Tag: Sira

  • ಆರ್‌ಆರ್‌ನಗರದಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮುನಿರತ್ನ – ಅಧಿಕೃತ ಘೋಷಣೆಯೊಂದೇ ಬಾಕಿ

    ಆರ್‌ಆರ್‌ನಗರದಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮುನಿರತ್ನ – ಅಧಿಕೃತ ಘೋಷಣೆಯೊಂದೇ ಬಾಕಿ

    ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.

    20ನೇ ಸುತ್ತು ಮುಕ್ತಾಯಗೊಂಡಿದ್ದು ಬಿಜೆಪಿಯ ಮುನಿರತ್ನ 1,03,139 ಕಾಂಗ್ರೆಸ್‌ನ ಕುಸುಮಾ 58,258 ಜೆಡಿಎಸ್‌ ಕೇಶವಮೂರ್ತಿ 8,794, ನೋಟಾಗೆ 1,878 ಮತ ಬಿದ್ದಿದೆ. ಮುನಿರತ್ನ 42,045 ಮತಗಳಿಂದ ಮುನ್ನಡೆಯಲ್ಲಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.

    ಆರಂಭದಿಂದಲೂ ಮುನಿರತ್ನ ಮುನ್ನಡೆ ಸಾಧಿಸಿದ್ದರು. ಈ ಮುನ್ನಡೆಯನ್ನು ನಿರಂತರವಾಗಿ ಕಾದುಕೊಂಡು ಬಂದ ಪರಿಣಾಮ ಮೊದಲ ಬಾರಿಗೆ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಜಯಗಳಿಸಿದೆ.

  • ಶಿರಾ ಉಪಚುನಾವಣೆ – ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

    ಶಿರಾ ಉಪಚುನಾವಣೆ – ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

    ತುಮಕೂರು: ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಶಿರಾದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ.

    ಒಟ್ಟು  7,043 ಮತಗಳ ಪೈಕಿ ಬಿಜೆಪಿ ರಾಜೇಶ್ ಗೌಡ 3,224, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ 2,429, ಜೆಡಿಎಸ್ ಅಮ್ಮಾಜಮ್ಮಾ1,135 , ಸಿಪಿಎಂ 69, ನೋಟಾಗೆ 37 ಮತಗಳು ಬಿದ್ದಿದೆ.

    ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.

  • ತ್ರಿಕೋನ ಫೈಟಲ್ಲಿ ಯಾರ ಮುಡಿಗೆ ‘ಶಿರಾ’ ಕಿರೀಟ?- ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ

    ತ್ರಿಕೋನ ಫೈಟಲ್ಲಿ ಯಾರ ಮುಡಿಗೆ ‘ಶಿರಾ’ ಕಿರೀಟ?- ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ

    ತುಮಕೂರು: ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋಂದ್ರಿಂದ ಇಂದಿನ ಮತ ಎಣಿಕೆ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.

    ಕಾಂಗ್ರೆಸ್, ಜೆಡಿಎಸ್‍ಗೆ ಮತ್ತೆ ಅಸ್ತಿತ್ವ ಉಳಿಸಿಕೊಳ್ಳುವ ತವಕವಿದ್ದರೆ, ಬಿಜೆಪಿಗೆ ಖಾತೆ ತೆರೆಯುವ ತವಕ. ಶಿರಾ ಅಖಾಡದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ. ಭಾರೀ ಕುತೂಹಲ ಮೂಡಿಸಿರೋ ಶಿರಾ ಉಪಚುನಾವಣೆ ಫಲಿತಾಂಶ ಇವತ್ತು ಪ್ರಕಟಗೊಳ್ಳಲಿದೆ. ನವೆಂಬರ್ 3ರಂದು ಮತದಾರರು ಬರೆದ ಭವಿಷ್ಯ ಇಂದು ಬಹಿರಂಗವಾಗಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರೂ ಪಕ್ಷದ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ವಿಜಯದ ಕಿರೀಟ ಯಾರ ತಲೆಯೇರಲಿದೆ ಅನ್ನೋದು ಮಧ್ಯಾಹ್ನದೊಳಗೆ ತಿಳಿಯಲಿದೆ.

    ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಶಿರಾ ಉಪಚುನಾವನೆಯ ಕಣದಲ್ಲಿ ಒಟ್ಟು ಅಭ್ಯರ್ಥಿಗಳು 15 ಅದೃಷ್ಟ ಪರೀಕ್ಷೆ ನಡೆಸಿದ್ದು, ಕ್ಷೇತ್ರದಲ್ಲಿ 2,15,694 ಮತದಾರರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶೇ.84 ಅಂದರೇ 1,77,645 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 4,821 ಅಂಚೆ ಮತಗಳು ಚಲಾವಣೆಯಾಗಿದೆ.

    ಇಂದು 24 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ. 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗೃತೆ ವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ.

    ಚುನಾವಣಾ ಮತ ಎಣಿಕೆಗೆ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6ರವರೆಗೂ ಮತ ಎಣಿಕಾ ಕೇಂದ್ರದ ಸುತ್ತ 5 ಕಿ.ಮೀ ವ್ಯಾಪ್ತಿ ಹಾಗೂ ಶಿರಾ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು ಕ್ಷೇತ್ರದಲ್ಲಿ ಮತ ಎಣಿಕೆ ಕೇಂದ್ರದ ಸುತ್ತ 3 ಸುತ್ತಿನ ಭದ್ರತೆ. ಮತ ಎಣಿಕೆ ಕೇಂದ್ರದ ಸುತ್ತ ಸೆಂಟ್ರಲ್ ಆರ್ಮಡ್ ಫೋರ್ಸ್ ಕಾರ್ಯನಿರ್ವಹಣೆ. 2 ಕೆಎಸ್‍ಆರ್‍ಪಿ, 3 ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

    ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಈ ಹಿನ್ನಲೆಯಲ್ಲಿ ಒಂದೊಂದು ಸುತ್ತಿನಲ್ಲೂ ಒಬ್ಬೊಬ್ಬರು ಮುನ್ನಡೆ ಕಾಯ್ದುಕೊಂಡು ಫಲಿತಾಂಶದಲ್ಲಿ ಕುತೂಹಲ ಹುಟ್ಟುವ ಸಾಧ್ಯತೆ ಇದೆ. 6 ಜಿ.ಪಂ ಕ್ಷೇತ್ರ ಹಾಗೂ ನಗರ ಪ್ರದೇಶ ಸೇರಿ 7 ಕಡೆಗಳಲ್ಲಿ ಯಾರಿಗೆ ಎಷ್ಟು ಮತ ಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

    ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಧೈರ್ಯವಾಗಿ ಮತ ಎಣಿಕೆಯಲ್ಲಿ ಪಾಲ್ಗೊಳ್ಳಲು ಜಯಚಂದ್ರ ಕರೆ

    ಧೈರ್ಯವಾಗಿ ಮತ ಎಣಿಕೆಯಲ್ಲಿ ಪಾಲ್ಗೊಳ್ಳಲು ಜಯಚಂದ್ರ ಕರೆ

    ಬೆಂಗಳೂರು: ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಶಿರಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ತಮ್ಮ ಕಾರ್ಯಕರ್ತರಿಗೆ ವೀಡಿಯೋ ಸಂದೇಶ ರವಾನಿಸಿದ್ದಾರೆ. ನಾಳೆ ನಡೆಯುವ ಮತ ಎಣಿಕೆ ಕಾರ್ಯದಲ್ಲಿ ಎಲ್ಲರೂ ಧೈರ್ಯವಾಗಿ ಭಾಗಿಯಾಗಿ ಎಂದು ಹೇಳಿದ್ದಾರೆ.

    ಇಂದು ಅನಿರೀಕ್ಷಿತ ಘಟನೆ ನಡೆದಿದ್ದು, ಪತ್ನಿ ನಿರ್ಮಲಾರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹಾಗಾಗಿ ನಾನು ಸಹ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾದಾಗ ನನ್ನ ಕೊರೊನಾ ವರದಿ ಸಹ ಪಾಸಿಟಿವ್ ಬಂದಿದೆ. ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಮತ ಎಣಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ನಿಮ್ಮೆಲ್ಲರ ಪರಿಶ್ರಮದಿಂದಾಗಿ ಚುನಾವಣೆ ನಡೆದಿದೆ. ಮತ ಎಣಿಕೆ ವೇಳೆ ನಾನು ಗೈರಾಗುತ್ತಿದ್ದೇನೆ. ದಯಮಾಡಿ ಎಲ್ಲರೂ ಎದೆಗುಂದದೆ ಧೈರ್ಯದಿಂದ ಮತ ಎಣಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಟಿ.ಬಿ.ಜಯಚಂದ್ರ ಕೇಳಿ ಕೊಂಡಿದ್ದಾರೆ.

    ನಮ್ಮ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಎಂಬ ವಿಶ್ವಾಸವಿದೆ. ಕಾರ್ಯಕರ್ತರು ಯಾವುದಕ್ಕೂ ಯೋಚನೆ ಮಾಡಬೇಡಿ. ಆದಷ್ಟು ಬೇಗ ಗುಣಮುಖನಾಗಿ ಆಸ್ಪತ್ರೆಯಿಂದ ಬರುತ್ತೇನೆ. ಬಂದ ವೇಳೆ ನಿಮ್ಮೆಲ್ಲರನ್ನ ಭೇಟಿಯಾಗಿ ಕೃತಜ್ಞತೆಯನ್ನು ಹೇಳುತ್ತೇನೆ. ನಾಳೆಯ ನನ್ನ ಗೈರು ಹಾಜರಿಗೆ ಯಾರು ಬೇಸರ ತಿಳಿದುಕೊಳ್ಳ ಬೇಡಿ. ಎಲ್ಲರೂ ಅತ್ಯಂತ ಸಂತೋಷದಿಂದ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ. ಕಾರಣ ಜಯ ನಮ್ಮದು, ಜಯ ನಮಗೆ ಕಟ್ಟಿಟ್ಟ ಬುತ್ತಿ ಎಂದು ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋಂದರಿಂದ ನಾಳೆಯ ಮತ ಎಣಿಕೆ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.

    ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಒಟ್ಟು 24 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ತೀವ್ರ ಹಣಾಹಣಿಯಿಂದಾಗಿ ರೋಚಕತೆಯ ಘಟ್ಟ ತಲುಪುವ ಸಾಧ್ಯತೆ. ಈ ಬಾರಿ ಅಂಚೆ 4821 ಅಂಚೆ ಮತ ಸೇರಿ ಒಟ್ಟು ಶೇ.84 ರಷ್ಟು ಮತದಾನವಾಗಿದ್ದು. ಇವಿಎಂ ಮತಯಂತ್ರದಲ್ಲಿ 1 ಲಕ್ಷ 77 ಸಾವಿರದ 645 ಮತದಾರರು ಮತಚಲಾಯಿಸಿದ್ದಾರೆ.

     

    ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುಂಜಾನೆ 7 ಗಂಟೆಗೆ ಸ್ರ್ಟಾಂಗ್ ರೂಂ ತೆರಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕಾ ಕೇಂದ್ರದ ಸುತ್ತ ಮೂರು ಸುತ್ತಿನ ಭದ್ರತೆ ನಿಯೋಜಿಸಿದ್ದು, ಸೆಂಟ್ರಲ್ ಆರ್ಮಡ್ ಫೊರ್ಸ್ ಕಾರ್ಯನಿರ್ವಹಿಲಿದೆ. 2 ಕೆ.ಎಸ್.ಆರ್.ಪಿ, ಮೂರು ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

    ಒಟ್ಟು 14 ಟೇಬಲ್ ಗಳಲ್ಲಿ 24 ಸುತ್ತು ಮತ ಎಣಿಕೆ ನಡೆಯಲಿದ್ದು, 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗ್ರತೆವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ವರೆಗೂ ಮತ ಎಣಿಕಾ ಕೇಂದ್ರದ ಸುತ್ತಾ 5 ಕಿ.ಮೀ ವ್ಯಾಪ್ತಿ ಹಾಗೂ ಶಿರಾ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕೊರೊನಾ ದೃಢ

    ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕೊರೊನಾ ದೃಢ

    ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗೆ ಕೊರೊನಾ ಸೋಂಕು ತಗುಲಿದೆ.

