Tag: Sister-in-law

  • ಅತ್ತಿಗೆಯ ಶಿರಚ್ಛೇದನ, ರುಂಡ ಹಿಡಿದು ಊರೆಲ್ಲಾ ಸುತ್ತಾಡಿ ಪೊಲೀಸರಿಗೆ ಶರಣಾದ ದುಷ್ಕರ್ಮಿ

    ಅತ್ತಿಗೆಯ ಶಿರಚ್ಛೇದನ, ರುಂಡ ಹಿಡಿದು ಊರೆಲ್ಲಾ ಸುತ್ತಾಡಿ ಪೊಲೀಸರಿಗೆ ಶರಣಾದ ದುಷ್ಕರ್ಮಿ

    ಕೋಲ್ಕತ್ತಾ: ವ್ಯಕ್ತಿಯೊಬ್ಬ ಆತನ ಅತ್ತಿಗೆಯ ಶಿರಚ್ಛೇದನ ಮಾಡಿ, ರುಂಡವನ್ನು ಹಿಡಿದು ಊರೆಲ್ಲಾ ಸುತ್ತಾಡಿ, ಪೊಲೀಸ್ ಠಾಣೆಯಲ್ಲಿ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಸಂತಿ (Basanti) ಪ್ರದೇಶದ ಭರತ್‌ಗಢದ ಸತಿ ಮಂಡಲ್ ಹತ್ಯೆಗೀಡಾದ ದುರ್ದೈವಿ. ಆಕೆಯ ಪತಿಯ ತಮ್ಮ ಬಿಮಲ್ ಮಂಡಲ್ ಕೊಲೆ ಆರೋಪಿಯಾಗಿದ್ದಾನೆ. ಇದನ್ನೂ ಓದಿ: ಪಾಕ್ ಪರ ನೀಡಿದ್ದ ಹೇಳಿಕೆಗೆ ಶಶಿ ತರೂರ್ ಆಕ್ಷೇಪ ಬೆನ್ನಲ್ಲೇ ಕೊಲಂಬಿಯಾ ಯೂಟರ್ನ್ – ಭಾರತಕ್ಕೆ ರಾಜತಾಂತ್ರಿಕ ಯಶಸ್ಸು

    ಬಿಮಲ್ ಮತ್ತು ಅತ್ತಿಗೆ ಸತಿ ಮಂಡಲ್‌ನ ಜೊತೆ ಜಗಳವಾಡಿದ್ದ. ಇಬ್ಬರ ಜಗಳವು ತಾರಕಕ್ಕೇರಿದ್ದು, ಬಿಮಲ್ ಕುಡುಗೋಲಿನಿಂದ ಅತ್ತಿಗೆಯ ಶಿರಚ್ಛೇದನ ಮಾಡಿದ್ದ. ಬಳಿಕ ಈ ರುಂಡವನ್ನು ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದ. ಬಳಿಕ ಕುಡುಗೋಲು ಹಾಗೂ ರುಂಡದ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಆರೋಪಿ ಬಿಮಲ್ ಮಂಡಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

    ಮಹಿಳೆಯ ರುಂಡವನ್ನು ಹಿಡಿದು ರಸ್ತೆಯಲ್ಲಿ ಓಡಾಡಿದ ವ್ಯಕ್ತಿಯ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಸಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅತ್ತಿಗೆಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ಅತ್ತಿಗೆಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ದಾವಣಗೆರೆ: ಅವರಿಬ್ಬರು ಅಕ್ಕ-ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಿಯವಾಗಿತ್ತು. ಅಣ್ಣ ಮದುವೆಯಾಗಬೇಕಿದ್ದ ಹುಡುಗಿಯ ಮೇಲೆ ಮೈದುನನಿಗೆ ಪ್ರೇಮಾಂಕುರ ಆಗಿತ್ತು. ಹೀಗಾಗಿ ಅತ್ತಿಗೆ ಆಗಬೇಕಾಗಿದ್ದವಳ ಮೇಲೆ ಕಣ್ಣು ಹಾಕಿದ್ದ ಎಂಬ ಒಂದೇ ಕಾರಣಕ್ಕೆ ಕಿರಾತಕ ಅಣ್ಣ ತಮ್ಮನ ಕತ್ತು ಸೀಳಿ ಕಥೆ ಮುಗಿಸಿದ್ದಾನೆ.

    ಹೌದು. ಅವರಿಬ್ಬರು ಚಿಕ್ಕದೊಡ್ಡಮ್ಮನ ಮಕ್ಕಳು. ಅಣ್ಣನ ಮದುವೆ ನಿಶ್ಚಿಯ ಆಗಿದ್ದರಿಂದ ಅಣ್ತಮ್ಮ ಇಬ್ಬರು ಶಾಪಿಂಗ್ ಗೆ ತೆರಳಿದ್ದಾರೆ. ಬೆಳಗಾಗುವುದರಲ್ಲಿ ದುರದೃಷ್ಟ ಅಂದರೆ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಸಿಕ್ಕದ್ದರೆ, ಮತ್ತೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದನು. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಶಾಂಪಿಗ್ ಗೆ ಕರೆದುಕೊಂಡು ಬಂದಿದ್ದ ಅಣ್ಣ ಇಬ್ರಾಹಿಂನೇ ಹುಡುಗಿ ವಿಚಾರವಾಗಿ ಸಹೋದರ ಅಲ್ತಾಫ್ ನ ಕಥೆ ಮುಗಿಸಿದ್ದಾನೆ.

    ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹಬೂಬ್ ಬಾಷಾರವರ ಮಗ ಅಲ್ತಾಫ್ ಇದೇ ತಿಂಗಳು 19ಕ್ಕೆ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ದನು. ಇದೀಗ ಅದು ಕೊಲೆ ಎಂದು ದೃಢವಾಗಿದೆ. ಸ್ವತಃ ಅಣ್ಣ ತಮ್ಮನ ಕೊಲೆ ಮಾಡಿದ್ದಾನೆ ಎಂದು ಪೋಲಿಸ್ ತನಿಖೆಯಿಂದ ಸತ್ಯ ಹೊರಬಂದಿದೆ. ಅಣ್ಣ ಇಬ್ರಾಹಿಂ ಮದುವೆ ನಿಶ್ಚಿಯವಾಗಿದ್ದ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ ಹಾಕಿದ್ದನಂತೆ. ಇದನ್ನು ಸಹಿಸಿಕೊಳ್ಳದ ಅಣ್ಣ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಶಾಪಿಂಗ್ ಗಾಗಿ ಕರೆದುಕೊಂಡು ಬಂದಿದ್ದಾನೆ. ಈ ಸಮದರ್ಭದಲ್ಲಿ ಸಹೋದರ ಅಲ್ತಾಫ್ ನ ಕತ್ತು ಸೀಳಿ ಕೊಲೆ ಮಾಡಿ ಕಾಲ್ಕಿತ್ತು, ಇದೀಗ ಪೊಲೀಲಿಸರ ಅಥಿತಿಯಾಗಿದ್ದಾನೆ. ಇದನ್ನೂ ಓದಿ:  ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ಆರೋಪಿ ಅಣ್ಣ ಇಬ್ರಾಹಿಂ ಅವರ ಮದುವೆ ಮಾರ್ಚ್ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದರ ಹಿನ್ನೆಲೆ ಹೆಣ್ಣಿನ ಮನೆಗೆ ನಿಶ್ಚಿತಾರ್ಥದ ಶಾಸ್ತ್ರಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್ ಜವಳಿ ಖರೀದಿಗೆಂದು ಜನ.18ಕ್ಕೆ ಸಂಜೆ ದಾವಣಗೆರೆ ಹೋಗಿದ್ದರು. ರಾತ್ರಿ 8.30ರವರೆಗೆ ಫೋನ್ ಸಂಪರ್ಕದಲ್ಲಿದ್ದರು. ನಂತರ ಇದ್ದಕ್ಕಿದ್ದಂತೆ ಒಂದು ಫೋನ್ ಸ್ವಿಚ್ ಆಫ್ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಆರೋಪಿ ಇಬ್ರಾಹಿಂ ನ ಫೋನ್ ಆನ್ ಇದ್ರೂ ಕಾಲ್ ರೀಸೀವ್ ಮಾಡುತ್ತಿರಲ್ಲ. ತಡರಾತ್ರಿ ಸಹೋದರರಿಬ್ಬರು ಮನೆಗೆ ವಾಪಸ್ ಬಾರದ ಹಿನ್ನೆಲೆ ಕುಟುಂಬದವರು ಹರಿಹರ ನಗರ ಪೊಲೀಸ್ ಠಾಣೆಗೆ ದೂರ ನೀಡಿದ್ರು. ಬುಧವಾರ ಸಂಜೆ ಅಲ್ತಾಫ್ ಶವ ದಾವಣಗೆರೆ ಮಹಾಲಕ್ಷ್ಮೀ ಲೇಔಟ್ ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಬ್ರಾಹಿಂ ಹಾಗೂ ಆತನ ಬೈಕ್ ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುರಿಸಿದ್ದರು. ಇದೀಗ ಹುಡುಗಿ ವಿಚಾರವಾಗಿ ಅಣ್ಣ ಇಬ್ರಾಹಿಂ ಸಹೋದರ ಅಲ್ತಾಫ್ ನ ಕೊಲೆ ಮಾಡಿರುವ ಪ್ರಕರಣವನ್ನು ದಾವಣಗೆರೆ ಪೋಲಿಸರು ಭೇದಿಸಿ ಆರೋಪಿ ಇಬ್ರಾಹಿಂನನ್ನು ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆ್ಯಂಡ್ ಗ್ಯಾಂಗ್‍ನಿಂದ ರಂಪಾಟ

    ಒಟ್ಟಾರೆ ಅಲ್ತಾಫ್ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಆತನ ಮೈ ಮೇಲಿರುವ ಗಾಯಗಳು ಇದು ಕೊಲೆ ಎಂದು ಹೇಳುತ್ತಿದ್ದವು. ಪ್ರಕರಣವನ್ನು ದಾಖಲಿಸಿಕೊಂಡ ವಿದ್ಯಾನಗರ ಠಾಣೆಯ ಪೋಲಿಸರು ಘಟನೆ ನಡೆದ ಒಂದೇ ವಾರದಲ್ಲೀ ಆರೋಪಿ ಇಬ್ರಾಹಿಂ ನ ಹೆಡೆಮುರಿ ಕಟ್ಟಿದ್ದಾರೆ. ಅದೇನೆ ಆಗಲಿ ಹೆಣ್ಣಿನ ವಿಚಾರವಾಗಿ ಮನೆಯಲ್ಲಿ ಕೂತು ದೊಡ್ಡವರ ಸಮ್ಮುಖದಲ್ಲಿ ಬಗಹರಿಸಿಕೊಳ್ಳಬೇಕಾಗಿದ್ದ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವುದು ದುರದೃಷ್ಟವೇ ಸರಿ.

    https://www.youtube.com/watch?v=lvZEGrYswyk

  • ಸ್ನಾನದ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ!

    ಸ್ನಾನದ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ!

    ಮುಂಬೈ: ಅತ್ತಿಗೆ ಸ್ನಾನ ಮಾಡುವುದನ್ನು ರಹಸ್ಯವಾಗಿ ಚಿತ್ರೀಕರಿಸಿ, ಬ್ಲ್ಯಾಕ್ ಮೇಲೆ ಮಾಡುತ್ತಾ ಮೈದುನ, ಅತ್ತಿಗೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    25 ವರ್ಷದ ಆರೋಪಿಯು ತನ್ನ ಅತ್ತಿಗೆಯೊಂದಿಗೆ ಸಂಬಂಧವನ್ನು ಹೊಂದಲು ಬಯಸಿದ್ದನು. ಅತ್ತಿಗೆ ಸ್ನಾನ ಮಾಡುತ್ತಿರುವುದನ್ನು ವೀಡಿಯೋ ಮಾಡಿಕೊಂಡಿದ್ದಾನೆ. ನಂತರ ಬ್ಲ್ಯಾಕ್‍ಮೇಲ್ ಮಾಡಲು ವೀಡಿಯೊವನ್ನು ಬಳಸಿದ್ದಾನೆ. ಆದರೆ ಅವಳು ತನ್ನ ಲೈಂಗಿಕಕ್ರಿಯೆಗೆ ಒಪ್ಪದೆ ಇದ್ದಾಗ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಾನೆ. ಹೀಗೆಂದು ಪರ್ಭಾನಿ ಜಿಲ್ಲೆಯ ನಿವಾಸಿಯಾದ ಆರೋಪಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಹಿಂಜೆವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

    ವರದಿ ಪ್ರಕಾರ ಈ ಘಟನೆ ಕಳೆದ ತಿಂಗಳು ನಡೆದಿದೆ. ಆದಾಗ್ಯೂ, ಮಹಿಳೆ ತನ್ನ ಮೈದುನನ ಕುರಿತಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮತ್ತೊಮ್ಮೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಈ ವಿಚಾರವಾಗಿ ಮನನೊಂದ ಮಹಿಳೆ ತನ್ನ ಪತಿಗೆ ಈ ಘಟನೆಯನ್ನು ವಿವರಿಸಿದ್ದಾಳೆ. ನಂತರ ದಂಪತಿ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ.  ಇದನ್ನೂ ಓದಿ: ಬಿಲ್ ಕೊಡಿ ಅಂದಿದ್ದಕ್ಕೆ ಬಾರ್ ಮಾಲೀಕನ ಹೆಬ್ಬೆರಳನ್ನೇ ಕಚ್ಚಿದ!

    ಪೊಲೀಸರಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ವಿಚಾರ ತಿಳಿದ ಆತ ತಲೆ ಮರೆಸಿಕೊಂಡಿದ್ದಾನೆ. ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • 10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    – ಕಣ್ಣು ಕೆಂಪಾಗಿಸಿತ್ತು ಮೈದುನನ ನಿರ್ಧಾರ

    ಲಕ್ನೋ: 10 ಮದುವೆಯಾದರೂ ಮಕ್ಕಳಾಗದ ವ್ಯಕ್ತಿ ಅತ್ತಿಗೆಯಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಬೋಜಿಪುರದಲ್ಲಿ ನಡೆದಿದೆ.

    55 ವರ್ಷದ ಜಗನ್ ಲಾಲ್ ಕೊಲೆಯಾದ ವ್ಯಕ್ತಿ. ಜನವರಿ 20ರಂದು ಜಗನ್ ಕತ್ತು ಹಿಸುಕಿ ಕೊಲೆಗೈಯಲಾಗಿತ್ತು. ಸದ್ಯ ಪ್ರಕರಣವನ್ನ ಭೇದಿಸಿರುವ ಪೊಲೀಸರು ಜಗನ್ ಅತ್ತಿಗೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ. ಜಗನ್ 10 ಪತ್ನಿಯರ ಪೈಕಿ ಕೆಲವರು ಮೃತಪಟ್ಟಿದ್ರೆ, ಕೆಲವರು ಈತನಿಂದ ದೂರವಾಗಿದ್ದಾರೆ. ಇಬ್ಬರು ಪತ್ನಿಯರ ಜೊತೆ ಜಗನ್ ಗ್ರಾಮದಲ್ಲಿ ವಾಸವಾಗಿದ್ದನು. ಸಂತಾನಕ್ಕಾಗಿ ಜಗನ್ ಒಟ್ಟು 10 ಮದುವೆಯಾಗಿದ್ದರು.

    ಸಾವಿಗೆ ಕಾರಣ ‘ಆ’ ನಿರ್ಧಾರ: ಯೆಸ್, 10 ಮದುವೆಯಾದ ಜಗನ್ ತನಗೆ ಮಕ್ಕಳಾಗಲ್ಲೆಂಬ ಸತ್ಯ ಅರಿತಕೂಡಲೇ ತನ್ನ ಕೋಟ್ಯಂತರ ರೂ. ಮೌಲ್ಯದ 14 ಎಕರೆ ಜಮೀನು ತಮ್ಮನ್ನ ನೋಡಿಕೊಳ್ಳುತ್ತಿದ್ದ ಸಂಬಂಧಿ ಯುವಕನ ಹೆಸರಿಗೆ ಬರೆಯುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದರು. ಈ ವಿಷಯ ಕೇಳಿದ ಜಗನ್ ಅತ್ತಿಗೆ ಮುನ್ನಿದೇವಿಯ ಚಡಪಡಿಸಿದ್ದಳು. 14 ಎಕರೆ ಜಮೀನು ಬೇರೆಯವರ ಪಾಲಾಗೋದನ್ನ ತಡೆಯಲು ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು.

    ಆಸ್ತಿಗಾಗಿ ಹಂತಕಿಯಾದ ಅತ್ತಿಗೆ: ತನ್ನ ಪರಿಚಯದ ಕೆಲ ಯುವಕರಿಗೆ ಹಣದಾಸೆ ತೋರಿಸಿದ ಮುನ್ನಿದೇವಿ ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು. ಜನವರಿ 20ರಂದು ರಾತ್ರಿ ಒಂಟಿಯಾಗಿ ಹೊರಟಿದ್ದ ಜಗನ್ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ತಿಗಾಗಿ ಹಂತಕಿಯಾಗಿದ್ದ ಮುನ್ನಿದೇವಿಯನ್ನ ಕತ್ತಲು ಮನೆಗೆ ಅಟ್ಟಿದ್ದಾರೆ.

