Tag: Sister-in-law

  • ಸೆಕ್ಸ್ ದಂಧೆಗೆ ನಿರಾಕರಣೆ – ಪತ್ನಿಯ ಮುಂದೆ ಅತ್ತಿಗೆಗೆ ಚಾಕು ಇರಿದು ಎಸ್ಕೇಪ್

    ಸೆಕ್ಸ್ ದಂಧೆಗೆ ನಿರಾಕರಣೆ – ಪತ್ನಿಯ ಮುಂದೆ ಅತ್ತಿಗೆಗೆ ಚಾಕು ಇರಿದು ಎಸ್ಕೇಪ್

    ಚಂಡೀಗಢ: ದೇಹ ವ್ಯಾಪಾರದ ದಂಧೆ ಮಾಡಲು ಒಪ್ಪದ್ದಕ್ಕೆ ಪತ್ನಿಯ ಮುಂದೆಯೇ ಅತ್ತಿಗೆಯನ್ನು ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಪಾಣಿಪತ್ ತಹ್ಸಿಲ್ ಕ್ಯಾಂಪ್ ಪ್ರದೇಶದ ಫತೇಪುರಿ ಚೌಕ್‍ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಕವಿತಾ ಮೃತ ಮಹಿಳೆ. ಆರೋಪಿ ಭಗತ್ ಅತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿಯ ಪತ್ನಿ ಪ್ರಿಯಾ ಮತ್ತು ಅತ್ತಿಗೆ ಕವಿತಾ ಇಬ್ಬರು ಔಷಧಿ ತರಲು ಮಾರುಕಟ್ಟೆಗೆ ಹೋಗಿದ್ದರು. ವಾಪಸ್ ಬರುವಾಗ ಊಟ ಮಾಡಲು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಆರೋಪಿ ಭಗತ್ ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿ, ಅತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಕವಿತಾಳನ್ನು ಸ್ಥಳದಲ್ಲಿದ್ದರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ.

    ಆರೋಪಿಯ ಕುಟುಂಬಸ್ಥರು ದೇಹ ವ್ಯಾಪಾರದ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಯ ಪತ್ನಿ ಪ್ರಿಯಾ ಆರೋಪಿಸಿದ್ದಾರೆ. ಹೀಗಾಗಿ ಆರೋಪಿಯ ಕುಟುಂಬದವರು ಭಗತ್ ಪತ್ನಿ ಮತ್ತು ಅತ್ತಿಗೆ ಕವಿತಾಗೆ ದೇಹ ವ್ಯಾಪಾರ ಮಾಡುವಂತೆ ಒತ್ತಡ ಹಾಕುತ್ತಿದ್ದರು. ಆದರೆ ಪ್ರಿಯಾ ಮತ್ತು ಕವಿತಾ ಇಬ್ಬರಿಗೂ ಈ ಕೆಲಸವನ್ನು ಮಾಡಲು ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಮನೆ ಬಿಟ್ಟು ಬಂದು ಪ್ರತ್ಯೇಕ ಮನೆ ಮಾಡಿ ವಾಸಿಸಲು ಪ್ರಾರಂಭಿಸಿದ್ದರು.

    ಮಕ್ಕಳಿಗೆ ಔಷಧಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ದಾರಿಯಲ್ಲಿ ಭಗತ್ ಬಂದು ಕವಿತಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಪರಾರಿಯಾಗಲು ಯತ್ನಿಸಿದ್ದು, ಆಗ ಜನರು ಆರೋಪಿ ಭಗತ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಅತ್ತಿಗೆಯನ್ನು ಕೊಲ್ಲಲು ಮನೆಕೆಲಸದವರಿಗೆ ಸುಪಾರಿ – ಜೈಲು ಸೇರಿದ ಮೈದುನ

