Tag: sirasi

  • ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ

    ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದ ದಂಪತಿಯನ್ನು ಠಾಣೆಗೆ ಕರೆಸಿ ರಾಜಿ ಮಾಡಿಸಿದ ಪ್ರಸಂಗ ಕೋಣನಕುಂಟೆ (Konanakunte) ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಹೆಚ್ಚಿನ ಸಮಯ ಫೋನಿನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿಕೊಂಡು ಪತ್ನಿ (Wife) ಮನೆ ಬಿಟ್ಟಿದ್ದಾಳೆ. ಆಕೆಯನ್ನು ಪತ್ತೆಮಾಡಿ ಪತಿಗೆ (Husband) ಒಪ್ಪಿಸಿದ ಎರಡೇ ದಿನದಲ್ಲಿ ಪತಿ ನಾಪತ್ತೆಯಾಗಿದ್ದಾನೆ. ಕೊನೆಗೆ ಇಬ್ಬರನ್ನೂ ಠಾಣೆಗೆ ಕರೆಸಿ ಪೊಲೀಸರು ರಾಜಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಂಜನಮೂರ್ತಿ ನಿಧನ

    ಅಶೋಕ್ (30) ಎಂಬುವವರ ಪತ್ನಿ, ನಾನು ಮತ್ತೆ ಬರುವುದಿಲ್ಲ. ತಾಳ್ಮೆ ಕಳೆದುಕೊಂಡಿದ್ದೇನೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮೆಸೇಜ್ ಕಳುಹಿಸಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಾರನೇ ದಿನ ಮಾ.10 ರಂದು ಅಶೋಕ್ ಕೋಣನಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದ. ನಂತರ ಮಾ.12 ರಂದು ಉತ್ತರ ಕನ್ನಡದ ಶಿರಸಿಯ (Sirasi) ಸ್ನೇಹಿತರ ಮನೆಯಲ್ಲಿರುವುದನ್ನು ಪೊಲೀಸರು ಪತ್ತೆಹಚ್ಚಿ ಗಂಡನೊಂದಿಗೆ ಕಳುಹಿಸಿದ್ದರು.

    ಇದಾದ ಎರಡು ದಿನಗಳ ಬಳಿಕ ಪತಿ ನಾಪತ್ತೆಯಾಗಿದ್ದು ಪತ್ನಿ ಸುಕನ್ಯಾಬಾಯಿ (25) ಮಾ.14 ರಂದು ಪೊಲೀಸ್ (Police) ಠಾಣೆಗೆ ಬಂದು ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು. ಪೊಲೀಸರು ತಕ್ಷಣವೇ ಅಶೋಕ್‍ನನ್ನು ಪತ್ತೆ ಮಾಡಿದ್ದರು. ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸರು ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದಾರೆ. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

  • ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಕಾರವಾರ: ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡುತ್ತೇವೆ ಎಂದು ಶಿರಸಿ ಸಮೀಪದ ಕಾನಗೋಡಿನಲ್ಲಿ ಶಿಬಿರ ಆಯೋಜಿಸಿ ಮೋಸ ಮಾಡುತ್ತಿದ್ದ ನಕಲಿ ವೈದ್ಯನೊಬ್ಬ ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

    ಹುಬ್ಬಳ್ಳಿ ಮೂಲದ ಮುಕೇಶ್ ತಿವಾರಿ ಎನ್ನುವ ನಕಲಿ ವೈದ್ಯ ಜನರನ್ನು ವಂಚಿಸಿ ದುಡ್ಡು ದೋಚುತಿದ್ದ. ಮುಕೇಶ್ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕಾನಗೋಡಿನಲ್ಲಿ ಆರೋಗ್ಯ ಶಿಬಿರ ನಡೆಸಿ, ಸ್ಥಳೀಯರಿಂದ ದುಡ್ಡು ದೋಚುತ್ತಿದ್ದ. ಖಚಿತ ಮಾಹಿತಿ ಪಡೆದು ಶಿಬಿರದ ಜಾಗಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಬರುತ್ತಿದ್ದಂತೆ ಸತೀಶ್ ಸ್ಥಳದಿಂದ ಓಡಿ ಹೋಗಿದ್ದಾನೆ.

