ತುಮಕೂರು: ಬೈಕ್ (Bike) ಹಾಗೂ ಆಕ್ಟಿವಾ (Honda Activa) ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸವಾರರು ಸಾವನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ (Sira) ನಗರದ ಸಾಯಿ ಡಾಬಾ ಬಳಿ ನಡೆದಿದೆ.
ಶಿರಾದ ಎಮ್ಮೆರಳ್ಳಿ ತಾಂಡಾದ ವಿಷ್ಣು (28), ರಾಮನಗರ ಮೂಲದ ಮುತ್ತುರಾಜ್ (36) ಮತ್ತು ವೆಂಕಟಧನ ಶೆಟ್ಟಿ(64) ಮೃತ ದುರ್ದೈವಿಗಳು. ವಿಷ್ಣು ಬೈಕಲ್ಲಿ ತೆರಳುತಿದ್ದಾಗ ಎದುರುಗಡೆ ಬಂದ ಹೋಂಡಾ ಆಕ್ಟಿವಾ ಡಿಕ್ಕಿ ಹೊಡೆದಿದೆ. ಪರಿಣಾಮ ಆಕ್ಟಿವಾದಲ್ಲಿ ತೆರಳುತಿದ್ದ ರಾಮನಗರ ಮೂಲದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು – ಕೇರಳ ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ
ತುಮಕೂರು: ಮದುವೆಯಾದರೂ ಬೇರೆ ಯುವತಿಯೊಂದಿಗೆ ಪತಿ ಸಲುಗೆಯಿಂದ ಇದ್ದಿದ್ದಕ್ಕೆ ಮನನೊಂದು ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾದ (Sira) ಜ್ಯೋತಿನಗರದಲ್ಲಿ ನಡೆದಿದೆ.
ಪೃಥ್ವಿರಾಣಿ (20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಅದೇ ತಾಲೂಕಿನ ಪಕ್ಕದ ಊರಾದ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ಎಂಬಾತನನ್ನು ವಿವಾಹವಾಗಿದ್ದರು. ನಾಲ್ಕು ವರ್ಷದ ಪ್ರೀತಿಯ ಬಳಿಕ ನಾಲ್ಕು ತಿಂಗಳ ಹಿಂದೆ ಈ ಜೋಡಿ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿದ್ದರು. ಇದನ್ನೂ ಓದಿ: ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ
ಮದುವೆಯ ಬಳಿಕ ಶಿರಾ ಟೌನ್‌ನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ನನ್ನ ಪ್ರೀತಿಸಿ ಬೇರೊಬ್ಬಳ ಮದುವೆಯಾಗಿದ್ದೀಯಾ ಎಂದು ಜೈಮಾರುತಿಗೆ ಬೇರೊಂದು ಯುವತಿ ಬೆದರಿಕೆ ಹಾಕುತ್ತಿದ್ದಳು. ಬೆದರಿಕೆ ಹಾಕಿದ ಯುವತಿ ಬಗ್ಗೆ ಪೃಥ್ವಿರಾಣಿ ಪತಿಯನ್ನು ಪ್ರಶ್ನಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಈ ವೇಳೆ ಆಕೆ ಮೇಲೆ ಪತಿ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಪೃಥ್ವಿರಾಣಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ
ಜೈಮಾರುತಿ ಪತ್ನಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ಮಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದ. ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಪೃಥ್ವಿರಾಣಿ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿ ಪತ್ತೆಯಾಗಿದ್ದಳು. ಕುತ್ತಿಗೆಯಲ್ಲಿ ಕಪ್ಪು ಗುರುತು, ಮೂಗಿನಲ್ಲಿ ರಕ್ತ ಕಂಡು ಅನುಮಾನಗೊಂಡು ಕುಟುಂಬಸ್ಥರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಶಿರಾ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಾಥಮಿಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಇದೀಗ ಶಿರಾ ಪೊಲೀಸರು, ಪತಿಯ ಕಿರುಕುಳ ಆರೋಪ ಹಿನ್ನಲೆ ಜೈಮಾರುತಿಯನ್ನು ಬಂಧಿಸಿ ತನಿಖೆ ನಡೆಸತ್ತಿದ್ದಾರೆ.
