‘ಬಿಗ್ ಬಾಸ್ ಕನ್ನಡ 10′ ಸ್ಪರ್ಧಿ ಸಿರಿ (Actress Siri) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ (Prabhar Boregowda) ಜೊತೆ ಸಿರಿ ಹಸೆಮಣೆ (Wedding) ಏರಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಜರುಗಿದೆ. ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ:ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ
ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಜೂನ್ 13ರಂದು ಸರಳವಾಗಿ ಮದುವೆ ನಡೆದಿದೆ. ಸದ್ಯ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಅಂದಹಾಗೆ, ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್‌ಗಳು ಮೂಲಕ ಟಿವಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸೀಸನ್ 10ರ ಬಿಗ್ ಬಾಸ್ ಕನ್ನಡ ಶೋನಿಂದ (Bigg Boss Kannada 10) ನಟಿ ಸಿರಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಮೂಲಕ ಮನೆ ಮಾತಾದ ನಟಿ ಸಿರಿ (Siri) ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಿರುತೆರೆಯಿಂದ ದೂರ ಉಳಿದುಕೊಂಡಿದ್ದ ನಟಿ ಮತ್ತೆ ಟಿವಿ ಪರದೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಕಿರುತೆರೆಯ ಜನಪ್ರಿಯ ಧಾರಾವಾಹಿ ‘ರಂಗೋಲಿ’ ಮೂಲಕ ಮನೆ ಮಾತಾದ ನಟಿ ಸಿರಿ ಕಡೆಯದಾಗಿ ‘ರಾಮಾಚಾರಿ’ ಸೀರಿಯಲ್ ಕಾಣಿಸಿಕೊಂಡಿದ್ದರು. ಬಳಿಕ ಈ ವರ್ಷದ ‘ಬಿಗ್ ಬಾಸ್’ ಶೋನಲ್ಲಿ ಸಿರಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಇದೀಗ ಸಮಯದ ಬಳಿಕ ಚುಕ್ಕಿ ತಾರೆ ಸೀರಿಯಲ್ ಮೂಲಕ ನಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಸದ್ಯ ಸಿರಿ ಅವರ ಪಾತ್ರದ ಶೂಟಿಂಗ್ ನಡೆಯುತ್ತಿದ್ದು, ಚುಕ್ಕಿ-ಇಬ್ಬನಿಗೆ ದಾರಿ ತೋರಿ ರಕ್ಷಿಸೋ ವಿಶಿಷ್ಟ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇನ್ನೂ ಚುಕ್ಕಿ ಅಪ್ಪನನ್ನ (ಹೀರೋ ನವೀನ್ ಸಜ್ಜು) ಕಳೆದುಕೊಂಡ ನೋವಲ್ಲಿದ್ದಾಳೆ. ಸ್ನೇಹಿತೆಗೆ ಸಹಾಯ ಮಾಡಲು ಇಬ್ಬನಿ ಕೂಡ ಬಂದಿದ್ದಾಳೆ. ಇದೀಗ ಕಥೆಯಲ್ಲಿ ಸಿರಿ ಅತಿಥಿ ಪಾತ್ರ ಹೊಸ ತಿರುವು ಕೊಡಲಿದೆ.
ಅಂದಹಾಗೆ, ಇತ್ತೀಚೆಗೆ ‘ಚುಕ್ಕಿತಾರೆ’ ಸೀರಿಯಲ್‌ನಲ್ಲಿ ವಿನಯ್ ಗೌಡ ದಂಪತಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ವಿಶೇಷ ಎಪಿಸೋಡ್ ನೋಡುಗರ ಗಮನ ಸೆಳೆದಿತ್ತು.
‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಮೂಲಕ ಗಮನ ಸೆಳೆದ ವರ್ತೂರು ಸಂತೋಷ್ (Varthur Santhosh) , ಸಿರಿ, ಅವಿನಾಶ್ ಶೆಟ್ಟಿ, ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಮಾಡಿದ್ದಾರೆ. ಸದ್ಯ ಮೀಟ್ ಆಗಿರುವ ‘ಬಿಗ್ ಬಾಸ್’ ತಾರೆಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವರ್ಷದ ಬಿಗ್ ಬಾಸ್ ಶೋ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಕಾರ್ಯಕ್ರಮ. ಗಲಾಟೆ, ಗದ್ದಲದ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಶೋ ಮುಗಿದ ‘ಬಿಗ್ ಬಾಸ್’ ಸ್ಪರ್ಧಿಗಳು ಒಬ್ಬರನ್ನೊಬ್ಬರು ಮರೆತ್ತಿಲ್ಲ. ಶೋ ನಂತರ ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಬೆಂಬಲಕ್ಕೆ ನಿಂತ ನಟ ಅಲ್ಲು ಅರ್ಜುನ್
ಎಲ್ಲ ಸ್ಪರ್ಧಿಗಳ ಒಂದಲ್ಲ ಒಂದು ಕಾರಣಕ್ಕೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ, ಇನ್ನೊಬ್ಬರ ಪ್ರಾಜೆಕ್ಟ್‌ಗಳು, ಹೊಸ ಕಾರ್ಯಗಳಿಗೆ ಬೆಂಬಲಿಸುತ್ತಿದ್ದಾರೆ. ಇದೀಗ ಸಿರಿ, ತನಿಷಾ ಕುಪ್ಪಂಡ(Tanisha Kuppanda), ಅವಿನಾಶ್ ಶೆಟ್ಟಿ, ವರ್ತೂರು ಸಂತೋಷ್ ಅವರು ವರ್ತೂರಿನಲ್ಲಿ ಒಟ್ಟಾಗಿ ಊಟ ಮಾಡಿದ್ದಾರೆ. ಅಲ್ಲಿಯೇ ಇದ್ದ ತೋಟಕ್ಕೆ ಭೇಟಿ ನೀಡಿದ್ದಾರೆ. ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಸತೋಷ್ ಅವರ ಊರಿನಲ್ಲಿ ಎಲ್ಲರೂ ಮಸ್ತ್ ಆಗಿ ಎಂಜಾಯ್ ಮಾಡಿದ್ದಾರೆ.