    ಇಂದು ಮಧ್ಯಾಹ್ನ ತೀವ್ರ ಕೆಮ್ಮು ಕಾಣಿಸಿಕೊಂಡು ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಟಿ.ಬಿ.ಜಯಚಂದ್ರ ಅವರ ಪತ್ನಿ ನಿರ್ಮಲಾರಿಗೂ ಕೊರೊನಾ ಸೋಂಕು ತಗುಲಿದೆ. ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕದಲ್ಲಿದವರು ಆರೋಗ್ಯದ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುವದರ ಜೊತೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಟಿ.ಬಿ.ಜಯಚಂದ್ರ ಮನವಿ ಮಾಡಿಕೊಂಡಿದ್ದಾರೆ.

    ಶಿರಾ ಉಪಚುನಾವಣೆ ಫಲಿತಾಂಶ ನಾಳೆಯೇ ಪ್ರಕಟವಾಗಲಿದೆ. ಈ ಬಾರಿ ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುಂಜಾನೆ 7 ಗಂಟೆಗೆ ಸ್ರ್ಟಾಂಗ್ ರೂಂ ತೆರಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕಾ ಕೇಂದ್ರದ ಸುತ್ತ ಮೂರು ಸುತ್ತಿನ ಭದ್ರತೆ ನಿಯೋಜಿಸಿದ್ದು, ಸೆಂಟ್ರಲ್ ಆರ್ಮಡ್ ಫೊರ್ಸ್ ಕಾರ್ಯನಿರ್ವಹಿಲಿದೆ. 2 ಕೆ.ಎಸ್.ಆರ್.ಪಿ, ಮೂರು ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

  • ಶಿರಾ ಉಪ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

    ಶಿರಾ ಉಪ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

    ತುಮಕೂರು: ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋಂದರಿಂದ ನಾಳೆಯ ಮತ ಎಣಿಕೆ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.

    ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಒಟ್ಟು 24 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ತೀವ್ರ ಹಣಾಹಣಿಯಿಂದಾಗಿ ರೋಚಕತೆಯ ಘಟ್ಟ ತಲುಪುವ ಸಾಧ್ಯತೆ. ಈ ಬಾರಿ ಅಂಚೆ 4821 ಅಂಚೆ ಮತ ಸೇರಿ ಒಟ್ಟು ಶೇ.84 ರಷ್ಟು ಮತದಾನವಾಗಿದ್ದು. ಇವಿಎಂ ಮತಯಂತ್ರದಲ್ಲಿ 1 ಲಕ್ಷ 77 ಸಾವಿರದ 645 ಮತದಾರರು ಮತಚಲಾಯಿಸಿದ್ದಾರೆ.

    ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುಂಜಾನೆ 7 ಗಂಟೆಗೆ ಸ್ರ್ಟಾಂಗ್ ರೂಂ ತೆರಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕಾ ಕೇಂದ್ರದ ಸುತ್ತ ಮೂರು ಸುತ್ತಿನ ಭದ್ರತೆ ನಿಯೋಜಿಸಿದ್ದು, ಸೆಂಟ್ರಲ್ ಆರ್ಮಡ್ ಫೊರ್ಸ್ ಕಾರ್ಯನಿರ್ವಹಿಲಿದೆ. 2 ಕೆ.ಎಸ್.ಆರ್.ಪಿ, ಮೂರು ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

    ಒಟ್ಟು 14 ಟೇಬಲ್ ಗಳಲ್ಲಿ 24 ಸುತ್ತು ಮತ ಎಣಿಕೆ ನಡೆಯಲಿದ್ದು, 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗ್ರತೆವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ವರೆಗೂ ಮತ ಎಣಿಕಾ ಕೇಂದ್ರದ ಸುತ್ತ 5 ಕಿ.ಮೀ ವ್ಯಾಪ್ತಿ ಹಾಗೂ ಶಿರಾ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು

    ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು

    ಬೆಂಗಳೂರು: ಶಾಸಕ ಸತ್ಯನಾರಾಯಣ್ ಅವರ ಅಕಾಲಿಕ ನಿಧನದಿಂದ ತೆರವಾದ ಶಿರಾದಲ್ಲಿ ಈ ಬಾರಿ ತ್ರಿಕೋನ ಫೈಟ್ ಇದೆ. ಇಲ್ಲಿ ಪಬ್ಲಿಕ್ ಟಿವಿ ಜಿಲ್ಲಾಪಂಚಾಯತ್ ಕ್ಷೇತ್ರಗಳ ಆಧಾರದ ಮೇಲೆ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ.

