Tag: sister

  • ಫೋನಿನಲ್ಲಿ ಮಾತಾಡುತ್ತಿದ್ದ ತಂಗಿಯನ್ನೇ ಕತ್ತು ಹಿಸುಕಿದ!

    ಫೋನಿನಲ್ಲಿ ಮಾತಾಡುತ್ತಿದ್ದ ತಂಗಿಯನ್ನೇ ಕತ್ತು ಹಿಸುಕಿದ!

    – ಪೋಷಕರು ಮನೆಯಲ್ಲಿಲ್ಲದ ವೇಳೆ ಘಟನೆ
    – ತನ್ನ ಮಾತನ್ನು ತಂಗಿ ಕೇಳಲಿಲ್ಲ

    ತೆಲಂಗಾಣ: ಫೋನಿನಲ್ಲಿ ಮಾತನಾಡುತ್ತಿದ್ದಳೆಂದು ಸಿಟ್ಟುಗೊಂಡ ಸಹೋದರನೊಬ್ಬ ತನ್ನ 17 ವರ್ಷದ ಸಹೋದರಿಯನ್ನೇ ಕೊಲೆಗೈದ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 17 ವರ್ಷದ ಬಾಲಕಿಯ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಸಹೋದರನೇ ಸಹೋದರಿಯನ್ನು ಕೊಲೆ ಮಾಡಿರುವ ಬಗ್ಗೆ ಬಯಲಾಗಿದೆ.

    ಮೃತ ದುರ್ದೈವಿಯನ್ನು ತನುಜಾ ಎಂದು ಗುರುತಿಸಲಾಗಿದೆ. ಈಕೆಯ ವರ್ಷದ ಅಣ್ಣನೇ ಕೊಲೆ ಮಾಡಿದ್ದಾನೆ. ಈ ಘಟನೆ ತನುಜಾ ಹಾಗೂ ಆರೋಪಿ ರಮೇಶ್ ಇಬ್ಬರೇ ಮನೆಯಲ್ಲಿರುವಾಗ ನಡೆದಿದೆ.

    ಈ ಇಬ್ಬರು ಅಣ್ಣ-ತಂಗಿ ಕೃಷ್ಣಾ ಜಿಲ್ಲೆಯಲ್ಲಿರುವ ತಿರುವೂರಿಗೆ ಅಜ್ಜನ ಅಂತ್ಯಸಂಸ್ಕಾರೆಂದು ತೆರಳಿದ್ದರು. ಕಾರ್ಯಕ್ರಮದ ಬಳಿಕ ಪರೀಕ್ಷೆ ಇದೆ ಎಂದು ಪೋಷಕರು ಇಬ್ಬರನ್ನೂ ವಾಪಸ್ ಮನೆಗೆ ಕಳುಹಿಸಿದ್ದಾರೆ. ಆದರೆ ಪೊಲೀಸರು ತನುಜಾಳಿಗೆ ಪರೀಕ್ಷೆ ಇರಲಿಲ್ಲ ಎಂದು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಪೊಲೀಸರು ರಮೇಶ್ ನನ್ನು ತನಿಖೆ ನಡೆಸಿದಾಗ, ಕ್ಷುಲ್ಲಕ ವಿಚಾರ ಅಂದರೆ ಆಕೆ ತುಂಬಾ ಹೊತ್ತು ಫೋನಿನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಸಿಟ್ಟುಗೊಂಡು ತಾನೇ ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಫೋನಿನಲ್ಲಿ ಮಾತಾಡೋದು ನಿಲ್ಲಿಸು ಎಂದು ಹೇಳಿದ್ದೆ. ಆದರೆ ಆಕೆ ತನ್ನ ಮಾತನ್ನು ಕೇಳಲಿಲ್ಲ. ಹೀಗಾಗಿ ಸಿಟ್ಟುಗೊಂಡು ಆಕೆಯ ಕತ್ತು ಹಿಸುಕಿ ಕೊಲೆಗೈದಿರುವುದಾಗಿ ತಿಳಿಸಿದ್ದಾನೆ.

    ಮಗನಿಗೆ ಸಿಟ್ಟು ಸ್ವಲ್ಪ ಜಾಸ್ತಿ. ಕೆಲವೊಂದು ಬಾರಿ ಆತ ತಾಳ್ಮೆ ಕಳೆದುಕೊಂಡು ಮನೆ ಬಿಟ್ಟು ಹೋದ ಘಟನೆಗಳೂ ಇವೆ ಎಂದು ರಮೇಶ್ ಹೆತ್ತವರು ಪೊಲೀಸರ ಬಳಿ ಹೇಳಿದ್ದಾರೆ. ಘಟನೆಯ ಬಳಿಕ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.

