Tag: sister

  • ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ಸಹೋದರಿ – ಮನನೊಂದು ಬಾಲಕ ಆತ್ಮಹತ್ಯೆ

    ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ಸಹೋದರಿ – ಮನನೊಂದು ಬಾಲಕ ಆತ್ಮಹತ್ಯೆ

    ನವದೆಹಲಿ: ಮೊಬೈಲ್ ಗೇಮ್ (Mobile Game) ಆಡಿದ್ದಕ್ಕಾಗಿ ಅಕ್ಕ ಗದರಿದ್ದಕ್ಕೆ ಮನನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ (Delhi) ಆದರ್ಶ ನಗರದಲ್ಲಿ (Adarsh Nagar) ನಡೆದಿದೆ.

    ಆದರ್ಶ್ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆದರ್ಶ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತನ್ನ ಅಧ್ಯಯನವನ್ನು ನಿರ್ಲಕ್ಷಿಸಿ ಮೊಬೈಲ್ ಗೇಮ್ ಆಡಿದ್ದಕ್ಕೆ ಅಕ್ಕ-ತಮ್ಮನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅಕ್ಕ ತಮ್ಮನನ್ನು ಗದರಿದ್ದಾಳೆ. ಇದರಿಂದ ಮನನೊಂದ ಬಾಲಕ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹಿಟ್ & ರನ್‌ಗೆ ವಿದ್ಯಾರ್ಥಿನಿ ಬಲಿ – ಟಿಪ್ಪರ್‌ ಚಾಲಕ ಅರೆಸ್ಟ್‌

    ಕೂಡಲೇ ಆದರ್ಶ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಅಷ್ಟು ಹೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ಡಿಕ್ಕಿ – ವೀಡಿಯೋ ವೈರಲ್‌

  • ವ್ಯಕ್ತಿಯೊಬ್ಬನ ಜೊತೆ ತಂಗಿಗೆ ಸಂಬಂಧ – ಬ್ಲ್ಯಾಕ್‌ಮೇಲ್‌ ಮಾಡಿ ಅಣ್ಣನಿಂದಲೇ ಅತ್ಯಾಚಾರ

    ವ್ಯಕ್ತಿಯೊಬ್ಬನ ಜೊತೆ ತಂಗಿಗೆ ಸಂಬಂಧ – ಬ್ಲ್ಯಾಕ್‌ಮೇಲ್‌ ಮಾಡಿ ಅಣ್ಣನಿಂದಲೇ ಅತ್ಯಾಚಾರ

     – ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ – ಆರೋಪಿ ಅರೆಸ್ಟ್‌

    ಗಾಂಧಿನಗರ: ತನ್ನ ತಂಗಿ (Sister) ವ್ಯಕ್ತಿಯೊಬ್ಬನ ಜೊತೆ ಸಂಬಂಧದಲ್ಲಿರುವುದನ್ನು ತಿಳಿದುಕೊಂಡ ಅಣ್ಣ (Brother) ಆಕೆಗೆ ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ (Rape) ಎಸಗಿರುವುದು ಗುಜರಾತ್‌ನ (Gujarat) ಭಾವನಗರದಲ್ಲಿ ನಡೆದಿದೆ.

    ಅತ್ಯಾಚಾರಕ್ಕೊಳಗಾದ 22 ವರ್ಷದ ಯುವತಿ ಕಳೆದ 3 ವರ್ಷಗಳಿಂದ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಆಕೆಯ ಸಹೋದರ ಸಿಟ್ಟಿಗೆದ್ದಿದ್ದ. ಇದೇ ಕಾರಣಕ್ಕೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ. ಇದನ್ನೂ ಓದಿ: ಹೆಲ್ಪರ್‌ಗೆ ಬಸ್ ‌ಚಾಲನೆ ಮಾಡಲು ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವು

    29 ವರ್ಷದ ಆರೋಪಿಯು ವಿವಾಹಿತನಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಜು.13 ಹಾಗೂ ಆ.22 ರಂದು ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡೂ ದಿನವೂ ಯುವತಿಯ ಅತ್ತಿಗೆ ಮನೆಯಲ್ಲಿ ಇರಲಿಲ್ಲ. ಈ ವೇಳೆ, ಮೊದಲ ಸಲ ಚಾಕು ತೋರಿಸಿ, ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ಎರಡನೇ ಸಲ ಅತ್ಯಾಚಾರ ಎಸಗಿ ತೊಡೆಯ ಮೇಲೆ ಸಿಗರೇಟ್‌ನಿಂದ ಸುಟ್ಟಿದ್ದಾನೆ. ಇದರಿಂದ ಗಾಯದ ಕಲೆಗಳು ಹಾಗೇ ಉಳಿದಿವೆ ಎಂದು ಆರೋಪಿಸಲಾಗಿದೆ.

    ಯುವತಿ ರಾಜ್ಯ ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಳು. ಬಳಿಕ ಅಧಿಕಾರಿಗಳು ಭಾವನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅಡಿ ಆರೋಪಿಯನ್ನು ಬಂಧಿಸಲಾಗಿದೆ.

    ಯುವತಿ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅತ್ಯಾಚಾರದ ಸಮಯದಲ್ಲಿ ಇಬ್ಬರೂ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಆಸಿಡ್ ಕುಡಿಸಿ ಸೊಸೆಯನ್ನು ಕೊಂದ ಅತ್ತೆ!

  • Bidar | ತಂಗಿಯನ್ನ ಪ್ರೀತಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಸಹೋದರರು

    Bidar | ತಂಗಿಯನ್ನ ಪ್ರೀತಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಸಹೋದರರು

    ಬೀದರ್: ತಂಗಿಯನ್ನ (Sister) ಪ್ರೀತಿಸಿದ್ದಕ್ಕೆ ಯುವಕನನ್ನ ಸಹೋದರರು ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ನಡೆದಿದೆ.

    ಪ್ರಶಾಂತ ಬಿರಾದರ್ (25) ಬರ್ಬರವಾಗಿ ಕೊಲೆಯಾದ ಮೃತ ಯುವಕ. ಮೃತ ಯುವಕ ಹಾಗೂ ಆರೋಪಿಗಳ ಸಹೋದರಿ ನಡುವೆ ಕೆಲ ವರ್ಷಗಳಿಂದ ಪ್ರೇಮಾಂಕುರವಾಗಿತ್ತು. ಇದನ್ನೂ ಓದಿ: ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಶುಕ್ರವಾರ ರಾತ್ರಿ ನಿರಗುಡಿ ಗ್ರಾಮದಲ್ಲಿ ಮೃತ ಪ್ರಶಾಂತ ಹಾಗೂ ಯುವತಿ ಸಹೋದರರ ನಡುವೆ ಗಲಾಟೆಯಾಗಿದ್ದು, ಗಲಾಟೆ ವೇಳೆ ಪ್ರಶಾಂತ್ ತಲೆ ಮೇಲೆ ಕಲ್ಲು ಹಾಕಿ ಸಹೋದರರು ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆಯಾದ ಯುವಕನ ಮೃತದೇಹವನ್ನು ಬಸವಕಲ್ಯಾಣ ಶವಗಾರಕ್ಕೆ ತಂದಿದ್ದು, ಶವಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ 

    ಸ್ಥಳಕ್ಕೆ ಡಿವೈಎಸ್‌ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಯಲ್ಲಾಲಿಂಗ ಮೇತ್ರೆ, ಪ್ರಶಾಂತ್ ಮೇತ್ರೆ ಎಂಬ ಇಬ್ಬರು ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಇದನ್ನೂ ಓದಿ: ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

  • ಅಣ್ಣ-ತಂಗಿಯರ ಪವಿತ್ರ ಬಂಧವನ್ನು ಸಾರುವ ಹಬ್ಬವೇ ರಕ್ಷಾ ಬಂಧನ !

    ಅಣ್ಣ-ತಂಗಿಯರ ಪವಿತ್ರ ಬಂಧವನ್ನು ಸಾರುವ ಹಬ್ಬವೇ ರಕ್ಷಾ ಬಂಧನ !

    ರಾಖಿ ಹಬ್ಬ (Rakhi Festival) ಬಂತೆಂದರೆ ಸಾಕು ಅಣ್ಣ-ತಂಗಿಯರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ. ಅಣ್ಣ-ತಂಗಿಯ ಬಾಂಧವ್ಯ ಎಂದರೆ ಅದು ಬೆಲೆಕಟ್ಟಲಾಗದ ಸಂಬಂಧ. ಪ್ರತಿಯೊಬ್ಬ ತಂಗಿಗೆ ಅಣ್ಣ ಶ್ರೀರಕ್ಷೆಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ. ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಬಳಿಕ ಬರುವ ಮತ್ತೊಂದು ಪವಿತ್ರ ಹಬ್ಬ ಈ ರಕ್ಷಾ ಬಂಧನ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ (Raksha Bandhan) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದ ಸಂದರ್ಭ ಮಾರುಕಟ್ಟೆಯಲ್ಲಿ ಅನೇಕ ಶೈಲಿಯ ರಾಖಿಗಳು ಕಾಣಸಿಗುತ್ತವೆ. ರಾಖಿ ಅಥವಾ ರಕ್ಷೆಯನ್ನು ಕಟ್ಟುವ ಮೂಲಕ ಪ್ರತಿಯೊಬ್ಬ ಅಣ್ಣ-ತಂಗಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದು ಒಡಹುಟ್ಟಿದವರ ನಡುವಿನ ವಾತ್ಸಲ್ಯ ಮತ್ತು ಪ್ರೀತಿಯನ್ನು ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ.

    ಪುರಾಣದ ಕಥೆ:
    ಪ್ರತಿಯೊಂದು ಹಬ್ಬವೂ ಪುರಾಣದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಅದೇ ರೀತಿ ರಾಖಿ ಹಬ್ಬ ಅಥವಾ ರಕ್ಷಾ ಬಂಧನದ ಬಗ್ಗೆಯೂ ಪುರಾಣದಲ್ಲಿ ಉಲ್ಲೇಖವಿದೆ. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡುತ್ತಾನೆ.

    ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದ್ದಳು. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಭರವಸೆ ನೀಡುತ್ತಾನೆ.

    ಇನ್ನೊಂದು ಕಥೆಯೆಂದರೆ, ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ.

    ಮತ್ತೊಮ್ಮೆ ರಾಕ್ಷಸರಿಗೂ, ದೇವತೆಗಳಿಗೂ ಭೀಕರ ಯುದ್ಧವಾಯಿತು. ಯುದ್ಧದಲ್ಲಿ ಅಸುರರೇ ಮೇಲುಗೈ ಪಡೆದು ಗೆಲ್ಲುವ ಸ್ಥಿತಿ ಉಂಟಾಯಿತು. ಇದರಿಂದ ಚಿಂತಾಕ್ರಾಂತನಾದ ಇಂದ್ರ ತನ್ನ ಆಸ್ಥಾನಕ್ಕೆ ಗುರು ಬೃಹಸ್ಪತಿಯನ್ನು ಕರೆಸಿ ಸಲಹೆಯನ್ನು ಕೇಳುತ್ತಾನೆ. ವೇಳೆ ಇಂದ್ರನ ಮಡದಿ ಇಂದ್ರಾಣಿ ಕೂಡ ಅಲ್ಲೇ ಇರುತ್ತಾಳೆ. ಬೃಹಸ್ಪತಿ ಮಾತನಾಡುವುದಕ್ಕೂ ಮೊದಲೇ ಇಂದ್ರಾಣಿ ಎದ್ದುನಿಂತು, ದೇವತೆಗಳನ್ನು ಗೆಲ್ಲಿಸುವ ತಂತ್ರ ನನಗೆ ಗೊತ್ತು. ನಾವೇ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಭರವಸೆ ನೀಡಿದಳು. ಇದಾದ ಮರುದಿನ ಇಂದ್ರಾಣಿ ಮಂತ್ರ ಪುರಸ್ಸರವಾಗಿ ತಯಾರಿಸಿದ ಒಂದು ರಕ್ಷೆಯನ್ನು ತನ್ನ ಪತಿಯ ಕೈಗೆ ಕಟ್ಟಿದಳು. ರಕ್ಷೆಯನ್ನು ಕಟ್ಟಿಸಿಕೊಂಡು ಇಂದ್ರ ಯುದ್ಧರಂಗಕ್ಕೆ ಕಾಲಿಟ್ಟಿದ್ದೇ ತಡ ಅಸುರರು ಚದುರಿ ಪರಾರಿಯಾದರು. ದೇವತೆಗಳ ಮುಂದೆ ಅಸುರರು ತಲೆ ಬಾಗಿದರು. ಇದರಿಂದ ದೇವತೆಗಳು ಯುದ್ಧವನ್ನು ಗೆದ್ದರು. ಇದೇ ರೀತಿ ಇನ್ನೂ ಅನೇಕ ದಂತಕಥೆಗಳಿವೆ.

    ಆಚರಣೆ ಹೇಗೆ?
    ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.

  • ತಾಯಿ ತನ್ನ ತಂಗಿಯನ್ನೇ ಹೆಚ್ಚು ಪ್ರೀತಿಸ್ತಾರೆ ಅಂತಾ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು

    ತಾಯಿ ತನ್ನ ತಂಗಿಯನ್ನೇ ಹೆಚ್ಚು ಪ್ರೀತಿಸ್ತಾರೆ ಅಂತಾ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು

    ನವದೆಹಲಿ: ತಾಯಿ (Mother) ತನ್ನ ಸಹೋದರಿಯನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ಹಿರಿಯ ಮಗಳು ಬುರ್ಕಾ (Burqa) ಧರಿಸಿ ಸ್ವಂತ ಮನೆಗೆ ಕನ್ನ ಹಾಕಿರುವ ಘಟನೆ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.

    ಶ್ವೇತ (31) ಕಳ್ಳತನ ಮಾಡಿದ ಪುತ್ರಿ. ಜನವರಿ 30 ರಂದು ಕಮಲೇಶ್ ಎಂಬ ಮಹಿಳೆ, ದೆಹಲಿಯ ಉತ್ತಮ್ ನಗರದಲ್ಲಿರುವ ತನ್ನ ಸೇವಕ್ ಪಾರ್ಕ್ ಮನೆಯಲ್ಲಿ ದರೋಡೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು. ಮಧ್ಯಾಹ್ನ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25,000 ರೂ. ನಗದನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಶೋಧ ಕಾರ್ಯ ನಡೆಸಿದ್ದಾಗ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: ಡಿಕೆಸು ಪ್ರತ್ಯೇಕ ದೇಶ ಹೇಳಿಕೆ; ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ – ನಿವಾಸ ಮುತ್ತಿಗೆಗೆ ಯತ್ನಿಸಿದವರ ಮೇಲೆ ಲಾಠಿ ಪ್ರಹಾರ

    ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾಗ ಬುರ್ಕಾದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮನೆಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಬಳಿಕ ತನಿಖೆ ಮಾಡಿದ್ದಾಗ ಕಮಲೇಶ್ ಅವರ ಹಿರಿಯ ಮಗಳು ಶ್ವೇತಾ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಇದನ್ನೂ ಓದಿ: ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

    ಶ್ವೇತ ತಾಯಿ ಆಕೆಯ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ತಂಗಿ ಹಾಗೂ ತಾಯಿ ಮೇಲಿದ್ದ ಅಸೂಯೆ ಮತ್ತು ದ್ವೇಷದ ಭಾವನೆಗಳಿಂದ ಈ ಕೆಲಸ ಮಾಡಿದ್ದು, ಸ್ವಲ್ಪ ಸಾಲವನ್ನು ಸಹ ಮಾಡಿಕೊಂಡಿದ್ದಳು. ಬಾಕಿಯನ್ನು ತೀರಿಸಲು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾಳೆ. ಕದ್ದಿರುವ ಆಭರಣಗಳಲ್ಲಿ ಕೆಲವು ಅವಳದಾಗಿದ್ದು, ಉಳಿದ ಅಭರಣಗಳು ಆಕೆ ತಂಗಿಯ ಮದುವೆಗೆಂದು ತಾಯಿ ಮಾಡಿಸಿದ್ದರು. ಇದನ್ನೂ ಓದಿ: ವೆಬ್ ಸೀರಿಸ್‍ನಿಂದ ಪ್ರೇರಣೆ ಪಡೆದು ನಕಲಿ ನೋಟ್ ದಂಧೆ – ಇಬ್ಬರೂ ಆರೋಪಿಗಳು ಅರೆಸ್ಟ್

