Tag: Siravara

  • ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್

    ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್

    ತುಮಕೂರು: ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದಡಿ ಸೊಸೆ ಹಾಗೂ ಮಗನನ್ನು ತುಮಕೂರು (Tumakuru) ಜಿಲ್ಲೆ ಹೆಬ್ಬೂರು ಪೊಲೀಸರು (Hebbur Poice) ಬಂಧಿಸಿದ್ದಾರೆ.

    ಕೆಂಪಮ್ಮ (57) ಮೃತ ದುರ್ದೈವಿ. ಕೆಂಪಮ್ಮ ತುಮಕೂರು ತಾಲೂಕಿನ ಶಿರವರ ಗ್ರಾಮದ ಬಳಿಯಿರುವ ಕಲ್ಲುಪಾಳ್ಯ ನಿವಾಸಿಯಾಗಿದ್ದು, ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಸೊಸೆ ಉಮಾದೇವಿ ನಿರಂತರವಾಗಿ ಕಿರುಕುಳ ಕೊಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕೆಂಪಮ್ಮ ಪುತ್ರಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ| ಬಾಬಾ ಸಿದ್ದಿಕಿ ಪುತ್ರ ಎನ್‌ಸಿಪಿಗೆ ಸೇರ್ಪಡೆ

    ಕೆಂಪಮ್ಮನದ್ದು ಸಹಜ ಸಾವಲ್ಲ, ಕೊಲೆ ಎಂದು ಕೆಂಪಮ್ಮನ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತ ಕೆಂಪಮ್ಮಗೆ ಹಲ್ಲೆ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸೊಸೆ ಉಮಾದೇವಿ (30) ಹಾಗೂ ಮಗ ರಾಜೇಶ್‌ನನ್ನು (35) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೀದರ್| ನೀರಿನ ತೊಟ್ಟಿಗೆ ಬಿದ್ದು ಬಾಲಕಿ ದುರ್ಮರಣ

    ಪತ್ನಿಗೆ ಸಹಕರಿಸಿದ ಆರೋಪದಡಿ ಕೆಂಪಮ್ಮ ಪುತ್ರ ರಾಜೇಶ್‌ನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು | ನಡುರಾತ್ರಿ ತಲ್ವಾರ್‌ ಹಿಡಿದು ಹೊಡೆದಾಡಿಕೊಂಡ ರೌಡಿಶೀಟರ್‌ಗಳು

  • ಮಾರ್ಗ ಮಧ್ಯೆಯೇ ಅಂಬುಲೆನ್ಸ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮಕೊಟ್ಟ ಮಹಿಳೆ

    ಮಾರ್ಗ ಮಧ್ಯೆಯೇ ಅಂಬುಲೆನ್ಸ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮಕೊಟ್ಟ ಮಹಿಳೆ

    ರಾಯಚೂರು: ಅಂಬುಲೆನ್ಸ್‌ನಲ್ಲಿ (Ambulence) ಮಧ್ಯರಾತ್ರಿ ಮಾರ್ಗ ಮಧ್ಯೆಯೇ ಮಹಿಳೆಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರಿನ (Raichur) ಸಿರವಾರ (Siravara) ತಾಲೂಕಿನ ಕುರಕುಂದ ಗ್ರಾಮದಲ್ಲಿ ನಡೆದಿದೆ.

    ಕುರಕುಂದ ಗ್ರಾಮದ ರೇಣುಕಾ ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ. ಈಕೆ ಮಧ್ಯರಾತ್ರಿ ಹೆರಿಗೆ (Delivery) ನೋವಿನಿಂದ ಬಳಲುತ್ತಿದ್ದರು. ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಸಲುವಾಗಿ ಆರೋಗ್ಯ ಕವಚ 108 ಅಂಬುಲೆನ್ಸ್ ಬಂದಿತ್ತು. ಈಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಇದನ್ನೂ ಓದಿ: ಕರ್ತವ್ಯ ಸಮಯದಲ್ಲಿ ಲಂಚ ಪಡೆದ ಮಹಿಳಾಧಿಕಾರಿ – ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

    ಹೆರಿಗೆ ನೋವು ಹೆಚ್ಚಾದ ಹಿನ್ನೆಲೆ ಶುಶ್ರೂಷಕಿ ಲಕ್ಷ್ಮೀ ಅಂಬುಲೆನ್ಸ್‌ನಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ನಂತರ ತಾಯಿ ಮಗುವನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. 108 ಅಂಬುಲೆನ್ಸ್ ಸಿಬ್ಬಂದಿಯಾದ ಚಾಲಕ ಯಾಸಿನ್ ಬಿ. ಗಣೇಕಲ್ ಮತ್ತು ಶುಶ್ರೂಷಕಿ ಲಕ್ಷ್ಮೀ ಅವರಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಒಂದು ಸಣ್ಣ ಆ್ಯಕ್ಸಿಡೆಂಟ್‌.. ರಕ್ತನೂ ಬರಲಿಲ್ಲ, ಆದ್ರೆ ಬ್ರೈನ್ ಡೆಡ್!