    ಅತ್ತಿಗೆಯನ್ನು ಕೊಲ್ಲಲು ಮನೆಕೆಲಸದವರಿಗೆ ಸುಪಾರಿ – ಜೈಲು ಸೇರಿದ ಮೈದುನ

    ಮಡಿಕೇರಿ: ತಂದೆ ಮಾಡಿರುವ ಅಪಾರ ಆಸ್ತಿಯನ್ನು ತಾನೊಬ್ಬನೇ ಕಬಳಿಸಬೇಕೆಂಬ ದುರಾಸೆಯಿಂದ ಅಣ್ಣನ ಹೆಂಡತಿಯನ್ನೇ ಕೊಲೆ ಮಾಡಲು ಸುಪಾರಿ ಕೊಡಲು ಮುಂದಾಗಿದ್ದ ಮೈದುನನೋರ್ವ ಪೊಲೀಸರ ಅಥಿತಿಯಾಗಿದ್ದಾನೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವಾರದಲ್ಲಿ ಘಟನೆ ನಡೆದಿದೆ. ಚೇಲಾವರದಲ್ಲಿರುವ 70 ಎಕರೆ ಕಾಫಿ ಎಸ್ಟೇಟ್ ಮತ್ತು ಎರಡು ಹೋಂ ಸ್ಟೇಗಳನ್ನು ತಾನೇ ಕಬಳಿಸಬೇಕು ಎನ್ನುವ ದುರಾಸೆಗೆ ಬಿದ್ದಿದ್ದ ಆರೋಪಿ ಸುಬ್ಬಯ್ಯ, ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಕಾರ್ಮಿಕರಿಗೆ 5 ಲಕ್ಷ ಕೊಡುತ್ತೇನೆ ತನ್ನ ಅತ್ತಿಗೆಯನ್ನ ಕೊಲೆ ಮಾಡಿ ಬಿಡಿ ಸುಪಾರಿ ಕೊಟ್ಟಿದ್ದಾನೆ.

    ಆದರೆ ಇದನ್ನು ಒಪ್ಪದ ಅಸ್ಸಾಂ ಕಾರ್ಮಿಕರು ಅವರ ಮನೆಯನ್ನೇ ಬಿಟ್ಟುಹೋಗಲು ರೆಡಿಯಾಗಿದ್ದಾರೆ. ಈ ಕಾರಣದಿಂದ ಸಿಟ್ಟಿಗೆದ್ದ ಸುಬ್ಬಯ್ಯ ಕಾರ್ಮಿಕರ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳನ್ನು ಕಿತ್ತುಕೊಂಡು ಕೊಡೋದಿಲ್ಲ ಎಂದು ಧಮ್ಕಿ ಹಾಕಿದ್ದಾನೆ. ಇದರಿಂದ ಹೆದರಿದ ಅಸ್ಸಾಂ ಕಾರ್ಮಿಕರು ಕೊಡಗಿನ ಎಸ್‍ಪಿಗೆ ದೂರು ನೀಡಿದ್ದಾರೆ.

    ಅಷ್ಟೇ ಅಲ್ಲದೇ ಅಣ್ಣನ ಹೆಂಡತಿ ರೇಖಾ ಪೂವಯ್ಯ ಅವರನ್ನು ಮುಗಿಸಲು ಅನೇಕ ದಿನಗಳಿಂದ ಪ್ಲಾನ್ ಮಾಡುತ್ತಿದ್ದಾನೆ ಎಂದು ರೇಖಾ ಪೂವಯ್ಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅತ್ತಿಗೆಯನ್ನೇ ಮುಗಿಸಲು ಸುಪಾರಿ ನೀಡಲು ಮುಂದಾಗಿದ್ದ ಸುಬ್ಬಯ್ಯನನ್ನು ಬಂಧಿಸಿದ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

  • ಅತ್ತಿಗೆ ಮೇಲೆ ಮೈದುನನಿಂದ ಆಸಿಡ್ ದಾಳಿ

    ಅತ್ತಿಗೆ ಮೇಲೆ ಮೈದುನನಿಂದ ಆಸಿಡ್ ದಾಳಿ

    ಬೆಂಗಳೂರು: ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕಂಡಕ್ಟರ್ ಇಂದಿರಾಬಾಯಿ ಮೇಲೆ ಆಸಿಡ್ ಹಾಕಿದ್ದು ಮೈದುನ ಅರುಣ್ ನಾಯಕ್ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

    ಅರುಣ್ ನಾಯಕ್ ಪೀಣ್ಯ ಡಿಪೋದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ಇಂದಿರಾಬಾಯಿ ಶಾಂತಿನಗರ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇಂದಿರಾಬಾಯಿ, ಅರುಣ್ ನಾಯಕ್ ಗೆ ಸಂಬಂಧದಲ್ಲಿ ಅತ್ತಿಗೆ ಆಗಬೇಕು. ಹೀಗಿದ್ದು ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

