Tag: Sirsi

  • ಶಿರಸಿಯ ಗೌರಿ ನಾಯ್ಕ್‌ಗೆ ಬಾವಿ ತೋಡಲು ಅನುಮತಿ

    ಶಿರಸಿಯ ಗೌರಿ ನಾಯ್ಕ್‌ಗೆ ಬಾವಿ ತೋಡಲು ಅನುಮತಿ

    ಕಾರವಾರ: ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಶಿರಸಿಯ ಗೌರಿ ನಾಯ್ಕ್ (Gauri Naik) ನಡೆಸಿದ ಹೋರಾಟಕ್ಕೆ ಸರ್ಕಾರ ಕಡೆಗೂ ಮಣಿದಿದೆ.

    ಭಾರೀ ಟೀಕೆ, ಆಕ್ರೋಶ, ಪ್ರತಿಭಟನೆಗಳ ನಂತ್ರ ಗೌರಿ ನಾಯ್ಕ್ ಅವರಿಗೆ ಬಾವಿ ತೋಡುವುದನ್ನು ಮುಂದುವರಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ. ಇಂದು ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಸ್ಥಳಕ್ಕೆ ಭೇಟಿ ನೀಡಿದ್ರು. ಡಿಸಿಗೆ ಕರೆ ಮಾಡಿ ಕ್ಲಾಸ್ ತಗೊಂಡ್ರು. ಬಾವಿ ತೋಡಲು ಅನುಮತಿ ನೀಡಬೇಕು ಎಂದು ತಾಕೀತು ಮಾಡಿದರು.

    ಕೂಡಲೇ ಇದಕ್ಕೆ ಗಂಗೂಬಾಯಿ ಮಾನಕರ್ ಸ್ಪಂದಿಸಿ, ಬಾವಿ ತೋಡುವುದನ್ನು ಮುಂದುವರಿಸಲು ಗೌರಿ ನಾಯ್ಕ್ ಅವರಿಗೆ ಪರ್ಮಿಷನ್ ಕೊಟ್ಟರು. ಬಾವಿಯಲ್ಲಿ ನೀರು ಬಂದ ನಂತ್ರ ಬಾವಿಗೆ ‘ಗೌರಿ ಬಾವಿ’ ಎಂದು ಹೆಸರಿಡುವ ಭರವಸೆಯನ್ನು ಕೂಡ ಸಂಸದರು ನೀಡಿದ್ರು. ಇದಕ್ಕೆ ಗೌರಿ ನಾಯ್ಕ್ ಸಂತಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಗುರುವಾರ ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಸೇರ್ಪಡೆ

    ಗೌರಿ ನಾಯ್ಕ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದಲ್ಲಿ ಏಕಾಂಗಿಯಾಗಿ ಬಾವಿ ತೋಡ್ತಿದ್ದಾರೆ. ಆದ್ರೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಇದಕ್ಕೆ ಅಡ್ಡಿಪಡಿಸಲು ನೋಡಿತ್ತು. ಜನವರಿ 30 ರಿಂದ ಗೌರಿಯವರು ಪೆಬ್ರವರಿ 18ರ ವರೆಗೂ 30 ಅಡಿಗೂ ಹೆಚ್ಚು ಆಳ ಏಕಾಂಗಿಯಾಗಿ ಬಾವಿ ತೋಡಿದ್ದಾರೆ.

  • ಕಾರವಾರದಲ್ಲಿ ಮತಾಂತರ ಮಾಡಲು ಯತ್ನಿಸಿದ ಆರು ಮಂದಿ ಬಂಧನ

    ಕಾರವಾರದಲ್ಲಿ ಮತಾಂತರ ಮಾಡಲು ಯತ್ನಿಸಿದ ಆರು ಮಂದಿ ಬಂಧನ

    ಕಾರವಾರ: ಮತಾಂತರ (Conversion) ಮಾಡಲು ಬಂದಿದ್ದ ಆರು ಜನ ಆರೋಪಿಗಳನ್ನು ಬಂಧಿಸಿರುವ (Arrest) ಘಟನೆ ಜಿಲ್ಲೆಯ ಶಿರಸಿ (Sirsi) ತಾಲೂಕಿನ ಜಗಳಮನೆ ಗ್ರಾಮದಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆಯ ಪರಮೇಶ್ವ ನಾಯ್ಕ್, ಸುನೀತಾ ನಾಯ್ಕ್, ಧನಂಜಯ್ ಶಿವಣ್ಣ, ಶಾಲಿನಿ ರಾಣಿ, ಮುಂಡಗೊಡ ತಾಲೂಕಿನ ಕುಮಾರ ಲಮ್ಮಾಣಿ, ತಾರಾ ಲಮ್ಮಾಣಿ ಮತಾಂತರ ಮಾಡಲು ಬಂದಿದ್ದ ಆರೋಪಿಗಳು. ಜಗಳಮನೆ ಗ್ರಾಮದ ಆದರ್ಶ ನಾಯ್ಕ ಎಂಬವರ ಮನೆಗೆ ತಂಡ ಬಂದಿತ್ತು. ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು: ಡಿಕೆಶಿ ಒತ್ತಾಯ