    ಮುಕೇಶ್ ಈ ಹಿಂದೆಯೂ ಶಿರಸಿಯ ಬಿಸಲಕೊಪ್ಪದಲ್ಲಿ ‘ಹ್ಯೂಮನ್ ಕೇರ್ ವಿಷನ್’ ಎಂಬ ಹೆಸರಿನಲ್ಲಿ ಶಿಬಿರ ಆಯೋಜಿಸಿದ್ದನು. 36 ವಿವಿಧ ಆರೋಗ್ಯ ತಪಾಸಣೆಗಳನ್ನು ಶಿಬಿರದಲ್ಲಿ ಮಾಡಲಾಗುತ್ತದೆ. 10 ಸಾವಿರ ರೂ. ತಪಾಸಣೆಯನ್ನು ಕೇವಲ ಒಂದು ಸಾವಿರ ರೂ. ನಲ್ಲಿ ಮಾಡಲಾಗುತ್ತದೆ ಹಾಗೂ 100 ರೂ.ಗೆ ದೇಹ ತಪಾಸಣೆ ಮಾಡಲಾಗುತ್ತದೆ ಎಂದು ವಂಚಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಿಬಿರ ಆಯೋಜಿಸಿ, ಅದನ್ನು ಸ್ಥಳೀಯ ಮುಖಂಡರಿಂದ ಉದ್ಘಾಟನೆ ಮಾಡಿಸಿ, ಯಾರಿಗೂ ಅನುಮಾನ ಬಾರದಂತೆ ನಟಿಸುತ್ತಿದ್ದ. ಕಾನಗೋಡಿನಲ್ಲಿ “ವೀ ಫಾರ್ ಯು” ಎಂಬ ಸಂಸ್ಥೆಯ ಹೆಸರಿನಲ್ಲಿ ಮುಕೇಶ್ ಶಿಬಿರ ಪ್ರಾರಂಭಿಸಿದ್ದ. ಆತನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಸ್ಥಳೀಯರು ಕಾರವಾರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಸ್ಥಳಕ್ಕೆ ಬರುತ್ತಿದ್ದಾರೆ ಎಂದು ಅರಿತ ಮುಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಕೆಲವು ಮಾತ್ರ ಸಿಬ್ಬಂದಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿಕಿತ್ಸೆಗಾಗಿ ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

    ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

    ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳುತ್ತದೆ ಅಂತ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

    ಕಾರವಾರದ ಶಿರಸಿಯಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸತ್ತ ದಿನವೇ ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಾಪಾಸ್ ಬಂದ್ರು. ಅಂದೇ ಸಂಜೆ ಶರತ್ ಮಡಿವಾಳ ಸತ್ತ ಅನ್ನೋವಂಥದ್ದು ಘೋಷಣೆಯಾಯ್ತು ಅಂದ್ರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

    ಇದೇ ಡಿಸೆಂಬರ್ 7ರಂದು ಹೊನ್ನಾವರ, ಭಟ್ಕಳಕ್ಕೆ ಸಿಎಂ ಹೋಗ್ತಾರೆ, 8 ರಂದು ಬೆಳಗ್ಗೆ ಪರೇಶ್ ಮೇಸ್ತಾ ಸತ್ತ ಅಂತ ಹೇಳಿ ಘೋಷಣೆ ಮಾಡ್ತಾರೆ. ಹೀಗೆ ಯಾವ್ಯಾವ ಜಿಲ್ಲೆಗೆ ಮುಖ್ಯಮಂತ್ರಿಯವರು ಹೋಗ್ತಾರೋ, ಆ ಜಿಲ್ಲೆಯಲ್ಲಿ ಒಂದು ಹಿಂದೂ ಕಾರ್ಯಕರ್ತನ ಜೀವ ಉರುಳುತ್ತೆ ಅನ್ನುವಂತದ್ದು ಇಂದು ಹಲವಾರು ಕೊಲೆ ಪ್ರಕರಣಗಳ ಮೂಲಕ ಸಾಬೀತಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.  ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ, ಕೊಲೆ ಹೇಗೆ ಆಗುತ್ತೆ: ಸಿಎಂ ಸಿದ್ದರಾಮಯ್ಯ