  • ಟಂಟಂ, ಟಾಟಾ ಏಸ್ ಡಿಕ್ಕಿ: ಮಕ್ಕಳು ಸೇರಿ 21 ಮಂದಿಗೆ ಗಂಭೀರ ಗಾಯ

    ಟಂಟಂ, ಟಾಟಾ ಏಸ್ ಡಿಕ್ಕಿ: ಮಕ್ಕಳು ಸೇರಿ 21 ಮಂದಿಗೆ ಗಂಭೀರ ಗಾಯ

    ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಚಿಕ್ಕಮಕ್ಕಳು ಸೇರಿದಂತೆ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ಹಾಗೂ ಟಂಟಂ ನಡುವೆ ಮುಖಾಮುಖಿ ಡಿಕ್ಕಿಯಾಗಿ 21 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

    ಸಿರವಾರ ಪಟ್ಟಣದ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ 4 ಜನ ಮಕ್ಕಳು ಸೇರಿ 11 ಜನರ ಪರಿಸ್ಥಿತಿ ಗಂಭೀರವಾಗಿದೆ. ಶಾಲೆಗಳು ಆರಂಭವಾದರೂ ಗ್ರಾಮೀಣ ಭಾಗದಲ್ಲಿ ಮಕ್ಕಳನ್ನ ಕೂಲಿಗೆ ಕಳುಹಿಸಲಾಗುತ್ತಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ಮಕ್ಕಳು ಈಗ ಆಸ್ಪತ್ರೆ ಸೇರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಬಿಜೆಪಿಗೆ ಬರಲು ಹಲವರು ಸರತಿಯಲ್ಲಿ ನಿಂತಿದ್ದಾರೆ: ರೇಣುಕಾಚಾರ್ಯ

    ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸಿರವಾರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ವಾಹನಗಳ ಚಾಲಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

    ಕೂಲಿ ಕೆಲಸಕ್ಕೆ ಮಕ್ಕಳನ್ನ ಕರೆದೊಯ್ಯುವುದಲ್ಲದೇ ಅಧಿಕ ಸಂಖ್ಯೆಯಲ್ಲಿ ಜನರನ್ನ ತುಂಬಿಕೊಂಡು ಹೋಗುವುದು, ಬೇಜವಾಬ್ದಾರಿಯಾಗಿ ವಾಹನ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಅಂತ ಗಾಯಾಳುಗಳ ಸಂಬಂಧಿಕರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಭೀತಿಯಿಂದ ಕೆರೆ ನೀರನ್ನೇ ಕುಡಿಯದ ಗ್ರಾಮಸ್ಥರು: ಇಕ್ಕಟ್ಟಿನಲ್ಲಿ ಅಧಿಕಾರಿಗಳು

    ಕೊರೊನಾ ಭೀತಿಯಿಂದ ಕೆರೆ ನೀರನ್ನೇ ಕುಡಿಯದ ಗ್ರಾಮಸ್ಥರು: ಇಕ್ಕಟ್ಟಿನಲ್ಲಿ ಅಧಿಕಾರಿಗಳು

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರದಲ್ಲಿ ವ್ಯಕ್ತಿ  ಕೆರೆಗೆ ಕಲ್ಲು ಎಸೆದಿದ್ದರಿಂದ ಗ್ರಾಮಸ್ಥರು ಕೊರೊನಾ ಭೀತಿಯಿಂದ ಕೆರೆ ನೀರನ್ನ ಹೊರಹರಿಸಿದ ಪ್ರಕರಣ ಈಗ ಗಂಭೀರವಾಗುತ್ತಿದೆ.

    ಈ ಕುರಿತು ಪಬ್ಲಿಕ್ ಟಿವಿ ಸಹ ವರದಿ ಪ್ರಸಾರ ಮಾಡಿತ್ತು. ಸಿರವಾರ ತಹಶೀಲ್ದಾರ್ ಕೆ.ಶೃತಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆರೆಯಲ್ಲಿ ಉಳಿದಿರುವ ನೀರನ್ನ ಹೊರಬಿಡದಂತೆ ಎಚ್ಚರಿಸಿದ್ದಾರೆ.

    ಗ್ರಾಮ ಪಂಚಾಯ್ತಿ ಪಿಡಿಓ ಕೆರೆಯ ಹೂಳು ತೆಗೆಯಲು ನೀರು ಹೊರಬಿಟ್ಟಿರುವುದಾಗಿ ಸಮಜಾಯಿಷಿ ನೀಡಿದ್ದಾರಾದ್ರೂ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀರನ್ನ ಹೊರಬಿಡಬಾರದು. ನೀರಿನ ಪರೀಕ್ಷೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಪಕ್ಕದ ಗ್ರಾಮದ ವ್ಯಕ್ತಿ ಕೆರೆಗೆ ಕಲ್ಲನ್ನ ಎಸೆದಿದ್ದು ಕೊರೊನಾ ಭೀತಿಯಿಂದ ಜನ ಕೆರೆ ನೀರನ್ನೇ ಖಾಲಿ ಮಾಡಲು ಮುಂದಾಗಿದ್ದರು.

    ಪಂಪ್ ಸೆಟ್ ಕೆಟ್ಟಿದ್ದರಿಂದ ಕೆರೆಯಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ. ಕೆರೆಗೆ ಕಲ್ಲು ಎಸೆದ ವ್ಯಕ್ತಿ ಈಗಾಗಲೇ ಕೆರೆ ನೀರನ್ನ ಕುಡಿದಿದ್ದಾನೆ. ಅದೇ ನೀರಲ್ಲಿ ಸ್ನಾನ ಮಾಡಿದ್ದಾನೆ. ಆದ್ರೆ ಗ್ರಾಮಸ್ಥರಿಗೆ ಅನುಮಾನ ಮಾತ್ರ ಹೋಗಿಲ್ಲ. ಕೆರೆ ನೀರನ್ನ ಬಿಟ್ಟು ಈಗ ಬೋರ್ ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.