    ತಾಲೂಕಿನ ಜಗಳಮನೆ ಗ್ರಾಮದಲ್ಲಿ ಆರೋಪಿಗಳು ಗ್ರಾಮದ ಜನರನ್ನು ಮತಾಂತರ ಮಾಡಲು ಬಂದಿದ್ದಾರೆ. ಆದರ್ಶ ಎಂಬವರ ಮನೆಗೆ ಹೋಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಮನೆಯವರಿಗೆ ಆರೋಗ್ಯ ಸರಿ ಹೋಗಬೇಕು ಎಂದರೆ ಕ್ರೈಸ್ತ ಧರ್ಮವನ್ನು ಸ್ವೀಕಾರ ಮಾಡಿ ಎಂದು ಮನವೊಲಿಸಿದ್ದಾರೆ. ಏಸು ಕ್ರಿಸ್ತ ನಿಮಗೆ ಎಲ್ಲವನ್ನು ಕೊಡುತ್ತಾನೆ. ನಿಮಗೆ ಇರುವ ಎಲ್ಲಾ ಕಷ್ಟಗಳು ದೂರ ಆಗುತ್ತೆ. ನಾವು ಕೂಡ ಮತಾಂತರ ಆಗಿದ್ದೇವೆ ಎಂದು ಹೇಳುತ್ತಾ ಆರು ಜನರು ಮನವೊಲಿಸಿದ್ದಾರೆ. ಇದನ್ನೂ ಓದಿ: ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್‌.ಅಶೋಕ್‌ ಮನವಿ

    ಇದನ್ನು ಗಮನಿಸಿದ ಆದರ್ಶ ನಾಯ್ಕ ಘಟನೆ ಕುರಿತು ಶಿರಸಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಜನರ ಮನವೊಲಿಸಲು ಪ್ರಯತ್ನಿಸುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯ ಲೋಪ ಆರೋಪ – ವಿಜಯಪುರ ಡಿಡಿಪಿಐ ಅಮಾನತು

  • ಸ್ವರ್ಣವಲ್ಲಿ ಶ್ರೀಗಳ ಪೂರ್ವಾಶ್ರಮದ ಪಿತೃವಿಯೋಗ

    ಸ್ವರ್ಣವಲ್ಲಿ ಶ್ರೀಗಳ ಪೂರ್ವಾಶ್ರಮದ ಪಿತೃವಿಯೋಗ

    ಕಾರವಾರ: ಉತ್ತರ ಕನ್ನಡದ ಶಿರಸಿಯ (Sirsi) ಸ್ವರ್ಣವಲ್ಲಿ ಮಠದ (Shree Swarnavalli Matha) ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಗೆ ಪೂರ್ವಾಶ್ರಮದ ಪಿತೃವಿಯೋಗವಾಗಿದೆ. ಅವರ ಪೂರ್ವಾಶ್ರಮದ ತಂದೆ ವೇ.ಶಿವರಾಮ ಭಟ್ಟ ನಡಗೋಡು ಅವರು ದೈವಾದೀನರಾಗಿದ್ದಾರೆ.

    ಶಿವರಾಮ ಭಟ್ಟರು ನಿತ್ಯಾನುಷ್ಠಾನಿಕರಾಗಿ, ನಿಷ್ಠಾವಂತ ವೈದಿಕರಾಗಿ ಧರ್ಮವನ್ನು ಉಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ತಮ್ಮ ಜೀವನದ ಕರ್ತವ್ಯವನ್ನು ನಿರ್ವಹಿಸಿ ಸದ್ಗತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ನಟಿ ಲೀಲಾವತಿ ಅವರ ಒಂದು ತಿಂಗಳ ತಿಥಿ ಕಾರ್ಯ

    ಅವರು ಮೂರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹವ್ಯಕ ವಿಧಿ ವಿಧಾನದ ಮೂಲಕ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ಆದೇಶ – ಜಿಟಿಡಿ, ಸಿಎಂ ವಾರ್‌ಗೆ ಅಖಾಡ ಫಿಕ್ಸ್

  • 174 ಶಾಲೆಗಳಲ್ಲಿ ಕುಡಿಯಲೂ ನೀರಿಲ್ಲ – ಮಳೆಯಾಗುವ ತನಕ ಅರ್ಧ ದಿನ ಶಾಲೆ ತೆರೆಯಲು ಸರ್ಕಾರಕ್ಕೆ ಮನವಿ

    174 ಶಾಲೆಗಳಲ್ಲಿ ಕುಡಿಯಲೂ ನೀರಿಲ್ಲ – ಮಳೆಯಾಗುವ ತನಕ ಅರ್ಧ ದಿನ ಶಾಲೆ ತೆರೆಯಲು ಸರ್ಕಾರಕ್ಕೆ ಮನವಿ

    ಕಾರವಾರ: ಶೈಕ್ಷಣಿಕ ವರ್ಷದ ಆರಂಭದಲ್ಲೇ ಉತ್ತರ ಕನ್ನಡದ (Uttara Kannada) ಶಿರಸಿಯ (Sirsi) 94 ಹಾಗೂ ಕಾರವಾರದ (Karwar) 80 ಶಾಲೆಗಳಲ್ಲಿ  (School) ಬಿಸಿಯೂಟಕ್ಕೆ (Mid Day Meal) ನೀರಿನ ಸಮಸ್ಯೆ (Water Scarcity) ಎದುರಾಗಿದೆ.