    ಸಮೀಕ್ಷೆಯ ಪ್ರಕಾರ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಮತದಾರರದ್ದು, ವಿಭಿನ್ನ ಒಲವು-ನಿಲುವು. ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ, ಒಂದರಲ್ಲಿ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಲಿದ್ದಾರೆ.

    ಅಂತಿಮವಾಗಿ ಕಾಂಗ್ರೆಸ್-ಜೆಡಿಎಸ್ ನೀಡಿದ ನಿಕಟ ಸ್ಪರ್ಧೆ ನಡುವೆಯೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆಲುವಿನ ನಗೆ ಬೀರಲಿದ್ದಾರೆ. ಮೊದಲ ಬಾರಿಗೆ ಇಲ್ಲಿ ಕಮಲ ಅರಳಲಿದೆ ಎನ್ನುತ್ತದೆ ಪಬ್ಲಿಕ್ ಟಿವಿ ಎಕ್ಸಿಟ್ ಪೋಲ್.  ಇದನ್ನೂ ಓದಿ: ಪಬ್ಲಿಕ್‌ ಟಿವಿ ಸಮೀಕ್ಷೆ – ಆರ್‌ಆರ್‌ ನಗರದಲ್ಲಿ ಮುನಿರತ್ನಗೆ ಮತದಾರರ ಕೃಪೆ

     

    ಶಿರಾ ಕ್ಷೇತ್ರದ `ಮತ’ಬರಹ
    * ಒಟ್ಟು ಮತದಾರರು-2,15,694
    * ಚಲಾವಣೆಯಾದ ಮತ-1,77,645
    * ಶೇಕಡಾವಾರು ಮತ-82.64

    `ಪಬ್ಲಿಕ್’ ಎಕ್ಸಿಟ್ ಪೋಲ್
    * ರಾಜೇಶ್ ಗೌಡ, ಬಿಜೆಪಿ ಅಭ್ಯರ್ಥಿ – 38%
    * ಟಿಬಿ ಜಯಚಂದ್ರ, ಕಾಂಗ್ರೆಸ್ ಅಭ್ಯರ್ಥಿ- 34%
    * ಅಮ್ಮಾಜಮ್ಮ, ಜೆಡಿಎಸ್ ಅಭ್ಯರ್ಥಿ -27%

    ಎಲ್ಲಿ ಯಾರಿಗೆ ಎಷ್ಟು ಮುನ್ನಡೆ
    ಚಿಕ್ಕನಹಳ್ಳಿ ಜಿ.ಪಂ ಕ್ಷೇತ್ರ
    ಬಿಜೆಪಿ – ಮುನ್ನಡೆ -38%, ಕಾಂಗ್ರೆಸ್ – ಹಿನ್ನಡೆ -32%, ಜೆಡಿಎಸ್ – ಹಿನ್ನಡೆ -30%

    ನಾದೂರು ಜಿಪಂ ಕ್ಷೇತ್ರ
    ಬಿಜೆಪಿ – ಮುನ್ನಡೆ -35%, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್- ಹಿನ್ನಡೆ-32%

    ಮದಲೂರು ಜಿ.ಪಂ ಕ್ಷೇತ್ರ
    ಬಿಜೆಪಿ – ಮುನ್ನಡೆ -%34, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್- ಹಿನ್ನಡೆ -33%

    ಹುಲಿಕುಂಟೆ ಜಿಪಂ ಕ್ಷೇತ್ರ
    ಬಿಜೆಪಿ – ಹಿನ್ನಡೆ -32%, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್ – ಮುನ್ನಡೆ – 35%

     

     

    ತಾವರೆಕೆರೆ ಜಿಪಂ ಕ್ಷೇತ್ರ
    ಬಿಜೆಪಿ – ಹಿನ್ನಡೆ -33%, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್ – ಮುನ್ನಡೆ – 34%