    ಕೆಂಪಾಗಿತ್ತು ಮುನ್ನಿದೇವಿ ಕಣ್ಣು: ಪ್ರಕರಣದ ತನಿಖೆ ನಡೆಸಲು ಬೋಜಿಪುರಿ ಠಾಣೆಯ ಇನ್‍ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 10 ಮದುವೆಯಾದರೂ ಮಕ್ಕಳಗಾದ ಕಾರಣ ಜಗನ್ ತಮಗೆ ಆಸರೆಯಾಗಿದ್ದ ಯುವಕನ ಹೆಸರಿಗೆ ಆಸ್ತಿ ಬರೆಯಲು ನಿರ್ಧರಿಸಿದ್ದರು. ಈ ವಿಷಯ ಅತ್ತಿಗೆ ಮುನ್ನಿದೇವಿಯ ಕಣ್ಣು ಕೆಂಪಾಗಿಸಿತ್ತು. ಜಮೀನಿಗಾಗಿ ಮೈದುನ ಕೊಲೆಗೆ ಸುಪಾರಿ ನೀಡಿದ್ದಳು. ಸದ್ಯ ದೇವ್‍ಸಿಂಗ್, ಪ್ರಹ್ಲಾದ್, ದರ್ಶನ್ ಸಿಂಗ್ ಮತ್ತು ಮುನ್ನಿದೇವಿಯನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್‍ಎಸ್‍ಪಿ ರೋಹಿತ್ ಸಿಂಗ್ ಹೇಳಿದ್ದಾರೆ.

  • ಏಕಾಂತದಲ್ಲಿರೋದನ್ನ ನೋಡಿದ ಬಾಲಕನ ಉಸಿರು ನಿಲ್ಲಿಸಿದ ಅತ್ತಿಗೆ-ಮೈದುನ

    ಏಕಾಂತದಲ್ಲಿರೋದನ್ನ ನೋಡಿದ ಬಾಲಕನ ಉಸಿರು ನಿಲ್ಲಿಸಿದ ಅತ್ತಿಗೆ-ಮೈದುನ

    – ಕತ್ತು ಹಿಸುಕಿ, ಪಾಳು ಬಾವಿಗೆ ಎಸೆದು ಎಲ್ಲರೆದ್ರು ಕಣ್ಣೀರಿಟ್ಟ ಮಹಿಳೆ

    ರಾಂಚಿ: ಅಕ್ರಮ ಸಂಬಂಧ ನೋಡಿದ ಬಾಲಕನನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಮೆಹರಾಮ್ ವ್ಯಾಪ್ತಿಯ ಸಿಮಾನಪುರಿ ಗ್ರಾಮದಲ್ಲಿ ನಡೆದಿದೆ.

    ಮಹಿಳೆ ಪತಿಯ ಚಿಕ್ಕಪ್ಪನ ಮಗನ ಜೊತೆಯಲ್ಲಿಯೇ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅತ್ತಿಗೆ-ಮೈದುನ ಕಳ್ಳಾಟ ನಡೆದಿತ್ತು. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ನಾದಿನಿಯ ಮಗ ಇಬ್ಬರ ಸಂಬಂಧವನ್ನ ನೋಡಿದ್ದನು. ಇದರಿಂದ ಭಯಗೊಂಡ ಮಹಿಳೆ ಪತಿಗೆ ವಿಷಯ ಗೊತ್ತಾದ್ರೆ ಹೇಗೆ ಅಂತ ಬಾಲಕನನ್ನ ಕೊಲ್ಲಲು ಮೈದುನನ ಜೊತೆ ಪ್ಲಾನ್ ಮಾಡಿದ್ದಳು.

    ಇಬ್ಬರು ಉಪಾಯದಿಂದ ಬಾಲಕನನ್ನು ಕೋಣೆಯೊಳಗೆ ಕರೆದಿದ್ದಾರೆ. ಬಾಲಕ ಒಳ ಬರುತ್ತಿದ್ದಂತೆ ಬಾಗಿಲು ಹಾಕಿ ಕತ್ತು ಹಿಸುಕಿ ಕೊಂದು ಶವವನ್ನ ಗ್ರಾಮದ ಹೊರವಲಯದಲ್ಲಿರುವ ಪಾಳು ಬಾವಿಗೆ ಎಸೆದು ಏನು ತಿಳಿಯದಂತೆ ಮನೆ ಸೇರಿಕೊಂಡಿದ್ದಾರೆ. ಬಾಲಕ ಕಾಣದಿದ್ದಾಗ ಕುಟುಂಬದ ಇತರೆ ಸದಸ್ಯರು ಗ್ರಾಮದ ತುಂಬೆಲ್ಲ ಹುಡುಕಾಡಿದ್ದಾರೆ. ಬಾಲಕ ಸಿಗದಿದ್ದಾಗ ಬೆಲಬಡ್ಡಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇತ್ತ ಅನುಮಾನ ಬಾರದಿರಲಿ ಅಂತ ಮಹಿಳೆ ಕುಟುಂಬದ ಇತರೆ ಜೊತೆ ಸೇರಿ ಮೊಸಳೆ ಕಣ್ಣೀರು ಹಾಕಿದ್ದಾಳೆ.

    ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಮಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆರಂಭದಲ್ಲಿಯೇ ಪೊಲೀಸರಿಗೆ ಮಹಿಳೆ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಬಾಲಕನ ಶವವನ್ನ ಬಾವಿಯಿಂದ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

  • ಗ್ರಾಮಸ್ಥರಿಂದಲೇ ಅತ್ತಿಗೆ ಜೊತೆ ಮೈದುನನ ಮದುವೆ

    ಗ್ರಾಮಸ್ಥರಿಂದಲೇ ಅತ್ತಿಗೆ ಜೊತೆ ಮೈದುನನ ಮದುವೆ

    – ಬಲವಂತ ಮದುವೆ ವೀಡಿಯೋ ವೈರಲ್
    – ಮದುವೆಯಲ್ಲಿ ಯುವಕನ ಕಣ್ಣೀರು

    ಪಾಟ್ನಾ: ಗ್ರಾಮಸ್ಥರು ಮತ್ತು ಕುಟುಂಬಸ್ಥರೇ ಬಲವಂತವಾಗಿ ವಿಧವೆ ಅತ್ತಿಗೆ ಜೊತೆ ಮೈದುನನ ಮದುವೆ ಮಾಡಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಿಹಾರದ ದರ್ಬಾಂಗ್ ಜಿಲ್ಲೆಯ ಮೋರಾ ಕ್ಷೇತ್ರದ ಖರಪುರ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಕೆಲ ದಿನಗಳ ಹಿಂದೆಯೇ ಮಹಿಳೆಯ ಪತಿ ನಿಧನರಾಗಿದ್ದರು. ಅಣ್ಣನ ಸಾವಿನ ಬಳಿಕ ಯುವಕ ಅತ್ತಿಗೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವರು ಮಹಿಳೆ ಮತ್ತು ಯುವಕನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎನ್ನಲಾಗಿದೆ.

    ಅನೈತಿಕ ಸಂಬಂಧದ ಆರೋಪಗಳು ಕೇಳಿ ಬಂದ ಹಿನ್ನೆಲೆ ಮಹಿಳೆಯ ಪೋಷಕರು ಆಕೆಯನ್ನ ತವರಿಗೆ ಕರೆದುಕೊಂಡು ಹೋಗಿದ್ದರು. ಮಹಿಳೆಯ ಕುಟುಂಬಸ್ಥರು ಯುವಕನಿಗೆ ಕರೆ ಮಾಡಿ ಗ್ರಾಮದ ಬಳಿಯ ದೇವಸ್ಥಾನಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ಯುವಕನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ವೈರಲ್ ಆಗಿರೋ ವೀಡಿಯೋದಲ್ಲಿ ಕಣ್ಣೀರು ಹಾಕೋದನ್ನ ಗಮನಿಸಬಗಹುದು. ವೀಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

     

  • ಅತ್ತಿಗೆ ಜೊತೆ ಮೈದುನನ ಕಳ್ಳ ಸಂಬಂಧ- ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಸೂಸೈಡ್

    ಅತ್ತಿಗೆ ಜೊತೆ ಮೈದುನನ ಕಳ್ಳ ಸಂಬಂಧ- ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಸೂಸೈಡ್

    – ಅಮ್ಮನಿಲ್ಲದೇ ಅನಾಥವಾಯ್ತು ಮೂರು ತಿಂಗಳ ಹಸುಗೂಸು
    – ಮೈದುನನ ಮದ್ವೆ ಫಿಕ್ಸ್ ಆಗಿದ್ದಕ್ಕೆ ಇಬ್ರೂ ಸೂಸೈಡ್

    ಲಕ್ನೋ: ಅತ್ತಿಗೆ ಮತ್ತು ಮೈದುನ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಗಾಜೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಾಹ್ಮಣತಾರಾ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಕೋಣೆಯ ಬಾಗಿಲು ತೆಗೆದಾದ ಇಬ್ಬರ ಶವ ನೇತಾಡುತ್ತಿತ್ತು.