    ಸಾಮಾನ್ಯವಾಗಿ ಪ್ರತಿ ವರ್ಷ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಳೆಯಾಗುತಿತ್ತು. ಇದರಿಂದ ಬಿಸಿಲಿದ್ದರೂ ನೀರಿನ ಕೊರತೆ ಆಗುತ್ತಿರಲಿಲ್ಲ. ಆದರೇ ಈ ವರ್ಷ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ಮೋದಿಯನ್ನು ದೇವರೊಂದಿಗೆ ಚರ್ಚೆಗೆ ಬಿಟ್ಟರೆ, ನಾನೇನು ಸೃಷ್ಟಿ ಮಾಡಿದೆ ಅಂತ ದೇವರಿಗೇ ಕನ್ಫ್ಯೂಸ್ ಆಗುತ್ತೆ – ರಾಗಾ

    ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಶಿಕ್ಷಣ ಇಲಾಖೆ (Department of School Education and Literacy) ಅಧ್ಯಯನ ನಡೆಸಿದೆ. ಇದರ ಅನ್ವಯ 94 ಶಾಲೆಗಳ ಬಾವಿ ಸಂಪೂರ್ಣ ಬರಿದಾಗಿದೆ. ಉಳಿದ ಹಲವು ಶಾಲೆಗಳ ಬಾವಿಯಲ್ಲಿ ಅಲ್ಪ ಸ್ವಲ್ಪ ನೀರಿದ್ದು, ಮಳೆ ಆರಂಭವಾಗದಿದ್ದರೆ ಕೊರತೆ ಉಂಟಾಗಲಿದೆ. ಶಿರಸಿ 23 ಶಾಲೆಗಳು, ಸಿದ್ದಾಪುರ 25, ಯಲ್ಲಾಪುರ 6, ಮುಂಡಗೋಡ 5, ಹಳಿಯಾಳ ತಾಲೂಕಿನ 17 ಹಾಗೂ ಜೊಯಿಡಾ ತಾಲೂಕಿನಲ್ಲಿ 18 ಶಾಲೆಗಳಲ್ಲಿ ನೀರು ಸಂಪೂರ್ಣ ಬರಿದಾಗಿದೆ.

    ಶಿರಸಿಯ ಬನವಾಸಿ ಭಾಗದಲ್ಲಿ 7, ಬಂಡಲ ಭಾಗದಲ್ಲಿ 8 ಶಾಲೆಗಳಲ್ಲಿ ನೀರಿಲ್ಲ. ಉಳಿದ ಪಂಚಾಯ್ತಿಗಳಲ್ಲಿ ತಲಾ ಒಂದೆರಡು ಶಾಲೆಗಳ ಬಾವಿಗಳು ಬತ್ತಿವೆ. ಯಲ್ಲಾಪುರದ ಮಾವಿನಮನೆ, ವಜ್ರಳ್ಳಿ ಭಾಗದ ಶಾಲೆಗಳು, ಮುಂಡಗೋಡದ ಚೌಡಳ್ಳಿ ಭಾಗದ ಶಾಲೆಗಳು, ಜೊಯಿಡಾದ ಅಣಶಿ, ಕುಂಬಾರವಾಡಾ, ಪ್ರಧಾನಿ ಭಾಗದ ಶಾಲೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇನ್ನು ಕಾರವಾರದ 80 ಶಾಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕುಮಟಾದಲ್ಲಿ 32 ಶಾಲೆಗಳ ಬಾವಿಗಳು ಸಂಪೂರ್ಣ ನೀರು ಬತ್ತಿಹೋಗಿದ್ದು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

    ಅರ್ಧ ದಿನ ಮಾಡಿ:
    ಜಿಲ್ಲೆಯ ಗ್ರಾಮೀಣ ಭಾಗದ 174 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಶಾಲೆಗಳ ಬಿಸಿಯೂಟ ಹಾಗೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲು ಸಹ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗಳನ್ನು ಮುಂಗಾರು ಮಳೆ ಪ್ರಾರಂಭವಾಗುವ ವರೆಗೂ ಅರ್ಧ ದಿನಕ್ಕೆ ಮೊಟಕು ಗೊಳಿಸಬೇಕು ಎಂದು ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ್ ಶಟ್ಟಿಯವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಗಾ ಭಾಷಣದ ಮಧ್ಯೆ ಮೊಳಗಿತು ಖಲಿಸ್ತಾನ್ ಜಿಂದಾಬಾದ್ ಘೋಷಣೆ

  • ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ

    ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ

    ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹೊತ್ತಲ್ಲೇ ಪಕ್ಷಾಂತರ ಪರ್ವ ಮತ್ತೆ ಶುರುವಾಗಿದೆ. ಜೆಡಿಎಸ್‌ (JDS) ಅರಸೀಕೆರೆ (Arsikere) ಶಾಸಕ ಶಿವಲಿಂಗೇಗೌಡ (Sivalinge Gowda) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬೆಂಬಲಿಗರೊಂದಿಗೆ ತೆರಳಿದ ಶಿವಲಿಂಗೇಗೌಡರು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    ತಮ್ಮ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಅವರು, ಜೆಡಿಎಸ್ ನಾಯಕರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿಹೋಗದ ಕಾರಣ ಪಕ್ಷ ಬಿಡುವಂತಾಗಿದೆ. ಎಂಎಲ್‌ಸಿ ಎಲೆಕ್ಷನ್‌ನಲ್ಲಿನ ವಿಷಯದಲ್ಲಿ ಆದ ಸಣ್ಣ ಭಿನ್ನಾಭಿಪ್ರಾಯ ರಾಜೀನಾಮೆ ಕೊಡುವಂತಾಗಿದೆ. ಕಾರ್ಯಕರ್ತರ ಅಭಿಪ್ರಾಯದಂತೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತಿದ್ದೇನೆ ಎಂದು ತಿಳಿಸಿದರು.

    ರಾಜಕೀಯದಲ್ಲಿ ಯಾರು ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಅಣ್ಣ-ತಮ್ಮಂದಿರೇ ಬೇರೆ ಆಗುತ್ತಾರೆ. ನಾನು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದಕ್ಕೆ ಅವರು ತಪ್ಪು ತಿಳಿದುಕೊಳ್ಳಬಾರದು. ಎಷ್ಟು ದಿನ ಋಣ ಇತ್ತೋ ಅಷ್ಟು ದಿನ ಇದ್ದೆವು. ಋಣ ತೀರಿತು, ಈಗ ನಮ್ಮ ಕ್ಷೇತ್ರದ ಜನ ಹೇಳಿದಂತೆ ರಾಜೀನಾಮೆ ಕೊಟ್ಟು ಹೋಗಿದ್ದೇವೆ. ಯಾರಾದರೂ ಸವಾಲು ಹಾಕಲಿ, ಏನಾದ್ರೂ ಮಾಡಲಿ. ನಾನು ಸವಾಲು ಹಾಕುವುದಿಲ್ಲ. ಏನೂ ಮಾಡುವುದಿಲ್ಲ. ಎಲ್ಲವನ್ನೂ ಕ್ಷೇತ್ರದ ಜನಕ್ಕೆ ಬಿಡುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

    ಕಾಂಗ್ರೆಸ್‌ನಲ್ಲಿ ನನಗೇ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಘೋಷಣೆ ಆಗಲಿದೆ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬರುವ ನಾಯಕ ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.

    ಜೆಡಿಎಸ್‌ ತೊರೆದಿದ್ದ ಅರಕಲಗೂಡು ಎ.ಟಿ. ರಾಮಸ್ವಾಮಿ ಶನಿವಾರ ಬಿಜೆಪಿ ಸೇರ್ಪಡೆಗೊಂಡರು. ಇವರ ಬೆನ್ನಲ್ಲೇ ಶಿವಲಿಂಗೇಗೌಡ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವ ಬಗ್ಗೆಯೂ ಮಾತನಾಡಿದ್ದಾರೆ.

  • ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಬೊಮ್ಮಾಯಿ

    ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಬೊಮ್ಮಾಯಿ

    – ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು: ಸಿಎಂ

    ಕಾರವಾರ: ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರಣ್ಯವಾಸಿಗಳಿಗೆ ಕಾನೂನು ಸಮಸ್ಯೆ ಇದೆ. ಇದನ್ನು ಸುಪ್ರೀಂ ಕೋರ್ಟ್‍ನಲ್ಲಿ (Supreme Court) ಅರಣ್ಯ ಸಾಗುವಳಿದಾರರ ಮೂರು ತಲೆಮಾರು ಬದಲು ಒಂದೇ ತಲೆಮಾರು ಪರಿಗಣನೆ ತೆಗೆದುಕೊಳ್ಳಲು ಮನವಿ ಮಾಡಿದ್ದೇವೆ. ಜೊತೆಗೆ ಕೇಂದ್ರಕ್ಕೂ ನಮ್ಮ ಅಭಿಪ್ರಾಯ ಕಳುಹಿಸಿ ಕೊಟ್ಟಿದ್ದೇವೆ. ಸುಪ್ರಿಂಕೋರ್ಟ್ ನಿರ್ಣಯ ಬರುವವರೆಗೂ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆಗೂ ಸೂಚಿಸಲಾಗಿದೆ ಎಂದು ಹೇಳಿದರು.

