Tag: sinima

  • ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಶಿವಮೊಗ್ಗ: ಕಿಚ್ಚ ಸುದೀಪ್ ಹಾಗೂ ಟಗರು ಶಿವಣ್ಣ ಅಭಿನಯದ `ದಿ ವಿಲನ್’ ಸಿನಿಮಾಕ್ಕೆ ಪ್ರದರ್ಶನಕ್ಕೆ ಚುನಾವಣಾ ನೀತಿ ಸಂಹಿತೆಯೇ ವಿಲನ್ ಆದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.

    ಇಲ್ಲಿನ ಲಕ್ಷ್ಮೀ ಟಾಕೀಸ್ ನಲ್ಲಿ ವಿಲನ್ ಚಿತ್ರದ ಮಧ್ಯರಾತ್ರಿ ಪ್ರದರ್ಶನ ನಿಗದಿ ಆಗಿತ್ತು. ಅಭಿಮಾನಿ ಸಂಘದವರಿಗೆ ಟಿಕೆಟ್ ನೀಡುವ ಭರವಸೆಯನ್ನೂ ಟಾಕೀಸ್ ನವರು ನೀಡಿದ್ದರು. ಆದರೆ, ಈ ಪ್ರದರ್ಶನಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯದಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.

    ಹೀಗಾಗಿ ಅದೂವರೆಗೂ ಮಧ್ಯರಾತ್ರಿಯೇ ಅಭಿಮಾನದ ನಟರ ಸಿನೆಮಾ ನೋಡುವ ಉಮೇದಿನಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡರು. ಅದೂವರೆಗೂ ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು, ಕರ್ಪೂರ ಹಚ್ಚಿ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಪೊಲೀಸರೂ ವಿಲನ್ ಗಳಾದರು. ಎಲ್ಲರನ್ನೂ ಹೊರ ಕಳಿಸಿ, ಗೇಟು ಮುಚ್ಚಿಸಿದರು. ತೀವ್ರ ನಿರಾಸೆಯಲ್ಲಿ ಅಭಿಮಾನಿಗಳು ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ಫನ್ನಿ ಲುಕ್‍ನಲ್ಲಿ ಕಾಣಿಸಿಕೊಂಡ ರಣ್‍ವೀರ್ ಸಿಂಗ್-ಫೋಟೋಗಳಲ್ಲಿ ನೋಡಿ

    ಮತ್ತೆ ಫನ್ನಿ ಲುಕ್‍ನಲ್ಲಿ ಕಾಣಿಸಿಕೊಂಡ ರಣ್‍ವೀರ್ ಸಿಂಗ್-ಫೋಟೋಗಳಲ್ಲಿ ನೋಡಿ

    ಮುಂಬೈ: ಬಾಲಿವುಡ್ ಸ್ಪುರದ್ರೂಪಿ ನಟ ರಣ್‍ವೀರ್ ಸಿಂಗ್ ಅವರು ತಮ್ಮ ಡಿಫೆರೆಂಟ್ ಲುಕ್, ಡ್ರೆಸ್ಸಿಂಗ್ ಮೂಲಕವೇ ಗುರುತಿಸಿಕೊಳ್ಳುವ ಅವರು ಈಗ ಮತ್ತೊಮ್ಮೆ ಕಲರ್‍ಫುಲ್ ಬಟ್ಟೆ ಧರಿಸಿದ್ದು, ಫೋಟೋಗಳು ಎಲ್ಲಡೆ ಹರಿದಾಡುತ್ತಿವೆ.

    ಮಂಗಳವಾರ ರಣ್‍ವೀರ್ ಖಾಸಗಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಣ್‍ವೀರ್ ಬರುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಜನರು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಹಳದಿ, ನೀಲಿ ಮಿಶ್ರಿತ ಬಣ್ಣದ ಜಿಗ್ ಜ್ಯಾಗ್ ಡ್ರೆಸ್ ಧರಿಸಿದ್ದ ರಣ್‍ವೀರ್‍ನ್ನು ನೋಡಿದ ಅಭಿಮಾನಿಗಳು ನೀವು ಪ್ರತಿಬಾರಿಯೂ ಡಿಫೆರೆಂಟ್ ಎಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ರೋಹಿತ್ ಶೆಟ್ಟಿ ಸಹ ಹಾಜರಿದ್ದರು.

    ಈ ಹಿಂದೆ ಕಾರ್ಯಕ್ರಮದಲ್ಲಿ ಸ್ಕರ್ಟ್ ರೀತಿಯ ಡ್ರೆಸ್ ಧರಿಸಿ ಬಂದಿದ್ದಕ್ಕೆ ಗೆಳತಿ ದೀಪಿಕಾ ಸಿಡಿಮಿಡಿಗೊಂಡಿದ್ದರು. ರಣ್‍ವೀರ್ ಫೋಟೋ ನೋಡಿದ ದೀಪಿಕಾ ‘ನೋ’ ಅಂತಾ ಬರೆದು ಕಣ್ಮುಚ್ಚಿ ಕುಳಿತಿರುವ ನಾಯಿ ಮರಿಗಳಿರುವ ಎಮೋಜಿ ಹಾಕಿದ್ದರು. ರೋಹಿತ್ ಶೆಟ್ಟಿ ನಿರ್ಮಾಣದ ಸಿಂಬಾ ಚಿತ್ರದಲ್ಲಿ ರಣ್‍ವೀರ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಣ್‍ವೀರ್ ಜೊತೆಯಾಗಿ ಸಾರಾ ಅಲಿಖಾನ್ ನಟಿಸುತ್ತಿದ್ದಾರೆ. ಚಿತ್ರ ಡಿಸೆಂಬರ್ 28ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv