Tag: siraguppa

  • ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆ

    ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆ

    ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬಳ್ಳಾರಿ (Ballary) ಜಿಲ್ಲೆಯ ಸಿರುಗುಪ್ಪ (Siraguppa) ತಾಲೂಕಿನ ರಾವಿಹಾಳ್ ಗ್ರಾಮದಲ್ಲಿ ನಡೆದಿದೆ.

    ರಾವಿಹಾಳ್ ಗ್ರಾಮದ ವಿರೇಶ್ ಎನ್ನುವವರ ಪುತ್ರ ಸಿರಿ (4) ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಬಾಲಕ.ಇದನ್ನೂ ಓದಿ: ಹೆಣ್ಣು ಕೊಟ್ಟ ಮಾವನನ್ನೇ ಕೊಂದ ಅಳಿಯ – ಶವ ಸುಟ್ಟುಹಾಕಲು ಮಗಳು, ಪತ್ನಿ ಸಾಥ್

    ಗುರುವಾರ ಏಕಾಏಕಿ ಕಾಣೆಯಾಗಿದ್ದ ಬಾಲಕ ಸಿರಿ ಆಟವಾಡಲು ಹೋಗಿ ಬಾವಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬಾಲಕ ಕಾಣೆಯಾದಾಗ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದ್ದರು.

    ಶುಕ್ರವಾರ ಸಂಜೆ ಗ್ರಾಮಸ್ಥರು ಬಾವಿಯಲ್ಲಿ ಶವ ತೇಲುವುದನ್ನು ಗಮನಿಸಿದ್ದರು. ಬಳಿಕ ಶವ ಹೊರತೆಗೆದಾಗ ಬಾಲಕ ಸಿರಿ ಎನ್ನೋದು ಗೊತ್ತಾಗಿದೆ. ಸದ್ಯ ಬಾಲಕನ ಶವ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾವಿಗೆ ಎತ್ತರದ ತಡೆಗೋಡೆಗಳು ಇಲ್ಲದಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

    ಹಲವು ಬಾರಿ ಬಾವಿ ಸುತ್ತ ಎತ್ತರದ ಗೋಡೆ ಕಟ್ಟಿಸುವಂತೆ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಇದನ್ನೂ ಓದಿ: ಕಾಲೇಜಲ್ಲಿ ನಾನು ಮೆರಿ‌ಟ್‌ ವಿದ್ಯಾರ್ಥಿ, ಶಿಕ್ಷೆ ಕೊಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ: ಕೋರ್ಟಲ್ಲಿ ಪ್ರಜ್ವಲ್‌ ರೇವಣ್ಣ ಕಣ್ಣೀರು

  • ಬಳ್ಳಾರಿ | ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

    ಬಳ್ಳಾರಿ | ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

    – ಓರ್ವ ಬಾಲಕನಿಗೆ ಗಂಭೀರ ಗಾಯ

    ಬಳ್ಳಾರಿ: ಕುರಿ ಮೇಯಿಸಲು ಹೋದಾಗ ಸಿಡಿಲು (Thunderstorm) ಬಡಿದು ಒಂದೇ ಕುಟುಂಬದ ಇಬ್ಬರು ದಾರುಣವಾಗಿ ಮೃತಪಟ್ಟು, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ.

    ರಾರಾವಿ ಗ್ರಾಮದ ಭೀರಪ್ಪ (45), ಸುನೀಲ್ (26) ಮೃತ ದುರ್ದೈವಿಗಳುದ್ಸಿಡಿಲು ಬಡಿದ ಪರಿಣಾಮ ವಿನೋದ್ (14) ಗಂಭೀರ ಗಾಯಗೊಂಡಿದ್ದಾನೆ. ಒಂದೇ ಕುಟುಂಬದ ಭೀರಪ್ಪ, ಸುನೀಲ್ ಹಾಗೂ ವಿನೋದ್ ಕುರಿ ಮೇಯಿಸಲು ಹೋದಾಗ, ಮಳೆ ಬಂದಿದ್ದರಿಂದ ಮರದ ಆಶ್ರಯ ಪಡೆದಿದ್ದರು. ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪೋಸ್ಟರ್ – ಬಿಜೆಪಿ ಕಿಡಿ

    ಗಂಭೀರ ಗಾಯಗೊಂಡಿರುವ ವಿನೋದ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಇಡೀ ರಾರಾವಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಕ್ಷಾತೀತವಾಗಿ ಮೇ 15ರಿಂದ 23ರವರೆಗೆ ಕರ್ನಾಟಕದಲ್ಲಿ ತಿರಂಗಾ ಯಾತ್ರೆ: ಆರ್.ಅಶೋಕ್