ನಟಿ ಸಿರಿ ಪ್ರಹ್ಲಾದ್ (Siri Prahlad) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಯುಗಳಗೀತೆ’ ಹೀರೋ ಮಧುಸೂದನ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಂಗೇಜ್ ಆಗಿರುವ ಬಗ್ಗೆ ಸ್ಪೆಷಲ್ ವಿಡಿಯೋ ಶೇರ್ ಮಾಡಿ ಸಿಹಿಸುದ್ದಿ ತಿಳಿಸಿದ್ದಾರೆ.
2017ರಲ್ಲಿ ಪ್ರಸಾರವಾಗುತ್ತಿದ್ದ ‘ಯುಗಳಗೀತೆ’ (Yugalageethe) ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಸಿರಿ, ಮಧುಸೂದನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫ್ರೆಂಡ್ಸ್ ಆಗಿದ್ದವರು ಫ್ಯಾಮಿಲಿಯಾಗುತ್ತಿದ್ದೇವೆ ಎಂದು ಸಿರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:‘ಲಾಲ್ ಸಲಾಂ’ ಸೋಲಿನ ಎಫೆಕ್ಟ್- ಲೋಕೇಶ್ ಕನಕರಾಜ್‌ಗೆ ತಲೈವಾ ವಾರ್ನಿಂಗ್
2017ರಿಂದ ಸಿರಿ- ಮಧುಸೂದನ್ ಅವರು ಸ್ನೇಹಿತರು. ಇಷ್ಟು ವರ್ಷಗಳ ಕಾಲ ಇವರಿಬ್ಬರು ಬೇರೆ ಬೇರೆ ಪ್ರಾಜೆಕ್ಟ್ ಮಾಡುತ್ತಿದ್ದರು. ಯುಗಳಗೀತೆ ಸೀರಿಯಲ್ ಸಮಯದಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿದೆ. ಇದೀಗ ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ.
ಸಿರಿ ಅವರು ಈಗಾಗಲೇ ‘ಲಾ’, ‘ಇಷ್ಟ’, ‘ಬಡ್ಡೀಸ್’, ಒಂದು ಶಿಕಾರಿಯ ಕಥೆ, ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಧುಸೂದನ್ ಅವರು ‘ಮೇಡ್ ಇನ್ ಬೆಂಗಳೂರು’ ಸಿನಿಮಾವನ್ನು ಮಾಡಿದ್ದಾರೆ.