    ಇತ್ತೀಚೆಗೆ ಇಂದಿರಾಬಾಯಿ ಬೇರೊಂದು ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಅರುಣ್ ಕುಮರ್ ಗೆ ತಿಳಿಯಿತು. ಬಳಿಕ ಅರುಣ್ ಈ ವಿಷಯವಾಗಿ ತನ್ನ ಅತ್ತಿಗೆ ಇಂದಿರಾಬಾಯಿ ಜೊತೆ ಜಗಳವಾಡಿದ್ದನು. ಇದೇ ವಿಚಾರಕ್ಕೆ ಕೋಪಗೊಂಡ ಅರುಣ್ ನಾಯಕ್ ಆಸಿಡ್ ದಾಳಿ ನಡೆಸಿದ್ದಾನೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಬಿಎಂಟಿಸಿ ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೈದುನ ಅರುಣ್ ನಾಯಕ್ ಆತನ ಸ್ನೇಹಿತ ಕುಮಾರ್ ನಾಯಕ್‍ನನ್ನು ಬಂಧಿಸಿದ್ದಾರೆ.

  • ಒಂದೇ ಮಂಟಪದಲ್ಲಿ ಪತ್ನಿ, ನಾದಿನಿಯನ್ನು ಮದ್ವೆಯಾದ ಪತಿ

    ಒಂದೇ ಮಂಟಪದಲ್ಲಿ ಪತ್ನಿ, ನಾದಿನಿಯನ್ನು ಮದ್ವೆಯಾದ ಪತಿ

    ಭೋಪಾಲ್: ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಪತ್ನಿ ಹಾಗೂ ನಾದಿನಿಯನ್ನು ಮದುವೆಯಾದ ಅಪರೂಪದ ಘಟನೆಯೊಂದು ಮಧ್ಯಪ್ರದೇಶದ ಭೈಂಡ್ ಗ್ರಾಮದಲ್ಲಿ ಕಂಡು ಬಂದಿದೆ.

    ದಿಲೀಪ್ ಎಂಬವರು ಒಂದೇ ಮಂಟಪದಲ್ಲಿ ತನ್ನ ಪತ್ನಿ ಹಾಗೂ ನಾದಿನಿಯನ್ನು ಮದುವೆಯಾಗಿದ್ದಾರೆ. ದಿಲೀಪ್ ಮೊದಲು ತಮ್ಮ ನಾದಿನಿ ರಚನಾರನ್ನು ಮದುವೆಯಾಗಿದ್ದಾರೆ. ಬಳಿಕ ಅದೇ ಮಂಟಪದಲ್ಲಿ ತಮ್ಮ ಪತ್ನಿ ವಿನಿತಾರನ್ನು ಮರು ಮದುವೆಯಾಗಿದ್ದಾರೆ.

    9 ವರ್ಷಗಳ ಹಿಂದೆ ದಿಲೀಪ್, ವಿನಿತಾರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ವಿನಿತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ದಿಲೀಪ್, ವಿನಿತಾ ಅವರ ಸಹೋದರಿ ರಚನಾರನ್ನೇ ಮದುವೆಯಾಗಿದ್ದಾರೆ.

    ದಿಲೀಪ್ ಹೂ ಮಾಲೆ ಹಾಕುವಾಗ ಇಬ್ಬರೂ ವೇದಿಕೆ ಮೇಲೆಯೇ ಇದ್ದರು. ದಿಲೀಪ್ ತನ್ನ ಪತ್ನಿಗೆ ವಿನಿತಾಗೆ ಹೂ ಮಾಲೆ ಹಾಕಿದ್ದಾರೆ. ನಂತರ ತಮ್ಮ ನಾದಿನಿ ರಚನಾಗೆ ಹೂವಿನ ಹಾರ ಹಾಕಿ ಪತ್ನಿಯಾಗಿ ಸ್ವೀಕರಿಸಿದ್ದಾರೆ.

    ಈ ಬಗ್ಗೆ ದಿಲೀಪ್ ಪ್ರತಿಕ್ರಿಯೆ ನೀಡಿ, ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ನಮಗೆ ಪುಟ್ಟ ಪುಟ್ಟ ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು ನಾನು ಮತ್ತೊಂದು ಮದುವೆಯಾಗಲು ನಿರ್ಧರಿಸಿದೆ. ನಾನು ನನ್ನ ನಾದಿನಿ ರಚನಾಳನ್ನು ಇಷ್ಟಪಡುತ್ತಿದ್ದೆ. ಮತ್ತೊಂದು ಮದುವೆಯ ವಿಷಯ ಬಂದಾಗ ನಾನು ಮೊದಲು ಈ ಮಾತನ್ನು ನನ್ನ ಪತ್ನಿಗೆ ಹೇಳಿದೆ. ರಚನಾ ಒಪ್ಪಿದ ಬಳಿಕ ನಾನು ಆಕೆಯನ್ನು ಮದುವೆಯಾದೆ ಎಂದು ತಿಳಿಸಿದ್ದಾರೆ.

  • ಪ್ರೇಯಸಿ ಜೊತೆ ತಗ್ಲಾಕ್ಕೊಂಡ ಪತಿಗೆ ರಸ್ತೆಯಲ್ಲೇ ಜುಟ್ಟಿಡಿದು ಬಡಿದ ಪತ್ನಿ, ನಾದಿನಿ

    ಪ್ರೇಯಸಿ ಜೊತೆ ತಗ್ಲಾಕ್ಕೊಂಡ ಪತಿಗೆ ರಸ್ತೆಯಲ್ಲೇ ಜುಟ್ಟಿಡಿದು ಬಡಿದ ಪತ್ನಿ, ನಾದಿನಿ

    – ನೆಲಕ್ಕೆ ಬೀಳಿಸಿ ಯುವತಿಗೆ ಧರ್ಮದೇಟು
    – ತಪ್ಪಿಸಲು ಹೋದ ಪತಿಗೆ ಬಿತ್ತು ಪೊರಕೆ ಏಟು

    ಭೋಪಾಲ್: ಪ್ರೇಯಸಿ ಜೊತೆ ಸಿನಿಮಾಗೆ ಹೋಗಿ ಸಿಕ್ಕಿಬಿದ್ದ ಪತಿಗೆ ರಸ್ತೆಯಲ್ಲೇ ಪೊರಕೆಯಿಂದ ಹೊಡೆದು ಪತ್ನಿ, ನಾದಿನಿ ಗ್ರಹಚಾರ ಬಿಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪತ್ನಿ ಹಾಗೂ ಆಕೆಯ ತಂಗಿ ನಡುರಸ್ತೆಯಲ್ಲೇ ಪತಿ ಹಾಗೂ ಯುವತಿಗೆ ಪೊರಕೆ ಏಟು ಕೊಟ್ಟ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಲವರ್ ಜೊತೆ ಆರಾಮಾಗಿ ಸಿನಿಮಾ ನೋಡಲು ಪತಿ ಇಂದೋರ್‌ನ ಖಜ್ರಾನ ಪೊಲೀಸ್ ಠಾಣೆ ಬಳಿಯ ವೆಲಾಸಿಟಿ ಚಿತ್ರ ಮಂದಿರಕ್ಕೆ ಹೋಗಿದ್ದ. ಈ ಬಗ್ಗೆ ತಿಳಿದು ಪತ್ನಿ ಹಾಗೂ ಆಕೆಯ ತಂಗಿ ಸ್ಥಳಕ್ಕೆ ಹೋಗಿ ಸಿನಿಮಾ ಮುಗಿಯುವವರೆಗೂ ಚಿತ್ರಮಂದಿರದ ಹೊರಗೆ ಪತಿಯನ್ನು ರೆಡ್ ಹ್ಯಾಡ್ ಆಗಿ ಹಿಡಿಯಲು ಕಾದು ಕುಳಿತ್ತಿದ್ದರು.

    ಸಿನಿಮಾ ಮುಗಿದ ಬಳಿಕ ಪತಿ ಜೊತೆ ಮತ್ತೊಂದು ಯುವತಿ ನೋಡಿ ಪತ್ನಿ ಹಾಗೂ ನಾದಿನಿ ಕೆಂಡಾಮಂಡಲವಾಗಿದ್ದು, ನಡುರಸ್ತೆಯಲ್ಲೇ ಯುವತಿ ಕೂದಲು ಹಿಡಿದು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ನೆಲಕ್ಕೆ ಬೀಳಿಸಿ ಥಳಿಸಿದ್ದಾರೆ. ಈ ವೇಳೆ ಪತಿ ಪ್ರಿಯತಮೆಯನ್ನು ಬಿಡಿಸಲು ಮಧ್ಯೆ ಬಂದಾಗ ಇನ್ನಷ್ಟು ರೊಚ್ಚಿಗೆದ್ದು ಆಕೆ ಜೊತೆ ಪತಿಗೂ ಗೂಸಾ ಕೊಟ್ಟಿದ್ದಾರೆ. ಪೊರಕೆಯಿಂದ ಹೊಡೆದು ಗ್ರಹಚಾರ ಬಿಡಿಸಿದ್ದಾರೆ.