  • ಸಹೋದರಿಯರಿಬ್ಬರ ಅಪಹರಣ – ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಸಿಕ್ಕಿಬಿದ್ದ ಪಾಗಲ್ ಪ್ರೇಮಿ

    ಸಹೋದರಿಯರಿಬ್ಬರ ಅಪಹರಣ – ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಸಿಕ್ಕಿಬಿದ್ದ ಪಾಗಲ್ ಪ್ರೇಮಿ

    ಚಾಮರಾಜನಗರ: ಅಪ್ರಾಪ್ತ ಸಹೋದರಿಯರಿಬ್ಬರನ್ನು ಅಪಹರಿಸಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಕೊಳ್ಳೇಗಾಲ ತಾಲೂಕಿನ ಜಾಗೇರಿ ಸಮೀಪದ ಸೆಲ್ವೈಪುರಿದೊಡ್ಡಿಯಲ್ಲಿ ನಡೆದಿದೆ.

    ಆರ್ಮುಗಂ ಅತ್ಯಾಚಾರವೆಸಗಿ ಅರೆಸ್ಟ್ ಆದ ಆರೋಪಿ. ಜಾಗೇರಿ ಸಮೀಪದ ಪಿ.ಜಿ ದೊಡ್ಡಿ ಗ್ರಾಮದವನಾಗಿರುವ ಆರ್ಮುಗಂ ಸೆಲ್ವೈಪುರಿ ಗ್ರಾಮದ 16 ವರ್ಷದ ಬಾಲಕಿಯಲ್ಲಿ ಪ್ರೀತಿಸುತ್ತಿದ್ದನು ಎಂದು ತಿಳಿದು ಬಂದಿದೆ.

    ಕಳೆದ 29ರಂದು ಸಂಜೆ ಅಪ್ರಾಪ್ತೆ ತನ್ನ 9 ವರ್ಷದ ತಂಗಿ ಜೊತೆ ನೀರು ತರಲು ಹೊರ ಬಂದಿದ್ದಳು. ಈ ವೇಳೆ ಆರೋಪಿ ಆರ್ಮುಗಂ ಇಬ್ಬರಿಗೂ ಮತ್ತು ಬರುವ ಮಾತ್ರೆ ಬೆರೆಸಿದ ಜ್ಯೂಸ್ ಅನ್ನು ಕುಡಿಸಿದ್ದಾನೆ. ಬಳಿಕ ಇಬ್ಬರನ್ನು ಅಪಹರಿಸಿ ಸೇಲಂಗೆ ಕರೆದುಕೊಂಡು ಹೋಗಿದ್ದಾನೆ.

    ಕಳೆದ ಫೆ. 1ರಂದು ಆರ್ಮುಗಂ ಅಪ್ರಾಪ್ತೆಯ 9 ವರ್ಷದ ತಂಗಿಯನ್ನು ಬಸ್ಸಿಗೆ ಹತ್ತಿಸಿ ಕಳುಹಿಸಿದ್ದಾನೆ. ಇತ್ತ ಮಕ್ಕಳ ಪೋಷಕರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಪೊಲೀಸರು ಆತನ ಇರುವಿಕೆ ಪತ್ತೆ ಹಚ್ಚಿ ಬಾಲಕಿಯನ್ನು ರಕ್ಷಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸ್ತಿದ್ದಾರೆ ನಟಿ ದಿಶಾ ಪಠಾಣಿ ಸಹೋದರಿ

    ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸ್ತಿದ್ದಾರೆ ನಟಿ ದಿಶಾ ಪಠಾಣಿ ಸಹೋದರಿ

    ಮುಂಬೈ: ಬಾಲಿವುಡ್ ನಟಿ ದಿಶಾ ಪಠಾಣಿ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ. ಆದರೆ ಈಗ ಅವರ ಸಹೋದರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದ್ದಾರೆ.

    ದಿಶಾ ಅವರ ಸಹೋದರಿ ಖುಷ್ಬೂ ಪಠಾಣಿ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಮೂಲಕ ಖುಷ್ಬೂ ದೇಶ ಸೇವೆ ಮಾಡುತ್ತಿದ್ದಾರೆ. ಸೇನೆಯಲ್ಲಿರುವ ಕಾರಣ ಖುಷ್ಬೂ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ.

    ಖುಷ್ಬೂ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಅವರ ವರ್ಕೌಟ್ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿರುತ್ತದೆ. ಖುಷ್ಬೂ ಅವರ ಇನ್‍ಸ್ಟಾದಲ್ಲಿ 80 ಸಾವಿರ ಫಾಲೋವರ್ಸ್ ಇದ್ದಾರೆ. ನಟಿ ದಿಶಾ ಹಲವು ಬಾರಿ ತಮ್ಮ ಇನ್‍ಸ್ಟಾದಲ್ಲಿ ಖುಷ್ಬೂ ಅವರ ಫೋಟೋ ಪೋಸ್ಟ್ ಮಾಡಿದ್ದಾರೆ.

    ದಿಶಾ ಕುಟುಂಬಸ್ಥರು ಮೂಲತಃ ಉತ್ತರ ಪ್ರದೇಶದ ಬರೇಲಿ ಕುಟುಂಬದವರಾಗಿದ್ದು, ಅವರ ತಂದೆ ಜಗದೀಶ್ ಸಿಂಗ್ ಪಠಾಣಿ ಡಿಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿಶಾ ಅವರಿಗೆ ಹಿರಿಯ ಸಹೋದರಿ ಹಾಗೂ ಕಿರಿಯ ಸಹೋದರ ಇದ್ದಾರೆ. ಹಿರಿಯ ಸಹೋದರಿ ಸೇನೆಯಲ್ಲಿ ಲೆಫ್ಟಿನೆಂಟ್ ಆದರೆ, ಕಿರಿಯ ಸಹೋದರ ಟೆನ್ನಿಸ್ ಆಟಗಾರರಾಗಿದ್ದಾರೆ.

    ಸದ್ಯ ದಿಶಾ ಈಗ ತಮ್ಮ ಮುಂಬರುವ ‘ಮಲಂಗ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶನ ಮಾಡಿದ್ದು, ದಿಶಾ ನಾಯಕನಾಗಿ ಆದಿತ್ಯ ರಾಯ್ ಕಪೂರ್ ನಟಿಸಿದ್ದಾರೆ. ಈ ಚಿತ್ರ ಫೆ. 7ರಂದು ಬಿಡುಗಡೆಯಾಗಲಿದೆ.

  • ಪ್ರೀತಿ ಅರಸಿ ಬಂದ ಲವರ್- ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೈದ ಕಲಾವಿದೆ

    ಪ್ರೀತಿ ಅರಸಿ ಬಂದ ಲವರ್- ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೈದ ಕಲಾವಿದೆ

    ಚೆನ್ನೈ: ಕಿರುತೆರೆ ಕಲಾವಿದೆಯೊಬ್ಬಳು ತನ್ನ ಪ್ರೀತಿ ಅರಸಿ ಬಂದಿದ್ದ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಸುತ್ತಿಗೆ ಹಾಗೂ ದೊಣ್ಣೆಯಿಂದ ಆತನ ತಲೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಕೃತ್ಯವೆಸೆಗಿದ ಕಿರುತೆರೆ ಕಲಾವಿದೆಯನ್ನು ಎಸ್. ದೇವಿ(42) ಎಂದು ಗುರುತಿಸಲಾಗಿದ್ದು, ಈಕೆ ಹಲವು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾಳೆ. ಈಕೆ ತನ್ನ ಪತಿ ಶಂಕರ್, ತಂಗಿ ಲಕ್ಷ್ಮಿ(40), ತಂಗಿ ಪತಿ ಸಾವರಿಯಾರ್(53) ಸಹಾಯದಿಂದ ಫಿಲಂ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂ ರವಿ(38) ಅನ್ನು ಬರ್ಬರವಾಗಿ ಕೊಲೆಗೈದಿದ್ದಾಳೆ.

    ರವಿ ಮಧುರೈ ಮೂಲದವನಾಗಿದ್ದು ಕಳೆದ 8 ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿದ್ದನು. ದೇವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ವೇಳೆ ರವಿ ಹಾಗೂ ಆಕೆ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಕಳೆದ 2 ವರ್ಷದ ಹಿಂದೆ ದೇವಿ ಪತಿ ಶಂಕರ್ ಗೆ  ತಿಳಿದು ರವಿಯಿಂದ ಆಕೆಯನ್ನು ದೂರ ಮಾಡಿದ್ದನು.

