Tag: Sirsi

  • ಶ್ರೀಗಂಧ ಕಳ್ಳತನ – 41 ಕೆಜಿ ಶ್ರೀಗಂಧ ತುಂಡು ಸಮೇತ ಮೂವರ ಬಂಧನ

    ಶ್ರೀಗಂಧ ಕಳ್ಳತನ – 41 ಕೆಜಿ ಶ್ರೀಗಂಧ ತುಂಡು ಸಮೇತ ಮೂವರ ಬಂಧನ

    ಕಾರವಾರ: ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ಶಿಂಗನಳ್ಳಿ ಗ್ರಾಮದಲ್ಲಿನ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡುತ್ತಿದ್ದ ಮೂವರು ಮರಗಳ್ಳರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

    ಶಿಂಗನಳ್ಳಿಯ ಸುಬ್ರಾಯ ನಾರಾಯಣ ನಾಯ್ಕ(66), ರಾಮ ಅಣ್ಣಪ್ಪ ನಾಯ್ಕ(60), ಬಿಗಿರಿಕೊಪ್ಪದ ಅಬ್ದುಲ್ ರಹೀಮ್ ಅಬ್ದುಲ್ ಗಫರ್ ಸಾಬ್(63) ಬಂಧಿತ ಆರೋಪಿಗಳು. ಇದನ್ನೂ ಓದಿ: ಬೆಂಗಳೂರಿನಲ್ಲೇ ಪ್ರಭಾವಿ ಸಚಿವರ ಹನಿ ಟ್ರ್ಯಾಪ್‌ಗೆ ಮತ್ತೊಬ್ಬ ನಾಯಕನಿಂದ ಯತ್ನ!

    ಬಂಧಿತರಿAದ ಒಟ್ಟು 41.890ಕೆ.ಜಿಯ 11 ಶ್ರೀಗಂಧದ ಹಸಿತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಕತ್ತಿ, ಕೈಗರಗಸ, ನೀರಿನ ಬಾಟಲಿ, ಮೊಬೈಲ್ ಫೋನ್‌ಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ಮೀಸಲಾತಿಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಯತ್ನಾಳ್ ಪತ್ರ

    ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ.ಜಿ.ಆರ್.ಜಾನ್ಮನೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್.ಸಿ.ಎನ್. ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಜೂಜಾಟ ಪ್ರಕರಣ – ಐವರು ಪೊಲೀಸರು ಅಮಾನತು

    ಕರ್ನಾಟಕ ಅರಣ್ಯ ಕಾಯ್ದೆ 1963ರ 00 24(3), 84, 85, 87 ಆರ್/ಡಬ್ಲ್ಯೂ 86 ಮತ್ತು 1969 ಡಿ ನಿಯಮ 144, 145ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಕಾರವಾರ | ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಸಾವು

    ಕಾರವಾರ | ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಸಾವು

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರದ ನಿಲ್ಕುಂದ ಸಮೀಪದ ವಾಟೆಹೊಳೆ ಫಾಲ್ಸ್‌ನಲ್ಲಿ (VateHole Falls) ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

    ಜಲಪಾತಕ್ಕೆ ಆರು ಜನ ಯುವಕರು ತೆರಳಿದ್ದರು. ಈ ವೇಳೆ ಶಿರಸಿ (Sirsi) ಮೂಲದ ಸುಹಾಸ್ ಶಟ್ಟಿ (22) ಹಾಗೂ ಅಕ್ಷಯ್ ಭಟ್ (22) ಕಾಲುಜಾರಿ ಬಿದ್ದಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಆಗಮಿಸಿ ಶೋಧಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.

    ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ – ಜಿಲ್ಲಾಧಿಕಾರಿಗಳ ಸ್ಪಷ್ಟನೆ ಏನು?

    ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ – ಜಿಲ್ಲಾಧಿಕಾರಿಗಳ ಸ್ಪಷ್ಟನೆ ಏನು?