    ಪರೇಶ್ ಮೇಸ್ತಾ ಅವರ ಕೊಲೆಯನ್ನು ಮುಚ್ಚಿಹಾಕುವಂತಹ ಒಂದು ವ್ಯವಸ್ಥಿತ ಷಡ್ಯಂತ್ರವನ್ನು ಮುಖ್ಯಮಂತ್ರಿಯವರು ಮಾಡ್ತಾ ಇದ್ದಾರೆ. ಡಿಸೆಂಬರ್ 7ರಂದು ಮುಖ್ಯಮಂತ್ರಿಗಳು ಹೊನ್ನಾವರ ಭಟ್ಕಳದಲ್ಲಿ ಇದ್ದು, ಪರೇಶ್ ಮೇಸ್ತಾ ಅವರ ಹೆಣದ ಮೇಲೆ ಶಿಲಾನ್ಯಾಸವನ್ನು ಮಾಡಿ ಬಂದಿದ್ದಾರೆ ಅಂದ್ರು. ಇದನ್ನೂ ಓದಿ: ಸಹಜ ಸ್ಥಿತಿಯತ್ತ ಹೊನ್ನಾವರ- ಜಿಲ್ಲೆಯಾದ್ಯಂತ 3 ದಿನಗಳ ಕಾಲ ನಿಷೇಧಾಜ್ಞೆ ಜಾರಿ

    ಮುಸಲ್ಮಾನ ಗೂಂಡಾಗಳು ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಾ, ನಿರಂತರವಾಗಿ ಇಲ್ಲಿ ಓಡಾಟ ಮಾಡಿ ತಲ್ವಾರ್, ಲಾಟಿ ಹಿಡ್ಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದರೂ ಕೂಡ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳೂತ್ತಿಲ್ಲ. ಅದರ ಬದಲಾಗಿ ರಾತ್ರಿ 2, 3 ಗಂಟೆ ಹೊತ್ತಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅವರನ್ನು ಬಂಧಿಸುಂತಹ ಕೆಲಸವನ್ನು ಹೊನ್ನಾವರದಲ್ಲಿ ಮಾಡಲಾಗಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಪರೇಶ್ ಮೇಸ್ತ ದೇಹದ ಸ್ಥಿತಿ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ವೈದ್ಯರು ಉತ್ತರ ನೀಡಿದ್ದು ಹೀಗೆ

    ಇಂದು ಜಿಹಾದಿಗಳಿಗೆ, ಪಿಎಫ್ ಐ ಕಾರ್ಯಕರ್ತರಿಗೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಖ್ಯಮಂತ್ರಿಗಳೇ ಗೃಹಸಚಿವರಿಗೆ ಕುಮ್ಮಕ್ಕು ಕೊಡ್ತಾ ಇದ್ದಾರೆ. ಈ ಕಾರಣದಿಂದ ಇಂದು ಕರ್ನಾಟಕದಲ್ಲಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಒಟ್ಟಿನಲ್ಲಿ ಪರೇಶ್ ಮೇಸ್ತಾ ಅವರ ಕೊಲೆ ಪ್ರಕರಣವನ್ನು ಎನ್‍ಐಎ ಅಥವಾ ಸಿಬಿಐ ತನಿಖೆಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

    ಇಂದು ಬಡ ಮೀನುಗಾರನೊಬ್ಬ ತನ್ನ ಮುಂದಿನ ಕುಟುಂಬವನ್ನು ಕಳೆದುಕೊಂಡಿದ್ದಾನೆ. 19 ವರ್ಷದ ಯುವಕ ತನ್ನ ಇಡೀ ಕುಟುಂಬವನ್ನೇ ತ್ಯಜಿಸಿದ್ದಾನೆ. ಹೀಗಾಗಿ ಆ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ರು. ಇದನ್ನೂ ಓದಿ: