Tag: Sirish Bhardwaj

  • ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ನಿಧನ

    ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ನಿಧನ

    ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Mega Star Chiranjeevi) ಮಾಜಿ ಅಳಿಯ, ಶ್ರೀಜಾ ಅವರ ಮೊದಲ ಮಾಜಿ ಪತಿ ಶಿರೀಶ್ ಭಾರದ್ವಾಜ್ (Sirish Bharadwaj) ನಿಧನರಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮೂಲಗಳ ಪ್ರಕಾರ, ಶಿರೀಶ್ ಭಾರದ್ವಾಜ್ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು (ಜೂನ್ 19) ಬೆಳಗ್ಗೆ ಮೃತಪಟ್ಟಿದ್ದಾರೆ.‌ ಇದನ್ನೂ ಓದಿ:‘ಕುರುಕ್ಷೇತ್ರ’ ಸೆಟ್‌ನಲ್ಲಿ ಪವಿತ್ರಾರನ್ನು ಏನೆಂದು ಪರಿಚಯಿಸಿದ್ರು ದರ್ಶನ್? ‘ಕಾಟೇರ’ ನಟ ಹೇಳಿದಿಷ್ಟು

    ಅಂದಹಾಗೆ,ಶಿರೀಶ್ ಮತ್ತು ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ (Sreeja) ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಶ್ರೀಜಾ ಮನೆಯಿಂದ ಹೊರ ನಡೆದಿದ್ದರು. ಬಳಿಕ ಶ್ರೀಜಾ ಮತ್ತು ಶಿರೀಶ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಕೆಲ ಮನಸ್ತಾಪಗಳಿಂದ ಶ್ರೀಜಾ ತನ್ನ ಪುತ್ರಿಯೊಂದಿಗೆ ಮತ್ತೆ ತಂದೆ ಚಿರಂಜೀವಿ ಮನೆಗೆ ವಾಪಸ್ ಆಗಿದ್ರು.

    2012ರಲ್ಲಿ ಶ್ರೀಜಾ ಕಿರುಕುಳ ನೀಡಿದ್ದಕ್ಕಾಗಿ ಶಿರೀಶ್ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ನಂತರ 2014ರಲ್ಲಿ ಶ್ರೀಜಾ ಅವರು ಶಿರೀಶ್ ಭಾರದ್ವಾಜ್‌ಗೆ ಡಿವೋರ್ಸ್ ನೀಡಿದ್ದರು. ಇದೀಗ ಶಿರಿಷ್ ಭಾರದ್ವಾಜ್ ಬಾರದ ಲೋಕಕ್ಕೆ ಹೋಗಿದ್ದಾರೆ. ಸದ್ಯ ಶಿರೀಶ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

  • ಮೂರನೇ ಮದುವೆಗೆ ರೆಡಿಯಾದರಾ ಮೆಗಾ ಸ್ಟಾರ್ ಪುತ್ರಿ

    ಮೂರನೇ ಮದುವೆಗೆ ರೆಡಿಯಾದರಾ ಮೆಗಾ ಸ್ಟಾರ್ ಪುತ್ರಿ

    ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ಶ್ರೀಜಾ ಬದುಕಿಗೆ ಮತ್ತೋರ್ವ ವ್ಯಕ್ತಿ ಪ್ರವೇಶ ಮಾಡಿದ್ದಾರಾ? ಹಾಗೆನ್ನುತ್ತಿದೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್. ಈವರೆಗೂ ತಮ್ಮ ಖಾಸಗಿ ಬದುಕಿನ ಬಗ್ಗೆ ಏನೂ ಹೇಳಿಕೊಳ್ಳದೇ ಶ್ರೀಜಾ ಇದೀಗ ಏಕಾಏಕಿಯಾಗಿ ಇನ್ಸ್ಟಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಡಿಯರ್ 2022, ನೀನು ನನ್ನ ಜೀವನಕ್ಕೆ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದೀಯಾ. ಅವನ ಭೇಟಿ ನಿಜಕ್ಕೂ ಒಂದು ಅದ್ಭುತ ಪಯಣವನ್ನೇ ಆರಂಭಿಸಲಿದೆ’ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಈ ಮೊದಲು ಶ್ರೀಜಾಗೆ ಸಿರೀಶ್ ಭಾರಧ್ವಜ್ ಜೊತೆ ಮದುವೆ ಆಗಿತ್ತು. ಕೇವಲ 19 ವರ್ಷದ ಶ್ರೀಜಾ ಮನೆಯವರನ್ನು ವಿರೋಧ ಕಟ್ಟಿಕೊಂಡು ಸಿರೀಶ್ ಜೊತೆ ಮದುವೆ ಆಗಿದ್ದರು. ಈ ಪ್ರೀತಿಯ ಮದುವೆ ತುಂಬಾ ದಿನ ಉಳಿಯಲಿಲ್ಲ. ಮತ್ತೆ ತವರು ಮನೆಗೆ ಬಂದ ಶ್ರೀಜಾ, ಗಂಡನು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ 2011ರಲ್ಲಿ ಡಿವೋರ್ಸ್ ಪಡೆದುಕೊಂಡರು. ಅಲ್ಲಿಗೆ ಮೊದಲ ಮದುವೆ ಮುರಿದು ಬಿದ್ದಿತ್ತು. ಇದನ್ನೂ ಓದಿ: ಗಡಿನಾಡ ಕನ್ನಡಿಗ ವಿವಾದದ ಬಗ್ಗೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ

    ಕುಟುಂಬಸ್ಥರು ಸೇರಿ ಶ್ರೀಜಾಗೆ 2016ರಲ್ಲಿ ಉದ್ಯಮಿ ಕಲ್ಯಾಣ ದೇವ್ ಜೊತೆ ಮದುವೆ ಮಾಡಿದರು. ಅದು ಕುಟುಂಬವೇ ಸೇರಿ ಮಾಡಿದಂತಹ ಮದುವೆ ಆಗಿತ್ತು. ಆನಂತರ ಇಬ್ಬರಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ ಶ್ರೀಜಾ ತಮ್ಮ ಪತಿಯ ಹೆಸರನ್ನು ಸೋಷಿಯಲ್ ಮೀಡಿಯಾದಿಂದ ಕಿತ್ತು ಹಾಕಿದರು. ಅವರನ್ನು ಅನ್ ಫಾಲೋ ಮಾಡಿದರು. ಈ ಮಧ್ಯ ಕಲ್ಯಾಣ್ ದೇವ್ ಕೂಡ ತಮ್ಮ ಬದುಕು ಕಠಿಣ ಅನಿಸುತ್ತಿದೆ ಎಂದು ಬರೆದುಕೊಂಡಿದ್ದರು. ಇಬ್ಬರೂ ದೂರವಾಗಿದ್ದಾರಾ ಅಥವಾ ಡಿವೋರ್ಸ್ ಪಡೆದಿದ್ದಾರಾ ಎನ್ನುವ ಕುರಿತು ಮಾಹಿತಿ ಇಲ್ಲ.

    ಇಷ್ಟರಲ್ಲಿ ಶ್ರೀಜಾ ಮತ್ತೆ ಪೋಸ್ಟ್ ಮಾಡಿ ತಮ್ಮ ಜೀವನಕ್ಕೆ ಮತ್ತೋರ್ವ ವ್ಯಕ್ತಿ ಎಂಟ್ರಿ ಪಡೆದಿರುವ ಹಾಗೂ ಅವನೊಂದಿಗೆ ಹೊಸ ಜೀವನ ನಡೆಸುವ ಕುರಿತು ಸುಳಿವು ನೀಡಿದ್ದಾರೆ. ಆದರೆ, ಈ ಬರಹ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸಂಚಲನವನ್ನಂತೂ ಮೂಡಿಸಿದೆ. ಶ್ರೀಜಾ ಹಾಕಿರುವ ಈ ಪೋಸ್ಟ್ ಹಿಂದಿನ ಅರ್ಥವನ್ನು ಕೆದುಕುವ ಪ್ರಯತ್ನವನ್ನು ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]