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಪಶ್ಚಿಮ ಘಟ್ಟ (Western Ghat) ಭಾಗದಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ಸುದ್ದಿ ʻಪಬ್ಲಿಕ್ ಟಿವಿʼಯಲ್ಲಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ. ಯಾವುದೇ ರೀತಿಯ (Earthquakes) ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ. ಹೀಗಾಗಿ ಜನ ಭಯಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ಸ್ಫೋಟ ನಡೆಸಿಲ್ಲ. ಜನ ಕಳುಹಿಸಿದ ಆಡಿಯೋ ಪರಿಶೀಲನೆ ಮಾಡಿದ್ದೇವೆ. ಭೂ ಕಂಪನವಾದಾಗ ರಿಕ್ಟರ್ ಮಾಪನದಲ್ಲಿ ರೆಕಾರ್ಡ್‌ ಆಗಬೇಕು, ಯಾವುದೂ ರೆಕಾರ್ಡ್‌ ಆಗಿಲ್ಲ. ಈ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಶಿರಸಿ ತಾಲೂಕಿನ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ತಾಲೂಕಿನ ಚೌವತ್ತಿ, ಸಿದ್ದಾಪುರ ತಾಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಕುಮಟಾ ಹಾಗೂ ಶಿರಸಿ ತಾಲೂಕಿನ ಗಡಿ ಭಾಗವಾದ ದೇವಿಮನೆ ಘಟ್ಟ ಭಾಗಗಳಲ್ಲಿ ಭೂಕಂಪನದ ಅನುಭವವಾಗಿತ್ತು ಎಂದು ಜನ ಮಾಹಿತಿ ನೀಡಿದ್ದರು. ಹಲವು ಪ್ರತ್ಯಕ್ಷದರ್ಶಿಗಳು ನಾಲ್ಕೈದು ಬಾರಿ ಭೂಮಿ ಕಂಪಿಸಿದೆ ಎಂದರೆ, ಹಲವರು ಗುಡುಗು ಬಂದಂತೆ ಅನುಭವವಾಗಿ ಭೂಮಿ ಕಂಪಿಸಿದೆ ಎಂದು ಹೇಳಿಕೊಂಡಿದ್ದಾರೆ.

    ರಿಕ್ಟರ್ ಮಾಪನದಲ್ಲೂ ದಾಖಲಾಗದೇ ಹೀಗೆ ಕಂಪಿಸಿದ ಅನುಭವ ಆಗಿರುವುದು ಸಾಕಷ್ಟು ಪ್ರಶ್ನೆ ಏಳುವಂತೆ ಮಾಡಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಭಾವದಿಂದ ಭೂಮಿಯ ಆಳದಲ್ಲಿ ಯಾವುದಾದರೂ ದೊಡ್ಡ ಬಂಡೆಕಲ್ಲು ಜಾರುವಂತೆ ಮಾಡಿದೆಯೇ? ಎಂಬ ಬಗ್ಗೆಯೂ ಪ್ರಶ್ನೆ ಎದ್ದಿದೆ. ಈ ಹಿಂದೆ ಘಟ್ಟ ಭಾಗದಲ್ಲಿ ನಿರಂತರವಾಗಿ ಭೂಕುಸಿತ ಸಹ ಆಗಿದೆ. ಹೀಗಾಗಿ ಮತ್ತೆ ಭೂಮಿ ಕುಸಿಯುವ ಮುನ್ಸೂಚನೆಯಾ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

  • ಶಿರಸಿ, ಕುಮಟಾದ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪನ – ಭಯಭೀತರಾದ ಜನ

    ಶಿರಸಿ, ಕುಮಟಾದ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪನ – ಭಯಭೀತರಾದ ಜನ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ಹಾಗೂ ಕುಮಟಾ (Kumta) ಭಾಗದ ಘಟ್ಟ ಪ್ರದೇಶದಲ್ಲಿ ಮೂರು ಸೆಕೆಂಡ್‌ಗೂ ಹೆಚ್ಚಿನ ಸಮಯ ಭೂಕಂಪನದ (Earthquakes) ಅನುಭವವಾಗಿದೆ. ಇದರಿಂದ ಆ ಪ್ರದೇಶದ ಜನ ಭಯಭೀತರಾಗಿದ್ದಾರೆ.