    ಆ ಬಳಿಕ ದೇವಿಗೆ ಪತಿ ಹೊಲಿಗೆ ಮಷಿನ್ ತಂದು ಕೊಟ್ಟು ಆಕೆ ಬಟ್ಟೆ ಹೊಲಿಯುವುದರಲ್ಲಿ ಬ್ಯುಸಿಯಾಗುವಂತೆ ಮಾಡಿದನು. ಇತ್ತ ತಾನು ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದನು. ಹೀಗೆ ಇಬ್ಬರು ಜೀವನ ನಡೆಸುತ್ತಿದ್ದರು.

    ಆದರೆ ದೇವಿ ಬಗ್ಗೆ ತಿಳಿಯದೆ ರವಿ ನೊಂದಿದ್ದನು. ಸೋಮವಾರ ಲಕ್ಷ್ಮಿ ಮನೆಗೆ ಬಂದು ದೇವಿ ಬಗ್ಗೆ ವಿಚಾರಿಸಿದ್ದನು. ನಾನು ದೇವಿ ಒಂದಾಗಲು ಸಹಾಯ ಮಾಡು ಎಂದು ಲಕ್ಷ್ಮಿ ಬಳಿ ಕೇಳಿಕೊಂಡಿದ್ದನು. ಹೀಗಾಗಿ ಲಕ್ಷ್ಮಿ ದೇವಿ, ಶಂಕರ್ ಹಾಗೂ ತನ್ನ ಪತಿಗೆ ವಿಷಯ ತಿಳಿಸಿ ಮನೆಗೆ ಬರಲು ಹೇಳಿದಳು.

    ಮನೆಗೆ ಎಲ್ಲರೂ ಬಂದ ಮೇಲೆ ದೇವಿಯನ್ನು ಬಿಟ್ಟುಬಿಡು ಎಂದು ಶಂಕರ್, ಲಕ್ಷ್ಮಿ ಹಾಗೂ ಆಕೆಯ ಪತಿ ತಿಳಿ ಹೇಳಿದರೂ ರವಿ ಕೇಳಿರಲಿಲ್ಲ. ದೇವಿ ನನಗೆ ಬೇಕು ಎಂದು ರವಿ ಪಟ್ಟು ಹಿಡಿದು ಕುಳಿತಿದ್ದನು. ಈ ವೇಳೆ ಅವರ ನಡುವೆ ಮತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

    ರವಿ ತಮ್ಮ ಮಾತು ಕೇಳದಿದ್ದಾಗ ದೇವಿ ಹಾಗೂ ಆಕೆಯ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದು, ಕೈಗೆ ಸಿಕ್ಕ ಸುತ್ತಿಗೆ ಹಾಗೂ ದೊಣ್ಣೆಯಿಂದ ರವಿಯ ತಲೆಗೆ ಬಲವಾಗಿ ಹೊಡೆದು ಆತನನ್ನು ಕೊಲೆ ಮಾಡಿದ್ದಾರೆ. ಬಳಿಕ ದೇವಿಗೆ ತನ್ನ ತಪ್ಪಿನ ಅರಿವಾಗಿದ್ದು ಪೊಲೀಸರಿಗೆ ಶರಣಾಗಿದ್ದಾಳೆ. ಅಲ್ಲದೆ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಿ ತಪ್ಪೊಪ್ಪಿಕೊಂಡಿದ್ದಾಳೆ.

    ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ರವಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ರವಿ ಸಾವನ್ನಪ್ಪಿದ್ದನು. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಕಿಡ್ನಿ ದಾನ ಮಾಡಿ ತಮ್ಮನ ಜೀವ ಉಳಿಸಿದ ಅಕ್ಕ

    ಕಿಡ್ನಿ ದಾನ ಮಾಡಿ ತಮ್ಮನ ಜೀವ ಉಳಿಸಿದ ಅಕ್ಕ

    ಗಾಂಧಿನಗರ: ಕಿಡ್ನಿ ದಾನ ಮಾಡುವ ಮೂಲಕ ಗುಜರಾತಿನ ಗೊಂಡಾಲ್‍ನಲ್ಲಿ ಸಹೋದರಿಯೊಬ್ಬಳು ತನ್ನ ತಮ್ಮನ ಪ್ರಾಣ ಉಳಿಸಿದ್ದಾಳೆ.