    ನಡೆದಿದ್ದೇನು?
    ಕಮಲೇಶ್ ತನ್ನ ಹಿರಿಯ ಮಗಳಿಗೆ ಹೊಸ ಮನೆಯನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ಶ್ವೇತಾ ಮೊದಲು ತನ್ನ ತಾಯಿಯ ಮನೆಯ ಕೀಗಳನ್ನು ಕದ್ದು ತರಕಾರಿ ಖರೀದಿಸುವ ನೆಪದಲ್ಲಿ ತನ್ನ ಹೊಸ ಮನೆಯಿಂದ ಹೊರಬಂದಿದ್ದಾಳೆ. ನಂತರ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಬುರ್ಕಾ ಧರಿಸಿ ತಾಯಿ ಮನೆಗೆ ಹೋಗಿದ್ದಾಳೆ. ಬಳಿಕ ಮುಖ್ಯ ಬಾಗಿಲು ಮತ್ತು ಬೀರು ಲಾಕರ್ ತೆಗೆದು ಚಿನ್ನಾಭರಣ ಮತ್ತು ನಗದು ಹಣವನ್ನು ತೆಗೆದುಕೊಂಡು ಓಡಿಹೋಗಿ, ಕದ್ದ ಚಿನ್ನವನ್ನು ಮಾರಾಟ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪಾಕ್ ISIಗೆ ಸೇನಾ ಮಾಹಿತಿ ರವಾನೆ – ಭಾರತೀಯ ರಾಯಭಾರಿ ಕಚೇರಿ ಉದ್ಯೋಗಿ ಅರೆಸ್ಟ್

  • ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

    ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

    ಕಲಬುರಗಿ: ಕ್ಲುಲ್ಲಕ ಕಾರಣಕ್ಕೆ ಬೇಸತ್ತು ಬಾವಿಗೆ ಜಿಗಿದ ತಂಗಿಯನ್ನು ರಕ್ಷಿಸಲು ಹೋಗಿ ಅಣ್ಣ- ತಂಗಿ ಇಬ್ಬರೂ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಮೃತರನ್ನು ಸಂದೀಪ್‌ (21) ಮತ್ತು ನಂದಿನಿ (18) ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಾವಿಗೆ ಹಾರಿದ ತಂಗಿ: ನಂದಿನಿಗೆ ಕಾಲೇಜಿಗೆ ಹೋಗು ಎಂದು ಅಣ್ಣ ಸಂದೀಪ್‌ ಬೈದು ಬುದ್ಧಿವಾದ ಹೇಳಿದ್ದಾನೆ. ಇಷ್ಟಕ್ಕೆ ಬೇಸರಗೊಂಡ ನಂದಿನಿ ಹತ್ತಿರದ ಬಾವಿಗೆ ಹೋಗಿ ಜಿಗಿದಿದ್ದಾಳೆ. ಇತ್ತ ತಂಗಿ ಬಾವಿಗೆ ಹಾರಿದ ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣ ಸಂದೀಪ್‌ ಆಕೆಯನ್ನು ರಕ್ಷಣೆ ಮಾಡಲೆಂದು ತಾನೂ ಬಾವಿಗೆ ಹಾರಿದ್ದಾನೆ. ಪರಿಣಾಮ ಈಜು ಬಾರದೆ ತಂಗಿಯ ಜೊತೆ ಆತನೂ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮೇಯರ್‌ ಚುನಾವಣೆಯಲ್ಲಿ ಸೋಲು- ಗಳಗಳನೇ ಕಣ್ಣೀರಿಟ್ಟ ಎಎಪಿ ಅಭ್ಯರ್ಥಿ

    ಗೊತ್ತಾಗಿದ್ದು ಹೇಗೆ..?: ಬಾವಿಯ ಪಕ್ಕದಲ್ಲಿ ಮೃತ ನಂದಿನಿ ತಲೆಗೆ ಮುಡಿದುಕೊಂಡ ಹೂವು ಬಿದ್ದಿರುವುದನ್ನು ಗಮನಿಸಿದ ಪಾಲಕರಿಗೆ ಅನುಮಾನ ಬಂದು ಹುಡುಕಾಟ ನಡೆಸಿದಾಗ ಅಣ್ಣ-ತಂಗಿಯ ಶವವಾಗಿ ಪತ್ತೆಯಾಗಿದ್ದಾರೆ.

    ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಡಿವೈಎಸ್.ಪಿ ಎಸ್.ಎಸ್ ಹಿರೇಮಠ ತಿಳಿಸಿದ್ದಾರೆ.

  • ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    ಲಕ್ನೋ: ಸಹೋದರಿಯ (Sister) ಪ್ರೀತಿಯನ್ನು ವಿರೋಧಿಸಿ ವ್ಯಕ್ತಿಯೋರ್ವ ಆಕೆಯ ಶಿರಚ್ಛೇದವನ್ನು (Behead) ಮಾಡಿದ್ದು, ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸ್ ಆತನನ್ನು ಬಂಧಿಸಿದ ಘಟನೆ ಉತ್ತರಪ್ರದೇಶದ (Uttar Pradesh) ಬಾರಾಬಂಕಿಯಲ್ಲಿ (Barabanki) ನಡೆದಿದೆ.

    ರಿಯಾಜ್ (22) ಬಂಧಿತ ಆರೋಪಿ. ಮೃತ ಸಹೋದರಿ ಆಶಿಫಾ (18) ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದ ಬಾರಾಬಂಕಿಯ ಫತೇಪುರ್ ಪ್ರದೇಶದ ಮಿಥ್ವಾರ ಗ್ರಾಮದಲ್ಲಿ ಘಟನೆ ನಡೆದಿದೆ. ಆಶಿಫಾ ಇತ್ತೀಚಿಗೆ ಅದೇ ಗ್ರಾಮದ ಚಂದ್ ಬಾಬು ಎಂಬಾತನೊಂದಿಗೆ ಓಡಿಹೋಗಿದ್ದು, ಆಕೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಆಕೆಯನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಚಂದ್ ಬಾಬುವನ್ನು ಜೈಲಿಗಟ್ಟಿದ್ದರು. ಇದನ್ನೂ ಓದಿ: ವ್ಯಕ್ತಿಯ ತಲೆ ಕತ್ತರಿಸಿ ಬಿದಿರಿನ ಬೇಲಿಗೆ ನೇತುಹಾಕಿದ್ದ ದುಷ್ಕರ್ಮಿಗಳು – ಮಣಿಪುರದ ಮತ್ತೊಂದು ವೀಡಿಯೋ ವೈರಲ್‌

    ತಂಗಿಯ ಪ್ರೇಮ ಸಂಬಂಧವನ್ನು ರಿಯಾಜ್ ವಿರೋಧಿಸುತ್ತಿದ್ದ. ಈ ವಿಷಯವಾಗಿ ಅಣ್ಣ-ತಂಗಿಯ ನಡುವೆ ಜಗಳ ನಡೆದಿದ್ದು, ಸಿಟ್ಟಿನ ಭರದಲ್ಲಿ ರಿಯಾಜ್ ಹರಿತವಾದ ಆಯುಧದಿಂದ ತನ್ನ ತಂಗಿ ಆಶಿಫಾಳ ಶಿರಚ್ಛೇದ ಮಾಡಿ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ (Arrest) ಎಂದು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅಶುತೋಷ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಡ್ರಗ್ಸ್ ಚಾಕ್ಲೇಟ್ ಮಾರಾಟ- ಇಬ್ಬರು ವಶಕ್ಕೆ

    ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ತಂಡ ಭೇಟಿ ನೀಡಿದ್ದು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಆರೋಪಿ ರಿಯಾಜ್‌ನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಪ್ರಮುಖ ಆರೋಪಿ ಮನೆಗೆ ಬೆಂಕಿ ಹಾಕಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತೆಯ ಮೇಲೆ ಅಪ್ರಾಪ್ತ ಸಹೋದರರಿಂದ ಸಾಮೂಹಿಕ ಅತ್ಯಾಚಾರ- ಇಬ್ಬರು ಅರೆಸ್ಟ್