ತುಮಕೂರು: ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru’s 2nd Airport) ನಿರ್ಮಾಣ ವಿಚಾರವಾಗಿ ಕನಕಪುರದ ಹಾರೋಹಳ್ಳಿ ಹಾಗೂ ನೆಲಮಂಗಲ ಭಾಗದಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಜಾಗ ಗುರುತಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬಯಲುಸೀಮೆ, ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರು ಸಿಎಂಗೆ ಮನವಿ ಮಾಡಿದ್ದಾರೆ.
ದೆಹಲಿಯ ಸರ್ಕಾರದ ಪ್ರತಿನಿಧಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಶಾಸಕರು ಮನವಿ ಮಾಡಿದ್ದಾರೆ. ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿ ಮೂವತ್ತಕ್ಕೂ ಹೆಚ್ಚು ಶಾಸಕರು ಪತ್ರ ಬರೆದಿದ್ದಾರೆ. ಶಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ. ಶಿರಾದಲ್ಲಿ ಚೆನ್ನೈ-ಮುಂಬೈ ಹೆದ್ದಾರಿ ಹಾದು ಹೋಗಿದೆ. ಹೆಚ್‌ಎಎಲ್‌ನಂತಹ ರಕ್ಷಣಾ ಸಂಸ್ಥೆ ಇದೆ. ಅತಿದೊಡ್ಡ ವಸಂತನರಸಾಪುರ ಕೈಗಾರಿಕಾ ಪ್ರದೇಶವಿದೆ. ಶೀಘ್ರದಲ್ಲೇ ಜಪಾನ್ ಟೌನ್‌ಶಿಪ್ ಕೂಡ ನಿರ್ಮಾಣ ಆಗ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆಗುತ್ತಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನೀರಾವರಿ ಸೌಲಭ್ಯ ಇದೆ. ತುಮಕೂರು-ರಾಯದುರ್ಗ ರೈಲ್ವೇ ಮಾರ್ಗ ಕೂಡ ಹಾದು ಹೋಗಲಿದೆ ಎಂದು ಮನವರಿಕೆ ಮಾಡಿದ್ದಾರೆ.
ಶಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣವಾದ್ರೆ ಬೆಂಗಳೂರಿನಲ್ಲಿ ಅರ್ಧದಷ್ಟು ಟ್ರಾಫಿಕ್ ದಟ್ಟಣೆ ಕಡಿಮೆ ಆಗಲಿದೆ. ಹೀಗಾಗಿ, ಶಿರಾದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಿ ಎಂದು ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಹಾರೋಹಳ್ಳಿ ಅಥವಾ ನೆಲಮಂಗಲದಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಬಯಲುಸೀಮೆ, ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‍ಐಆರ್
ತುಮಕೂರು: ಬೆಂಗಳೂರು- ಪುಣೆ ದಶಪಥ ರಾಷ್ಟ್ರೀಯ ಹೆದ್ದಾರಿ (Bengaluru-Pune Expressway) (ವಿಷನ್-47) ಕಾಮಗಾರಿ ಅತಿ ಶೀಘ್ರ ಪ್ರಾರಂಭವಾಗಲಿದ್ದು, ಇದರಿಂದಾಗಿ ಶಿರಾ ತಾಲೂಕಿನ ಚಿತ್ರಣವೇ ಬದಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ (TB Jayachandra) ಹೇಳಿದರು.
ಶಿರಾ (Sira) ತಾಲೂಕಿನ ತೊಗರಗುಂಟೆ ಬಳಿ 25 ಕೋಟಿ ರೂ. ವೆಚ್ಚದಲ್ಲಿ ಶಿರಾ-ಅಮರಾಪುರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಈಗಾಗಲೇ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಶೀಘ್ರದಲ್ಲಿ ಬೆಂಗಳೂರು- ಪುಣೆ ಹೆದ್ದಾರಿ ಕಾಮಗಾರಿ ಪ್ರಾರಂಭವಾಗುವುದರಿಂದ ಒಟ್ಟು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ತಾಲೂಕು ಅಭಿವೃದ್ಧಿಯತ್ತ ಸಾಗುವುದು ಎಂದರು. ಇದನ್ನೂ ಓದಿ: ತ್ರಾಸಿ ಬೀಚ್‌ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ – ರೈಡರ್ ಕಣ್ಮರೆ
ಶಿರಾ- ಅಮರಾಪುರ ರಸ್ತೆ ಕಾಮಗಾರಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ರಸ್ತೆ ಗುಣಮಟ್ಟಕ್ಕೆ ಆದ್ಯತೆ ನೀಡಿ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಹೆಚ್ಚು ಹಣ ಬೇಕಾದರೆ ನನಗೆ ಹೇಳಿ ಕೊಡಿಸಲಾಗುವುದು. ತಾಲೂಕಿನಲ್ಲಿ ನಾಲ್ಕು ಹೆದ್ದಾರಿಗಳು ಹಾದು ಹೋಗುತ್ತಿದ್ದು, ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್ ಲಿಸ್ಟ್!