    ಗ್ರೀನ್ ಬಜೆಟ್: ಅರಣ್ಯ ಭೂಮಿ ಹೆಚ್ಚಿರುವ ಉತ್ತರ ಕನ್ನಡದಲ್ಲಿ ಪರಿಸರ ರಕ್ಷಣೆಯ ಜೊತೆಗೆ ಅಭಿವೃದ್ಧಿಯನ್ನು ಕೈಗೊಳ್ಳುವ ಸವಾಲು ಇದೆ. ಈ ಹಿನ್ನೆಲೆಯಲ್ಲಿ 2022-23ರ ಬಜೆಟ್‍ನಲ್ಲಿ ಗ್ರೀನ್ ಬಜೆಟ್ ಮಾಡಲಾಗಿದ್ದು, ಅದಕ್ಕಾಗಿ ಹಣ ಮೀಸಲಿಡಲಾಗಿದೆ. ಜೊತೆಗೆ ಪಶ್ಚಿಮ ಘಟ್ಟ ಭಾಗದಲ್ಲಿ ಎಷ್ಟು ಕಾಡುಗಳು ಅಭಿವೃದ್ಧಿಗಾಗಿ ನಾಶವಾಗಿದೆಯೋ ಅದನ್ನು ಮರು ನಿರ್ಮಾಣ ಮಾಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತದೆ ಎಂದರು.

    ಪರಿಸರ ವಿಶ್ವವಿದ್ಯಾಲಯ: ಶಿರಸಿಯಲ್ಲಿ (Sirsi) ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿಶ್ವವಿದ್ಯಾಲಯವನ್ನು ಮಾಡಲಾಗುತ್ತಿದೆ. ಜನರಲ್ ಸ್ಟಡಿ ಜೊತೆಗೆ ಪರಿಸರ ಅಧ್ಯಯನ ಸಹ ಮಾಡಲಾಗುತ್ತದೆ. ತೋಟಗಾರಿಕೆ, ಅರಣ್ಯ ಕಾಲೇಜು ಇಲ್ಲಿದೆ. ಇವುಗಳನ್ನು ವಿಲೀನಗೊಳಿಸಿ ವನ್ಯಜೀವಿ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ಸೇರಿದಂತೆ ಪರಿಸರ ಪೂರಕ ಅಧ್ಯಯನಗಳಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಸ್ಥಾಪನೆ ಭರವಸೆ ನೀಡಿದರು.

    ಶಿರಸಿ ಜಿಲ್ಲೆ ಮಾಡುವ ಕುರಿತು ಸಚಿವ ಸಂಪುಟ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಉತ್ತರ ಕನ್ನಡ ಜಿಲ್ಲೆಯ ಬೇಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕುಮಟಾದಲ್ಲಿ ಅತೀ ಶೀಘ್ರದಲ್ಲಿ ಮಾಡುತ್ತೇವೆ. ಅದಕ್ಕೆ ಬೇಕಾದ ಪ್ರಕ್ರಿಯೆ ನಡೆದಿದೆ ಎಂದರು. ಇದನ್ನೂ ಓದಿ: ಗಡ್ಕರಿಗೆ ಜೀವ ಬೆದರಿಕೆ – ಹಿಂಡಲಗಾ ಕೈದಿಯ ವಿಚಾರಣೆ

    ಸಚಿವ ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಅವರ ಸೂಚನೆ ಮೇಲೆ ಮಾಡುತ್ತೇವೆ ಎಂದ ಅವರು, ಮಹಾದಾಯಿ ವಿಷಯದಲ್ಲಿ ಗೋವಾ ತಕರಾರಿಗೆ ಪ್ರತಿಕ್ರಿಯಿಸಿ ಮಹದಾಯಿ ಕಾಮಗಾರಿಯನ್ನು ಕಾನೂನು ಬದ್ಧವಾಗಿಯೇ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿರಸಿ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಗೇರಿ ಬೆಂಬಲ

    ಶಿರಸಿ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಗೇರಿ ಬೆಂಬಲ

    ಕಾರವಾರ: ಇದೇ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಶಿರಸಿ(Sirsi) ಪ್ರತ್ಯೇಕ ಜಿಲ್ಲೆ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಮಾತನಾಡಿದ್ದು, ಜಿಲ್ಲೆಯ ರಚನೆಯ ಕುರಿತು ಸಕಾರಾತ್ಮಕ ಸ್ಪಂದನೆ ಮಾಡಿದ್ದಾರೆ.‌

    ಶಿರಸಿಯಲ್ಲಿ ನಡೆದ ಕಾರ್ಮಿಕ ಇಲಾಖೆ ರಾಜ್ಯ ವಿಮಾ ಯೋಜನೆ ಚಿಕಿತ್ಸಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ರಾಜ್ಯದ ವಿವಿಧ ಜಿಲ್ಲೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡ ಶಿರಸಿ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ಬಲ ಬರುತ್ತಿದೆ. ಈ ಬಗ್ಗೆ ಸಾರ್ವಜನಿಕರು ನನ್ನ ಹಾಗೂ ಸಚಿವ ಶಿವರಾಮ ಹೆಬ್ಬಾರ್‌(Shivram Hebbar) ಅವರನ್ನು ಕೇಳುತ್ತಿದ್ದಾರೆ ಎಂದರು.‌ ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

     

    ಪ್ರತ್ಯೇಕ ಜಿಲ್ಲೆ ಬೇಡಿಕೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚಿಸಲಾಗಿದೆ. ಪ್ರತ್ಯೇಕ ಜಿಲ್ಲೆಯಾಗಲು ಸಚಿವ ಹೆಬ್ಬಾರ್‌ ಅವರ ಸಹಕಾರವೂ ಮುಖ್ಯ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರಲ್ಲಿ ಇಬ್ಬರೂ ಚರ್ಚಿಸುತ್ತೇವೆ. ಸಮಯ, ಸಂದರ್ಭ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಸಚಿವ ಹೆಬ್ಬಾರ್ ಸಹ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೆ ಹಿಂದೂ ಜನಜಾಗೃತಿ ವೇದಿಕೆ ಒತ್ತಾಯ

    ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೆ ಹಿಂದೂ ಜನಜಾಗೃತಿ ವೇದಿಕೆ ಒತ್ತಾಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿ ವಿವಾದವಾದ ಹಿನ್ನೆಲೆಯಲ್ಲಿ ಇದೀಗ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ (Marikamba Temple) ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಹಿಂದೂ ಜನ ಜಾಗೃತಿ ಸಮಿತಿಯಿಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದಾರೆ.

    ಹಿಂದೂ ಸಂಸ್ಕೃತಿ ಪ್ರಕಾರ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದಕ್ಕೆ ಮಾತ್ರ ಅವಕಾಶ ನೀಡಬೇಕು. ಅರೆಬರೆ ಬಟ್ಟೆ ಧರಿಸಿ ದೇವಸ್ಥಾನದ ಒಳಗೆ ಬರುವುದಕ್ಕೆ ಅವಕಾಶ ನೀಡಬಾರದು. ಅರೆಬರೆ ಬಟ್ಟೆ ಧರಿಸಿ ಬರುವುದರಿಂದ ದೇವಸ್ಥಾನ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ. ಈ ಕಾರಣದಿಂದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಡಳಿತ ಮಂಡಳಿಗೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ ಮಾಡಿದೆ.

    ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಈಗ ಹೇಗಿದೆ?: ಶಿರಸಿ (Sirsi) ಮಾರಿಕಾಂಬಾ ದೇವಸ್ಥಾನದಲ್ಲಿ ಜಾತಿ, ಕುಲ ಎನ್ನದೇ ದೇವಸ್ಥಾನಕ್ಕೆ ಪ್ರವೇಶವನ್ನು ಆಡಳಿತ ಮಂಡಳಿ ಕಲ್ಪಿಸಿಕೊಟ್ಟಿದೆ. ಹೆಚ್ಚಾಗಿ ಭಕ್ತರು ಬಂದಾಗ ಪಂಚೆ, ಲುಂಗಿ, ಪ್ಯಾಂಟ್ ಧರಿಸಿ ಹೋಗುವ ಪುರುಷರಿಗೆ ಹಾಗೂ ಸೀರೆ, ಚೂಡಿದಾರ, ಪ್ಯಾಂಟ್ ಧರಿಸಿದ ಮಹಿಳೆಯರಿಗೂ ಜಾತಿ ಕೇಳದೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ದೇವಸ್ಥಾನದ ಗರ್ಭಗುಡಿಯೊಳಗೆ ಅರ್ಚಕರಿಗೆ ಹೊರತುಪಡಿಸಿ ಯಾರಿಗೂ ಪ್ರವೇಶ ಇರುವುದಿಲ್ಲ.

    ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಹೇಗಿದೆ?: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ (Temple) ಒಳಗೆ ಪ್ರವೇಶಿಸಲು ಪುರುಷರು ಕಡ್ಡಾಯವಾಗಿ ಪಂಚೆ, ಶಲ್ಯ ಧಾರಣೆ ಮಾಡಿರಬೇಕು. ಮಹಿಳೆಯರು ಸೀರೆವುಟ್ಟಿರಬೇಕು. ಹೀಗಿದ್ದರೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವನ್ನು ನೀಡಲಾಗುತ್ತದೆ. ಜೊತೆಗೆ ದೇವರ ಆತ್ಮಲಿಂಗ ಸ್ಪರ್ಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ

    ಆದರೆ ಈ ಹಿಂದೆ ಕುಮಟಾ ತಾಲೂಕಿನ ಗೋಕರ್ಣ (Gokarna) ಮಹಾಬಲೇಶ್ವರ ದೇವಸ್ಥಾನದ ಒಳಗೆ ಸೀಮಿತವಾಗಿದ್ದ ವಸ್ತ್ರಸಂಹಿತೆ ರಥ ಬೀದಿಗೂ ಸಹ ವಿಸ್ತರಿಸಿತ್ತು. ರಥಬೀದಿಯಲ್ಲಿ ಜನರು ಅರೆಬರೆ ಬಟ್ಟೆ ಹಾಕಿ ಸಂಚರಿಸದಂತೆ ಆಡಳಿತ ಕಮಿಟಿ ನಿಷೇಧ ಹೇರಿತ್ತು. ಈ ಕುರಿತು ಜನರ ವಿರೋಧ ಬೆನ್ನಲ್ಲೇ ಜಿಲ್ಲಾಧಿಕಾರಿ ಸೂಚನೆ ಮೇಲೆ ರಸ್ತೆಗೆ ಹಾಕಿದ್ದ ನಾಮಫಲಕವನ್ನು ತೆಗೆದುಹಾಕಲಾಗಿತ್ತು. ನಂತರ ವಿವಾದ ತಣ್ಣಗಾಗುವ ಹೊತ್ತಲ್ಲೇ ಇದೀಗ ಹಿಂದೂ ಜನಜಾಗೃತಿ ವೇದಿಕೆ ಐತಿಹಾಸಿಕ ಹಿನ್ನೆಲೆ ಇರುವ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ವಸ್ತ್ರ ಸಂಹಿತೆ ಜಾರಿ ಮಾಡಲು ಮನವಿ ಸಲ್ಲಿಸಿದ್ದು, ಆಡಳಿತ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: JDS ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಸಂಪೂರ್ಣ ಸಾಲ ಮನ್ನಾ: HDK

    Live Tv
    [brid partner=56869869 player=32851 video=960834 autoplay=true]

  • ಶಿರಸಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 1 ರೂ. ಇಳಿಕೆ

    ಶಿರಸಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 1 ರೂ. ಇಳಿಕೆ

    ಕಾರವಾರ: ಪೆಟ್ರೋಲ್, ಡೀಸೆಲ್ ಬೆಲೆ ರಾಜ್ಯದಲ್ಲಿಯೇ ಶಿರಸಿಯಲ್ಲಿ ಗರಿಷ್ಠವಾಗಿದೆ. ಈ ಕುರಿತಂತೆ ಶಿರಸಿ ವೈದ್ಯರೊಬ್ಬರ ಸಲಹೆ ಸ್ವೀಕರಿಸಿದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶಿರಸಿ ಗ್ರಾಹಕರಿಗೆ 1 ರೂ. ರಷ್ಟು ಇಂಧನ ದರ ಕಡಿಮೆ ಮಾಡಿದೆ.

    ಕೇಂದ್ರಕ್ಕೆ ವಿವರವಾದ ಪತ್ರ ಬರೆದಿದ್ದ ಡಾ. ರವಿಕಿರಣ ಪಟವರ್ಧನ್
    ಶಿರಸಿ ಪಟ್ಟಣದ ಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿಕಿರಣ ಪಟವರ್ಧನ್ ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದಲ್ಲೇ ಶಿರಸಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಿರುವುದನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು. ಶಿರಸಿಗೆ ದೂರದ ಮಂಗಳೂರಿನಿಂದ ಇಂಧನ ಪೂರೈಸಲಾಗುತ್ತಿದೆ. ಹೀಗಾಗಿ ಸಾಗಾಟ ವೆಚ್ಛ ಅನಗತ್ಯವಾಗಿ ಗ್ರಾಹಕರ ಮೇಲೆ ಬೀಳುತ್ತಿರುವ ಅಂಶವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು

    ವೈದ್ಯರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವಾಲಯಕ್ಕೆ ಈ ಮಾಹಿತಿ ರವಾನಿಸಿ, ಡಾ. ರವಿಕಿರಣ ಅವರಿಗೆ ಹಿಂಬರಹವನ್ನೂ ಕಳಿಸಿಕೊಟ್ಟಿದ್ದರು.

    ಈಗ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ್ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಆ ಮೂಲಕ ಶಿರಸಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 1.19 ರೂ. ಮತ್ತು ಡೀಸೆಲ್ 1.01 ರೂ. ಗಳಷ್ಟು ಕಡಿಮೆಯಾಗಿದೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ- ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದು ನಾಪತ್ತೆಯಾಗಿದ್ದಾಕೆ ಕೊನೆಗೂ ಲಾಕ್

    Live Tv
    [brid partner=56869869 player=32851 video=960834 autoplay=true]

  • ಮನ್ ಕಿ ಬಾತ್‌ನಲ್ಲಿ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಸಾಧನೆ ಶ್ಲಾಘಿಸಿದ ಮೋದಿ

    ಮನ್ ಕಿ ಬಾತ್‌ನಲ್ಲಿ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಸಾಧನೆ ಶ್ಲಾಘಿಸಿದ ಮೋದಿ

    ಕಾರವಾರ: ಪ್ರಧಾನಿ ನರೇಂದ್ರ ಮೋದಿ ನಡೆಸಿದ 91ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ.

