಿ ಸೋದರ ವಿದ್ಯಾರ್ಥಿನಿ ತಲೆಗೆ ಸುತ್ತಿಗೆಯಿಂದ ಬಡಿದು ಕೊಲೆ ಮಾಡಿದ್ದಾನೆ.

    ನಂತರ ಸೋದರಿಯ ಮೃತದೇಹವನ್ನು ಗುಡ್ಡದಲ್ಲಿ ಎಸೆದಿದ್ದಾನೆ. ವಿಚಾರಣೆ  ನಂತರ ಆರೋಪಿ ಮೃತದೇಹವನ್ನು ಎಸೆದಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದಾನೆ. ಅಲ್ಲಿ ಯುವತಿ ಮೃತದೇಹ ಅಸ್ಥಿಪಂಜರ ಸಿಕ್ಕಿದೆ.

    ಸದ್ಯಕ್ಕೆ ಮಂಗಳೂರಿನ ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸ್ಯಾಮ್ಸನ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ತಂಗಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಸಹೋದರನಿಂದ ಯುವಕನ ಕೊಲೆ

    ತಂಗಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಸಹೋದರನಿಂದ ಯುವಕನ ಕೊಲೆ

    ಬಾಗಲಕೋಟೆ: ಸಹೋದರಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.

    ನಬಿಸಾಬ್ ತಹಸೀಲ್ದಾರ(22) ಕೊಲೆಯಾದ ಯುವಕ. ನಬಿಸಾಬ್ ಸುನಗ ಗ್ರಾಮದವನಾಗಿದ್ದು, ಅದೇ ಗ್ರಾಮದ ವಿಠ್ಠಲ ವಡವಾಣಿಯ ಸಹೋದರಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು. ಹಾಗಾಗಿ ವಿಠ್ಠಲ ತನ್ನ ಸ್ನೇಹಿತ ಮಂಜುನಾಥ್ ಜೊತೆ ಸೇರಿ ನಬಿಸಾಬ್‍ನ ಕೊಲೆ ಮಾಡಿದ್ದಾನೆ.

    ಕೊಲೆಯಾದ ನಬಿಸಾಬ್, ವಿಠ್ಠಲ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ವಿಷಯ ತಿಳಿದ ವಿಠ್ಠಲ, ನಬಿಸಾಬ್‍ಗೆ ಎಚ್ಚರಿಕೆ ನೀಡಿ, ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡದಂತೆಯೂ ತಾಖೀತು ಮಾಡಿದ್ದನು. ಆದರೂ ವಿಠ್ಠಲ ಸಹೋದರಿ ಜೊತೆ ನಬಿಸಾಬ್ ಫೋನಿನಲ್ಲಿ ಮಾತು ಮುಂದುವರಿಸಿದ್ದನು.

    ಗುರುವಾರ ರಾತ್ರಿ ವಿಠ್ಠಲ ಹಾಗೂ ಮಂಜುನಾಥ್ ಸುನಗ ಕ್ರಾಸ್ ಬಳಿ ನಬಿಸಾಬ್‍ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಕೊಲೆ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  • ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

    ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

    ಲಕ್ನೋ: ಊಟಕ್ಕೆ ರೊಟ್ಟಿ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೊಬ್ಬ ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

    ಲಖಿಂಪುರ್ ಖೇರಿಯ ಬರ್ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬರ್ಖೇಡಾ ಗ್ರಾಮದ ನಿವಾಸಿ ಸೋನು ಸಿಂಗ್ ತನ್ನ ಸೋದರ ಸಂಬಂಧಿ ಸುಮನ್‍ನನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ. ಎರಡು ದಿನಗಳ ಹಿಂದೆ ಸುಮನ್ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಈ ವೇಳೆ ಸೋನುಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದಳು. ಕುಡಿದು ಮನೆಗೆ ಬಂದಿದ್ದ ಸೋನುಗೆ ಆ ಅಡುಗೆ ಇಷ್ಟವಿರಲಿಲ್ಲ. ಆಗ ಆತ ರೊಟ್ಟಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದನು. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ.

    ಇಷ್ಟಕ್ಕೆ ಕೋಪಗೊಂಡ ಸೋನು ಮನೆಯಲಿದ್ದ ತನ್ನ ತಂದೆಯ ಲೈಸನ್ಸ್ ಇರುವ ಬಂದೂಕನ್ನು ತೆಗೆದುಕೊಂಡು ಸೋದರಿಯ ತಲೆಗೆ ಗುಂಡು ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಒಂದು ವರ್ಷದ ಹಿಂದೆಯಷ್ಟೇ ಸುಮನ್ ವಿವಾಹವಾಗಿದ್ದರು.

    ಕೆಲವು ವರ್ಷಗಳ ಹಿಂದೆ ಸುಮನ್ ತಂದೆ ತೀರಿಹೋಗಿದ್ದರು. ಆ ಬಳಿಕ ಸುಮನ್‍ ತನ್ನ ಸೋದರ ಸಂಬಂಧಿ ಸೋನುವನ್ನೇ ತನ್ನ ನಿಜವಾದ ಸಹೋದರನಂತೆ ನೋಡಿಕೊಳ್ಳುತ್ತಿದ್ದರು. ಆದರೆ ಸೋನು ಸುಮನ್‍ರನ್ನು ಹತ್ಯೆ ಮಾಡುವಷ್ಟು ಕಟುಕನಾಗುತ್ತಾನೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ.

    ಘಟನೆಯ ಬಳಿಕ ಆರೋಪಿ ಸೋನು ಪರಾರಿ ಆಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಸೋನು ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಬಾಂಧವ್ಯದ ಹಬ್ಬವೇ ರಕ್ಷಾ ಬಂಧನ – ವಿಶೇಷತೆ ಏನು?

    ಬಾಂಧವ್ಯದ ಹಬ್ಬವೇ ರಕ್ಷಾ ಬಂಧನ – ವಿಶೇಷತೆ ಏನು?

    ಶ್ರಾವಣ ಮಾಸ ಬಂತೆಂದರೆ ಸಾಲು ಸಾಲಾಗಿ ಹಬ್ಬಗಳು ಬರುತ್ತವೆ. ಮೊದಲಿಗೆ ವರಮಹಾಲಕ್ಷ್ಮಿ ಹಬ್ಬ ಬರುತ್ತದೆ. ನಂತರ ಬರುವುದೇ ಸಂಬಂಧವನ್ನು ಬೆಸೆಯುವ ಬಾಂಧವ್ಯದ ಹಬ್ಬ ರಾಖಿ ಹಬ್ಬವಾಗಿದೆ. ಸೋದರ ಮತ್ತು ಸೋದರಿ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯದೆ ಉಳಿಯಲು ಪ್ರತೀ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

    ಹೌದು…ಅಣ್ಣ-ತಂಗಿಯ ಬಂಧನಕ್ಕೆ ಬೆಲೆ ಕಟ್ಟಲಾಗದು. ಮನೆಯಲ್ಲಿ ಅಣ್ಣ ಅಥವಾ ತಮ್ಮನಿಗೆ ತಂಗಿ ಅಥವಾ ಅಕ್ಕ ಯಾವಾಗಲೂ ಬೆಂಬಲವಾಗಿ ನಿಲ್ಲುವರು. ಸಹೋದರ ಮತ್ತು ಸಹೋದರಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು ಹೆಚ್ಚಾಗಿ ಆಚರಿಸುತ್ತಾರೆ. ಅಣ್ಣನ ಕೈಗೆ ತಂಗಿ ರಾಖಿ ಕಟ್ಟುವ ಮೂಲಕ ತಂಗಿ ಅಣ್ಣ ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನು ನೀಡುತ್ತಾನೆ ಎಂಬ ನಂಬಿಕೆ ಇಟ್ಟುಕೊಂಡಿರುತ್ತಾಳೆ.