    ಈ ವೇಳೆ ಸ್ಥಳೀಯರು ಗಲಾಟೆ ನಿಲ್ಲಿಸಲು ಮಧ್ಯೆ ಬಂದರೂ ಏನು ಪ್ರಯೋಜನವಾಗಿಲ್ಲ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ನಿಲ್ಲಿಸಲು ಹರಸಾಹಸವನ್ನೇ ಪಟ್ಟಿದ್ದಾರೆ. ನಂತರ ಪತ್ನಿ, ನಾದಿನಿ, ಪತಿ ಹಾಗೂ ಆತನ ಲವರ್‌ನನ್ನು ಠಾಣೆಗೆ ಕರೆದೊಯ್ದಿದಾರೆ. ಅಲ್ಲಿ ರಾಜಿ ಮಾಡಿಸಲು ಪ್ರಯತ್ನಿಸಿದರೂ ಪತಿ ವಿರುದ್ಧ ಸಿಡಿದೆದ್ದಿದ್ದ ಪತ್ನಿ ಯಾವುದಕ್ಕೂ ಒಪ್ಪಲಿಲ್ಲ.

    ಹೀಗಾಗಿ ಮೋಸ ಮಾಡಿದ ಪತಿ ಹಾಗೂ ಆತನ ಲವರ್ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪತಿ ಹಾಗೂ ಆತನ ಪ್ರಿಯತೆಮೆಗೆ ಪತ್ನಿ, ನಾದಿನಿ ಸೇರಿ ಕೊಟ್ಟ ಪೊರಕೆ ಏಟಿನ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಸದ್ಯ ಎಲ್ಲೆಡೆ ವಿಡಿಯೋ ಸಖತ್ ವೈರಲ್ ಆಗಿದೆ.

  • ಮುಂದೊಂದು ದಿನ ರಾಜನಂತೆ ಬಾಳ್ತಾನೆ – ಬಿಎಸ್‍ವೈಗೆ ಬಾಲ್ಯದಲ್ಲೇ  ಶ್ರೀಗಳ ಆಶೀರ್ವಾದ

    ಮುಂದೊಂದು ದಿನ ರಾಜನಂತೆ ಬಾಳ್ತಾನೆ – ಬಿಎಸ್‍ವೈಗೆ ಬಾಲ್ಯದಲ್ಲೇ ಶ್ರೀಗಳ ಆಶೀರ್ವಾದ

    ಮಂಡ್ಯ: ಮುಂದೊಂದು ದಿನ ಈತ ರಾಜನಂತೆ ಬಾಳುತ್ತಾನೆ ಎಂದು ಯಡಿಯೂರಪ್ಪನವರಿಗೆ ಬಾಲ್ಯದಲ್ಲೇ ಸ್ವಾಮೀಜಿಗಳು ಆಶೀರ್ವಾದ ಸಿಕ್ಕಿತ್ತು.

    ಯಡಿಯೂರಪ್ಪ ಚಿಕ್ಕಂದಿನಲ್ಲೇ ರಾಜನ ರೀತಿ ಇದ್ದವರು. ಅವರನ್ನು ನೋಡಿ ಬೇಬಿ ಮಠದ ಸ್ವಾಮಿ ಇವನು ಮುಂದೊಂದು ದಿನ ರಾಜನಂತೆ ಬಾಳುತ್ತಾನೆ ಎಂದು ಆಶೀರ್ವಾದ ಮಾಡಿದ್ದರು ಎಂದು ಬಿಎಸ್‍ವೈ ಅತ್ತಿಗೆ ಶಾರದಮ್ಮ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

    ಯಡಿಯೂರಪ್ಪ ಸ್ವಗ್ರಾಮ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾರದಮ್ಮ, ಯಡಿಯೂರಪ್ಪ ಇದೇ ಮನೆಯಲ್ಲಿ ಹುಟ್ಟಿ ಬೆಳೆದಿದ್ದು. ಹಿಂದೆ ಈ ಜಾಗದಲ್ಲಿ ಹಳೇ ಮನೆಯಿತ್ತು. ಈಗ ಹೊಸ ಮನೆ ಕಟ್ಟಲಾಗಿದೆ ಎಂದು ಹೇಳಿದರು.