ತುಮಕೂರು: ಖಾಸಗಿ ಬಸ್‌ವೊಂದು ಪಲ್ಟಿಯಾದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ (Sira) ತಾಲೂಕಿನ ಚಿಕ್ಕನಹಳ್ಳಿ ಬ್ರಿಡ್ಜ್ (Chikkanahalli Bridge) ಬಳಿ ನಡೆದಿದೆ.
ಸೋಮವಾರ ಬೆಳಗಿನ ಜಾವ 4:15ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ. ಗೋವಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಚಿಕ್ಕನಹಳ್ಳಿ ಬಳಿ ನಿರ್ಮಾಣವಾಗಿರುವ ನೂತನ ಬ್ರಿಡ್ಜ್ ಮೇಲೆ ಘಟನೆ ನಡೆದಿದೆ. ಇದನ್ನೂ ಓದಿ: ಮುಂದಿನ ಸಲ ಯತ್ನಾಳ್‌ಗೆ ಸೋಲು ಖಚಿತ – ಸೋಲದಿದ್ರೆ ಮಠ ತ್ಯಾಗ: ಹುಲಸೂರು ಶ್ರೀ ಬಹಿರಂಗ ಸವಾಲ್
ಬಸ್‌ನಲ್ಲಿ ಒಟ್ಟು 29 ಜನ ಪ್ರಯಾಣಿಸುತ್ತಿದ್ದು, ಸುಮಾರು 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಶಿರಾ, ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Bengaluru| ಮಳೆಗೆ ಕಮ್ಮನಹಳ್ಳಿಯಲ್ಲಿ ಹೊತ್ತಿ ಉರಿದ ಟ್ರಾನ್ಸ್‌ಫಾರ್ಮರ್
ತುಮಕೂರು: ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಮಹಾಂತೇಶ, ಶ್ರೀನಿವಾಸ್‌ಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿರಾ (Sira) ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2012ರ ಜುಲೈ 9ರಂದು ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು (Students) ಅಪರಾಧಿಗಳು ಕಾರಿನಲ್ಲಿ ಹತ್ತಿಸಿಕೊಂಡಿದ್ದರು. ನಂತರ ಅಪಹರಿಸಿಕೊಂಡು ಹೋಗುವ ಉದ್ದೇಶದಿಂದ ಕಾರು ವೇಗವಾಗಿ ಓಡಿಸುತ್ತಿದ್ದರು. ವಿದ್ಯಾರ್ಥಿನಿಯರು ಜೋರಾಗಿ ಕೂಗಿಕೊಂಡಾಗ ಇಬ್ಬರನ್ನು ಕಾರಿನಿಂದ ಇಳಿಸಿ, ಮತ್ತೊಬ್ಬ ಬಾಲಕಿ ಜೊತೆ ಪರಾರಿಯಾಗಿದ್ದರು. ಇದನ್ನೂ ಓದಿ: ಬಿಎಸ್‌ವೈಗೆ ಮತ್ತೊಂದು ಸಂಕಷ್ಟ- 2020ರ ಕೇಸ್‌ಗೆ ಮತ್ತೆ ಜೀವ
ಶಿರಾ ಸಮೀಪ ಕಾರು ನಿಲ್ಲಿಸಿ ವಿದ್ಯಾರ್ಥಿನಿ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದರು. ಅಲ್ಲದೇ ತಮ್ಮ ಮೊಬೈಲ್‌ನಲ್ಲಿ ಅತ್ಯಾಚಾರವೆಸಗುವ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಎಸ್.ಕೆ.ಪ್ರಹ್ಲಾದ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ITI ವಿದ್ಯಾರ್ಥಿನಿಯರಿಗೆ ತಿಂಗಳಲ್ಲಿ 2 ದಿನ ಮುಟ್ಟಿನ ರಜೆ ಘೋಷಿಸಿದ ಕೇರಳ ಸರ್ಕಾರ
ತುಮಕೂರು: ರಸ್ತೆಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ (Cement Bulker Lorry) ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ (Sira) ತಾಲೂಕಿನ ಕಡಬಗೆರೆ ಬ್ರಿಡ್ಜ್ ಬಳಿ ನಡೆದಿದೆ.
