Tag: Sirsi Marikamba temple

  • ಬಂಗಾರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಶಿರಸಿ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಬಂಗಾರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಶಿರಸಿ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಕಾರವಾರ: ಮಾಜಿ ಸಿಎಂ ದಿ.ಎಸ್ ಬಂಗಾರಪ್ಪನವರ (S.Bangarappa) ಜನ್ಮ ದಿನದ ಹಿನ್ನಲೆಯಲ್ಲಿ ನಟ ಶಿವರಾಜ್‌ಕುಮಾರ್ (Shivarajkumar) ಕುಟುಂಬ ಸಮೇತರಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ (Sirsi Marikamba Temple) ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶಿವರಾಜ್‌ಕುಮಾರ್ ಪತ್ನಿ ಹಾಗೂ ಬಂಗಾರಪ್ಪನವರ ಮಗಳಾದ ಗೀತಾ ಶಿವರಾಜಕುಮಾರ್ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಶಿರಸಿ ಶಾಸಕ ಹಾಗೂ ಬಂಗಾರಪ್ಪನವರ ಬಾವ ಭೀಮಣ್ಣ ನಾಯ್ಕ್‌ ಅವರು ಸಹ ಕುಟುಂಬ ಸಮೇತರಾಗಿ ಪೂಜೆಯಲ್ಲಿ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಶಿವಾನಂದ ಶೆಟ್ಟಿ, ಸುಧೀರ್ ಹಂದ್ರಾಳ ಸೇರಿದಂತೆ ಹಲವಾರು ಅಭಿಮಾನಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು.

  • ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    – ಭಾರತೀಯ ಸಂಸ್ಕೃತಿಯ ಉಡುಗೆ ಧರಿಸಿ ಬರುವಂತೆ ಸೂಚನೆ

    ಕಾರವಾರ: ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ಮಾರಿಕಾಂಬ ದೇವಸ್ಥಾನದಲ್ಲಿ ಆಡಳಿತ ಕಮಿಟಿ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.

    ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಫಲಕ ಅಳವಡಿಸಲಾಗಿದೆ. ಈ ಹಿಂದೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.ಇದನ್ನೂ ಓದಿ: ಮೈಸೂರಿನಿಂದ ದರ್ಭಾಂಗ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿ – ಹೊತ್ತಿ ಉರಿದ ಬೋಗಿಗಳು

    ದೇಗುಲಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕೆಂದು ಮುಜರಾಯಿ ಇಲಾಖೆ ಆದೇಶ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯದ ವಿವಿಧ ದೇಗುಲಗಳ ಜೊತೆ ಶಿರಸಿಯಲ್ಲಿಯೂ ವಸ್ತ್ರಸಂಹಿತೆ ಕಡ್ಡಾಯ ಮಾಡಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಭಕ್ತರು ಹೆಚ್ಚು ಬರುತಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಕಡ್ಡಾಯ ಮಾಡುವ ಉದ್ದೇಶವಿದೆ.

    ಇದಕ್ಕೆ ಸಂಬಂಧಿಸಿದಂತೆ ಶಿರಸಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ್ ಮಾತನಾಡಿದ್ದು, ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯ ಪಾಲನೆ ಮಾಡಬೇಕೆಂಬ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ. ಭಕ್ತರ ಸ್ಪಂದನೆ ಕೂಡಾ ಪರಿಗಣಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಎಡಿಜಿಪಿ ಚಂದ್ರಶೇಖರ್‌ ದೂರು – ಎನ್‌ಸಿಆರ್‌ ದಾಖಲು

  • ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್

    ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 21 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇತ್ತ ಶಿರಸಿಯ ಮಾರಿಕಾಂಬಾ ದೇವಸ್ಥಾನವನ್ನು ಒಂದು ವಾರ ಸೀಲ್‍ಡೌನ್ ಮಾಡಲಾಗಿದೆ.

    ಶಿರಸಿಯ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲೇ ವಾಸವಿದ್ದ ವ್ಯಕ್ತಿಗೂ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಈತ ಪ್ರತಿ ದಿನ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುತಿದ್ದ ಎನ್ನಲಾಗಿದೆ. ಹೀಗಾಗಿ ಈತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ದೇವಸ್ಥಾನವನ್ನು ಸೀಲ್‍ಡೌನ್ ಮಾಡುವ ನಿರ್ಧಾರಕ್ಕೆ ಮಾಡಲಾಗಿದೆ.

    ಶಿರಸಿ ಮಾರಿಕಾಂಬ ದೇವಸ್ಥಾನವನ್ನು ಇಂದಿನಿಂದ ಒಂದು ವಾರದ ಕಾಲ ಸೀಲ್‍ಡೌನ್ ಮಾಡುತಿದ್ದು, ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರನ್ನು ಹೊರತುಪಡಿಸಿ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರಿಗೂ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೋಂಕಿತ ವ್ಯಕ್ತಿ ದೇವಸ್ಥಾನಕ್ಕೆ ಬಂದು ಹೋಗುತಿದ್ದರಿಂದ ದೇವಸ್ಥಾನವನ್ನು ಸ್ಯಾನಿಟೈಸ್ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.