ಬದುಕು, ರಂಗೋಲಿ ಸೀರಿಯಲ್ ಸೇರಿದಂತೆ ದರ್ಶನ್, ಸುದೀಪ್ (Sudeep) ನಟನೆಯ ಸಿನಿಮಾಗಳಲ್ಲಿ ನಟಿಸಿದ್ದ ಸಿರಿ ಬಿಗ್ ಬಾಸ್ ಮನೆಯಿಂದ 12ನೇ ವಾರ ಎಲಿಮಿನೇಟ್ ಆದ ಬೆನ್ನಲ್ಲೇ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಕಳೆದ ಭಾನುವಾರ (ಡಿ.31) ಔಟ್ ಆಗಿದ್ದ ಸಿರಿ (Siri) ಈಗ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ಶೇರ್ ಮಾಡಿ ಬಿಗ್ ಬಾಸ್ ಶೋನ (Bigg Boss Kannada 10) ಅನುಭವ ಶೇರ್ ಮಾಡಿದ್ದಾರೆ. ಬಿಗ್ ಬಾಸ್‌ಗೆ (Bigg Boss) ಹೋಗುವುದಕ್ಕೂ ಮುನ್ನ ಸಾಕಷ್ಟು ಯೋಚನೆ ಮಾಡಿದೆ. ಅಲ್ಲಿ ಹೋಗಿ ಹೇಗೆ ಇರುವುದು, ಏನು ಮಾಡುವುದು, ನಾನು ಇರುವುದಕ್ಕೆ ಸಾಧ್ಯನಾ ಎಂಬೆಲ್ಲಾ ವಿಚಾರವಾಗಿ ಯೋಚನೆ ಮಾಡಿದೆ. ಆದರೂ ಧೈರ್ಯ ಮಾಡಿ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ಸಾಕಷ್ಟು ಕಲಿತೆ. ಅಲ್ಲಿಂದ ಹೊರಗೆ ಬಂದ ಮೇಲೆ ಯೋಚನೆ ಮಾಡಿದೆ. ಬಿಗ್ ಬಾಸ್ ಗೆ ಹೋಗಿ ಗಳಿಸಿದ್ದು ಏನು ಅಂತ. ಆಮೇಲೆ ಅರ್ಥ ಆಯ್ತು ನಿಮ್ಮೆಲ್ಲರ ಪ್ರೀತಿ ಗಳಿಸಿದೆ ಎಂದಿದ್ದಾರೆ ಸಿರಿ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್
ನಾನು ಬಿಗ್ ಬಾಸ್ ಮನೆಗೆ (Bigg Boss) ಹೋದ ಮೇಲೆ ಇಷ್ಟೊಂದು ಪ್ರೀತಿ ಕೊಡುತ್ತೀರ, ಇಷ್ಟೊಂದು ಸಪೋರ್ಟ್ ಮಾಡುತ್ತೀರಾ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಆದರೆ ನನಗೆ ಇಷ್ಟೊಂದು ಬೆಂಬಲ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಜೊತೆಗೆ ಮಾತನಾಡಬೇಕು ಎನಿಸಿದೆ. ನಿಮಗೂ ಗೊತ್ತು, ನಾನು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟೀವ್ ಆಗಿಲ್ಲ ಅಂತ. ಆದರೆ ಆದಷ್ಟು ಬೇಗ ಲೈವ್‌ಗೆ ಬಂದು ನಿಮ್ಮಗಳ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹೊರಗಿನ ಪ್ರಪಂಚವೇ ಗೊತ್ತಿರಲ್ಲ. ಊಟ, ಸರಿಯಾದ ನಿದ್ದೆಯಿರುವುದಿಲ್ಲ. ಆಟ, ಜಗಳ, ಮನಸ್ತಾಪಗಳ ನಡುವೆಯೇ ಇದ್ದ ಸಿರಿ ಈಗ ಹೊರಗೆ ಬಂದಿದ್ದಾರೆ. 83 ದಿನ ಅದೇ ಜೀವನ ನೋಡಿದ್ದ ಸಿರಿಗೆ ಈಗ ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿದೆಯಂತೆ. ಹಾಗಾಗಿ ಕೊಂಚ ಸಮಯ ನೀಡಿ, ಸದ್ಯದಲ್ಲೇ ಲೈವ್‌ನಲ್ಲಿ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಸಿರಿ ಮನವಿ ಮಾಡಿದ್ದಾರೆ.
ಸಿರಿ (Siri) ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಹೊರ ಬಂದಿದ್ದಾರೆ. ತಮ್ಮ ಜರ್ನಿ ಕುರಿತಾಗಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ತಾವು ಅಲ್ಲಿ ಹೇಗಿದ್ದರು, ದೊಡ್ಮನೆಯಲ್ಲಿದ್ದವರನ್ನು ಹೇಗೆ ನೋಡಿದ್ದಾರೆ, ಹಾಗೂ ಇತರರ ಕುರಿತು ಮಾತನಾಡಿದ್ದಾರೆ.
ನಾನು ಡಿಪ್ಲೋಮೆಟಿಕ್ ಅಂದ್ರೆ ಒಪ್ಕೋತೀನಿ. ಯಾಕಂದರೆ ನಾನು ಇರೋದೇ ಹಾಗೆ. ಈವತ್ತು ನಾನು ಹೊರಗೆ ಬಂದಾಗ, ನನಗೋಸ್ಕರ ಮನೆಯೊಳಗೆ ಇಬ್ಬರು ಮೂವರು ಕಣ್ಣೀರು ಹಾಕ್ತಿದ್ದಾರೆ ಅಂದರೆ ಅರ್ಥ ಮಾಡ್ಕೊಳ್ಳಿ. ಹಾಗೆಯೇ ಹೊರಗೆ ನನ್ನ ಅಭಿಮಾನಿಗಳಿರಬಹುದು. ನನಗೆ ಓಟ್ ಹಾಕಿರುವವರು ಇರಬಹುದು. ಅವರ ಮನಸ್ಸನ್ನು ನಾನು ಗೆದ್ದಿದೀನಿ . ಬಿಗ್‌ಬಾಸ್ ಮನೆಯೊಳಗೆ ಎಲ್ಲರೂ ನನ್ನನ್ನು ಡಿಪ್ಲೋಮೆಟಿಕ್ ಅಂದಿರಬಹುದು, ಸೇಫ್ ಝೋನ್ ಅಂದಿರಬಹುದು. ಆದರೆ ನಾನು ಮನೆಯಿಂದ ಹೊರಗೆ ಬರುವಾಗ ಹಾಗೆ ಹೇಳಿದವರು ಕಣ್ಣಲ್ಲೂ ನೀರು ನೋಡ್ದೆ. ಹಾಗಾಗಿ ಅವರ ಮನಸ್ಸನ್ನೂ ನಾನು ಗೆದ್ದಿದೀನಿ ಅಂದ್ಕೊಂಡಿದೀನಿ. ಯಾರ ಮನಸ್ಸನ್ನು ನೋವಾದಾಗ, ಸಮಾಧಾನ ಮಾಡಿದೀನಲ್ಲಾ, ಅವರೆಲ್ಲರೂ ನನಗೆ ಅಕ್ಕನ ಸ್ಥಾನ ಕೊಟ್ಟಿದಾರಲ್ಲಾ. ಅದರ ಬಗ್ಗೆ ಖುಷಿಯಿದೆ.