    ರಕ್ಷಾ ಬಂಧನ ಹಬ್ಬವನ್ನು ರಾಷ್ಟ್ರದೆಲ್ಲೆಡೆಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಇದು ಹಿಂದೂಗಳ ಹಬ್ಬವಾದರೂ ಹೆಚ್ಚಿನ ಧರ್ಮಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ದಿನ ಸೋದರಿಯು ತನ್ನ ಸೋದರನ ಕೈಗೆ ರಕ್ಷೆಯ ದಾರವನ್ನು ಕಟ್ಟುತ್ತಾಳೆ. ಅದನ್ನೇ ರಾಖಿ ಎಂದು ಕರೆಯುತ್ತಾರೆ. ಈ ದಾರವನ್ನು ಕಟ್ಟುವ ವೇಳೆ ತಂಗಿ ತನ್ನ ಅಣ್ಣನಿಗೆ ದೀರ್ಘಾಯುಷ್ಯ, ಆರೋಗ್ಯವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾಳೆ.

    ಇದಕ್ಕೆ ಪ್ರತಿಯಾಗಿ ಸಹೋದರನು ಕೂಡ ತನ್ನ ಸಹೋದರಿಯನ್ನು ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ. ಅಷ್ಟೇ ಅಲ್ಲದೇ ತನ್ನ ಪ್ರೀತಿಯ ತಂಗಿಗೆ ಇಷ್ಟವಾಗಿರುವ ಉಡುಗೊರೆ ನೀಡುತ್ತಾನೆ. ರಕ್ಷಾಬಂಧನ ಎಂಬುದರಲ್ಲಿ ಎರಡು ಪದಗಳಿವೆ, ಒಂದು ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಅಣ್ಣ-ತಂಗಿ ಇಬ್ಬರು ಪರಸ್ಪರ ಹಂಚಿಕೊಳ್ಳುವ ಪ್ರೀತಿ ಯಾವತ್ತೂ ಕೊನೆಗೊಳ್ಳದು.

    ರಾಖಿ ಕಟ್ಟುವುದು: ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣಿನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ.

    ರಕ್ಷಾ ಬಂಧನದ ಹಿನ್ನೆಲೆ:
    ಪ್ರತಿಯೊಂದು ಹಬ್ಬಕ್ಕೂ ಪುರಾಣದಲ್ಲಿ ತನ್ನದೇ ಆದ ಹಿನ್ನೆಲೆ ಇತಿಹಾಸವನ್ನು ಹೊಂದಿರುತ್ತವೆ. ಅದೇ ರೀತಿ ರಕ್ಷಾ ಬಂಧನಕ್ಕೂ ಕೂಡ ಅನೇಕ ಇತಿಹಾಸಗಳಿವೆ. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡಿದನು.

    ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದ್ದಳು. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಭರವಸೆ ನೀಡುತ್ತಾನೆ.

    ಇನ್ನೊಂದು ಕಥೆಯೆಂದರೆ, ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ. ಹೀಗೆ ರಕ್ಷಾ ಬಂಧನಕ್ಕೆ ತನ್ನದೆ ಆದ ಹಿನ್ನೆಲೆಯನ್ನು ಹೊಂದಿದೆ.

    ಮಹತ್ವ:
    ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುತ್ತದೆ. ಈ ಹಬ್ಬದ ಮೂಲಕ ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತದೆ. ರಾಖಿಯನ್ನು ಕಟ್ಟುವ ಸೋದರಿಯು ತನ್ನ ಸೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಸಂಕೇತವಾಗಿದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗೂ ಶಕ್ತಿಯನ್ನು ಸೋದರನಿಗೆ ನೆನಪು ಮಾಡಿಕೊಡುತ್ತದೆ.

  • ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ- ತಂಗಿ ತೀವ್ರ ಅಸ್ವಸ್ಥ

    ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ- ತಂಗಿ ತೀವ್ರ ಅಸ್ವಸ್ಥ

    ಮಂಡ್ಯ: ಡೆಂಗ್ಯೂ ಜ್ವರಕ್ಕೆ ಏಳು ವರ್ಷದ ಶಾಲಾ ಬಾಲಕಿ ಮೃತಪಟ್ಟಿದ್ದು, ಆಕೆಯ ತಂಗಿ ಕೂಡ ಡೆಂಗ್ಯೂ ಜ್ವರದಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರವಿಕುಮಾರ್, ರಾಣಿ ದಂಪತಿಗಳ ಪುತ್ರಿ ಹೇಮಾವತಿ ಮೃತ ದುರ್ದೈವಿ. ಕೆ.ಆರ್ ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ರೆ, ಆಕೆಯ 5 ವರ್ಷದ ತಂಗಿ ಪ್ರೇರಣ ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಹೇಮಾವತಿ ನಿಧನರಾದರೆ, ಈಕೆಯ ಸಹೋದರಿ ತೀವ್ರವಾಗಿ ಅಸ್ವಸ್ಥರಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

    ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಅಗಸರಹಳ್ಳಿ ಗ್ರಾಮದಲ್ಲಿ ಆತಂಕವು ಮನೆ ಮಾಡಿದೆ.

  • ಬಾವನಿಗಾಗಿ 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದಳು

    ಬಾವನಿಗಾಗಿ 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದಳು

    ಭೋಪಾಲ್: 19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

    ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಬಾತ್‍ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ. ಅದೇ ಜಾಗದಲ್ಲಿ ಕೃತ್ಯಕ್ಕೆ ಬಳಸಲಾಗಿದ್ದ ಚಾಕು ಕೂಡ ಪತ್ತೆಯಾಗಿದೆ ಎಂದು ಶಾಪುರಾ ಪೊಲೀಸರು ತಿಳಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ಮುಖದ ಸುತ್ತ ಬಟ್ಟೆಯೊಂದನ್ನು ಸುತ್ತಿಕೊಂಡು ಯುವತಿಯೊಬ್ಬಳು ಬಾತ್‍ರೂಮ್‍ನಿಂದ ಹೊರಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದೇವೆ ಎಂದು ನೆರೆಹೊರೆಯವರು ತಿಳಿಸಿದ್ದರು. ನಂತರ ಅನುಮಾನದ ಮೇರೆಗೆ ಶಹಪುರ-ನರಸಿಂಗ್‍ಪುರ ರಸ್ತೆ ಬಳಿ ಆರೋಪಿ ಸಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

    ಅಭಿಲಾಷಾ ಅನಾರೋಗ್ಯಕ್ಕೆ ಒಳಗಾದ ನಂತರ ನಾನು ಸಹೋದರಿಯ ಮನೆಗೆ ಹೋಗಿದ್ದೆ. ಈ ಹಿಂದೆಯೂ ನಾನು ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದೆ. ಆದರೆ ನನ್ನ ಪ್ರಯತ್ನಗಳು ವಿಫಲವಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.

    ಆರೋಪಿ ಸಾಕ್ಷಿ ತನ್ನ ಬಾವ ಅನ್ಮೋಲ್ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಈ ವಿಚಾರ ಮೃತ ಅಕ್ಕನಿಗೆ ತಿಳಿದಿತ್ತು. ಆಗ ಅಭಿಲಾಷಾ ನೀನು ಇಲ್ಲಿ ಇರುವುದು ಬೇಡ ಮನೆಗೆ ಹೋಗು ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ಆಕೆಯ ಸಹೋದರ ಕೂಡ ಸಾಕ್ಷಿಯನ್ನು ಮನೆಗೆ ಕಳುಹಿಸುವಂತೆ ತಿಳಿಸಿದ್ದನು. ಇದರಿಂದ ಕೋಪಗೊಂಡ ಆರೋಪಿ ಸಾಕ್ಷಿ ಸಹೋದರಿಯನ್ನು ಕೊಲೆ ಮಾಡಿದ್ದಾಳೆ ಎಂದು ಜಿಲ್ಲಾ ಎಸ್‍ಪಿ ಆರ್.ಕೆ.ನಾರ್ವಾರಿಯಾ ಹೇಳಿದ್ದಾರೆ.

