Tag: Sirisha Bandla

  • ನಭೋ ಮಂಡಲಕ್ಕೆ ವರ್ಜಿನ್ ರಾಕೆಟ್ ಟೆಕಾಫ್ – ಗಗನಕ್ಕೆ ಹಾರಿದ ರಿಚರ್ಡ್ ಬ್ರಾನ್ಸನ್, ಶಿರಿಷಾ ಸಹಿತ 6 ತಜ್ಞರು

    ನಭೋ ಮಂಡಲಕ್ಕೆ ವರ್ಜಿನ್ ರಾಕೆಟ್ ಟೆಕಾಫ್ – ಗಗನಕ್ಕೆ ಹಾರಿದ ರಿಚರ್ಡ್ ಬ್ರಾನ್ಸನ್, ಶಿರಿಷಾ ಸಹಿತ 6 ತಜ್ಞರು

    ವಾಷಿಂಗಟನ್: ಸ್ಪೇಸ್ ಟೂರಿಸಂ ಕನಸು ಕಂಡಿರುವ ‘ವೆಲ್ತೀ ಡೇರ್ ಡೆವಿಲ್ ಮೊಘಲ್’ ಹೆಸರುವಾಸಿ ವರ್ಜಿನ್ ಕಂಪನಿಯ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ 10 ವರ್ಷಗಳ ಸಾಹಸ ಇಂದು ಸಾಕಾರಗೊಂಡಿದೆ. ಇಂದು ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಯಶಸ್ವಿಯಾಗಿ ರಾತ್ರಿ 8 ಗಂಟೆಗೆ ಉಡಾವಣೆಯಾಗಿದ್ದು, ಆರು ಯಾನಿಗಳ ಪೈಕಿ ಆಂಧ್ರ ಮೂಲದ ಶಿರಿಷಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ಶಿರಿಷಾ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ನಲ್ಲಿ ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಆಗಿದ್ದಾರೆ.

    90 ನಿಮಿಷಗಳ ಪ್ರಯಾಣ ಮುಗಿಸಿ ಅಮೆರಿಕದ ನ್ಯೂ ಮೆಕ್ಸಿಕೋ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಇದು ವಿಎಂಎಸ್ ಇವ್ ನಿಂದ ಮೇಲಕ್ಕೆ ಅಂದ್ರೆ ಭೂಮಿಯ ಪರಿಧಿಯಿಂದ 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ತದನಂತರ ಸ್ಪೇಸ್‍ಕ್ರಾಫ್ಟ್ ಸ್ವತಃ ಬಾಹ್ಯಾಕಾಶದತ್ತ ಚಲಿಸುತ್ತದೆ. ಅಂತರಿಕ್ಷದ ಈ ಯಾತ್ರೆ 1 ಗಂಟೆ 5 ನಿಮಿಷ ಇರಲಿದೆ. ನಂತರ ವಿಎಸ್‍ಎಸ್ ಯುನಿಟಿ ವಾಪಸ್ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ.

    ಸ್ಪೇಸ್‍ಪಾರ್ಟ್ ಲಾಂಚ್ ನಿಂದ ಲ್ಯಾಂಡಿಂಗ್ ನಡುವಿನ ಸಮಯ ಒಟ್ಟು 90 ನಿಮಿಷ. ವಿಎಸ್‍ಎಸ್ ಯುನಿಟಿ ಬರೋಬ್ಬರಿ 4 ನಿಮಿಷ ಅಂತರಿಕ್ಷ ಯಾತ್ರಿಗಳಿಗೆ ಝೀರೋ ಗ್ರೆವಿಟಿಯ ಅನುಭವವಾಗುತ್ತದೆ. ರಿಚರ್ಡ್ ಜೊತೆಯಲ್ಲಿ ಚೀಫ್ ಎಸ್ಟ್ರೋನಾಟ್ ಇನ್‍ಸ್ಟ್ರಕ್ಟರರ್ ಬೆಥ್ ಮೊಸೆಸ್, ಲೀಡ್ ಆಪರೇಷನ್ ಇಂಜಿನೀಯರ್ ಕೋಲಿನ್ ಬೆನ್ನೆಟ್, ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಶಿರೀಷಾ ಬಾಂದ್ಲಾ ಸಹ ಪ್ರಯಾಣಿಸಿದ್ದಾರೆ.

  • ಇಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ರಿಚರ್ಡ್ ಬ್ರಾನ್ಸನ್, ಸಿರಿಶಾ ಬಾಂದ್ಲಾ

    ಇಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ರಿಚರ್ಡ್ ಬ್ರಾನ್ಸನ್, ಸಿರಿಶಾ ಬಾಂದ್ಲಾ

    ವಾಷಿಗ್ಟನ್: ಸ್ಪೇಸ್ ಟೂರಿಸಂ ಕನಸು ಕಂಡಿರುವ `ವೆಲ್ತೀ ಡೇರ್ ಡೆವಿಲ್ ಮೊಘಲ್’ ಹೆಸರುವಾಸಿ ವರ್ಜಿನ್ ಕಂಪನಿಯ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ 10 ವರ್ಷಗಳ ಸಾಹಸ ಇಂದು ಸಾಕಾರವಾಗಲಿದೆ.

    ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ 34ರ ಹರೆಯದ ಸಿರಿಶಾ ಬಾಂದ್ಲಾ ಸಹ ವರ್ಜಿನ್ ಗ್ಯಾಲಕ್ಟಿಕ್ ಗಗನ ನೌಕೆಯೊಂದಿಗೆ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.

    ವರ್ಜಿನ್ ಗ್ಯಾಲಾಕ್ಟಿಕ್ ಹೋಲ್ಡಿಂಗ್ ಇಂಕ್ ಕಂಪನಿ ನಾಳೆ ಮೊದಲ ಪ್ರಯಾಣಿಕರ ಸ್ಪೇಸ್ ರಾಕೆಟ್ ಅನ್ನು ಲಾಂಚ್ ಮಾಡುತ್ತಿದೆ. ‘ವಿಎಸ್‍ಎಸ್ ಯುನಿಟಿನಿಟಿ’ ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ ಆರು ಗಗನಯಾತ್ರಿಗಳಲ್ಲಿ ಇಬ್ಬರು ಮಹಿಳೆಯರಿದ್ದು, ಅದರಲ್ಲಿ ಸಿರಿಶಾ ಕೂಡ ಒಬ್ಬರಾಗಿದ್ದಾರೆ. ಇದನ್ನೂ ಓದಿ: ಅಮೆರಿಕದ ಮಾಧ್ಯಮಗಳಿಗೆ ​ಲಕ್ಷಾಂತರ ಡಾಲರ್ ಸುರಿದಿದೆ ಚೀನಾ

    90 ನಿಮಿಷಗಳ ಈ ಮಹಾತ್ಸಾಧನೆಯಲ್ಲಿ ಎಲ್ಲವೂ ಸರಿಯಾದರೆ ನ್ಯೂ ಮೆಕ್ಸಿಕೋ ಮರಳುಗಾಡಿನ ಮೇಲೆ ಭೂಮಿಯ ಪರಿಧಿಯಿಂದ 50 ಮೈಲಿ ಎತ್ತರಕ್ಕೆ ಯುನಿಟಿ-22 ರಾಕೆಟ್ ಹಾರಲಿದೆ. ಇಬ್ಬರು ಪೈಲಟ್‍ಗಳು, ರಿಚರ್ಡ್ ಬ್ರಾನ್ಸನ್ ಸೇರಿ ನಾಲ್ವರು ತರಬೇತಿ ಹೊಂದಿರುವ ತಜ್ಞರು ಸ್ಪೇಸ್ ಸ್ಟೇಷನ್ ಅಂಚಿನಲ್ಲಿ ಕೆಲ ನಿಮಿಷ ರೋಚಕ ಅನುಭವ ಅನುಭವಿಸಲಿದ್ದಾರೆ.

    ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಹ್ಯಾಕಾಶಕ್ಕೆ ಹಾರುತ್ತಿರುವ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.