    ಮೈದುನ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದು ತಡವಾಗುತ್ತಿದೆಯಲ್ಲ ಎಂದು ಎರಡು ದಿನದಿಂದ ಸರಿಯಾಗಿ ಊಟ ಕೂಡ ಸೇರುತ್ತಿರಲಿಲ್ಲ. ಇದೀಗ ಅವರು ಮುಖ್ಯಮಂತ್ರಿ ಆಗುತ್ತಿರುವುದು ನಮಗೆ ಅತೀವ ಖುಷಿಯಾಗಿದೆ ಎಂದು ಬಿಎಸ್‍ವೈ ಅತ್ತಿಗೆ ಶಾರದಮ್ಮ ಸಂಭ್ರಮ ವ್ಯಕ್ತಪಡಿಸಿದರು.

  • ‘ಲೋಕಸಮರ’ದ ಟಿಕೆಟ್‍ಗಾಗಿ ಲಾಬಿ: ವಿಜಯಪುರದಲ್ಲಿ ಅತ್ತಿಗೆ-ಮೈದುನನ ನಡುವೆಯೇ ಫೈಟ್

    ‘ಲೋಕಸಮರ’ದ ಟಿಕೆಟ್‍ಗಾಗಿ ಲಾಬಿ: ವಿಜಯಪುರದಲ್ಲಿ ಅತ್ತಿಗೆ-ಮೈದುನನ ನಡುವೆಯೇ ಫೈಟ್

    ವಿಜಯಪುರ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಲು-ಗೆಲುವಿಗಿಂತ ಹೆಚ್ಚಾಗಿ ಟಿಕೆಟ್ ಫೈಟ್ ಜೋರಾಗಿದೆ. ನಗರದಲ್ಲಿ ಒಂದೇ ಕುಟುಂಬದ ಅತ್ತಿಗೆ-ಮೈದುನನ ನಡುವೆಯೇ ಟಿಕೆಟ್‍ಗಾಗಿ ಯುದ್ಧ ಶುರುವಾಗಿದೆ.

    ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‍ಗಾಗಿ ಲಾಬಿ ಜೋರಾಗಿದೆ. ಅದೇ ರೀತಿ ಜೆಡಿಎಸ್ ಪಾಲಾಗಿರುವ ವಿಜಯಪುರದಲ್ಲಿ ಟಿಕೆಟ್‍ಗಾಗಿ ಅತ್ತಿಗೆ-ಮೈದುನನ ನಡುವೆ ಕಾದಾಟ ಶುರುವಾಗಿದೆ. ನಾಗಠಾಣಾ ಶಾಸಕ ದೇವಾನಂದ್ ಚವ್ಹಾಣ್‍ರ ಪತ್ನಿ ಸುನಿತಾ ಚವ್ಹಾಣ್ ಮತ್ತು ತಮ್ಮ ರವಿಕುಮಾರ್ ಜೆಡಿಎಸ್ ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ.

    ಈ ಹಿಂದೆ ದೇವಾನಂದ್ ಚವ್ಹಾಣ್ ಶಾಸಕರಾಗುವಲ್ಲಿ ತಮ್ಮ ರವಿಕುಮಾರ್ ಪಾತ್ರ ಮಹತ್ವದ್ದಾಗಿತ್ತು. ಹೀಗಾಗಿ ನನಗೆ ಟಿಕೆಟ್ ಕೊಡಿ ಎಂದು ರವಿಕುಮಾರ್ ಕೇಳುತ್ತಿದ್ದಾರೆ. ಆದರೆ ವಿಜಯಪುರದಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡದೆ ಅದೆಷ್ಟೋ ವರ್ಷಗಳು ಉರುಳಿವೆ. ಹೀಗಾಗಿ ಈ ಬಾರಿಯಾದರೂ ನನಗೆ ಟಿಕೆಟ್ ಕೊಡಿ ಎಂದು ಸುನಿತಾ ಪಟ್ಟು ಹಿಡಿದಿದ್ದಾರೆ.