    ಮನ್ಸುಖ್ ಭಾಯ್ ಕಿಡ್ನಿ ಫೆಲ್ಯೂರ್ ಆಗಿದ್ದು, 21 ಬಾರಿ ಡಯಾಲಿಸಿಸ್ ಆಗಿತ್ತು. ಆದರೆ ಇದರಿಂದ ಯಾವುದೇ ಉಪಯೋಗವಾಗಲಿಲ್ಲ. ಈ ವೇಳೆ ಮನ್ಸುಖ್ ಅವರ ಅಕ್ಕ ಗೀತಾ ಕಿಡ್ನಿ ದಾನ ಮಾಡುವ ಮೂಲಕ ತನ್ನ ತಮ್ಮನ ಜೀವ ಉಳಿಸಿದ್ದಾರೆ. ಸದ್ಯ ಅಕ್ಕ-ತಮ್ಮ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ವಕೀಲ ದಿನೇಶ್ ಭಾಯ್ ಪ್ರತಿಕ್ರಿಯಿಸಿ, ನಮ್ಮ ಇಬ್ಬರು ಸಹೋದರರ ಕುಟುಂಬದಲ್ಲಿ ಮನ್ಸುಖ್ ನನಗಿಂತ ಚಿಕ್ಕವನು. ಇಡೀ ಕುಟುಂಬ ಜೊತೆಯಲ್ಲಿ ವಾಸಿಸುತ್ತೇವೆ. ಅಲ್ಲದೆ ನಾವೆಲ್ಲರೂ ಸೇರಿ ಒಟ್ಟಿಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹೀಗಿರುವಾಗ ಮನ್ಸುಖ್ ಕಿಡ್ನಿ ಫೇಲ್ ಆಗಿದ್ದು, ಈ ವೇಳೆ ಆತನ ಸಹೋದರಿ ಗೀತಾ ಕಿಡ್ನಿ ಅಲ್ಲದೆ 1,001 ರೂ. ದಾನವಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ತಮ್ಮನಿಗಾಗಿ ಕಿಡ್ನಿ ದಾನ ಮಾಡಿದ ಸಹೋದರಿಗೆ ಸಂಬಂಧಿಕರು ಸೇರಿದಂತೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲದೆ ಆಸ್ತಿಗಾಗಿ ಅಣ್ಣ- ತಂಗಿಯರು, ಅಕ್ಕ- ತಮ್ಮಂದಿರು ಜಗಳವಾಡುವ ಈ ಕಾಲದಲ್ಲಿ ಕಿಡ್ನಿ ದಾನ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಗೀತಾರನ್ನು ಹೊಗಳುತ್ತಿದ್ದಾರೆ.

  • ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

    ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

    ಮುಂಬೈ: 8 ವರ್ಷದದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಇಂದು ಮೃತಪಟ್ಟಿದ್ದಾರೆ.

    ನಟನ ಸಹೋದರಿ ತಮ್ಶಿ ಸಿದ್ದಿಕಿ (26) ಅವರು ಇಂದು ಸಾವನ್ನಪ್ಪಿದ್ದಾರೆ. 18 ವರ್ಷ ವಯಸ್ಸಿನಲ್ಲಿಯೇ ತಮ್ಶಿ ಸಿದ್ದಿಕಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ತಮ್ಶಿ ಸುಮಾರು 8 ವರ್ಷಗಳ ಕಾಲ ಕಾಯಿಲೆ ವಿರುದ್ಧ ಹೋರಾಡಿ ಇಂದು ಸಾವನ್ನಪ್ಪಿದ್ದಾರೆ.

    ಸಹೋದರಿಯ ಸಾವಿನ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಅಮೆರಿಕದಲ್ಲಿ ನೋ ಲ್ಯಾಂಡ್ಸ್ ಮ್ಯಾನ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂದು ತಮ್ಮ ಸ್ವಗ್ರಾಮ ಉತ್ತರ ಪ್ರದೇಶದ ಬುಧಾನ ಗ್ರಾಮದಲ್ಲಿ ಅಂತ್ಯಕ್ರಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಈ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಸಹೋದರಿಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ತಾನು ಮತ್ತು ಸಹೋದರಿ ತಮ್ಶಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದ ಸಿದ್ದಿಕಿ, ನನ್ನ ಸಹೋದರಿ ಆಕೆಯ 18 ವಯಸ್ಸಿನಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಾಯಿಲೆಯ ವಿರುದ್ಧ ತಮ್ಮ ಮನೋಬಲ ಮತ್ತು ಅತ್ಮವಿಶ್ವಾಸದಿಂದ ಹೋರಾಡುತ್ತಾ ಬಂದಿದ್ದಾರೆ. ಅವಳಿಗೆ ಇಂದಿಗೆ 25 ವರ್ಷ ತುಂಬಿತು ಎಂದು ಬರೆದುಕೊಂಡಿದ್ದರು.