    ಕುಮಟಾ ತಾಲೂಕಿನ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ಗ್ರಾಮವಾದ ರಾಗಿ ಹೊಸಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಭೂಮಿ ಕಂಪಿಸಿದೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು ಕಲ್ಲುಗಳನ್ನು ಸಿಡಿಸಿರಬಹುದು ಇದರಿಂದ ಕಂಪನ ಉಂಟಾಗಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು.

    ಈಗ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂಕಂಪನವಾಗಿದೆ. ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.

  • ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    – ಭಾರತೀಯ ಸಂಸ್ಕೃತಿಯ ಉಡುಗೆ ಧರಿಸಿ ಬರುವಂತೆ ಸೂಚನೆ

    ಕಾರವಾರ: ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ಮಾರಿಕಾಂಬ ದೇವಸ್ಥಾನದಲ್ಲಿ ಆಡಳಿತ ಕಮಿಟಿ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.

    ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಫಲಕ ಅಳವಡಿಸಲಾಗಿದೆ. ಈ ಹಿಂದೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.ಇದನ್ನೂ ಓದಿ: ಮೈಸೂರಿನಿಂದ ದರ್ಭಾಂಗ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿ – ಹೊತ್ತಿ ಉರಿದ ಬೋಗಿಗಳು

    ದೇಗುಲಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕೆಂದು ಮುಜರಾಯಿ ಇಲಾಖೆ ಆದೇಶ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯದ ವಿವಿಧ ದೇಗುಲಗಳ ಜೊತೆ ಶಿರಸಿಯಲ್ಲಿಯೂ ವಸ್ತ್ರಸಂಹಿತೆ ಕಡ್ಡಾಯ ಮಾಡಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಭಕ್ತರು ಹೆಚ್ಚು ಬರುತಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಕಡ್ಡಾಯ ಮಾಡುವ ಉದ್ದೇಶವಿದೆ.

    ಇದಕ್ಕೆ ಸಂಬಂಧಿಸಿದಂತೆ ಶಿರಸಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ್ ಮಾತನಾಡಿದ್ದು, ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯ ಪಾಲನೆ ಮಾಡಬೇಕೆಂಬ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ. ಭಕ್ತರ ಸ್ಪಂದನೆ ಕೂಡಾ ಪರಿಗಣಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಎಡಿಜಿಪಿ ಚಂದ್ರಶೇಖರ್‌ ದೂರು – ಎನ್‌ಸಿಆರ್‌ ದಾಖಲು

  • ಭ್ರಷ್ಟಾಚಾರ ಕೇಸ್ – ಶಿರಸಿ ಬಿಜೆಪಿ ನಾಯಕಿಗೆ 1 ವರ್ಷ ಜೈಲು, 5 ಸಾವಿರ ರೂ. ದಂಡ

    ಭ್ರಷ್ಟಾಚಾರ ಕೇಸ್ – ಶಿರಸಿ ಬಿಜೆಪಿ ನಾಯಕಿಗೆ 1 ವರ್ಷ ಜೈಲು, 5 ಸಾವಿರ ರೂ. ದಂಡ

    ಕಾರವಾರ: ಭ್ರಷ್ಟಾಚಾರದ ಪ್ರಕರಣದಲ್ಲಿ ಶಿರಸಿ (Sirsi) ಗ್ರಾಮೀಣ ಬಿಜೆಪಿ (BJP) ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ (Uttara Kannada) ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆಗೆ (Usha Hegde) ಕಾರವಾರದ ಲೋಕಾಯುಕ್ತ ನ್ಯಾಯಾಲಯ (Lokayuktha Court) ಒಂದು ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಉಷಾ ಹೆಗಡೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಶ್ರೀನಗರ ಪಂಚಾಯತ್ ವತಿಯಿಂದ ನಡೆದ ಸಭೆ ಸಮಾರಂಭಗಳಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಜರಾಗಿದ್ದರು.ಇದನ್ನೂ ಓದಿ: ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ

    ಜಿ.ಪಂ.ಸದಸ್ಯತ್ವದ ಅಧಿಕಾರದಲ್ಲಿದ್ದಾಗ ಜ.2011 ರಿಂದ ನ.2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ 88,630 ರೂ. ಪಡೆದುಕೊಂಡಿದ್ದಾರೆ. ಒಟ್ಟು ಎರಡು ಹುದ್ದೆಗಳನ್ನು ಹೊಂದಿದ್ದು, ಜನಪ್ರತಿನಿಧಿಯಾದ ನಂತರವೂ ಅಂಗನವಾಡಿ ಕಾರ್ಯಕರ್ತೆಯೆಂದು ಗೌರವಧನ ಪಡೆದು, ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು.

    ಉಷಾ ರವೀಂದ್ರ ಹೆಗಡೆ ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಪಂಚಾಯತ್ ಬದನಗೋಡ ಕ್ಷೇತ್ರದ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೇ ಹಾಗೂ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೇ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿದ್ದಾರೆ ಮತ್ತು ಈ ಮೂಲಕ ಭಾರತೀಯ ದಂಡ ಸಹಿತ ಕಲಂ 468ರ ಮೇರೆಗೆ ದಂಡನೀಯವಾದ ಅಪರಾಧವನ್ನು ಎಸಗಿದ್ದಾಗಿ ಆರೋಪಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಇಬ್ರಾಹಿಂ ನಬಿಸಾಬ್ ದೂರು ನೀಡಿದ್ದು, ಲೋಕಾಯುಕ್ತ ಪರ ಕಾರವಾರದ ಎಲ್.ಎಂ.ಪ್ರಭು ವಾದಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಎರಡು ಹುದ್ದೆ ಮಾಡಲು ಬರುವುದಿಲ್ಲ. ಸರ್ಕಾರದ ಆದೇಶದಂತೆ ಒಂದು ಹುದ್ದೆಗೆ ರಾಜೀನಾಮೆ ನೀಡಿ ಎಂದು ಮೌಖಿಕವಾಗಿ ಹಾಗೂ ಲಿಖಿತವಾಗಿ ಸೂಚಿಸಲಾಗಿತ್ತು. ಆದರೂ ಉಷಾ ಹೆಗಡೆ ಇಲಾಖೆಯ ಆದೇಶ ಹಾಗೂ ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ನೀಡಿದ ಆದೇಶವನ್ನು ಧಿಕ್ಕರಿಸಿದ್ದರು. ಈ ಅಂಶಗಳನ್ನು ಜಿಲ್ಲಾ ಪ್ರಧಾನ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.ಇದನ್ನೂ ಓದಿ: ಮಲಾಗೆ ಗೂಗಲ್‌, ಮೈಕ್ರೋಸಾಫ್ಟ್‌ ಭಾರೀ ದೇಣಿಗೆ – ಟ್ರಂಪ್‌ಗೆ ಅಮೆರಿಕನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌ ಸಹಾಯ

  • ಶಿರಸಿ ಮೂಲದ ಯುವತಿ ಡಾ.ಶೃತಿ ಹೆಗಡೆಗೆ ವಿಶ್ವ ಸುಂದರಿ-2024 ಕಿರೀಟ!

    ಶಿರಸಿ ಮೂಲದ ಯುವತಿ ಡಾ.ಶೃತಿ ಹೆಗಡೆಗೆ ವಿಶ್ವ ಸುಂದರಿ-2024 ಕಿರೀಟ!