ಕ್ಯಾಪ್ಟನ್ಸಿ ಟಾಸ್ಕ್ ಕನಸು
ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನು ಬಹಳ ಹತ್ತಿರ ಹೋಗಿದ್ದೆ. ಎರಡು ಸಲ ಹೋಗಿದ್ದೆ. ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಕ್ಯಾಪ್ಟನ್ ಬೆಡ್ ಮೇಲೆ ಮಲಗುವ ಅವಕಾಶ ಸಿಗಲಿಲ್ಲ. ಆದರೆ ಕ್ಯಾಪ್ಟನ್‌ಗೆ ಸಿಗುವ ಸೌಲಭ್ಯಗಳನ್ನೆಲ್ಲ ಕಳೆದ ವಾರಗಳಲ್ಲಿ ನಾನು ತೆಗೆದುಕೊಂಡಿದೀನಿ. ಹಾಗಾಗಿ ಸುದೀಪ್ ಅವರೇ ನನಗೆ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಕೊಟ್ರು. ಇಮ್ಯೂನಿಟಿ ಸಿಗುತ್ತದೆ ಕ್ಯಾಪ್ಟನ್ ಆದವರಿಗೆ. ವೈಲ್ಡ್ ಕಾರ್ಡ್ ಎಂಟ್ರಿ ಆದವರು ಆ ವಾರ ನನ್ನನ್ನು ಸೇವ್ ಮಾಡಿ ಆ ಸೌಲಭ್ಯವೂ ಸಿಗುವಂತೆ ಮಾಡಿದರು. ಮನೆಯವರು ಫೋಟೊ ಬರುತ್ತದೆ ಕ್ಯಾಪ್ಟನ್ ಆದವರಿಗೆ. ನನಗೆ ಮನೆಯಿಂದ ಪತ್ರ ಬಂದಾಗಲೇ ನನ್ನದು ನನ್ನ ತಂದೆಯವರದ್ದು ಫೋಟೊ ಬಂದಿತ್ತು. ಹಾಗಾಗಿ, ಕ್ಯಾಪ್ಟನ್ ಆಗಿ ಸಿಗುವ ಸೌಲಭ್ಯಗಳಲ್ಲಿ ಬಹುತೇಕ ನನಗೆ ಸಿಕ್ಕಿದೆ. ಆದರೆ ಕ್ಯಾಪ್ಟನ್ ಕೋಣೆ ಎಂಟರ್ ಆಗಿಲ್ಲ ನಾನು.
ಕಾರ್ತಿಕ್ ಜೆನ್ಯೂನ್
ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್ ಅನಿಸುವುದು ಕಾರ್ತಿಕ್. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡ್ತಾ ಇದ್ದಾರೆ. ಫೇಕ್ ಅಂತ ನಾನು ಹೇಳೋದಿಲ್ಲ. ಆದರೆ ಆಟಕ್ಕೆ ಏನು ಬೇಕೋ, ಹೇಗೆ ಬೇಕೋ ಹಾಗೆ ತಿರುಗೋದು ಅಂದ್ರೆ ಅದು ತುಕಾಲಿ ಸಂತೋಷ್. ಟಾಪ್ 5ನಲ್ಲಿ ಕಾರ್ತೀಕ್, ವಿನಯ್, ವಿನಯ್, ತುಕಾಲಿ ಸಂತೋಷ್ ಮತ್ತು ತನಿಷಾ ಇರಬೇಕು. ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ. ಹಾಗೆ ನೋಡಿದ್ರೆ ಸಂಗೀತಾ ಗೆಲ್ಲಬೋದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದ್ರೆ ಕಾರ್ತೀಕ್ ಗೆಲ್ಲಬಹುದು ಅನ್ನಿಸತ್ತೆ. ಮುಂದಿನ ವಾರ ಡೇಂಜರ್ ಝೋನ್‌ನಲ್ಲಿ ಮೈಕಲ್ ಇರ್ತಾರೆ ಅಂದ್ಕೊತೀನಿ.