ಗುರುರಾಜು (35), ಪುತ್ರ ರಿಷಾಂಕ್(2) ಮೃತ ದುರ್ದೈವಿಗಳು. ಮುಂಡರಿಗಿಯಿಂದ ಬೆಂಗಳೂರು ಕಡೆಗೆ ಕ್ವಿಡ್ ಕಾರಿನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಹರ್ಷಿತಾ (28) ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಬಿರೇನ್ ಸರ್ಕಾರಕ್ಕೆ ಸಂಕಷ್ಟ – ಬಿಜೆಪಿಯ 37ರ ಪೈಕಿ 17 ಶಾಸಕರು ಸಭೆಗೆ ಗೈರು
ಗಾಯಾಳುವನ್ನು ಶಿರಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಬೆಳಗ್ಗೆ 6:30ರ ಸುಮಾರಿಗೆ ಘಟನೆ ನಡೆದಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ
ತುಮಕೂರು: ಮಾಜಿ ಸಂಸದ ಸಿಪಿ ಮೂಡಲಗಿರಿಯಪ್ಪ (CP Mudalagiriyappa) ವಯೋಸಹಜ ಕಾಯಿಲೆಯಿಂದ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಮೂಡಲಗಿರಿಯಪ್ಪ (84) ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರು ಪುತ್ರ ಮಾಜಿ ಶಾಸಕ ಸಿಎಂ ರಾಜೇಶ್ ಗೌಡ, ಪುತ್ರಿ ಕವಿತಾ ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಭಾನುವಾರ (ಮಾ.24) ಬೆಳಗ್ಗೆ 10 ಗಂಟೆಗೆ ಸಿರಾ (Sira) ತಾಲೂಕಿನ ಚಿರತಹಳ್ಳಿಯಲ್ಲಿ ನಡೆಯಲಿದೆ. ಇದನ್ನೂ ಓದಿ: ನಾವು ಗಂಡಸರನ್ನ ನಂಬಲ್ಲ, ಹೆಣ್ಣುಮಕ್ಕಳನ್ನ ನಂಬುತ್ತೇವೆ: ಡಿಕೆಶಿ
ತುಮಕೂರು: ಶಿರಾ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ (Rajesh Gowda) ಅವರು ಜಾತ್ರಾ ಮಹೋತ್ಸವದಲ್ಲಿ (Fair) ದೇವರನ್ನು ಹೊತ್ತು ಕುಣಿಯುತ್ತಾ ಸೇವೆ ಸಲ್ಲಿಸಿದ್ದಾರೆ.
ಶಿರಾ (Sira) ತಾಲೂಕಿನ ಗುಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ (BJP) ಶಾಸಕ ಡಾ. ರಾಜೇಶ್ ಗೌಡ ಲಕ್ಷ್ಮಿನರಸಿಂಹ ಸ್ವಾಮಿ, ಶ್ರೀ ಕಂಡಗದ ಕರಿಯಮ್ಮ ದೇವಿ, ಶ್ರೀ ಈರಮರಿಯಣ್ಣ ಸ್ವಾಮಿ ದೇವರನ್ನು ಹೊತ್ತು ಕುಣಿದಿದ್ದಾರೆ. ಇದನ್ನೂ ಓದಿ: ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!
ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರು (Tumkuru) ಜಿಲ್ಲೆಗೆ ಭೇಟಿ ಕೊಡುತ್ತಿದ್ದಂತೆ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಜೋಶ್ ಹೆಚ್ಚಾಗಿರುವುದು ಕಾಣುತ್ತಿದೆ. ಒಂದಿಷ್ಟು ಕ್ಷೇತ್ರವನ್ನು ಅನಾಯಸವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡ ಬಿಜೆಪಿ ಮುಖಂಡರು ಅಂತಹ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಲಾಬಿ ಶುರುಮಾಡಿಕೊಂಡಿದ್ದಾರೆ.