    ಕಾರವಾರ: ಉತ್ತರ ಕನ್ನಡ (UttaraKannada) ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಯುವತಿಯೊಬ್ಬಳು ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

    ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಶೃತಿ ಹೆಗಡೆ (Shruti Hegde) ಅಮೆರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಈಕೆ ಈ ಮೊದಲು 2018 ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ (Miss South India) ವಿಜೇತೆಯಾಗಿದ್ದರು. 2023 ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಈಕೆ, ಈಗ ಅಮೆರಿಕದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿಯಿದೆ: RBI

    ಅಮೆರಿಕದ (USA) ಫ್ಲೋರಿಡಾದಲ್ಲಿ ಕಳೆದ ಜೂ.6 ರಿಂದ 10ರ ವರೆಗೆ ಆಯೋಜಿತವಾಗಿದ್ದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟು 40 ದೇಶಗಳ ಸುಂದರಿಯವರು ಪೈಪೋಟಿಯಲ್ಲಿದ್ದರು. ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶ್ನೋತ್ತರ, ವಯಕ್ತಿಕ ಸಂದರ್ಶನ ಸೇರಿ ಹಲವು ಸುತ್ತುಗಳಲ್ಲಿ ಸ್ಪರ್ಧೆ ಸಾಗಿತ್ತು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿದ ಶೃತಿ ಹೆಗಡೆ ಗೆಲುವು ಸಾಧಿಸಿದ್ದಾರೆ.‌ ಇದನ್ನೂ ಓದಿ: ಮೋದಿಗೆ ತಲೆಬಾಗಿ ನಮಿಸಿದ್ದು ಸರಿಯಲ್ಲ- ಸ್ಪೀಕರ್‌ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

    ಹುಬ್ಬಳ್ಳಿಯಲ್ಲಿಯೇ ಎಂಬಿಬಿಎಸ್ ಪೂರೈಸಿರುವ ಡಾ.ಶೃತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ‌ ತುಮಕೂರಿನಲ್ಲಿ ಎಮ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಈಕೆ ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡೀವ್ಸ್‌, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಕೆಲವು ಧಾರವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್ ನಲ್ಲಿ ನಟಿಸಿದ್ದಾಳೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ! 

  • ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

    ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

    ಕಾರವಾರ: ಉತ್ತರಾಖಂಡದಲ್ಲಿ (Uttarakhand) ಆದ ಹವಾಮಾನ ವೈಪರೀತ್ಯ ದಿಂದ ಹಿಮಪಾತವಾಗಿ ನಾಪತ್ತೆಯಾದ ಚಾರಣಿಗರಲ್ಲಿ ಶಿರಸಿ ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಸಹ ಇದ್ದು, ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

    ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ (Uttara kashi) ಮೂವರು ನಿವಾಸಿಗಳ ಜೊತೆ ಬೆಂಗಳೂರಿನಿಂದ 18 ಮಂದಿ ಹಾಗೂ ಪುಣೆಯಿಂದ ಒಬ್ಬರ ಜೊತೆ ತೆರಳಿದ್ದರು. ಇವರೊಂದಿಗೆ ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಪದ್ಮಿನಿ ಹೆಗಡೆ (35) ಅವರು ಒಬ್ಬರಾಗಿದ್ದರು.

    ಪದ್ಮಿನಿ ಹೆಗಡೆ ಅವರು ಕೆಲವು ವರ್ಷಗಳಿಂದ ಚಾರಣದಲ್ಲಿ (Trekking) ಆಸಕ್ತಿ ಹೊಂದಿದ್ದರು. ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮಿನಿ ಅವರು ತೆರಳಿದ್ದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

    ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಹವಾಮಾನ ಸರಿಯಾಗಿಲ್ಲ ಎನ್ನುವುದಾಗಿ ಪದ್ಮಿನಿ ಅವರು ತಮ್ಮ ತಾಯಿಗೆ ಮೆಸೇಜ್ ಹಾಕಿದ್ದರು. ಅವರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ನಮಗಿದೆ. ಅವರಿಗೆ ಯಾವುದೇ ಅವಘಡ ಆಗಿದೆ ಎನ್ನುವುದಾಗಿ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎನ್ನುವುದಾಗಿ ಪದ್ಮಿನಿ ಅವರ ಕುಟುಂಬದವರು ನಿನ್ನೆ ತಿಳಿಸಿದ್ದರು.

    ಪದ್ಮಿನಿ ಅವರ ತಂದೆ ಶ್ರೀಪತಿ ಹೆಗಡೆ ಅವರು ನಿಧನರಾಗಿದ್ದಾರೆ. ತಾಯಿ ಶೈಲಾ ಹೆಗಡೆ ಅವರು ಮುಂಬೈನಲ್ಲಿ ತಮ್ಮ ಮೊದಲ ಮಗಳ ಜತೆ ವಾಸ ಮಾಡುತ್ತಿದ್ದಾರೆ. ಇವರು ಕೂಡ ತಾಯಿ ಹಾಗೂ ಅಕ್ಕನ ಜತೆ ವಾಸವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಎನ್ನುವುದಾಗಿ ತಿಳಿದು ಬಂದಿದ್ದು ಇಂದು ಮೃತರಾಗುರುವ ಮಾಹಿತಿಯನ್ನು ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಖಚಿತ ಪಡಿಸಿದ್ದು ಪಸ್ಮಿನಿಯವರ ಮೃತ ದೇಹ ಪತ್ತೆಯಾಗಬೇಕಿದೆ.

  • ಭಗೀರಥ ಯತ್ನದಿಂದ ಉಕ್ಕಿದ ಗಂಗೆ- ಪಬ್ಲಿಕ್ ಟಿವಿಗೆ ಗೌರಿ ಧನ್ಯವಾದ

    ಭಗೀರಥ ಯತ್ನದಿಂದ ಉಕ್ಕಿದ ಗಂಗೆ- ಪಬ್ಲಿಕ್ ಟಿವಿಗೆ ಗೌರಿ ಧನ್ಯವಾದ

    ಕಾರವಾರ: ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗಾಗಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಗೌರಿಯವರು ಕೊನೆಗೂ ಈ ಬಿರು ಬೇಸಿಗೆಯಲ್ಲೂ ಬಾವಿಯಲ್ಲಿ ಗಂಗೆ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿರಸಿಯ ಗಣೇಶ ನಗರದ ಗೌರಿಯವರು (Gauri) ಜ.30 ರಂದು ಅಂಗನಾಡಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಏಕಾಂಗಿಯಾಗಿ ಬಾವಿ ತೋಡುತ್ತಿದ್ದು, ಅವರು ಬಾವಿ ತೋಡದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಬಾವಿಗೆ ಹಲಗೆ ಮುಚ್ಚಿತ್ತು. ನಂತರ ಶಿರಸಿ ತಹಶೀಲ್ದಾರರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದ ಗೌರಿಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಸಂಸದ ಅನಂತಕುಮಾರ್ ಹೆಗಡೆ ಸ್ಥಳಕ್ಕೆ ಆಗಮಿಸಿ ಬಾವಿ ತೋಡಲು ನೆರವಾಗಿದ್ದಲ್ಲದೇ ಇದರ ಖರ್ಚನ್ನು ಸಹ ವಹಿಸಿಕೊಂಡು ಗೌರಿಗೆ ಸಹಾಯ ಆಗಲು ಇಬ್ಬರು ಕೆಲಸಗಾರರನ್ನು ನಿಯೋಜನೆ ಮಾಡಿದ್ದರು.