    ಜೈಪುರ್: 11 ವರ್ಷದ ಬಾಲಕಿಯ ಮೇಲೆ ಆಕೆಯ ಇಬ್ಬರು ಸೋದರ ಸಂಬಂಧಿಗಳೇ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದಿದೆ. ಇಬ್ಬರು ಸೋದರ ಸಂಬಂಧಿಗಳೂ ಅಪ್ರಾಪ್ತರಾಗಿದ್ದು 13 ಮತ್ತು 15 ವರ್ಷದವರಾಗಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಪುರದ ಅಂಬಾಮಾತಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯ ಎಸಗಿದ ಇಬ್ಬರನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆವರೆಗೂ ಬಾಲಾಪರಾಧಿ ಕೇಂದ್ರಕ್ಕೆ ವರ್ಗಾಯಿಸಲು ನಿರ್ಧಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಗೆ ತೆರಳುತ್ತಿದ್ದ ಸ್ವಾಮೀಜಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

    ಸಂತ್ರಸ್ತ ಬಾಲಕಿ ತನ್ನ ತಂದೆಯ ಚಿಕ್ಕಮ್ಮನ ನಿವಾಸಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆಕೆಯ 13 ಮತ್ತು 15 ವರ್ಷ ವಯಸ್ಸಿನ ಇಬ್ಬರು ಸೋದರ ಸಂಬಂಧಿಗಳು ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ ನಂತರ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಕೂಡಲೇ ಆಕೆಯ ಸಂಬಂಧಿಕರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಡಿಎಸ್‍ಪಿ ಚೇತನಾ ಭಾಟಿ ಅವರು ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

  • ಜಾರಕಿಹೊಳಿ ಸಹೋದರರ ಹಿರಿಯ ಸಹೋದರಿ ಹೃದಯಾಘಾತದಿಂದ ನಿಧನ

    ಜಾರಕಿಹೊಳಿ ಸಹೋದರರ ಹಿರಿಯ ಸಹೋದರಿ ಹೃದಯಾಘಾತದಿಂದ ನಿಧನ

    ಬೆಳಗಾವಿ: ಜಾರಕಿಹೊಳಿ ಸಹೋದರರ ಹಿರಿಯ ಸಹೋದರಿ (Jarakiholi Brothers Sister) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಗೋಕಾಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಗಮವ್ವ ನಿಂಗಪ್ಪ ಸುಲಧಾಳ (67) ನಿಧನರಾಗಿದ್ದಾರೆ. ಇವರು ಗೋಕಾಕ್ ನಗರಸಭೆಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಲಗಮವ್ವ ಸುಲಧಾಳ ಅಗಲಿದ್ದಾರೆ.

    ಕೆಲವೇ ಹೊತ್ತಿನಲ್ಲಿ ಗೋಕಾಕ್ (Gokak) ನಗರದ ಕುಂಬಾರ ಗಲ್ಲಿಯ ರುದ್ರಭೂಮಿಯಲ್ಲಿ ಲಗಮವ್ವ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಸಹೋದರಿಯ ಅಂತ್ಯಕ್ರಿಯೆಗೆ ಸತೀಶ್ ಜಾರಕಿಹೊಳಿ (Satish Jarakiholi) ಗೈರಾಗಲಿದ್ದಾರೆ. ಇದನ್ನೂ ಓದಿ: ಹೆಂಡ್ತಿ, ಮಕ್ಕಳನ್ನು ನೋಡಲು ಅಮೆರಿಕಾಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

    ಸಹೋದರಿ ಅಕಾಲಿಕ ನಿಧನಕ್ಕೆ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳತೆ, ಸೌಜನ್ಯತೆಯ ಆಗರವಾಗಿದ್ದ ಸಹೋದರಿ ಬಾಲ್ಯದಿಂದಲೂ ಪ್ರೋತ್ಸಾಹಿಸಿ ಮುನ್ನಡೆಸಿದ್ದಾರೆ. ಅವರ ಮಾರ್ಗದರ್ಶನ ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ತನ್ನ ತಾಯಿ ಸ್ವರೂಪಳಾಗಿದ್ದ ಸಹೋದರಿ ಕಳೆದುಕೊಂಡು ತೀವ್ರ ಆಘಾತವಾಗಿದೆ ಎಂದು ಸತೀಶ್ ಸಂತಾಪ ಸೂಚಿಸಿದ್ದಾರೆ.