    ಒಟ್ಟಿನಲ್ಲಿ ಅತ್ತಿಗೆ- ಮೈದುನ ನಡುವಿನ ಟಿಕೆಟ್ ಯುದ್ಧದಿಂದ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಟಿಕೆಟ್ ಕೊಡೋದು ಬಿಡೋದು ಜೆಡಿಎಸ್ ವರಿಷ್ಠ ದೇವೇಗೌಡ್ರ ಕೈಯಲ್ಲಿದ್ದು, ಅವರು ಏನ್ ಮಾಡ್ತಾರೆ..? ಹೇಗೆ ಸಮಸ್ಯೆ ಬಗೆಹರಿಸ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ನಾದಿನಿ ಜೊತೆ ಪುರಸಭೆ ಸದಸ್ಯ ಸರಸ ಸಲ್ಲಾಸ- ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ

    ನಾದಿನಿ ಜೊತೆ ಪುರಸಭೆ ಸದಸ್ಯ ಸರಸ ಸಲ್ಲಾಸ- ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ

    ಬಳ್ಳಾರಿ: ಶಾಸಕ ಪರಮೇಶ್ವರ್ ನಾಯ್ಕ ಬಲಗೈ ಬಂಟ, ಹಾಲಿ ಹಡಗಲಿ ಪುರಸಭೆಯ ಸದಸ್ಯನೊಬ್ಬ ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

    ಹಡಗಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ 15ನೇ ವಾರ್ಡ್ ಸದಸ್ಯನಾಗಿರುವ ಕೆ.ಎಸ್ ರೆಹಮಾನ್ ತನ್ನ ಪತ್ನಿಯ ಸಹೋದರಿಯ ಜೊತೆ ಸರಸ ಸಲ್ಲಾಪ ಮಾಡಿದ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ರೆಹಮಾನ್ ವಿವಾಹಿತೆಯಾಗಿರುವ ಪತ್ನಿಯ ಸಹೋದರಿಗೆ ಮೌತ್ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ್ದಾರೆ.

    ಈ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದಂತೆ ರೆಹಮಾನ್ ಪತ್ನಿಯ ಸಹೋದರಿಯ ಮನೆಯವರು ಥಳಿಸಲು ಮುಂದಾಗುತ್ತಿದ್ದಂತೆ ರೆಹಮಾನ್ ನನ್ನು ಪೊಲೀಸರು ಕರೆದೊಕೊಂಡು ಹೋಗಿದ್ದಾರೆ. ಈ ಪ್ರಕರಣದಲ್ಲಿ ಕೆಲವರು ರಾಜಿ ಪಂಚಾಯತಿ ಮಾಡಿಸಲು ಮುಂದಾಗಿದ್ದು, ಸದ್ಯ ಈ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

    ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

    ದಾವಣಗೆರೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ಮೈದುನ ತನ್ನ ಅತ್ತಿಗೆ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ವೆಂಕಟೇಶ್ ಹಾಗೂ ಸುಶೀಲಾ ಹಲ್ಲೆಗೊಳಗಾದವರಾಗಿದ್ದು, ಮೈದುನ ತಿಮ್ಮೇಶ್ ಸಂತೆಬೆನ್ನೂರಿನಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ಸುಶೀಲಾ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಮೊಬೈಲ್ ನಲ್ಲಿ ಬೇರೆಯವರೊಂದಿಗೆ ಬಹಳ ಮಾತನಾಡುತ್ತೀಯಾ ಎಂದು ಅಕ್ರಮ ಸಂಬಂಧ ಇದೆಯೊಂದು ಮೈದುನ ತಿಮ್ಮೇಶ್ ಜಗಳವಾಡಿ ಸಂಬಂಧ ಕಟ್ಟಿದ್ದಾನೆ.

    ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ರಾಜಿ ಸಂಧಾನ ಸಹ ನಡೆದಿತ್ತು. ಆದರೆ ಕಳೆದ ರಾತ್ರಿ ತಿಮ್ಮೇಶ್ ಹಾಗೂ ಆತನ ಅಕ್ಕಂದಿರು ಸೇರಿ ಸುಶೀಲಾ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರೆ. ಇನ್ನೂ ಮೈದುನ ತಿಮ್ಮೇಶ್ ಹಾಗೂ ಆತನ ಅಕ್ಕಂದಿರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

  • ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು: ಉಡುಪಿಯಲ್ಲಿ ವಿಶ್ವನಾಥ ಶೆಟ್ಟಿ ಅತ್ತಿಗೆ ವಿಷಾದ

    ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು: ಉಡುಪಿಯಲ್ಲಿ ವಿಶ್ವನಾಥ ಶೆಟ್ಟಿ ಅತ್ತಿಗೆ ವಿಷಾದ