  • ಎಫ್‍ಬಿಯಲ್ಲಿ ಅನ್‍ಫ್ರೆಂಡ್ ಮಾಡಿದ್ದಕ್ಕೆ ಸಹೋದರಿಯನ್ನು ಗುಂಡಿಕ್ಕಿ ಕೊಂದ

    ಎಫ್‍ಬಿಯಲ್ಲಿ ಅನ್‍ಫ್ರೆಂಡ್ ಮಾಡಿದ್ದಕ್ಕೆ ಸಹೋದರಿಯನ್ನು ಗುಂಡಿಕ್ಕಿ ಕೊಂದ

    ವಾಷಿಂಗ್ಟನ್: ಫೇಸ್‍ಬುಕ್‍ನಲ್ಲಿ ಅನ್‍ಫ್ರೆಂಡ್ ಮಾಡಿದ್ದಕ್ಕೆ ಸಹೋದರನೊಬ್ಬ ತನ್ನ ತಂಗಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಅಮೆರಿಕದ ಅಲಾಸ್ಕಾದಲ್ಲಿ ನಡೆದಿದೆ.

    ಮೋಸೆಸ್ ಕ್ರೋವ್ ಗುಂಡಿಕ್ಕಿ ಕೊಲೆ ಮಾಡಿದ ಸಹೋದರ. ನವೆಂಬರ್ 28ರಂದು ಈ ಘಟನೆ ನಡೆದಿದ್ದು, ಅಂದು ಥ್ಯಾಂಕ್ಸ್ ಗಿವಿಂಗ್ ಇತ್ತು. ಅಮೆರಿಕದಲ್ಲಿ ವರ್ಷದ ಕೊನೆಯಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಮೂಲಕ ಧನ್ಯವಾದ ತಿಳಿಸುತ್ತಾರೆ. ಈ ದಿನಕ್ಕೆ ಥ್ಯಾಂಕ್ಸ್ ಗಿವಿಂಗ್ ಎಂದು ಕರೆಯುತ್ತಾರೆ.

    ಈ ಘಟನೆ ಬಗ್ಗೆ ಮೋಸೆಸ್ ಅಜ್ಜಿ ಪ್ರತಿಕ್ರಿಯೆ ನೀಡಿ, ಬೆಳಗ್ಗೆ 10 ಗಂಟೆಗೆ ಮೋಸೆಸ್ ಮನೆಗೆ ಬಂದನು. ಮೊದಲು ಆತ ತನ್ನ ನಾಯಿಯ ಜೊತೆ ಆಟವಾಡುತ್ತಿದ್ದನು. ಬಳಿಕ ತನ್ನ ಸಹೋದರಿ ಅಮಂಡಾ ಓವನ್ ಜೊತೆ ಜಗಳವಾಡಲು ಶುರು ಮಾಡಿದ್ದನು ಎಂದು ಹೇಳಿದ್ದಾರೆ.

    ಮೋಸೆಸ್ ಹಾಗೂ ಓವನ್ ನಡುವೆ ವಾಗ್ವಾದ ಹೆಚ್ಚಾಯಿತು. ಜಗಳವಾಡುವ ವೇಳೆ ಮೋಸೆಸ್ ಫೇಸ್‍ಬುಕ್‍ನಲ್ಲಿ ನನ್ನನ್ನು ಏಕೆ ಅನ್‍ಫ್ರೆಂಡ್ ಮಾಡಿದೆ ಎಂದು ಓವನ್‍ಗೆ ಪ್ರಶ್ನಿಸುತ್ತಿದ್ದನು. ಜಗಳ ಜೋರಾಗುತ್ತಿದ್ದಂತೆ ಮೋಸೆಸ್ ಪಿಸ್ತೂಲ್ ತೆಗೆದು ತನ್ನ ಸಹೋದರಿಯ ತಲೆಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಈ ವೇಳೆ ಓವನ್ ಕೈಯಲ್ಲಿ ಮಗುವಿತ್ತು ಎಂದರು.

