Tag: Siruguppa

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಕೊಲೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಕೊಲೆ

    ಬಳ್ಳಾರಿ: ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯ(Ballari) ಕಣೇಕಲ್ ರಸ್ತೆಯ ರಾಣಿತೋಟ ಏರಿಯಾದಲ್ಲಿ ಇಂದು ಮುಂಜಾನೆ ನಡೆದಿದೆ.

    ಸಿರುಗುಪ್ಪ(Siruguppa) ತಾಲೂಕಿನ ಕೊಂಚಗೇರಿ ಗ್ರಾಮದ ವೆಂಕಟೇಶ್ ಕೊಲೆಯಾಗಿರುವ ವ್ಯಕ್ತಿ. ರಾಣಿತೋಟದ ಜುಮ್ಮಾ ಮಸೀದಿಯ ಬಳಿ ದುಷ್ಕರ್ಮಿಗಳು ವೆಂಕಟೇಶ್‌ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರ| ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

    ಹತ್ಯೆಯ ವಿಷಯ ತಿಳಿದ ಮೃತ ವೆಂಕಟೇಶ್ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ವೆಂಕಟೇಶ್ ಕೊಲೆಗೆ ಪತ್ನಿ ನೀಲಮ್ಮ ಹಾಗೂ ಕುಟುಂಬಸ್ಥರೇ ಕಾರಣ ಎಂದು ಮೃತ ವೆಂಕಟೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಸೆಕೆಯಿಂದ ಕಂಗೆಟ್ಟನಾ ಕಾಡಿನ ರಾಜ? – ಮಧ್ಯರಾತ್ರಿ ಮನೆಯೊಳಗೆ ಬಂದು ಫ್ರಿಡ್ಜ್ ಮೇಲೆ ಕುಳಿತ ಸಿಂಹ!

    ಮೃತ ವೆಂಕಟೇಶ್ ಹಾಗೂ ನೀಲಮ್ಮ ಮದುವೆ ಆಗಿ 10 ವರ್ಷಗಳಾಗಿತ್ತು. ಮದುವೆ ಆದ ಮೇಲೆ ಮನೆ ಅಳಿಯನಾಗಿ ಬಂದಿದ್ದ ವೆಂಕಟೇಶ್‌ಗೆ ಪತ್ನಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂದು ವೆಂಕಟೇಶ್ ತಾಯಿ ದೊಡ್ಡ ಬಸಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ

    ಘಟನೆ ಕುರಿತು ಬ್ರೂಸ್ ಪೇಟೆ ಠಾಣೆಯಲ್ಲಿ(Bruce Pete Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಬಾಲಕರು – ಕಾಲು ಜಾರಿ ಓರ್ವ ಸಾವು, ಇಬ್ಬರ ರಕ್ಷಣೆ

    ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಬಾಲಕರು – ಕಾಲು ಜಾರಿ ಓರ್ವ ಸಾವು, ಇಬ್ಬರ ರಕ್ಷಣೆ

    ಬಳ್ಳಾರಿ: ಎಲ್‌ಎಲ್‌ಸಿ ಕಾಲುವೆಯಲ್ಲಿ (Canal) ಕಾಲು ಜಾರಿಬಿದ್ದು ಓರ್ವ ಬಾಲಕ ಮೃತಪಟ್ಟಿದ್ದು, ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ (Siruguppa) ತಾಲೂಕಿನ ಶ್ರೀನಿವಾಸ್ ಕ್ಯಾಂಪ್ ಬಳಿ ನಡೆದಿದೆ.

    ವಿಕ್ರಂ(14) ಮೃತ ಬಾಲಕ. ವಿಪರೀತ ಬಿಸಿಲಿನ ಪರಿಣಾಮ ವಿಕ್ರಂ, ಶಂಭುಲಿಂಗ ಹಾಗೂ ದೀಪು ಎಂಬ ಮೂವರು ಯುವಕರು ಸ್ನಾನಕ್ಕೆಂದು ಎಲ್‌ಎಲ್‌ಸಿ ಕಾಲುವೆಗೆ ತೆರಳಿದ್ದರು. ಕಾಲುವೆಗೆ ಇಳಿಯುವಾಗ ಮೂವರೂ ಬಾಲಕರು ಕಾಲು ಜಾರಿ ಬಿದ್ದಿದ್ದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ತಟ್ಟಿದ ಬರ – 20 ಗ್ರಾಮಗಳಲ್ಲಿ ಒಂದು ತೊಟ್ಟು ನೀರಿಲ್ಲ, ಬತ್ತಿದ ಬಾವಿಗಳ ಅಂತರ್ಜಲ

    ಈ ವೇಳೆ ವಿಕ್ರಂ ನೀರಿನ ರಭಸಕ್ಕೆ ಸಿಲುಕಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಬಾಲಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ದುರಂತ – ಕೆಳಹಂತದ 4 ಅಧಿಕಾರಿಗಳು ಅಮಾನತು

    ವಿಕ್ರಂ ಮೃತದೇಹಕ್ಕಾಗಿ ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರಿದಿದ್ದು, ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆನೇಕಲ್‌| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ

  • ಬಳ್ಳಾರಿ| ಶಾಲೆಯ ಪಕ್ಕದ ಹಳ್ಳದಲ್ಲಿದ್ದ ಎರಡು ಮೊಸಳೆ ಸೆರೆ

    ಬಳ್ಳಾರಿ| ಶಾಲೆಯ ಪಕ್ಕದ ಹಳ್ಳದಲ್ಲಿದ್ದ ಎರಡು ಮೊಸಳೆ ಸೆರೆ

    ಬಳ್ಳಾರಿ: ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಶಾಲೆ (School) ಪಕ್ಕದ ಹಳ್ಳದಲ್ಲಿದ್ದ ಎರಡು ಮೊಸಳೆಗಳನ್ನು (Crocodile) ಅರಣ್ಯ ಇಲಾಖೆ ಸೆರೆ ಹಿಡಿದಿದೆ.

    ಕಳೆದ ಮೂರು ದಿನಗಳ ಹಿಂದೆ ನಿಟ್ಟೂರಿನ ಸಾಮ್ರಾಟ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆಯ ಹಳ್ಳದಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದರು. ಇದನ್ನೂ ಓದಿ: ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ

     

    ಮೊಸಳೆ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ (Forest Department) ಅಧಿಕಾರಿಗಳ ಗಮನಕ್ಕೆ ತಂದಿದದ್ದರು. ವೇಷಗಾರ ಮಲ್ಲಯ್ಯ ಸಹಾಯದಿಂದ ಅರಣ್ಯ ಇಲಾಖೆ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

  • ಕುಖ್ಯಾತ ಮನೆಗಳ್ಳರ ಅರೆಸ್ಟ್ – 20 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

    ಕುಖ್ಯಾತ ಮನೆಗಳ್ಳರ ಅರೆಸ್ಟ್ – 20 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

    ರಾಯಚೂರು: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಐದು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರನ್ನು ಹಿಡಿಯುವಲ್ಲಿ ಸಿಂಧನೂರು (Sindhanur) ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯ (Bellary) ಸಿರಗುಪ್ಪಾ (Siruguppa) ಮೂಲದ ನಾಗರಾಜ್, ಉಲ್ಲೇಶ್ ಹಾಗೂ ಶ್ರೀಕಾಂತ್ ಬಂಧಿತ ಆರೋಪಿಗಳು.

    ಆರೋಪಿಗಳಿಂದ 19 ಲಕ್ಷ 86 ಸಾವಿರ ರೂ. ಬೆಲೆ ಬಾಳುವ 331 ಗ್ರಾಂ ಬಂಗಾರ (Gold), 10 ಸಾವಿರ ರೂ. ಬೆಲೆಬಾಳುವ 150 ಗ್ರಾಂ ಬೆಳ್ಳಿ ಆಭರಣ, 16 ಸಾವಿರ ರೂ. ನಗದು, ಒಂದು ಬೈಕ್ ಸೇರಿ 20 ಲಕ್ಷ 12 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಾ.26 ರಂದು ಸಿಂಧನೂರು ತಾಲೂಕಿನ ಗೊರೆಬಾಳ ಕ್ಯಾಂಪ್‍ನಲ್ಲಿ ಹಾಡಹಗಲೇ ಮನೆ ಬೀಗಮುರಿದು ಶೇಷಗಿರಿರಾವ್ ಎಂಬುವವರ ಮನೆ ಕಳ್ಳತನ ಮಾಡಲಾಗಿತ್ತು. ಮನೆಯಲ್ಲಿದ್ದ 256 ಗ್ರಾಂ ಚಿನ್ನಾಭರಣ, 4 ಲಕ್ಷ 50 ಸಾವಿರ ರೂ. ನಗದು ದೋಚಿದ್ದರು. ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರ- ಕೃತ್ಯದ ವೇಳೆ ಬಳಸಿದ್ದ ಶರ್ಟ್ ಬಣ್ಣದಿಂದ ಆರೋಪಿ ಅರೆಸ್ಟ್

    ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳರ ಪತ್ತೆಗೆ ಪೊಲೀಸ್ ವಿಶೇಷ ತಂಡ ರಚಿಸಲಾಗಿತ್ತು. ಬಂಧಿತ ಆರೋಪಿಗಳು ಇದರ ಜೊತೆಗೆ ಸಿಂಧನೂರು ಗ್ರಾಮೀಣ ಠಾಣೆ ಹಾಗೂ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನ ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್

  • ಕೊರೊನಾ ಹಿನ್ನೆಲೆ ಕೆಲಸ ಸಿಗದೆ ಕಳ್ಳತನಕ್ಕಿಳಿದಿದ್ದ 7 ಮಂದಿಯ ಬಂಧನ

    ಕೊರೊನಾ ಹಿನ್ನೆಲೆ ಕೆಲಸ ಸಿಗದೆ ಕಳ್ಳತನಕ್ಕಿಳಿದಿದ್ದ 7 ಮಂದಿಯ ಬಂಧನ

    – 5.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 19 ಬೈಕ್ ವಶಕ್ಕೆ

    ಬಳ್ಳಾರಿ: ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡ ದಾರಿ ಕಾಣದೆ ಕಳ್ಳತನಕ್ಕಿಳಿದಿದ್ದ 7 ಮಂದಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ.

    ಜಿಲ್ಲೆಯ ಸಿರುಗುಪ್ಪ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಗಳ್ಳತನದಲ್ಲಿ ಭಾಗಿಯಾಗಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಸಿರುಗುಪ್ಪ ನಗರದ ಉಲ್ಲೇಶ್ (22) ನಾಗರಾಜ್ (21) ಇಸ್ಮಾಯಿಲ್ (27) ಸೇರಿದಂತೆ ಒಟ್ಟು ಏಳು ಜನ ಬಂಧನಕ್ಕೊಳಗಾದ ಆರೋಪಿಗಳಾಗಿದ್ದಾರೆ. ಸಿರುಗುಪ್ಪ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆರೋಪಿಗಳು ಬೈಕ್, ಮೊಬೈಲ್ ಫೋನ್, ಒಡವೆಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ 7.05 ಲಕ್ಷ ರೂ. ಮೌಲ್ಯದ 16 ಮೋಟಾರ್ ಸೈಕಲ್, 5.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಒಂಬತ್ತು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಸಿರುಗುಪ್ಪ ನಗರದ ಬಿ.ರಾಘವೇಂದ್ರ ನೀಡಿದ ದೂರಿನನ್ವಯ ಕಳ್ಳರ ಪತ್ತೆಗೆ ಪೊಲೀಸರ ಬಲೆ ಬೀಸಿ ನಿನ್ನೆ ರಾತ್ರಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕೇವಲ ಸಿರುಗುಪ್ಪ ಮಾತ್ರವಲ್ಲದೇ ದಾವಣಗೆರೆ, ರಾಯಚೂರು ಭಾಗದಲ್ಲೂ ಕಳ್ಳತನ ಮಾಡುತ್ತಿದ್ದರು. ಕಳೆದ ಮೂರು ತಿಂಗಳಿಂದ ಕೆಲಸ ಕಳೆದುಕೊಂಡಿದ್ದ ಏಳು ಜನ ಆರೋಪಿಗಳು, ಕಳ್ಳತನ ಮಾಡಲು ಮುಂದಾಗಿದ್ದರು. ಕೃತ್ಯಕ್ಕಿಳಿಯುವ ಮುನ್ನ ಆರೋಪಿಗಲು ರೈಸ್ ಮಿಲ್, ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ದಾಖಲಾಗಿದೆ.