    ದೇಶದ ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು ಮಧುಕೇಶ್ವರ ಅವರ ಜೇನು ಕೃಷಿ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದರು.

    ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ ಕಳೆದ 35 ವರ್ಷದ ಹಿಂದೆ ಕೇವಲ 50 ಜೇನು ಕಾಲೋನಿಯನ್ನು ಇಟ್ಟುಕೊಂಡು ಜೇನು ಕೃಷಿ ಪ್ರಾರಂಭಿಸಿ ವಾರ್ಷಿಕ 1,500ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜೇನು ಬೆಳೆಸುತ್ತಿದ್ದಾರೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ. ಇದನ್ನೂ ಓದಿ: ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ: ಮೋದಿ

    ವಲಸ್ಪತಿ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ, ಅಂಟವಾಳ ಜೇನುತುಪ್ಪ, ಮಲ್ಲ್ಟಿಫ್ಲೋರಾ ಜೇನುತುಪ್ಪ ಸೇರಿದಂತೆ ಹಲವು ವಿಧದ ವನಸ್ಪತಿ ಜೇನು ತುಪ್ಪಗಳನ್ನು ಉತ್ಪಾದಿಸುತ್ತಾರೆ. ಇದಲ್ಲದೇ ನಿಸರಿ ಜೇನು ಕೃಷಿ ಸಹ ಮಾಡುತ್ತಿದ್ದು, ಜೇನಿನ ಮಕರಂದಗಳನ್ನು ಸಂಗ್ರಹಿಸಿ ಔಷಧಿಗೆ ಸಹ ಬಳಕೆ ಮಾಡುತ್ತಿದ್ದಾರೆ.

    ಇವರ ಜೇನುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಇಟ್ಟು ಅವುಗಳಿಂದ ತುಪ್ಪ ತಯಾರಿಸುತಿದ್ದು, ಜೇನು ಕೃಷಿಯ ಸಾಧನೆ ಅವರ ಹೆಸರನ್ನು ಪ್ರಸಿದ್ಧಿಗೆ ತಂದಿದೆ. ಈ ಕುರಿತು ಪ್ರಧಾನಿಯವರು ಪ್ರಸ್ತಾಪಿಸಿ ಇವರ ಸಾಧನೆಯನ್ನು ಬಣ್ಣಿಸಿದರು. ಇದನ್ನೂ ಓದಿ: ಅಸುರಕ್ಷತೆಯ ವಾತಾವರಣವಿದೆ, ಗನ್ ಮ್ಯಾನ್ ನೀಡಿ: ಜೆಡಿಎಸ್ ಸದಸ್ಯನ ಮನವಿ

    ಈ ಹಿಂದೆ ಪಬ್ಲಿಕ್ ಟಿವಿಯಲ್ಲೂ ಸಹ ಇವರ ಸಾಧನೆ ಕುರಿತು ವರದಿ ಪ್ರಸಾರ ಮಾಡಲಾಗಿತ್ತು. ಇನ್ನು ಇವರು ತಮ್ಮ ಮನೆಯ ಸುತ್ತ ಔಷಧೀಯ ಸಸ್ಯಗಳನ್ನು ಸಹ ಬೆಳೆಯುತ್ತಿದ್ದು, ಜೇನು ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಹಲವು ಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

    ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜೇನು ಕೃಷಿ ಬಗ್ಗೆ ಉಚಿತ ವಸತಿ ಸೌಕರ್ಯ ನೀಡಿ ತರಬೇತಿ ಹಾಗೂ ಮಾಹಿತಿಯನ್ನು ನೀಡುತ್ತಾ ಬಂದಿದ್ದು, ಆಸಕ್ತರಿಗೆ ಮಾದರಿ ಎನಿಸಿದ್ದಾರೆ.

    ಪ್ರಧಾನಿ ಹೆಸರು ಉಲ್ಲೇಖಿಸಿರುವ ಕುರಿತು ಸಂತಸ ಹಂಚಿಕೊಂಡ ಮಧುಕೇಶ್ವರ ಹೆಗಡೆಯವರು, ಜೇನು ಕೃಷಿ ಮೂಲಕ ಪ್ರಧಾನ ಮಂತ್ರಿಯವರು ನನ್ನನ್ನು ಗುರುತಿಸುವಂತೆ ಮಾಡಿದೆ. ಮೋದಿಯವರಂತಹ ಪ್ರಧಾನಿ ನನ್ನ ಹೆಸರನ್ನು ಉಲ್ಲೇಖಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನನಗೆ ಅಚ್ಚರಿಯ ಜತೆ ಸಂತಸವಾಯಿತು ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]