    ನಾನು ನನ್ನ ತಂಗಿಯನ್ನು ಕೊಲೆ ಮಾಡಬೇಕು ಎಂದುಕೊಂಡಿರಲಿಲ್ಲ. ನಾನು ಕೇವಲ ನನ್ನ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಓಡಾಡುತ್ತಿದೆ. ಈ ವೇಳೆ ಬುಲೆಟ್ ಹಾರಿತು ಎಂದು ಮೋಸೆಸ್ ವಿಚಾರಣೆ ವೇಳೆ ಪೊಲೀಸರ ಬಳಿ ತಿಳಿಸಿದ್ದಾನೆ. ಪೊಲೀಸರು ಮೋಸೆಸ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

    14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

    ಮನಿಲಾ: ತನ್ನ ತಂಗಿಯನ್ನು ತಿನ್ನಲು ಬಂದ 14 ಅಡಿ ಮೊಸಳೆಯಿಂದ ಅಣ್ಣನೋರ್ವ ತಂಗಿಯನ್ನು ಕಾಪಾಡಿರುವ ಘಟನೆ ಫಿಲಿಪೈನ್ಸ್ ನ ಪಲವಾನ್‍ನಲ್ಲಿ ನಡೆದಿದೆ.

    ಧೈರ್ಯಶಾಲಿಯಾದ 15 ವರ್ಷದ ಹಾಶಿಮ್ ತನ್ನ 12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯನ್ನು ಮೊಸಳೆಯ ಬಾಯಿಂದ ಕಾಪಾಡಿದ್ದಾನೆ. ಹಾಶಿಮ್ ಮತ್ತು ಹೈನಾ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮನೆಗೆ ತೆರಳಲು ಬಿದಿರಿನ ಪಟ್ಟಿಯ ಮೇಲೆ ನದಿ ದಾಟುತ್ತಿದ್ದಾಗ ಮೊಸಳೆ ಹೈನಾಳ ಮೇಲೆ ದಾಳಿ ಮಾಡಿದೆ.

    ಹೈನಾ ಮತ್ತು ಹಾಶಿಮ್ ಇಬ್ಬರು ನದಿ ದಾಟುವಾಗ, ಹಾಶಿಮ್ ಬೇಗ ಮುಂದೆ ಹೋಗಿದ್ದಾನೆ. ಹೈನಾ ನಿಧಾನವಾಗಿ ಬರುತ್ತಿದ್ದ ವೇಳೆ ದಡ ಸಮೀಪಿಸಿದ ಹೈನಾಳ ಬಲಗಾಲನ್ನು ಮೊಸಳೆ ಜಿಗಿದು ಹಿಡಿದುಕೊಂಡಿದೆ. ಈ ವೇಳೆ ಕಿರುಚುತ್ತಿದ್ದ ತಂಗಿಯ ನೆರವಿಗೆ ಬಂದ ಅಣ್ಣ ಹಾಶಿಮ್ ಕಲ್ಲಿನಿಂದ ಮೊಸಳೆಯ ಬಾಯಿಗೆ ಹೊಡೆದು ನಂತರ ತನ್ನ ತಂಗಿಯನ್ನು ತನ್ನ ಕಡೆ ಎಳೆದುಕೊಂಡು ಮೊಸಳೆಯಿಂದ ಕಾಪಾಡಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ತಂಗಿ ಹೈನಾ, ಮೊಸಳೆ ನನಗಿಂತ ದೊಡ್ಡದಾಗಿತ್ತು. ನನಗೆ ಅದನ್ನು ನೋಡಿ ಭಯವಾಗಿತ್ತು. ಆದ್ದರಿಂದ ನಾನು ಭಯದಿಂದ ಅಳುತ್ತಿದ್ದೆ. ಅದು ನನ್ನ ಕಾಲನ್ನು ಹಿಡಿದುಕೊಂಡಿತ್ತು. ಆಗ ನನ್ನ ಸಹಾಯಕ್ಕೆ ಹಾಶಿಮ್ ಬಂದ ಅದರ ಬಾಯಿಗೆ ಕಲ್ಲಿನಿಂದ ಹೊಡೆದು ನನ್ನನ್ನು ಕಾಪಾಡಿದ ಎಂದು ಹೇಳಿದ್ದಾಳೆ.