    ಉಡುಪಿ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೂಲತಃ ಉಡುಪಿ ಜಿಲ್ಲೆಯ ಉಪ್ಪೂರಿನವರಾದ ವಿಶ್ವನಾಥ ಶೆಟ್ಟಿಯವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ವಿಶ್ವನಾಥ ಶೆಟ್ಟಿ ತಮ್ಮನ ಹೆಂಡತಿ ಅಂದ್ರೆ ಅತ್ತಿಗೆ ಜಯಂತಿ ಉಡುಪಿಯಲ್ಲಿದ್ದಾರೆ. ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಅವರು ನೋವು ವ್ಯಕ್ತಪಡಿಸಿದರು. ಇದನ್ನೂ ಓದಿ: ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಸರ್ಕಾರ ಲೋಕಾಯುಕ್ತರಿಗೆ ಸೂಕ್ತ ಭಧ್ರತೆ ಕೊಡಬೇಕಿತ್ತು. ಲೋಕಾಯುಕ್ತರಿಗೆ ಈ ಪರಿಸ್ಥಿತಿಯಾದ್ರೆ, ರಾಜ್ಯದ ಜನರ ಪಾಡೇನು ಅಂತ ಪ್ರಶ್ನಿಸಿದ್ದಾರೆ. ವಿಶ್ವನಾಥ ಶೆಟ್ಟಿ ಬಹಳ ಸಾಧು ಸ್ವಭಾವದ ವ್ಯಕ್ತಿ. ಅವರು ಯಾವತ್ತೂ ಜೋರಾಗಿ ಮಾತನಾಡಿದವರೇ ಅಲ್ಲ. ಎಲ್ಲವನ್ನೂ ಸಮಾಧಾನವಾಗಿ- ಸಾವಕಾಶವಾಗಿ ತೀರ್ಮಾನ ಮಾಡುವ, ತೀರ್ಪು ಕೊಡುವವರು ಅಂತ ಅವರು ಹೇಳಿದರು.  ಇದನ್ನೂ ಓದಿ: ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ವಿಶ್ವನಾಥ ಶೆಟ್ಟರು ಕುಟುಂಬಸ್ಥರ ಜೊತೆಗೂ ಹಾಗೆಯೇ ನಡೆದುಕೊಳ್ಳುವವರು, ಬಹಳ ತಾಳ್ಮೆ ಇರುವ ವ್ಯಕ್ತಿ. ಅಂತ ಹೇಳಿದ್ದಾರೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಹಲವು ಕಾನೂನು ರೀತಿಯ ಸಲಹೆಗಳನ್ನು ಕೊಡುತ್ತಾರೆ. ಅನ್ಯಾಯದ ವಿರುದ್ಧ ತನ್ನ ವೃತ್ತಿ ಜೀವನದಲ್ಲಿ ನಿರಂತರ ಹೋರಾಟ ಮಾಡಿದವರು ಎಂದು ಹೇಳಿದರು. ಟಿವಿ ನೋಡಿ ಅಂತ ಬೆಂಗಳೂರಿನಿಂದ ಪರಿಚಯಸ್ಥರು ಫೋನ್ ಮಾಡಿದಾಗಲೇ ಗೊತ್ತಾಯ್ತು. ಇದನ್ನೂ ಓದಿ: ಲೋಕಾಯುಕ್ತದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ತೇಜಸ್ ಶರ್ಮಾ

    10 ವರ್ಷ ಹೈಕೋರ್ಟಲ್ಲಿ, ನಂತರ ಸುಪ್ರೀಂ ಕೋರ್ಟ್ ನಲ್ಲಿ ವೃತ್ತಿ ಮಾಡುತ್ತಿದ್ದಾಗ ಒಂದೇ ಒಂದು ತಪ್ಪು ನಡೆಗಳನ್ನ ಇಟ್ಟವರಲ್ಲ. ಎಲ್ಲವನ್ನೂ ಅಳೆದು ತೂಗೆಯೇ ತೀರ್ಪು ಕೊಡುತ್ತಿದ್ದರು. ಕಳೆದ ತಿಂಗಳು ಉಡುಪಿಗೆ ಬಂದಿದ್ದರು. ದೇವರ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು. ಧಾರ್ಮಿಕ ಆಚರಣೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಇದನ್ನೂ ಓದಿ: ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