ಶಿರಾ ಕ್ಷೇತ್ರವನ್ನೂ ಸುಲಭವಾಗಿ ಕಬ್ಜಾ ಮಾಡಿಕೊಳ್ಳಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಈ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕರು ಇದ್ದರೂ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್ ಈ ಬಾರಿ ತನಗೆ ಟಿಕೆಟ್ ಕೊಡಬೇಕು ಎಂದು ಫೈಟ್ ಶುರು ಮಾಡಿದ್ದಾರೆ. ಬಿಜೆಪಿಯ ಸಂಘಟನಾತ್ಮಕ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್ ಈ ಭಾಗದ ಪ್ರಭಾವಿ ನಾಯಕ. ಶಿರಾ ಕ್ಷೇತ್ರದಲ್ಲಿ ಪಕ್ಷವನ್ನು ನಾನು ಕಟ್ಟಿ ಬೆಳೆಸಿದ್ದೇನೆ. ಕಳೆದ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ಈ ಬಾರಿ ನನಗೆ ಟಿಕೆಟ್ ಕೊಡಬೇಕು ಎಂದು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.
ಶಿರಾ (Sira) ಕ್ಷೇತ್ರದಲ್ಲಿ ಬಿಜೆಪಿ (BJP) ನೆಲೆ ಕಂಡಿದ್ದು ನನ್ನಿಂದ, ಪ್ರಧಾನಿ ಮೋದಿ (Narendra Modi) ಆಗಮನದಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿದೆ. ಶಿರಾ ಕ್ಷೇತ್ರವನ್ನು ಕಷ್ಟ ಇಲ್ಲದೇ ಗೆಲ್ಲುತ್ತೇವೆ. ಹಾಗಾಗಿ ನನಗೆ ಟಿಕೆಟ್ ನೀಡಬೇಕು ಎಂದು ಬಿ.ಕೆ.ಮಂಜುನಾಥ್ ಒತ್ತಾಯಿಸಿದ್ದಾರೆ. ಟಿಕೆಟ್ ನೀಡುವಂತೆ ಈಗಾಗಲೇ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಬಿ.ಕೆ.ಮಂಜುನಾಥ್ ತಿಳಿಸಿದ್ದಾರೆ. ಸರ್ವೆ ಮಾಡಿ ಟಿಕೆಟ್ ಕೊಡುವ ಭರವಸೆ ಹೈಕಮಾಂಡ್ ನೀಡಿದ್ದು, ಸರ್ವೆಯಲ್ಲೂ ನಾನು ಮುಂದಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿ.ಕೆ.ಮಂಜುನಾಥ ಮಾತನಾಡಿ, ಶಾಸಕ ಡಾ. ರಾಜೇಶ್ ಗೌಡರು ಒಳ್ಳೆಯ ವ್ಯಕ್ತಿ ಎಂದಿದ್ದಾರೆ. ಜೊತೆಗೆ ಶಿರಾ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಮದಲೂರು ಕೆರೆಗೆ ನೀರು ಹರಿಸುವ ಭರವಸೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವನ್ನು ಅವರು ಸರ್ಕಾರದ ಸಹಕಾರದಿಂದ ಮಾಡಿದ್ದಾರೆ. ವಿಶೇಷವಾಗಿ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪನ ಕಟ್ಟೆ ನಿರ್ಮಾಣನೂ ಮಾಡಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕೆಲಸಕ್ಕೆ ನಾವೆಲ್ಲ ಕೈ ಜೋಡಿಸಿದ್ದೇವೆ ಎಂದರು. ನಾನು ಟಿಕೆಟ್ ಕೇಳುತ್ತಿರುವುದರಿಂದಾಗಿ ನಮ್ಮಿಬ್ಬರ ವೈಮನಸ್ಸು ಇದೆ ಎಂದಲ್ಲ. ನಾನು ನನ್ನ ಹಕ್ಕನ್ನು ಪ್ರತಿಪಾದಿಸಿದ್ದೇನೆ ಎಂದರು. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ
Live Tv
[brid partner=56869869 player=32851 video=960834 autoplay=true]