    ಸದ್ಯಕ್ಕೆ ಆರೋಪಿ ಸಾಕ್ಷಿ ಹೇಳಿಕೆಯ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಭೂತ ಹಿಡಿಯಲು ಪೊಲೀಸರನ್ನ ಕರೆಸಿದ ಯುವಕ

    ಭೂತ ಹಿಡಿಯಲು ಪೊಲೀಸರನ್ನ ಕರೆಸಿದ ಯುವಕ

    ಲಕ್ನೋ: ಯುವಕನೋರ್ವ ಭೂತವನ್ನು ಹಿಡಿಯಲು ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಲವಾರಿ ಮಾಫಿ ಮಡಿಯಾನ್‍ನಲ್ಲಿ ನಡೆದಿದೆ.

    100 ನಂಬರ್ ಗೆ ಕರೆ ಮಾಡಿದ ಯುವಕ ಆನಂದ್ ಪಟೇಲ್ ತನ್ನ ತಂಗಿಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದನು. ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಸೋದರಿಯನ್ನು ಭೂತದಿಂದ ಬಿಡುಗಡೆಗೊಳಿಸಬೇಕೆಂದು ಹೇಳಿಕೊಂಡಿದ್ದಾನೆ. ಕರೆಯಿಂದ ಮಾಹಿತಿ ಪಡೆದ ಪೊಲೀಸರು ಯುವಕನ ಮನೆಗೆ ತೆರಳಿದ್ದಾರೆ. ನನ್ನ ಸೋದರಿಯ ಮೇಲೆ ಬಂದ ಓರ್ವ (ಭೂತ) ಕಳೆದ ಕೆಲ ದಿನಗಳಿಂದ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಸೋದರಿಯನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾನೆ.

    ಈ ಕುರಿತು ಪೊಲೀಸರು ಆನಂದ್ ತಂದೆಯನ್ನು ಸಂಪರ್ಕಿಸಿದ್ದಾರೆ. ಪುತ್ರ ಮನೆಯಲ್ಲಿ ಯಾರಿಗೂ ತಿಳಿಸದೇ ಕರೆ ಮಾಡಿದ್ದಾನೆ. ನಾವು ಆತನಿಗೆ ತಿಳಿ ಹೇಳುತ್ತೇವೆ ಎಂದಿದ್ದಾರೆ. ಪೊಲೀಸರು ಸಹ ಯುವಕನನ್ನು ಕರೆಸಿ ಸೋದರಿಯ ಆರೋಗ್ಯಸ್ಥಿತಿಯನ್ನು ಆನಂದ್‍ನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

    ನನ್ನ ಸೋದರಿಯನ್ನು ಆವರಿಸಿಕೊಂಡಿರುವ ಯುವಕನ ಜೊತೆ ನಾನು ಮಾತನಾಡಿದೆ. ತಂಗಿಯನ್ನು ಬಿಟ್ಟು ಹೋಗುವಂತೆ ಅವನ ಬಳಿ ಪ್ರಾರ್ಥನೆ ಮಾಡಿಕೊಂಡ್ರೂ ಆತ ಹೋಗಲಿಲ್ಲ. ಹಾಗಾಗಿ ಸೋದರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಪೊಲೀಸರಿಗೆ ಕರೆ ಮಾಡಿದೆ ಎಂದು ಆನಂದ್ ಪಟೇಲ್ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.