    ಈ ಘಟನೆಯಲ್ಲಿ ಹೈನಾಳ ಬಲಗಾಲಿಗೆ ಗಂಭೀರವಾದ ಗಾಯವಾಗಿದ್ದು, ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಲೆಫ್ಟಿನೆಂಟ್ ಕರ್ನಲ್ ಸಾಕ್ರಟೀಸ್ ಫಾಲ್ಟಾಡೊ, ಈ ಭಾಗದ ನಿವಾಸಿಗಳಿಗೆ ಮೊಸಳೆಯಿಂದ ಇತ್ತೀಚೆಗೆ ಬಹಳ ತೊಂದರೆಯಾಗುತ್ತಿದೆ. ಮೊಸಳೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುವುದು. ಅವರ ಅಣ್ಣನ ಧೈರ್ಯದಿಂದ ಹುಡುಗಿ ಬದುಕಿ ಬಂದಿದ್ದಾಳೆ ಎಂದು ಹೇಳಿದ್ದಾರೆ.

  • ಡಾ. ರಾಜ್‍ಕುಮಾರ್ ಸಹೋದರಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಡಾ. ರಾಜ್‍ಕುಮಾರ್ ಸಹೋದರಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ವರನಟ ಡಾ. ರಾಜ್‍ಕುಮಾರ್ ಅವರ ಸಹೋದರಿ ನಾಗಮ್ಮ ಅಸ್ವಸ್ಥಗೊಂಡಿದ್ದು, ನಗರದ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕರ್ನಾಟಕದ-ತಮಿಳುನಾಡು ಗಡಿಭಾಗದಲ್ಲಿ ಇರುವ ಗಾಜನೂರಿನಲ್ಲಿ ನಾಗಮ್ಮ ವಾಸಿಸುತ್ತಿದ್ದಾರೆ. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅವರನ್ನು ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ನಾಗಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವಿಷಯ ನಟ ರಾಘವೇಂದ್ರ ರಾಜ್ ಕುಮಾರ್ ತಿಳಿಯಿತು. ತಕ್ಷಣ ಅವರು ತಮ್ಮ ಪತ್ನಿ ಮಂಗಳ ಅವರ ಜೊತೆ ಗುರುವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

    ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ನಾಗಮ್ಮ ಅವರನ್ನು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  • ಬೇರೆಯವ್ರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದು ನಿಲ್ಲಿಸಿ: ರಚಿತಾ ಗರಂ

    ಬೇರೆಯವ್ರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದು ನಿಲ್ಲಿಸಿ: ರಚಿತಾ ಗರಂ

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.

    ಇತ್ತೀಚೆಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದರು. ಬಳಿಕ ಸ್ವತಃ ರಶ್ಮಿಕಾ ಅವರೇ ಟ್ರೋಲ್‍ಗಳಿಗೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದರು. ಸದ್ಯ ರಚಿತಾ ರಾಮ್ ಇತ್ತೀಚೆಗಷ್ಟೇ ಟ್ರೋಲ್ ಆಗಿದ್ದ ರಶ್ಮಿಕಾ ವಿಚಾರವನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಟ್ರೋಲ್ ಮಾಡುವುದು ತಪ್ಪಲ್ಲ. ಆದರೆ ಪಾಸಿಟಿವ್ ಆಗಿ ಟ್ರೋಲ್ ಮಾಡಿ. ಈ ಸ್ಥಾನಕ್ಕೆ ಬರಲು ನಾವು ತುಂಬಾ ಕಷ್ಟಪಟ್ಟಿರುತ್ತೇವೆ. ನಾನು ನಮ್ಮ ಸ್ಥಾನಕ್ಕೆ ಗೌರವ ಕೊಡುತ್ತೇವೆ. ಹಾಗೆಯೇ ನೀವು ಬೇರೆಯವರಿಗೆ ಗೌರವ ಕೊಡಿ. ಬೇರೆಯವರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.

    ಇತ್ತ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಅವರ ಮದುವೆ ನಿಶ್ಚಯವಾಗಿದೆ. ಡಿಸೆಂಬರ್ 6ರಂದು ನಿತ್ಯಾ ಅವರು ಉದ್ಯಮಿಯನ್ನು ಮದುವೆ ಆಗಲಿದ್ದಾರೆ. ಉದ್ಯಮಿ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದು, ಸಹೋದರಿಯ ಮದುವೆ ವಿಚಾರವಾಗಿ ರಚಿತಾ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಉತ್ಸುಕಳಾಗಿದ್ದೇನೆ ಎಂದು ರಚಿತಾ ಸಂತಸ ವ್ಯಕ್ತಪಡಿಸಿದ್ದಾರೆ.