    ಸುನಿತಾ (28) ಮತ್ತು ರಾಮ್ ಮಿಲನ್ (22) ಆತ್ಮಹತ್ಯೆಗೆ ಶರಣಾದ ಅತ್ತಿಗೆ ಮೈದುನ. ಸುನಿತಾ ಮತ್ತು ರಾಮ್ ಮಿಲನ್ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದು ಕುಟುಂಬಸ್ಥರು ರಾಮ್ ಮದುವೆಯನ್ನ ನಿಶ್ಚಯಿಸಿ ಮೇ 7, 2021ರಂದು ದಿನಾಂಕ ಸಹ ನಿಗದಿ ಮಾಡಿದ್ದರು. ಮದುವೆ ತಮ್ಮ ಅನೈತಿಕ ಸಂಬಂಧ ಅಡ್ಡಿಯಾಗಲಿದೆ ಎಂದು ತಿಳಿದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಮೂರು ತಿಂಗಳ ಮತ್ತು ಮೂರು ವರ್ಷದ ಮಕ್ಕಳು ಅಮ್ಮನಿಲ್ಲದೇ ಅನಾಥವಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    ನನ್ನ ಪತ್ನಿ ಮತ್ತು ತಮ್ಮನ ಬಹಳ ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಮೂರು ವರ್ಷದ ಮಗ ಮತ್ತು ಮೂರು ವರ್ಷದ ಮಗಳು ಇದ್ದರೂ ಪತ್ನಿ ಅನೈತಿಕ ಸಂಬಂಧದಲ್ಲಿದ್ದಳು ಎಂದು ಸುನಿತಾ ಪತಿ ಹರಿಓಂ ಹೇಳಿದ್ದಾರೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹಗಳನ್ನ ಆಸ್ಪತ್ರೆಗೆ ರವಾನಿಸಿ ಹೇಳಿಕೆಯನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪತ್ನಿಯ ಅಣ್ಣನ ಹೆಂಡತಿಯ ಕತ್ತು ಸೀಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ!

    ಪತ್ನಿಯ ಅಣ್ಣನ ಹೆಂಡತಿಯ ಕತ್ತು ಸೀಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ!

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಣ್ಣನ ಹೆಂಡತಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು ಲಾವಣ್ಯ(37) ಎಂದು ಗುರುತಿಸಲಾಗಿದೆ. ಈಕೆಯನ್ನು ವಿಜಯ್ ಕುಮಾರ್ ಕೊಲೆ ಮಾಡಿದ್ದಾನೆ. ಈ ಘಟನೆ ಟಿನ್ ಫ್ಯಾಕ್ಟರಿ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

    ಮೃತ ಲಾವಣ್ಯ ಪತಿಯ ತಂಗಿಯನ್ನ ವಿಜಯಕುಮಾರ್ ಮದುವೆಯಾಗಿದ್ದ. ಬಳಿಕ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಇಂದು ಆರೋಪಿ ವಿಜಯಕುಮಾರ್ ನನ್ನು ಮಾತುಕತೆಗೆ ಕರೆಯಲಾಗಿತ್ತು. ಈ ವೇಳೆ ಮಾತಿನ ಚಕಮಕಿಯಾಗಿ ಗಲಾಟೆ ನಡೆದಿದೆ.

    ಗಲಾಟೆಯ ವೇಳೆ ಸಿಟ್ಟಿಗೆದ್ದ ವಿಜಯಕುಮಾರ್ ಅಲ್ಲೇ ಇದ್ದ ಲಾವಣ್ಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಪಿ ಕೂಡ ಅದೇ ಚಾಕುವಿನಿಂದ ಕುಯ್ದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆರೋಪಿ ವಿಜಯ್ ಕುಮಾರ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿ ಬಿಟ್ಟು ನನ್ನ ಜೊತೆಗಿರು ಎಂದ ಅತ್ತಿಗೆ – ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

    ತಾಯಿ ಬಿಟ್ಟು ನನ್ನ ಜೊತೆಗಿರು ಎಂದ ಅತ್ತಿಗೆ – ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

    – ಪತಿ ಸಾವನ್ನಪ್ಪಿದ ಬಳಿಕ ಮೈದುನನ ಜೊತೆಗಿದ್ದ ಮಹಿಳೆ

    ನವದೆಹಲಿ: ಅತ್ತಿಗೆ ಜೊತೆ ಜಗಳವಾಗಿದ್ದು, ಈ ವೇಳೆ ಅವಳ ಕತ್ತು ಹಿಸುಕಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

