Tag: siriya

  • ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ನವದೆಹಲಿ: ಪ್ರಬಲ ಭೂಕಂಪದಿಂದ ನಾಶಗೊಂಡಿರುವ ಟರ್ಕಿ (Turkey) ಯಲ್ಲಿ ಎನ್‍ಡಿಆರ್ ಎಫ್ (NDRF) ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇಂದು ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದೆ. ಟರ್ಕಿಯ ನೂರ್ಡಗಿ, ಗಾಜಿಯಾಂಟೆಪ್‍ನಲ್ಲಿ ಭೂಕಂಪದಿಂದ ನೆಲಸಮವಾದ ಕಟ್ಟಡದ ಅವಶೇಷಗಳಡಿಯಲ್ಲಿ ಬಾಲಕಿ ಜೀವಂತವಾಗಿ ಸಿಲುಕಿದ್ದಳು.

    ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ಟರ್ಕಿಶ್ ಸೇನಾ ನೆರವಿನೊಂದಿಗೆ ವಿಶೇಷ ರಕ್ಷಣಾ ಕಾರ್ಯಾಚರಣೆ ಮಾಡಿದ ತಂಡ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎನ್‍ಡಿಆರ್ ಎಫ್, ಕಠಿಣ ಪರಿಶ್ರಮದೊಂದಿಗೆ ಬಾಲಕಿಯನ್ನು ರಕ್ಷಿಸಿದೆ ಎಂದು ಫೋಟೋ ಹಂಚಿಕೊಂಡಿದೆ.

    ಪ್ರಬಲ ಭೂಕಂಪದಿಂದಾಗಿ ಈವರೆಗೂ ಟರ್ಕಿ ಮತ್ತು ಸಿರಿಯಾ (Siriya) ದಲ್ಲಿ 24,000 ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ನಂತರ ಎರಡು ದೇಶಗಳಲ್ಲಿ ಕನಿಷ್ಠ 8,70,000 ಜನರಿಗೆ ತುರ್ತಾಗಿ ಆಹಾರದ ಅಗತ್ಯವಿದೆ. ಸಿರಿಯಾದಲ್ಲಿ ಭೂಕಂಪ 53 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಯುಎನ್ ಎಚ್ಚರಿಸಿದೆ.

    ಟರ್ಕಿ ಮತ್ತು ಸಿರಿಯಾಕ್ಕೆ ಅಂತಾರಾಷ್ಟ್ರೀಯ ಮಟ್ಟದಿಂದ ನೆರವು ಹರಿದು ಬರುತ್ತಿದೆ. ಯುನೈಟೆಡ್ ನೇಷನ್ಸ್ ವಲ್ರ್ಡ್ ಫುಡ್ ಪ್ರೋಗ್ರಾಂ ಟರ್ಕಿಯಲ್ಲಿ ಕನಿಷ್ಠ 590,000 ಮತ್ತು ಸಿರಿಯಾದಲ್ಲಿ 284,000 ಹೊಸದಾಗಿ ಸ್ಥಳಾಂತರಗೊಂಡ ಜನರಿಗೆ ಆಹಾರ ಪಡಿತರವನ್ನು ಒದಗಿಸಲು 635 ಕೋಟಿ ನೆರವಿಗೆ ಮನವಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿರಿಯಾದಲ್ಲಿ ಅಮೆರಿಕ ದಾಳಿಗೆ ಕೇರಳ ಮೂಲದ ಶಂಕಿತ ಐಸಿಸ್ ಉಗ್ರ ಬಲಿ

    ಸಿರಿಯಾದಲ್ಲಿ ಅಮೆರಿಕ ದಾಳಿಗೆ ಕೇರಳ ಮೂಲದ ಶಂಕಿತ ಐಸಿಸ್ ಉಗ್ರ ಬಲಿ

    ಡಮಾಸ್ಕಸ್: ಸಿರಿಯಾದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಕೇರಳ ಮೂಲದ ಶಂಕಿತ ಉಗ್ರನೊಬ್ಬ ಬಲಿಯಾಗಿದ್ದಾನೆ. ಅಬು ತಾಹಿರ್ ಬಲಿಯಾದ ಶಂಕಿತ ಉಗ್ರನಾಗಿದ್ದಾನೆ. ಈತ ಕೇರಳದ ಪಾಲ್ಛಾಟ್ ನಿವಾಸಿ ಎಂಬುದಾಗಿ ತಿಳಿದುಬಂದಿದೆ.