  • ರಿಪೋರ್ಟ್ ಬರೋ ಮುನ್ನವೇ ಕರ್ತವ್ಯಕ್ಕೆ ಹಾಜರ್- ಬ್ಯಾಂಕ್ ಸೀಲ್‍ಡೌನ್

    ರಿಪೋರ್ಟ್ ಬರೋ ಮುನ್ನವೇ ಕರ್ತವ್ಯಕ್ಕೆ ಹಾಜರ್- ಬ್ಯಾಂಕ್ ಸೀಲ್‍ಡೌನ್

    ಬಳ್ಳಾರಿ: ಜಿಲ್ಲೆಯ ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯ ವಹಿಸಿ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿದೆ. ಕೋವಿಡ್ ಟೆಸ್ಟ್ ಮಾಡಿಸಿಕೊಂಡ ವ್ಯಕ್ತಿ ರಿಪೋರ್ಟ್ ಬರದೇ ಇದ್ದರೂ ವ್ಯಕ್ತಿ ಕೆಲಸಕ್ಕೆ ಹಾಜರಾಗುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಆತಂಕ ಉಂಟು ಮಾಡಿದ್ದಾರೆ.

    ಜಿಲ್ಲೆಯ ಸಿರಗುಪ್ಪದ ಪಿಎಲ್‍ಡಿ ಬ್ಯಾಂಕ್‍ನ ಮ್ಯಾನೇಜರ್ ಕೋವಿಡ್ ಪರೀಕ್ಷೆ ಮಾಡಿದ್ದು ಆರೋಗ್ಯ ಇಲಾಖೆ ವರದಿ ಕೊಡುವ ಮುಂಚೆಯೇ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಹಿಂದೆ ಇದೇ ಬ್ಯಾಂಕ್‍ನ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹೀಗಾಗಿ ಬ್ಯಾಂಕ್ ಸಿಬ್ಬಂದಿಗೆ ಎಲ್ಲರಿಗೂ ಪ್ರಾಥಮಿಕ ಸಂಪರ್ಕ ಎಂದು ಕಳೆದ ಮೂರು ದಿನಗಳ ಹಿಂದೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆದರೆ ಮೂರು ದಿನಗಳ ಅಂತರದಲ್ಲಿ ಬ್ಯಾಂಕ್ ಅಧ್ಯಕ್ಷನ ಮಗನ ಜೊತೆಯಲ್ಲಿ ಬೆಂಗಳೂರು ಸುತ್ತಿ ಬಂದಿದ್ದರು. ಮೇಲಾಗಿ ಇಂದು ಸಹ ಬ್ಯಾಂಕ್ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಇಂದು ಬ್ಯಾಂಕ್ ಮ್ಯಾನೇಜರ್ ವರದಿ ಪಾಸಿಟಿವ್ ಬಂದಿದೆ.

    ಕರ್ತವ್ಯಕ್ಕೆ ಹಾಜರಾಗಿದ್ದ ಬ್ಯಾಂಕ್ ಮ್ಯಾನೇಜರ್ ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕಚೇರಿಯಿಂದಲೇ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಇವರ ಜೊತೆಯಲ್ಲಿ ಸುತ್ತಾಡಿದ ಬ್ಯಾಂಕ್ ಅಧ್ಯಕ್ಷರ ಮಗ ಹಾಗೂ ಕಾರ್ ಚಾಲಕನನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಆರೋಗ್ಯ ಇಲಾಖೆ ಬ್ಯಾಂಕ್ ಸಿಬ್ಬಂದಿಗೆ ಬ್ಯಾಂಕ್‍ನಲ್ಲಿ ಪತ್ತೆಯಾದ ಮೊದಲ ವ್ಯಕ್ತಿಯ ಜೊತೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರ ಸ್ವಾಬ್ ಟೆಸ್ಟ್ ಮಾಡಿ ಹೋಮ್ ಕ್ವಾರಂಟೈನ್ ಮಾಡಿತ್ತು. ಆದರೆ ಆರೋಗ್ಯ ಇಲಾಖೆಯ ನಿಮಯ ಪಾಲನೆ ಮಾಡದೇ ಮ್ಯಾನೇಜರ್ ಬೆಂಗಳೂರು ಸುತ್ತಿ ಬಂದಿದ್ದಾರೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ ಐವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಪಿಎಲ್‍ಡಿ ಬ್ಯಾಂಕ್ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