    ಈಶಾನ್ಯ ದೆಹಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕರವಲ್ ನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರವಲ್ ನಗರದ ನಿವಾಸಿ ರೋಹಿತ್(26) ಡಿಸಿಪಿ ಕಚೇರಿಗೆ ಬಂದಿದ್ದು, ಅತ್ತಿಗೆಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಅತ್ತಿಗೆಯ ದೇಹವನ್ನು ಮನೆಯಲ್ಲಿ ಬಿಟ್ಟು ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಕರವಲ್ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಇತರ ಸಿಬ್ಬಂದಿಯೊಂದಿಗೆ ಕರವಲ್ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಮಹಿಳೆ ದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಡಿಸಿಪಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.

    ನನ್ನ ತಾಯಿಯನ್ನು ಬಿಟ್ಟು ನನ್ನೊಂದಿಗೆ ಇರು ಎಂದು ಅತ್ತಿಗೆ ಹೇಳುತ್ತಿದ್ದಳು. ಇದಕ್ಕಾಗಿ ಯಾವಾಗಲೂ ಜಗಳವಾಗುತ್ತಿತ್ತು. ನನ್ನ ಅಣ್ಣ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ. ಆಗಿನಿಂದ ಅತ್ತಿಗೆ ನನ್ನೊಂದಿಗಿದ್ದಳು ಎಂದು ವಿಚಾರಣೆ ವೇಳೆ ರೋಹಿತ್ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಮಂಗಳವಾರ ಸಹ ಜಗಳ ನಡೆದಿದ್ದು, ಈ ವೇಳೆ ರೋಹಿತ್ ಅತ್ತಿಗೆಯ ಕುತ್ತಿಗೆಯನ್ನೇ ಹಿಸುಕಿ ಮಧ್ಯಾಹ್ನ 2:30ರ ಹೊತ್ತಿಗೆ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕರವಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದೆ. ಬುಧವಾರ ಮರಣೋತ್ತರ ಪರೀಕ್ಷೆಯನ್ನು ಸಹ ನಡೆಸಲಾಗಿದೆ. ಮಹಿಳೆಗೆ ಒಬ್ಬ ಮಗ, ಒಬ್ಬಳು ಮಗಳಿದ್ದು, ಮಗ ಚಿಕ್ಕಪ್ಪನ ಮನೆಗೆ ಹೋಗಿದದ್ದಾನೆ. ಮಗಳು ಆಟವಾಡಲು ಹೊರಗೆ ಹೋಗಿದ್ದಾಳೆ. ಈ ವೇಲೆ ಕೊಲೆ ನಡೆದಿದೆ. ರೋಹಿತ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ದೇವಸ್ಥಾನದ ಆವರಣದಲ್ಲೇ ನಾದಿನಿಯನ್ನ ಕೊಂದ ಬಾವ

    ದೇವಸ್ಥಾನದ ಆವರಣದಲ್ಲೇ ನಾದಿನಿಯನ್ನ ಕೊಂದ ಬಾವ

    – ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಎಸ್ಕೇಪ್
    – ದೇಗುಲದಿಂದ ಹಿಂದಿರುಗುತ್ತಿದ್ದಾಗ ಕೃತ್ಯ

    ಭುವನೇಶ್ವರ: ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ನಾದಿನಿಯನ್ನು ದೇಗುಲದ ಆವರಣದಲ್ಲಿ ಬಾವ ಕೊಲೆ ಮಾಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹರಿದಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗ್ರಾಮದ ರಂಜಿ ನಹಾಕ್ (40) ಎಂದು ಗುರುತಿಸಲಾಗಿದೆ. ರಂಜಿ ಇಂದು ಮುಂಜಾನೆ ಸುಮಾರು 5 ಗಂಟೆಗೆ ದೇವಸ್ಥಾನಕ್ಕೆ ಹೋಗಿದ್ದರು. ದೇವಾಲಯದಿಂದ ಹಿಂದಿರುಗುತ್ತಿದ್ದಾಗ ಮಹಿಳೆಯ ಬಾವ ಮೋಚಿರಾಮ್ ಕಬ್ಬಿಣದ ರಾಡ್‍ನಿಂದ ರಂಜಿ ತಲೆಗೆ ಹೊಡೆದಿದ್ದಾನೆ.

    ರಂಜಿ ತೀವ್ರವಾಗಿ ಗಾಯಗೊಂಡಿದ್ದು, ದೇವಸ್ಥಾನದ ಆವರಣದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.