    ಇದರ ಬೆನ್ನಲ್ಲೇ ಬುಧವಾರ ಬಾವಿಯಲ್ಲಿ ನೀರು ಬಂದಿದ್ದು, ಗಂಗೆಗೆ ಪೂಜೆ ಸಲ್ಲಿಸಿ ಗೌರಿ ಹಾಗೂ ಸ್ಥಳೀಯ ಜನರು ಖುಷಿಪಟ್ಟರು. ಪಬ್ಲಿಕ್ ಟಿವಿ ಸಹಕಾರವನ್ನು ಸ್ಮರಿಸದ ಗೌರಿ ಧನ್ಯವಾದ ಸಲ್ಲಿಸಿದ್ದಲ್ಲದೇ, ಶಿರಸಿಯ ಮಾರಿ ಜಾತ್ರೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಈ ಬಾವಿಯ ಮೂಲಕ ಮಾಡುತ್ತೇನೆ. 45 ಅಡಿ ಆಳಕ್ಕೆ ನೀರು ಬಂದಿದ್ದು ಖುಷಿ ತಂದಿದೆ. ನಾನು ಬಾವಿ ತೋಡಿ ನೀರು ಬರಿಸಿಯಾಯ್ತು, ಉಳಿದದ್ದು ಆಡಳಿತಕ್ಕೆ ಬಿಟ್ಟಿದ್ದು ಎಂದರು.ಜೊತೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್‌ ರಿಲೀಫ್‌

  • ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತನ ಕೇಸನ್ನೇ ಮುಚ್ಚಿ ಹಾಕಿದ್ದರು: ಸಿಎಂ

    ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತನ ಕೇಸನ್ನೇ ಮುಚ್ಚಿ ಹಾಕಿದ್ದರು: ಸಿಎಂ

    ಕಾರವಾರ: ಬಾಂಬ್ ಸ್ಫೋಟ ಪ್ರಕರಣದಲ್ಲಿ ಐವರ ಬಂಧನವಾಗಿದೆ. ಯಾರು ಏನೆಂದು ನನಗೆ ತಿಳಿದಿಲ್ಲ. ಪ್ರಕರಣದ ಬಗ್ಗೆ ತನಿಖೆ ಚುರುಕುಗೊಂಡಿದೆ. ಅಲ್ಲದೇ ಪಾಕಿಸ್ತಾನ್ ಜಿಂದಾಬಾದ್ ಎಂದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಶಿರಸಿ (Sirsi) ತಾಲೂಕಿನ ಬನವಾಸಿಯ ಕದಂಬೋತ್ಸವ (Kadambotsava) ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿ (BJP) ಕಾಲದಲ್ಲಿ ಮಂಡ್ಯದಲ್ಲಿ ಅವರ ಕಾರ್ಯಕರ್ತ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದ. ಅವರನ್ನು ಏಕೆ ಬಂಧಿಸಿರಲಿಲ್ಲ? ಆ ಕೇಸನ್ನೇ ಬಿಜೆಪಿಗರು ಮುಚ್ಚಿ ಹಾಕಿದ್ದರು. ನಾವು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಪರ ಘೋಷಣೆ; ವಿತಂಡವಾದಿ ಕಾಂಗ್ರೆಸಿಗರಿಗೆ ತೀವ್ರ ಮುಖಭಂಗ: ಅಶ್ವಥ‌ ನಾರಾಯಣ್

    ಬಾಂಬ್ ಸ್ಫೋಟಿಸುವ ಬೆದರಿಕೆ ನಮಗೆ ಬಂದಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬಂದರೆ ಹೆಬ್ಬಾರ್‍ಗೆ ಸ್ವಾಗತವಿದೆ. ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದಿದ್ದಾರೆ.

    ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ ಅವರು, ನಾಲ್ಕು ವರ್ಷದಿಂದ ಅನಂತ್ ಕುಮಾರ್ ಎಲ್ಲಿಗೆ ಹೋಗಿದ್ದರು? ಅಂತವರನ್ನು ನಿವೇ ಆಯ್ಕೆ ಮಾಡಿದ್ದೀರಿ. ಅನಂತ್ ಕುಮಾರ್ ಅಭಿವೃದ್ಧಿ ಕೆಲಸ, ಜನರ ಕೆಲಸ ಮಾಡದ ವ್ಯಕ್ತಿ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಮೈ ಮರೆತ್ರೆ ವಿಧಾನಸೌಧದ ಗೋಪುರ ಗುಂಬಜ್ ಆಗುತ್ತೆ: ಪ್ರತಾಪ್ ಸಿಂಹ