    ಕಳ್ಳಬೆಳ್ಳಂ ಜಿ.ಪಂ ಕ್ಷೇತ್ರ
    ಬಿಜೆಪಿ – ಹಿನ್ನಡೆ – 34%, ಕಾಂಗ್ರೆಸ್ – ಮುನ್ನಡೆ -35%, ಜೆಡಿಎಸ್ – ಹಿನ್ನಡೆ – 31%

    ಶಿರಾ ನಗರ ಕ್ಷೇತ್ರ
    ಬಿಜೆಪಿ – ಹಿನ್ನಡೆ -33%, ಕಾಂಗ್ರೆಸ್ – ಮುನ್ನಡೆ – 34%, ಜೆಡಿಎಸ್ – ಹಿನ್ನಡೆ -33%

  • ಆಸಕ್ತಿ ತೋರದ ಬೆಂಗ್ಳೂರು ಮಂದಿ – ಎಲ್ಲಿ ಎಷ್ಟು ಪ್ರಮಾಣದ ಮತದಾನ ನಡೆದಿದೆ?

    ಆಸಕ್ತಿ ತೋರದ ಬೆಂಗ್ಳೂರು ಮಂದಿ – ಎಲ್ಲಿ ಎಷ್ಟು ಪ್ರಮಾಣದ ಮತದಾನ ನಡೆದಿದೆ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠೆಯ ಕಣಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಬೈಎಲೆಕ್ಷನ್ ಅತ್ಯಂತ ಶಾಂತಿಯುತವಾಗಿ ನಡೆದಿದೆ.

    ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ, ಜೆಡಿಎಸ್‍ನ ಕೃಷ್ಣಮೂರ್ತಿ ಸೇರಿ 16 ಹುರಿಯಾಳುಗಳ ಭವಿಷ್ಯ ಮತಯಂತ್ರ ಸೇರಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್‍ನ ಜಯಚಂದ್ರ, ಜೆಡಿಎಸ್‍ನ ಅಮ್ಮಾಜಮ್ಮ ಸೇರಿ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

    ಏಳು ದಿನಗಳ ಬಳಿಕ ನವೆಂಬರ್ 10ಕ್ಕೆ ಫಲಿತಾಂಶ ಹೊರಬೀಳಲಿದೆ. ರಾಜರಾಜೇಶ್ವರಿ ನಗರ ಪ್ರಚಾರ ಕಣದಲ್ಲಿ ಸಿಡಿದ ಮಾತಿನ ಮತಾಪುಗಳನ್ನು ನೋಡಿದರೆ ಈ ಬಾರಿಯ ಚುನಾವಣೆಯಲಿ ಏನೇನೋ ಆಗಿಬಿಡಬಹುದು ಎಂಬ ಭೀತಿ ಮನೆ ಮಾಡಿತ್ತು. ಆದರೆ ಅದೃಷ್ಟವಶಾತ್ ಅಂಥದ್ದೇನು ನಡೆಯಲಿಲ್ಲ. ಬೆಳಗ್ಗೆ ಏಳು ಗಂಟೆಗೆ ಶುರುವಾದ ಮತದಾನ ಸಂಜೆ ಆರರವರೆಗೂ ನಡೆಯಿತು.

    ಬೆಳಗ್ಗೆ ಮತ್ತು ಸಂಜೆ ಮತದಾನ ಪ್ರಕ್ರಿಯೆ ಒಂಚೂರು ಬಿರುಸು ಪಡೆದಿದ್ದು ಬಿಟ್ಟರೆ ಉಳಿದ ಅವಧಿಯಲ್ಲಿ ಮತದಾನ ಅತ್ಯಂತ ನೀರಸವಾಗಿತ್ತು. ಬೇಸರದ ವಿಷ್ಯ ಅಂದ್ರೆ, ಅತ್ಯಂತ ಸುಶಿಕ್ಷಿತ ಮತದಾರರು ಎನಿಸಿಕೊಂಡ ನಗರ ಪ್ರದೇಶದ ಮಂದಿ, ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರಲೇ ಇಲ್ಲ.

    ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಆರ್ ಆರ್ ನಗರದಲ್ಲಿ ವೋಟಿಂಗ್ ಪ್ರಮಾಣ ಹೆಚ್ಚಲೇ ಇಲ್ಲ. ಯುವಕರಿಗಿಂತ ಹಿರಿಯರೇ ಮತಗಟ್ಟೆಗೆ ಹೆಚ್ಚಾಗಿ ಧಾವಿಸಿದ್ದರು. ಆಕ್ಸಿಡೆಂಟ್ ಆಗಿ ನಡೆಯಲಾಗದವರೂ ಸಹ ಮತ ಚಲಾಯಿಸಲು ಬಂದಿದ್ದರು.

    ಶಿರಾದಲ್ಲಿ ಪರಿಸ್ಥಿತಿ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಅಲ್ಲಿನ ಕೊರೋನಾ ನಡ್ವೆಯೂ ಮತದಾರರು ಜೋರು ಉತ್ಸಾಹದಿಂದ ಮತಗಟ್ಟೆಗೆ ಬಂದರು. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಶೇ.51.3ರಷ್ಟು ಮತದಾನ ಆಗಿದೆ.

    ರಾಜರಾಜೇಶ್ವರಿ ಕ್ಷೇತ್ರದಲ್ಲಿ ಈ ಬಾರಿ 45.25% ಮತದಾನ ನಡೆದರೆ 2018ರಲ್ಲಿ 52% ರಷ್ಟು ಮತದಾನ ನಡೆದಿತ್ತು. ಶಿರಾದಲ್ಲಿ ಈ ಬಾರಿ 82.31% ರಷ್ಟು ಮತದಾನ ನಡೆದಿದ್ದರೆ 2018 ರಲ್ಲಿ 84.31% ರಷ್ಟು ಮತದಾನ ನಡೆದಿತ್ತು.

    ಮತ ಪ್ರಮಾಣ ಇಳಿಕೆಗೆ ಕಾರಣವೇನು?
    – ಲಾಕ್‍ಡೌನ್ ವೇಳೆ ಊರಿಗೆ ಹೋದವರು ಸಂಪೂರ್ಣವಾಗಿ ವಾಪಸ್ ಆಗದೇ ಇರುವುದು
    – ಕೊರೋನಾ ಸೋಂಕು ಭೀತಿ
    – ಮತದಾನ ಮಾಡಲು ನಿರ್ಲಕ್ಷ್ಯ ಧೋರಣೆ
    – ಗಾರ್ಮೆಂಟ್ಸ್‌ ಗೆ ರಜೆ ನೀಡದೇ ಇರುವುದು

  • ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ

    ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ

    ಬೆಂಗಳೂರು: ಪ್ರತಿಷ್ಠೆಯ, ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತದಾನ ಶುರು ಆಗಿದೆ. ಕೊರೊನಾ ಹೊತ್ತಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾಗೆ ಆತಂಕಗೊಳ್ಳದೇ ಮತಗಟ್ಟೆಗೆ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.

    ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಇನ್ನು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ನೇರ ಸ್ಪರ್ಧೆ ಇದೆ.

    ಶಿರಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, 330 ಮತಗಟ್ಟೆಗಳಿವೆ. ಪುರುಷ ಮತದಾರರು 1 ಲಕ್ಷದ 10 ಸಾವಿರದ 281 ಮಂದಿ ಇದ್ದರೆ, ಮಹಿಳಾ ಮತದಾರರು 1 ಲಕ್ಷದ 5 ಸಾವಿರದ 434 ಮಂದಿ ಇದ್ದು, ಒಟ್ಟು ಮತದಾರರು 2 ಲಕ್ಷದ 15 ಸಾವಿರದ 725 ಮಂದಿ ಇದ್ದಾರೆ. ಆರ್ ಆರ್ ನಗರದಲ್ಲಿ 4 ಲಕ್ಷದ 62 ಸಾವಿರ ಮಂದಿ ಮತದಾರರಿದ್ದಾರೆ.

    ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್‍ನಲ್ಲಿರೋರು, ಕ್ವಾರಂಟೈನ್‍ನಲ್ಲಿರೋರಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ಮಾಹಿತಿ ಪ್ರಕಾರ 148 ಮಂದಿ ಕೊರೋನಾ ಸೋಂಕಿತರಿಗೆ ಇವತ್ತಿನ ಉಪಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಕೊರೊನಾ ಸೋಂಕಿತರು ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದಾಗಿದೆ.