ಜಿಯೊಸಿನಿಮಾ ಫನ್ ಫ್ರೈಡೆ
ಜಿಯೊ ಸಿನಿಮಾ ಫನ್ ಫ್ರೈಡೇ ಅಂತ ಬಂದಾಗ ನಾವೆಲ್ಲರೂ ಫನ್ ಆಗಿಯೇ ತಗೋತಿದ್ವಿ. ನಿನ್ನೆ ಕೂಡ ಬ್ರೆಡ್ ತಿನ್ನುವ ಫನ್ ಟಾಸ್ಕ್ ಇತ್ತು. ನಾನು ಸುಮಾರು ವಾರ ಗೆದ್ದಿದೀನಿ. ಖುಷಿಯಾಗಿರುತ್ತದೆ. ಸುಮಾರು ವರ್ಷಗಳ ಹಿಂದೆ ‘ಚಂದು’ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದೆ. ಬಿಗ್‌ಬಾಸ್ ಅಂತ ಬಂದಾಗ, ನಮಗೆ ಒಬ್ಬ ವ್ಯಕ್ತಿ ಪ್ರತಿವಾರ ಒಬ್ಬ ವ್ಯಕ್ತಿ ಸಿಕ್ಕು, ನಮ್ಮ ಕೊರತೆಗಳನ್ನು ಹೇಳಿ ಮುಂದೆ ಹೋಗಲು ಪ್ರೋತ್ಸಾಹಿಸುತ್ತಾರೆ ಅಂದ್ರೆ ಅದು ಸುದೀಪ್. ಆಗ ಒಬ್ಬ ಸ್ಟಾರ್‍ನ ನೋಡ್ತಿದ್ದೆ. ಈಗ ನಾನೂ ಸುದೀಪ್ ಅವರ ಫ್ಯಾಮಿಲಿ ಮೇಂಬರ್ ಅನ್ನೋ ಫೀಲ್ ಬಂದಿದೆ. ಬೆಳಗಿನ ಹೊತ್ತಿನ ಹಾಡನ್ನು ಖಂಡಿತ ಮಿಸ್ ಮಾಡ್ಕೋತೀನಿ. ಮತ್ತು ಮೈಕ್ ಅನ್ನೂ ಮಿಸ್ ಮಾಡ್ಕೋತೀನಿ.
ನನ್ನ ಬಿಗ್‌ಬಾಸ್ ಪ್ರಯಾಣ ತುಂಬ ಚೆನ್ನಾಗಿತ್ತು. ಸಾಕಷ್ಟು ಏರಿಳಿತಗಳು ಇದ್ದರೂ ಇಷ್ಟು ದೂರ ಬಂದಿರುವುದು ಖುಷಿಕೊಟ್ಟಿದೆ. ಬದುಕಿನಲ್ಲಿ ಒಮ್ಮೆ ಮಾತ್ರ ಇಂಥ ಅನುಭವ ಸಿಗಲು ಸಾಧ್ಯ. ಅದು ನನಗೆ ಸಿಕ್ಕಿದೆ. ಅದಕ್ಕೆ ಖುಷಿಯಿದೆ. ಪ್ರತಿ ಟಾಸ್ಕ್, ಸೆಫ್ಟಿ, ಚಟುವಟಿಕೆಗಳು, ತಂತ್ರಜ್ಞರು ಎಲ್ಲರೂ ಎಷ್ಟು ಶ್ರಮಪಡುತ್ತಿದ್ದಾರೆ…. ಅವರೆಲ್ಲರಿಗೂ ನಾನು ಥ್ಯಾಂಕ್ಸ್ ಹೇಳ್ತೀನಿ.
ಬಿಗ್‌ಬಾಸ್ (Bigg Boss Kannada) ಮನೆಯ ಸದಸ್ಯರೆಲ್ಲರೂ ಜಿದ್ದಿಗೆ ಬಿದ್ದವರಂತೆ, ಟಾಸ್ಕ್, ಅಗ್ರೆಶನ್, ಪಾಲಿಟಿಕ್ಸ್, ನಾಮಿನೇಷನ್ ಎಂದೆಲ್ಲ ಪರಸ್ಪರ ದೂಷಣೆಯಲ್ಲಿ, ಹಗ್ಗಜಗ್ಗಾಟದಲ್ಲಿ ತೊಡಗಿಕೊಂಡಿದ್ದರೆ, ‘ನನ್ನ ದಾರಿಯೇ ಬೇರೆ’ ಎನ್ನುವಂತೆ ಶಾಂತರಾಗಿ, ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದವರು ಸಿರಿ.
‘ಬಿಗ್‌ಬಾಸ್ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿದ್ದಾರೆ ಸಿರಿ (Siri). ತಮ್ಮ ಸಂಯಮ, ಸಮತೂಕದ ವ್ಯಕ್ತಿತ್ವದಿಂದ ಬಿಗ್‌ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ನೆಚ್ಚಿನ ‘ಅಕ್ಕ’ನಾಗಿದ್ದ ಸಿರಿ, ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಪ್ರಯಾಣ ಮುಗಿಸಿದ ತಕ್ಷಣ JioCinemaಗೆ ನೀಡಿದ್ದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಅವರು ಈ ಪ್ರಯಾಣದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.
ನಮಸ್ತೆ, ನಾನು ನಿಮ್ಮ ಪ್ರೀತಿಯ ಸಿರಿ. ಬಿಗ್‌ಬಾಸ್ ಕನ್ನಡ ಸೀಸನ್ 10ನಲ್ಲಿ ನೀವು ನನ್ನನ್ನು ನೋಡಿದ್ದೀರಿ. ಈಗಷ್ಟೇ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದೀನಿ. ಹಿಂದಿನ ವಾರಗಳಲ್ಲಿ ನಾನು ನಾಮಿನೇಷನ್ ಪಟ್ಟಿಯಲ್ಲಿದ್ದಾಗ, ‘ಈ ಸಲ ನಾನು ಹೋಗ್ತೀನಿ’ ಎಂದು ಹೇಳಿಲ್ಲ. ‘ಹೋದ್ರೆ ಇಟ್ಸ್ ಓಕೆ’ ಅನ್ನುವ ರೀತಿಯಲ್ಲಿಯೇ ಇದ್ದೆ. ಈ ಸಲ ಹೊರಗೆ ಬಂದೆ. ನನ್ನಂಥ ವ್ಯಕ್ತಿತ್ವದವಳಿಗೆ ಇದೇನೂ ಸಣ್ಣ ಜರ್ನಿ ಅಲ್ಲ. ಎಕ್ಸ್‌ಪೆಕ್ಟೇಷನ್ ಇರಲಿಲ್ಲ. ಆಕ್ಸಪ್ಟ್ ಮಾಡಿಕೊಂಡಿದ್ದೇನಷ್ಟೆ.
ನಾನು ಸ್ವಲ್ಪ ಜಾಸ್ತಿನೇ ಪಾಸಿಟೀವ್ ಆಗಿ ಯೋಚನೆ ಮಾಡುವವಳು. ಹಾಗಾಗಿ ಖಂಡಿತ ಸ್ವಲ್ಪ ಬೇಜಾರು ಇದ್ದೇ ಇದೆ. ಫಿನಾಲೆಗೆ ಇಷ್ಟ ಹತ್ತಿರ ಬಂದ ಮೇಲೆ ಬಿಟ್ಟು ಹೋಗ್ತಿದ್ದೀನಲ್ವಾ ಅಂತ. ಆದರೆ ಇಷ್ಟು ವಾರ ಮನೆಯೊಳಗಿದ್ದೆನಲ್ಲ. ಈ ಪ್ರಯಾಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ. ಬಿಗ್‌ಬಾಸ್ ಅಂದ್ರೆ ಕಿತ್ತಲಾಡಲೇಬೇಕು, ಎಲ್ಲರೂ ಪ್ರವೋಕ್ ಮಾಡ್ತಾರೆ ಎಂದೆಲ್ಲ ನಂಬಿಕೆ ಇದ್ದೇ ಇದೆ. ಆದರೆ ಹಾಗೇನಿಲ್ಲ. ಎಲ್ಲೋ ಒಂದ್ಕಡೆ ನಾನು ನನ್ನ ಕಂಫರ್ಟ್ ಝೋನ್‌ನಿಂದ ಹೊರಗೆ ಬರಲು ಸ್ವಲ್ಪ ಟೈಮ್ ತಗೊಂಡೆ. ಆದರೆ ನಾನು ಇರೋದೇ ಹಾಗೆ.
ತಪ್ಪೆಲ್ಲಾಯ್ತು ಎಂದು ನನಗೆ ಗೊತ್ತಿಲ್ಲ. ನಾನು ನನ್ನತನವನ್ನು ಬಿಟ್ಟುಕೊಡಬಾರದು. ಅದೇ ರೀತಿ ಉತ್ತರವನ್ನೂ ಸರಿಯಾಗಿ ಕೊಡಬೇಕು ಅಂದುಕೊಂಡಿದ್ದೆ. ಅದೇ ರೀತಿ ಇದ್ದೀನಿ ಕೂಡ. ಹಾಗಾಗಿ ಆ ಸಿರಿ ಜನರಿಗೆ ಇಷ್ಟವಾಗಿದ್ದರೂ ಪ್ರತಿವಾರ ನಾಮಿನೇಟ್ ಆದ್ರೂ ಸೇವ್ ಆಗ್ತಾ ಬಂದಿದ್ದೀನಿ. ಆ ಸಿರಿ ಕೂಡ ಜನರಿಗೆ ಇಷ್ಟವಾಗಿದಾಳೆ. ಎಲ್ಲರೂ ನನಗೆ ಸೇಫ್ ಜೋನಲ್ಲಿದ್ದಾರೆ ಎನ್ನುತ್ತಿದ್ದರು. ಆದರೆ ಅವರು ಸೇಫ್ ಜೋನಲ್ಲಿದ್ದು ನನಗೆ ಹೇಳ್ತಿದ್ರು ಅನಿಸತ್ತೆ. ನಾನು ನನ್ನ ಅಭಿಪ್ರಾಯ ಹೇಳುವಲ್ಲಿ ಯಾವತ್ತೂ ಹಿಂಜರಿದಿಲ್ಲ. ನಾನೂ ಪ್ರತಿವಾರ ನಾಮಿನೇಟ್ ಮಾಡ್ತಿದ್ದೆ. ಹಾಗಾಗಿ ಈ ಸೇಫ್ ಅನ್ನೋ ಮಾತನ್ನು ನಾನು ಒಪ್ಪಿಕೊಳ್ಳುವುದೇ ಇಲ್ಲ.