  • ಬಳ್ಳಾರಿ ಸಿರಗುಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಮಾತೃವಿಯೋಗ

    ಬಳ್ಳಾರಿ ಸಿರಗುಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಮಾತೃವಿಯೋಗ

    ಬಳ್ಳಾರಿ: ಚುನಾವಣೆಯ ಸಂದರ್ಭದಲ್ಲೇ ಅಭ್ಯರ್ಥಿಯ ತಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿರಗುಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಎಸ್ ಸೋಮಲಿಂಗಪ್ಪರ ತಾಯಿ ವಿಧಿವಶರಾಗಿದ್ದಾರೆ

    ಮೃತ ಹೊನ್ನರಮ್ಮಗೆ 80 ವರ್ಷವಾಗಿದ್ದು, ಅವರು ಅಕಾಲಿಕ ನಿಧನ ಹೊಂದಿರುವುದರಿಂದ ಉತ್ಸಾಹದಲ್ಲಿದ್ದ ಅಭ್ಯರ್ಥಿಯ ಮನೆಯಲ್ಲೀಗ ಶೋಕ ಮಡುಗಟ್ಟಿದೆ

    ನಾಳೆ ಸೋಮಲಿಂಗಪ್ಪರ ಸ್ವಗ್ರಾಮ ತೆಕ್ಕಲಕೋಟಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು. ಅಭ್ಯರ್ಥಿಯ ತಾಯಿ ನಿಧನಕ್ಕೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

  • ಬಳ್ಳಾರಿ: ಗುಡುಗು ಸಿಡಲು ಸಹಿತ ಸುರಿದ ಮಳೆ- ಐವರಿಗೆ ಗಾಯ

    ಬಳ್ಳಾರಿ: ಗುಡುಗು ಸಿಡಲು ಸಹಿತ ಸುರಿದ ಮಳೆ- ಐವರಿಗೆ ಗಾಯ

    ಬಳ್ಳಾರಿ: ಬಿರುಬಿಸಿಲಿನಿಂದ ಕಾದ ಕಬ್ಬಿಣದಂತಾಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಿರಗುಪ್ಪ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ.

    ಹೊಸಪೇಟೆ ಪಟ್ಟಣದಲ್ಲಿ ರಾತ್ರಿ ಸುಮಾರು ಗಂಟೆಗಳ ಕಾಲ ಮಳೆ ಸುರಿದ ಪರಿಣಾಮ ಬಿಸಿಲಿನಿಂದ ಸುಸ್ತಾಗಿದ್ದ ಜನರು ಮೊದಲ ಮಳೆಯಿಂದ ಪುಳಕಿತರಾಗಿದ್ದಾರೆ. ಅಲ್ಲದೇ ಹಲವಾರು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗಿದ್ದು, ಜನಜೀವನ ಕೆಲವಡೆ ಅಸ್ತವ್ಯಸ್ಥಗೊಂಡಿದೆ.

    ಮಳೆ ಗಾಳಿಗೆ ಹೊಸಪೇಟೆ ತಾಲೂಕಿನ ಜಂಭುನಾಥಹಳ್ಳಿಯಲ್ಲಿ ಮನೆಯೊಂದರ ತಗಡಿನ ಶೀಟ್‍ಗಳು ಹಾರಿದ್ದರಿಂದ ಹಲವರಿಗೆ ಗಾಯವಾಗಿದೆ. ತಗಡಿನ ಶೀಟ್ ಬಡಿದ ಪರಿಣಾಮ ಮೂವರು ಬಾಲಕಿಯರು ಸೇರಿದಂತೆ ಐವರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು. ಮನೆಯ ಮೇಲ್ಛಾವಣಿಯ ತಗಡುಗಳು ಹಾರಿದ್ದರಿಂದ ಮನೆಯ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.

    ಸಿರಗುಪ್ಪ ಪಟ್ಟಣದಲ್ಲೂ ಸಹ ಕೆಲ ಕಾಲ ಮಳೆಯಾದ ಪರಿಣಾಮ ಜನರು ಮಳೆರಾಯನ ಆಗಮನದಿಂದ ಸಂತಸಗೊಂಡಿದ್ದಾರೆ. ಒಟ್ಟಾರೆ ಬೇಸಿಗೆಯ ಆರಂಭದ ದಿನಗಳಲ್ಲೇ ಮಳೆರಾಯನ ಆಗಮನದಿಂದ ಸ್ವಲ್ಪ ಮಟ್ಟಿಗೆ ಸೂರ್ಯನ ಪ್ರತಾಪ ಕಡಿಮೆಯಾದಂತಾಗಿದೆ.