  • ಅಬಕಾರಿ ಕಚೇರಿಯಲ್ಲಿದ್ದ ಮದ್ಯ ಕದ್ದ ಕುಡುಕರು

    ಅಬಕಾರಿ ಕಚೇರಿಯಲ್ಲಿದ್ದ ಮದ್ಯ ಕದ್ದ ಕುಡುಕರು

    ಬಳ್ಳಾರಿ: ದೇಶಾದ್ಯಂತ ಸಂಪೂರ್ಣ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲಿಯೂ ಮದ್ಯ ಸಿಗುತ್ತಿಲ್ಲ. ಹೀಗಾಗಿ ಕೆಲ ಕುಡುಕರು ಅಬಕಾರಿ ಇಲಾಖೆ ಕಚೇರಿಯಲ್ಲಿ ಇಟ್ಟಿದ್ದ ಮದ್ಯವನ್ನು ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸಿರಗುಪ್ಪ ನಗರದಲ್ಲಿ ನಡೆದಿದೆ.

    ಸಿರುಗುಪ್ಪ ನಗರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದು ಕಚೇರಿಯಲ್ಲಿ ಇಟ್ಟಿದ್ದರು. ಇತ್ತ ಕಳೆದೊಂದು ವಾರದಿಂದ ರಾಜ್ಯದಲ್ಲಿ ಎಲ್ಲಿಯೂ ಮದ್ಯದ ಸಿಗುತ್ತಿಲ್ಲ. ಹೀಗಾಗಿ ಕಳ್ಳರು ಅಬಕಾರಿ ಕಚೇರಿಯಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ಕದಿಯಲು ಪ್ಲಾನ್ ಮಾಡಿದ್ದರು. ಅದರಂತೆ ಕಚೇರಿಯ ಹಿಂಬದಿಯಿಂದ ಹತ್ತಿದ ಕಳ್ಳರು ಹೆಂಚುಗಳನ್ನು ತೆಗೆದು ಒಳಗೆ  ನುಸುಳಿ ಸುಮಾರು 25 ಸಾವಿರ ರೂ. ಮೌಲ್ಯದ 7 ಬಾಕ್ಸ್ ಗಳನ್ನು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಮದ್ಯ ಸಿಗದಿದ್ದರೂ ಗುಂಡು ಪ್ರಿಯರಿಗೆ ಶಾಕ್

    ಈ ಸಂಬಂಧ ಮಾಹಿತಿ ಸಿಗುತ್ತಿದ್ದ ಸ್ಥಳಕ್ಕೆ ಜಿಲ್ಲೆಯ ಅಬಕಾರಿ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಕಳ್ಳತದ ಕುರಿತು ಸಿರಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಲಾಕ್‍ಡೌನ್‍ನಿಂದ ಎಣ್ಣೆ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಮಂಗಳವಾರ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ವಾರದಲ್ಲಿ ಮದ್ಯಕ್ಕಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 13ಕ್ಕೆ ಏರಿದೆ. ಕೊರೊನಾಗೂ ಇಷ್ಟು ಜನ ಸಾವನ್ನಪ್ಪಿಲ್ಲ.

    ಶಿವಮೊಗ್ಗ, ರಾಮನಗರ, ಉಡುಪಿಯಲ್ಲಿ ತಲಾ ಒಬ್ಬರು ಮಂಗಳವಾರ ನೇಣಿಗೆ ಶರಣಾಗಿದ್ದಾರೆ. ಕಲಬುರಗಿಯ ಕುಡುಕರು, ಎಣ್ಣೆ ಸಿಗದಿದ್ದರೆ ನಾವು ಸಾಯುತ್ತೇವೆ ಎಂದು ಬೆದರಿಕೆವೊಡ್ಡಿದ್ದಾರೆ. ಕಫ್ರ್ಯೂ ಒಂದಿನ, ಎರಡು ದಿನ ಓಕೆ, ತಿಂಗಳುಗಟ್ಟಲೇ ಯಾಕೆ ಎಂದು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇತ್ತ ಬಳ್ಳಾರಿಯ ಹೂವಿನಹಡಗಲಿಯಲ್ಲೂ ಎಣ್ಣೆಗಾಗಿ ಕುಡುಕರು ಪರದಾಡಿದ್ದಾರೆ.