    ಅಬು ತಾಹಿರ್, ಕಳೆದ 2013ರಲ್ಲಿ ಉಮ್ರಾಗೆ ತೆರಳಿದ್ದು, ಆ ಬಳಿಕ ತಾಯ್ನಾಡಿಗೆ ಮರಳಿಲ್ಲ. ಆದ್ರೆ ಇದೀಗ ಶಾರ್ಜಾದಲ್ಲಿರುವ ಸಂಬಂಧಿಕರೊಬ್ಬರಿಗೆ ಅಬುತಾಹಿರ್ ಮೃತಪಟ್ಟಿರುವ ಕುರಿತು ಏಪ್ರಿಲ್ 4 ರಂದು ಮೆಸೇಜ್ ಬಂದಿತ್ತು.

    ಮೆಸೇಜ್ ನಲ್ಲಿ `ಐಸಿಸ್ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಅಬು ತಾಹಿರ್ ಅಫ್ಗಾನಿಸ್ತಾನದ ನಂಗಾರ್ಹರ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ’ ಅಂತಾ ಬರೆದಿತ್ತು.

    ಇದಕ್ಕೂ ಮೊದಲು ಅಂದ್ರೆ ಫೆಬ್ರವರಿಯಲ್ಲಿ ಇದೇ ಸಂಘಟನೆಯ ಉಗ್ರನೊಬ್ಬ ಅಫ್ಘಾನಿಸ್ತಾನ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಬಲಿಯಾಗಿದ್ದನು. ಕಳೆದ ಒಂದು ವರ್ಷದಿಂದ ಕ್ರಿಶ್ಚಿಯನ್ ಹಾಗೂ ಹಿಂದೂ ಕುಟುಂಬದಿಂದ ಬಂದ ಸುಮಾರು 12 ಮಂದಿ ಇಸ್ಲಾಂಗೆ ಮತಾಂತರಗೊಂಡು ಬಳಿಕ ಇಂತಹ ಸಂಘಟನೆಗಳಿಗೆ ಸೇರುತ್ತಿದ್ದಾರೆ. ಇದರಲ್ಲಿ ಇಬ್ಬರು ಮೆಸೇಜ್ ಹಾಗೂ ವಾಯ್ಸ್ ಮೆಸೇಜ್ ಮೂಲಕ ತಾವು ಸಂಘಟನೆಗಳಿಗೆ ಸೇರುವ ಬಗ್ಗೆ ತಮ್ಮ ಕುಟುಂಬಕ್ಕೂ ತಿಳಿಸಿದ್ದಾರೆ ಅಂತಾ ವರದಿಯಾಗಿದೆ.

  • ಟ್ರಂಪ್ ಆಡಳಿತವನ್ನು ಪ್ರಶ್ನಿಸಿ ಸಿರಿಯಾದ 7ರ ಬಾಲಕಿಯ ಈ ಟ್ವೀಟ್ ಈಗ ಫುಲ್ ವೈರಲ್

    ಡಮಾಸ್ಕಸ್: ಅಮೆರಿಕಾ ಅಧ್ಯಕ್ಷ ಡೊನಾಳ್ಡ್ ಟ್ರಂಪ್‍ಗೆ ಟ್ವಿಟ್ಟರ್‍ನಲ್ಲಿ ಸಿರಿಯಾದ 7 ವರ್ಷದ ಬಾಲಕಿ ಕೇಳಿದ ಪ್ರಶ್ನೆ ಇದೀಗ ವಿಶ್ವಾದಾದ್ಯಂತ ಗಮನಸೆಳೆದಿದೆ.

