Tag: Sirsi

  • ಶಿರಸಿಯ ಶ್ರೀ ಮಾರಿಕಾಂಬಾ ಕ್ಷೇತ್ರಕ್ಕೆ ನಟ ಶಿವಣ್ಣ ದಂಪತಿ ಭೇಟಿ

    ಶಿರಸಿಯ ಶ್ರೀ ಮಾರಿಕಾಂಬಾ ಕ್ಷೇತ್ರಕ್ಕೆ ನಟ ಶಿವಣ್ಣ ದಂಪತಿ ಭೇಟಿ

    ಕಾರವಾರ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ (Shree Marikamba Temple) ನಟ ಶಿವರಾಜ್ ಕುಮಾರ್ (Shiva Rajkumar) ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ ಶಿವಣ್ಣ ದಂಪತಿ ತಮ್ಮ ಇಷ್ಟ ದೈವಕ್ಕೆ ಪೂಜೆ ಸಲ್ಲಿಸಿದರು. ಈ ಹಿಂದೆ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಸಹ ಶಿರಸಿ ಮಾರಿಕಾಂಬೆ ಸನ್ನಿದಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರು.

    ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿರುವ ಶಿವರಾಜ್ ಕುಮಾರ್ ಶಿರಸಿಗೆ ಆಗಮಿಸಿದ್ದು, ಮಾರಿಕಾಂಬಾ ಸನ್ನಿದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

  • ಕಾರವಾರ| ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

    ಕಾರವಾರ| ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

    ಕಾರವಾರ: ಸಿಲಿಂಡರ್ ಸ್ಫೋಟಗೊಂಡು ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ ನಡೆದಿದೆ.

    ರಂಜಿತ ನಾಗಪ್ಪ ದೇವಾಡಿಗ (21) ಮೃತ ಯುವತಿ. ಪೋಷಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಯುವತಿ ಮನೆಯಲ್ಲೇ ಇದ್ದಳು. ಈ ವೇಳೆ ಅವಘಡ ಸಂಭವಿಸಿದೆ.

    ಸಿಲಿಂಡರ್‌ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ನಡೆದಿದೆ.

    ಭಾನುವಾರ ರಜೆ ಹಿನ್ನೆಲೆಯಲ್ಲಿ ಶಿರಸಿಯ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆ ಹೊರಟಿತ್ತು. ಹೊಳೆಯಲ್ಲಿ ಈಜುವಾಗ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಹೋಗಿ ಕಾಣೆಯಾಗಿದ್ದಾರೆ.

    ಸ್ಥಳಕ್ಕೆ ಈಜು ತಜ್ಞರು ಹಾಗೂ ಪೊಲೀಸರ ತೆರಳಿ, ಕಾಣೆಯಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಶಿರಸಿ | ಏರ್ ಗನ್ ಮಿಸ್ ಫೈರ್ ಕೇಸ್‌ಗೆ ಬಿಗ್ ಟ್ಟಿಸ್ಟ್ – ಬಾಲಕನ ಸಾವಿಗೆ ತಮ್ಮ ಕಾರಣನಲ್ಲ!

    ಶಿರಸಿ | ಏರ್ ಗನ್ ಮಿಸ್ ಫೈರ್ ಕೇಸ್‌ಗೆ ಬಿಗ್ ಟ್ಟಿಸ್ಟ್ – ಬಾಲಕನ ಸಾವಿಗೆ ತಮ್ಮ ಕಾರಣನಲ್ಲ!