  • ಜಿದ್ದಾಜಿದ್ದಿನ ಆರ್‌ಆರ್‌ ನಗರ, ಶಿರಾಕ್ಕೆ ನಾಳೆ ಮತದಾನ- ಇವತ್ತು ಮನೆ ಮನೆ ಮತಬೇಟೆ

    ಜಿದ್ದಾಜಿದ್ದಿನ ಆರ್‌ಆರ್‌ ನಗರ, ಶಿರಾಕ್ಕೆ ನಾಳೆ ಮತದಾನ- ಇವತ್ತು ಮನೆ ಮನೆ ಮತಬೇಟೆ

    ಬೆಂಗಳೂರು: ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ನಿನ್ನೆ ಬಹಿರಂಗ ಪ್ರಚಾರ ಅಂತ್ಯ ಆಗಿದ್ದು, ಇವತ್ತು ಮನೆ ಮನೆಗೆ ತೆರಳಿ ಮತಯಾಚಿಸುವುದಕ್ಕೆ ಅವಕಾಶ ಇದೆ.

    21 ದಿನಗಳಿಂದ ನಡೆದಿದ್ದ ಪ್ರಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬಹಿರಂಗ ಪ್ರಚಾರದ ಅವಧಿ ಮುಗಿದಂತೆ ಕ್ಷೇತ್ರದ ಮತದಾರರಲ್ಲದವರೂ ಕೂಡಾ ಕ್ಷೇತ್ರವನ್ನು ಖಾಲಿ ಮಾಡಿ ತೆರಳಬೇಕಾಗುತ್ತದೆ. ನಾಳೆ ಮತದಾನ ನಡೆಯಲಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ ಬಿ ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಸ್ಪರ್ಧೆ ಇದೆ. ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

    ಇದರ ನಡುವೆ ಅಲ್ಲಲ್ಲಿ ಕುರುಡು ಕಾಂಚಣದ ಕುಣಿತ ಜಾಸ್ತಿ ಆಗ್ತಿದೆ ಅನ್ನೋ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸೋಲು ಗೆಲುವಿನ ರಣತಂತ್ರಗಳು, ಲೆಕ್ಕಾಚಾರಗಳು ಜೋರಾಗಿದೆ. ಶಾಂತಿಯುತ ಮತದಾನಕ್ಕೆ ಬೇಕಾದಂತ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.

    ಬಹಿರಂಗ ಪ್ರಚಾರದ ಅಂತಿಮ ದಿನದಂದು ಅಗ್ರ ನಾಯಕರ ಮಧ್ಯೆ ವಾಕ್ಸಮರವೇ ನಡೆದಿತ್ತು. ಕಾಂಗ್ರೆಸ್-ಬಿಜೆಪಿಯ ಪ್ರತಿಷ್ಠೆಯ ಹೈವೋಲ್ಟೇಜ್ ಕಣವಾಗಿರೋ ಆರ್‍ಆರ್ ನಗರದಲ್ಲಿ ಡಿಕೆ ಶಿವಕುಮಾರ್ ವರ್ಸಸ್ ಮುನಿರತ್ನ ನಡುವೆ ಜಿದ್ದಾಜಿದ್ದಿ ನಡೆದಿದೆ. ಆದರೆ ಜನಾಶೀರ್ವಾದ ನಮ್ಮ ಪರ ಇದೆ ಅಂತ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಪರವಾಗಿ ದಳಪತಿಗಳು ನಿನ್ನೆ ಭರ್ಜರಿ ರ‍್ಯಾಲಿಗಳನ್ನು ನಡೆಸಿದರು. ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಾರನ್ನು ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿರೋ ಜೆಡಿಎಸ್, ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಶಿರಾದಲ್ಲಿ ರ‍್ಯಾಲಿ ನಡೆಸಿದ್ದರು. ಅಮ್ಮಾಜಮ್ಮ ಅವರು ಸೆರಗೊಡ್ಡಿ ಮತಯಾಚನೆ ಮಾಡಿದ್ದರು.