    ಸಿರಿಯಾದ ಬಾನಾ ಅಲಬೇದ್ ಎಂಬ ಬಾಲಕಿ ಟ್ವಟ್ಟರ್‍ನಲ್ಲಿ `ಮಿಸ್ಟರ್ ಟ್ರಂಪ್, ನೀವು ಎಂದಾದರೂ ನೀರು, ಆಹಾರವಿಲ್ಲದೇ 24 ಗಂಟೆ ಬದುಕಿದ್ದೀರಾ?. ಹೀಗೆ ಸಿರಿಯಾದ ನಿರಾಶ್ರತಿರ ಹಾಗೂ ಮಕ್ಕಳ ಬಗ್ಗೆ ಸ್ವಲ್ಪ ಚಿಂತಿಸಿ ಅಂತಾ ಹೇಳಿದ್ದಾಳೆ. ಈಕೆಯ ಹೊಸ ಟ್ವಿಟ್ ಹೊಸ ಟ್ವಿಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯ ಈ ಟ್ವಿಟ್‍ಗೆ 7,462 ಮಂದಿ ರೀಟ್ವಿಟ್ ಮಾಡಿದ್ದು, 14,978 ಲೈಕ್ಸ್‍ಗಳು ಬಂದಿವೆ.

    ಬಳಿಕ ಈ ಹಿಂದೆ ಟ್ರಂಪ್ ವಲಸೆ ನಿಷೇಧದ ಬಗ್ಗೆ ಟ್ರಂಪ್ ಮಾಡಿದ್ದ `ನಮ್ಮ ದೇಶದಿಂದ ಕೆಟ್ಟ ಚಿಂತನೆಗಳುಳ್ಳ ಜನರನ್ನು ಹೊರಗಿಡುವುದು ಉದ್ದೇಶ’ ಎಂಬ ಟ್ವಿಟ್ ಗೂ ರೀಟ್ವೀಟ್ ಮಾಡಿದ ಈಕೆ `ನಾನು ಭಯೋತ್ಪಾದಕಿಯೇ?’ ಅಂತಾ ಪ್ರಶ್ನಿಸಿದ್ದಾಳೆ.

    ಟ್ರಂಪ್ ಇತ್ತೀಚೆಗಷ್ಟೇ ಸಿರಿಯಾ ಒಳಗೊಂಡಂತೆ ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ನಿಷೇಧಿಸಿ ಆದೇಶಕ್ಕೆ ಸಹಿ ಮಾಡಿದ್ದು ಇದು ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

    ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಲಬೇದ್ `ಪ್ರಿಯ ಟ್ರಂಪ್, ನಿರಾಶ್ರಿತರನ್ನು ನಿಷೇಧಿಸುವುದು ಅತಿ ಕೆಟ್ಟ ವಿಚಾರ. ಸರಿ, ಇದು ಒಳ್ಳೆಯದಾದ್ದರೆ, ನಾನು ನಿಮಗೊಂದು ಐಡಿಯಾ ಹೇಳ್ತೀನಿ. ಇತರ ರಾಷ್ಟ್ರಗಳಲ್ಲಿ ಶಾಂತಿ ನೆಲಸುವಂತೆ ಮಾಡಿ” ಎಂದು ಬರೆದಿದ್ದಳು.

    ಯುದ್ಧ ಜರ್ಜರಿತ ಸಿರಿಯಾ ನಗರ ಅಲೆಪ್ಪೋದಲ್ಲಿನ ಜನರ ಜೀವನದ ಬಗ್ಗೆ ಬರೆದು, ಸಹಾಯಕ್ಕಾಗಿ ತನ್ನ ತಾಯಿ ಫಾಥೇಮಾ ಅವರೊಂದಿಗೆ ಅಲಬೇದ್ ಸರಣಿ ಟ್ವೀಟ್ ಮಾಡುತ್ತಿದ್ದಾಳೆ. ಅಲಬೇದ್ ಮತ್ತು ಅವಳ ತಾಯಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೆಪ್ಟೆಂಬರ್ 2016 ರಿಂದ 3,66,000 ಜನ ಹಿಂಬಾಲಿಸುತ್ತಿದ್ದಾರೆ.