ಎಲಿಮಿನೇಷನ್ (Elimination) ವಿಚಾರದಲ್ಲಿ ಬಿಗ್ ಬಾಸ್ (Bigg Boss Kannada) ನೋಡುಗರ ಲೆಕ್ಕಾಚಾರ ತಲೆಕೆಳಗಾದಂತೆ ಕಾಣುತ್ತಿದೆ. ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ, ಬಿಗ್ ಬಾಸ್ ಮನೆಯಿಂದ ಸಿರಿ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಾರದ ಲೆಕ್ಕಾಚಾರದಲ್ಲಿ ಸಿರಿ (Siri) ಲಿಸ್ಟ್ ನಲ್ಲಿ ಇರಲಿಲ್ಲ. ಹಾಗಾಗಿ ಇದು ಹೇಗೆ ಸಾಧ್ಯ?ವೆಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಿರಿ ಈ ವಾರ ಮನೆಯಿಂದ ಆಚೆ ಬಂದಿದ್ದು ನಿಜವೆ ಆಗಿದ್ದರೆ, ಯಾವ ಆಧಾರದ ಮೇಲೆ ಮೈಕಲ್ ಸೇಫ್ ಆದರು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ವಾರವೇ ಮೈಕಲ್ ಮನೆಯಿಂದ ಆಚೆ ಬರಬೇಕಿತ್ತು. ಕಾರು ಏರಿ ಮನೆಯಿಂದ ಹೊರಟೂ ಬಿಟ್ಟಿದ್ದರು. ಆದರೆ, ಬಿಗ್ ಬಾಸ್ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು. ಪರಿಣಾಮ ಮೈಕಲ್ ಸೇಫ್ ಆದರು. ಆದರೆ, ಈ ಬಾರಿಯಾದರೂ ಮೈಕಲ್ ಮನೆಯಿಂದ ಹೊರ ಬರಲಿದ್ದಾರೆ ಎಂಬ ಲೆಕ್ಕಾಚಾರವಿತ್ತು. ಅದು ಸುಳ್ಳಾದಂತೆ ಕಾಣುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೈಕಲ್ ಉಳಿದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿಗೆ ಕಾರಣವನ್ನು ಇಂದಿನ ಎಪಿಸೋಡ್ ನಲ್ಲಿ ನೋಡಬಹುದಾಗಿದೆ.
ಹಾಗಂತ ಸಿರಿ ಸ್ಟ್ರಾಂಗ್ ಕಂಟೆಸ್ಟೆಂಟ್ ಏನು ಆಗಿರಲಿಲ್ಲ. ಆದರೆ ಕಳಪೆ ಅನ್ನುವಂತಹ ಕೆಲಸವನ್ನೂ ಅವರು ಮಾಡಿರಲಿಲ್ಲ. ಮನೆಯ ಹಿರಿ ಅಕ್ಕನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದರು. ಟಾಸ್ಕ್ ವಿಚಾರದಲ್ಲಿ ಅವರಿಗೆ ಕಷ್ಟವಾಗುತ್ತಿತ್ತು ನಿಜ, ಆದರೆ, ತಂಡವನ್ನು ಹುರುದುಂಬಿಸುವಲ್ಲಿ, ಕಷ್ಟವಾದಾಗ ಸಾಂತ್ವಾನ ಹೇಳುವುದರಲ್ಲಿ ಸಿರಿ ಯಾವತ್ತಿಗೂ ಮುಂದಿರುತ್ತಿದ್ದರು. ಹಾಗಾಗಿ ಇನ್ನಷ್ಟು ದಿನ ಸಿರಿ ಅವರು ಬಿಗ್ ಬಾಸ್ ಮನೆಯಲ್ಲಿ ಇರ್ತಾರೆ ಎಂದೇ ನಂಬಲಾಗಿತ್ತು.