    ಕಾರವಾರ: ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಘಟನೆಗೆ ಬಿಗ್ ಟ್ಟಿಸ್ಟ್ ಸಿಕ್ಕಿದೆ. ಬಾಲಕ ತನ್ನ ಅಣ್ಣನಿಗೆ ಗುಂಡು ಹಾರಿಸಿಲ್ಲ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ಏರ್ ಗನ್ ಫೈರ್ ಆಗಿ ದುರ್ಘಟನೆ ನಡೆದಿತ್ತು ಎನ್ನಲಾಗಿತ್ತು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮ ಆಕಸ್ಮಿಕವಾಗಿ ಗುಂಡು ಹಾರಿಸಿದ್ದ. ಇದರಿಂದ ಅಣ್ಣ ಕರಿಯಪ್ಪ ( 9 ) ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ಆದರೆ ಶಿರಸಿ ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಅಸಲಿ ವಿಷಯ ಹೊರಬಂದಿದೆ.ಇದನ್ನೂ ಓದಿ: ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಮೃತ ಬಾಲಕನ ಸಹೋದರನ ಕೈನಿಂದ ಫೈರ್ ಆಗಿದ್ದಲ್ಲ, ಕೆಲಸಗಾರ ನಿತೀಶ್ ಗೌಡನ ಕೈನಿಂದ ಮಿಸ್ ಫೈರ್ ಆಗಿ ಬಾಲಕ ಸಾವು ಕಂಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ಆಟವಾಡುತ್ತಾ ಏರ್ ಗನ್ ಹಿಡಿದಿದ್ದ ನಿತೀಶ್ ಗೌಡ ಬಳಿ ಬಂದಿದ್ದರು. ಅಂಗವಿಕಲನಾಗಿದ್ದ ನಿತೀಶ್ ಗೌಡನಿಗೆ ಎಡಗೈ ಊನವಾಗಿದ್ದು ಮಕ್ಕಳು ಬಂದ ಹಿನ್ನಲೆಯಲ್ಲಿ ಗನ್ ಸರಿಸುವಾಗ ಎಡ ಕೈ ತಾಗಿ ಎದುರಿಗಿದ್ದ ಬಾಲಕ ಕರಿಯಪ್ಪನ ಎದೆಗೆ ಗುಂಡು ತಾಗಿದೆ. ಅತೀ ಸಮೀಪದಲ್ಲೇ ಇದ್ದುದರಿಂದ ಎದೆಗೆ ನೇರವಾಗಿ ಗುಂಡು ಹೊಕ್ಕು ಹೃದಯ ಸೀಳಿ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.

    ಇನ್ನು ನಿತೀಶ್ ಗೌಡನಿಗೆ ಏರ್ ಗನ್ ಬಳಸಲು ಬರುವುದಿಲ್ಲ, ತರಬೇತಿಯೂ ಇಲ್ಲ. ಹೀಗಾಗಿ ಆತನ ಅಚಾತುರ್ಯದಲ್ಲಿ ಫೈರ್ ಆಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಿತೀಶ್ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮಂಡ್ಯ | ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬೆಂಗ್ಳೂರಿನ ಇಬ್ಬರು ಬಿಬಿಎಂ ವಿದ್ಯಾರ್ಥಿಗಳ ದುರ್ಮರಣ

  • ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಕಾರವಾರ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌

    ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ-ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಅಣ್ಣ-ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇದರಿಂದ ಅಣ್ಣ ಕರಿಯಪ್ಪ (9) ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ವಿಡಿಯೋ ದಾಖಲಾಗಿದೆ.

    ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರ ಟಾರ್ಚರ್‌ – ಮನೆ ಬಿಟ್ಟು ತೆರಳಿದ್ದ ಶಿರಸಿಯ ಮಕ್ಕಳು ಮುಂಬೈನಲ್ಲಿ ಪತ್ತೆ

    ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರ ಟಾರ್ಚರ್‌ – ಮನೆ ಬಿಟ್ಟು ತೆರಳಿದ್ದ ಶಿರಸಿಯ ಮಕ್ಕಳು ಮುಂಬೈನಲ್ಲಿ ಪತ್ತೆ

    ಕಾರವಾರ: ಕಾಣೆಯಾಗಿದ್ದ ಶಿರಸಿಯ (Sirsi) ಇಬ್ಬರು ಮಕ್ಕಳು ಮುಂಬೈನಲ್ಲಿ (Mumbai) ಪತ್ತೆಯಾಗಿದ್ದಾರೆ.

    ಶಿರಸಿ ಪೊಲೀಸರ(Police) ನಿರಂತರ ಕಾರ್ಯಾಚರಣೆಯಿಂದ ನಾಪತ್ತೆಯಾಗಿದ್ದ ಕಸ್ತೂರ್ಬಾ ನಗರದ ನಿವಾಸಿಗಳಾದ ಶ್ರೀಶಾ (13), ಪರಿಧಿ(10) ಈಗ ಪತ್ತೆಯಾಗಿದ್ದಾರೆ.

    ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಕ್ಕೆ ಓದುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ಇಬ್ಬರು ಆ.16 ರಂದು ಕಾಣೆಯಾಗಿದ್ದರು.  ಶಿರಸಿಯಿಂದ- ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಪುಣೆಗೆ ತೆರಳಿ ಅಲ್ಲಿಂದ ಮುಂಬೈಗೆ ತೆರಳಿದ್ದರು. ಮಕ್ಕಳು ಬಸ್ಸಿನಲ್ಲಿ ಪ್ರಯಾಣಿಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ ಪತಿ ವಿರುದ್ಧ ಕೊಲೆ ಆರೋಪ

    ಈ ದೃಶ್ಯ ಆಧಾರಿಸಿ ಶಿರಸಿ ಪೊಲೀಸರು ಮುಂಬೈ ಪೊಲೀಸರಿಗೆ ತಿಳಿಸಿದ್ದರು. ಮುಂಬೈನಲ್ಲಿ ಇಳಿದ ಮಕ್ಕಳು ಶಿರಡಿಗೆ ಹೋಗಬೇಕೆಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು.

    ಅನುಮಾನಗೊಂಡ ಸ್ಥಳಿಯ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಎಲ್ಲಿಂದ ಬಂದಿರುವುದು ಎಂದು ಮಕ್ಕಳಿಗೆ ವಿಚಾರಿಸಿದಾಗ ಶಿರಸಿ ಎಂದು ಹೇಳಿದ್ದಾರೆ. ಕೂಡಲೇ ಈ ವಿಚಾರವನ್ನು ಶಿರಸಿ ಪೊಲೀಸರಿಗೆ ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಕ್ಕಳು ಮುಂಬೈಯಿಂದ ಶಿರಸಿ ಕಡೆ ಬರುತ್ತಿದ್ದಾರೆ. ಮಕ್ಕಳ ಶೋಧಕ್ಕಾಗಿ ಉತ್ತರ ಕನ್ನಡ ಎಸ್ಪಿ ಎಂ.ಎನ್.ದೀಪನ್ ಆರು ತಂಡ ಮಾಡಿದ್ದರು.

  • ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಕೇಸ್‌ – ನಗರಸಭೆ ಕಮಿಷನರ್, ಅಧ್ಯಕ್ಷ ಸೇರಿ 7 ಆರೋಪಿಗಳು

    ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಕೇಸ್‌ – ನಗರಸಭೆ ಕಮಿಷನರ್, ಅಧ್ಯಕ್ಷ ಸೇರಿ 7 ಆರೋಪಿಗಳು

    ಕಾರವಾರ: ಹಣದ ಆಸೆಗೆ ಬಿದ್ದ ನಗರಸಭೆ ಕಮಿಷನರ್, ಅಧ್ಯಕ್ಷ ಹಾಗೂ ಸದಸ್ಯರೇ ಸೇರಿ ಲಕ್ಷಾಂತರ ಮೌಲ್ಯದ ಕಬ್ಬಿಣದ ಪೈಪುಗಳನ್ನು ಕಳ್ಳತನ ಮಾಡಿ ಕೊನೆಗೆ ಪೊಲೀಸರ ಅಥಿತಿಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಕೆಂಗ್ರೆ ನೀರು ಸರಬರಾಜು ಘಟಕದಿಂದ ಶಿರಸಿ ನಗರಕ್ಕೆ ಪೂರೈಕೆಯ ಹಳೆಯ ಕಾಸ್ಟ್ ಐರನ್ ಪೈಪ್‌ಗಳು ಪೆ.27 ರಂದು ಕಳ್ಳತನವಾಗಿದೆ. ಈ ಕುರಿತು ಮಾರ್ಚ್‌ 4 ರಂದು ನಗರಸಭೆಯ ಕಿರಿಯ ಅಭಿಯಂತರ ಸೂಫಿಯಾನ್ ಅಹಮ್ಮದ ಬ್ಯಾರಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಂಟು ಕಿಲೋಮೀಟರ್ ಉದ್ದದ ಈ ಪೈಪ್‌ಲೈನ್‌ನಲ್ಲಿ 900 ಮೀಟರ್ ಉದ್ದದ 116 ಪೈಪ್‌ಗಳು ಕಳ್ಳತನವಾಗಿದ್ದು, ಒಟ್ಟು 21,18,624 ರೂ. ಮೊತ್ತದ್ದಾಗಿದೆ. ಈ ಪೈಪ್‌ಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಝಕ್ರಿಯಾ ಸಯ್ಯದ್ ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.

    ಈ ಲಕ್ಷಾಂತರ ಮೌಲ್ಯದ ಐರನ್ ಪೈಪ್‌ಗಳನ್ನು ಹಾಡಹಗಲೇ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಅಧಿಕಾರಿಗಳು ಶಾಮೀಲಾಗಿರುವ ಕುರಿತು ನಗರಸಭಾ ಸದಸ್ಯರು ಸಹ ಆರೋಪ ಮಾಡಿದ್ದರು. ಇದಲ್ಲದೇ, ಸಮರ್ಪಕ ತನಿಖೆ ಕೈಗೊಳ್ಳದಿದ್ದರೇ ಸಾಮೂಹಿಕ ರಾಜೀನಾಮೆ ಕೊಡುವುದಾಗಿ ನಗರಸಭಾ ಸದಸ್ಯರು ಪಟ್ಟು ಹಿಡಿದಿದ್ದರು. ಈ ಪ್ರಕರಣ ಕುರಿತು ಲೋಕಾಯುಕ್ತಕ್ಕೆ ಸಹ ದೂರು ನೀಡಲಾಗಿತ್ತು. ಆದರೆ, ತನಿಖೆ ಕೈಗೊಂಡ ಗ್ರಾಮೀಣಾ ಠಾಣೆ ಪೊಲೀಸರು ನಗರಸಭೆ ಕಮಿಷನರ್, ಸಹಾಯಕ ಇಂಜಿನಿಯರ್, ಎಇಇ, ನಗರಸಭೆ ಅಧ್ಯಕ್ಷ, ಸದಸ್ಯರೇ ಕಳ್ಳತನ ಮಾಡಿರುವುದನ್ನು ದಾಖಲೆ ಸಮೇತ ಪತ್ತೆ ಮಾಡಿ ದೂರು ನೀಡಿದ ಅಧಿಕಾರಿ ಸೇರಿ ಏಳು ಆರೋಪಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

    ಪ್ರಕರಣ ಬೆನ್ನುಬಿದ್ದ ಗ್ರಾಮೀಣ ಠಾಣೆ ಪೊಲೀಸರು ಝಕ್ರಿಯಾ ಸಯ್ಯದ್‌ನನ್ನು ಬಂಧಿಸಿ ತನಿಖೆ ಕೈಗೊಂಡಾಗ ಈ ಹಿಂದೆ ನಗರದ ಹಳೆಯ ಪೈಪ್‌ಗಳನ್ನು ತೆಗೆಯಲು ಟೆಂಟರ್ ಪಡೆದಿದ್ದು, ಅದು ನಷ್ಟವಾಗಿದ್ದರಿಂದ ಇದನ್ನು ಸರಿದೂಗಿಸಲು ನಗರಸಭೆ ಕಮಿಷನರ್, ಅಧ್ಯಕ್ಷ ಹಾಗೂ ಸಹಾಯಕ ಇಂಜಿನಿಯರ್ ಗಮನಕ್ಕೆ ತಂದು ಪೈಪ್‌ಗಳನ್ನು ಕಿತ್ತು ತೆಗೆದುಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಇದಕ್ಕಾಗಿ ನಗರಸಭಾ ಸದಸ್ಯ ಯಶವಂತ್ ಮರಾಠೆ ಖಾತೆಗೆ ಹಣ ಹಾಕಿರುವುದು ತಿಳಿದಿದೆ. ಈತನನ್ನು ವಿಚಾರಿಸಿದಾಗ ನಗರಸಭೆ ಕಮಿಷನರ್, ಅಧ್ಯಕ್ಷ, ಸದಸ್ಯರು ಸಹ ಭಾಗಿಯಾಗಿರುವುದು ಬಯಲಿಗೆ ಬಂದಿದೆ.

    ಈ ಪ್ರಕರಣ ಸಂಬಂಧ ಸರ್ಕಾರಿ ಅಧಿಕಾರಿಗಳಾದ ನಗರಸಭೆ ಕಮಿಷನರ್ ಕಾಂತರಾಜು, ಕಳ್ಳತನವಾಗಿರುವ ದೂರು ನೀಡಿದ್ದ ಜೂನಿಯರ್ ಇಂಜಿನಿಯರ್ ಸುಫಿಯಾನ್ ಅಹಮ್ಮದ ಬ್ಯಾರಿ, ಎಇಇ ಪ್ರಶಾಂತ ವರ್ಣೇಕರ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರಸಭೆ ಸದಸ್ಯ ಕುಮಾರ್ ಬೋರ್ಕರ್, ಯಶವಂತ್ ಮರಾಠೆ ಯನ್ನು ತನಿಖೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ ಎರಡು ಲಾರಿ ಹಾಗೂ ಪ್ರಮುಖ ಆರೋಪಿ ಗುಜರಿ ವ್ಯಾಪಾರಿ ಝಕ್ರಿಯಾ ಸಯ್ಯದ್‌ನಿಂದ ಕಬ್ಬಿಣ ಮಾರಿದ ಏಳು ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿರುವುದಾಗಿ ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

    ತಾವು ಮಾಡಿದ ತಪ್ಪಿಗೆ ಏಳು ಜನ ಆರೋಪಿಗಳು ದೂರು ದಾಖಲಾದಾಗಲೇ ಕೋರ್ಟ್‌ನಲ್ಲಿ ಬೇಲ್ ಪಡೆದಿದ್ದು, ಬೀಸುವ ದೊಣ್ಣೆಯಿಂದ ಸದ್ಯ ಬಚಾವ್ ಆಗಿದ್ದಾರೆ. ಮೂವರು ಸರ್ಕಾರಿ ಅಧಿಕಾರಿ ಹಾಗೂ ಮೂರು ಜನ ಜನಪ್ರತಿನಿಧಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅಧಿಕಾರಿಗಳನ್ನು ಅಮಾನತು ಮಾಡಲು ಹಾಗೂ ನಗರಸಭೆ ಸದಸ್ಯರ ಅನರ್ಹತೆಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ನಂತರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ್‌ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

  • ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ; 30 ವರ್ಷದ ನಂತರ ಬಂಧನ

    ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ; 30 ವರ್ಷದ ನಂತರ ಬಂಧನ

    ಕಾರವಾರ: ಸರ್ಕಾರಿ ನೌಕರಿ ಕೊಡಿಸುವುದಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಪ್ರಕರಣದಲ್ಲಿ 30 ವರ್ಷದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಸುಪರ್ಧಿಗೆ ವಹಿಸಿದ್ದಾರೆ.

    ಬೈಂದೂರಿ ಮೂಲದ ಪ್ರಸ್ತುತ ಬೆಂಗಳೂರಿನ ಬಳೆಪೇಠೆಯಲ್ಲಿ ನೆಲಸಿರುವ ಬಿ.ಕೆ.ರಾಮಚಂದ್ರರಾವ್ ಬಂಧಿತ ಆರೋಪಿಯಾಗಿದ್ದಾನೆ. ಈತನು 1990 ರಲ್ಲಿ ಶಿರಸಿಯಲ್ಲಿ ಬಿಳಿಗಿರಿ ಕೊಪ್ಪ ವೆಂಕಟೇಶ ವೈದ್ಯ ಎಂಬಾತನು ಪದವಿ ಓದುತ್ತಿರುವಾಗ ನೀಲಕಂಠ ಹೆಗಡೆ ಎಂಬವರ ಮೂಲಕ ಪರಿಚಯವಾಗಿತ್ತು. ವೆಂಕಟೇಶ್ ಎಂಬಾತನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ 200 ರೂ. ಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದ.

    ಈ ಕುರಿತು ಶಿರಸಿ ಠಾಣೆಯಲ್ಲಿ ವೆಂಕಟೇಶ್ ವೈದ್ಯ ದೂರು ದಾಖಲಿಸಿದ್ದರು‌. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ. ಆದರೇ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಮಾರ್ಗದರ್ಶನ ಮತ್ತು ಪಿಎಸ್ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ಅವರ ತಂಡ 30 ವರ್ಷದ ನಂತರ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಿ ಶಿರಸಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ.

    ಅಪರಾಧ ಮಾಡಿದವರು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇಬೇಕು ಎಂಬುದು ಈ ಘಟನೆಯಿಂದ ಸಾಬೀತಾಗಿದ್ದು, ಇದೀಗ ಕಾರವಾರ ಜೈಲಿಗೆ ಅಟ್ಟಲಾಗಿದೆ.

  • ಜೋಗನ ಹಕ್ಕಲು ಫಾಲ್ಸ್‌ ನೋಡೋಕೆ ಬಂದಿದ್ದ ಯುವಕ ಕಾಲುಜಾರಿ ಬಿದ್ದು ನಾಪತ್ತೆ

    ಜೋಗನ ಹಕ್ಕಲು ಫಾಲ್ಸ್‌ ನೋಡೋಕೆ ಬಂದಿದ್ದ ಯುವಕ ಕಾಲುಜಾರಿ ಬಿದ್ದು ನಾಪತ್ತೆ

    ಕಾರವಾರ: ಯುವಕನೊಬ್ಬ ಕಾಲುಜಾರಿ ಹಳ್ಳಕ್ಕೆ ಬಿದ್ದು ನಾಪತ್ತೆಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನ ಜೋಗನ ಹಕ್ಕಲು ಜಲಪಾತದಲ್ಲಿ (Jogana Hakkalu Falls) ನಡೆದಿದೆ.

    ನಾಪತ್ತೆಯಾದ ಯುವಕನನ್ನು ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಪವನ್ ಗಣಪತಿ ಜೋಗಿ (24) ಎಂದು ಗುರುತಿಸಲಾಗಿದೆ. ಸ್ನೇಹಿತ ವಾಸುದೇವ್ ಜೊತೆ ಪವನ್‌ ಫಾಲ್ಸ್ ನೋಡಲು ಭಾನುವಾರ ಸಂಜೆ ತೆರಳಿದ್ದ. ಜಲಪಾತದ ಸಮೀಪ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲುಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ

    ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾದ ಯುವಕನ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ

  • ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

    ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಲಾಲಗೌಡ ನಗರದ ಸಮೀಪದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುತ್ತಮುತ್ತಲ ಪ್ರದೇಶಕ್ಕೆ ಆವರಿಸಿ ಇಲ್ಲಿನ ಜನ ಭಯ ಪಡುವಂತಾಯಿತು.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿಯ ಲಾಲಗೌಡ ನಗರದ ಈ ತ್ಯಾಜ್ಯ ವಿಲೇವಾರಿ ಘಟಕ ಈ ಹಿಂದೆಯೇ ಮುಚ್ಚಲಾಗಿತ್ತು. ಘಟಕದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ ಹಾಗೆಯೇ ಬಿಡಲಾಗಿತ್ತು.

    ಉಪಯೋಗವಾಗುತ್ತಿರದ ಕಾರಣ ಈ ಘಟಕದ ತುಂಬ ಗಿಡಗಂಟೆಗಳು ಬೆಳೆದು ನಿಂತಿದ್ದವು. ಬಿಸಿಲ ತಾಪಕ್ಕೆ ಗಿಡಗಂಟೆಗಳು ಒಣಗಿದ್ದು, ಪ್ಲಾಸ್ಟಿಕ್ ಹೊದಕೆಗಳು ಕಾದು ಹೋಗಿತ್ತು‌. ಹೀಗಾಗಿ ಎಲ್ಲೋ ಬಿದ್ದ ಬೆಂಕಿ ಕಿಡಿ ಇಡೀ ಘಟಕಕ್ಕೆ ಆವರಿಸಿ ಇಲ್ಲಿನ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಾವಿರಾರು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.