  • ತಂಗಿಯ ಫಸ್ಟ್ ಪೀರಿಯೆಡ್ ರಕ್ತ ನೋಡಿ ಶಂಕಿಸಿ ಕೊಲೆಗೈದ ಅಣ್ಣ!

    ತಂಗಿಯ ಫಸ್ಟ್ ಪೀರಿಯೆಡ್ ರಕ್ತ ನೋಡಿ ಶಂಕಿಸಿ ಕೊಲೆಗೈದ ಅಣ್ಣ!

    ಮುಂಬೈ: ತಂಗಿಯ ಫಸ್ಟ್ ಪೀರಿಯಡ್‍ (Periods) ನ ರಕ್ತದ ಕಲೆ ನೋಡಿದ ಸಹೋದರ ಅನುಮಾನಗೊಂಡು ಆಕೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರ (Maharastra) ದ ಥಾಣೆಯಲ್ಲಿ ನಡೆದಿದೆ.

    ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಉಲ್ಲಾಸ್‍ನಗರ ಪ್ರದೇಶದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    12 ವರ್ಷದ ಹುಡುಗಿಗೆ ಕೆಲವು ದಿನಗಳ ಹಿಂದೆ ಋತುಸ್ರಾವ ಆರಂಭವಾಗಿದೆ. ಆದರೆ ಇದು ಅವಳ ಗಮನಕ್ಕೆ ಬಂದಿರಲಿಲ್ಲ. ಅಲ್ಲದೆ ಅವಳ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣುತ್ತಿದ್ದವು. ಇದನ್ನು ಗಮನಿಸಿದ ಸಹೋದರ ಆಕೆಯನ್ನು ಪ್ರಶ್ನಿಸಿದ್ದಾನೆ. ಯಾರ ಜೊತೆಗೋ ಸಂಭೋಗ ನಡೆಸಿದ್ದಾಳೆ ಎಂದು ಆರೋಪಿಸಿದ್ದಾನೆ.

    ಬಾಲಕಿ ತನ್ನ ಅಣ್ಣ ಹಾಗೂ ಅತ್ತಿಗೆ ಜೊತೆ ವಾಸವಾಗಿದ್ದಳು. ಹೀಗಾಗಿ ತನಗೆ ಏನಾಗುತ್ತಿದೆ ಎಂಬುದನ್ನು ಅವರ ಜೊತೆ ಹೇಳಿಕೊಳ್ಳಲು ಹಿಂಜರಿದಿದ್ದಾಳೆ. ಅಲ್ಲದೆ ಋತುಸ್ರಾವದ ಬಗ್ಗೆ ಅವಳಿಗೆ ಯಾವುದೇ ಜ್ಞಾನ ಕೂಡ ಇರಲಿಲ್ಲ. ಇತ್ತ ಸಹೋದರಿ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡು ಅನುಮಾನದಿಂದ ಸಿಟ್ಟುಗೊಂಡ ಅಣ್ಣ, ಆಕೆಯ ಬಾಯಿ, ನಾಲಿಗೆ ಹಾಗೂ ದೇಹದ ಇತರೆ ಭಾಗಗಳನ್ನು ಸುಟ್ಟಿದ್ದಾನೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಮಡು ಹೋಗಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

    ಘಟನೆ ಸಂಬಂಧ ಸಹೋದರನ ವಿರುದ್ಧ ಉಲ್ಲಾಸ್‍ನಗರ ಪೊಲೀಸ್ ಠಾಣೆ (Ulhasnagar police station) ಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಫ್ಲ್ಯಾಟ್‌ನ 10ನೇ ಮಹಡಿಯಿಂದ ಬಿದ್ದು ನೀಟ್ ವಿದ್ಯಾರ್ಥಿ ಸಾವು