ಸಿರಿ ಅವರು ಮನೆಯಿಂದ ಹೊರ ಬಂದಿರೋ ವಿಚಾರ, ಅಧಿಕೃತವಾಗಿ ವಾಹಿನಿ ಹೇಳದೇ ಇದ್ದರೂ, ಪ್ರೋಮೋ ರಿಲೀಸ್ ಮಾಡದೇ ಇದ್ದರೂ, ನಂಬಲರ್ಹ ಮೂಲಗಳ ಪ್ರಕಾರ ಸಿರಿ ಅವರೇ ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ ಎಪಿಸೋಡ್ ಕೂಡ ಚಿತ್ರೀಕರಣವಾಗಿದೆ. ಇಂದು ಅದರ ಪ್ರಸಾರವಾಗಲಿದೆಯಂತೆ. ಎಂಬತ್ತಕ್ಕೂ ಹೆಚ್ಚು ದಿನಗಳ ಕಾಲ ಸಿರಿ ಬಿಗ್ ಬಾಸ್ ಮನೆಯ ಜರ್ನಿಗೆ ಸಾಕ್ಷಿಯಾಗಿದ್ದಾರೆ. ಈ ವಾರವೂ ಉಳಿಬೇಕಿತ್ತು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು.
ತಮ್ಮ ನೆಚ್ಚಿನ ನಟ ದರ್ಶನ್ ಅವರ ಸಿನಿಮಾವನ್ನು ನೋಡಲು ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಡಿಸೆಂಬರ್ 29 ರಂದು ರಾಜ್ಯಾದ್ಯಂತ ಕಾಟೇರ ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ದಿನದಂದು ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಮಾಹಿತಿಯನ್ನು ರಮ್ಯಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ವಿಚಾರದಲ್ಲಿ ರಮ್ಯಾ ತುಂಬಾನೇ ತಡಮಾಡಿದ್ದರು. ನವೆಂಬರ್ 14, 2022ರಂದೇ ತಮ್ಮ ಚೊಚ್ಚಲ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾ ಶೂಟಿಂಗ್ ಮುಗಿಸಿರುವುದಾಗಿ ರಮ್ಯಾ ಸಂಸ್ಥೆಯು ಹೇಳಿಕೊಂಡಿತ್ತು. ಆನಂತರ ಸಿನಿಮಾ ಯಾವಾಗ ರಿಲೀಸ್ (Release) ಎನ್ನುವ ಕುರಿತು ಮಾಹಿತಿ ನೀಡಿರಲಿಲ್ಲ. 2022 ನವೆಂಬರ್ ನಲ್ಲಿ ಶೂಟಿಂಗ್ ಮುಗಿಸಿದವರು 2023 ನವೆಂಬರ್ 24 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ, ಒಟಿಟಿಯ ಮಾಹಿತಿ ಮಾತ್ರ ವೇಗವಾಗಿ ಹಂಚಿಕೊಂಡಿದ್ದಾರೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್ (Siri Ravikumar) ಮತ್ತು ರಾಜ್ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶನದ ಜೊತೆಗೆ ನಟಿಸಿರುವ ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೇ ನಿರ್ವಹಣೆ ಮಾಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ರಮ್ಯಾ (Ramya) ಅವರೇ ನಟಿಸಬೇಕಿತ್ತು. ಹಾಗಂತ ಅನೌನ್ಸ್ ಕೂಡ ಆಗಿತ್ತು. ಆದರೆ, ತಾವು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು ರಮ್ಯಾ. ಈ ವಿಷಯ ತಿಳಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಸಿಹಿ ಸುದ್ದಿಯನ್ನೂ ನೀಡಿ, ತಾವು ಡಾಲಿ ಧನಂಜಯ್ ಜೊತೆ ಉತ್ತರಕಾಂಡ ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ ತಿಳಿಸಿದ್ದರು.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಸಾಲನ್ನ ಆಪ್ತರೊಬ್ಬರಿಗೆ ಹೇಳಿದ್ದಾರೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಬರೆದುಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.
ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು ಬೇರೇ ಯಾರಿಗೋ ಅಲ್ಲ. ಗೆಳೆಯ ರಾಜ್ ಬಿ ಶೆಟ್ಟಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್, ಸಿರಿ ನಟನೆ ಬಲು ಇಷ್ಟಪಟ್ಟಿದ್ದಾರೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್ ಶೇರ್ ಮಾಡಿ ಸೋ ಮೂಡಿ, ಸೋ ಬ್ಯೂಟಿಫುಲ್ ರಾಜ್ ಬಿ ಶೆಟ್ಟಿ (Raj B Shetty) ಯೂ ಆರ್ ದಿ ಮ್ಯಾನ್ ಎಂದು ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಾನವೀಯತೆ ಮರೆತ ಸಂಗೀತಾಗೆ ‘ಬಿಗ್ ಬಾಸ್’ ಕ್ಲಾಸ್
ರಮ್ಯಾ (Ramya) ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಇದೇ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಾಡು, ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಮಂದಿರದಲ್ಲಿ ರಾಜ್ ಬಿ ಶೆಟ್ಟಿ, ಸಿರಿ ಜೋಡಿಯ ಈ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡುತ್ತೆ ಕಾಯಬೇಕಿದೆ.